ಯಡಿಯೂರಪ್ಪ, ಹೊಸ ಪಕ್ಷ, ಮತ್ತವರ ಅಘೋಷಿತ ಹೊಗಳುಭಟ್ಟರು

ಯಡಿಯೂರಪ್ಪ ಹೊಸ ಕನಸಿನಲ್ಲಿದ್ದಾರೆ…  ನೂತನ ಪಕ್ಷ ಸ್ಥಾಪಿಸಿ ಮುಂದಿನ ಎಲೆಕ್ಷನ್ ನಲ್ಲಿ ಕನಿಷ್ಠವೆಂದ್ರೂ 30 ರಿಂದ 40 ಸ್ಥಾನ ಗೆದ್ದು ಕರ್ನಾಟಕದಲ್ಲಿ ಕಿಂಗ್ ಮೇಕರ್ ಆಗ್ಬೇಕು ಅನ್ನೊದು ಯಡಿಯೂರಪ್ಪ ಪ್ಲಾನ್… ಹಾಗಾಗಿಯೇ  ಹೊಸ ಪಕ್ಷ ಸ್ಥಾಪಿಸೋಕೆ ಮುಂದಾಗಿದ್ದಾರೆ… ಹಾಗೇನಾದ್ರೂ ಯಡಿಯೂರಪ್ಪ ಸ್ಥಾಪಿಸಲಿರುವ ಪಕ್ಷವೇನಾದ್ರೂ 30 ರಿಂದ 40 ಸ್ತಾನ ಗೆದ್ದದ್ದೇ  ಆದಲ್ಲಿ ಮತ್ತೆ ಈ  ಬಿಜೆಪಿಯವ್ರು ಯಡಿಯೂರಪ್ಪನ ಪಾದಕ್ಕೇ ಬೀಳೋದು ಮಾತ್ರ ನೀರೀಕ್ಷಿತ… ಯಡಿಯೂರಪ್ಪ ಮನಸ್ಸಿಗೆ ನೋವಾಗಿ ಅವ್ರು ಪಕ್ಷ ಬಿಟ್ಟು ಹೋದ್ರು… ಇನ್ಮೇಲೆ ಹಾಗಾಗಲ್ಲ… ಅಂತ ತಿಪ್ಪೆ ಸಾರಿಸೋಕೆ ಈಶ್ವರಪ್ಪನವ್ರೇ ನಿಂತ್ರು ಆಶ್ಚರ್ಯವಿಲ್ಲ… ಸಿ ಎಂ ಸ್ಥಾ ನ ಮತ್ತೆ ಸಿಗುತ್ತೆ ಅಂದ್ರೆ ಯಡಿಯೂರಪ್ಪ ತಮಗೆ ಆದ ನೂವು(?) ಮರೆತುಬಿಡ್ತಾರೆ…. ಯಾಕಂದ್ರೆ ಅವರದ್ದು ಅಧಿಕಾರದ ಹಸಿವು… ಇವತ್ತು ಯಡಿಯೂರಪ್ಪ ಕಟ್ಟಲಿರುವ  ಹೊಸ ಪಕ್ಷಕ್ಕೆ ಯಾರ್ಯಾರು ಹೋಗ್ತಾರೆ ಅಂತ ನೊಡಿದ್ರೆ ಅದ್ರಲ್ಲಿ ಉತ್ತಮ ಮುಖಗಳಾವುವೂ ಕಾಣ್ತಿಲ್ಲ…. ಹೋಗ್ಲಿ ರಾಜ್ಯದ ಬಗ್ಗೆ ಒಳ್ಳೆ ವಿಷನ್ ಇರೋರ್ ಯಾರಾದ್ರೂ ಇದಾರಾ ಅಂತ ನೋಡಿದ್ರೆ ಒಂದೇ ಒಂದು ಮುಖವೂ ನಿಮಗೆ ಕಾಣೋಲ್ಲ… ಇನ್ನು ಸಾಕ್ಷಾತ್  ಯಡಿಯೂರಪ್ಪನವರಿಗೂ ಅಧಿಕಾರದ ಹಪಹಪಿ ಮತ್ತು ಸದ್ಯದ ಮಟ್ಟಿಗೆ ಬಿಜೆಪಿ ಯಲ್ಲಿರುವ ತಮ್ಮ ವಿರೋಧಿಗಳನ್ನ, ಹೈಕಮಾಂಡ್ ಅನ್ನ ಹೆಣೆಯಲೇಬೇಕು ಅನ್ನೋ ಉದ್ದೇಶಬಿಟ್ರೆ ಬೇರೇನೂ ಇಲ್ಲ…

ಇನ್ನು ಯಡಿಯೂರಪ್ಪನವರ ಕರ್ನಾಟಕ ಜನತಾ ಪಕ್ಷಕ್ಕೆ ಸೇರಲಿರುವುದು ಯಾರ್ಯಾರು ಗೊತ್ತಾ…. ಕಳೆದ ಮೂರ್ನಾಲ್ಕು ವರ್ಷಗಳಿಂದ ರಾಜಕೀಯ ಅಂದ್ರೇನೆ ಅಸಹ್ಯ ಬರೊಹಾಗೆ ಮಾಡಿದ್ರಲ್ಲ ಅವರುಗಳೇ…. ಅದೇ ರೇಣುಕಾಚಾರ್ಯ, ಅದೇ ಬಿ ಪಿ ಹರೀಶ್, ಅದೇ ಶೋಬಾ ಕರಂದ್ಲಾಜೆ, ಅದೇ ಸೋಮಣ್ಣ, ಅದೇ ಉಮೇಶ್ ಕತ್ತಿ… ಅದೇ ದನಂಜಯಕುಮಾರ್, ಅದೇ ಪುಟ್ಟಸ್ವಾಮಿ, ಎಲ್ಲವೂ ಅದೇ ಹಳಸು ಮುಖಗಳೇ…. ಎಲ್ಲರೂ ಯಡಿಯೂರಪ್ಪನವರ ಅಘೊಷಿತ ಹೊಗಳು ಭಟ್ಟರೇ… ಮೊನ್ನೆ ಯಡಿಯೂರಪ್ಪನವರಿಗೆ ಕಾವೇರಿಯ ಬಗ್ಗೆ  ಇದ್ದಕ್ಕಿದ್ದಂತೆ ಜ್ಞಾನೋದಯವಾಗಿಬಿಟ್ಟಿತಲ್ಲ….. ಬೀದಿಗೆ ಬಂದು ಕಾವೇರಿಯನ್ನ ಪ್ರಾಣವೇ ಹೋದ್ರೂ ಯಾರಿಗೂ… ಎಲ್ಲಿಗೂ ಬಿಡೊಲ್ಲ ಅಂತ ಅಬ್ಬರಿಸಿದರಲ್ಲ….  ಅವತ್ತು ವೇದಿಕೆ ಮೇಲಿದ್ದ ಎಲ್ಲರ ಬಾಯಲ್ಲೂ ಕಾವೇರಿಗಿಂತಲೂ ಹೆಚ್ಚು ನುಡಿಮುತ್ತುಗಳು ಉದುರಿದ್ದು ಯಡಿಯೂರಪ್ಪನವ್ರ ಬಗ್ಗೆಯೇ…. ಅದ್ರಲ್ಲಿ ಒಂದು ಸ್ಯಾಂಪಲ್ ಇಲ್ಲಿದೆ ನೊಡಿ….

‘’ಸನ್ಮಾನ್ಯ ಯಡಿಯೂರಪ್ಪನವ್ರು ಈ ನಾಡು ಕಂಡ ಅತ್ಯಂತ ಯಶಸ್ವಿ ನಾಯಕ… ಷಡ್ಯಂತ್ರ ಮಾಡಿ ಅವ್ರನ್ನ ಮುಖ್ಯಮಮತ್ರಿ ಹುದ್ದೆಯಿಂದ ಇಳಿಸಲಾಯಿತು…. ಪಕ್ಷದೊಳಗಿನವರೇ ಯಡಿಯೂರಪ್ಪನವರನ್ನ ತುಳಿಯೋಕೆ ಪ್ರಯತ್ನ ಮಾಡಿದ್ರು…. ಆದ್ರೆ ಒಂದು ವಿಷಯ ತಿಳ್ಕೊಳ್ಳಿ…. ಯಡಿಯೂರಪ್ಪನರನ್ನ ಯಾರಿಂದಲೂ ತುಳಿಯೋಕಾಗಲ್ಲ…. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಇಡೀ ರಾಜ್ಯವನ್ನೇ ಅಭಿವೃದ್ದಿಮಾಡಿದ್ರು…. 50 ವರ್ಷದಿಂದ ಯಾರೂ ಮಾಡದ ಸಾಧನೆಯನ್ನ ಯಡಿಯೂರಪ್ಪ ಮಾಡಿದ್ರು…. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಕಾವೇರಿಯ ಸಮಸ್ಯೆನೇ ಇರಲಿಲ್ಲ…. ಅವ್ರ ಕೃಪೆಯಿಂದ ರಾಜ್ಯದಲ್ಲಿ ಬೇಕಾದಷ್ಟು ಮಳೆಯಾಗಿತ್ತು… ಇದ್ರಿಂದಾಗಿ ಸಾಕಷ್ಟು ನೀರು ತಮಿಳುನಾಡಿಗೆ ಹರಿದುಹೊಗಿತ್ತು… ಆದ್ರೆ ಈಗ ಏನಾಗಿದೆ ನೋಡಿ ಯಡಿಯೂರಪ್ಪ ಅಧಿಕಾರದಿಂದ ಇಳಿದ ಮೇಲೆ ಮಳೆ ಇಲ್ಲ. ಜೊತೆಗೆ ರಾಜ್ಯದಲ್ಲಿ ಬರ ತಾಂಡವವಾಡ್ತಾಯಿದೆ…. ಸಮಸ್ಯೆಗಳೂ ಹೆಚ್ತಾಯಿವೆ…. ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕೆಲಸ ನಡೀತಾ ಇಲ್ಲ… ನಮ್ಮ ನಾಯಕರಾದ ಯಡಿಯೂರಪ್ಪ ಈ ರಾಜ್ಯಕ್ಕೆ ಮತ್ತೆ ಮುಖ್ಯಮಂತ್ರಿಯಾಗಿ ಎಲ್ಲ ಸಮಸ್ಯೆಗಳನ್ನೂ ಪರಿಹರಿಸಬೇಕು”

ಅಬ್ಬೋ…. ರಾಮ… ರಾಮ… ಈ ಮಾತುಗಳನ್ನ ಹೇಳ್ತಿರೋದು ನಾನಲ್ಲ…. ಯಡಿಯೂರಪ್ಪನವರ ಪರ್ಮನೆಂಟ್ ಹೊಗಳು ಭಟ್ಟ ಧನಂಜಯ್ ಕುಮಾರ್ ಅವ್ರಿಂದ… ಯಡಿಯೂರಪ್ಪನ ಕ್ರಪೆಯಿಮದಾಗಿ ರಾಜ್ಯದಲ್ಲಿಮಳೆಯಾಗಿ ಬರ ಇರಲಿಲ್ಲ… ಹಾಗೆ ಕಾವೇರಿಸಮಸ್ಯೆನೂ ಇರಲಿಲ್ಲ ಅನ್ನೊ ಮಾತುಗಳು ಮಾತ್ರ ಈವರ್ಷದ ಭಯಂಕರ ಜೋಕ್… ಇಡೀ ರಾಜ್ಯವೇ ಉದ್ದಾರ ಮಾಡಿದ್ದಾರೇನೊ ಅನ್ನುವ ಹಾಗೆ ಮಾತನಾಡುವ ಇವ್ರಿಗೆ ನೆರೆಯಿಂದ ಮನೆ ಕಳೆದುಕೊಂಡ ಉತ್ತರ ಕರ್ನಾಟಕದ ಮನೆ ಕಟ್ಟಿಕೊಡಲು ಮಾತ್ರ ಯೋಗ್ಯತೆ ಇಲ್ಲ…. ಮಾಡಿದ ಎಲ್ಲ ಯೊಜನೆಗಳಲ್ಲೂ ತಿನ್ನಲು ಎಷ್ಟು ಪಾಲು ಸಿಗುತ್ತೆ ಅನ್ನೋ ಅಜೆಂಡಾಗಳನ್ನ ಇಟ್ಟುಕೊಂಡು ಮಾಡಿದವರೇ….

ಇವತ್ತು ಹೊಸ ಪಕ್ಷ ಕಟ್ಟೋಕೆ ಹೊರಟಿರುವ ಈ ಮಂದಿ ಅಧಿಕಾರದವದಿಯುದ್ದಕ್ಕೂ ಅಕ್ರಮ ಡಿನೋಟೊಫಿಕೇಶನ್, ಹಗರಣಗಳು, ಸ್ವಜನಪಕ್ಷಪಾತ, ಜಾತಿ ವೈಶಮ್ಯವನ್ನು ಮಾಡಿದವರೇ…. ಮಾಡಿದ ತಪ್ಪಿಗೆ ಅದಿಕಾರದಿಂದ ಕೆಳಗಿಳಿದು ಜೈಲು ದರ್ಶನ ಮಾಡಿದ್ರೂ ಮೀಸೆ ಮಾತ್ರ ಮಣ್ಣಾಗಲಿಲ್ಲ ಅನ್ನೊದು ಯಡಿಯೂರಪ್ಪನವರ ವರಸೆ… ಅವರ ಬೆಂಬಲಿಗರ ಪ್ರಕಾರ ಯಡಿಯೂರಪ್ಪ ಪ್ರಶ್ನಾತೀತ ನಾಯಕ… ಅವ್ರು ಏನ್ ಬೇಕಾದ್ರೂ ಮಾಡಬಹುದು…. ಎಷ್ಟು ಅಕ್ರಮ ಡಿನೋಟಿಫಿಕೇಶನ್ ಮಾಡಿದ್ರೂ ಅದೂ ಕೂಡ ಜನರ ಉದ್ದಾರಕ್ಕಾಗಿಯೆ ಮಾಡ್ತಾರೆ… ಅವ್ರು ಹೇಳಿದ್ದೇ ಫೈನಲ್… ಅವ್ರು ಯಾವ್ದೇ ತಪ್ಪು ಮಾಡಿಲ್ಲ…. ಒಂದೇ ಒಂದು ರುಪಾಯಿ ದುಡ್ಡೂ ಕೂಡ ಅವ್ರು ಮುಟ್ಟೇ ಇಲ್ಲ….  ಇದು ಯಡಿಯೂರಪ್ಪನವರ ಪಟಾಲಂ  ಕೊಡುವ ತೀರ್ಪು…

ಒಂದು ರುಪಾಯಿ ಯಾರೂ ಮುಟ್ಟೊಲ್ಲ…. ಎಲ್ಲವು ಕೊಟಿಗಳ  ಲೆಕ್ಕದಲ್ಲಿ ನಡೆದ ಲೂಟಿಗಳೇ…. ದೇಶದ ಇತಿಹಾಸ ಗೊತ್ತಿದ್ದವ್ರು ಒಂದು ವಿಷಯ ಅರ್ಥ ಮಾಡ್ಕೊಬೇಕು… ಈ ದೇಶದಲ್ಲಿ ಮಹತ್ಮಾ ಗಾಂಧಿ ಸೇರಿದಂತೆ ಯಾರೂ ಪ್ರಶ್ನಾತೀತ ನಾಯಕರಲ್ಲ… ಅವಿವೇಕದ ಮಾತನಾಡುವುದನ್ನು ಬಿಟ್ಟು ನಿಜ ಪರಿಸ್ಥಿತಿ ಅರಿತು ಮಾತನಾಡುವವ್ರು ಯಾರು ಯಡಿಯೂರಪ್ಪನವರ ಹಿಂದೆ ಇಲ್ಲ… ಅಂತವರು ಯಡಿಯೂರಪ್ಪನವ್ರಿಗೆ ಬೇಕಾಗಿಯೂ ಇಲ್ಲ…. ಜನ್ರು ಇಟ್ಟ ನಂಬಿಕೆಗೇ ದ್ರೋಹ ಬಗೆದ ಇಂತವರಿಂದ ರಾಜ್ಯದ ಜನ್ರು ತಾನೆ ಏನು ನಿರೀಕ್ಷೆ ಮಾಡೋಕೆ ಸಾಧ್ಯ…

%d bloggers like this: