ರಾಹುಲ್ ಗಾಂಧಿ ಘರ್ ವಾಪಸಿಗೆ ಕಾಂಗ್ರೆಸಿಗರ ಸಂಭ್ರಮ..!!

image

ರಾಹುಲ್ ಘರ್ ವಾಪಸಿ..!!!

ಕಳೆದ ಐವತ್ತಾರು ದಿನಗಳಿಂದ ನಾಪತ್ತೆಯಾಗಿದ್ದ ರಾಹುಲ್ ಗಾಂಧಿ ತಮ್ಮ ಸುದೀರ್ಘ ರಜೆ ಮುಗಿಸಿ ಮರಳಿದ್ದಾರೆ. ರಾಹುಲ್ ಘರ್ ವಾಪಸಿ ಗೆ ಕಾಂಗ್ರೆಸ್ಸಿಗರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಎರೆಡು ತಿಂಗಳ ಕಾಲ ನಾಪತ್ತೆಯಾಗಿದ್ದ ರಾಹುಲ್ ಅದೇನು ಮಹಾನ್ ಸಾಧನೆ ಮಾಡಿದ್ದಾರೆ ಅಂತ ಈ ಕಾಂಗ್ರೆಸ್ಸಿಗರು ಸಂಭ್ರಮಿಸುತ್ತಿದ್ದಾರೋ ಅರ್ಥವಾಗುತ್ತಿಲ್ಲ. ಯುದ್ದ ಗೆದ್ದ ಸೈನಿಕರನ್ನ, ಆಟ ಗೆದ್ದ ಸಾಧಕರನ್ನ, ಪ್ರಶಸ್ತಿ ಪಡೆದ ಕಲಾವಿಧರನ್ನ ಸಂಭ್ರಮಿಸಿ ಸ್ವಾಗತಿಸೋದರಲ್ಲಿ ಅರ್ಥವಿದೆ. ಆದ್ರೆ ಇಡೀ ದೇಶ ಬಜೆಟ್ ಅಧಿವೇಶನಕ್ಕೆ ಸಿದ್ದವಾಗುತ್ತಿದ್ದಾಗ ಇದ್ದಕ್ಕಿದ್ದಂತೆ ನಾಪತ್ತೆಯಾದ ರಾಹುಲ್ ಗಾಂಧಿಯನ್ನ ಇಷ್ಟು ಸಂಭ್ರಮಿಸಿಕೊಂಡು ಸ್ವಾಗತಿಸಬೇಕಾ…? ಹಾಗಿದ್ರೆ ಎರೆಡು ತಿಂಗಳ ಅವದಿಯಲ್ಲಿ ರಾಹುಲ್ ಗಾಂಧಿ ಸಾಧಿಸಿದ್ದಾದ್ರೂ ಏನು..? ಯಾವ ಕಾಂಗ್ರೆಸಿಗನ ಬಳಿಯೂ ಇದಕ್ಕೆ ಉತ್ತರವಿಲ್ಲ. ದೇಶದ ಇತಿಹಾಸದಲ್ಲಿ ಯಾವುದೇ ಒಂದು ಪಕ್ಷದ ನಾಯಕ ಇಷ್ಟು ದಿನ ನಾಪತ್ತೆಯಾಗಿದ್ದ ಉದಾಹರಣೆಗಳಿಲ್ಲ. ಕಾಂಗ್ರೆಸ್ ನ ಪ್ರಮುಖರಿಗೇ ರಾಹುಲ್ ಗಾಂಧಿ ಎಲ್ಲಿದ್ದರು ಅನ್ನೋದು ಗೊತ್ತಿಲ್ಲ. ರಾಹುಲ್ ಗಾಂಧಿ ಇವತ್ತು ಬರ್ತಾರೆ, ನಾಳೆ ಬರ್ತಾರೆ ಅಂತ ಒಂದಷ್ಟು ದಿನ ಹೇಳಿಕೊಂಡು ಕಾಲತಳ್ಳಿದ ಕಾಂಗ್ರೆಸಿಗರಿಗೂ ರಾಹುಲ್ ಗಾಂಧಿ ಹೋಗಿದ್ದಾದ್ರೂ ಎಲ್ಲಿಗೆ ಅನ್ನೋ ಕುತೂಹಲ ಹುಟ್ಟಿದ್ದು ಹೌದು. ಆದ್ರೆ ಭಟ್ಟಂಗಿ ಕಾಂಗ್ರೆಸ್ಸಿಗರ ಥಿಯರಿಗಳಿಗೇನೂ ಕಡಿಮೆಯಿಲ್ಲ. ರಾಹುಲ್ ಗಾಂಧಿ ಪಕ್ಷವನ್ನ ಸಮರ್ಥವಾಗಿ ಮುನ್ನೆಡೆಸುವ ದೃಷ್ಠಿಯಿಂದ ಚಿಂತನ ಮಂಥನಕ್ಕೆ ಹೋಗಿದ್ದಾರೆ ಅಂತ ಕಥೆ ಕಟ್ಟಲಾಯಿತು. ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಮುಖಭಂಗವಾದಾಗ ನಡೆಯದ ಚಿಂತನ ಮಂಥನ ಈಗ ಮಾಡುತ್ತಿದ್ದಾರಂತೆ ರಾಹುಲ್ ಗಾಂಧಿ. ಹಾಗಂತ ಕಾಂಗ್ರೆಸ್ಸಿಗರು ಪುಂಗಿ ಊದುತ್ತಿದ್ದಾರೆ. ಯಾವೊಬ್ಬ ಕಾಂಗ್ರೆಸ್ಸಿಗನಿಗೂ ರಾಹುಲ್ ಗಾಂಧಿ ಕಳೆದ ಎರೆಡು ತಿಂಗಳಿಂದ ಎಲ್ಲಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ. ಎಲ್ಲ ವಿರೋಧ ಪಕ್ಷಗಳ ಮುಖಂಡರು ಬಜೆಟ್ ಅಧಿವೇಷನದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡೋಕೆ ಯೋಜನೆ ರೂಪಿಸ್ತಾಯಿದ್ರೆ ಕಾಂಗ್ರೆಸ್ ನ ಯುವರಾಜ ಮಾತ್ರ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಅದೂ ಅಧಿವೇಷನದಲ್ಲಿ ಭೂ ಸ್ವಾಧೀನ ವಿಧೇಯಕದ ತಿದ್ದುಪಡಿಯಂತಹ ಪ್ರಮುಖ ವಿಚಾರದ ಬಗ್ಗೆ ಚರ್ಚೆಯಾಗುತ್ತಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಸಂಸತ್ ಗೆ ಬಂಕ್ ಹಾಕಿದ್ರು. ರಾಹುಲ್ ಗಾಂಧಿ ರಜೆಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆದೇ ರಜೆ ಪಡೆದಿದ್ದಾರೆ ಅಂತ ಕಾಂಗ್ರೆಸಿಗರು ನಾಚಿಕೆಯಿಲ್ಲದೆ ಹೇಳಿಕೊಂಡು ಓಡಾಡಿದರು. ಅಮ್ಮ ಮಗನ ಪಾರ್ಟಿಯಲ್ಲಿ ರಜೆ ಕೊಡುವವರು ಯಾರು, ತಗೊಳ್ಳೋರು ಯಾರು..? ರಾಹುಲ್ ಗಾಂಧಿ ಎರೆಡು ತಿಂಗಳು ಎಲ್ಲಿದ್ದರು ಅನ್ನೋ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಆದ್ರೆ ಈಗ ರಾಹುಲ್ ವಾಪಸ್ ಬಂದ ತಕ್ಷಣ ಕಾಂಗ್ರೆಸಿಗರು ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಪಾರಧರ್ಶಕತೆಯ ಬಗ್ಗೆ ಪುಂಕಾನುಪುಂಕವಾಗಿ ಭಾಷಣ ಮಾಡುವ ರಾಹುಲ್ ಗಾಂಧಿಗೆ ಎರೆಡು ತಿಂಗಳ ಕಾಲ ತಾನು ಎಲ್ಲಿದ್ದೆ ಅನ್ನೋದನ್ನ ಜನರ ಮುಂದೆ ಹೇಳುವ ದೈರ್ಯವಿಲ್ಲ. ಅಷ್ಟು ರಹಸ್ಯವಾಗಿ ಎರೆಡು ತಿಂಗಳ ಕಾಲ ಇರಬೇಕಾದ ಅವಶ್ಯಕತೆಯಾದ್ರೂ ಇದೆಯಾ… ಒಬ್ಬ ಜನನಾಯಕ ಇರಬೇಕಾದ ರೀತಿಯಾ ಇದೆ. ಕಾಂಗ್ರೆಸ್ಸಿಗರು ಇದು ರಾಹುಲ್ ದ ವಯಕ್ತಿಕ ವಿಚಾರ, ಪ್ರೈವಸಿಯ ವಿಚಾರ ಅಂತಾರೆ. ಪ್ರೈವಸಿಗೂ, ಸೀಕ್ರೆಸಿಗೂ ವ್ಯತ್ಯಾಸ ಇದೆ. ರಾಹುಲ್ ಗಾಂಧಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರೆ ಯಾರೂ ಈ ಪ್ರಶ್ನೆಗಳನ್ನ ಕೇಳುತ್ತಿರಲಿಲ್ಲ. ರಾಹುಲ್ ಗಾಂಧಿ ಈ ದೇಶದ ಸಂಸದ, ಅತ್ಯಂತ ಹಳೆಯ ಮತ್ತು ದೊಡ್ಡ ಪಕ್ಷ ಕಾಂಗ್ರೆಸ್ ನ ಉಪಾಧ್ಯಕ್ಷ. ಆಯ್ಕೆ ಮಾಡಿದ ಜನರಿಗೆ ತಮ್ಮ ಸಂಸದ ಎರೆಡು ತಿಂಗಳ ಕಾಲ ಎಲ್ಲಿ ನಾಪತ್ರೆಯಾಗಿದ್ದ ಅಂತ ಕೇಳುವ ಅಧಿಕಾರ ಇದೆ. ಜನರಿಗೆ ಉತ್ತರ ಹೇಳಬೇಕಾದ ಜವಾಬ್ದಾರಿಯೂ ರಾಹುಲ್ ಗಿದೆ. ಅಮೇತಿಯಲ್ಲಿ ರಾಹುಲ್ ರನ್ನ ಹುಡುಕಿಕೊಡಿ ಅಂತ ಪೋಸ್ಟರ್ ಗಳನ್ನ ಹಾಕುವಷ್ಟರ ಮಟ್ಟಿಗೆ ರಾಹುಲ್ ಅಲ್ಲಿನ ಜನರಿಂದ ದೂರ. ರಾಜಕೀಯವಾಗಿ ಒಬ್ಬ ವಿಪಲ ವ್ಯಕ್ತಿಯನ್ನ ಬಲವಂತವಾಗಿ ನಾಯಕನನ್ನಾಗಿ ಮಾಡಲು ಹೊರಟಿದೆ ಕಾಂಗ್ರೆಸ್. ಇದಕ್ಕೆ ಕಾಂಗ್ರೆಸ್ ಗಾಂಧಿ ಕುಟುಂಬದ ನಿಷ್ಟರು , ಭಟ್ಟಂಗಿಗಳು ಉಘೇ ಉಘೇ ಎನ್ನುತ್ತಿದ್ದಾರೆ. ರಾಹುಲ್ ಮರಳಿ ಬಂದ ತಕ್ಚಣವೇ ಅಧ್ಯಕ್ಷ ಪಟ್ಟ ಕಟ್ಟಬೇಕು ಅಂತಿದ್ದಾರೆ ದಿಗ್ವಿಜಯ್ ಸಿಂಗ್. ಇಷ್ಟುಕ್ಕೂ ರಾಹುಲ್ ಗಾಂಧಿಯ ಇಷ್ಟುದಿನದ ರಾಜಕೀಯ ಜೀವನದಲ್ಲಿ ಸಾಧಿಸಿದ್ದಾದ್ರೂ ಏನು ಅಂತ ಕೇಳಿದ್ರೆ ದಿಗ್ವಿಜಯ್ ಸಿಂಗ್ ಗೆ ಮಾತ್ರವಲ್ಲ ಸ್ವತಃ ರಾಹುಲ್ ಗಾಂಧಿಗೂ ತಾನು ಮಾಡಿದ್ದೇನು ಅನ್ನೋದು ಗೊತ್ತಿಲ್ಲ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನ ಒಂದು ರಾಜ್ಯದ ಮುಖ್ಯಮಂತ್ರಿ ಬೇಟಿಯಾಗಬೇಕು ಅಂದ್ರೆ ತಿಂಗಳಿಗೆ ಮೊದಲೇ ದಿನಾಂಕ ನಿಗದಿಯಾಗಬೇಕು. ಅಷ್ಟರ ಮಟ್ಟಿಗೆ ಅವರು ಎಲ್ಲರಿಂದ ದೂರ. ಇತ್ತೀಚೆಗೆ ದೆಹಲಿಗೆ ಹೋಗಿದ್ದ ಸಿದ್ದರಾಮಯ್ಯ ಸೋನಿಯಾ ಬೇಟಿಗಾಗಿ ದಿನಗಟ್ಟಲೇ ಕಾದಿದ್ದರು. ಒಬ್ವ ಮುಖ್ಯಮಂತ್ರಿಯ ಸ್ಥಿತಿಯೇ ಹೀಗಿರುವಾಗ ಸಾಮಾನ್ಯಜನ  ಇಂತವರಿಂತ ಏನನ್ನ ತಾನೆ ನಿರೀಕ್ಷೆ ಮಾಡೋಕೆ ಸಾಧ್ಯ. ಎಲ್ಲ ರಾಜಕೀಯ ನಾಯಕರೂ ಕೂಡ ಮಾಧ್ಯಮಗಳಿಗೆ ಲಭ್ಯರಿರ್ತಾರೆ. ಪ್ರಮುಖ ವಿಚಾರಗಳ, ಬೆಳವಣಿಗೆಗಳ ಬಗ್ಗೆ ಪ್ರತಿಕ್ರಯಿಸ್ತಾರೆ,  ಆದ್ರೆ ರಾಹುಲ್ ಗಾಂಧಿ ಮಾತ್ರ ಎಲ್ಲರಿಂದ ದೂರ ದೂರ. ಅಟ್ ಲೀಸ್ಟ್ ಎಲ್ಲ ರಾಜಕೀಯ ಮುಖಂಡರು ಕೂಡ ಟ್ವಿಟ್ಟರ್, ಪೇಸ್ ಬುಕ್  ಮೂಲಕ ಸಾಮಾನ್ಯ ಜನರಿಗೆ ಸಿಕ್ತಾರೆ. ಆದ್ರೆ ರಾಹುಲ್ ಗಾಂಧಿ ಇಲ್ಲೂ ನಾಪತ್ತೆ. ಈ ದೇಶದ ಪ್ರಧಾನಿ, ರಾಷ್ಟ್ರಪತಿ ಸಾಮಾಜಿಕ ಜಾಲತಾಣದ ಮೂಲಕ ಜನರೊಂದಿಗೆ ಸಂಪರ್ಕ ಇಟ್ಟುಕೊಳ್ಳೋಕೆ ಬಯಸ್ತಾರೆ. ಆದ್ರೆ ರಾಹುಲ್ ಗೆ ಮಾತ್ರ ಇದ್ಯಾವುದರ ಅಗತ್ಯವೂ ಇಲ್ಲ.ವಿಶ್ವದ ದೊಡ್ಡಣ್ಣ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮ ಟ್ವಿಟ್ಟರ್ ಮೂಲಕ ಜನರೊಂದಿಗೆ ಸಂಪರ್ಕದಲ್ಲಿದ್ದಾರೆ. ಆದ್ರೆ ರಾಹುಲ್ ಗಾಂಧಿ ಮಾತ್ರ ಇದೆಲ್ಲಕ್ಕೂ ಅಪವಾದ. ಯಾಕಂದ್ರೆ ಆತ ಕಾಂಗ್ರೆಸ್ ನ ಯುವರಾಜ. ಇಂತ ಒಬ್ಬ ವಿಪಲ ನಾಯಕನಿಂದ ಕಾಂಗ್ರೆಸ್ ಪಕ್ಷವಾಗಲೀ, ಈ ದೇಶವಾಗಲೀ ಏನನ್ನ ತಾನೆ ನಿರೀಕ್ಷೆ ಮಾಡಲು ಸಾಧ್ಯ….

ಜಲಿಯನ್ ವಾಲಾಬಾಗ್ ಹತ್ಯಾಕಾಂಡ : ಆ ಮಾರಣಹೋಮ ನಡೆದು ಇಂದಿಗೆ 96 ವರ್ಷ…!!!

ಜಲಿಯನ್ ವಾಲಾಬಾಗ್ ಹತ್ಯಾಕಾಂಡ

ಜಲಿಯನ್ ವಾಲಾಬಾಗ್ ಹತ್ಯಾಕಾಂಡ

ಅದು 96 ವರ್ಷಗಳ ಹಿಂದೆ ನಡೆದುಹೋದ ಭೀಕರ ಮಾರಣಹೋಮ. ಮನುಕುಲದ ಇತಿಹಾಸದ ಅತ್ಯಂತ ನಿರ್ಧಯ ಹತ್ಯಾಕಾಂಡ. ಆ ಹತ್ಯಾಕಾಂಡದ ರೂವಾರಿ ನಿರ್ಧಯಿ ಪಶು ಜನರಲ್ ಡಯರ್. ಇಷ್ಟೊಂದು ದೊಡ್ಡ ಮಟ್ಟದ ನಿರ್ಧಯ ಹತ್ಯಾಕಾಂಡ ಭಾರತದ ಇತಿಹಾಸದಲ್ಲಿ ಬೇರೆ ಯಾವುದೂ ಇಲ್ಲ… ಅದೇ ಜಲಿಯನ್ ವಾಲಾಬಾಗ್ ಹತ್ಯಾಕಾಂಡ. ಆ ಹತ್ಯಾಕಾಂಡದಲ್ಲಿ ಅವತ್ತು ಪ್ರಾಣಬಿಟ್ಟಿದ್ದು 1200 ಕ್ಕೂ ಹೆಚ್ಚು ಅಮಾಯಕರು…ಇಂದಿಗೆ ಆ ಘಟನೆ ನಡೆದು 96 ವರ್ಷ. ಅದು ಅಮೃತಸರದ ಜಲಿಯನ್ ವಾಲಾಬಾಗ್ ಉದ್ಯಾನವನ. 1919 ರ ಏಪ್ರಿಲ್ 13 ರಂದು ಅವತ್ತು ಉಧ್ಯಾನದಲ್ಲಿ ಸಾವಿರಾರು ಮಂದಿ ಬೈಸಾಕಿ ಹಬ್ಬ ಆಚರಿಸಲು ಸೇರಿದ್ದರು. ಬೈಸಾಕಿ ಹಬ್ಬ ಸಿಕ್ಕರ ಸಂಭ್ರಮದ ದಿನಗಳಲ್ಲೊಂದು. ಹಬ್ಬಕ್ಕೆ ಅಂತ ಸೇರಿದ್ದ ಜನರಲ್ಲಿ ಬ್ರಿಟೀಷರ ವಿರುದ್ಧದ ಆಕ್ರೋಶ ಇತ್ತು. ಹಾಗಾಗಿಯೇ ಉದ್ಯಾನವನದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು ಸಾವಿರಾರು ಮಂದಿ. ಅವತ್ತು ಸಂಜೆ ಐದೂ ಹದಿನೈದರ ಸಮಯ. 90 ಸೈನಿಕರೊಂದಿಗೆ ಉದ್ಯಾನಕ್ಕೆ ರಕ್ತಪಿಪಾಸುವಂತೆ ಬಂದವನು ಜನರಲ್ ಡಯರ್. ಒಳಬಂದವನೇ ಒಂದಿನಿತೂ ಯೋಚಿಸದೇ ಸೈನಿಕರಿಗೆ ಗುಂಡಿನ ಮಳೆಗರೆಯುವಂತೆ ಆಜ್ಞೆಯಿತ್ತಿದ್ದ. ಸುಮಾರು 15 ನಿಮಿಷಗಳ ಕಾಲ ಗುಂಡಿನ ಬೋರ್ಗರೆತ. ಅಷ್ಟೇ ಉದ್ಯಾನದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರ ಉಸಿರನ್ನ ಇಷ್ಟು ಬರ್ಭರವಾಗಿ ನಿಲ್ಲಿಸಲಾಗಿತ್ತು. ಅವತ್ತು ಗುಂಡಿನ ಬೋರ್ಗರೆತದಿಂದ ತಪ್ಪಿಸಿಕೊಳ್ಳಲೆಂದು ಉದ್ಯಾನದಲ್ಲಿದ್ದ ಭಾವಿಗೆ ಬಿದ್ದು ಪ್ರಾಣಬಿಟ್ಟವರ ಸಂಖ್ಯೆಯೇ 120 ಕ್ಕೂ ಹೆಚ್ಚು. ಅವತ್ತಿನ ಹತ್ಯಾಕಾಂಡದಲ್ಲಿ ಸತ್ತವರ ಸಂಖ್ಯೆ  379. ಇದು ಅಂದಿನ ಬ್ರಿಟಿಷ್ ಸರ್ಕಾರ ಕೊಟ್ಟ ಕಾಟಾಚಾರದ ಲೆಕ್ಕಾಚಾರ. ಅಸಲಿಗೆ ಅವತ್ತು ಬ್ರಿಟಿಷರ ಗುಂಡಿಗೆ ಬಲಿಯಾದವರ ಸಂಖ್ಯೆ 1200 ಕ್ಕೂ ಹೆಚ್ಚು ಅನ್ನುತ್ತದೆ ಇತಿಹಾಸ. ಮಕ್ಕಳೂ ಮಹಿಳೆಯರೂ ಅನ್ನೋದನ್ನೂ ನೋಡದೇ ನಿರ್ಧಯವಾಗಿ ಮಾರಣಹೋಮ ನಡೆಸಲಾಗಿತ್ತು. ಕಾನೂನು ಬಾಹಿರವಾಗಿ ಇಷ್ಟೊಂದು ದೊಡ್ಡ

ರಕ್ತಪಿಪಾಸು ಜನರಲ್ ಡಯರ್

ರಕ್ತಪಿಪಾಸು ಜನರಲ್ ಡಯರ್

ಸಂಖ್ಯೆಯಲ್ಲಿ ಜನ ಸೇರಿದ್ದು ಅಪರಾಧನ ಅದಕ್ಕಾಗಿಯೇ ಈ ಶಿಕ್ಷೆ ಅಂದಿತ್ತು ಅವತ್ತಿನ ಬ್ರಿಟಿಷ್ ಸರ್ಕಾರ. ಇಷ್ಟೊಂದು ಜನರನ್ನ ಹೀಗೆ ನಿಲ್ಲಿಸಿ ಗುಂಡು ಹೊಡೆಯುವುದು ಯಾವ ಕಾನೂನು ಅಂತ ಪ್ರಶ್ನಿಸುವ ಗುಂಡಿಗೆ ಯಾರಿಗೂ ಇರಲಿಲ್ಲ. ಕಾಟಾಚಾರಕ್ಕೊಂದು ತನಿಖಾ ಸಮಿತಿ ನೇಮಕ ಮಾಡಿ ಕೈತೊಳೆದುಕೊಂಡಿತ್ತು ಬ್ರಿಟಿಷ್ ಸರ್ಕಾರ. ಜನರಲ್ ಡಯರ್ ಮಾಡಿದ ಕೆಲಸಕ್ಕೆ ಬ್ರಿಟನ್ ನಲ್ಲಿ ಶ್ಲಾಘನೆಯೂ ವ್ಯಕ್ತವಾಗಿತ್ತು. ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವನ್ನ ಜನರಲ್ ಡಯರ್ ಹತ್ತಿಕ್ಕಿದ ಅಂತ ಸಂಭ್ರಮಿಸಿದ್ದರು ಬ್ರಿಟಿಷರು. ಹಾಗೆ 1200 ಕ್ಕೂ ಹೆಚ್ಚು ಜನರ ರಕ್ತ ಕುಡಿದವನು ಕೆಲದಿನಗಳ ನಂತರ ಬ್ರಿಟನ್ ಗೆ ಹೋಗಿ ನೆಮ್ಮದಿಯಾಗಿಬಿಟ್ಟ. ಅವತ್ತು ಆತನಿಗೆ ಶಿಕ್ಷೆ ಕೊಡಿ ಅಂತ ಕೇಳುವ ಗಟ್ಟಿ ದ್ವನಿ ಗಾಂಧೀಜಿಗೂ ಇರಲಿಲ್ಲ, ನೆಹರೂ ಗೂ ಇರಲಿಲ್ಲ. ಅವತ್ತಿನ ಘಟನೆಯನ್ನ ಕೇಳಿ ಅಕ್ಷರಶಃ ಕುದ್ದು ಹೋದವನು ಬಾಲಕ ಉದಮ್ ಸಿಂಗ್. ಜಲಿಯನ್ ವಾಲಾಬಾಗ್ ನಲ್ಲಿನ ಮಣ್ಣನ್ನ ಮನೆಗೆ ಕೊಂಡೊಯ್ದು ತನ್ನ ಜೀವಿತಾವದಿಯವರೆಗೂ ಜೊತೆಯಲ್ಲಿಟ್ಟುಕೊಂಡಿದ್ದ, ಬ್ರಿಟೀಷರನ್ನ ಭಾರತದಿಂದ ಹೊರಗಟ್ಟಲೇ ಬೇಕು ಅಂತ ಪಣ ತೊಟ್ಟಿದ್ದ.

ಜಲಿಯನ್​ ವಾಲಾಬಾಗ್​ನಲ್ಲಿ ಮಾರಣಹೋಮ ನಡೆಸಿದ್ದ ಜನರಲ್​ ಡಯರ್​ನನ್ನ ಅವನು ಮಾಡಿದ ಪಾಪವೇ ಬಲಿತೆಗೆದುಕೊಂಡಿತ್ತು.  1200 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಎಂಟೇ ವರ್ಷಕ್ಕೆ ಜನರಲ್​ ಡಯರ್ ಪಾರ್ಶ್ವವಾಯು ರೋಗಕ್ಕೆ ತುತ್ತಾಗಿದ್ದ. ಅದಾದ ನಂತರ ಕೊನೆಯ ದಿನಗಳಲ್ಲಿ ಆತನಿಗೆ ಮಾತನಾಡಲೂ ಆಗುತ್ತಿರಲಿಲ್ಲ. ಮಾಡಿದ ಘೋರ ಅಪರಾಧಕ್ಕೆ ಶಿಕ್ಷೆ ಅನುಭವಿಸಿದವನಂತೆ ಜನರಲ್​ ಡಯರ್ 1927ರ ಒಂದು ದಿನ ಮಲಗಿದ್ದಲ್ಲೇ ಕಣ್ಣು ಮುಚ್ಚಿದ. ಅಲ್ಲಿಗೆ ಭಾರತದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ ಸೃಷ್ಟಿಗೆ ಕಾರಣವಾಗಿದ್ದವನ ಕತೆ ಅಂತ್ಯವಾಗಿತ್ತು.

            ಹತ್ಯಾಕಾಂಡ ನಡೆಸಿದವನು ಮಲಗಿದ್ದಲ್ಲೇ ಪ್ರಾಣ ಬಿಟ್ಟ ಅನ್ನೋದೇನೋ ನಿಜ. ಆದರೇ ಪ್ರತೀಕಾರದ ಸೇಡಿನ ಜ್ವಾಲೆ ಮಾತ್ರ ಆರಿರಲಿಲ್ಲ. ಮಾರಣ ಹೋಮದ ಸೇಡಿನ ಜ್ಬಾಲೆ ದಹಿಸುತ್ತಿದ್ದದ್ದು ಅವನೊಬ್ಬನಲ್ಲಿ ಮಾತ್ರ. ಆತನ ಹೆಸರು ಉದಮ್ ಸಿಂಗ್. ಹತ್ಯಾಕಾಂಡವನ್ನ ಕಣ್ಣಾರೆ ನೋಡಿದ್ದ ಮತ್ತು ಬ್ರಿಟೀಷರ ಗುಂಡುಗಳಿಂದ ಗಾಯಗೊಂಡಿದ್ದ ಉದಮ್ ಸಿಂಗ್ ಹತ್ಯಾಕಾಂಡಕ್ಕೆ ಪ್ರತೀಕಾರ ಕೈಗೊಳ್ಳಲು ಪಣ ತೊಟ್ಟಿದ್ದ. ಪ್ರತೀಕಾರ ಯಾರ ವಿರುದ್ಧ..? ಸಾಮೂಹಿಕವಾಗಿ ಗುಂಡಿಟ್ಟಿದ್ದವನು ಆಗಲೇ ಪ್ರಾಣ ಬಿಟ್ಟಾಗಿತ್ತು. ಆದ್ರೆ ಜನರಲ್​ ಡಯರ್​ಗೆ ಹಾಗೆ ಜನರ ಮೇಲೆ ಗುಂಡಿನ ಮಳೆ ಸುರಿಸುವಂತೆ ಆದೇಶ ಕೊಟ್ಟಿದ್ದನಲ್ಲ ಅವನ ವಿರುದ್ಧ. ಆತನ ಹೆಸರು ಮೈಕಲ್. ಜಲಿಯನ್​ ವಾಲಾ ಬಾಗ್ ಹತ್ಯಾಕಾಂಡ ನಡೆದಾಗ ಪಂಜಾಬ್​ನ ಲೆಫ್ಟಿನೆಂಟ್ ಗೌವರ್ನರ್​ ಆಗಿದ್ದವನು ಈ ಮೈಕಲ್. ಮೈದಾನದಲ್ಲಿ ಸೇರಿದ್ದ ಜನರ ಮೇಲೆ ಸಾಮೂಹಿಕವಾಗಿ ಗುಂಡಿಕ್ಕಲು ಈತನ ಆದೇಶವೇ ಕಾರಣ ಅನ್ನೋದು ಬಹಿರಂಗವಾಗಲು ತುಂಬಾ ದಿನಗಳೇನು ಹಿಡಿಯಲಿಲ್ಲ. ಈ ಬಗ್ಗೆ ಮಾತನಾಡಿದ್ದ ಮೈಕಲ್ ಹತ್ಯಾಕಾಂಡ ನಡೆಸಿದ್ದು ಸರಿಯಾದ ಕ್ರಮವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದ. ಜನರಲ್​ ಡಯರ್​ಗೆ ಹತ್ಯಾಕಾಂಡ ನಡೆಸುವಂತೆ ಲೆಫ್ಟಿನೆಂಟ್ ಗೌವರ್ನರ್​ ಆಗಿದ್ದ ಮೈಕಲ್​ ಸ್ವತಃ ಸೂಚನೆ ನೀಡಿದ್ದ ಅನ್ನೋದು ಆತನ ಈ ಹೇಳಿಕೆಯಿಂದ ಸ್ಪಷ್ಟವಾಗಿ ಹೋಗಿತ್ತು. ಅದಕ್ಕೇ ಹೇಳಿದ್ದು ಪ್ರತೀಕಾರದ ಜ್ವಾಲೆ ಆರಿರಲಿಲ್ಲ ಅಂತ.

ಲೆಫ್ಟಿನೆಂಟ್ ಗೌವರ್ನರ್ ಮೈಕಲ್

ಹೇಗಾದರೂ ಮಾಡಿ ಹತ್ಯಾಕಾಂಡ ನಡೆಸಲು ಕಾರಣನಾಗಿದ್ದ ಲೆಫ್ಟಿನೆಂಟ್ ಗೌವರ್ನರ್  ಮೈಕಲ್​ ನನ್ನ ಹತ್ಯೆ ಮಾಡೋದು ಉದಮ್ ಸಿಂಗ್ ನ ಗುರಿಯಾಗಿತ್ತು. ಆ ಗುರಿಯ ಸಾಕಾರಕ್ಕಾಗಿ ಉದಮ್ ಸಿಂಗ್ ಹೋರಾಟ ನಡೆಸಿದ್ದು ಬರೊಬ್ವರಿ ಇಪ್ಪತ್ತೊಂದು ವರ್ಷ. 1927 ರಲ್ಲಿ ಉದಮ್ ಸಿಂಗ್ ನನ್ನ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದ ಮೇಲೆ ಬ್ರಿಟೀಷ್ ಇಂಡಿಯಾ ಸರ್ಕಾರ ಬಂಧಿಸಿತ್ತು. ಬ್ರಿಟೀಷರ ಹಿಂಸಾತ್ಮಕ ಅಂತ್ಯಕ್ಕಾಗಿ ಹೋರಾಡುತ್ತಿದ್ದೇನೆ ಅಂತ ಕೋರ್ಟ್ ನಲ್ಲಿ ದಿಟ್ಟತನದಿಂದ ಹೇಳಿದ್ದ ಉದಮ್ ಸಿಂಗ್.

ಪ್ರತೀಕಾರ ತೀರಿಸಿಕೊಂಡ ಉದಮ್ ಸಿಂಗ್

ಪ್ರತೀಕಾರ ತೀರಿಸಿಕೊಂಡ ಉದಮ್ ಸಿಂಗ್

ಹಾಗೆ ಉದಮ್ ಸಿಂಗ್ ನನ್ನ ನಾಲ್ಕು ವರ್ಷಗಳ ಕಾಲ ಜೈಲುಕಂಬಿಯ ಹಿಂದೆ ತಳ್ಳಿತ್ತು ಬ್ರಿಟೀಷ್ ಸರ್ಕಾರ. ನಾಲ್ಕು ವರ್ಷಗಳ ಕಾಲ ಸೆರೆವಾಸ ಅನುಭವಿಸಿದ ಉದಮ್ ಸಿಂಗ್ ಗೆ ಬ್ರಿಟೀಷರ ಮೇಲಿನ ದ್ವೇಷದ ಜ್ವಾಲೆ ಇನ್ನಷ್ಟು ಹೆಚ್ಚಾಗಿತ್ತು. ಹತ್ಯಾಕಾಂಡಕ್ಕೆ ಕಾರಣವಾದವನ ರಕ್ತ ಹರಿಸಲೇಬೇಕು ಎಂದು ಉದಮ್​ ಸಿಂಗ್ ನಿರ್ಧರಿಸಿದ್ದ. ಹೇಗಾದರೂ ಮಾಡಿ ಇಂಗ್ಲೆಂಡ್ ತಲುಪಿಬಿಡುವ ನಿರ್ಧಾರ ಮಾಡಿಬಿಟ್ಟಿದ್ದ. 1934 ರಲ್ಲಿ ಕಾಶ್ಮೀರ ಮೂಲಕ ಇಸ್ಲಾಮಾಬಾದ್, ಕಾಬೂಲ್ ದಾಟಿ ಜರ್ಮನಿ ಸೇರಿಕೊಂಡ. ಕೆಲಕಾಲ ಜರ್ಮನಿಯಲ್ಲಿದ್ದ ಉದಮ್ ಸಿಂಗ್ ಆ ನಂತರ ಇಂಗ್ಲೆಂಡ್ ಮುಟ್ಟಿದ್ದ. ಲಂಡನ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಮೈಕೆಲ್ ನ ಹತ್ಯೆಗೆ ಸಂಚು ಮಾಡುತ್ತಲೇ ಇದ್ದ. ಆ ದಿನ ಬಂದೇ ಬಿಟ್ಟಿತ್ತು, ಅದು 1940 ಮಾರ್ಚ್ 13 ನೇ ತಾರೀಕಿನ ದಿನ. ಹತ್ಯಾಕಾಂಡಕ್ಕೆ  ಪ್ರತೀಕಾರ ತೆಗೆದುಕೊಳ್ಳುವ ಅವಕಾಶ ಉದಮ್ ಸಿಂಗ್ ಗೆ ಸಿಕ್ಕಿಬಿಟ್ಟಿತ್ತು. ಲಂಡನ್ ನ ಕ್ಯಾಕ್ ಸ್ಟನ್ ಹಾಲ್ ನಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಬಂದಿದ್ದ ಲೆಫ್ಟಿನೆಂಟ್ ಗೌವರ್ನರ್  ಮೈಕಲ್​ ಬಂದಿದ್ದ. ಇದೇ ಸರಿಯಾದ ಸಮಯ ಎಂದು ಉದಮ್​ ಸಿಂಗ್​ ಆ ಕಾರ್ಯಕ್ರಮಕ್ಕೆ ಹೋಗಿದ್ದ. ಅಷ್ಟೇ ಉದಮ್​ ಸಿಂಗ್​ ಕೈನಲ್ಲಿದ್ದ ಪಿಸ್ತುಲ್​ನಿಂದ ಎರಡು ಗುಂಡುಗಳು ಕ್ಷಣ ಮಾತ್ರದಲ್ಲಿ ಮೈಕಲ್​ ಎದೆ ಹೊಕ್ಕಿದ್ದವು. ಅಷ್ಟೇ ಕೆಳಗೆ ಬಿದ್ದವನು ಅಲ್ಲೇ ಪ್ರಾಣ ಬಿಟ್ಟ. ಹಾಗೆ ಗುಂಡಿಗೆ ಗುಂಡಿನಿಂದಲೇ ಉತ್ತರಿಸಿ ಪ್ರತೀಕಾರ ತೀರಿಸಿಕೊಂಡಿದ್ದ ಉದಮ್ ಸಿಂಗ್.

ಉದಮ್ ಸಿಂಗ್ ಮಾಡಿದ ಕೆಲಸವನ್ನ ಇಡೀ ದೇಶ ಪ್ರಶಂಸಿಸಿತ್ತು. ಆದರೇ ಆ ಇಬ್ಬರ ಹೊರತಾಗಿ. ಮಹಾತ್ಮ ಗಾಂಧಿ ಮತ್ತು ನೆಹರೂ ಈ ಪ್ರತೀಕಾರವನ್ನ ವಿವೇಚನಾ ರಹಿತ ಎಂದಿದ್ದರು. ಅವತ್ತು 1200 ಮಂದಿಯ ರಕ್ತ ನಿರ್ಧಯವಾಗಿ ಹರಿದಾಗ ವಿವೇಚನೆ ಎಲ್ಲಿತ್ತು ಎಂಬ ಬಗ್ಗೆ ಒಂದಿನಿತೂ ಯೋಚಿಸಿರಲಿಲ್ಲ ಈ ಇಬ್ಬರು ಮಹಾನ್ ನಾಯಕರು. ಸತ್ತವರ ಗೋರಿಯ ಮೇಲೆ ಇಂತದ್ದೊಂದು ಷರಾ ಬರೆದು ನಿರಮ್ಮಳವಾಗಿಬಿಟ್ಟರು. ಆದ್ರೆ ಉದಮ್ ಸಿಂಗ್ ಹೇಳಿದ್ದು ಮಾತ್ರ ಕೆಚ್ಚದೆಯ ಮಾತುಗಳನ್ನ. ” ನಾನು ಹೀಗೆ ಮಾಡಲು ಕಾರಣ ಆತನ ಮೇಲಿದ್ದ ದ್ವೇಷ. ಆತನ ಸಾವನ್ನ ಅವನೇ ಬರಮಾಡಿಕೊಂಡ. ನನ್ನ ಜನಗಳ ರಕ್ತಕುಡಿದವನನ್ನ ನಾನು ಅಳಿಸಿ ಹಾಕಿದೆ. ಇಪ್ಪತ್ತೊಂದು ವರ್ಷಗಳಿಂದ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ನನಗೀಗ ಆನಂದವಾಗಿದೆ, ನಾನು ಬ್ರಿಟೀಷರಿಂದ ಸಾಯುತ್ತಿರುವ ಭಾರತೀಯರನ್ನ ನೋಡಿದ್ದೇನೆ. ಇದು ನನ್ನ ಕರ್ತವ್ಯ ತಾಯ್ನಾಡಿಗಾಗಿ ನಾನು ಪ್ರಾಣ ತ್ಯಾಗ ಮಾಡುವುದಕ್ಕಿಂತಲೂ ಹೆಚ್ಚಿನ ಗೌರವ ಇನ್ನೇನಿದೆ.” ಹೀಗೆ ದಿಟ್ಟತನದ ಮಾತುಗಳನ್ನಾಡಿ ಪ್ರತೀಕಾರ ತೆಗೆದುಕೊಂಡವನನ್ನ ಮೂರು ತಿಂಗಳಲ್ಲೇ ಮೈಕಲ್​ ಹತ್ಯೆ ಆರೋಪದ ಮೇಲೆ ನೇಣಿಗೇರಿಸಲಾಯಿತು.

ಸ್ವಾತಂತ್ರಾ ನಂತರ ಅಂದಿನ ನಮ್ಮ ಪ್ರಧಾನಿ ನೆಹರು ಹೇಳಿದ್ದೇನು ಗೊತ್ತಾ… “ನಾವೆಲ್ಲರೂ ಸ್ವತಂತ್ರರಾಗಲು ಪ್ರಾಣ ಪಣಕ್ಕಿಟ್ಟ ಶಾಹಿದ್-ಇ-ಅಜೀಮ್ ಉದಮ್ ಸಿಂಗ್ ನನ್ನ ಗೌರವಾದರಗಳಿಂದ ನಮಿಸುವೆ.” ಮೈಕಲ್​ನನ್ನು ಹತ್ಯೆ ಮಾಡಿದಾಗ ಬ್ರಿಟೀಷರನ್ನು ಓಲೈಸಲು ವಿವೇಚನಾ ರಹಿತ ಅಂತ ಖಂಡಿಸಿದ್ದ ನೆಹರು ಸ್ವತಂತ್ರ್ಯ ಸಿಕ್ಕಮೇಲೆ ಉದಮ್ ಸಿಂಗ್ ಗೆ ನಮಿಸುವ ಮಾತುಗಳನ್ನಾಡಿದ್ದರು. ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ಸಮಾದಿಯ ಮೇಲೆ ನೆಹರು ಪ್ರಧಾನಿಯಾಗಿ ವಿರಾಜಮಾನರಾದರು. ಇದಾದ ಮೇಲೆ ಸ್ವತಃ ನೆಹರು, ಜಲಿಯನ್ ವಾಲಾಬಾಗ್ ನಲ್ಲಿ ಮಾರಣ ಹೋಮದ ನೆನಪಿಗೆ ನಿರ್ಮಿಸಲಾದ ಸ್ಮಾರಕವನ್ನು ಉದ್ಘಾಟಿಸಿದ್ರು. ಅವತ್ತು ಗುಂಡಿಗೆ ಎದೆಯೊಡ್ಡಿ ವೀರಮರಣವನ್ನಪ್ಪಿದವರ ಆತ್ಮಗಳು ನೆಹರು ರನ್ನ ನೋಡಿ ಅದೆಷ್ಟು ಅಸಹ್ಯ ಪಟ್ಟುಕೊಂಡವೋ….

%d bloggers like this: