ಜರ್ಮನ್ ಬೇಕರಿ ಸ್ಪೋಟಕ್ಕೂ ಮೊದಲು ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಯಾಸಿನ್ ಭಟ್ಕಳ್..

ಜರ್ಮನ್ ಬೇಕರಿ ಸ್ಪೋಟಕ್ಕೂ ಮೊದಲು ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಯಾಸಿನ್ ಭಟ್ಕಳ್..

ಯಾಸಿನ್ ಭಟ್ಕಳ್ ಎಂಬ ಕಂತ್ರಿ ದೇಶ ದ್ರೋಹಿಯೂ, ಇಂಡಿಯನ್ ಮುಜಾಹಿದೀನ್ ಎಂಬ ನೆತ್ತರ ಸಂಘಟನೆಯೂ, ದಿಗ್ವಿಜಯ್ ಸಿಂಗ್ ಎಂಬ ಕೂಗುಮಾರಿಯೂ….

Image

ಮೋಸ್ಟ್ ವಾಂಟೆಡ್ ಉಗ್ರ ಯಾಸಿನ್ ಭಟ್ಕಳ್

ಅದು 2003 ಕರಾವಳಿಯ ಸಣ್ಣ ಪಟ್ಟಣ ಭಟ್ಕಳದಲ್ಲಿ ಏಳು ಮಂದಿ ಯುವಕರ ಗುಂಪು ಒಂದು ನಿಧರ್ಾರಕ್ಕೆ ಬಂದಿತ್ತು. ಅದು ಭಾರತದ ವಿರುದ್ಧ ಜಿಹಾದ್ ಮಾಡುವ ನಿಧರ್ಾರ. ಹಾಗೆ ಅನ್ನ ಕೊಟ್ಟ ದೆಶದ ಮೇಲೆಯೇ ಯುದ್ದ ಮಾಡಲು ಹೊರಟವರು ಕಟ್ಟಿಕೊಂಡದ್ದು ಇಂಡಿಯನ್ ಮುಜಾಹಿದೀನ್ ಎಂಬ ಉಗ್ರಗಾಮಿ ಸಂಘಟನೆ. ಇಕ್ಬಾಲ್ ಬಟ್ಕಲ್, ರಿಯಾಝ್ ಭಟ್ಕಲ್ ಮತ್ತು ಯಾಸಿನ್ ಭಟ್ಕಲ್ ಸೇರಿದಂತೆ ಏಳು ಮಂದಿ ಇಂಡಿಯನ್ ಮುಜಾಹಿದೀನ್ ಎಂಬ ರಕ್ತ ಪಿಪಾಸು ಸಂಘಟನೆಯನ್ನ ಭಾರತದ ನೆಲದಲ್ಲಿಯೇ ಭಾರತೀಯರ ರಕ್ತಹರಿಸಲು ಆರಂಭಿಸಿದರು. 2008 ರ ಸೆಪ್ಟಂಬರ್ ನಲ್ಲಿ ನಡೆದ ದೆಹಲಿ ಸರಣಿ ಸ್ಪೋಟದ ವರೆಗೂ ಇಂಡಿಯನ್ ಮುಜಾಹಿದೀನ್ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಅಧಿಕೃತವಾಗಿ ಇಂಡಿಯನ್ ಮುಜಾಹಿದೀನ್ ನಡೆಸಿದ ಮೊದಲ ಸರಣಿ ಸ್ಪೋಟ ಅದಾಗಿತ್ತು. ಈ ಸರಣಿಸ್ಪೋಟದಲ್ಲಿ ಮೂವತ್ತು ಮಂದಿ ಅಮಯಾಕರ ಪ್ರಾಣದೊಂದಿಗೆ ಆಟವಾಡಿದ್ದ ಈ ದೇಶದ್ರೋಹಿ ಯಾಸಿನ್. ಈ ಸ್ಪೋಟ ನಡೆದು ಸರಿಯಾಗಿ ಕೇವಲ ಐದು ದಿನಗಳಾಗಿತ್ತು ಅಷ್ಟೆ. ದೆಹಲಿಯ ಜಾಮಿಯಾ ನಗರದಲ್ಲಿ ಇನ್ನಷ್ಟು ದಾಳಿ ಮಾಡಲು ಸಜ್ಜಾಗಿದ್ದ ಇಂಡಿಯನ್ ಮುಜಾಹಿದೀನ್ ಉಗ್ರರು ಬಾಟ್ಲಾ ಹೌಸ್ ಅಪಾಟರ್್ ಮೆಂಟ್ ನಲ್ಲಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಕೂಡಲೇ ಅಪಾಟ್ರ್ ಮೆಂಟ್ ಗೆ ಬಂದ ದೆಹಲಿ ಪೊಲಿಸರಿಗೂ ಮತ್ತು ಅಪಾಟ್ರ್ ಮೆಂಟ್ ಒಳಗಿದ್ದ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದು ಅತೀಫ್ ಅಮೀನ್ ಮತ್ತು ಮೊಹಮದ್ ಸಾಜಿದ್ ಎಂಬ ಉಗ್ರರು ಪೊಲೀಸ್ರ ಗುಂಡಿಗೆ ಬಲಿಯಾಗಿದ್ದರು. ಉಗ್ರ ಶಹಜಾಜ್ ಅಹಮದ್ ಗುಂಡಿಗೆ ಪೊಲೀಸ್ ಇನ್ಸ್ ಪೆಕ್ಟರ್ ಮೋಹನ್ ಚಂದ್ ಶರ್ಮ ಸಾವನ್ನಪ್ಪಿದ್ದರು. ಈ ವೇಳೆ ಇಬ್ಬರು ಇಂಡಿಯನ್ ಮುಜಾಹಿದೀನ್ ಉಗ್ರರನ್ನ ಬಂಧಿಸಲಾಗಿತ್ತು. ಘಟನೆ ನಡೆದು ಕೆಲ ದಿನಗಳಾಗುತ್ತಲೇ ಇದು ನಖಲಿ ಎನ್ ಕೌಂಟರ್ ಎಂದು ಹೂಂಕರಿಸಿದ್ದು ಕಾಂಗ್ರೆಸ್ ನ ಕೂಗುಮಾರಿ ದಿಗ್ವಿಜಯ್ ಸಿಂಗ್. ಇದಕ್ಕೆ ಹೌದೌದು ಅಂತ ದ್ವನಿಗೂಡಿಸಿದ್ದು ಅಮೂಲ್ ಬೇಬಿ ರಾಹುಲ್ ಗಾಂದಿ. ಇದ್ರ ಜೊತೆಗೆ ಎಸ್ ಪಿ ಮತ್ತು ಬಿಎಸ್ ಪಿ ಯಂತಹ ಬೇಜವಾಬ್ದಾರಿಯ ಪಕ್ಷಗಳೂ ಇದು ನಖಲಿ ಎನ್ ಕಂಟರ್ ಎಂದು ಬೊಬ್ಬೆ ಇಟ್ಟುಬಿಟ್ಟಿದ್ದವು. ಹಾಗೆ ಬೊಬ್ಬೆ ಇಡುವುದಕ್ಕೆ ಕಾರಣ ಕೇವಲ ಮುಸ್ಲಿಮರ ಓಲೈಕೆಗಾಗಿ ಬಿಟ್ಟರೇ ಬೇರೇನೂ ಅಲ್ಲ. ಆದ್ರೆ ಈಗ ಸುಪ್ರೀಂ ಕೋಟ್ರ್ ಇದು ಅಸಲಿ ಎನ್ ಕಂಟರ್ ಅಂತ ತೀಪರ್ು ನೀಡಿ ದಿಗ್ವಿಜಯ್ ಸಿಂಗ್ ಮುಖಕ್ಕೆ ಕ್ಯಾಕರಿಸಿ ಹುಗಿದು ಮುಖ ಹೊರೆಸಿಕೊಳ್ಳಲೂ ಆಗದಂತೆ ಮಾಡಿಬಿಟ್ಟಿದೆ. 

Image

ಜರ್ಮನ್ ಬೇಕರಿಯಲ್ಲಿ ಸಿಸಿಟಿವಿಯಲ್ಲಿ ಸೆರೆಯಗಿದ್ದ ಯಾಸಿನ್ ಭಟ್ಕಳ್

ಈ ಘಟನೆಯ ನಂತರ ಇಂಡಿಯನ್ ಮುಜಾಹಿದೀನ್ ದೇಶಾಧ್ಯಂತ ತನ್ನ ಜಾಲವನ್ನ ವಿಸ್ತರಿಸಿಕೊಂಡು ದೇಶದ ಹಲವೆಡೆ ಅಮಾಯಕರ ನೆತ್ತರ ಹರಿಸಿತ್ತು. 2008 ರ ವರೆಗೆ ಇಕ್ಬಾಲ್ ಭಟ್ಕಳ್ ಇಂಡಿಯನ್ ಮುಜಾಹಿದೀನ್ ಸಂಘಟನೆಯನ್ನ ಮುನ್ನೆಡಿಸ್ತಾಯಿದ್ದ. ಆದ್ರೆ ಬಾಟ್ಲಾ ಎನ್ ಕಂಟರ್ ನಡೆದ ನಂತ್ರ ಇಕ್ಬಾಲ್ ಮತ್ತು ರಿಯಾಝ್ ಭಟ್ಕಳ್ ಪಾಕಿಸ್ತಾನಕ್ಕೆ ಪರಾರಿಯಾದ್ರು. ಆ ನಂತ್ರ ಭಾರತದಲ್ಲಿ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಹೊಣೆ ಹೊತ್ತಿದ್ದು ಇದೇ ಯಾಸಿನ್ ಭಟ್ಕಳ್. 2008 ಕ್ಕೂ ಮೊದಲು ದೆಹಲಿ ಸರಣಿ ಸ್ಪೋಟ(2005), ಉತ್ತರಪ್ರದೇಶದಲ್ಲಿನ ಸ್ಪೋಟ (2002 ಮತ್ತು 2007), ಹೈದ್ರಾಬಾದ್ ಲುಂಬಿನಿ ಗಾರ್ಡನ್ ಸ್ಪೋಟ(2007) ಜೈಪುರ ಬಾಂಬ್ ಸ್ಪೋಟ(2008), ಅದಮದಾಬಾದ್ ಸರಣಿ ಸ್ಪೋಟ(2008) ಗಳಲ್ಲಿ ಇಂಡಿಯನ್ ಮುಜಾಹಿದೀನ್ ಕೈವಾಡವಿತ್ತು.  
ಆದ್ರೆ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಶಕ್ತಿ ಭಾರತೀಯ ತನಿಖಾ ಸಂಸ್ಥೆಗಳಿಗೆ ಅರಿವಾಗಿದ್ದು 2008 ರ ದೆಹಲಿ ಸರಣಿ ಸ್ಪೋಟದ ನಂತರ. ಆ ನಂತ್ರ 2010 ರಲ್ಲಿ ನಡೆದ ಜರ್ಮನ್ ಬೇಕರಿಯಲ್ಲಿ ನಡೆದ ಸ್ಪೋಟಕ್ಕೆ ಸ್ವತಃ ಯಾಸಿನ್ ಭಟ್ಕಳ್ ನೇ ಬಂದು ಬಾಂಬ್ ಪ್ಲಾಂಟ್ ಮಾಡಿ ಹೋಗಿದ್ದ. ಆ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿಯೂ ಕೂಡ ದಾಖಲಾಗಿದ್ದವು. ಇನ್ನು 2010 ರಲ್ಲಿ ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಸ್ಪೊಟದಲ್ಲಿಯೂ ಇಂಡಿಯನ್ ಮುಜಾಹಿದೀನ್ ಸಂಘಟನೆ ಕೈವಾಡವಿತ್ತು. 2011 ರಲ್ಲಿ ನಡೆದ ಮುಂಬೈ ತ್ರಿವಳಿ ಸ್ಪೋಟ ಮತ್ತು ಇತ್ತೀಚೆಗೆ ಹೈದ್ರಾಬಾದ್ ನ ದಿಲ್ ಶುಕ್ ನಗರದಲ್ಲಿ ನಡೆದ ಸ್ಪೊಟಕ್ಕೂ ಸ್ವತಃ ಯಾಸಿನ್ ಭಟ್ಕಳ್ ನೇ ಬಾಂಬ್ ಇಟ್ಟಿದ್ದ. ಕೆಲ ಉಗ್ರರು ದೂರದ ಪಾಕಿಸ್ತಾನದಲ್ಲಿ ಕೂತು ಇಲ್ಲಿ ಬಾಂಬ್ ಬ್ಲಾಸ್ಟ್ ಮಾಡುವುದರಲ್ಲಿ ನಿರತನಾಗಿದ್ದರೆ ಯಾಸಿನ್ ಭಟ್ಕಳ್ ಮಾತ್ರ ಸ್ವತಃ ಪೀಲ್ಡ್ ಗೆ ಇಳಿದು ಕಾಯರ್ಾಚರಣೆ ಮಾಡ್ತಾಯಿದ್ದ. ಕೋಟಾನೋಟು ಜಾಲ ಮತ್ತು ಹವಾಲ ಮೂಲಕ ಸಂಘಟನೆಗೆ ಬೇಕಾದ ಹಣವನ್ನ ವ್ಯವಸ್ಥೆ ಮಾಡುತ್ತಿದ್ದ. ಇದರ ಜೊತೆಗೆ ಬಾಂಬ್ ತಯಾರಿಸುವುದರಲ್ಲಿಯೂ ಈತ ನಿಪುಣನಾಗಿದ್ದ. ಮುಸ್ಲಿಂ ಯುವಕರ ತಲೆಗೆ ಜಿಹಾದ್ ನ ಉಪದೇಶ ಮಾಡಿ ಇಂಡಿಯನ್ ಮುಜಾಹಿದೀನ್ ಸಂಘಟನೆಗೆ ಸೇರುವಂತೆ ಮಾಡುವುದರಲ್ಲಿಯೂ ಈತ ಯಶಸ್ವಿಯಾಗಿದ್ದ. ಭಾರತದ ಒಟ್ಟು 12 ರಾಜ್ಯಗಳಲ್ಲಿ ವ್ಯವಸ್ಥಿತವಾಗಿ ತನ್ನ ಉಗ್ರವಾದಿ ಜಾಲವನ್ನ ವಿಸ್ತರಿಸಿದ್ದ. ಇಲ್ಲಿಯವರೆಗೂ ಇಂಡಿಯನ್ ಮುಜಾಹಿದೀನ್ ಸಂಘಟನೆ ನಡೆಸಿದ ಸ್ಪೋಟಗಳಿಗೆ ಭಾರತದಲ್ಲಿ ಬಲಿಯಾದವರ ಸಂಖ್ಯೆ 35ಒ ಕ್ಕೂ ಅಧಿಕ.
 Image

     ಹಾಗೆ ಭಾರತದ ನೆಲದಲ್ಲಿಯೇ ಹುಟ್ಟಿ, ಇಲ್ಲಿನ ಅನ್ನವನ್ನೇ ತಿಂದು ದೇಶಕ್ಕೇ ಚೂರಿ ಇರಿದುಬಿಟ್ಟಿದ್ದ ಈ ಯಾಸಿನ್ ಭಟ್ಕಳ್. ಹಾಗೆ ಮುನ್ನೂರ ಐವತ್ತಕ್ಕೂ ಹೆಚ್ಚು ಅಮಾಯಕರನ್ನ ಕೊಂದ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಕಿಂಗ್ ಪಿನ್ ಯಾಸಿನ್ ಭಟ್ಕಳ್ ನನ್ನ ಪೊಲಿಸ್ರು ಕೆಡ್ಡಾಕ್ಕೆ ಕೆಡವಿದ್ದಾರೆ. ಇತ್ತೀಚೆಗಷ್ಟೇ ಲಷ್ಕರ್ ಇ ತೊಯಿಬಾ ದ ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಕರೀ ಅಲಿಯಾಸ್ ತುಂಡಾ ನನ್ನ ಬಂಧಿಸಿದ ನಂತ್ರ ಭಾರತೀಯ ಪೊಲಿಸರು ಭರ್ಜರಿ ಬೇಟೆಯಾಡಿದ್ದಾರೆ. ಈ ಇಬ್ಬರೂ ಉಗ್ರರಿಗೆ ಎಲ್ಲ ರೀತಿಯಿಂದಲೂ ಸಹಾಯ, ಸಹಕಾರ ನೀಡಿದ್ದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ ಎಸ್ ಐ. ಈ ಮೊದಲು 2009 ರಲ್ಲಿ ಕೋಲ್ಕತ್ತಾ ಪೊಲಿಸ್ರು ಯಾಸಿನ್ ಭಟ್ಕಳ್ ನನ್ನ ಕೋಟಾ ನೋಟು ಪ್ರಕರಣದಲ್ಲಿ ಬಂಧಿಸಿದ್ರು. ಆದ್ರೆ ಕೊಲ್ಕತ್ತಾ ಪೊಲೀಸರಿಗೆ ಈತನೇ ಯಾಸಿನ್ ಭಟ್ಕಳ್ ಅನ್ನೋದು ಗೊತ್ತೇ ಆಗಲಿಲ್ಲ. ಬುಲ್ಲಾ ಮಲಿಕ್ ಎಂದು ಸುಳ್ಳು ಹೇಳಿ ಆರು ದಿನ ಜೈಲಿನಲ್ಲಿದ್ದು ಆ ನಂತ್ರ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದ. ಕೊಲ್ಕತ್ತಾ ಪೊಲಿಸ್ರಿಗೆ ತಾವು ಹಿಡಿದದ್ದು ಮೋಸ್ಟ್ ವಾಂಟೆಡ್ ಉಗ್ರ ಯಾಸಿನ್ ಭಟ್ಕಳ್ ಅನ್ನೋದು ಗೊತ್ತಾಗುವಷ್ಟರಲ್ಲಿ ಆತ ಮತ್ತೊಂದು ಬಾಂಬ್ ಸ್ಪೊಟಕ್ಕೆ ಸಜ್ಜಾಗಿ ನಿಂತಿದ್ದ. ಕೊಲ್ಕತ್ತಾ ಪೊಲೀಸ್ರು ಒಂದು ಚೂರೇ ಚೂರು ಕ್ರಾಸ್ ಚೆಕ್ ಮಾಡಿದ್ರೂ ನಾಲ್ಕು ವರ್ಷಕ್ಕೆ ಮೊದಲೇ ಯಾಸಿನ್ ಕಂಬಿ ಏಣಿಸಬೇಕಿತ್ತು. ಆದ್ರೆ ಅದು ಆಗಲಿಲ್ಲ. ಪೊಲೀಸ್ ವ್ಯವಸ್ಥೆಯ ಸಮನ್ವಯದ ಕೊರತೆಯಿಂದಾಗಿ ಅವತ್ತು ಯಾಸಿನ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ನ್ಯಾಯಾಲಯದ ಕಣ್ಣಿಗೆ ಮಣ್ಣೆರಚಿದ್ದ.

Image

ಕಾಂಗ್ರೆಸ್ ನ ಕೂಗುಮಾರಿ ದಿಗ್ವಿಜಯ್ ಸಿಂಗ್.

ಕೇವಲ ಇಪ್ಪತ್ತು ದಿನಗಳ ಅಂತರದಲ್ಲಿ ಇಬ್ಬರು ಮೋಸ್ಟ್ ವಾಂಟೆಡ್ ಉಗ್ರರು ಪೊಲಿಸ್ರ ಅತಿಥಿಯಾಗಿದ್ರೂ ಈ ಬಗ್ಗೆ ನಮ್ಮ ಕೂಗುಮಾರಿ ದಿಗ್ವಿಜಯ್ ಸಿಂಗ್ ಯಾವುದೇ ಹೇಳಿಕೆಯನ್ನೂ ನೀಡದೆ ಮೌನವಾಗಿ ಉಳಿದುಬಿಟ್ಟಿದೆ. ಅದೇ ಯಾರಾದ್ರೂ ಒಬ್ಬೇ ಒಬ್ಬ ಹಿಂದುವನ್ನ ಭಯೋತ್ಪಾದನಾ ಆರೋಪದ ಅನುಮಾನದ ಮೇಲೆ ವಿಚಾರಣೆಗೆ ಅಂತೇನಾದ್ರೂ ಪೊಲೀಸ್ರು ಕರೆದೊಯ್ದಿದ್ರೆ ಸಾಕಿತ್ತಲ್ಲ. ಈ ದಿಗವಿಜಯ್ ಸಿಂಗ್ ಎಂಬ ಬೊಗಳೆ ವ್ಯಕ್ತಿ ಹೂಂಕರಿಸಿಬಿಡುತ್ತಿದ್ದ. ಬೋದಗಯಾ ಸ್ಪೊಟ ನಡೆದ ನಂತ್ರ ಇದೇ ದಿಗ್ವಿಜಯ್ ಸಿಂಗ್ ಹೇಳಿದ್ದೇನು ಗೊತ್ತಾ? ಮೋದಿ ಆಪ್ತ ಅಮಿತ್ ಷಾ ಅಯೋದ್ಯೆಗೆ ಬೇಟಿ ನೀಡಿದ ನಂತರವೇ ಈ ಸ್ಪೊಟ ನಡೆದಿದೆ. ಇದರಲ್ಲಿ ಸಮಘ ಪರಿವಾರದ ಕೈವಾಡ ಇದೆ ಅಂತ. ದೆಶದ ಯಾವ ತನಿಖಾ ಏಜನ್ಸಿಗೂ ಸಿಗದ ಮಾಹಿತಿಗಳು ಈ ಕೂಗುಮಾರಿಗೆ ಸಿಕ್ಕುಬಿಡುತ್ತವೆ. ಭಯೋತ್ಪಾದನೆಯಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಮಾತನಾಡುವಾಗ ಸ್ವಲ್ಪವಾದ್ರೂ ಜವಾಬ್ದಾರಿಯಿಂದ ವತರ್ಿಸುವ ಪ್ರಜ್ಞೆಯೂ ಇಲ್ಲದ ದಿಗ್ವಿಜಯ್ ಸಿಂಗ್ ಬಾಯಿಗೆ ಬಂದಂತೆ ಹುಚ್ಚು ಹುಚ್ಚಾಗಿ ಮಾತನಾಡುತ್ತಾರೆ. ಆದ್ರೆ ಈಗ ನೋಡಿ 20 ದಿನಗಳಿಂದ ಪಾಪ ದಿಗ್ವಿಜಯ್ ಬಾಯಿಗೆ ಪ್ಲಾಸ್ಟರ್ ಹಾಕಿದ್ದರೇನೊ ಎಂಬಂತೆ ಮೌನ ವಹಿಸಿದ್ದಾರೆ. ಇಂತವರೆಲ್ಲಾ ನಮ್ಮ ದೇಶದ ರಾಜಕಾರಣಿಗಳು ಅಂತ ಹೇಳಿಕೊಳ್ಲೋಕೆ ನಮಗೆ ನಾಚಿಕೆಯಾಗಬೇಕು. ದೇಶದ ವಿಷಯ ಬಂದಾಗ ಮೊದಲು ಭಾರತೀಯನಾಗುವುದನ್ನ ಬಿಟ್ಟು ನೀನು ಹಿಂದೂ, ನೀನು ಮುಸ್ಲಿಂ ಅಂತ ಜಾತಿ, ಧರ್ಮದ ಆದಾರದ ಮೇಲೆ ದೇಶವನ್ನ ಒಡೆದು ವೋಟ್ ಬ್ಯಾಂಕ್ ಪೊಲಿಟಿಕ್ಸ್ ಮಾಡುವುದನ್ನ ಈ ರಾಜಕೀಯ ಪಕ್ಷಗಳು ನಿಲ್ಲಿಸಲಿ. ಇನ್ನಾದ್ರೂ ಈ ದಿಗ್ವಿಜಯ್ ಸಿಂಗ್ ನಂತಹ ಕೂಗುಮಾರಿಗಳಿಗೆ ಬುದ್ದಿ ಬರಲಿ….

ಅಮುಲ್ ಬೇಬಿ ರಾಹುಲ್ ಮದುವೆ ಬಗ್ಗೆ ಫೇಸ್‌ಬಕ್ ನಲ್ಲಿ ಅಂತರ್ ರಾಷ್ಟ್ರೀಯ ಚರ್ಚೆ ನಡೀತಾಯಿದೆ……..

ಅಮುಲ್ ಬೇಬಿ ರಾಹುಲ್ ಮದುವೆ ಬಗ್ಗೆ ಫೇಸ್‌ಬಕ್ ನಲ್ಲಿ ಅಂತರ್ ರಾಷ್ಟ್ರೀಯ ಚರ್ಚೆ ನಡೀತಾಯಿದೆ........

ಅಮುಲ್ ಬೇಬಿ ರಾಹುಲ್ ಮದುವೆ ಬಗ್ಗೆ ಫೇಸ್‌ಬಕ್ ನಲ್ಲಿ ಅಂತರ್ ರಾಷ್ಟ್ರೀಯ ಚರ್ಚೆ ನಡೀತಾಯಿದೆ……..

ಅದು ಅಸಹಾಯಕ ಹೆಣ್ಣುಮಗಳ ಮೇಲೆ ಮಾನವೀಯತೆಯನ್ನೇ ಮರೆತ ಕಾಮಾಂಧರ ಅಟ್ಟಹಾಸ…..

ಅದು ಅಸಹಾಯಕ ಹೆಣ್ಣುಮಗಳ ಮೇಲೆ ಮಾನವೀಯತೆಯನ್ನೇ ಮರೆತ ಕಾಮಾಂಧರ ಅಟ್ಟಹಾಸ.....

ಅತ್ಯಾಚಾರ ಪ್ರಕರಣಗಳಿಗೆ ನ್ಯಾಯ ದೊರಕಿಸಿಕೊಡಲು , ಅನ್ಯಾಯದ ವಿರುದ್ಧ ದ್ವನಿ ಎತ್ತುತ್ತಿದ್ದ ಮಾಧ್ಯಮದ ಹೆಣ್ಣಮಗಳ ಮೇಲೆಯೇ ಅತ್ಯಾಚಾರವೊಂದು ನಡೆದು ಹೋಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅಂತದ್ದೊಂದು ಭಯಾನಕ ಘಟನೆ ಮುಂಬೈನಲ್ಲಿ ನಡೆದುಹೋಗಿದೆ. ಅದು ಅಸಹಾಯಕ ಹೆಣ್ಣುಮಗಳ ಮೇಲೆ ಮಾನವೀಯತೆಯನ್ನೇ ಮರೆತ ಕಾಮಾಂಧರ ಅಟ್ಟಹಾಸ. ದೆಹಲಿಯಲ್ಲಿ ನಡೆದ ನಿರ್ಭಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತ್ರ ಅದೇ ರೀತಿಯ ಮತ್ತೊಂದು ಘಟನೆ ದೇಶದ ವಾಣಿಜ್ಯ ರಾಜಧಾನಿಯಲ್ಲಿ ಅದ್ದಿಲ್ಲದೇ ನಡೆದುಹೋಗಿದೆ. ಆ ಘಟನೆಯಲ್ಲಿ ಭಾಗಿಯಾದ ಅಸಹ್ಯ ಕಾಮಾಂಧರನ್ನ ಗಲ್ಲಿಗೆ ಹಾಕಬೇಕು ಅಂತ ದೇಶಾಧ್ಯಂತ ಹೋರಾಟದ ಕಿಚ್ಚನ್ನು ಹೊತ್ತಿಸಿದವರು ನಾವೇ ಮಾಧ್ಯಮದ ಮಂದಿ. ಈಗ ಮತ್ತೆ ಅಂತಹದ್ದೇ ಹೋರಾಟವನ್ನ ನಾವು ಮಾಡುವಂತಹ ಸ್ಥಿತಿ ಬಂದಿದೆ. ಮುಂಬೈನಲ್ಲಿ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ನಿರ್ಲಜ್ಜ ಕಾಮಾಂಧರಿಗೆ ಗಲ್ಲು ಶಿಕ್ಷೆಯಾಗಲೇಬೇಕು. ಈ ಒತ್ತಾಯವನ್ನ ನಾವೆಲ್ಲರೂ ಸೇರಿ ಸಾಂಕೇತಿಕವಾಗಿ ಮಾಡಿದರೆ ಒಳ್ಳೆಯದು. ಹಾಗಾಗಿ ಇದೇ ಸೋಮುವಾರ ಅಂದರೆ 26 ನೇ ತಾರೀಕು ಬೆಳಗ್ಗೆ 11.30 ಕ್ಕೆ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಆಗ್ರಹ ಪತ್ರ ನೀಡಿ ಅದನ್ನ ಕೇಂದ್ರ ಸಕರ್ಾರಕ್ಕೆ ತಲುಪಿಸಲು ಕೇಳಿಕೊಳ್ಳಳು ಬೆಂಗಳೂರಿನ ಕ್ರೈಂ ವರದಿಗಾರರು ಸಿದ್ದರಾಗಿದ್ದೇವೆ. ಈ ಮೂಲಕ ನಮ್ಮದೇ ಮನೆಯ ಹೆಣ್ಣುಮಗಳಿಗೆ ಬೆಂಬಲ ವ್ಯಕ್ತಪಡಿಸಲು ನಾವು ಮುಂದಾಗಬೇಕಿದೆ. ಹಾಗಾಗಿ ಎಲ್ಲ ವರದಿಗಾರರು ದಯವಿಟ್ಟು ಬಿಡುವು ಮಾಡಿಕೊಂಡು ಸೋಮುವಾರ ರಾಜಭವನಕ್ಕೆ ಬರಬೇಕೆಂದು ಬೆಂಗಳೂರಿನ ಕ್ರೈಂ ವರದಿಗಾರರ ತಂಡ ಮನವಿ ಮಾಡಿಕೊಳ್ಳುತ್ತದೆ….

ಸುಳ್ಳಿನ ಮಹಾಕಾವ್ಯವನ್ನೇ ಬರೆದು ಅದನ್ನೇ ಬಂಡವಾಳ ಮಾಡಿಕೊಂಡವರಿಗೆ ಕಾಲ ಸರಿಯಾದ ಉತ್ತರವನ್ನೇ ನೀಡಿದೆ….

ಆ ಮನುಷ್ಯ ಮಹಾನ್ ಸುಳ್ಳ. ಆ ಸುಳ್ಳನ ಜೊತೆಗೊಂದಿಷ್ಟು ಬಾಲಂಗೊಚಿಗಳು. ಆತನಿಗೆ ಸುಳ್ಳು ಹೇಳುವುದೇ ಕೆಲಸ. ಆ ಬಾಲಂಗೋಚಿಗಳಿಗೆ ಅದನ್ನ ಕೇಳಿ ಇತರರಿಗೆ ಹೇಳುವ ಕೆಲಸ. ಮನುಷ್ಯ ಮಾತ್ರರಾದವರು ಹೇಳಲಿಕ್ಕಾದಷ್ಟು ಸುಳ್ಳನ್ನ ಆತನೊಬ್ಬನೇ ಹೇಳುತ್ತಾನೆ. ಸುಳ್ಳು ಹೇಳುವ ಬಗ್ಗೆ ಏನಾದ್ರೂ ನೊಬೆಲ್ ಪ್ರಶಸ್ತಿ ಕೊಡೊದಿದ್ದರೆ ಅದನ್ನ ಆತನಿಗೇ ಕೊಡಬೇಕು. ಯಾಕಂದ್ರೆ ಜಗತ್ತಿನಲ್ಲಿ ಸತ್ಯದ ತಲೆ ಮೇಲೆ ಹೊಡೆದ ಹಾಗೆ ಅಷ್ಟು ಕರಾರುವಕ್ಕಾಗಿ ಸುಳ್ಳು ಹೇಳಲು ಬಹುಶಃ ಯಾರಿಂದಲೂ ಸಾಧ್ಯವಿಲ್ಲವೇನೊ. ಆ ಮನುಷ್ಯ ಏನಾದ್ರೂ ಚೈನ್ ಲಿಂಕ್ ಮನಿ ಸ್ಕೀಮ್ ಶುರು ಮಾಡ್ಬಿಟ್ರೆ ಒಂದು ತಿಂಗಳಿಗೆ ಏನಿಲ್ಲವೆಂದ್ರೂ ಐನೂರು ಕೋಟಿಯಷ್ಟು ಹಣ ಸಂಗ್ರಹಿಸಿಬಿಡಬಹುದು. ಯಾಕಂದ್ರೆ ಆತ ಹೇಳುವ ಸುಳ್ಳಿಗೆ ಇರುವ ತಾಕತ್ತೇ ಅಂತಹದ್ದು. ವಾಸ್ತವದ ಅರ್ಥವೇ ಗೊತ್ತಿಲ್ಲದ ಆ ಮನುಷನಿಗೆ ಭ್ರಮೆಯೇ ಜೀವನ. ಆ ಮನುಷ್ಯನಿಗೆ ದಿನ ಆರಂಭವಾಗುವುದೇ ಸುಳ್ಳಿನೊಂದಿಗೆ. ಇನ್ನು ಆತನ ಬಾಲಂಗೋಚಿಗಳಿಗೆ ಆ ಸುಳ್ಳು ಕೇಳುವುದರಿಂದಲೇ ದಿನ ಕಳೆಯೋದು. ಇಂತಿಪ್ಪ ಸುಳ್ಳಿನ ಸರದಾರರು ಆಟವಾಡಿದ್ದು ಕನಸು ಕಟ್ಟಿಕೊಂಡವರೊಂದಿಗೆ. ಸುಳ್ಳು ಹೇಳುವವರನ್ನ ನಂಬಬಹುದು. ಆದ್ರೆ ಸುಳ್ಳಿನ ಸರಮಾಲೆಯನ್ನೇ ಹೇಳುವುವವರನ್ನ ನಂಬುವುದಾದರೂ ಹೇಗೆ. ಮುಂದೆ ಲೈಟಾಗಿ ತಲೆ ಸವರಿ ನಿನ್ನ ಬಿಟ್ರೆ ಮತ್ತಾರೂ ಇಲ್ಲ ಅಂದು ಹಿಂದೆ ಅಸಹ್ಯದ ಕೆಲಸ ಮಾಡಿದರೆ ಆ ಮನುಷ್ಯನ ಬಗ್ಗೆ ಏನು ತಾನೇ ಮಾಡಲು ಸಾಧ್ಯ. ಆತ ಹೇಳುವುದು ಅಪ್ಪಟ ಸುಳ್ಳು ಮತ್ತು ಅದು ಯಾವತ್ತಿಗೂ ಸಾಧ್ಯವಿರದ ಮಾತು ಅಂತ ಕೇಳಿದಾಕ್ಷಣ ಅನ್ನಿಸಿಬಿಡುತ್ತೆ. ಆದ್ರೆ ಆತ ಆ ಸುಳ್ಳನ್ನ ಪ್ರೆಸೆಂಟ್ ಮಾಡೊ ರೀತಿ ಇದೆಯಲ್ಲ. ಅದನ್ನ ನೋಡ್ಬಿಟ್ರೆ ಅದು ನಿಜವೇ ಇರಬಹುದು ಅನ್ನಿಸಿಬಿಡುತ್ತದೆ. ಹಾಗೆ ಆತ ವರ್ಷಗಟ್ಟಲೆ ಸುಳ್ಳನ್ನೇ ಹೇಳಿಕೊಂಡು ತಿರುಗಾಡಿದ. ಆ ಸುಳ್ಳನ್ನ ಬಂಡವಾಳ ಮಾಡಿಕೊಂಡ ಆತನ ಬಾಲಂಗೋಚಿಗಳು ಅದನ್ನ ತಮ್ಮ ಸ್ವಹಿತಾಸಕ್ತಿಗಾಗಿ ಕನಸು ಕಟ್ಟಿಕೊಂಡವರೊಂದಿಗೆ ಆಟವಾಡಿದರು. ಎಲ್ಲರೂ ಸುಳ್ಳನ್ನ ಹೇಳ್ತಾರೆ. ನಾನೂ ಸುಳ್ಳನ್ನ ಹೆಳ್ತೀನಿ. ಆದ್ರೆ ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇದೆಯಲ್ವಾ. ದಿನಬೆಳಗಾದ್ರೆ, ಗಂಟೆಗೊಮ್ಮೆ, ಗಳಿಗೆಗೊಮ್ಮೆ, ಕ್ಷಣಕ್ಕೊಮ್ಮೆ ಸುಳ್ಳನ್ನ ಹೇಳ್ತಾ ಹೋದ್ರೆ ಆತನನ್ನ ಯಾರೂ ನಂಬುವುದಿಲ್ಲ. ನಂಬಿಕೆಯನ್ನ ಉಳಿಸಿಕೊಳ್ಳಲಾಗದ ವ್ಯಕ್ತಿಗೆ ಎಷ್ಟೇ ಪ್ರತಿಬೆಯಿರಲಿ ಯಾರೂ ಬೆಲೆ ಕೊಡುವುದಿಲ್ಲ. ಅದನ್ನ ಆ ಮನುಷ್ಯ ಅರ್ಥ ಮಾಡಿಕೊಳ್ಳಲಿ. ಯಾರೇ ಆಗಲೀ ಯಾರೊಂದಿಗೂ, ಯಾರ ಬದುಕಿನ ಜೊತೆಗೂ ಚೆಲ್ಲಾಟವಾಡಬಾರದು. ಆದ್ರೆ ನೂರಾರು ಜನರ ಬದುಕಿನೊಂದಿಗೆ ಆ ಮನುಷ್ಯ ಚೆಲ್ಲಾಟವಾಡಿಬಿಟ್ಟ, ಆತನ ಚೆಲ್ಲಾಟಕ್ಕೆ ಕೆಲವು ಮಂದಿ ಬಾಲಂಗೋಚಿಗಳು ಜೊತೆಯೂ ಆಗಿದ್ದರು. ಅದು ತಮಗೆ ಅದ್ರಿಂದ ಏನಾದ್ರೂ ಲಾಭವಾಗಬಹುದು ಎನ್ನುವ ದುರಾಸೆಯಿಂದ. ಆದ್ರೆ ಸಮಯ ಎಲ್ಲದಕ್ಕೂ ಉತ್ತರ ಕೊಟ್ಟೇ ಕೊಡುತ್ತದೆ ಅಲ್ವಾ. ಉತ್ತರ ಕೊಡುವ ಗಳಿಗೆ ಕೂಡ ಬಂದುಬಿಟ್ಟಿದೆ. ಸುಳ್ಳನ್ನೇ ಬಂಡವಾಳ ಮಾಡಿಕೊಂಡಿದ್ದ ಆತ ಆತನಿಗೂ ಕಾಲ ಸರಿಯಾದ ಉತ್ತರವನ್ನೇ ಕೊಟ್ಟಿದೆ. ಆತ ಹೇಳುವುದು ಸುಳ್ಳು ಅಂತ ಗೊತ್ತಿದ್ದೂ ಉಳಿದವರನ್ನ ನಂಬಿಸಿದವರಿಗೂ ಈಗ ಉತ್ತರ ಸಿಕ್ಕಿದೆ.  ಇನ್ನಾದ್ರೂ ಆತನಿಗೆ ಮತ್ತು ಆತನ ಬಾಲಂಗೋಚಿಗಳಿಗೆ ಬುದ್ದಿ ಬರಲಿ.

%d bloggers like this: