ವಿವೇಚನೆ, ವಿವೇಕವಿದ್ದವರಾರೂ ಉದ್ದಟತನ ತೋರುವ ಭಂಡತನ ಮಾಡುವುದಿಲ್ಲ….

ಮಾಧ್ಯಮದವರ ಮೇಲೆ ವಕೀಲರು ನಡೆಸಿದ ದಾಳಿಯ ಬಗ್ಗೆ ಈಗ ಏನೇನೊ ಮಾತುಗಳು ಹೊರಬರುತ್ತಿವೆ.ಮೀಡಿಯಾದವರ ಬ್ರೇಕಿಂಗ್ ನ್ಯೂಸ್ ಹಪಾಹಪಿಯಿಂದ ಇಷ್ಟೆಲ್ಲಾ ಅವಾಂತರ ಆಯ್ತು. ನ್ಯಾಯಾಲಯದ ಆವರಣದಲ್ಲಿ ಮಾದ್ಯಮದವರು ವಕೀಲರೊಂದಿಗೆ ಸರಿಯಾಗಿ ನಡೆದುಕೊಳ್ಳಲಿಲ್ಲ ಅನ್ನುವ ಮಾತುಗಳು ಕೇಳಿಬರುತ್ತಿವೆ. ಮೊದಲನೆಯದಾಗಿ ಅಂದು ಯಾವ ಮೀಡಿಯಾದವರೂ ಕ್ಯಾಮೆರಾ ಹಿಡಿದಾಗಲೀ, ಇಲ್ಲವೇ ವರದಿಗಾರರಾಗಲೀ ಕೋರ್ಟ್ ಕಲಾಪಕ್ಕೆ ಹೋಗಿ ಸೆನ್ಸೇಷನಲ್ ನ್ಯೂಸ್ ಕೊಡಬೇಕೆಂದೇನೂ ಹೋಗಿರಲಿಲ್ಲ. ಮಾದ್ಯಮ ಪ್ರತಿನಿಧಿಗಳಿಗೆ ನ್ಯಾಯಾಲಯಗಳಲ್ಲಿ ಹೇಗಿರ್ಬೇಕು ಅನ್ನೋದು ಗೊತ್ತಿದೆ. ಜನಾರ್ದನ ರೆಡ್ಡಿಯನ್ನ ಕೋರ್ಟ್ ಒಳಗೆ ಕರೆದೊಯ್ಯುವ ದೃಷ್ಯ ಸೆರೆ ಹಿಡಿಯಲು ಒಬಿ ವ್ಯಾನ್ ಗಳ ಸಮೇತ ಕ್ಯಾಮರಾದೊಂದಿಗೆ ನ್ಯಾಯಾಲಯದ ಆವರಣದಲ್ಲಿ ನಿಂತಿದ್ದರು. ಯಾವ ವರದಿಗಾರನೂ ನ್ಯಾಯಾಲಯದ ಒಳಗೆ ಹೋಗಿರಲಿಲ್ಲ. ಇನ್ನೇನು ರೆಡ್ಡಿಯನ್ನ 10 ನಿಮಿಷಗಳಲ್ಲಿ ಕರ್ಕೊಂಡು ಬರ್ತಾರೆ ಅನ್ನೊವಾಗ 30-40 ವಕೀಲರು ಬಂದು ಕ್ಯಾಮೆರಾ ಮತ್ತು ಟ್ರೈಪಾಡ್ ಗಳನ್ನ ಎತ್ತಿ ಬಿಸಾಕಲು ಪ್ರಾರಂಬಿಸಿದ್ರು. ಅದಾದ ನಂತ್ರ ರೆಡ್ಡಿಯನ್ನ ನ್ಯಾಯಾಲಯದ ಒಳಗೆ ಕರೆ ತಂದಾಗಲೂ ಕೂಡ ಕೆಲ ವಕೀಲರ ಗುಂಪು ಪತ್ರಕರ್ತರೆಡೆಗೆ ಕಲ್ಲು ತೂರಿದ್ರು. ನ್ಯಾಯಾಲಯಕ್ಕೆ ಬರ್ಬೇಡಿ ಅನ್ನೋದಕ್ಕೆ ಕೋರ್ಟ್ ಏನೂ ವಕೀಲರುಗಳ ಆಸ್ತಿಯೇನಲ್ಲ. ಹಾಗೆ ಪ್ರಾರಂಭವಾದ ವಕೀಲರ ಉದ್ಧಟತನ ವರದಿಗಾರರನ್ನ ಸಿಕ್ಕ ಸಿಕ್ಕಲ್ಲಿ ಹೊಡೆಯುವವರೆಗೆ ಹೋಯ್ತು. ಸುಮ್ಮನೇ ವಿಶ್ಲೇಷಣೆ ನೆಪದಲ್ಲಿ ಕೆಲವರುಗಳು ವಕೀಲರುಗಳನ್ನ ಸಮಥರ್ಿಸಿಕೊಳ್ಳುತ್ತಿದ್ದಾರೆ. ಇಡೀ ವಕೀಲ ಸಮುದಾಯವನ್ನೇ ಗೂಂಡಾಗಳೆಂದು ಯಾವ ಮಾಧ್ಯಮವೂ ಕರೆದಿಲ್ಲ. ಪುಂಡಾಟಿಕೆ ಮಾಡಿದವರನ್ನ ಪುಂಡರು ಎನ್ನದೇ ಪೂಜ್ಯರು ಅನ್ನಬೇಕಾ? ಇದಕ್ಕೆ ಉತ್ತರ ಹೇಳುವವರಾರು…. ಲಾಯರ್ ಗಳು ಅಹಂಕಾರದಿಂದ ವರದಿಗಾರರಿಗೆ ಹೊಡೆಯುವಾಗ ನಮ್ಮ ವರದಿಗಾರರಿಗೂ ನೋವಾಗಿತ್ತು ಅಲ್ಲವಾ? ಮಾಧ್ಯಮದವರೇನೂ ಆಕಾಶದಿಂದೇನೂ ಉದುರಿಲ್ಲ ಅವರಿಗೂ ನೊವಾಗುತ್ತೆ ತಾನೆ? ತಾವು ಆರಂಬಿಸಿದ ಪುಂಡಾಟಿಕೆಯನ್ನ, ಪುಂಡಾಟಿಕೆಯ ಪರಮಾವಧಿಯನ್ನ ನಿಯಂತ್ರಿಸೊಕೆ ಅಂತ ಪೊಲೀಸ್ರು ಬಲಪ್ರಯೋಗ ಮಾಡಿದ್ದಾರೆ. ಅದರಲ್ಲಿ ಮಾಧ್ಯಮದವರ ಕುಮ್ಮಕ್ಕೇನೂ ಇಲ್ಲ. ಅವತ್ತು ಆದ ಘಟನೆ ಪೂರ್ವ ನಿಯೋಜಿತ. ರೆಡ್ಡಿಯನ್ನ ನ್ಯಾಯಾಲಯಕ್ಕೆ ಹಾಜರುಪಡಿಸುವ ದಿನ ಮಾದ್ಯಮದವರು ಬರ್ತಾರೆ ಅಂತಾ ಗೊತ್ತಿದ್ದರಿಂದಲೇ ಕೆಲ ವಕೀಲರು ಜಗಳಕ್ಕಿಳಿದಿದ್ದು. ಏನೊ ತಮ್ಮ ಮೇಲೆ ಮಹಾನ್ ದೌರ್ಜನ್ಯವೇ ನಡೆದು ಹೋಯ್ತೇನೊ ಎಂಬಂತೆ ಅವತ್ತು ಬೆಂಗಳೂರಿನ ಜನರನ್ನ ಸತತ 7 ಗಂಟೆಗಳ ಕಾಲ ಟ್ರಾಪಿಕ್ನಲ್ಲಿ ಸೊರಗುವಂತೆ ಮಾಡಿದ್ದರಲ್ಲಿ ಯಾವ ಪುರುಷಾರ್ಥವಿದೆ. ಅವತ್ತು ಮೀಡಿಯಾದವರು ಜನರ ಪರವಾಗಿ, ಜನರಿಗಾದ ಸಮಸ್ಯೆಗಳ ಬಗ್ಗೆ ಮತ್ತು ಪೊಲೀಸ್ ಇಲಾಕೆಯ ನಿಷ್ಕ್ರಿಯತೆಯ ಬಗ್ಗೆ ವರದಿ ಮಾಡಿದ್ದವು. ಅದರಲ್ಲಿ ವಾಸ್ತವಿಕತೆಯಿತ್ತೇ ಹೊರತು ಅತಿಶಯೋಕ್ತಿತ ವರದಿಗಳೇನೂ ಇರಲಿಲ್ಲ. ಅಂದು ಸಾರ್ವಜನಿಕರ ಮೆಲೆಯೇ ಹಲ್ಲೆ ಮಾಡುವಷ್ಟರ ಬಗ್ಗೆ ವಕೀಲರ ಗುಂಪು ಮಿತಿಮೀರಿದ್ದಕ್ಕೆ ಆ ವಕೀಲರ ಗುಂಪಿಗೆ ಗೂಂಡಾಗಳೆಂದು ಕರೆದದ್ದು ಸತ್ಯ. ಗೋಡಾ ರೀತಿ ಯಾವನೇ ವ್ಯಕ್ತಿ ವತರ್ಿಸಿದರು ಅವನನ್ನ ಗೂಮಡಾ ಅಂತ ಕರೆಯಲು ಯಾರಪ್ಪನ ಅಪ್ಪಣೆಯೂ ಬೇಕಿಲ್ಲ. ರಾಜಕಾರಿಣಿ ಗೂಂಡಾ ನಡವಳಿಕೆ ತೋರಿದ್ರೆ ಅವನನ್ನೂ ಮಾದ್ಯಮಗಳು ರೌಡಿ ಅಂತಲೇ ಕರೆಯೊದು. ಮತ್ತೊಬ್ಬ ಯಾವನೇ ಮಾಡಿದ್ರು ಅವನನ್ನೂ ರೌಡಿ ಅಂತಲೇ ಕರೆಯೋದು. ತಾವು ಮಾಡಿದ್ದೇ ಸರಿ, ತಾವು ಮಾಡಿದ್ದೇ ನ್ಯಾಯ ಅನ್ನೊದಾದ್ರೆ ಕಾನೂನು ಇರೋದಾದ್ರು ಯಾಕೆ. ಕಾನೂನನ್ನ ಪಾಲಿಸ್ತೀವಿ, ಕಾಪಾಡ್ತಿವಿ ಅನ್ನೋರ್ಯಾಕೆ ಕಾನೂನಿನ ವ್ಯಾಪ್ತಿ ಮೀರಿ ಹೊಡೆದಾಟಕ್ಕಿಳೀತಾರೆ. ಯಾವ ಕಾನೂನಿನಲ್ಲಿ ಹೇಳಿದೆ ಕಲ್ಲು ತಗೊಂಡು ಜನರ ಮೇಲೆ ತೂರಬೇಕು ಅಂತ…. ನನಗಂತೂ ಗೊತ್ತಿಲ್ಲ ಯಾಕಂದ್ರೆ ನಾವು ಕಾನೂನು ಓದಿಕೊಂಡಿಲ್ಲವಲ್ಲ….

%d bloggers like this: