ಪೊಲೀಸ್ ಠಾಣೆ ಸಾವ೯ಜನಿಕ ಆಸ್ತಿಯಲ್ಲ-ಚರಣ್ ರೆಡ್ಡಿ ಉದ್ಧಟತನ
ಜೂನ್ 5, 2016 1 ಟಿಪ್ಪಣಿ

ಇದು ನನ್ನ ಪ್ರತಿಬಿಂಬ…
ಜೂನ್ 5, 2016 1 ಟಿಪ್ಪಣಿ
ಜೂನ್ 5, 2016 ನಿಮ್ಮ ಟಿಪ್ಪಣಿ ಬರೆಯಿರಿ
ಪೊಲೀಸರ ಪ್ರತಿಭಟನೆಯನ್ನು ಎಸ್ಮಾ ಮತ್ತು ಶಿಸ್ತು ಕ್ರಮದ ಅಸ್ತ್ರ ಉಪಯೋಗಿಸಿ ಹತ್ತಿಕ್ಕುವಲ್ಲಿ ಸರಕಾರವೇನೋ ಯಶಸ್ವಿಯಾಗಿದೆ. ಆದರೆ ಒ೦ದು ಹ೦ತಕ್ಕೆ ಗೆದ್ದಿದ್ದು ಪೊಲೀಸರೇ..
ಜೂನ್ 2, 2016 ನಿಮ್ಮ ಟಿಪ್ಪಣಿ ಬರೆಯಿರಿ
ಜೂನ್ 4ರಂದು ಪೊಲೀಸರ ಪ್ರತಿಭಟನೆಗೆ ಕರೆ ನೀಡಿದ್ದ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್ರನ್ನ ಬಂಧಿಸಲಾಗಿದೆ. ಬುಧವಾರ ರಾತ್ರಿ 12.30ರ ಸಮಯದಲ್ಲಿ ಯಲಹಂಕ ಉಪನಗರದ ಶಶಿಧರ್ರ ಮನೆಯಿಂದ ಪೊಲೀಸರು ಇವರನ್ನ ಬಂಧಿಸಿ ಕರೆದೊಯ್ದಿದ್ದಾರೆ. ಪೊಲೀಸ್ ಪ್ರತಿಭಟನೆ ಹತ್ತಿಕ್ಕಲು ಹಲವು ಸಾಹಸ ಮಾಡಿದ್ದ ಸರಕಾರ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬಿಟ್ಟು ಈ ನಡುರಾತ್ರಿ ಕಾರ್ಯಾಚರಣೆ ನಡೆಸಿದೆ.
ಮುವತ್ತಕ್ಕೂ ಹೆಚ್ಚು ಮಂದಿ ಪೊಲೀಸರು ಶಶಿಧರ್ ಮನೆಗೆ ಏಕಾಏಕಿ ನುಗ್ಗಿ ಶಶಿಧರ್ ಅವರನ್ನು ಬಂಧಿಸಿ ಕರೆದೊಯ್ಯಲಾಯಿದೆ. ಈ ವೇಳೆ ಶಶಿಧರ್ ಮಗ ಜಾಗೃತ್ ಫೋಟೊ ತೆಗೆಯಲು ಮುಂದಾದಾಗ ಬಲವಂತವಾಗಿ ಮೊಬೈಲ್ ಕಿತ್ತು ಒಡೆದುಹಾಕಲಾಗಿದೆ. ಸರ್ಕಾರದ ವಿರುದ್ಧ ಸಮರ, ಒಳಸಂಚು ಮತ್ತು ಪೊಲೀಸರಿಗೆ ಪ್ರತಿಭಟನೆ ಮಾಡುವಂತೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಶಶಿಧರ್ ಅವರನ್ನ ಬಂಧಿಸಲಾಗಿದೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಅವರನ್ನು ಜೂನ್ 16 ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಜೂನ್ 1, 2016 ನಿಮ್ಮ ಟಿಪ್ಪಣಿ ಬರೆಯಿರಿ
ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ಪೊಲೀಸರು ಜೂ.4 ರಂದು ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಅವಧಿಗೂ ಮೀರಿ ಪೊಲೀಸರನ್ನು ದುಡಿಸಿಕೊಳ್ಳಲಾಗುತ್ತಿದೆ ಎಂಬುದು ಪ್ರತಿಭಟನೆಗಿಳಿದಿರುವವರ ಅಳಲು. ಹೌದು ರಾಜ್ಯದಲ್ಲಿ ಪೊಲೀಸರು ಪ್ರತಿದಿನ ಸರಾಸರಿ 12 ರಿಂದ 15 ಗಂಟೆಗಳ ಕಾಲ ದುಡಿಯುತ್ತಾರೆ. ಎಂಟು ಗಂಟೆಗಳ ಕಾಲ ಕೆಲಸ ಎಂಬುದು ಪೊಲೀಸರ ವಿಚಾರದಲ್ಲಿ ಕನಸಿನ ಮಾತೇ ಸರಿ. ಹೀಗೆ ಪೊಲೀಸರನ್ನು ಹೆಚ್ಚು ಅವಧಿಗೆ ದುಡಿಸಿಕೊಳ್ಳಲು ಕಾರಣ ರಾಜ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯ ಕೊರತೆ.
ರಾಜ್ಯ ಪೊಲೀಸ್ ಇಲಾಖೆಗೆ ಮಂಜೂರಾಗಿರುವ ಪೊಲೀಸ್ ಬಲ 1,01053. ಆದರೆ ಸದ್ಯ ರಾಜ್ಯದಲ್ಲಿರುವ ಪೊಲೀಸರ ಸಂಖ್ಯೆ ಕೇವಲ 73,746 ಅಷ್ಟೇ. ಅಂದರೆ ಸದ್ಯ ರಾಜ್ಯದಲ್ಲಿರುವ ಖಾಲಿ ಇರುವ ಹುದ್ದೆಗಳ ಸಂಖ್ಯೆ 33307. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆ ಇರುವುದರಿಂದ ಈಗ ಇರುವ ಪೊಲೀಸರು ಅನಿವಾರ್ಯವಾಗಿ ಹೆಚ್ಚಿನ ಅವಧಿಗೆ ದುಡಿಯುವಂತಾಗಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸರ ನೇಮಕವಾಗುತ್ತಿಲ್ಲ.
ಖಾಸಗಿ ಸಂಸ್ಥೆ ನೀಡಿರುವ ಅಂಕಿ ಅಂಶಗಳ ಪ್ರಕಾರ ರಾಜ್ಯದ ಜನಸಂಖ್ಯೆ 6 ಕೋಟಿ 60 ಲಕ್ಷ. ಇಷ್ಟು ಜನಸಂಖ್ಯೆಗೆ ರಾಜ್ಯದಲ್ಲಿರುವ ಪೊಲೀಸರ ಸಂಖ್ಯೆ ಮಾತ್ರ 73,746. ಅಂದರೆ ರಾಜ್ಯದ ಪ್ರತಿ 894 ಜನರಿಗೆ ಒಬ್ಬ ಪೊಲೀಸ್ ಸಿಬ್ಬಂದಿ ಇದ್ದಾರೆ. ರಾಜ್ಯದಲ್ಲಿ ಈಗ ಇರುವ ಪೊಲೀಸರ ಸಂಖ್ಯೆಯನ್ನು 1.5 ಲಕ್ಷಕ್ಕೆ ಏರಿಕೆ ಮಾಡಬೇಕೆಂದು ಪೊಲೀಸ್ ಇಲಾಖೆ ಸರಕಾರಕ್ಕೆ ಶಿಫಾರಸು ಮಾಡಿ ಎರಡು ವರ್ಷವೇ ಕಳೆದಿದೆ. ಆದರೆ ನೇಮಕ ಪ್ರಕ್ರಿಯೆ ಮಾತ್ರ ಅಂದುಕೊಂಡ ಸಂಖ್ಯೆಯಲ್ಲಿ ಆಗುತ್ತಿಲ್ಲ.
ವಿಪರ್ಯಾಸ ಅಂದರೆ ಪೊಲೀಸರ ಪ್ರತಿಭಟನೆಗೆ ನಮ್ಮ ಬೆಂಬಲ ಇದೆ ಅನ್ನುವ ಬಿಜೆಪಿ ಮುಖಂಡರು ತಮ್ಮ ಸರಕಾರ ಅಸ್ಥಿತ್ವದಲ್ಲಿದ್ದಾಗ ಪೊಲೀಸ್ ನೇಮಕ ಕಾರ್ಯವನ್ನೇ ನಡೆಸಿಲ್ಲ. ಇನ್ನು ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷ ಕಳೆದಿದೆ. ಎಂಟು ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ಘೋಷಣೆ ಮಾಡುತ್ತಲೇ ಇದ್ದಾರೆ. ಆದರೆ ಇನ್ನೂ ಅದು ಕಾರ್ಯಗತವಾಗಿಲ್ಲ. ‘ಜನಸಂಖ್ಯೆಗೆ ಅನುಗುಣವಾಗಿ, ಕಾನೂನು ಸುವ್ಯವಸ್ಥೆ ಮತ್ತು ಅಪರಾಧಗಳ ಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಪೊಲೀಸರ ನೇಮಕ ನಡೆಯದಿರುವ ಕಾರಣಕ್ಕೆ ಮಿತಿ ಮೀರಿದ ಕೆಲಸವನ್ನು ನಾವು ಮೈಮೇಲೆ ಎಳೆದುಕೊಳ್ಳುವಂತಾಗಿದೆ. ವಾರಕ್ಕೆ ಒಂದು ದಿನ ರಜೆ ಪಡೆಯುವುದಿರಲಿ, ತಿಂಗಳಿಗೆ ಒಂದು ದಿನ ರಜೆ ಸಿಕ್ಕರೆ ಅದೇ ಅದೃಷ್ಟ ಎನ್ನುವಂತಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳನ್ನು ಕೇಳಿದರೆ, ಇದು ಅನಿವಾರ್ಯ ಎನ್ನುತ್ತಾರೆ’ ಎಂದು ನೋವು ತೋಡಿಕೊಳ್ಳುತ್ತಾರೆ ನಗರದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಪೇದೆಯೊಬ್ಬರು.
ಸಿಬ್ವಂದಿ ಕೊರತೆಯಿಂದ ಸಮಸ್ಯೆಗಳು
894 ಜನರಿಗೆ ಒಬ್ಬ ಪೊಲೀಸ್!
ಬೆಂಗಳೂರಿನಲ್ಲಿ 766 ಜನರಿಗೆ ಒಬ್ಬ ಪೊಲೀಸ್!
–ಶಶಿವರ್ಣಂ!