ಜಾತಿ, ಧರ್ಮ ಕೇಳಿ ಬಂಧಿಸುವ ಸ್ಥಿತಿ ಬೇಡ! 

27812

ಇಂದಿನ ವಿಶ್ವವಾಣಿಯಲ್ಲಿ ನನ್ನ ಲೇಖನ

ದಿನವೊಂದಕ್ಕೆ ಪೊಲೀಸರು ಸಾವಿರಾರು ಜನರನ್ನು ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬಂಧಿ ಸುತ್ತಿದ್ದಾರೆ. ಆಗ ಜಾತಿಯ ಪ್ರಶ್ನೆ, ಧರ್ಮದ ಪ್ರಶ್ನೆ ಬರುವುದಿಲ್ಲ. ಆದರೆ, ಶಂಕಿತ ಉಗ್ರನೆಂಬ ಕಾರಣಕ್ಕೆ ಒಬ್ಬ ಮುಸ್ಲಿಂ ಯುವಕನ ಬಂಧನವಾದರೆ, ಧರ್ಮದ ಹಣೆಪಟ್ಟಿ ಕಟ್ಟಲಾಗುತ್ತದೆ.

ದೇಶಾದ್ಯಂತ ಎನ್‌ಐಎ ಹಲವು ಶಂಕಿತ ಉಗ್ರರನ್ನು ಬಂಧಿಸುತ್ತಿದೆ. ಇಂಥ ಸಮಯದಲ್ಲಿ ಮುಸ್ಲಿಮರೆಲ್ಲರೂ ಭಯೋತ್ಪಾದಕರು ಎಂಬ ವಾದಗಳನ್ನು ತೇಲಿ ಬಿಡುವವರು ಒಂದು ಕಡೆ. ಅವರಿಗೆ ಬಲ­ಪಂಥೀಯರು ಎನ್ನುವ ವಿಶೇಷಣ. ಇನ್ನೊಂದೆಡೆ ಬಂಧಿತರು ಅಮಾಯ­ಕರು, ಉದ್ದೇಶಪೂರ್ವಕವಾಗಿ ಮುಸ್ಲಿಂ ಯುವಕರನ್ನ ಬಂಧಿಸಲಾಗುತ್ತಿದೆ ಎಂದು­ ವಾದ. ಇಂತವರಿಗೆ ಜಾತ್ಯತೀತರು ಎಂಬ ಪಟ್ಟ. ಭಯೋತ್ಪಾದನೆಯ ಆರೋಪದ ಮೇಲೆ ಮುಸ್ಲಿಂ ಯುವಕರನ್ನು ಬಂಧಿಸಿದಾಗಲೆಲ್ಲ ಅವರು ಅಮಾಯಕರು ಎಂಬ ವಾದ ಮಾಡ್ತುತಾರೆ.
ಸ್ವಘೋಷಿತ ಬುದ್ಧಿಜೀವಿಗಳು, ಮುಸ್ಲಿಂ ವೋಟ್ ಬ್ಯಾಂಕ್‌ಗಾಗಿ ಒದ್ದಾಡುವ ಪಕ್ಷಗಳು ಮತ್ತು ಮುಸ್ಲಿಮರನ್ನು ಬೇರೆ ಸಮುದಾಯಗಳಿಂದ ದೂರ ಇಡಬೇಕು ಎಂದು ಶತಮಾನಗಳಿಂದ ಪ್ರಯತ್ನಿಸುತ್ತ ಬಂದಿರುವ ಕೆಲ ಧಾರ್ಮಿಕ ಗುರು­ಗಳು ಈ ವಾದಗಳನ್ನು ಹರಿಬಿಡುತ್ತಾರೆ. ಉಗ್ರ ಚಟುವಟಿಕೆಯ ಆರೋಪದ ಮೇಲೆ ಮುಸ್ಲಿಂ ಯುವಕರನ್ನು ಬಂಧಿಸಿದ ಕೂಡಲೇ ಅವರು ಅಮಾಯಕರು ಎಂದು ಕೂಗಿದರೆ, ಪೊಲೀಸರು ಯಾರನ್ನು ಬಂಧಿಸಬೇಕು. ಬಂಧಿಸಿ ವಿಚಾರಣೆ ನಡೆಸಿದ ನಂತರವೇ ತಾನೇ ಆತ ಅಮಾಯಕನಾ ಅಥವಾ ಅಪರಾಧ ಮಾಡಿದ್ದಾನೆ ಎನ್ನುವುದು ತಿಳಿಯುವುದು. ಅದಕ್ಕೂ ಮೊದಲೇ ಅಮಾಯಕ ಅಲ್ಪಸಂಖ್ಯಾತರನ್ನು ಬಂಧಿಸಲಾಗುತ್ತಿದೆ ಎಂದು ಹೇಳಿದರೆ ತನಿಖಾಧಿಕಾರಿಗಳ ಮನಸ್ಥಿತಿ ಏನಾಗಬೇಕು?

ಯಾವುದೇ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿ­ದರೆ 24 ಗಂಟೆಗಳ ಒಳಗೆ ನ್ಯಾಯಾಲಯದ ಎದುರು ಹಾಜರುಪಡಿಸ­ಬೇಕು ಎಂದಿದೆ ಕಾನೂನಿನಲ್ಲಿ. ಆ 24 ಗಂಟೆಗಳ ಅವಧಿಯಲ್ಲಿ ಬಂಧಿತನ ವಿಚಾರಣೆ ನಡೆಸಿ, ಅಪರಾಧ ನಡೆಸಿದ್ದಾನೆ ಅನ್ನೋದು ಮನವರಿಕೆಯಾದರೆ ಅಂಥವನನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗುತ್ತದೆ. ಒಂದು ವೇಳೆ ಆತ ಅಪರಾಧ ಮಾಡಿರುವ ಬಗ್ಗೆ ಖಚಿತ ಮಾಹಿತಿ ಸಿಗಲಿಲ್ಲವೆಂದಾದರೆ ಆತನನ್ನು ಬಿಡುಗಡೆಗೊಳಿಸುತ್ತಾರೆ. ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸುವಾಗ ಆತ ಅಪರಾಧ ಮಾಡಿಲ್ಲ ಅನ್ನೋದು ತನಿಖಾ ಧಿ ಕಾರಿಗೆ ಖಚಿತವಾದರೆ ಕಾನೂನಿನ ಪ್ರಕಾರ ಬಂಧನವಾದವನು ಬಿಡುಗಡೆಯಾಗುತ್ತಾನೆ. ಇದು ಉಗ್ರಗಾಮಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಬಂಧಿತರಾಗುವ ಶಂಕಿತ ಉಗ್ರರಿಗೂ ಅನ್ವಯವಾಗುತ್ತದೆ.

ದೆಹಲಿಯಲ್ಲಿ ಕುಳಿತಿರುವ ಎನ್‌ಐಎ ಅಧಿಕಾರಿ ಬೆಂಗಳೂರಿನ ಮೂಲೆಯಲ್ಲಿ­ರುವ ಜಕ್ಕಸಂದ್ರಕ್ಕೆ ಬಂದು ಶಂಕಿತನನ್ನು ಬಂಧಿಸಿ ಕರೆದೊಯ್ದರೆ ಅದು ಉದ್ದೇಶಪೂರ್ವಕ ಹೇಗಾಗುತ್ತದೆ. ಹಾಗೊಂದು ವೇಳೆ ಉದ್ದೇಶಪೂರ್ವಕವಾಗಿ ಮುಸ್ಲಿಂ ಯುವಕರನ್ನು ಬಂಧಿಸುವ ಹಾಗಿದ್ದರೆ ಇವತ್ತು ಎಲ್ಲ ಮುಸ್ಲಿಂ ಯುವಕರೂ ಜೈಲಲ್ಲಿರಬೇಕಾಗುತ್ತಿತ್ತು. ಹಾಗಂತ ಇಲ್ಲಿಯವರೆಗೆ ಭಯೋತ್ಪಾದನೆಯ ಆರೋಪದ ಮೇಲೆ ಬಂಧಿತರಾದ ಎಲ್ಲ ಮುಸ್ಲಿಂ ಯುವಕರನ್ನು ಈ ದೇಶದ ನ್ಯಾಯಾಲಯ ಅಪರಾಧಿಗಳು ಅಂತೇನು ಹೇಳಿಲ್ಲ. ದೇಶದಲ್ಲಿ ಒಟ್ಟಾರೆ ದಾಖಲಾಗುವ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ಕೇವಲ 21% ಅಷ್ಟೇ. ಉಳಿದ 79% ಆರೋಪಿಗಳು ಖುಲಾಸೆಯಾಗುತ್ತಾರೆ. ಇದಕ್ಕೆ ಕಾರಣ ವರ್ಷಗಟ್ಟಲೆ ನಡೆಯುವ ಕೋರ್ಟ್ ವಿಚಾರಣೆ. ಒತ್ತಡಕ್ಕೋ, ಹಣದಾಸೆಗೋ ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗುತ್ತಾರೆ. ಪರಿಣಾಮ ಕೇಸುಗಳು ಬಿದ್ದು
ಹೋಗುತ್ತವೆ. ಬಂಧಿತ ಮುಸ್ಲಿಂ ಯುವಕರೆಲ್ಲರೂ ಅಮಾಯಕರು ಎಂದು ಹೇಳೋದಾದರೆ, ಈ ಅಂಕಿ ಅಂಶಗಳ ಪ್ರಕಾರ ಪೊಲೀಸರು ಬಂಧಿ ಸುವ ಶೇ.79%ರಷ್ಟು ಮಂದಿ ಅಮಾಯಕರಾಗುತ್ತಾರೆ.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ತನಿಖಾಧಿಕಾರಿ ತಾನು ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ಯಾರನ್ನು ಬೇಕಾದರೂ ಬಂಧಿಸಿ ವಿಚಾರಣೆ ನಡೆಸಬಹುದು. ಕೆಲವು ವಿಶೇಷ ಸನ್ನಿವೇಶದಲ್ಲಿ ನ್ಯಾಯಾಲಯದ ವಾರೆಂಟ್ ಮೂಲಕ ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ. ಇದನ್ನೇ ಪ್ರಶ್ನಿಸಿ ಅಮಾಯಕರು ಎಂದು ಪುಂಗಿ ಊದಿದರೆ ಹೇಗೆ. ಉಗ್ರಗಾಮಿ ಚಟುವಟಿಕೆಗಳ ಆರೋಪದ ಮೇಲೆ ಬಂಧಿತರಾದವರು ಕೋರ್ಟ್ ವಿಚಾರಣೆ ಮುಗಿದ ನಂತರ ಅಪರಾಧ ಮಾಡಿರುವುದು ರುಜುವಾತಾಗಿ ಶಿಕ್ಷೆ ಅನುಭವಿಸುವಂತಾಗುತ್ತದೆ. ಕೆಲವರು ನಿರಪರಾಧಿಗಳೆಂದು ಬಿಡುಗಡೆಯಾಗುತ್ತಾರೆ. ಇನ್ನೂ ಕೆಲವು ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆ ಮಾಡಲಾಗುತ್ತದೆ. ಖುಲಾಸೆಯಾದವರನ್ನ ನ್ಯಾಯಾಲಯ ಎಂದಿಗೂ ನಿರಪರಾಧಿಗಳೆಂದು ಘೋಷಣೆ ಮಾಡಿಲ್ಲ, ಜತೆಗೆ ಅಮಾಯಕರಲ್ಲ ಎಂದು ಹೇಳಿಬಿಡುತ್ತದೆ. ಹೀಗಿರುವಾಗ ಟಿವಿಗಳಲ್ಲಿ ಶಂಕಿತ ಉಗ್ರನ ಬಂಧನ ಎಂದು ಸುದ್ದಿ ಬಂದ ಕೂಡಲೇ ಅಲರ್ಟ್ ಆಗಿಬಿಡುವ ವಿಚಾರವಾದಿಗಳು ಬಂಧಿತರು ಅಮಾಯಕರು ಎಂದು ಹೇಳಿಬಿಡುತ್ತಾರೆ. ಒಬ್ಬ ನಿರಪರಾ ಧಿಯನ್ನು ಕೇವಲ ಉಗ್ರ ಚಟುವಟಿಕೆಯಷ್ಟೇ ಅಲ್ಲ ಯಾವುದೇ ಕೇಸಿನಲ್ಲೂ ಜೈಲಿನಂತೆ ಕೊಳೆಯುವಂತೆ ಮಾಡಬಾರದು. ಆದರೆ ನಮ್ಮ ಧಿರ್ಘಾವಧಿ ವಿಚಾರಣೆಗಳು ಆರೋಪಿಗಳನ್ನು ಜೈಲಿನ ಕೊಳೆಯುವಂತೆ ಮಾಡುತ್ತಿವೆ. ದಿನವೊಂದಕ್ಕೆ ಈ ದೇಶದಲ್ಲಿ ಪೊಲೀಸರು ಸಾವಿರಾರು ಜನರನ್ನು ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬಂಧಿಸಲಾಗುತ್ತದೆ. ಆಗ ಜಾತಿಯ ಪ್ರಶ್ನೆ, ಧರ್ಮದ ಪ್ರಶ್ನೆ ಬರುವುದೇ ಇಲ್ಲ. ಆದರೆ ಶಂಕಿತ ಉಗ್ರನೆಂಬ ಕಾರಣಕ್ಕೆ ಒಬ್ಬ ಮುಸ್ಲಿಂ ಯುವಕ ಬಂಧನವಾದರೆ ಅಮಾಯಕನನ್ನು ಬಂಧಿಸಲಾಗಿದೆ ಎಂದು ಧರ್ಮದ ಹಣೆಪಟ್ಟಿ ಕಟ್ಟಲಾಗುತ್ತದೆ.

1998ರಲ್ಲಿ ಕೊಯಮತ್ತೂರಿನಲ್ಲಿ ಬಿಜೆಪಿ ಮುಖಂಡ ಅಡ್ವಾಣಿಯನ್ನು ಗುರಿಯಾಗಿಸಿಕೊಂಡು ನಡೆಸಿದ ಬಾಂಬ್ ದಾಳಿಯಲ್ಲಿ 58 ಅಮಾಯಕರು ಸಾವನ್ನಪ್ಪಿ, 200 ಮಂದಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಮದನಿ ಪ್ರಮುಖ ಆರೋಪಿಯಾಗಿದ್ದ. 14 ಆರೋಪಿಗಳ ಪೈಕಿ ಮದನಿಯನ್ನು ಹೊರತುಪಡಿಸಿ ಎಲ್ಲರಿಗೂ ಶಿಕ್ಷೆಯಾಯಿತು. ಮದನಿ ಮೇಲಿದ್ದ ಆರೋಪ ಸಾಬೀತು ಮಾಡಲು ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ನ್ಯಾಯಾಧಿ ಶರು ಆದೇಶ ಬರೆದರು. ಹಾಗಂತ ಮದನಿ ಅಮಾಯಕ ಎಂದೇನು ಕೋರ್ಟ್ ಹೇಳಿಲ್ಲ. ಬೆದರಿಕೆ, ರಾಜಕೀಯ ಒತ್ತಡಗಳ ಕಾರಣದಿಂದ ಸಾಕ್ಷಿಗಳು ಮದನಿ ವಿರುದ್ಧ ಸಾಕ್ಷಿ ಹೇಳಲಿಲ್ಲ. ಈ ಕಾರಣದಿಂದ ಮದನಿ ಖುಲಾಸೆಯಾದ. ಇದೇ ಅಡ್ಡದಾರಿ ಹಿಡಿದು ಬೆಂಗಳೂರು ಸರಣಿ ಸೋಟದಲ್ಲೂ ಕಾನೂನಿನ ಕಣ್ಣಿಗೆ ಮಣ್ಣೆರಚಲು ಮದನಿ ಸಿದ್ದತೆ ನಡೆಸಿರುವುದು ರಹಸ್ಯವಾಗೇನು ಉಳಿದಿಲ್ಲ.

2007ರಲ್ಲಿ ನಡೆದ ಹೈದರಾಬಾದ್ ಮೆಕ್ಕಾ ಮಸೀದಿ ಸ್ಪೋಟದ 17 ಆರೋಪಿಗಳನ್ನು ನ್ಯಾಯಾಲಯ 2009ರಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆ ಮಾಡಿತು. ಆಗ ಆಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಖುಲಾಸೆಯಾದ 17 ಮಂದಿಗೆ ತಲಾ 3 ಲಕ್ಷ ಪರಿಹಾರ ನೀಡುವ ನಿರ್ಧಾರ ಪ್ರಕಟಿಸಿತ್ತು. ದೇಶದಲ್ಲಿ ಆರೋಪಿ ಎಂದು ಸಾಬೀತಾಗದ ವ್ಯಕ್ತಿಗಳಿಗೆ ಸರಕಾರದ ವತಿಯಿಂದ ನೀಡಲಾದ ಮೊದಲ ಪರಿಹಾರದ ಪ್ರಕರಣ ಇದಾಗಿತ್ತು. ಕಣ್ಣ ಮುಂದೆಯೇ ಇದ್ದ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ಪ್ರಕಟಿಸಲಾಗಿತ್ತು. ಆದರೆ ಹೈಕೋರ್ಟ್ ಸರಕಾರದ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿತು. ಹೀಗೆ ಪರಿಹಾರ ನಿಡುವುದಾದರೆ ದೇಶದ 79% ಆರೋಪಿಗಳಿಗೆ ಸರಕಾರ ಪರಿಹಾರ ನೀಡಬೇಕಾಗುತ್ತದೆ.

ಯುಪಿಎ ಸರಕಾರದಲ್ಲಿ ಗೃಹಸಚಿವರಾಗಿದ್ದ ಸುಶೀಲ್ ಕುಮಾರ್ ಶಿಂದೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಭಯೋತ್ಪಾದನೆಯ ಆರೋಪದ ಮೇಲೆ ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸ ಬೇಡಿ ಎಂದು ಪತ್ರ ಬರೆದಿದ್ದರು. ಈ ಪತ್ರ ಬರೆದಾಗ 2014ರ ಲೋಕಸಭಾ ಚುನಾವಣೆಗೆ ಕೇವಲ ಆರು ತಿಂಗಳಷ್ಟೇ ಬಾಕಿಯಿತ್ತು. ಮುಸ್ಲಿಂ ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಉದ್ದೇಶದಿಂದಲೇ ಈ ಪತ್ರ ಬರೆಯಲಾಗಿತ್ತು ಅಂತ ಪ್ರತ್ಯೇಕವಾಗಿಯೇನು ಹೇಳಬೇಕಾಗಿಲ್ಲ. ವೋಟ್ ಬ್ಯಾಂಕ್‌ಗಾಗಿ ಮುಸ್ಲಿಮರನ್ನು ಬಳಸಿಕೊಂಡ ಸಾವಿರ ಸಾವಿರ ಉದಾಹರಣೆಗಳಲ್ಲಿ ಇವು ಕೆಲವಷ್ಟೇ. ಹೀಗೆ ಬಂಧಿತರಾದವರನ್ನು ಅಮಾಯಕರು ಅಂತ ಆರಂಭದ ಹುಯಿಲೆಬ್ಬಿಸುವುದರ ಪರಿಣಾಮ ಮುಂದೆ ತನಿಖಾಧಿಕಾರಿಗಳು ಜಾತಿ, ಧರ್ಮ ಕೇಳಿ ಆರೋಪಿಗಳನ್ನು ಬಂಧಿಸುವ ಸ್ಥಿತಿಗೆ ತಂದರೆ ಆಶ್ಚರ್ಯವಿಲ್ಲ. ಆ ಸ್ಥಿತಿಗೆ ತನಿಖಾಧಿಕಾರಿಗಳು ಬಂದರೆ ಅದಕ್ಕಿಂತಲೂ ಅಪಾಯ ಮತ್ತೊಂದಿಲ್ಲ.

ಭದ್ರತಾ ಸಂಸ್ಥೆಗಳ ಪ್ರಮುಖ ಗುರಿ, ನಡೆಯಲಿರುವ ಅನಾಹುತವನ್ನು ತಪ್ಪಿಸುವುದು ಮತ್ತು ನಡೆದ ಅನಾಹುತಕ್ಕೆ ಕಾರಣಕರ್ತರಾದರಿಗೆ ಶಿಕ್ಷೆ ಕೊಡಿಸುವುದು. ಅವರಿಗೆ ಯಾವ ಪಕ್ಷದ ಸರಕಾರ ಅಧಿಕಾರದಲ್ಲಿದೆ, ಆ ಪಕ್ಷದ ಧೋರಣೆಗಳೇನು, ಆ ಪಕ್ಷ ಅಲ್ಪಸಂಖ್ಯಾತರ ಪರವಾ- ಬಹುಸಂಖ್ಯಾತರ ಪರವಾ ಎಂಬುದನ್ನು ಕಟ್ಟಿಕೊಂಡು ಏನೂ ಆಗಬೇಕಿಲ್ಲ. ತನಿಖಾ ಸಂಸ್ಥೆಗಳು ಹಾಗೆ ಯೋಚಿಸುತ್ತ ಕುಳಿತಿದ್ದರೆ ಉಗ್ರ ದಾಳಿಗಳ ಆರೋಪಿಗಳ ಬಂಧನ ಆಗುತ್ತಲೇ ಇರಲಿಲ್ಲ. ಧರ್ಮ ಆಧಾರಿತ ನಿಲುವುಗಳನ್ನು ಯಾರೂ ಬೆಳೆಸಿಕೊಳ್ಳಬಾರದು. ಆದರೆ, ರಾಜಕಾರಣದಲ್ಲಿ ಆ ವಿಷ ಈಗಾಗಲೇ ಪ್ರವೇಶಿಸಿ ಆಗಿದೆ. ಕೊನೆಪಕ್ಷ ಆಂತರಿಕ ಭದ್ರತೆಯನ್ನಾದರೂ ಅದರಿಂದ ದೂರ ಇಡೋಣ. ಇಲ್ಲದಿದ್ದರೆ, ಭಾರತ ಇನ್ನೊಂದು ಪಾಕಿಸ್ತಾನವಾದೀತು !

– ಶಶಿವರ್ಣಂ

 

ಅಧಿಕಾರಿಗಳ ಅವಕೃಪೆ, ಮೂರನೇ ಬಾರಿಯೂ ಬಿಡುಗಡೆ ಭಾಗ್ಯ ಇಲ್ಲ..!

26687

ಗಣರಾಜ್ಯೋತ್ಸವದ ಅಂಗವಾಗಿ ಸನ್ನಡತೆ ಆಧಾರದ ಮೇಲೆ ರಾಜ್ಯದ ಜೈಲುಗಳಲ್ಲಿ ಬಂಧಿಯಾಗಿದ್ದ 375 ಕೈದಿಗಳನ್ನು ಸರಕಾರ ಬಿಡುಗಡೆ ಮಾಡಿದೆ. ಆದರೆ ಸನ್ನಡತೆಯಿದ್ದರೂ ಜೈಲು ಅಧಿಕಾರಿಗಳಿಗೆ ಕೃಪೆಗೆ ಪಾತ್ರರಾಗದ ಹಲವು ಕೈದಿಗಳು ಇನ್ನೂ ಕಂಬಿಯ ಹಿಂದೆಯೇ ಕಾಲ ಕಳೆಯುವಂತಾಗಿದೆ. ಜೈಲು ಅಧಿಕಾರಿಗಳು ಲೆಕ್ಕದಲ್ಲಿ ಮಾಡಿದ ತಪ್ಪಿಗೆ ಇಲ್ಲೊಬ್ಬ ಕೈದಿ 18 ವರ್ಷಗಳಿಂದ ಜೈಲು ಹಕ್ಕಿಿಯಾಗಿಯೇ ಉಳಿದಿದ್ದಾಾನೆ.

ರಾಮನಗರ ಜಿಲ್ಲೆಯ ಕೆಎಂ ದೊಡ್ಡಿಯ ಶಿವಲಿಂಗೇಗೌಡ(56) 1998 ರಲ್ಲಿ ಹದಿನೆಂಟು ವರ್ಷದ ಹುಡುಗನೊಬ್ಬನನ್ನು ಕೊಂದು ಜೈಲು ಸೇರಿದ್ದ. ವಿಚಾರಣಾ ಹಂತದಲ್ಲಿ ರಾಮನಗರ ಜೈಲಿನಲ್ಲಿದ್ದ ಶಿವಲಿಂಗೇಗೌಡ ನ್ಯಾಯಾಲಯ ಜೀವಾವದಿ ಶಿಕ್ಷೆ ವಿಧಿಸಿದ ನಂತರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರವಾಗಿದ್ದ. ಹೀಗೆ ಈತ ಜೈಲಿಗೆ ಸೇರಿ 18 ವರ್ಷ ಕಳೆದಿವೆ. ಆದರೆ ಬಿಡುಗಡೆಯ ಭಾಗ್ಯ ಮಾತ್ರ ಸಿಕ್ಕಿಲ್ಲ. ಯಾಕೆ ಅಂತ ಜೈಲು ಅಧಿಕಾರಿಗಳನ್ನು ಪ್ರಶ್ನಿಸಿದರೆ ಅಧಿಕಾರಿಗಳ ಸಿದ್ದ ಉತ್ತರ ಆತ ಸನ್ನಡತೆ ಕೈದಿ ಅಲ್ಲ ಅನ್ನೋದು.

2006ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಾಮಿ ನೇತೃತ್ವದ ಸಮ್ಮಿಶ್ರ ಸರಕಾರ ’ಸುವರ್ಣ ಕರ್ನಾಟಕ’ ವರ್ಷಾಚರಣೆ ಅಂಗವಾಗಿ 309 ಕೈದಿಗಳನ್ನು ಬಿಡುಗಡೆಗೊಳಿಸಿತ್ತು. ಏಳು ವರ್ಷ ಸನ್ನಡತೆ ಕೈದಿಯಾಗಿದ್ದರೆ ಅಂತವರ ಬಿಡುಗಡೆಗೆ ಅಂದಿನ ಸರಕಾರ ನಿರ್ಧಾರ ಮಾಡಿತ್ತು. ಆಗ ಬಿಡುಗಡೆಯಾಗುವ ಸನ್ನಡತೆ ಕೈದಿಗಳ ಪಟ್ಟಿಯಲ್ಲಿ ಶಿವಲಿಂಗೇಗೌಡನ ಹೆಸರಿತ್ತು. ಆದರೆ ಅಧಿಕಾರಿಗಳು ಮಾಡಿದ ಯಡವಟ್ಟಿನಿಂದಾಗಿ ಶಿವಲಿಂಗೇಗೌಡ ಬಿಡುಗಡೆಯಾಗಲೇ ಇಲ್ಲ. ಕೇವಲ ಒಂದು ದಿನದ ಲೆಕ್ಕ ತಪ್ಪಾದ ಕಾರಣ ಪಟ್ಟಿಯಿಂದ ಈತನ ಹೆಸರು ಕೈಬಿಟ್ಟು ಹೋಗಿತ್ತು. ಅನಾರೋಗ್ಯದಿಂದ ಆಸ್ಪತ್ರೆೆಯಲ್ಲಿ ಮೂರು ದಿನ ಚಿಕಿತ್ಸೆ ಪಡೆದ ದಿನಗಳನ್ನು ಅಧಿಕಾರಿಗಳು ಪರಿಗಣಿಸಿರಲಿಲ್ಲ. ಈ ಮೂರು ದಿನ ಪರಿಗಣಿಸಿದ್ದರೆ ಶಿವಲಿಂಗೇಗೌಡ ಜೈಲಿನಿಂದ ಬಿಡುಗಡೆಯಾಗಿ 10 ವರ್ಷಗಳಾಗಬೇಕಿತ್ತು. ಅಧಿಕಾರಿಗಳ ಯಡವಟ್ಟಿನಿಂದಾಗಿ ಬಿಡುಗಡೆಯಾಗಬೇಕಾಕಿದ್ದವನು ಜೈಲಿನಲ್ಲೇ ಕೊಳೆಯುವ ಸ್ಥಿತಿ ನಿರ್ಮಾಣವಾಯಿತು.

2006 ರ ನಂತರದ ಸರಕಾರಗಳು ಪ್ರತಿ ವರ್ಷ ಕೈದಿಗಳ ಬಿಡುಗಡೆಗೆ ಪಟ್ಟಿ ಸಿದ್ಧಪಡಿಸಿದವಾದರೂ ಆ ಪಟ್ಟಿಗೆ ಆಗಿನ ರಾಜ್ಯಪಾಲರು ಅಂಕಿತ ಹಾಕಲಿಲ್ಲ. ಕಳೆದ ವರ್ಷ ಸ್ವಾಾತಂತ್ರ್ಯ ದಿನಕ್ಕೆ 260 ಕೈದಿಗಳನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲಾಯಿತು. ಆದರೆ ಆ ಪಟ್ಟಿಯಲ್ಲಿ ಶಿವಲಿಂಗೇಗೌಡನ ಹೆಸರೇ ಇರಲಿಲ್ಲ. ಈ ಹಿಂದೆ ಕೈದಿಗಳನ್ನು ಬಿಡುಗಡೆ ಮಾಡುವ ಅವದಿಯನ್ನು ಸರಕಾರಗಳೇ ನಿರ್ಧರಿಸುತ್ತಿದ್ದವು. ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗುವ ಕೈದಿಗಳು 14 ವರ್ಷ ಶಿಕ್ಷೆ ಮುಗಿಸಿರಬೇಕು ಎಂದು ಸುಪ್ರೀಂ ಕೋರ್ಟ್ 2014ರಲ್ಲಿ ಆದೇಶ ನೀಡಿತ್ತು. ಈ ಲೆಕ್ಕದ ಆಧಾರದಲ್ಲೂ ಶಿವಲಿಂಗೇಗೌಡ ಬಿಡುಗಡೆಯಾಬೇಕಿತ್ತು. ಆದರೆ 2006 ರಲ್ಲಿ ಸನ್ನಡತೆಯ ಪಟ್ಟಿಯಲ್ಲಿದ್ದ ಈತನ ಹೆಸರು 2015ರ ಪಟ್ಟಿಯಲ್ಲಿ ಇರಲಿಲ್ಲ. ಇದರಿಂದ ಸಿಟ್ಟಿಗೆದ್ದಿದ್ದ ಶಿವಲಿಂಗೇಗೌಡ ಕಳೆದ ವರ್ಷ ಜೈಲಿನಲ್ಲಿ ನಡೆದ ಕೈದಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಬಹಿರಂಗವಾಗಿಯೇ ತನ್ನ ಅಸಹನೆ ಪ್ರದರ್ಶಿಸಿದ್ದ. ಈಗ ಈ ವರ್ಷ ಬಿಡುಗಡೆಯಾದವರ ಪಟ್ಟಿಯಲ್ಲೂ ಈತನ ಹೆಸರಿಲ್ಲ. ಹತ್ತು ವರ್ಷಗಳ ಹಿಂದೆಯೇ ಬಿಡುಗಡೆಯಾಗಿ ಹೊಸ ಜೀವನ ಆರಂಭಿಸಬೇಕಿದ್ದ ಕೈದಿ ಅಧಿಕಾರಿಗಳ ತಪ್ಪಿನಿಂದ ಇನ್ನೂ ಜೈಲಿನ ಸರಳುಗಳ ಹಿಂದೆಯೇ ನರಳುತ್ತಿದ್ದಾಾನೆ.

’’ 2006 ರಲ್ಲೇ ನಾನು ಬಿಡುಗಡೆಯಾಗಬೇಕಾಗಿತ್ತು. ಆದರೆ ಜೈಲಿನ ಕೆಲವು ಅಧಿಕಾರಿಗಳು ಮಾಡಿದ ಯಡವಟ್ಟಿನಿಂದ ನಾನು ಇಲ್ಲಿಯೇ ಕೊಳೆಯುತ್ತಿದ್ದೇನೆ. ನನ್ನ ಮೇಲೆ ಇಲ್ಲಿನ ಅಧಿಕಾರಿಗಳಿಗೆ ಅದೇನೋ ವಿಪರೀತಿ ಪ್ರೀತಿ ಇದ್ದಂಗಿದೆ. ಆದ್ದರಿಂದ ನನ್ನನ್ನು ಇಲ್ಲಿಂದ ಕಳಿಸಿಕೊಡುತ್ತಿಲ್ಲ’’ ಎಂದು ವ್ಯಂಗ್ಯದಿಂದ ಉತ್ತರಿಸುತ್ತಾನೆ ಶಿವಲಿಂಗೇಗೌಡ.

ಜೈಲಿನ ಸಾಹೇಬರ ಕೃಪೆಗೆ ಯಾರು ಪಾತ್ರವಾಗುತ್ತಾಾರೋ ಅಂತವರನ್ನು ಮಾತ್ರ ಇಲ್ಲಿ ಬಿಡುಗಡೆ ಮಾಡುತ್ತಾಾರೆ. ನನ್ನ ಬಳಿ ಹಣ ಇಲ್ಲ. ನನ್ನಿಂದ ಜೈಲು ಅಧಿಕಾರಿಗಳಿಗೆ ಯಾವುದೇ ಉಪಯೋಗವಿಲ್ಲ. ಹಣ ಕೊಟ್ಟಿದ್ದರೆ ಪಟ್ಟಿಯಲ್ಲಿ ಹೆಸರು ಸೇರಿಸುತ್ತಿದ್ದರೇನೋ. ಹಣ ಕೊಟ್ಟರೆ ಮಾತ್ರ ಸನ್ನಡತೆ ಅಂದುಕೊಂಡಿದ್ದಾಾರೋ ಏನೋ ಗೊತ್ತಿಿಲ್ಲ. ಇನ್ನೆೆಷ್ಟು ವರ್ಷ ನಾನು ಜೈಲಲ್ಲೇ ಕೊಳೆಯಬೇಕು ಗೊತ್ತಿಲ್ಲ. ಮಾಡಿದ ಒಂದು ತಪ್ಪಿಗೆ ಇಡೀ ಜೀವನವನ್ನೇ ಜೈಲಿನಲ್ಲಿ ಕಳೆಯುವಂತಾಗಿದೆ’’ ಅಂತಾನೆ ಶಿವಲಿಂಗೇಗೌಡ.

ಈ ಬಗ್ಗೆ ಜೈಲು ಅಧಿಕಾರಿಗಳನ್ನು ಕೇಳಿದರೆ ಅದೇ ಸಿದ್ದ ಉತ್ತರ ಕಣ್ಣಿಗೆ ರಾಚುತ್ತದೆ. ಸನ್ನಡತೆ ಇಲ್ಲದ ಕೈದಿಗಳನ್ನು ನಾವು ಬಿಡುಗಡೆ ಪಟ್ಟಿಯಲ್ಲಿ ಸೇರಿಸುವುದಿಲ್ಲ ಅಂತಾರೆ. ಆದರೆ 2006 ರಲ್ಲಿ ಸನ್ನಡತೆಯ ಪಟ್ಟಿಯಲ್ಲಿದ್ದವನನ್ನು ಈಗಿನ ಅಧಿಕಾರಿಗಳು ಬೇಕಂತಲೇ ಆತನ ಮೇಲೆ ಅವಕೃಪೆ ತೋರಿ ಬಿಡುಗಡೆಯಾಗದಂತೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಕಳೆದ ವರ್ಷದ ಕೈದಿ ಬಿಡುಗಡೆ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಅಸಹನೆ ಪ್ರದರ್ಶಿಸಿದ್ದನ್ನೇ ವಯಕ್ತಿಕವಾಗಿ ಪರಿಗಣಿಸಿರುವ ಅಧಿಕಾರಿಗಳು ಈ ಬಾರಿಯೂ ಆತನಿಗೆ ಸನ್ನಡತೆ ಪಟ್ಟ ನೀಡಿಲ್ಲ. ಮೂಲಗಳ ಪ್ರಕಾರ ಜೈಲಿನಲ್ಲಿ ಹಣ ಬಲ, ಜಾತಿ ಬಲ ಕೂಡ ಸನ್ನಡತೆಗೆ ಆಧಾರವಾಗುತ್ತದೆ. ಆದರೆ ಶಿವಲಿಂಗೇಗೌಡನಿಗೆ ಹಣದ ಬಲವಿಲ್ಲ. ಜಾತಿಯಿದ್ದರೂ ಆತನ ಹಿಂದೆ ಬಲಕ್ಕೆ ಯಾವ ರಾಜಕಾರಣಿಯೂ ಇಲ್ಲ. ಇದೇ ಕಾರಣದಿಂದ ಮೂರು ಬಾರಿಯೂ ಬಿಡುಗಡೆಯಿಂದ  ಈತ ವಂಚಿತನಾಗಿದ್ದಾನೆ. ಈತನ ಸನ್ನಡತೆಯ ಬಗ್ಗೆ ಜೈಲು ಅಧಿಕಾರಿಗಳಿಗೆ ಅದ್ಯಾವಾಗ ಜ್ಞಾನೋದಯವಾಗುತ್ತದೋ ಆ ಭಗವಂತನೇ ಬಲ್ಲ. ಇಂತಹ ನೂರಾರು ಕೈದಿಗಳು ಅಧಿಕಾರಿಗಳ ಅವಕೃಪೆಗೆ ಪಾತ್ರರಾಗಿ ಜೈಲಿನಲ್ಲೇ ಜೀವನ ಕಳೆಯುವಂತಾಗಿದೆ.

                                                                                           –ಶಶಿವರ್ಣಂ

ಹೆಂಡತಿಯನ್ನು ಕೊಂದವರನ್ನು ಕಾನೂನು ಕ್ಷಮಿಸಿದೆ.. ಸಮಾಜ ಕ್ಷಮಿಸುತ್ತಾ..?

24916ಸಿಟ್ಟಿನ ಭರದಲ್ಲಿ ಹೆಂಡತಿಯನ್ನು ಕೊಂದ ಹಲವು ಕೈದಿಗಳನ್ನು ಕಾನೂನು ಹದಿನಾಲ್ಕು ವರ್ಷದ ನಂತರ ಕ್ಷಮಿಸಿ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿದೆ. ಆದರೆ ಈ ಸಮಾಜ ಅವರನ್ನು ಕ್ಷಮಿಸುತ್ತದಾ..? ಈ ಪ್ರಶ್ನೆ ಇಂದು ಜೈಲಿನಿಂದ ಬಿಡುಗಡೆಯಾದ ಹಲವು ಕೈದಿಗಳಲ್ಲಿ ಮನೆ ಮಾಡಿತ್ತು. ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾದ ಶೇ.30 ರಷ್ಟು ಕೈದಿಗಳು ಹೆಂಡತಿಯನ್ನು ಕೊಲೆ ಮಾಡಿ ಜೈಲು ಸೇರಿದವರೇ ಆಗಿದ್ದಾರೆ. ಇಲ್ಲಿ ತಮ್ಮ ಪತ್ನಿಯರನ್ನು ಕೊಂದವರಾರೂ ಉದ್ದೇಶ ಪೀಊರ್ವಕವಾಗಿ ಕೊಲೆ ಮಾಡಲು ಸಂಚು ರೂಪಿಸಿ ಕೊಲೆ ಮಾಡಿದವರಲ್ಲ. ಬದಲಾಗಿ ಯಾವುದೋ ವಿಷ ಗಳಿಗೆಯಲ್ಲಿ ಆಕಸ್ಮಿಕವಾಗಿ ನಡೆದುಹೋದ ಹತ್ಯೆಗಳೇ ಹೆಚ್ಚು… ಈ ರೀತಿ ಪತ್ನಿಯನ್ನು ಕೊಲೆ ಮಾಡಿ ಹದಿನಾಲ್ಕು ವರ್ಷ ಜೈಲು ಹಕ್ಕಿಗಳಾಗಿ ಇದ್ದವರು ಈಗ ತಮ್ಮ ಕುಟುಂಬದವರು ತಾನೊಬ್ಬ ಕೊಲೆಗಾರ ಎಂದು ಗೊತ್ತಿದ್ದೂ ಹೇಗೆ ಸ್ವೀಕರಿಸುತ್ತಾರೋ ಎಂಬ ತ್ರಿಶಂಕು ಸ್ಥಿತಿಯಲ್ಲಿದ್ದಾರೆ…
ಹೆಂಡತಿ ಕೊಂದ ಪಶ್ಚಾತಾಪಕ್ಕೆ ಪೆರೋಲ್ ಬೇಡ ಅಂದ
2003 ರ ಮೇ ತಿಂಗಳಿನಲ್ಲಿ ಬೈಯಪ್ಪನಹಳ್ಳಿಯಲ್ಲಿ ಆನಂದ್ ಎಂಬಾತ ತನ್ನಪತ್ನಿ ಪೂರ್ಣಿಮಾಳನ್ನ ಕೊಲೆ ಮಾಡಿದ್ದ. ಕುಡಿದು ಮನೆಗೆ ಬಂದ ಗಂಡನನ್ನು ಹೆಂಡತಿ ಪ್ರಶ್ನಿಸಿದ್ದಕ್ಕೆ ದಂಪತಿ ಮಧ್ಯೆ ಜಗಳ ನಡೆದಿತ್ತು. ಸಿಟ್ಟಿನ ಭರದಲ್ಲಿ ಆನಂದ್ ತನ್ನ ಪತ್ನಿಯನ್ನುತಳ್ಳಿದ್ದ. ಗೋಡೆಗೆ ತಲೆ ಹೊಡೆದುಕೊಂಡು ಪೂರ್ಣಿಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಲಕಾರಿಯಾಗದೇ ಸಾವನ್ನಪ್ಪಿದ್ದಳು. ಆಗ ಆನಂದ್ ಮೇಲೆ ಕೊಲೆ ಕೇಸು ಬಿದ್ದಿತ್ತು. ಹೆಂಡತಿಯನ್ನು ಕೊಂದ ತಪ್ಪಿಗೆ ಆನಂದ್ ಗೆ ನ್ಯಾಯಾಲಯ ವಿಧಿಸಿದ್ದು ಜೀವಾವದಿ ಶಿಕ್ಷೆ. ಪರಪ್ಪನ ಅಗ್ರಹಾರ ಜೈಲು ಸೇರಿದ ಆನಂದ್ ಗೆ ತಾನು ಪ್ರಾಣಕ್ಕಿಂತ ಪ್ರೀತಿಸುತ್ತಿದ್ದ ಹೆಂಡತಿಯನ್ನು ಕೊಂದ ಪಾಪ ಪ್ರಜ್ಞೆ ಇನ್ನಿಲ್ಲದಂತೆ ಕಾಡಿತ್ತು. ಹೆಂಡತಿಯನ್ನು ಕೊಂದ ತಪ್ಪಿಗೆ ಪಶ್ಚಾತಾಪ ಮಾಡಿಕೊಳ್ಳಲು ನಿರ್ಧರಿಸಿದ ಆನಂದ್ ಒಂದು ದಿನವೂ ಪೆರೋಲ್ ರಜೆ ತೆಗೆದುಕೊಳ್ಳಲಿಲ್ಲ. ಹೆಂಡತಿ ಕೊಲೆಯಾದಾಗ ಎರೆಡು ವರ್ಷದ ಪುಟ್ಟ ಮಗು ಇತ್ತು. ಆಕೆ ಬೆಳೆದು ದೊಡ್ಡವಳಾಗಿ ತನ್ನ ಅಪ್ಪನನ್ನು ಪೆರೋಲ್ ಮೇಲೆ ಬರುವಂತೆ ಪರಿಪರಿಯಾಗಿ ಕೇಳಿಕೊಂಡರೂ ಆನಂದ್ ಮನೆಗೆ ಹೋಗಲೇ ಇಲ್ಲ. ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತೇನೆ ಎಂದು ಹೇಳುತ್ತಿದ್ದ, ಪೆರೋಲ್ ರಜೆ ಪಡೆಯದೇ ಶಿಕ್ಷೆ ಅನುಭವಿಸಿ ಕಾರಣ ಮತ್ತು ಜೈಲಿನಲ್ಲಿ ಸನ್ನಡತೆಯಿಮದ ಜೀವನ ನಡೆಸಿದ ಕಾರಣಕ್ಕೆ ಆನಂದ್ ಈಗ ಜೈಲಿನಿಂದ ಬಿಡುಗಡೆಯಾಗಿದ್ದಾನೆ..
” ನಾನು ಮಾಡಿದ ತಪ್ಪಿಗೆ ಪಶ್ಚಾತಾಪ ಅನುಭವಿಸಿದ್ದೇನೆ. ಇನ್ನು ಮುಂದೆ ಒಳ್ಳೆಯ ಮನುಷ್ಯನಾಗಿ ಬದುಕುತ್ತೇನೆ. ಮೊದಲು ನಾನು ನನ್ನ ಮಗಳ ಬಳಿ ಕ್ಷಮೆ ಕೇಳುತ್ತೇನೆ. ಅವಳು ಕ್ಷಮಿಸಿದರೆ ಜೀವನದಲ್ಲಿ ಇನ್ನೆಂದಿಗೂ ನಾನು ತಪ್ಪು ಮಾಡುವುದಿಲ್ಲ ಎಂದು ಕಣ್ಣೀರಾಗುತ್ತಾರೆ” ಆನಂದ್
ನನ್ನವರು ಯಾರೂ ಇಲ್ಲ…
ಅದು 2013 ನೆಯ ಫೆಭ್ರವರಿ ತಿಂಗಳು. ಖಾಸಗಿ ಕಂಪನಿಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಮುಷ್ತಾಕ್ ಅಹಮದ್ ತಮ್ಮ ಪತ್ನಿ ಪರ್ವೀನ್ ತಾಜ್ ರನ್ನು ಕೊಲೆ ಮಾಡಿದ್ದರು. ಯಾವುದೋ ಸಣ್ಣ ವಿಷಯಕ್ಕೆ ಆರಂಭವಾಗಿದ್ದ ಜಗಳ ಹೆಂಡತಿಯ ಕೊಲೆಯಲ್ಲಿ ಅಂತ್ಯವಾಗಿತ್ತು. ಮನೆಯಲ್ಲಿದ್ದ ಮೂವರು ಮಕ್ಕಳ ಕಣ್ಣ ಮುಂದೆಯೇ ಅಮ್ಮ ಕೊಲೆಯಾಗಿ ಹೋಗಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೀಣ್ಯಾ ಪೊಲೀಸರು ಮುಷ್ತಾಕ್ ಅಹಮದ್ ಮೇಲೆ ಕೊಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದರು. ಹೈಸ್ಕೂಲು ಕಲಿಯುತ್ತಿದ್ದ ಮೂವರು ಮಕ್ಕಳು ಅನಾಥರಾದರು. ಘಟನೆ ನಡೆದ ಎರಡು ವರ್ಷಗಳ ನಂತರ ನ್ಯಾಯಾಲಯ ಮುಷ್ತಾಕ್ ಅಹಮದ್ ಗೆ ಜೀವಾವದಿ ಶಿಕ್ಷೆ ವಿಧಿಸಿತು. ಅಲ್ಲಿಯವರೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮುಷ್ತಾಕ್ ಅಹಮದ್ ಸಜಾ ಕೈದಿಯಾದರು. ಕೊಲೆ ಮಾಡಿ ಜೈಲು ಸೇರಿದ ದಿನದಿಂದ ಇಲ್ಲಿಯವರೆಗೆ ಮನೆಯವರಾಗಲೀ, ಮಕ್ಕಳಾಗಲೀ ಮುಷ್ತಾಕ್ ರನ್ನು ನೋಡಲು ಬಂದಿಲ್ಲ. ಇತ್ತ ಇವರೂ ಪೆರೋಲ್ ತೆಗೆದುಕೊಳ್ಳದೇ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದರು. ಮಂಗಳವಾರ ಸಂಜೆ ಜೈಲಿನಿಂದ ಹೊರಬಂದ ಮುಷ್ತಾಕ್ ರನ್ನು ಕರೆದೊಯ್ಯಲು ಅವರ ಮನೆಯಿಂದ ಕರೆದೊಯ್ಯಲು ಯಾರೂ ಬಂದಿರಲಿಲ್ಲ. ಬಿಡುಗಡೆಯಾದ ಎಲ್ಲ ಕೈದಿಗಳನ್ನು ಮನೆಗೆ ಕರೆದೊಯ್ಯಲು ಅವರ ಕುಟುಂಬದವರು ಬಂದಿದ್ದರೆ ಮುಷ್ತಾಕ್ ಗೆ ಮಾತ್ರ ಆ ಸೌಭಾಗ್ಯವೇ ಇರಲಿಲ್ಲ.
“ನಾನು ಕೊಲೆ ಮಾಡಿ ಜೈಲು ಸೇರಿದಾಗಿನಿಂದ ಯಾರೂ ನನ್ನನ್ನು ನೋಡಲು ಬಂದಿಲ್ಲ. ಜೈಲಿನಿಂದ ಹೊರ ಬಂದಾಗಲೂ ನನ್ನನ್ನು ಕರೆದೊಯ್ಯಲು ಯಾರೂ ಬಂದಿಲ್ಲ. ಹೆಂಡತಿ ಕೊಂದ ನಂತರ ನಾನು ಅನಾಥನಾಗಿದ್ದೇನೆ. ಈಗ ಯಾವುದಾದರೂ ಲಾಡ್ಜ್ ನಲ್ಲಿ ಉಳಿದುಕೊಳ್ಳುತ್ತೇನೆ. ನಾಳೆಯಿಂದ ನನ್ನ ಮಕ್ಕಳು ಎಲ್ಲಿದ್ದಾರೆ ಎಂದು ಹುಡುಕುತ್ತೇನೆ” ಅಂತಾರೆ ಮುಷ್ತಾಕ್ ಅಹಮದ್
ಹೆಂಡತಿ ನೇಣಿಗೆ, ಗಂಡ ಜೈಲಿಗೆ
 
ಇದು ಹೆಂಡತಿಯನ್ನು ಕೊಂದ ಮತ್ತೊಬ್ಬ ನತದೃಷ್ಟನ ಕಥೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪದವರಾದ ಸುಭ್ರಹ್ಮಣ್ಯ ತಮ್ಮ ಹೆಂಡತಿ ಲಕ್ಷ್ಮಿದೇವಿಯನ್ನ ಕೊಲೆ ಮಾಡಿದ ಆರೋಪದ ಮೇಲೆ ಹದಿನಾರು ವರ್ಷ ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಗಂಡ ಹೆಂಡತಿ ಸೇರಿ ಇಬ್ಬರೂ ಹೊಟೆಲ್ ನಡೆಸುತ್ತಿದ್ದರು. ಇಬ್ಬರು ಮಕ್ಕಳಿದ್ದ ಸಂಸಾರದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ 2000 ನೆಯ ಇಸವಿ ಮಾರ್ಚ್ ತಿಂಗಳಿನ ಒಂದು ದಿನ ಕ್ಷುಲ್ಲಕ ವಿಚಾರಕ್ಕಾಗಿ ಗಂಡ ಹೆಂಡತಿ ನಡುವೆ ಜಗಳ ನಡೆದುಹೋಯ್ತು. ಜಗಳ ಮುಗಿದ ನಂತರ ಗಂಡ ಮಕ್ಕಳೆಲ್ಲ ನಿದ್ರೆಗೆ ಜಾರಿದರೆ ಹೆಂಡತಿ ಲಕ್ಷ್ಮಿದೇವಿ ನೇಣಿಗೆ ಶರಣಾಗಿದ್ದಳು. ಹೆಂಡತಿ ಆತ್ಮಹತ್ಯೆ ಮಾಡಿಕೊಂಡ ನಂತರ ಮನೆಗೆ ಬಂದ ಪೊಲೀಸರು ಸುಭ್ರಹ್ಂಣ್ಯನನ್ನು ಬಂಧಿಸಿ ಕೊಲೆ ಕೇಸು ಹಾಕಿದರು. ಅದೆಲ್ಲ ನಡೆದು ಹದಿನಾರು ವರ್ಷಗಳೇ ಕಳೆದುಹೋಗಿವೆ. ಘಟನೆ ನಡೆದಾಗ 40 ವರ್ಷ ವಯಸ್ಸಿನ ಸುಭ್ರಹ್ಮಣ್ಯ ಅವರ ವಯಸ್ಸು ಈಗ 56.
“ಈ ಹಿಂಸೆ ಮತ್ಯಾರಿಗೂ ಬರಬಾರದು ಸಾರ್… ನನ್ನ ಹೆಂಡತಿ ಸಿಟ್ಟಿನಲ್ಲಿ ನೇಣು ಹಾಕಿಕೊಂಡಳು. ನಾನು ಆಕೆ ಸಾವಿಗೆ ಕಾರಣ ಎಂದು ಪೊಲೀಸರು ನನ್ನನ್ನು ಜೈಲಿಗೆ ಹಾಕಿದರು. ನನಗೆ ಕೋರ್ಟೂ, ಕಾನೂನು, ಪೊಲೀಸ್ ಏನೆಂದರೆ ಏನೂ ಗೊತ್ತಿರಲಿಲ್ಲ. ಇಷ್ಟು ವರ್ಷ ವನವಾಸದಂತೆ ಇಲ್ಲಿ ಶಿಕ್ಷೆ ಅನುಭವಿಸಿದ್ದೇನೆ. ಇನ್ನು ಮುಂದೆ ಮಕ್ಕಳೊಂದಿಗೆ ಬದುಕುತ್ತೇನೆ” ಅಂತಾರೆ ಸುಭ್ರಹ್ಮಣ್ಯ
ಈ ಮೂರು ಪ್ರಕರಣಗಳು ಕೇವಲ ಉದಾಹರಣೆಗಳಷ್ಟೇ. ಯಾವುದೋ ಕೆಟ್ಟ ಗಳಿಗೆಯಲ್ಲೋ, ಆಕಸ್ಮಿಕವಾಗಿಯೋ ನಡೆದು ಹೋದ ಕೊಲೆಯಿಂದಾಗಿ ಹದಿನಾಲ್ಕು ವರ್ಷ ಕಂಬಿಯಿಂದೆ ತನ್ನವರನ್ನೆಲ್ಲರನ್ನೂ ಬಿಟ್ಟು ಶಿಕ್ಷೆ ಅನುಭವಿಸಿ ಮಾಡಿದ ತಪ್ಪಿಗೆ ಪಶ್ಚಾತಾಪ ಅನುಭವಿಸಿದ್ದಾರೆ. ಈಗ ದೇಶದ ಕಾನೂನು ಸನ್ನಡತೆ ಆಧಾರದ ಮೇಲೆ ತಪ್ಪು ಮಾಡಿದವರನ್ನು ಕ್ಷಮಿಸಿದೆ. ಆದರೆ ಅವರ ಕುಟುಂಬ, ಸ್ನೇಹಿತರು, ಈ ಸಮಾಜ ಇಂತಹ ಹಲವರನ್ನು ಕ್ಷಮಿಸುತ್ತಾ.. ಆ ಆತಂಕದಲ್ಲೇ ಇದ್ದಾರೆ ತಪ್ಪು ಮಾಡಿ ಬಿಡುಗಡೆಯಾದವರು…
                                                                                       –ಶಶಿವರ್ಣಂ

ಫ್ಯಾರಿಸ್ ಮಾದರಿ ದಾಳಿಗೆ ಸಜ್ಜಾಗಿತ್ತು ಯೋಜನೆ..!

23538

ಎನ್‌ಐಎ ಅಧಿಕಾರಿಗಳಿಂದ ರಾಜ್ಯದಲ್ಲಿ ಬಂಧನಕ್ಕೊಳಗಾದ ಆರು ಮಂದಿ ಶಂಕಿತರು ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿ ತನಿಖೆ ವೇಳೆ ಹೊರಬಿದ್ದಿದೆ. ನಗರದಲ್ಲಿ ಪ್ರತಿನಿತ್ಯ ನಡೆಯುವ ಕಾರ್ಯಕ್ರಮಗಳ ಪಟ್ಟಿ ಸಿದ್ದಪಡಿಸಿಕೊಂಡಿದ್ದ ಶಂಕಿತರು ದಾಳಿ ನಡೆಸಿ ಜನರನ್ನು ಒತ್ತೆಯಾಳುಗಳನ್ನಾಾಗಿ ಇರಿಸಿಕೊಳ್ಳಬೇಕು ಎಂದು ಸಂಚು ರೂಪಿಸಿದ್ದರು. ಒತ್ತೆೆಯಾಳಾಗಿಸಿಕೊಂಡು ದಾಳಿ ಮಾಡುವ ಮೂಲಕ ವಿಶ್ವದ ಗಮನವನ್ನು ಸೆಳೆಯುವ ಉದ್ದೇಶ ಶಂಕಿತ ಉಗ್ರರಿಗಿತ್ತು ಎಂಬ ವಿಷಯ ಎನ್‌ಐಎ ಅಧಿಕಾರಿಗಳ ತನಿಖೆಯಿಂದ ಈ ಭಯಾನಕ ಮಾಹಿತಿ ಹೊರಬಿದ್ದಿದೆ.

ಪ್ಯಾರಿಸ್ ಮಾದರಿಯಲ್ಲಿ ದಾಳಿಗೆ ಸಂಚು..?

ಕಳೆದ ವರ್ಷದ ಆರಂಭದಲ್ಲಿ ಪ್ಯಾಾರಿಸ್‌ನಲ್ಲಿ ಚಾರ್ಲಿ ಹೆಬ್ಡೋ ಪತ್ರಿಕಾ ಕಚೇರಿ ಮೇಲೆ ನಡೆದ ದಾಳಿ ಮತ್ತು ವರ್ಷಾಂತ್ಯದಲ್ಲಿ ನಡೆದ ಪ್ಯಾಾರಿಸ್ ದಾಳಿ ಮಾದರಿಯಲ್ಲಿ ರಾಜ್ಯದಲ್ಲಿ ದಾಳಿ ಮಾಡಲು ಉಗ್ರರು ಸಂಚು ರೂಪಿಸಿದ್ದರು. ಅದರಲ್ಲೂ ಬೆಂಗಳೂರಿನಲ್ಲಿ ಇಂತದ್ದೊಂದು ದಾಳಿ ಮಾಡಿ ಐಸಿಸ್ ಮುಖ್ಯಸ್ಥ ಅಬು ಬಕರ್ ಆಲ್ ಬಗ್ದಾಾದಿಯನ್ನು ಸಂತುಷ್ಟಗೊಳಿಸುವ ಪ್ರಯತ್ನಗಳು ನಡೆದಿದ್ದವು. ಭಾರತದಲ್ಲಿ ಐಸಿಸ್ ಉಗ್ರ ಜಾಲ ಬೆಳೆಸಲು ಏನೇ ಪ್ರಯತ್ನ ಮಾಡಿದರೂ ದಾಳಿ ನಡೆಸುವಷ್ಟು ಪ್ರಬಲ ಮಟ್ಟದಲ್ಲಿ ಐಸಿಸ್‌ನ ಕಬಂದ ಬಾಹುಗಳು ಇನ್ನೂ ಬೆಳೆದಿಲ್ಲ. ಮದ್ಯಪ್ರಾಾಚ್ಯ, ಯೂರೋಪ್ ನಲ್ಲಿ ಅದು ಬೆಳೆಯುತ್ತಿರುವ ವೇಗಕ್ಕೆೆ ಹೋಲಿಸಿದರೆ ಭಾರತದಲ್ಲಿ ಇನ್ನೂ ತಳಮಟ್ಟದಲ್ಲೇ ಇದೆ. ಈ ನಿಟ್ಟಿಿನಲ್ಲಿ ಭಾರತದಿಂದ ಉಗ್ರರನ್ನು ಐಸಿಸ್‌ಗೆ ನೇಮಕ ಮಾಡಿಕೊಳ್ಳುತ್ತಿದ್ದ ಭಟ್ಕಳ ಮೂಲದ ಉಗ್ರ ಅನ್ಸರ್ ಉಲ್ ತವಾಹಿದ್ ಮುಖ್ಯಸ್ಥ ಶಫಿ ಅರ್ಮಾರ್‌ಗೆ ಸಂಘಟನೆಯನ್ನು ವೇಗವಾಗಿ ಬೆಳೆಸುವಂತೆ ಸೂಚನೆ ನೀಡಲಾಗಿತ್ತು. ಸದ್ಯ ಶಫಿ ಅರ್ಮಾರ್ ಸಿರಿಯಾದಲ್ಲಿ ಐಸಿಸ್ ಪರ ಯುದ್ದದಲ್ಲಿ ಭಾಗಿಯಾಗಿದ್ದಾಾನೆ ಎನ್ನಲಾಗಿದೆ. ಭಾರತದಲ್ಲಿ ಐಸಿಸ್ ಪರ ಒಲವು ಹೊಂದಿರುವ ಉಗ್ರ ಸಂಘಟನೆಯಾದ ಜನೂದ್ ಉಲ್ ಖಲೀಫಾ ಹಿಂದ್‌ನ ಸ್ವಯಂ ಘೋಷಿತ ಮುಖ್ಯಸ್ಥ ಮುನಬೀರ್ ಮುಷ್ತಾಕ್‌ನಿಗೆ ಸಂಘಟನೆ ಬೆಳೆಸಲು ಬೇಕಾದ ಅಗತ್ಯ ನೆರವು ನೀಡಲು ಸಿದ್ದನಾಗಿದ್ದ. ದೇಶದಲ್ಲಿ ಯಾವ ಮೂಲೆಯಲ್ಲಾದರೂ ಸರಿ ದೊಡ್ಡ ಮಟ್ಟದ ದಾಳಿ ನಡೆಸಬೇಕು. ಆ ಮೂಲಕ ಭಾರತದಲ್ಲಿ ಐಸಿಸ್ ಆಳವಾಗಿ ಬೇರೂರಿದೆ ಎಂಬ ಮಾಹಿತಿ ಜಗಜ್ಜಾಹೀರಾಗಬೇಕು ಎಂದು ಸೂಚನೆ ನೀಡಿದ್ದ. ಈ ಯೋಜನೆಯಲ್ಲಿ ಯಶಸ್ವಿಯಾದರೆ ಐಸಿಸ್ ಉಗ್ರ ಸಂಘಟನೆಯಲ್ಲಿ ಸ್ಥಾಾನಮಾನ ಸಿಗುತ್ತದೆ ಎಂದು ಬಂಧಿತ ಶಂಕಿತರಿಗೆ ಆಮಿಷ ನೀಡಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿರಿಯಾದಲ್ಲಿ ಐಸಿಸ್ ಪರ ಯುದ್ಧದಲ್ಲಿ ಭಾಗಿಯಾಗಿದ್ದ ಎನ್ನಲಾದ ಶಫೀ ಅರ್ಮಾರ್ ದೇಶದ ಮುಸ್ಲಿಂ ಯುವಕರನ್ನು ಐಸಿಸ್ ಪರ ಸೆಳೆಯುತ್ತಿಿದ್ದ. ಈ ಕೆಲಸಕ್ಕೆ ಮುಂಬೈನಲ್ಲಿ ಎನ್‌ಐಎ ನಿಂದ ಬಂಧಿತನಾದ ಮುನಬೀರ್ ಮುಷ್ತಾಕ್ ಸಾಥ್ ನೀಡಿದ್ದ ಎನ್ನಲಾಗಿದೆ. ದಾಳಿಗೆ ಕರ್ನಾಟಕವನ್ನು ಸೂಕ್ತ ಸ್ಥಳ ಎಂದು ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂಬ ಮಾಹಿತಿಗಳು ತನಿಖೆವೇಳೆ ತಿಳಿದುಬಂದಿದೆ.

ದಾಳಿ ನಡೆಸಲು ಸಿದ್ದತೆಗಳು ನಡೆದಿದ್ದವು..!

ಬೆಂಗಳೂರು ಅಥವಾ ರಾಜ್ಯದ ಇತರ ಪ್ರದೇಶಗಳಲ್ಲಿ ದಾಳಿ ನಡೆಸುವ ಬಗ್ಗೆೆ ಶಫೀ ಅರ್ಮಾರ್ ಮತ್ತು ಮುನಬೀರ್ ಮುಷ್ತಾಾಕ್‌ನಿಂದ ಸೂಚನೆ ಸಿಕ್ಕ ನಂತರ ಶಂಕಿತ ಉಗ್ರರು ಈ ನಿಟ್ಟಿಿನಲ್ಲಿ ಸಭೆಯನ್ನೂ ನಡೆಸಿದ್ದರು. ಪ್ಯಾಾರಿಸ್ ಮಾದರಿಯಲ್ಲಿ ದಾಳಿ ನಡೆಸಬೇಕಾದರೆ ಅದಕ್ಕೆ ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ಬೆಂಗಳೂರಿಗೆ ತರಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದಿದ್ದವು ಎನ್ನಲಾಗಿದೆ. ದಾಳಿ ನಡೆಸಲು ಅಗತ್ಯವಾದ ಶಸ್ತ್ರಾಾಸ್ತ್ರಗಳನ್ನು ಒದಗಿಸುವ ಹೊಣೆಯನ್ನು ಶಫಿ ಅರ್ಮಾರ್ ವಹಿಸಿಕೊಂಡಿದ್ದ ಎನ್ನಲಾಗಿದೆ. ಪಾಕಿಸ್ತಾನದಲ್ಲಿ ತಾನು ಹೊಂದಿರುವ ಸಂಪರ್ಕಗಳನ್ನು ಬಳಸಿಕೊಂಡು ನೇಪಾ-ಬಿಹಾರ ಗಡಿಯ ಮೂಲಕ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಸಾಗಿಸಲು ಶಫಿ ಯೋಜನೆ ರೂಪಿಸಿದ್ದ. ಭಾರತದೊಳಕ್ಕೆ ಶಸ್ತಾಾಸ್ತ್ರಗಳು ಬಂದ ನಂತರ ಮುನಬೀರ್ ಮುಷ್ತಾಾಕ್ ಅವುಗಳನ್ನು ರಾಜ್ಯದ ಶಂಕಿತರಿಗೆ ರವಾನಿಸುವ ವ್ಯವಸ್ಥಿತ ಯೋಜನೆ ರೂಪಿತವಾಗಿತ್ತು.

ಬಾಂಬ್ ದಾಳಿಗಿಂತಲೂ ಬುಲೆಟ್ ದಾಳಿ ಸುಲಭ..!

ಇಂಡಿಯನ್ ಮುಜಾಹಿದೀನ್, ಆಲ್‌ಖೈದಾ, ಲಷ್ಕರ್, ಜೈಷೆ ಮೊಹಮದ್ ಅಂತಹ ಸಂಘಟನೆಗಳು ಬಾಂಬ್ ಇಟ್ಟು ಸ್ಫೋಟಿಸುವ ಮೂಲಕ ಬಾಂಬ್ ದಾಳಿ ನಡೆಸುತ್ತಿದ್ದವು. ಈ ರೀತಿಯ ಹಲವು ದಾಳಿಗಳನ್ನು ಈ ಸಂಘಟನೆಗಳು ದೇಶದಲ್ಲಿ ನಡೆಸಿ ಯಶಸ್ವಿಯೂ ಆಗಿದ್ದವು. ಆದರೆ ಐಸಿಸ್ ಉಗ್ರರು ಬಾಂಬ್ ಇಟ್ಟು ದಾಳಿ ಮಾಡುವವರಲ್ಲ. ಬದಲಾಗಿ ಶಸ್ತ್ರ ಸಜ್ಜಿತವಾಗಿ ಜನನಿಬಿಡ ಪ್ರದೇಶಗಳಿಗೆ ನುಗ್ಗಿ ಮನಬಂದಂತೆ ದಾಳಿ ನಡೆಸುವುದು ಮತ್ತು ಜನರನ್ನು ಒತ್ತೆಯಾಳಾಗಿಟ್ಟುಕೊಂಡು ಸರಕಾರಕ್ಕೆ ಬೇಡಿಕೆ ಮುಂದಿಡುವುದು. ಇದು ಐಸಿಸ್ ಸಂಘಟನೆ ದಾಳಿ ಮಾಡುವ ವಿಧಾನ. ಈ ಮಾದರಿಯಲ್ಲಿ ನಡೆದ ಮುಂಬೈ ದಾಳಿ ದೊಡ್ಡ ಮಟ್ಟದಲ್ಲಿ ವಿಶ್ವದ ಗಮನ ಸೆಳೆದಿತ್ತು. ಅಂತಹ ಮತ್ತೊಂದು ಘಟನೆಯನ್ನು ಈ ಬಾರಿ ಐಸಿಸ್ ಉಗ್ರರು ನಡೆಸಿ ಭಾರತದಲ್ಲಿ ತಮ್ಮ ಇರುವಿಕೆಯನ್ನು ಜಗತ್ತಿಗೆ ಸಾರಲು ಉದ್ದೇಶಿಸಿದ್ದರು. ಬಾಂಬ್ ದಾಳಿ ನಡೆಸಬೇಕಾದರೆ ಸ್ಪೋಟಕ ವಸ್ತುಗಳ ಸಂಗ್ರಹಣೆ ಮತ್ತು ಸಾಗಣೆ ಈಗ ಸುಲಭದ ಕೆಲಸವಲ್ಲ. ದೇಶಾಧ್ಯಂತ ಬಾಂಬ್ ದಾಳಿಗಳು ನಡೆದ ನಂತರ ಅಮೋನಿಯಂ ನೈಟ್ರೇಟ್ ಮತ್ತು ಜಿಲೆಟಿನ್ ಕಡ್ಡಿಗಳು ಉಗ್ರರಿಗೆ ಅಷ್ಟು ಸುಲಭವಾಗಿ ಸಿಗುತ್ತಿಲ್ಲ. ಅಮೋನಿಯಂ ನೈಟ್ರೇಟ್ ಮಾರಾಟದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಏರಲಾಗಿದೆ. ಒಂದು ವೇಳೆ ಸ್ಫೋಟಕಗಳನ್ನು ಬಳಸಿಯೇ ದಾಳಿ ಮಾಡಲು ಮುಂದಾದರೆ ಯೋಜನೆ ಪಲಿಸುವ ಬಗ್ಗೆ ಉಗ್ರರಲ್ಲೇ ಅನುಮಾನವಿತ್ತು. ಈ ಹಿನ್ನೆಲೆಯಲ್ಲಿ ಶಸ್ತ್ರ ಸಜ್ಜಿತವಾಗಿ ದಾಳಿ ನಡೆಸಲು ಶಂಕಿತರು ನಿರ್ಧರಿಸಿದ್ದರು. ಇದಕ್ಕೆ ಭಟ್ಕಳ ಮೂಲದ ಐಸಿಸ್ ಉಗ್ರ ಶಫಿ ಅರ್ಮಾರ್ ಮತ್ತು ಜನೂದ್ ಉಲ್ ಖಲೀಫಾ ಹಿಂದ್‌ನ ಮುಖ್ಯಸ್ಥ ಮುನಬೀರ್ ಮುಷ್ತಾಾಕ್ ಸ್ಪಷ್ಟ ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ತನಿಖೆಯ ವೇಳೆ ಎನ್‌ಐಎ ಅಧಿಕಾರಿಗಳಿಗೆ ಸಿಕ್ಕಿದೆ.

ಉಗ್ರರ ಪ್ರಕಾರ ರಾಜ್ಯದಲ್ಲಿ ದಾಳಿ ಸುಲಭ..!

ದೇಶದ ಇತರೆ ರಾಜ್ಯಗಳಲ್ಲಿ ದಾಳಿ ನಡೆಸುವುದು ಉಗ್ರರಿಗೆ ಅಷ್ಟು ಸುಲಭವಲ್ಲ. ಯಾಕೆಂದರೆ ದೆಹಲಿ, ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ಆಂದ್ರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಉಗ್ರರ ನಿಗ್ರಹಕ್ಕೆ ಪರಿಣಿತ ಅಧಿಕಾರಿಗಳೇ ಇಲ್ಲ. ಆಂತರಿಕಾ ಭದ್ರತಾ ವಿಬಾಗ, ಭಯೋತ್ಪಾದನಾ ನಿಗ್ರಹ ದಳ, ಗುಪ್ತಚರ ವಿಭಾಗಗಳು ಇದ್ದೂ ಇಲ್ಲದಂತಿವೆ. ಉಗ್ರರ ಚಲನವಲನಗಳು, ರಹಸ್ಯ ಸಭೆಗಳು, ಸ್ಲೀಪಿಂಗ್ ಸೆಲ್‌ಗಳ ಮಾಹಿತಿಗಳು, ಸೈಬರ್ ಮಾನಿಟರಿಂಗ್ ವ್ಯವಸ್ಥೆ, ನಿರಂತರವಾಗಿ ಉಗ್ರ ಚಟುವಟಿಕೆಗಳ ಮೇಲೆ ಕಣ್ಣಿಡುವ ಕೆಲಸ ರಾಜ್ಯ ಪೊಲೀಸರಿಂದ ನಡೆಯುತ್ತಿಲ್ಲ. ಈ ವಿಷಯ ಶಂಕಿತ ಉಗ್ರರಿಗೆ ಗೊತ್ತಿಲ್ಲವೆಂದೇನೂ ಅಲ್ಲ. ಅಕ್ಕಾಾಗಿಯೇ ರಾಜ್ಯದಲ್ಲಿ ದಾಳಿ ನಡೆಸುವುದು ಸುಲಭ ಎಂಬ ನಿರ್ಧಾರ ಶಂಕಿತರಿಗಿತ್ತು ಎನ್ನಲಾಗಿದೆ. ಬಹುತೇಕ ದೇಶದ ಎಲ್ಲ ರಾಜ್ಯಗಳಲ್ಲೂ ದೊಡ್ಡ ಮಟ್ಟದ ಭಯೋತ್ಪಾದಕ ದಾಳಿಗಳು ನಡೆದಿವೆ. ಆದರೆ ಕರ್ನಾಟಕಕ್ಕೆ ಮಾತ್ರ ಈ ಮಾತು ಅನ್ವಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮೈಮರೆತಿರುವ ರಾಜ್ಯ ಪೊಲೀಸ್ ಇಲಾಖೆ ಉಗ್ರರ ಚಟುವಟಿಕೆಗಳ ಮೇಲೆ ಅಷ್ಟಾಾಗಿ ಕಣ್ಣಿಟ್ಟಿಲ್ಲ. ಇದೆಲ್ಲವನ್ನು ಗಮನಿಸಿರುವ ಶಂಕಿತರು ರಾಜ್ಯವೇ ದಾಳಿಗೆ ಪ್ರಶಸ್ತ ತಾಣ ಎಂದು ನಿರ್ಧರಿಸಿದ್ದರು.

ಬಂಧಿತರಲ್ಲಿ ನಜ್ಮಲ್ ಹುದಾ ಕಿಂಗ್‌ಪಿನ್..!

ಮಂಗಳೂರಿನಲ್ಲಿ ಬಂಧಿತನಾದ ನಜ್ಮಲ್ ಹುದಾ ರಾಜ್ಯದಲ್ಲಿ ಸಂಭಾವ್ಯ ದಾಳಿ ನಡೆಸುವ ನೇತೃತ್ವ ವಹಿಸಿಕೊಂಡಿದ್ದ. ಶಫೀ ಅರ್ಮಾರ್ ಮತ್ತು ಮುನಬೀರ್ ಮುಷ್ತಾಕ್ ನೀಡುತ್ತಿದ್ದ ಸೂಚನೆಗಳನ್ನು ನಜ್ಮಲ್ ಹುದಾ ಉಳಿದ ಐವರಿಗೆ ರವಾನಿಸುತ್ತಿದ್ದ. ದಾಳಿ ನಡೆಸುವ ನಿಟ್ಟಿನಲ್ಲಿ ಬೆಂಗಳೂರು ಮತ್ತು ತುಮಕೂರಿನಲ್ಲಿ ಹಲವು ಸಭೆಗಳನ್ನು ನಡೆಸಲಾಗಿತ್ತು. ಈ ಸಭೆಗೆ ದೆಹಲಿ ಪೊಲೀಸರಿಂದ ಬಂಧಿತನಾಗಿರುವ ಸೈಯದ್ ಅನ್ಸರ್ ಷಾ ಖಾಸ್ಮಿ ಕೂಡ ಭಾಗಿಯಾಗಿದ್ದ ಎನ್ನುತ್ತದೆ ಎನ್‌ಐಎ ಮೂಲಗಳು. ಎಂಜಿನಿಯರಿಂಗ್ ಓದುತ್ತಿದ್ದ ನಜ್ಮಲ್ ಹುದಾನಿಗೆ ಟೆಕ್ಕಿಗಳನ್ನು ಉಗ್ರ ಚಟುವಟುಕೆಗಳತ್ತ ಸೆಳೆಯುವ ಜವಾಬ್ದಾಾರಿಯನ್ನೂ ನೀಡಲಾಗಿತ್ತು. ದಾಳಿಗೆ ಬೇಕಾದ ಅಗತ್ಯ ಹಣಕಾಸಿನ ನೆರವನ್ನು ಬೆಂಗಳೂರಿನ ಟೆಕ್ಕಿಗಳಿಂದ ಸಂಗ್ರಹಿಸುವ ಹೊಣೆಯನ್ನು ದೆಹಲಿ ಎಟಿಎಸ್‌ನಿಂದ ಬಂಧಿತನಾದ ಸೈಯದ್ ಅನ್ಸರ್ ಷಾ ಖಾಸ್ಮಿ ವಹಸಿಕೊಂಡಿದ್ದ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

                                                                                         –ಶಶಿವರ್ಣಂ

 

ಮೈಮರೆವಿಗೆ ಬೆಲೆ ತೆರಲಿದೆಯಾ ಕರ್ನಾಟಕ..?

22891

ರಾಜ್ಯದಲ್ಲಿ ಎನ್‌ಐಎ ಅಧಿಕಾರಿಗಳಿಂದ ಆರು ಶಂಕಿತ ಉಗ್ರರ ಬಂಧನ ಮತ್ತು 15 ದಿನಗಳ ಹಿಂದೆ ದೆಹಲಿ ಪೊಲೀಸರಿಂದ ಆಲ್‌ಖೈದಾ ಶಂಕಿತ ಉಗ್ರ ಮೌಲ್ವಿ ಸೈಯದ್ ಅನ್ಸರ್ ಷಾ ಖಾಸ್ಮಿ ಬಂಧನದ ನಂತರ ರಾಜ್ಯ ಉಗ್ರರಿಗೆ ಸುರಕ್ಷಿಿತ ತಾಣವಾಗಿ ಉಳಿದಿರುವುದು ಮತ್ತೊಮ್ಮೆ ಸಾಭೀತಾಗಿದೆ. ದೇಶದಲ್ಲಿ ನಡೆದ ಹಲವು ಭಯೋತ್ಪಾದನಾ ದಾಳಿಗಳ ಸಂಚು ರಾಜ್ಯದಲ್ಲಿ ರೂಪಿತವಾಗಿತ್ತು ಅನ್ನೋದು ಬಹಿರಂಗವಾಗೇನು ಉಳಿದಿಲ್ಲ. ಆದರೂ ರಾಜ್ಯ ಪೊಲೀಸರು ಮಾತ್ರ ಉಗ್ರರು ಮತ್ತು ಅವರ ಚಟುವಟಿಕೆಗಳನ್ನು ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಕೇಂದ್ರ ತನಿಖಾಧಿಕಾರಿಗಳು ಬಂಧಿಸಿದ ನಂತರ ನಮಗೆ ಮಾಹಿತಿ ಇತ್ತು ಎಂಬ ಸಿದ್ದ ಹೇಳಿಕೆಯನ್ನು ಬಿಟ್ಟರೆ ಇಲ್ಲಿನ ಪೊಲೀಸರಿಗೆ ಉಗ್ರ ಚಟುವಟಿಕೆಗಳ ಮೇಲೆ ಕಣ್ಣಿಡುವ ಕೆಲಸ ಪೊಲೀಸ್ ಇಲಾಖೆ ಮಾಡುತ್ತಿಲ್ಲ.. ಈ ಮೈಮರೆವು ಮುಂದಿನ ದಿನಗಳಲ್ಲಿ ದೊಡ್ಡದೊಂದು ದಾಳಿಗೆ ಮುನ್ನುಡಿಯಾದರೂ ಅಚ್ಚರಿಯಿಲ್ಲ..!

ರಾಜ್ಯದಲ್ಲಿ ದೊಡ್ಡಮಟ್ಟದ ದಾಳಿಯಾಗಿಲ್ಲ..!

ದೇಶದ ಹಲವು ರಾಜ್ಯಗಳಲ್ಲಿ ನಡೆದಿರುವ ಭಯೋತ್ಪಾಾದಕ ದಾಳಿಗಳನ್ನು ಗಮನಿಸಿದರೆ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಉಗ್ರರ ದಾಳಿ ನಡೆದಿಲ್ಲ, ಬಾಂಬ್ ಸ್ಫೋಟ ಆಗಿಲ್ಲ. ಇದೊಂದೇ ಕಾರಣದಿಂದಾಗಿ ರಾಜ್ಯ ಪೊಲೀಸರು ಮೈ ಮರೆವಿನಲ್ಲಿದ್ದಾಾರೆ. ಅಂದರೆ ರಾಜ್ಯದಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿಲ್ಲ. ಮುಂಬೈ ಮತ್ತು ದೆಹಲಿ ಭಯೋತ್ಪಾಾದನಾ ನಿಗ್ರಹ ದಳದ ಅಧಿಕಾರಿಗಳು ಆಗಿದ್ದಾಾಗ್ಗೆ ದೇಶದ ಹಲವೆಡೆ ಉಗ್ರರನ್ನು ಬಂಧಿಸಿ ವಿಚಾರಣೆಗೊಳಪಡಿಸುತ್ತಿದೆ. ಬೆಂಗಳೂರು ಸರಣಿ ಸ್ಫೋಟ ನಡೆದ ನಂತರ ಸರ್ಕಾರ ಆಂತರಿಕ ಭದ್ರತಾ ವಿಭಾಗ ಆರಂಭಿಸಿತ್ತು. ಆ ವಿಭಾಗದಲ್ಲೇ ಭಯೋತ್ಪಾದನಾ ನಿಗ್ರಹ ದಳ ಕೂಡ ಇದೆ. ಆದ್ರೆ ರಾಜ್ಯದಲ್ಲಿರುವ ಭಯೋತ್ಪಾಾದನಾ ನಿಗ್ರಹ ದಳ ಇಲ್ಲಿಯವರೆಗೆ ಅಂತಹ ಯಾವುದೇ ಮಹತ್ವದ ಕಾರ್ಯಾಚರಣೆ ನಡೆಸಿಲ್ಲ. ಇದಕ್ಕೆ ಅಲ್ಲಿನ ಅಧಿಕಾರಿಗಳಿಂದ ಸಿಗುವ ಸಿದ್ದ ಉತ್ತರ ರಾಜ್ಯದಲ್ಲಿ ಉಗ್ರರ ಚಟುವಟಿಕೆಗಳು ಇಲ್ಲ ಅನ್ನೋದು. ಆದರೆ ಕೇಂದ್ರೀಯ ತನಿಖಾ ತಂಡಗಳು ಮಾತ್ರ ಕರ್ನಾಟಕವನ್ನು ಉಗ್ರರಿಗೆ ಸುರಕ್ಷಿಿತ ತಾಣ ಅಂತಲೇ ಪರಿಗಣಿಸಿವೆ.

ದೇಶದೆಲ್ಲೆಡೆ ನಡೆದ ಉಗ್ರ ದಾಳಿಗಳಿಗೆ ಇಲ್ಲಿಂದಲೇ ಸ್ಫೋಟಕ ರವಾನೆಯಾಗಿತ್ತು..!

ಕರ್ನಾಟಕದಲ್ಲಿ ಇದೂವರೆಗೂ ದೊಡ್ಡ ಮಟ್ಟದ ಭಯೋತ್ಪಾಾದಕ ದಾಳಿಯಾಗಿಲ್ಲ ನಿಜ. ಆದರೆ ದೇಶದಲ್ಲಿ ಇಂಡಿಯನ್ ಮುಜಾಹಿದೀನ್ ನಡೆಸಿದ ಬಹುತೇಕ ಸ್ಪೋಟಗಳಿಗೆ ರಾಜ್ಯದಿಂದಲೇ ಸ್ಫೋಟಕಗಳು ರವಾನೆಯಾಗಿತ್ತು ನ್ನೋದು ಎನ್‌ಐಎ ತನಿಖೆಯಿಂದ ಹೊರಬಿದ್ದಿದ್ದ ಭಯಾನಕ ಸತ್ಯ. 2008ರಲ್ಲಿ ನಡೆದ ಅಹಮದಾಬಾದ್ ಸರಣಿ ಸ್ಫೋಟ, ದೆಹಲಿ ಸರಣಿ ಸ್ಫೋಟ, ಜೈಪುರ ಸರಣಿ ಸ್ಪೋಟ, 2010ರಲ್ಲಿ ನಡೆದ ಪುಣೆ ಜರ್ಮನ ಬೇಕರಿ ಸ್ಫೋಟ, ಬೆಂಗಳೂರಿನಲ್ಲಿ ನಡೆದ ಚಿನ್ನಸ್ವಾಾಮಿ ಕ್ರೀಡಾಂಗಣ ಬಳಿ ನಡೆದ ಸ್ಪೋಟ, 2013 ರಲ್ಲಿ ಹೈದ್ರಾಾಬಾದ್‌ನ ದಿಲ್‌ಸುಕ್‌ನಗರದಲ್ಲಿ ನಡೆದ ಸ್ಫೋಟಗಳಿಗೆ ಚಿಕ್ಕಮಗಳೂರು ಮತ್ತು ಭಟ್ಕಳದಿಂದ ಸ್ಫೋಟಕಗಳು ರವಾನೆಯಾಗಿದ್ದವು. ಪುಣೆಯ ಜರ್ಮನ್ ಬೇಕರಿ ಸ್ಫೋಟದ ಷಡ್ಯಂತ್ರ ಮಂಗಳೂರು ಹೊರವಲಯದ ತೋಟವೊಂದರಲ್ಲಿ ರೂಪಿತವಾಗಿತ್ತ್ತು. ತನ್ನ ಸಹಚರರೊಂದಿಗೆ ತೋಟವೊಂದರಲ್ಲಿ ಯೋಜನೆ ರೂಪಿಸಿದ್ದ ಯಾಸಿನ್ ಭಟ್ಕಳ್ ಜರ್ಮನ್ ಬೇಕರಿಗೆ ತೆರಳಿ ತಾನೇ ಬಾಂಬ್ ಇಟ್ಟಿದ್ದ. ಚಿಕ್ಕಮಗಳೂರಿನಲ್ಲಿನ ಕಲ್ಲು ಕ್ವಾಾರಿಗಳಿಂದ ಇಂಡಿಯನ್ ಮುಜಾಹಿದೀನ್ ಉಗ್ರರು ಅಮೋನಿಯಂ ನೈಟ್ರೇಟ್ ಮತ್ತು ಜಿಲೆಟಿನ್ ಕಡ್ಡಿಗಳನ್ನು ದೇಶದ ವಿವಿದೆಡೆ ನಡೆದ ವಿದ್ವಸಂಸಕ ಕೃತ್ಯಗಳಿಗೆ ಸಾಗಿಸುತ್ತಿದ್ದರೆ ನಮ್ಮ ರಾಜ್ಯದ ಪೊಲೀಸರು ಇದು ನಮಗೆ ಸಂಬಂಧಿಸಿದ ವಿಷಯವೇ ಅಲ್ಲ ಎನ್ನುವಂತಿದ್ದರು. ಎನ್‌ಐಎ ಮತ್ತು ಮುಂಬೈ ಭಯೋತ್ಪಾಾದಕ ನಿಗ್ರಹ ದಳದ ಅಧಿಕಾರಿಗಳ ತನಿಖೆ ವೇಳೆ ಕರ್ನಾಟಕ ಇಂಡಿಯನ್ ಮುಜಾಹಿದೀನ್ ಉಗ್ರರ ಪಾಲಿಗೆ ಸ್ವರ್ಗವಾಗಿದೆ ಅನ್ನೋದು ಬೆಳಕಿಗೆ ಬಂದಿತ್ತು. ಇಷ್ಟೆಲ್ಲ ಆಘಾತಕಾರಿ ಬೆಳವಣಿಗೆಗಳು ನಡೆದ ಮೇಲೂ ನಮ್ಮ ಗುಪ್ತಚರ ಇಲಾಖೆ ಮತ್ತು ಆಂತರಿಕ ಭದ್ರತಾ ವಿಭಾಗ ಎಚ್ಚೆತ್ತುಕೊಂಡಿಲ್ಲ.

ಸುರಕ್ಷಿತ ತಾಣಗಳನ್ನು ಉಗ್ರರು ಹಾಳು ಮಾಡಿಕೊಳ್ಳುವುದಿಲ್ಲ..!

ಕರ್ನಾಟಕ ರಾಜ್ಯ ಉಗ್ರರ ಪಾಲಿಗೆ ಸುರಕ್ಷಿಿತ ತಾಣವಾಗಿ ಹಲವು ವರ್ಷಗಳೇ ಕಳೆದಿವೆ. ದೇಶದ ಹಲವೆಡೆ ದಾಳಿ ನಡೆಸಿದ ಉಗ್ರರಿಗೆ ರಾಜ್ಯದಲ್ಲಿ ದಾಳಿ ನಡೆಸುವುದು ಕಷ್ಟದ ವಿಷಯವೇನಲ್ಲ. ಆದರೆ ತಮಗೆ ಸುರಕ್ಷಿತವಾಗಿರುವ ಪ್ರದೇಶದಲ್ಲಿ ಬಾಂಬ್ ಸ್ಫೋಟ ನಡೆಸಿ ತಮ್ಮ ಸುರಕ್ಷಿತ ತಾಣಗಳನ್ನು ಹಾಳು ಮಾಡಿಕೊಳ್ಳಲು ಉಗ್ರರು ತಯಾರಿಲ್ಲ. ಇದೇ ಕಾರಣದಿಂದಾಗಿಯೇ ನಗರದಲ್ಲಿ ದೊಡ್ಡ ಮಟ್ಟದ ಭಯೋತ್ಪಾಾದಕ ದಾಳಿಗಳಾಗಿಲ್ಲ. 2008 ರ ಸರಣಿ ಸ್ಪೋಟ, ಮಲ್ಲೇಶ್ವರಂ ಸ್ಪೋಟ ಮತ್ತು ಚರ್ಚ್ ಸ್ಟ್ರೀಟ್ ನಲ್ಲಿ ನಡೆದ ಸ್ಫೋಟಗಳಲ್ಲಿ ಕಡಿಮೆ ತೀವ್ರತೆಯ ಸ್ಪೋಟಕಗಳನ್ನು ಬಳಸಿ ಕೃತ್ಯ ಎಸಗಲಾಗಿತ್ತು. ವ್ಯವಸ್ಥಿತವಾಗಿ ಉಗ್ರ ಜಾಲ ಹೊಂದಿರುವ ತಂಡಗಳು ಈ ಮೇಲಿನ ಸ್ಫೋಟಗಳಲ್ಲಿ ಭಾಗಿಯಾಗಿಲ್ಲ. ಈ ಮೂರೂ ಸ್ಫೋಟಗಳಲ್ಲಿ ಅಲ್ ಉಮಾ ಸಂಘಟನೆಯ ಪಾತ್ರ ಇರುವ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ಇದೆ. ಆದರೆ 2010 ರಲ್ಲಿ ನಡೆದ ಚಿನ್ನಸ್ವಾಾಮಿ ಕ್ರೀಡಾಂಗಣದ ಬಳಿ ನಡೆಸ ಸ್ಪೋಟದಲ್ಲಿ ಇಂಡಿಯನ್ ಮುಜಾಹಿದೀನ್ ಉಗ್ರ ಯಾಸಿನ್ ಭಟ್ಕಳ್ ಸ್ವತಃ ಬಾಂಬ್ ಇಟ್ಟಿಿದ್ದ ಅನ್ನೋ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಬಾಂಬ್ ಸ್ಫೋಟ ನಡೆಸುವ ಮೊದಲು ಆತ ತುಮಕೂರಿನಲ್ಲಿ ಮನೆ ಮಾಡಿಕೊಂಡಿದ್ದ. ಇವುಗಳನ್ನು ಬಿಟ್ಟರೆ ಭೀಕರ ಎನ್ನಿಸುವಂತಹ ದಾಳಿಗಳು ನಮ್ಮ ರಾಜ್ಯದಲ್ಲಿ ನಡೆದಿಲ್ಲ.

’’ಉಗ್ರರು ಕರ್ನಾಟಕದಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಿಲ್ಲ ಅಂದ ಮಾತ್ರಕ್ಕೆ ಇಲ್ಲಿ ಭಯೋತ್ಪಾಾದಕರ ಜಾಡು ಇಲ್ಲ ಎಂದರ್ಥವಲ್ಲ. ಉಗ್ರರು ಕರ್ನಾಟಕದಲ್ಲಿ ದಾಳಿ ನಡೆಸಿ ತಮ್ಮ ಸುರಕ್ಷಿತ ತಾಣವನ್ನು ಹಾಳು ಮಾಡಿಕೊಳ್ಳಲು ಸಿದ್ದರಿಲ್ಲ’’ ಅನ್ನೋದು ಮುಂಬೈ ಹಿರಿಯ ಅಧಿಕಾರಿಯೊಬ್ಬರ ಅಭಿಪ್ರಾಾಯ.

ಕರಾವಳಿ ಉಗ್ರರ ಪ್ರಮುಖ ನೆಲೆ..!

ಇಂಡಿಯನ್ ಮುಜಾಹಿದೀನ್ ಎಂಬ ರಕ್ತಪಿಪಾಸು ಉಗ್ರ ಸಂಘಟನೆ ಆರಂಭವಾಗಿದ್ದೇ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ. ಭಟ್ಕಳ ಸಹೋದರರು ಸ್ಥಾಪಿಸಿದ ಈ ಸಂಘಟನೆ ದೇಶದ ಹಲವೆಡೆ ದಾಳಿಗಳನ್ನು ನಡೆಸಿ ನೂರಾರು ಅಮಾಯಕರನ್ನು ಬಲಿ ಪಡೆದಿದೆ. ಸದ್ಯ ಪಾಕಿಸ್ತಾನದಲ್ಲಿ ತಲೆ ಮರೆಸಿಕೊಂಡಿರುವ ಇಕ್ಬಾಾಲ್ ಭಟ್ಕಳ್, ರಿಯಾಜ್ ಭಟ್ಕಳ್ ಮತ್ತು ಎನ್‌ಐಎ ವಶದಲ್ಲಿರುವ ಯಾಸಿನ್ ಭಟ್ಕಳ ಸಹೋದರರು ಇಂಡಿಯನ್ ಮುಜಾಹಿದೀನ್ ಸಂಘಟನೆಯನ್ನು ಸ್ಥಾಾಪಿಸಿ ದೇಶಾಧ್ಯಂತ ಮುಸ್ಲಿಂ ಯುವಕರನ್ನು ತಮ್ಮ ಸಂಘಟನೆಯತ್ತ ಸೆಳೆದಿದ್ದರು. ಈಗ ಈ ಕೆಲಸವನ್ನು ಅದೇ ಭಟ್ಕಳದ ಮತ್ತೊಬ್ಬ ಉಗ್ರ ಶಫಿ ಅರ್ಮಾರ್ ಮಾಡುತ್ತಿದ್ದಾಾನೆ. ಈ ಶಫಿ ಅರ್ಮಾರ್ ಐಸಿಸ್ ಗೆ ಭಾರತೀಯ ಯುವಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದ ಸುಲ್ತಾಾನ್ ಅರ್ಮಾರ್‌ನ ತಮ್ಮ. ಸಿರಿಯಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಸುಲ್ತಾಾನ್ ಅರ್ಮಾರ್ ಸಾವನ್ನಪ್ಪಿದ ನಂತರ ಈಗ ಶಫೀ ಅರ್ಮಾರ್ ಐಸಿಸ್‌ಗೆ ಯುವಕರನ್ನು ನೇಮಕ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾಾನೆ. ಈತನ ಕೆಲಸಕ್ಕೆ ಭಟ್ಕಳದ ಕೆಲವು ಮುಸ್ಲಿಂ ಯುವಕರು ಮತ್ತು ಬೆಂಗಳೂರಿನಲ್ಲಿರುವ ಕೆಲ ಸಾಫ್‌ಟ್‌‌ವೇರ್ ಎಂಜಿನಿಯರ್‌ಗಳು ಸಾಥ್ ಕೊಡುತ್ತಿದ್ದಾರೆ. ಶುಕ್ರವಾರ ರಾಜ್ಯದಲ್ಲಿ ಬಂಧಿತರಾದ ಆರು ಮಂದಿ ಶಂಕಿತ ಉಗ್ರರು ಇದೇ ಶಫಿ ಅರ್ಮಾರ್ ಆದೇಶದಂತೆ ಕೆಲಸ ಮಾಡುತ್ತಿದ್ದರು ಎಂದು ಎನ್‌ಐಎ ಅಧಿಕಾರಿಗಳ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಸಾಮಾಜಿಕ ತಾಣಗಳ ಮೂಲಕ ಉಗ್ರರ ಸೆಳೆಯುವ ಯತ್ನ..!

ಫೇಸ್‌ಬುಕ್ ಮತ್ತು ಟ್ವಿಟ್ಟರ್‌ಗಳ ಮೂಲಕ ಮುಸ್ಲಿಂ ಯುವಕರನ್ನು ಭಯೋತ್ಪಾಾದಕ ಕೃತ್ಯಗಳಿಗೆ ಪ್ರೇರೇಪಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಟ್ವಿಿಟ್ಟರ್ ಮೂಲಕ ಐಸಿಸ್‌ಗೆ ಸೇರಲು ಮುಸ್ಲಿಂ ಯುವಕರನ್ನು ಪ್ರಚೋಧಿಸುತ್ತಿದ್ದ ಆರೋಪದ ಮೇಲೆ ಕಳೆದ ವರ್ಷ ಮಸ್ರೂರ್ ಬಿಸ್ವಾಾಸ್ ಮೆಹದಿಯನ್ನು ಬಂಧಿಸಲಾಗಿತ್ತು. ಆಗಲೇ ಗೊತ್ತಾಗಿದ್ದು, ಉಗ್ರರು ಸಾಮಾಜಿಕ ಜಾಲತಾಣಗಳನ್ನು ಬಳಸಿ ವಿಧ್ಯಾಾವಂತ ಯುವಕರನ್ನು ಉಗ್ರ ಸಂಘಟನೆಗಳತ್ತ ಸೆಳೆಯುತ್ತಿದ್ದಾಾರೆ ಎನ್ನೋ ಆಘಾತಕಾರಿ ವಿಚಾರ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಯುವಕರನ್ನು ಹಾದಿ ತಪ್ಪಿಸಿ ಉಗ್ರಗಾಮಿ ಸಂಘಟನೆಗಳಿಗೆ ಸೆಳೆಯುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿಿದೆ. ಎಂಜಿನಿಯರಿಂಗ್ ಮತ್ತು ವೈಧ್ಯಕೀಯ ವಿಧ್ಯಾಾರ್ಥಿಗಳು ಮತ್ತು ಪ್ರತಿಷ್ಟಿತ ಕಂಪನಿಗಳಲ್ಲಿ ಕೆಲಸ ಮಾಡುವ ಟೆಕ್ಕಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಉಗ್ರ ಸಂಘಟನೆಗಳು ಯುವಕರನ್ನು ಸೆಳೆಯುವ ಕೆಲಸ ಮಾಡುತ್ತಿವೆ. ಆದರೆ ಈ ಪ್ರಯತ್ನವನ್ನು ತಡೆಯುವ ಕೆಲಸ ರಾಜ್ಯ ಪೊಲೀಸರಿಂದ ಸಾಧ್ಯವಾಗಿಲ್ಲ.

ಆಂತರಿಕ ಭದ್ರತಾ ವಿಭಾಗದಲ್ಲಿ ಪರಿಣಿತ ಅಧಿಕಾರಿಗಳಿಲ್ಲ..!

ಭಯೋತ್ಪಾಾದನಾ ನಿಗ್ರಹ ದಳ, ನಕ್ಸಲ್ ನಿಗ್ರಹದಳ, ಕರಾವಳಿ ಭದ್ರತಾ ಪಡೆ ಮತ್ತು ಗುಪ್ತಚರ ವಿಭಾಗಗಳನ್ನೊಳಗೊಂಡ ಆಂತರಿಕ ಭದ್ರತಾ ವಿಭಾಗ ರಾಜ್ಯದಲ್ಲಿ ಕೆಲಸ ಮಾಡುತ್ತಿಿದೆ. ಸರಣಿ ಸ್ಫೋಟ ನಡೆದ ನಂತರ ಈ ವಿಭಾಗವನ್ನು ಆರಂಭಿಸಲಾಗಿದೆ. ಎಡಿಜಿಪಿ ಮಟ್ಟದ ಅಧಿಕಾರಿ ಈ ವಿಭಾಗದ ಮುಖ್ಯಸ್ಥರಾಗಿದ್ದಾಾರೆ. ಆದರೆ ಭಯೋತ್ಪಾಾದನೆ, ಉಗ್ರರ ದಾಳಿ ಇಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ಆಂತರಿಕ ಭದ್ರತಾ ಪಡೆಯ ಸಾಧನೆ ಏನೇನು ಇಲ್ಲ. ರಾಜ್ಯ ಉಗ್ರರ ಅಡಗುತಾಣದಂತಾಗಿದ್ದರೂ ಭತೋತ್ಪಾದಕ ನಿಗ್ರಹ ದಳ ಇಲ್ಲಿಯವರೆಗೂ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿಯೇ ಇಲ್ಲ. ಆಂತರಿಕ ಭದ್ರತಾ ವಿಭಾಗಲ್ಲಿ ಪರಿಣಿತ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಭಯೋತ್ಪಾಾದನೆ, ಉಗ್ರರ ಕುರಿತಾಗಿ ತಿಳಿದುಕೊಂಡಿರುವ ಅಧಿಕಾರಿಗಳೇ ಆ ವಿಭಾಗದಲ್ಲಿಲ್ಲ. ಈ ವಿಭಾಗಕ್ಕೆ ಬರಲು ಧಕ್ಷ ಅಧಿಕಾರಿಗಳು ಮನಸ್ಸು ಮಾಡುವುದಿಲ್ಲ. ಇನ್ನು ಇಲ್ಲಿರುವ ಗುಪ್ತಚರ ವಿಭಾಗದಲ್ಲಿ ಸೂಕ್ತ ಅಧಿಕಾರಿಗಳೇ ಇಲ್ಲ. ಸೈಬರ್ ಮಾನಿಟರಿಂಗ್ ಎಂಬ ಅರ್ಥವೇ ಗೊತ್ತಿಲ್ಲದಂತೆ ಈ ವಿಭಾಗ ಕಾರ್ಯನಿರ್ವಹಿಸುತ್ತಿಿದೆ. ತಂತ್ರಜ್ಞಾಾನದ ಅರಿವು, ಧಕ್ಷ ಅಧಿಕಾರಿಗಳ ಪಡೆ, ಅತ್ಯಾಧುನಿಕ ವ್ಯವಸ್ಥೆ ಯಾವುದೂ ಆಂತರಿಕ ಭದ್ರತಾ ಪಡೆಯಲ್ಲಿಲ್ಲ. ಹೀಗೆ ಬದುಕಿದ್ದೂ ಸತ್ತಂತಿರುವ ಈ ವಿಭಾಗದಿಂದ ಭಯೋತ್ಪಾಾದಕರ ಹೆಡೆಮುರಿ ಕಟ್ಟಲು ಸಾಧ್ಯವೇ ಇಲ್ಲ.

ಇದೇ ರೀತಿ ರಾಜ್ಯದ ಅಧಿಕಾರಿಗಳು ಉಗ್ರ ಚಟುವಟಿಕೆಗಳ ಮೇಲೆ ನಿಗಾ ಇಡದೇ ತಮಗೆ ಸಂಬಂಧವೇ ಇಲ್ಲದಂತೆ ಇದ್ದರೆ ಮುಂದೊಂದು ದಿನ ರಾಜ್ಯ ಭೀಕರ ದಾಳಿಗೆ ತುತ್ತಾಾಗೋದು ನಿಶ್ಚಿತ. ಅದಾದ ನಂತರ ಎಚ್ಚೆೆತ್ತುಕೊಳ್ಳುವ ಬದಲು ಈಗಲೇ ಆಂತರಿಕ ವಿಭಾಗವನ್ನು ಬಲಪಡಿಸುವ ಅಗತ್ಯತೆ ಇದೆ.

ರಾಜ್ಯದಲ್ಲಿ ಉಗ್ರರ ಕರಾಳ ಇತಿಹಾಸ

* 2000 ರಲ್ಲಿ ನಡೆದ ಹುಬ್ಬಳ್ಳಿ, ಗುಲ್ಬರ್ಗಾ ಮತ್ತು ಬೆಂಗಳೂರಿನಲ್ಲಿ ನಡೆದ ಚರ್ಚ್ ಸ್ಪೋಟ

* 2005 ಡಿ.28 ರಂದು ಬೆಂಗಳೂರಿನಲ್ಲಿ ನಡೆದ ಐಐಎಸ್‌ಸಿ ದಾಳಿ, ವಿಜ್ಞಾಾನಿಯೊಬ್ಬರು ಉಗ್ರರ ಗುಂಡಿಗೆ ಬಲಿಯಾಗಿದ್ದರು

* 2008 ಮೇ.10ರಂದು ನಡೆದ ಹುಬ್ಬಳ್ಳಿಯಲ್ಲಿ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ನಡೆದ ಸ್ಫೋಟ

*2008 ಜು.25ರಂದು ಬೆಂಗಳೂರಿನಲ್ಲಿ ನಡೆದಿದ್ದ ಸರಣಿ ಸ್ಪೋಟ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

* 2010 ಏ.17 ರಂದು ನಡೆದ ಚಿನ್ನಸ್ವಾಾಮಿ ಕ್ರೀಡಾಂಗಣ ಬಳಿಯ ಸ್ಫೋಟ

* 2013 ಏ.17 ರಂದು ನಡೆದ ಮಲ್ಲೇಶ್ವರಂ ಬಾಂಬ್ ಸ್ಪೋಟ

* 2014 ಡಿ.28 ರಂದು ನಡೆದ ಚರ್ಚ್‌ಸ್ಟ್ರೀಟ್ ಬಾಂಬ್ ಸ್ಫೋಟ. ಘಟನೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು.

ಉಗ್ರರ ಕರಾಳ ಹೆಜ್ಜೆ

*2012 ರಲ್ಲಿ ರಾಜ್ಯದ ಪ್ರಮುಖ ಪತ್ರಕರ್ತರ ಹತ್ಯೆಗೆ ಸಂಚು ರೂಪಿಸಿದ ಆಧಾರದ ಮೇಲೆ 12 ಮಂದಿಯನ್ನು ಬಂಧಿಸಲಾಗಿತ್ತು.

*2014ರ ಅ.6ರಂದು ವಿವೇಕನಗರದಲ್ಲಿ ತಮಿಳುನಾಡು ಪೊಲೀಸರು ಇಬ್ಬರು ಅಲ್ ಉಮಾ ಸಂಘಟನೆಯಉಗ್ರರನ್ನು ಬಂಧಿಸಿದ್ದರು.

* 2014 ರ ಡಿ.13 ರಂದು ಐಸಿಸ್ ಟ್ವಿಟ್ಟರ್ ಕಿಂಗ್‌ಪಿನ್ ಮೆಹದಿ ಮಸ್ರೂರ್ ಬಿಸ್ವಾಾಸ್‌ನನ್ನು ಬಂಧಿಸಲಾಗಿತ್ತು.

* 2015ರ ಜ.8ರಂದು ಬೆಂಗಳೂರು ಮತ್ತು ಭಟ್ಕಳದಲ್ಲಿ ಆರು ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು

* 2015 ರ ಜ.24 ರಂದು ಅಸ್ಸಾಾಂ ನ ಬೋಡೋ ಉಗ್ರ ಬಿರ್ಕಾಂಗ್ ನರ್ಜಾರಿ ಬಂಧನ.

* 2015 ಜ.26 ಎಲೆಕ್ಟ್ರಾಾನಿಕ್ ಸಿಟಿಯಲ್ಲಿ ಬೋಡೋ ಉಗ್ರ ಸಂಜು ಬೋರ್ಡ್ ಲಾಯ್ ಬಂಧನ.

* 2015 ರ ಜೂನ್ 6 ರಂದು ಪೀಣ್ಯಾದಲ್ಲಿ ನಾಲ್ವರು ಬೋಡೋ ಉಗ್ರರನ್ನು ಬಂಧಿಸಲಾಗಿತ್ತು

* 2015ರ ಡಿಸೆಂಬರ್ 25 ರಂದು ನಾಗಾ ಉಗ್ರ ಅಟೋಷಿ ಚೋಫೆಯನ್ನು ಬಂಧಿಸಲಾಗಿತ್ತು

* 2016 ಜ.6 ರಂದು ಆಲ್‌ಖೈದಾ ಶಂಕಿತ ಉಗ್ರ ಸೈಯದ್ ಅನ್ಸರ್ ಷಾ ಖಾಸ್ಮಿಿಯನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು.

*2016 ಜ.22ರಂದು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಮೇಲೆ ಎನ್‌ಐಎ ಅಧಿಕಾರಿಗಳು ಬೆಂಗಳೂರು, ತುಮಕೂರು ಮತ್ತು ಮಂಗಳೂರಿನಲ್ಲಿ ಆರು ಶಂಕಿತರ ಬಂಧಿಸಿದ್ದಾಾರೆ.

                                                                                –ಶಶಿವರ್ಣಂ

ಕೇರಳ ಚುನಾವಣೆ ಮೇಲೆ ಕಣ್ಣು, ಆರೋಪಮುಕ್ತನಾಗಲು ಅಡ್ಡ ದಾರಿ ಹಿಡಿದ ಮದನಿ

214292008ರ ಬೆಂಗಳೂರು ಸರಣಿ ಸ್ಪೋಟ ಪ್ರಕರಣದಲ್ಲಿ ಶೇ. 80ರಷ್ಟು ಮಂದಿ ಪ್ರತಿಕೂಲ ಸಾಕ್ಷಿದಾರರಾಗಿ ಪರಿಣಮಿಸಿದ್ದು, ಪ್ರಮುಖ ಆರೋಪಿ ಅಬ್ದುಲ್ ನಾಸೀರ್ ಮದನಿ ಪ್ರಕರಣದಿಂದ ಪಾರಾಗುವುದಕ್ಕಾಗಿ ಸಾಕ್ಷಿದಾರರಿಗೆ ನೀಡಿರುವ ಜೀವಬೆದರಿಕೆ ಕರೆಗಳು ಪ್ರಕರಣವನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ.

ಘಟನೆ ನಡೆದು ಎಂಟು ವರ್ಷ ಕಳೆದರೂ ಈ ಪ್ರಕರಣದ ವಿಚಾರಣೆ ಪೂರ್ಣಗೊಂಡಿಲ್ಲ. ಈ ಮಧ್ಯೆ ಪಠಾಣ್ ಕೋಟ್ ದಾಳಿ ಸೇರಿದಂತೆ ದೇಶದಲ್ಲಿ ಹಲವಾರು ವಿಧ್ವಂಸಕ ಕೃತ್ಯಗಳು ನಡೆದು ಹೋಗಿವೆ. ಎಂಟು ವರ್ಷಗಳ ಹಿಂದಿನ ಘಟನೆ ಜನಮಾನಸದಿಂದ ಮರೆಯಾಗುತ್ತಿರುವಾಗಲೇ ಸಾಕ್ಷಿಗಳಿಗೆ ಬೆದರಿಕೆ ಹಾಕುವುದು ಬೆಳಕಿಗೆ ಬಂದಿದೆ.

ಈ ವರ್ಷ ಕೇರಳ ವಿಧಾನಸಭೆಗೆ ನಡೆಯುವ ಚುನಾ­ವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆರೋಪ ಮುಕ್ತನಾಗುವುದಕ್ಕೆ ಮದನಿ ಪ್ರಯತ್ನಿಸುತ್ತಿದ್ದಾನೆ. ಸರಣಿ ಸ್ಪೋಟಕ್ಕೆ ಷಡ್ಯಂತ್ರ ರೂಪಿತವಾಗಿದ್ದು ಕೇರಳದಲ್ಲಿ. ಈ ಬಗ್ಗೆ ಸಾಕ್ಷಿದಾರರು ಎಂದು ಪರಿಗಣಿಸಲ್ಪಟ್ಟಿದ್ದ ಎರ್ನಾಕುಲಂನ ರಾಮಚಂದ್ರ ಮತ್ತು ರೂಪೇಶ್ ಎಂಬುವರಿಗೆ ಸಾಕ್ಷಿ ನುಡಿಯದಂತೆ ಬೆದರಿಕೆ ಹಾಕಲಾಗಿದೆ. ಒಂದು ವೇಳೆ ಕೋರ್ಟ್‌ನಲ್ಲಿ ಸಾಕ್ಷಿ ಹೇಳಿದ್ದೇ ಆದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮದನಿ ಬೆಂಬಲಿಗರು ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದಾರೆ.

ಈ ಬಗ್ಗೆ ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರಣಿ ಸ್ಪೋಟ ಪ್ರಕರಣದಲ್ಲಿ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸಾಕ್ಷಿಗಳಿಗೆ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಸಿರುವ ಕೋರ್ಟ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸಾಕ್ಷಿಗಳಿಗೆ ಅಗತ್ಯ ಭದ್ರತೆ ನೀಡುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ಕೇರಳದ ಕಣ್ಣೂರು, ಕೊಲ್ಲಂ, ಎರ್ನಾಕುಲಂ ಮತ್ತು ಹೋಸತೋಟ ಜಿಲ್ಲೆಯ ಎಸ್‌ಪಿಗಳಿಗೆ ಪತ್ರ ಬರೆದು ಸಾಕ್ಷಿಗಳಿಗೆ ಅಗತ್ಯ ಭದ್ರತೆ ನೀಡುವಂತೆ ಕೋರಿದ್ದಾರೆ.

ಎಂಬತ್ತರಷ್ಟು ಪ್ರತಿಕೂಲ ಸಾಕ್ಷಿಗಳಾಗಿದ್ದಾರೆ..!

ಸರಣಿ ಸ್ಪೋಟದ ವಿಚಾರಣೆ ನಗರದ 48ನೇ ಸಿಟಿ ಸೆಷನ್ಸ್ ಕೋರ್ಟ್‌ನಲ್ಲಿ ನಡೆಯುತ್ತಿದೆ. ಪ್ರಕರಣದ ತನಿಖೆ ನಡೆಸಿದ ನಗರ ಪೊಲೀಸರು 250 ಪ್ರಮುಖ ಸಾಕ್ಷಿಗಳನ್ನು ಉಲ್ಲೇಖಿಸಿದ್ದರು. ಇದರಲ್ಲಿ ಕೇರಳದ ಸಾಕ್ಷಿಗಳ ಸಂಖ್ಯೆಯೇ 150ಕ್ಕೂ ಹೆಚ್ಚಿತ್ತು. ಸ್ಪೋಟದ ಷಡ್ಯಂತ್ರ ನಡೆದ ಬಗೆಗಿನ ಎಲ್ಲ ಸಾಕ್ಷಿಗಳೂ ಕೇರಳದವರೇ ಆಗಿದ್ದಾರೆ. ಕರ್ನಾಟಕದ ಸಾಕ್ಷಿಗಳಿಗೆ ರಾಜ್ಯ ಸರ್ಕಾರ ರಕ್ಷಣೆ ಒದಗಿಸುತ್ತಿದೆ. ಆದರೆ ಕೇರಳ ರಾಜ್ಯದ ಹೆಚ್ಚಿನ ಸಾಕ್ಷಿಗಳಲ್ಲಿ ಈಗಾಗಲೇ 80 ರಷ್ಟು ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿದ್ದಾರೆ. ಹೀಗೆ ಮುಂದುವರೆದರೆ ಈ ಕೇಸ್ ಬಿದ್ದು ಹೋಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಸಾಕ್ಷಿಗಳಿಗೆ ಭದ್ರತೆ ನೀಡಬೇಕು ಎಂದು ಸರ್ಕಾರಿ ವಕೀಲ ಸೀತಾರಾಮ ಕೊಣಾಜೆ ವಿಶ್ವವಾಣಿಗೆ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಸೀತಾರಾಮ ಕೊಣಾಜೆ ಸಾಕ್ಷಿಗಳಿಗೆ ಭದ್ರತೆ ನೀಡುವಂತೆ ಕೇರಳ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಮದನಿಗೆ ಹೆದರಿ ಊರು ಬಿಟ್ಟ ಸಾಕ್ಷಿಗಳು..!

ಈ ಪ್ರಕರಣದಲ್ಲಿ ಹೇಗಾದರೂ ಆರೋಪ ಮುಕ್ತನಾಗಬೇಕು ಎಂದುಕೊಂಡಿರುವ ಮದನಿ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾನೆ. ಪ್ರತಿ ಸಾಕ್ಷಿಗಳ ಮನೆ ಮನೆಗೆ ಹೋಗುವ ಮದನಿ ಬೆಂಬಲಿಗರು ಸಾಕ್ಷಿ ನುಡಿಯದಂತೆ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಹೆದರಿದ ಕೆಲವು ಸಾಕ್ಷಿದಾರರು ಮನೆ ಖಾಲಿ ಮಾಡಿಕೊಂಡು ಬೇರೆಡೆಗೆ ಹೋಗಿದ್ದರೆ, ಇನ್ನೂ ಕೆಲವು ಸಾಕ್ಷಿಗಳು ದೇಶ

ಬಿಟ್ಟೇ ಹೋಗಿದ್ದಾರೆ. ಇದು ಕೇರಳದಲ್ಲಿ ಮದನಿ ಬೆಂಬಲಿಗರ ಪ್ರಭಾವ ಎಷ್ಟರಮಟ್ಟಿಗಿದೆ ಎಂಬುದನ್ನು ತೋರಿಸುತ್ತದೆ. ಕೋರ್ಟ್ ಸಮನ್ಸ್ ನೀಡಲು ಹೋಗುವ ಪೊಲೀಸರಿಗೆ ಸಾಕ್ಷಿಗಳ ಮನೆಗಳೇ ಸಿಕ್ಕುವುದಿಲ್ಲ. ಒಂದುವೇಳೆ ಸಿಕ್ಕರೂ ಮತ್ತೊಮ್ಮೆ ಆ ವಿಳಾಸಕ್ಕೆ ಹೋದರೆ ಮನೆ ಖಾಲಿಯಾಗಿರುತ್ತದೆ.

ಇನ್ನು ಮದನಿ ವಿರುದ್ಧ ಸಾಕ್ಷಿ ಹೇಳಬೇಕಾದ ವ್ಯಕ್ತಿಗಳು ಮದನಿ ಪರ ವಕೀಲರ ಜೊತೆ ಕಾರಿನಲ್ಲಿ ಕೇರಳದಿಂದ ಬೆಂಗಳೂರಿಗೆ ಬಂದು ಹೋಗುತ್ತಿದ್ದಾರೆ ಎಂದರೆ ಆತನ ಪ್ರಭಾವ ಸಾಕ್ಷಿಗಳ ಮೇಲೆ ಎಷ್ಟರ ಮಟ್ಟಿಗೆ ಇದೆ ಎಂಬುದು ಅರ್ಥವಾಗುತ್ತದೆ.

ಕೇರಳದಲ್ಲಿ ನಡೆಯಲಿರುವ ಮುಂದಿನ ಚುನಾವಣೆ ವೇಳೆಗೆ ಹೇಗಾದರೂ ಮದನಿಯನ್ನು ಬಿಡುಗಡೆ ಮಾಡಿಸಲು ಸಾಕ್ಷಿಗಳಿಗೆ ಬೆದರಿಕೆ ಹಾಕಿ ಕೇಸ್ ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಸಾಕ್ಷಿಗಳನ್ನು ರಕ್ಷಿಸಿಕೊಳ್ಳದೇ ಹೋದರೆ ಈ ಪ್ರಕರಣದಲ್ಲಿ ಮದನಿ ನಿರಪರಾಧಿಯಾದರೂ ಆಶ್ಚರ್ಯವಿಲ್ಲ. ಎಂಟು ವರ್ಷಗಳ ಪೊಲೀಸರ ಶ್ರಮ ವ್ಯರ್ಥವಾಗುತ್ತದೆ ಎನ್ನುತ್ತಾರೆ ಸರ್ಕಾರಿ ವಕೀಲ ಸೀತಾರಾಮ ಕೊಣಾಜೆ

ಪರಪ್ಪನ ಅಗ್ರಹಾರದಿಂದಲೇ ಬೆದರಿಕೆ..!

ಬೆಂಗಳೂರು ಸರಣಿ ಸ್ಪೋಟ19 ಆರೋಪಿಗಳು ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಅನಾರೋಗ್ಯದ ನೆಪದಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿರುವ ಮದನಿ ನಗರದ ಸಹಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಗರ ಪೊಲೀಸರ ಸುಪರ್ದಿನಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣದ ಮೊದಲನೇ ಆರೋಪಿಯಾಗಿರುವ ನಾಜೀರ್ ತನ್ನನ್ನು ನೋಡಲು ಜೈಲಿಗೆ ಬರುವವರ ಮೂಲಕ ಸಾಕ್ಷಿದಾರರ ಮಾಹಿತಿ ನೀಡಿ ಮದನಿ ವಿರುದ್ಧ ಸಾಕ್ಷಿ ಹೇಳದಂತೆ ಬೆದರಿಸುತ್ತಿದ್ದಾನೆ. ಇನ್ನು ಪ್ರಮುಖ ಸಾಕ್ಷಿ ರೆಬಿ ಖುರಿಯನ್‌ಗೆ ನ್ಯಾಯಾಲಯದ ಆವರಣದಲ್ಲೇ ನಾಜೀರ್ ಮದನಿ ವಿರುದ್ಧ ಸಾಕ್ಷಿ ಹೇಳದಂತೆ ಬೆದರಿಕೆ ಹಾಕಿದ್ದ.

ಕೇರಳದಲ್ಲಿ ಮದನಿ ಕಿಂಗ್ ಮೇಕರ್

ಕೇರಳ ರಾಜಕೀಯದಲ್ಲಿ ಮದನಿ ನೇತೃತ್ವದ ಪಿಡಿಪಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕೆಂದರೂ ಮದನಿಯ ಬೆಂಬಲ ಬೇಕು ಎನ್ನುವಷ್ಟರ ಮಟ್ಟಿಗೆ ಆ ಪಕ್ಷ ಅಲ್ಲಿ ತನ್ನ ಪ್ರಭಾವ ಹೊಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳಿಗೂ ಮದನಿ ಈಗ ಬೇಕಾಗಿರುವ ವ್ಯಕ್ತಿ. ನಗರದ ಸಹಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮದನಿಯನ್ನು ಕೇರಳದ ಮುಖ್ಯಮಂತ್ರಿಯಿಂದ ಹಿಡಿದು ಪ್ರಮುಖ ರಾಜಕೀಯ ಮುಖಂಡರು ರಹಸ್ಯವಾಗಿ ಭೇಟಿ ಮಾಡುತ್ತಿರುತ್ತಾರೆ ಎಂದು ಉನ್ನತ ಮೂಲಗಳು ವಿಶ್ವವಾಣಿಗೆ ಖಚಿತಪಡಿಸಿವೆ.

ಹೇಗಾದರೂ ಮಾಡಿ ಮದನಿಯನ್ನು ಈ ಕೇಸ್‌ನಿಂದ ರೋಪ ಮುಕ್ತನನ್ನಾಗಿ ಮಾಡಲು ಕೇರಳದ ರಾಜಕೀಯ ಪಕ್ಷಗಳು ಹಿಂಬಾಗಿಲಿನಿಂದ ಪ್ರಯತ್ನ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಸಾಕ್ಷಿಗಳಿಗೆ ಮದನಿ ಬೆದರಿಕೆ ಹಾಕುತ್ತಿದ್ದರೂ ಅಲ್ಲಿನ ಸರ್ಕಾರ ಕೈಕಟ್ಟಿ ಕುಳಿತಿದೆ.

ತೆಹೆಲ್ಕಾ ವರದಿಗಾರ್ತಿ ಬೆದರಿಕೆ ಹಾಕಿದ್ದಳು..!

ಕೊಡಗಿನಲ್ಲಿ ಶುಂಠಿ ಖರೀದಿಸುವ ನೆಪದಲ್ಲಿ ಕೇರಳದ ಯುವಕರಿಗೆ ಸರಣಿ ಸ್ಪೋಟ ನಡೆಸಲು ತರಬೇತಿ ನೀಡಲಾಗಿತ್ತು. ಮದನಿ ಅಲ್ಲಿಗೆ ಬಂದು ಯುವಕರಿಗೆ ದೇಶದ ಹಲವು ಭಾಗಗಳಲ್ಲಿ ಭಯೋತ್ಪಾದಕ ದಾಳಿ ನಡೆಸುವ ಬಗ್ಗೆ ತರಬೇತಿ ನೀಡಿದ್ದ. ಈ ಬಗ್ಗೆ ಮಡಿಕೇರಿಯ ಕೆ.ಬಿ.ರಫೀಕ್, ಯೋಗಾನಂದ

ಮತ್ತು ಪ್ರಭಾಕರ್ ಮದನಿ ವಿರುದ್ಧ ಪ್ರಮುಖ ಸಾಕ್ಷಿಗಳಾಗಿದ್ದರು. ತೆಹೆಲ್ಕಾ ಪತ್ರಿಕೆ ವರದಿಗಾರ್ತಿ

ಕೆ.ಕೆ. ಶಾಹಿನಾ ವರದಿ ಮಾಡುವ ನೆಪದಲ್ಲಿ ಸಾಕ್ಷಿಗಳ ಮನೆಗೆ ಹೋಗಿ ಮದನಿ ವಿರುದ್ಧ ಸಾಕ್ಷ್ಯ ನುಡಿಯದಂತೆ ಬೆದರಿಕೆಯೊಡ್ಡಿದ್ದಳು. ಈ ಬಗ್ಗೆ ಕೊಡಗಿನ

ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಷಡ್ಯಂತ್ರ..!

ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಹತ್ಯೆ ಮಾಡುವ ಉದ್ದೇಶದಿಂದ 1998ರ -.14ರಂದು ಕೊಯಿಮತ್ತೂರಿನಲ್ಲಿ ಬಾಂಬ್ ಸ್ಪೋಟ ನಡೆಸಲಾ ಗಿತ್ತು. ಈ ಘಟನೆಯಲ್ಲಿ 58 ಮಂದಿ ಸಾವನ್ನಪ್ಪಿದ್ದರು. ಚುನಾವಣಾ ರ‍್ಯಾಲಿಗಾಗಿ ಕೇರಳಕ್ಕೆ ಬಂದಿದ್ದ ಅಡ್ವಾಣಿಯವರನ್ನು ಕೊಲ್ಲಲು ಈ ಸ್ಪೋಟ ನಡೆಸಲಾಗಿತ್ತು, ಅದೃಷ್ಟವಶಾತ್ ಅಡ್ವಾಣಿ ಪಾರಾಗಿದ್ದರು. ಈ ಪ್ರಕರಣದ 14 ಆರೋಪಿಗಳ ಪೈಕಿ ಮದನಿ ಪ್ರಮುಖ ಆರೋಪಿಯಾಗಿದ್ದ. ಆದರೆ ಪ್ರಕರಣದ ವಿಚಾರಣೆ ನಡೆಸಿದ ಕೇರಳ ನ್ಯಾಯಾ­ಲಯ 13 ಮಂದಿಯನ್ನು ಅಪಾದಿತರ­ನ್ನಾಗಿ ಮಾಡಿ ಶಿಕ್ಷೆ ವಿಧಿಸಿತ್ತು. ಮದನಿಯನ್ನು ಕೋರ್ಟ್ ಆರೋಪ ಮುಕ್ತಗೊಳಿಸಿತ್ತು.ಈಗ ಬೆಂಗಳೂರು ಸರಣಿ ಸ್ಪೋಟ ಪ್ರಕರಣದಲ್ಲೂ ಇದೇ ತಂತ್ರ ನಡೆಸಲು ಮದನಿ ಸಿದ್ದನಾಗಿದ್ದಾನೆ.

ಮದನಿಗೇಕೆ ಮಹತ್ವ?

  • ಕೇರಳದಲ್ಲಿ ಮದನಿ ರಾಜಕೀಯವಾಗಿ ಪ್ರಬಲ.
  • ಮುಸ್ಲಿಮರ ವೋಟ್ ಬ್ಯಾಂಕ್‌ಗಾಗಿ
  • ಅಲ್ಲಿನ ರಾಜಕೀಯ ಪಕ್ಷಗಳು ಮದನಿ ಪರ ವಕಾಲತ್ತು ಮಾಡುತ್ತಿವೆ.
  • ಮದನಿಯನ್ನು ಸಂತುಷ್ಟಗೊಳಿಸಿದರೆ ಕೇರಳದಲ್ಲಿ ಅಧಿಕಾರ ಹಿಡಿಯುವುದು ಸುಲಭ
  • ಕೋರ್ಟ್ ವಿಚಾರಣೆಗೆ ಮದನಿ ಸರಿಯಾಗಿ ಹಾಜರಾಗುವುದಿಲ್ಲ
  • ಪ್ರಕರಣದ ಉಳಿದ ಆರೋಪಿಗಳಂತೆ ಮದನಿ ವಿಚಾರಣೆ ನಡೆಸಬಾರದಂತೆ..!

ಉಳಿವಿಗೆಗಾಗಿ ಹೋರಾಟ..!

  • ಮದನಿ ಅಮಾಯಕ,ಮಾನವೀಯ ನೆಲೆ­ ಯಲ್ಲಿ ಆತನನ್ನು ಬಿಡುಗಡೆ ಮಾಡ­ಬೇ­ಕೆಂದು ಕೇರಳ ವಿಧಾನಸಭೆ ನಿರ್ಣಯ ಅಂಗೀಕರಿಸಿತ್ತು.
  • ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಹಾಯ ಕೋರಿದ್ದ ಕೇರಳ ಶಾಸಕರು.
  • ಮದನಿಯ ಬಿಡುಗಡೆಗಾಗಿ ಕೇರಳದಲ್ಲಿ ಜನಾಭಿಪ್ರಾಯ ರೂಪಿಸಲಾಗುತ್ತಿದೆ.
  • ಮದನಿಯನ್ನು ಬಂಧಿಸಲು ಕೇರಳಕ್ಕೆ ಹೋದಾಗ ರಾಜ್ಯ ಪೊಲೀಸರಿಗೆ ದೊಡ್ಡಮಟ್ಟದ ಪ್ರತಿರೋಧ ವ್ಯಕ್ತವಾಗಿತ್ತು.
  • ಮದನಿ ವಿರುದ್ಧ ಸಾಕ್ಷ್ಯ ಹೇಳಬೇಕಾದವರು ಮದನಿ ಪರ ವಕೀಲರ ಜೊತೆಯಲ್ಲಿ ಕೋರ್ಟ್‌ಗೆ ಬರುತ್ತಾರೆ.!
  • ಆರೋಪಿಗಳ ಪೈಕಿ 19 ಆರೋಪಿಗಳಿಗೆ ಜಾಮೀನು ಸಿಕ್ಕಿಲ್ಲ. ಅನಾರೋಗ್ಯದ ಕಾರಣ

ಮದನಿ ಬೆಂಬಲಿಗರು ವಕೀಲರು, ಪೊಲೀಸರು, ನ್ಯಾಯಾಧಿಶರಿಗೆ ಬೆದರಿಕೆ ಹಾಕುವುದಿಲ್ಲ.ನೇರವಾಗಿ ಸಾಕ್ಷಿಗಳಿಗೆ ಬೆದರಿಕೆ ಹಾಕಿ ಪ್ರಕರಣದಿಂದ ಆತನನ್ನು ನಿರ್ದೋಷಿಯಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ. – ಸೀತಾರಾಮ ಕೊಣಾಜೆ, ಸರ್ಕಾರಿ ವಕೀಲ

ಪ್ರಕರಣ ಸದ್ಯ ಕೋರ್ಟ್‌ನಲ್ಲಿದೆ.ನಾನು ಈ ಬಗ್ಗೆ ಮಾತನಾಡುವಂತಿಲ್ಲ– ಎನ್. ಎಸ್. ಮೇಘರಿಕ್ ನಗರ ಪೊಲೀಸ್ ಆಯುಕ್ತ

ಬೆಂಗಳೂರು ಪೊಲೀಸರು ಬೇಧಿಸಿರುವ ಎರಡು ಭಯೋತ್ಪಾದಕ ದಾಳಿ ಪ್ರಕರಣಗಳಲ್ಲಿ ಇದು ಮುಖ್ಯವಾದದ್ದು. ಆರೋಪಿಗಳಿಗೆ ಶಿಕ್ಷೆಯಾಗಲೇಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸಾಕ್ಷಿಗಳಿಗೆ ರಕ್ಷಣೆ ನೀಡಬೇಕು. –ಶಂಕರ್ ಬಿದರಿ ನಿವೃತ್ತ ಡಿಜಿ-ಐಜಿ

ಶಶಿವರ್ಣಂ

%d bloggers like this: