ಕಸಬ್ ಎಂಬ ಕ್ರಿಮಿಗೆ ಕುಣಿಕೆಯಾಕಿದ್ದಾಯ್ತು… ಅಫ್ಜಲ್ ಗೆ ಗಲ್ಲು ಯಾವಾಗ?

ಮುಂಬೈ ದಾಳಿಯಲ್ಲಿ ಮಡಿದವರ ಕುಟುಂಬದವರು ನಿಜಕ್ಕೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ… ಜಿಹಾದ್ ನ ಹೆಸರಲ್ಲಿ ಭಾರತದ ಸಾರ್ವಭೌಮತೆಗೆ ಸಡ್ಡು ಹೊಡೆದು ಮುಂಬೈ ಮೇಲೆ ದಾಳಿನಡೆಸಿ 160 ಕ್ಕೂ ಹೆಚ್ಚು ಅಮಾಯಕರನ್ನ ಬಲಿ ಪಡೆದ ಕಸಬ್ ಕುತ್ತಿಗೆಗೆ ಕೊನೆಗೂ ಕುಣಿಕೆ ಬಿಗಿಯಲಾಗಿದೆ. ಯಾವಾಗ ಕಸಬ್ ಮುಂಬೈ ದಾಳಿ ವೇಳೆ ಸೆರೆ ಸಿಕ್ಕನೊ ಆಗಲೇ ತಾನು ಭಾರತೀಯರ  ನೇಣಿನ ಕುಣಿಕೆಗೆ ಕೊರಳೊಡ್ಡಬೇಕು ಅನ್ನೋದು ಆತನಿಗೆ ಸ್ಪಷ್ಟವಾಗಿ ಹೋಗಿತ್ತು… ಅದು ನಾಲ್ಕು ವರ್ಷಗಳ ನಂತ್ರ ಕಾರ್ಯರೂಪಕ್ಕೆ ಬಂದಿದೆ… ನಾಲ್ಕು ವರ್ಷಗಳ ನಂತ್ರವಾದ್ರೂ ಕೇಂದ್ರ  ಸರ್ಕಾರ ದಿಟ್ಟ ನಿರ್ಧಾರ ತಗೆದುಕೊಂಡಿದೆ. 2008 ರ ಮುಂಬೈ ಮಾರಣಹೋಮದಲ್ಲಿ ಬಲಿಯಾದರಿಗೆ ಈಗ ನಿಜಕ್ಕೂ ನ್ಯಾಯ ದೊರೆತಂತಾಗಿದೆ… ಹಾಗೆ ಅಮಾಯಕ ಜನರ ರಕ್ತ ಕುಡಿದ ಕಸಬ್ ನನ್ನ ಮಾಡಿದ ತಪ್ಪಿಗೆ ಪ್ರಾಯಶ್ಚಿತವಾಗಿ  ನಿರ್ಧಾಕ್ಷಿಣ್ಯವಾಗಿ ನೇಣಿಗೇರಿಸಲಾಗಿದೆ… ಆದ್ರೆ ಕಸಬ್ ನನ್ನ ಗಲ್ಲಿಗೇರಿಸಿರೋದ್ರಿಂದ ನಾವು ಮುಂಬೈ ದಾಳಿ ಮಾಡಿದವರ ವಿರುದ್ಧ ಕ್ರಮ ಕೈಗೊಂಡು ಬಿಟ್ಟೆವು ಎಂದು ಸಂಭ್ರಮಿಸುವ ಹಾಗಿಲ್ಲ. ಯಾಕಂದ್ರೆ ಮುಂಬೈದಾಳಿಯ ಮಾಸ್ಟರ್ ಮೈಂಡ್ ಗಳು ಪಾಕಿಸ್ತಾನದಲ್ಲಿ ಇನ್ನೂ ರಾಜಾರೋಷವಾಗಿಯೇ ಬದುಕುತ್ತಿದ್ದಾರೆ.. ಮುಂಬೈ ದಾಳಿ ಸೂತ್ರದಾರಿಗಳಾದ ಲಷ್ಕರ್ ಇ ತೋಯಿಬಾ ಮುಖ್ಯಸ್ಥ ಹಫಿಸ್ ಸೈಯದ್ ಮತ್ತು ಜಕಿ ಉರ್ ರೆಹಮಾನ್ ಲಕ್ವಿ ವಿರುದ್ದ ಪಾಕಿಸ್ತಾನ ಇದೂವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ… ಅದು ಕೈಗೊಳ್ಳುವುದೂ ಇಲ್ಲ ಅನ್ನೊದೂ ಕೂಡ ಅಷ್ಟೇ ಸ್ಪಷ್ಟ. ಅದು ಗೊತ್ತಿದ್ದೂ ನಮ್ಮಸರ್ಕಾರ ಪಾಕಿಸ್ತಾನದ ಜೊತೆ ಶಾಂತಿ ಮಾತುಕತೆ ನಡೆಸುತ್ತಲೇ ಇದೆ. ಆದ್ರೆ ಶಾಂತಿಯ ಅರ್ಥವೇಗೊತ್ತಿಲ್ಲದ ಮತಾಂಧ ರಾಷ್ಟ್ರಕ್ಕೆ  ಭಾರತದ ಜೊತೆ ಕ್ಯಾತೆ ಮಾಡಿಕೊಳ್ಳುವುದ್ರಲ್ಲಿಯೇ ಹೆಚ್ಚು ನೆಮ್ಮದಿ…

ಕಸಬ್ ಎಂಬ ರಕ್ತಪಿಪಾಸು

“ಏಷ್ಯಾದಲ್ಲಿ ಭಯೋತ್ಪಾದನೆಯನ್ನ ತಡೆಯಬೇಕು ಅಂದ್ರೆ ಪಾಕಿಸ್ತಾನ ಮತ್ತು ಭಾರತ ಕೈಜೋಡಿಸಲೇಬೇಕು ಇಲ್ಲವಾದ್ರೆ ಉಗ್ರವಾದ ಮಟ್ಟಹಾಕುವುದು ಅಸಾದ್ಯದ ಮಾತು”  ಅನ್ನುತ್ತದೆ ಪಾಕಿಸ್ತಾನ. ಆದ್ರೆಇನ್ನೋದು ಕಡೆ ಅದೇ ಪಾಕಿಸ್ತಾನ ಇವತ್ತು ಜಗತ್ತಿನ ಮೋಸ್ಟ್ ವಾಂಟೆಡ್ ಭಯೋತ್ಪಾದಕರಿಗೆ ಸರ್ವಸ್ವವನ್ನೂ ಕೊಟ್ಟು ಸಲುಹುತ್ತಿದೆ. 1993 ರ ಮುಂಬೈ ಬಾಂಬ್ ಸ್ಪೋಟದ ರುವಾರಿ, ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾಹುದ್ ಇಬ್ರಾಹಿಂ ನನ್ನ ಸಲುಹುತ್ತಿರುವುದು ಇದೇ ಪಾಕಿಸ್ತಾನ. ಇನ್ನು ಜಗತ್ತಿನಲ್ಲಿರುವ ಇಡೀ ಕಾಫೀರರನ್ನೆಲ್ಲಾ ಮಾರಣಹೋಮ ಮಾಡಿ ಇಲ್ಲವೇ ಇಸ್ಲಾಂ ಗೆ ಮತಾಂತ್ರಗೊಳಿಸಿ ಇಡೀ ಪ್ರಪಂಚವನ್ನು ಇಸ್ಲಾಂ ಆಳುವಂತೆ ಮಾಡುತ್ತೇನೆ ಅಂದ ಒಸಾಮಾ ಬಿನ್ ಲಾಡೆನ್ ನನ್ನ ಅಮೇರಿಕಾದ ಕಣ್ಣಿಗೆ ಕಾಣದಂತೆ ಸಾಕಿ ಸಲುಹಿದ್ದೂ ಇದೇ ಪಾಕಿಸ್ತಾನ. ಈಗ ಮುಂಬೈ ದಾಳಿಯ ನರವ ಹಂತಕರನ್ನ ಸಲುಹುತ್ತಿರುವುದೂ ಇದೇ ಪಾಕಿಸ್ತಾನ. ಇಂತಹ ನಂಬಿಕೆಗೆ ಯೋಗ್ಯವಲ್ಲದ ದೂರ್ತ ರಾಷ್ಟ್ರದೊಂದಿಗೆ ಸೇರಿ ಭಯೋತ್ಪಾದನೆಯ ವಿರುದ್ಧ ಹೋರಾಟ ಮಾಡಿದ್ರೆ ಅದು ಹಾವೂ ಸಾಯುವುದಿಲ್ಲ, ಕೋಲು ಮುರಿಯುವುದಿಲ್ಲ ಎಂಬಂತಾಗುತ್ತದೆಯಷ್ಟೆ. ಇದು ನಮ್ಮ ದೇಶವನ್ನಾಳುತ್ತಿರುವ ರಾಜಕಾರಣಿಗಳಿಗೆ ಅರ್ಥವಾಗಲು ಇನ್ನು ಅದೆಷ್ಟು ಶತಮಾನಗಳು ಬೇಕೊ ಆ ಭಗವಂತನೇ ಬಲ್ಲ.

ಅಫ್ಜಲ್ ಗುರು

         ಮುಂಬೈ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಅಜ್ಮಲ್ ಕಸಬ್ ನನ್ನೇನೊ ಗಲ್ಲಿಗೇರಿಸಲಾಗಿದೆ. . ಆದರೆ ಇದಕ್ಕೂ ಮುನ್ನ ಹೇಯ ಕೃತ್ಯ ಎಸೆಗಿದ ಅಫ್ಜಲ್ ಗುರು ಕತೆ ಏನು. ಪ್ರಜಾಪ್ರಭುತ್ವದ ದೇವಸ್ಥಾನವೆಂದೇ ಕರೆಯಲಾಗುವ ಸಂಸತ್ ಭವನದ ಮೇಲೆ ದಾಳಿ ಮಾಡಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪ್ಜಲ್ ಗುರು ನನ್ನ ಗಲ್ಲಿಗೇರಿಸುವುದು ಯಾವಾಗ ಅನ್ನೋದು ಈಗ ಎಲ್ಲರ ಪ್ರಶ್ನೆ. ಕೇಂದ್ರದಲ್ಲಿರುವ ಯುಪಿಎ ಮತ್ತು ದೆಹಲಿಯಲ್ಲಿರುವ ಶೀಲಾ ದಿಕ್ಷೀತ್ ನೇತೃತ್ವದ ಕಾಂಗ್ರೆಸ್ ಸರ್ಕಾರಗಳಿಗೆ ಅಫ್ಜಲ್ ನನ್ನ ನೇಣಿಗೇರಿಸಲು ಮನಸ್ಸಾಗುತ್ತಿಲ್ಲ. ಯಾಕಂದ್ರೆ ಕಸಬ್ ಗಿಂತಲೂ ಮೊದಲೇ ಆತನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದ್ದರೂ ಆತನಿಗೆ ಶಿಕ್ಷೆ ಜಾರಿಮಾಡುವ ದಿಟ್ಟತನ ಕೇಂದ್ರ ಸರ್ಕಾರಕ್ಕಿಲ್ಲ. ಈಗ ಕಸಬ್ ನಿಗೆ ನೇಣು ಹಾಕಲು ತಗೆದುಕೊಂಡ ದಿಟ್ಟತನವನ್ನ ಅಫ್ಜಲ್ ಗುರು ಪ್ರಕರಣದಲ್ಲಿ ಯಾಕೆ ಕಾಂಗ್ರೆಸ್ ಗೆ ನಿರ್ಧಾರ ತಗೆದುಕೊಳ್ಳಲಾಗುತ್ತಿಲ್ಲ. ಯಾಕೆಂದ್ರೆ ಅದಕ್ಕೆ ಕಾರಣವಾಗಿರೋದು ಅಲ್ಪಸಂಖ್ಯಾತರ ಮತಗಳು. ಅದ್ಯಾವ ಮುಟ್ಟಾಳ  ಕಾಂಗ್ರೆಸ್ಸಿಗರಿಗೆ ಹೇಳಿದನೊ ಗೊತ್ತಿಲ್ಲ ಅಫ್ಜಲ್ ನನ್ನ ನೇಣಿಗೆ ಹಾಕಿದರೆ ಮುಸ್ಲಿಮರು  ಕಾಂಗ್ರೆಸ್ ಗೆ ಮತ ಕೊಡುವುದಿಲ್ಲ ಅಂತ. ಕಾಂಗ್ರೆಸ್ ಗಂತೂ ಅಫ್ಜಲ್ ನನ್ನ ನೇಣಿಗೇರಿಸುವ ಮನಸ್ಸಂತೂ ಸದ್ಯಕ್ಕಿಲ್ಲ ಅನ್ನೋದು ಸ್ಪಷ್ಟ. ಯಾಕಂದ್ರೆ ಅಫ್ಜಲ್ ನ ಕ್ಷಮಾದಾನದ ಅರ್ಜಿ 6 ವರ್ಷಗಳಿಂದಲೂ ಕೇಂದ್ರ ಸರ್ಕಾರದ ಮುಂದೆ ಕೊಳೆಯುತ್ತಲೇ ಇದೆ..

ಇನ್ನು ಮೂವರನ್ನು ಬಲಿ ತೆಗೆದುಕೊಂಡ 2000ದ ಕೆಂಪು ಕೋಟೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲಷ್ಕರ್- ಎ- ತೊಯ್ಬಾ ಉಗ್ರ ಮೊಹಮ್ಮದ್ ಆರಿಫ್ ಅಲಿಯಾಸ್ ಅಶ್ಫಾಕ್‌ಗೆ ವಿಧಿಸಿರುವ ಮರಣದಂಡನೆ ತೀರ್ಪು ಕೂಡ ಇನ್ನೂ ಜಾರಿಯಾಗಿಯೇ ಇಲ್ಲ. ಈ ದಾಳಿ ಸಂದರ್ಭದಲ್ಲಿ ಒಬ್ಬ ನಾಗರಿಕ ಹಾಗೂ ಕಟ್ಟಡದ ರಕ್ಷಣೆಗಿದ್ದ ಇಬ್ಬರು ಸೈನಿಕರು ಮೃತರಾಗಿದ್ದರು.  ಮೊಹಮ್ಮದ್ ಆರಿಫ್ ನನ್ನ ಗಲ್ಲಿಗೇರಿಸುವ ವಿಷಯದಲ್ಲಿಯೂ ಕೂಡ ಕೇಂದ್ರ ಸರ್ಕಾರ ಯಾ೦ವುದೇ ದಿಟ್ಟ ನಿರ್ಧಾರ ಕೈಗೊಳ್ತಾಯಿಲ್ಲ. ಕಸಬ್ ಪ್ರಕರಣದಲ್ಲಿ ತೋರಿದ ದಿಟ್ಟತನವನ್ನ ಅಫ್ಕಲ್ ಗುರು ಮತ್ತು ಮೊಹಮ್ಮದ್ ಆರಿಫ್  ವಿಷಯದಲ್ಲಿಯೂ ತೋರಿದರೆ  ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಕಣ್ಣಾಮುಚ್ಚಾಲೆಯಾಡುತ್ತಿರುವ ಪಾಕಿಸ್ತಾನಕ್ಕೆ ಬುದ್ದಿ ಕಲಿಸಿದಂತಾಗುತ್ತದೆ. ಆ ದಿಟ್ಟತನವನ್ನ ಕೇಂದ್ರ ಸರ್ಕಾರತೋರಿಸಬೇಕುಆ ಮೂಲಕ ಬಯೋತ್ಪಾದಕ ದಾಲಿಯಲ್ಲಿ ಮೃತ್ರಾದ ಅಮಾಯಕ ಜನರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕು.

%d bloggers like this: