ರಾಜಕಾರಣಿಗಳಿಂದ ಲೋಕಾಯುಕ್ತವನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುವ ಪ್ರಯತ್ನ

 ಎಲ್ಲರೂ ಒಮ್ಮಿಂದೊಮ್ಮಿಗೇ ಲೋಕಾಯುಕ್ತ ಸಂಸ್ಥೆ ಮತ್ತದರ ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗ್ಡೆಯ ಮೇಲೆ ಮುಗಿಬಿದ್ದಿದ್ದಾರೆ. ಲೋಕಾಯುಕ್ತ ಸಂಸ್ಥೆಯೇ ಭ್ರಷ್ಟಗೊಂಡಿದೆ. ಅಂತಹ ಸಂಸ್ಥೆಯಿಂದ ಭ್ರಷ್ಟಾಚಾರ ತಡೆಯಲು ಸಾಧ್ಯವೇ ಇಲ್ಲ . ಸಂತೋಷ್ ಹೆಗ್ಡೆ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಇದು ಈ ರಾಜ್ಯದ ರಾಜಕಾರಣಿಗಳು ಎನಿಸಿಕೊಂಡಿರುವವರ ಬಾಯಿಂದ ಉದುರುತ್ತಿರುವ ನುಡಿಮುತ್ತುಗಳು. ಯಡಿಯೂರಪ್ಪನವರಿಂದ ಹಿಡಿದು ಅವರ ಮುಖವಾಣಿಯಂತಿರುವ ರೇಣುಕಾಚಾರ್ಯನವರೆಗೆ, ದೇವೇಗೌಡರಿಂದ ಹಿಡಿದು ಅವರ ಸಂತಾನ ಕುಮಾರಸ್ವಾಮಿಯವರೆಗೇ ಎಲ್ಲರಿಗೂ ಈಗ ಒಂದು ಬಲಿ ಬೇಕಾಗಿದೆ. ಅದು ಲೋಕಾಯುಕ್ತ ಸಂಸ್ಥೆಯೇ ಆಗಿರಬಹುದು ಇಲ್ಲವೇ ಸಂತೋಷ್ ಹೆಗ್ಡೆಯೇ ಆಗಿರಬಹುದು. ಒಟ್ಟಿನಲ್ಲಿ ರಾಜ್ಯದ ಜನರ ಮುಂದೆ ಲೋಕಾಯುಕ್ತ ಮತ್ತು ಸಂತೋಷ್ ಹೆಗ್ಡೆಯವರನ್ನು ತಪ್ಪಿತಸ್ಥರಂತೆ ನಿಲ್ಲಿಸಿ ತಾವೆಲ್ಲರೂ ಪರಮ ಪ್ರಾಮಾಣಿಕರೆಂದು ಬಿಂಬಿಸಿಕೊಳ್ಳಲು ಎಲ್ಲರೂ ಯತ್ನಿಸುತ್ತಿದ್ದಾರೆ. ಇನ್ನು ಈಶ್ವರಪ್ಪನವರಂತೂ ಲೋಕಾಯುಕ್ತವನ್ನು ಮುಚ್ಚೇಬಿಡಬೇಕೆಂದು ಪಾಮರ್ಾನು ಹೊರಡಿಸಿದ್ದಾರೆ. ಇದಕ್ಕೆಲ್ಲ ಕಾರಣ ಲೋಕಾಯುಕ್ತ ಅಧಿಕಾರಿಯಾಗಿದ್ದ ಮಧುಕರ ಶೆಟ್ಟಿ ನೀಡಿರುವ ಹೆಳಿಕೆ. ಲೋಕಾಯುಕ್ತದಲೂ ಭ್ರಷ್ಟರಿದ್ದಾರೆ ಅಂತ. ಸುಮ್ಮನೆ ಒಬ್ಬ ಅಧಿಕಾರಿ ಬೇಜಾವಾಬ್ದಾರಿಯುತ ಹೇಳಿಕೆ ನೀಡಿದರೆ ಹಾಗುವುದೇ ಹೀಗೆ. ಮುಗುಮ್ಮಾಗಿ ಲೋಕಾಯುಕ್ತದಲ್ಲಿಯೂ ಭ್ರಷ್ಟರಿದ್ದಾರೆ. ನಾನೇನೂ ಪ್ರಾಮಾಣಿಕನಲ್ಲ ಎಂದು ಕನಸಿನಲ್ಲಿ ಕನವರಿಸಿದಂತೆ ಹೇಳಿಕೆ ನೀಡುವ ಬದಲು ಸ್ಪಷ್ಟವಾಗಿ ಯಾರು ಭ್ರಷ್ಟರು, ಅಲ್ಲಿ ನೆಡೆದ ಅಕ್ರಮಗಳಾದರೂ ಏನು ಎಂಬದನ್ನ ಹೇಳಿದ್ದರೆ ಅವರ ಈ ವೈರಾಗ್ಯದ ಮಾತುಗಳನ್ನು ಒಪ್ಪ ಬಹುದಿತ್ತ. ಲೋಕಾಯುಕ್ತದಲ್ಲಿರುವವರೂ ಮನುಷ್ಯರೇ ಅವರೇನು ದೈವಾಂಶ ಸಂಭೂತರಲ್ಲ. ಅಲ್ಲಿಯೂ ಭ್ರಷ್ಟರಿದ್ದಾರೆ. ಹಾಗಂತ ಸಂತೋಷ್ ಹೆಗ್ಡೆಯವರೇ ಹೆಳಿದ್ದಾರೆ.,ಲೋಕಾಯುಕ್ತದಲ್ಲಿರುವವರು ಪರಮ ಪ್ರಾಮಾಣಿಕರು ಎಂದು ಅವರು ಯಾವತ್ತೂ ಹೇಳಿಲ್ಲ. ಅಲ್ಲಿದ್ದ ಭ್ರಷ್ಟರನ್ನು ಹೊರ ಹಾಕಿ ಲೋಕಾಯುಕ್ತವನ್ನು ಒಂದು ಉತ್ತಮ ಸಂಸ್ಥೆಯನ್ನಾಗಿ ಪರಿವರ್ತಿಸಿ ಪ್ರಾಮಾಣಿಕತೆಯನ್ನು ತಂದವರು ಸಂತೋಷ್ ಹೆಗ್ಡೆ.

ಕರ್ನಾಟಕ ಲೋಕಾಯುಕ್ತ

 ಸಂತೋಷ್ ಹೆಗ್ಡೆಯವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವವರು ಮೊದಲು ಆತ್ಮ ವಿಮಷರ್ೆ ಮಾಡಿಕೊಂಡರೆ ಉತ್ತಮ. ರೇಣುಕಾಚಾರ್ಯನಂತವರು ಪ್ರಾಮಾಣಿಕತೆಯ ಬಗ್ಗೆ ಮಾತಾಡಿದರೆ ಅದಕ್ಕಿಂತ ದುರಂತ ಇನ್ನೇನಿದೆ. ರೇಣುಕಾಚಾರ್ಯ ಯಾವಾಗಲೂ ಹೇಳುವುದು ಒಂದೇ ಒಂದು ಮಾತನ್ನ. ನನಗೆ ಲೋಕಾಯುಕ್ತದ ಬಗ್ಗೆ ಗೌರವವಿದೆ. ಸಂತೋಷ್ ಹೆಗ್ಡೆಯವರ ಮೇಲೆ ಗೌರವವಿದೆ ಅಂತ. ಹೀಗೆ ಹಿಂದೊಮ್ಮೆ ಸಚಿವ ಸ್ಥನ ಸಿಗಲಿಲ್ಲವೆಂಬ ಕಾರಣಕ್ಕೆ ಒಂದಿಷ್ಟು ಶಾಸಕರನ್ನ ಹೈದರಾಬಾದ್ ಗೆ ಹೈಜಾಕ್ ಮಾಡಿಕೊಂಡು ಹೋದಾಗಲೂ ರೇಣುಕಾಚಾರ್ಯ ಹೇಳಿದ್ದು ಅದನ್ನೇ ನನಗೆ ಯಡಿಯೂರಪ್ಪನವರ ಮೇಲೆ ಬಹಳ ಗೌರವವಿದೆ ಅಂತ. ಅದು ಯಾವ ರೀತಿಯ ಗೌರವವೊ ಏನೊ ಗೊತ್ತಿಲ್ಲ. ಸಂತೋಷ್ ಹೆಗಡೆಯವರೇನೂ ಯಡಿಯೂರಪ್ಪನವರನ್ನ ಜೈಲಿಗೆ ಹಾಕಿ ಎಂದೇನೂ ವರದಿ ನೀಡಿಲ್ಲ. ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಬೇಕೆಂದೇನೂ ಅವರು ವರದಿಯಲ್ಲಿ ಹೇರಳಿರಲಿಲ್ಲ. ಅದು ಅವರ ಕೆಲಸವೂ ಅಲ್ಲ. ಅವರು ಹೇಳಿದ್ದು ಯಡೆಯೂರಪ್ಪನವರನ್ನು ಕಾನೂನಿನ ಪ್ರಕಾರ ವಿಚಾರಣೆ ನೆಡೆಸಿ ಅಂತ. ಅದು ನೆಡೆಯುತ್ತಿದೆಯಷ್ಟೆ. ಇದಕ್ಕೆ ಸಂತೋಷ್ ಹೆಗ್ಡೆಯವರೇಕೆ ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಇನ್ನು ಹೆಗ್ಡೆಯವರ ರಾತ್ರಿ ಜೀವನದ ಖಚರ್ುಗಳ ಬಗ್ಗೆ ಮಾತಾಡಿ ಸಂತೋಷ್ ಹೆಗ್ಡೆಯವರಿಂದ ಛೀಮಾರಿ ಹಾಕಿಸಿಕೊಂಡಿದ್ದ ಕುಮಾರಸ್ವಾಮಿ ಹೆಗ್ಡೆಯವರ ಅಕ್ರಮಗಳನ್ನ ಬಯಲಿಗೆಳೀತೀನಿ, ದಾಖಲೆಗಳನ್ನ ಬಿಡುಗಡೆ ಮಾಡ್ತೀನಿ ಅಂತ ಉತ್ತರಕುಮಾರನ ಹಾಗೆ ಬಡಬಡಿಸುತ್ತಲೇ ಇದ್ದಾರೆ. ಇನ್ನು ಮಾಜಿ ನಪ್ರಧಾನಿಯಾಗಿ ಪಂಚಾಯಿತಿ ಮಟ್ಟದಲ್ಲಿಯೂ ರಾಜಕೀಯ ಮಾಡುವ ದೇವೇಗೌಡರು ತಮ್ಮ ಮಗ ಬಾಲಕೃಷ್ನಗೌಡರ ಪ್ರಕರಣ ತನಿಕೆ ಮಾಡುತ್ತಿದ್ದ ಜೀವನ್ ಕುಮಾರ್ ನ್ನ ಬೆದರಿಸುತ್ತಾರೆ. ಅದನ್ನ ಕೆಳಿದರೆ ನಾನು ಬೆದರಿಸಿಲ್ಲ ಎಚ್ಚರಿಸಿದ್ದೇನೆ ಅಂತಾರೆ. ಎರೆಡೂ ಒಂದೇ ಅಳಿಯ ಅಲ್ಲ ಮಗಳ ಗಂಡ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರ ಅವರನ್ನು ವರ್ಗಾವಣೆ ಮಾಡಿದೆ. ತಮಗೆ ಬೇಕಾದವರನ್ನು ರಕ್ಷಿಸಿಕೊಳ್ಳಲು ಒಬ್ಬ ಧಕ್ಷ ಅಧಿಕಾರಿಯನ್ನು ರಾತ್ರೊರಾತ್ರಿ ವರ್ಗಾವಣೆ ಮಾಡಲಾಗಿದೆ. ಲೋಕಾಯುಕ್ತವನ್ನು ಬಲಪಡಿಸುತ್ತೇವೆ ಅಂತ ಕುಮಾರಸ್ವಾಮಿಯಿಂದಿಡಿದು ಈಗಿನ ಸದಾನಂದಗೌಡರವರೆಗೇ ಎಲ್ಲರೂ ಹೇಳುತ್ತಲೇ ಇದ್ದಾರೆ. ಆದರೆ ಮಾಡುತ್ತಿರುವುದು ಮಾತ್ರ ಅದನ್ನು ದುರ್ಬಲಗೊಳಿಸುವ ಪ್ರಯತ್ನ. ಲೋಕಾಯುಕ್ತ ದಾಳಿಗೊಳಗಾದವರನ್ನು ಕೆಲಕಾಲ ಅಮಾನತು ಮಾಡಿ ಆಮೇಲೆ ಅವರಿಗೆ ಬಡ್ತಿ ನೀಡಿದರೆ ಯಾವ ವ್ಯವಸ್ಥೆಯಾದರೂ ಉದ್ಧಾರವಾದೀತು. ಒಬ್ಬೊಬ್ಬರಾಗಿ ಜೈಲಿನ ಹಾದಿ ಹಿಡಿಯುತ್ತಿರುವುದನ್ನು ತಪ್ಪಿಸಲು ಎಲ್ಲ ಪಕ್ಷಗಳೂ ಸೇರಿ ಲೋಕಾಯುಕ್ತವನ್ನು ಬಲಿ ತಗೆದುಕೊಳ್ಳಲು ಹವಣಿಸುತ್ತಿವೆ.

ಬಗ್ಗೆ SHASHI SHEKARA
I am a simple boy with great ambitions.

2 Responses to ರಾಜಕಾರಣಿಗಳಿಂದ ಲೋಕಾಯುಕ್ತವನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುವ ಪ್ರಯತ್ನ

  1. lokeshkote says:

    ನಿನ್ನ ಅನಿಸಿಕೆ ಖಂಡಿತ ಸರಿ ಶಶಿ, ನಮ್ಮ ಈಗಿನ ಈ ವ್ಯವಸ್ದೆಯ ಬಗ್ಗೆ ಮುಂದೋಂದು ದಿನ ನಮ್ಮ ಮಕ್ಕಳೊ ಅಧಾವಾ ಮರಿ ಮೊಮ್ಮಕ್ಕಳೊ ಕ್ಯಾಕರಿಸಿ ನಮಗೆ ಉಗಿಯುತ್ತಾರೆ , ನೀವೂ ಇಂತ ಪ್ರಧಿನಿಧಿಗಳನ್ನ ಜನ ಪ್ರತಿನಿಧಿಯಾಗಿ ಆಯ್ಕೆ ಮಾಡುತ್ತಿದ್ದರಾ? ಒಬ್ಬ ರಾಜಕಾರಣಿಗೆ ಇರುವ ಶಕ್ತಿ ವ್ಯವಸ್ದೆಯನ್ನ ಬದಲಿಯಾಸುವಂತದ್ದು್ ಅದು ಎಲ್ಲರಿಗೂ ಒಳಿತಾಗುವಂತಹ ವಿಜಾರದಲಿ , ಅದ್ರೆ ಅಷ್ಟೋಂದು ವ್ಯವಧಾನ ನಮ್ಮ ನಾಯಕರಿಗೆ ಇಲ್ಲ ಅವರನ್ನ ಆರಿಸುವ ನಮಗೂ ಇಲ್ಲ.

  2. ramu says:

    really right. blady politicians using lokayukta for their self motivations

ನಿಮ್ಮ ಟಿಪ್ಪಣಿ ಬರೆಯಿರಿ