ಕಸಬ್ ಎಂಬ ಕ್ರಿಮಿಯನ್ನು ಗಲ್ಲಿಗೇರಿಸಲು ಇನ್ನೆಷ್ಟು ವರ್ಷಗಳು ಬೇಕು…..

ಕಸಬ್ ಎಂಬ ರಕ್ತಪಿಪಾಸು

ಮುಂಬೈ ಮಾರಣ ಹೋಮಕ್ಕೆ ಇಂದು ಮೂರು ವರ್ಷಗಳ ಕರಾಳ ನೆನಪು. ಮೂರು ವರ್ಷಗಳಲ್ಲಿ ನಾವೇನಾದ್ರೂ ಪಾಠ ಕಲಿತಿದ್ದೇವಾ ಎಂದು ನೋಡಲು ಹೋದರೆ ಸಿಗುವ ಉತ್ತರ ಶೂನ್ಯ. ಅಮೇರಿಕಾದಲ್ಲಿ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ಧಾಳಿಯ ನಂತರ ಇಲ್ಲಯವರೆಗೂ ಒಂದೇ ಒಂದು ದಾಲಿಯೂ ನಡೆದಿಲ್ಲ. ಅಷ್ಟು ಮುನ್ನೆಚ್ಚರಿಕೆಗಳನ್ನು ಅಲ್ಲಿ ತಗೆದುಕೊಂಡಿದ್ದಾರೆ. ಮುಂಬೈ ದಾಳಿಯ ನಂತ್ರ ಇಲ್ಲಿಯವರೆಗೂ ಯಾವುದೇ ಸ್ಪೋಟವಾಗಿಲ್ಲ ಎಂದು ಬೀಗುತ್ತಿದ್ದ ಚಿದಂಬರಂಗೆ ಮುಖದ ಮೇಲೆ ಒಡೆದಂತೆ ಮುಂಬೈ ಮತ್ತು ದೆಹಲಿಯಲ್ಲಿ ಬಾಂಬ ಸ್ಫೋಟವಾಗಿ ಮತ್ತೆ ಅಮಾಯಕರ ಪ್ರಾಣಗಳು ಬಲಿಯಾಗಬೇಕಾಯಿತು. ಯಾವುದಾದ್ರೂ ಸ್ಪೋಟವಾದಾಗ ಮಾತ್ರ ನಮ್ಮ ರಾಜಕಾರಣಿಗಳ ಬಾಯಿಯಲ್ಲಿ ವೀರಾವೇಷದ ಮಾತುಗಳು ಬರುತ್ತವೆ. ಭಯೋತ್ಪಾದಕರನ್ನ ಹುಟ್ಟಡಗಿಸಿಬಿಡುತ್ತೇವೆ ಎಂದು ಅಬ್ಬರಿಸುತ್ತಾರೆ. ಆದ್ರೆ ಭಯೋತ್ಪಾದನೆಯನ್ನೆದುರಿಸಲು ಪ್ರಾಮಾನಕ ಪ್ರಯತ್ನಗಳು ಮಾತ್ರ ಆಗುತ್ತಿಲ್ಲ. ಆಗುತ್ತಿರುವುದು ಕೇವಲ ಭಾಷಣಗಳು ಮಾತ್ರ. ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಕಾಂಗ್ರೆಸ್ ಸಂಸತ್ ಭವನದ ಮೇಲಿನ ದಾಳಿಯ ರುವಾರಿ ಅಫ್ಜಲ್ ಗುರುವಿಗೆ ನೇಣು ಹಾಕಲು ಹಿಂಜರಿಯುತ್ತಿದೆ. ಅದಕ್ಕೆ ಕಾರಣ ಮುಸ್ಲೀಮರ ಮತ ಕಳೆದುಕೊಳ್ಳುವ ಭಯ. ದೇಶವನ್ನು ಒಡೆದು ಆಳಿದ ಬ್ರಟೀಷರಿಗಿಂತ ಈ ಕಾಂಗ್ರೆಸ್ಸಿಗರು ಇನ್ನೂ ಅಪಯಕಾರಿ ಎಂದು ಸಾಭಿತು ಮಾಡುತ್ತಿದ್ದಾರೆ. ನಾಳೆ ಅಜ್ಮಲ್ ಕಸಬ್ನನ್ನೂ ಗಲ್ಲಗೇರಿಸಬೇಡಿ ಅಲ್ಪಸಂಖ್ಯಾತರಿಗೆ ನೋವಾಗುತ್ತದೆ ಅನ್ನುತ್ತಾರೆ. ದೇಸದ್ರೋಹಿಗಳನ್ನು ನೆಣಿಗೇರಿಸಿದರೆ ಮುಸ್ಲೀಮರಿಗೆ ನೋವಾಗುತ್ತದೆ ಎಂಬುವುದಾದರೆ ಅಂತಹ ದೇಶದ್ರೋಹಿಗಳು ಪಾಕಿಸ್ಥಾನಕ್ಕೆ ಹೋಗಲಿ. ಕಸಬ್ಗಾಗಿ ಇಲ್ಲಿಯವರೆಗೆ ಸಕರ್ಾರ ವ್ಯಯಿಸಿರುವ ಹಣವಾದ್ರೂ ಎಷ್ಟು ಗೊತ್ತಾ? ಬರೊಬ್ಬರಿ ಹದಿನೆಂಟು ವರೆ ಕೋಟಿ. ಇಷ್ಟು ದುಡ್ಡು ಕೊಟ್ಟು ಒಬ್ಬ ದೇಶದ್ರೋಹಿಯನ್ನು ಸಾಕಿ ಸಲುಹಲಾಗುತ್ತಿದೆ. ಹೀಗೆ ಮಾಡುವ ಬದಲು ಎನ್ಕೌಂಟರ್ ಹೆಸರಿನಲ್ಲಿ ಉಗ್ರರನ್ನು ಕೊಂದ ಗುಜರಾತ್ ಕ್ರಮವೇ ಸರಿ ಎನಿಸುತ್ತದೆ. ಅಷ್ಟರ ಮಟ್ಟಿಗೆ ನರೇಂದ್ರ ಮೋದಿ ದಿಟ್ಟತನವನ್ನು ಪ್ರಸಂಶಿಸಲೇಬೇಕು. ಇಲ್ಲದಿದ್ದರೆ ಕಾನೂನು ಹೋರಾಟದ ನೆಪದಲ್ಲಿ ಅವರನ್ನು ಸಲುಹಬೇಕಾಗುತ್ತಿತ್ತು. ಕಸಬ್ ಎಂಬ ಕ್ರಿಮಿಯನ್ನು ಹೊಸಕಿ ಹಾಕಲು ಭಾರತಕ್ಕೆ ಇನ್ನೂ ಅದೆಷ್ಟು ವರ್ಷಗಳು ಹಿಡಿಯುತ್ತದೊ. ಇನ್ನು ಅದೆಷ್ಟು ವರ್ಷ ಅವನನ್ನು ನಮ್ಮ ಸಕಾರಗಳು ಸಾಕಿ ಸಲುಹುತ್ತವೆಯೊ….. ಮುಂಬೈ ಮಾರಣ ಹೋಮದಲ್ಲಿ ಬಲಿಯಾದ ಅಮಾಯಕರಿಗೆ ನ್ಯಾಯ ಒದಗಿಸಬೇಕಾದರೆ ಕಸಬ್ನನ್ನು ಗಲ್ಲಿಗೇರಿಸಲೇ ಬೇಕು.

ರಾಜಕಾರಣಿಗಳಿಂದ ಲೋಕಾಯುಕ್ತವನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುವ ಪ್ರಯತ್ನ

 ಎಲ್ಲರೂ ಒಮ್ಮಿಂದೊಮ್ಮಿಗೇ ಲೋಕಾಯುಕ್ತ ಸಂಸ್ಥೆ ಮತ್ತದರ ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗ್ಡೆಯ ಮೇಲೆ ಮುಗಿಬಿದ್ದಿದ್ದಾರೆ. ಲೋಕಾಯುಕ್ತ ಸಂಸ್ಥೆಯೇ ಭ್ರಷ್ಟಗೊಂಡಿದೆ. ಅಂತಹ ಸಂಸ್ಥೆಯಿಂದ ಭ್ರಷ್ಟಾಚಾರ ತಡೆಯಲು ಸಾಧ್ಯವೇ ಇಲ್ಲ . ಸಂತೋಷ್ ಹೆಗ್ಡೆ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಇದು ಈ ರಾಜ್ಯದ ರಾಜಕಾರಣಿಗಳು ಎನಿಸಿಕೊಂಡಿರುವವರ ಬಾಯಿಂದ ಉದುರುತ್ತಿರುವ ನುಡಿಮುತ್ತುಗಳು. ಯಡಿಯೂರಪ್ಪನವರಿಂದ ಹಿಡಿದು ಅವರ ಮುಖವಾಣಿಯಂತಿರುವ ರೇಣುಕಾಚಾರ್ಯನವರೆಗೆ, ದೇವೇಗೌಡರಿಂದ ಹಿಡಿದು ಅವರ ಸಂತಾನ ಕುಮಾರಸ್ವಾಮಿಯವರೆಗೇ ಎಲ್ಲರಿಗೂ ಈಗ ಒಂದು ಬಲಿ ಬೇಕಾಗಿದೆ. ಅದು ಲೋಕಾಯುಕ್ತ ಸಂಸ್ಥೆಯೇ ಆಗಿರಬಹುದು ಇಲ್ಲವೇ ಸಂತೋಷ್ ಹೆಗ್ಡೆಯೇ ಆಗಿರಬಹುದು. ಒಟ್ಟಿನಲ್ಲಿ ರಾಜ್ಯದ ಜನರ ಮುಂದೆ ಲೋಕಾಯುಕ್ತ ಮತ್ತು ಸಂತೋಷ್ ಹೆಗ್ಡೆಯವರನ್ನು ತಪ್ಪಿತಸ್ಥರಂತೆ ನಿಲ್ಲಿಸಿ ತಾವೆಲ್ಲರೂ ಪರಮ ಪ್ರಾಮಾಣಿಕರೆಂದು ಬಿಂಬಿಸಿಕೊಳ್ಳಲು ಎಲ್ಲರೂ ಯತ್ನಿಸುತ್ತಿದ್ದಾರೆ. ಇನ್ನು ಈಶ್ವರಪ್ಪನವರಂತೂ ಲೋಕಾಯುಕ್ತವನ್ನು ಮುಚ್ಚೇಬಿಡಬೇಕೆಂದು ಪಾಮರ್ಾನು ಹೊರಡಿಸಿದ್ದಾರೆ. ಇದಕ್ಕೆಲ್ಲ ಕಾರಣ ಲೋಕಾಯುಕ್ತ ಅಧಿಕಾರಿಯಾಗಿದ್ದ ಮಧುಕರ ಶೆಟ್ಟಿ ನೀಡಿರುವ ಹೆಳಿಕೆ. ಲೋಕಾಯುಕ್ತದಲೂ ಭ್ರಷ್ಟರಿದ್ದಾರೆ ಅಂತ. ಸುಮ್ಮನೆ ಒಬ್ಬ ಅಧಿಕಾರಿ ಬೇಜಾವಾಬ್ದಾರಿಯುತ ಹೇಳಿಕೆ ನೀಡಿದರೆ ಹಾಗುವುದೇ ಹೀಗೆ. ಮುಗುಮ್ಮಾಗಿ ಲೋಕಾಯುಕ್ತದಲ್ಲಿಯೂ ಭ್ರಷ್ಟರಿದ್ದಾರೆ. ನಾನೇನೂ ಪ್ರಾಮಾಣಿಕನಲ್ಲ ಎಂದು ಕನಸಿನಲ್ಲಿ ಕನವರಿಸಿದಂತೆ ಹೇಳಿಕೆ ನೀಡುವ ಬದಲು ಸ್ಪಷ್ಟವಾಗಿ ಯಾರು ಭ್ರಷ್ಟರು, ಅಲ್ಲಿ ನೆಡೆದ ಅಕ್ರಮಗಳಾದರೂ ಏನು ಎಂಬದನ್ನ ಹೇಳಿದ್ದರೆ ಅವರ ಈ ವೈರಾಗ್ಯದ ಮಾತುಗಳನ್ನು ಒಪ್ಪ ಬಹುದಿತ್ತ. ಲೋಕಾಯುಕ್ತದಲ್ಲಿರುವವರೂ ಮನುಷ್ಯರೇ ಅವರೇನು ದೈವಾಂಶ ಸಂಭೂತರಲ್ಲ. ಅಲ್ಲಿಯೂ ಭ್ರಷ್ಟರಿದ್ದಾರೆ. ಹಾಗಂತ ಸಂತೋಷ್ ಹೆಗ್ಡೆಯವರೇ ಹೆಳಿದ್ದಾರೆ.,ಲೋಕಾಯುಕ್ತದಲ್ಲಿರುವವರು ಪರಮ ಪ್ರಾಮಾಣಿಕರು ಎಂದು ಅವರು ಯಾವತ್ತೂ ಹೇಳಿಲ್ಲ. ಅಲ್ಲಿದ್ದ ಭ್ರಷ್ಟರನ್ನು ಹೊರ ಹಾಕಿ ಲೋಕಾಯುಕ್ತವನ್ನು ಒಂದು ಉತ್ತಮ ಸಂಸ್ಥೆಯನ್ನಾಗಿ ಪರಿವರ್ತಿಸಿ ಪ್ರಾಮಾಣಿಕತೆಯನ್ನು ತಂದವರು ಸಂತೋಷ್ ಹೆಗ್ಡೆ.

ಕರ್ನಾಟಕ ಲೋಕಾಯುಕ್ತ

 ಸಂತೋಷ್ ಹೆಗ್ಡೆಯವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವವರು ಮೊದಲು ಆತ್ಮ ವಿಮಷರ್ೆ ಮಾಡಿಕೊಂಡರೆ ಉತ್ತಮ. ರೇಣುಕಾಚಾರ್ಯನಂತವರು ಪ್ರಾಮಾಣಿಕತೆಯ ಬಗ್ಗೆ ಮಾತಾಡಿದರೆ ಅದಕ್ಕಿಂತ ದುರಂತ ಇನ್ನೇನಿದೆ. ರೇಣುಕಾಚಾರ್ಯ ಯಾವಾಗಲೂ ಹೇಳುವುದು ಒಂದೇ ಒಂದು ಮಾತನ್ನ. ನನಗೆ ಲೋಕಾಯುಕ್ತದ ಬಗ್ಗೆ ಗೌರವವಿದೆ. ಸಂತೋಷ್ ಹೆಗ್ಡೆಯವರ ಮೇಲೆ ಗೌರವವಿದೆ ಅಂತ. ಹೀಗೆ ಹಿಂದೊಮ್ಮೆ ಸಚಿವ ಸ್ಥನ ಸಿಗಲಿಲ್ಲವೆಂಬ ಕಾರಣಕ್ಕೆ ಒಂದಿಷ್ಟು ಶಾಸಕರನ್ನ ಹೈದರಾಬಾದ್ ಗೆ ಹೈಜಾಕ್ ಮಾಡಿಕೊಂಡು ಹೋದಾಗಲೂ ರೇಣುಕಾಚಾರ್ಯ ಹೇಳಿದ್ದು ಅದನ್ನೇ ನನಗೆ ಯಡಿಯೂರಪ್ಪನವರ ಮೇಲೆ ಬಹಳ ಗೌರವವಿದೆ ಅಂತ. ಅದು ಯಾವ ರೀತಿಯ ಗೌರವವೊ ಏನೊ ಗೊತ್ತಿಲ್ಲ. ಸಂತೋಷ್ ಹೆಗಡೆಯವರೇನೂ ಯಡಿಯೂರಪ್ಪನವರನ್ನ ಜೈಲಿಗೆ ಹಾಕಿ ಎಂದೇನೂ ವರದಿ ನೀಡಿಲ್ಲ. ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಬೇಕೆಂದೇನೂ ಅವರು ವರದಿಯಲ್ಲಿ ಹೇರಳಿರಲಿಲ್ಲ. ಅದು ಅವರ ಕೆಲಸವೂ ಅಲ್ಲ. ಅವರು ಹೇಳಿದ್ದು ಯಡೆಯೂರಪ್ಪನವರನ್ನು ಕಾನೂನಿನ ಪ್ರಕಾರ ವಿಚಾರಣೆ ನೆಡೆಸಿ ಅಂತ. ಅದು ನೆಡೆಯುತ್ತಿದೆಯಷ್ಟೆ. ಇದಕ್ಕೆ ಸಂತೋಷ್ ಹೆಗ್ಡೆಯವರೇಕೆ ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಇನ್ನು ಹೆಗ್ಡೆಯವರ ರಾತ್ರಿ ಜೀವನದ ಖಚರ್ುಗಳ ಬಗ್ಗೆ ಮಾತಾಡಿ ಸಂತೋಷ್ ಹೆಗ್ಡೆಯವರಿಂದ ಛೀಮಾರಿ ಹಾಕಿಸಿಕೊಂಡಿದ್ದ ಕುಮಾರಸ್ವಾಮಿ ಹೆಗ್ಡೆಯವರ ಅಕ್ರಮಗಳನ್ನ ಬಯಲಿಗೆಳೀತೀನಿ, ದಾಖಲೆಗಳನ್ನ ಬಿಡುಗಡೆ ಮಾಡ್ತೀನಿ ಅಂತ ಉತ್ತರಕುಮಾರನ ಹಾಗೆ ಬಡಬಡಿಸುತ್ತಲೇ ಇದ್ದಾರೆ. ಇನ್ನು ಮಾಜಿ ನಪ್ರಧಾನಿಯಾಗಿ ಪಂಚಾಯಿತಿ ಮಟ್ಟದಲ್ಲಿಯೂ ರಾಜಕೀಯ ಮಾಡುವ ದೇವೇಗೌಡರು ತಮ್ಮ ಮಗ ಬಾಲಕೃಷ್ನಗೌಡರ ಪ್ರಕರಣ ತನಿಕೆ ಮಾಡುತ್ತಿದ್ದ ಜೀವನ್ ಕುಮಾರ್ ನ್ನ ಬೆದರಿಸುತ್ತಾರೆ. ಅದನ್ನ ಕೆಳಿದರೆ ನಾನು ಬೆದರಿಸಿಲ್ಲ ಎಚ್ಚರಿಸಿದ್ದೇನೆ ಅಂತಾರೆ. ಎರೆಡೂ ಒಂದೇ ಅಳಿಯ ಅಲ್ಲ ಮಗಳ ಗಂಡ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರ ಅವರನ್ನು ವರ್ಗಾವಣೆ ಮಾಡಿದೆ. ತಮಗೆ ಬೇಕಾದವರನ್ನು ರಕ್ಷಿಸಿಕೊಳ್ಳಲು ಒಬ್ಬ ಧಕ್ಷ ಅಧಿಕಾರಿಯನ್ನು ರಾತ್ರೊರಾತ್ರಿ ವರ್ಗಾವಣೆ ಮಾಡಲಾಗಿದೆ. ಲೋಕಾಯುಕ್ತವನ್ನು ಬಲಪಡಿಸುತ್ತೇವೆ ಅಂತ ಕುಮಾರಸ್ವಾಮಿಯಿಂದಿಡಿದು ಈಗಿನ ಸದಾನಂದಗೌಡರವರೆಗೇ ಎಲ್ಲರೂ ಹೇಳುತ್ತಲೇ ಇದ್ದಾರೆ. ಆದರೆ ಮಾಡುತ್ತಿರುವುದು ಮಾತ್ರ ಅದನ್ನು ದುರ್ಬಲಗೊಳಿಸುವ ಪ್ರಯತ್ನ. ಲೋಕಾಯುಕ್ತ ದಾಳಿಗೊಳಗಾದವರನ್ನು ಕೆಲಕಾಲ ಅಮಾನತು ಮಾಡಿ ಆಮೇಲೆ ಅವರಿಗೆ ಬಡ್ತಿ ನೀಡಿದರೆ ಯಾವ ವ್ಯವಸ್ಥೆಯಾದರೂ ಉದ್ಧಾರವಾದೀತು. ಒಬ್ಬೊಬ್ಬರಾಗಿ ಜೈಲಿನ ಹಾದಿ ಹಿಡಿಯುತ್ತಿರುವುದನ್ನು ತಪ್ಪಿಸಲು ಎಲ್ಲ ಪಕ್ಷಗಳೂ ಸೇರಿ ಲೋಕಾಯುಕ್ತವನ್ನು ಬಲಿ ತಗೆದುಕೊಳ್ಳಲು ಹವಣಿಸುತ್ತಿವೆ.

ಬಳ್ಳಾರಿಯ ಒಡಲನ್ನೇ ಬಗೆದವರಿಗೆ ಇದೆಂತಾ ಸ್ವಾಭಿಮಾನ…..

ಈಗ ಶ್ರೀ ರಾಮುಲು ಬಾಯಲ್ಲಿ ಸ್ವಾಭಿಮಾನದ ಮಾತುಗಳು ಬರುತ್ತಿವೆ. ಅನವಶ್ಯಕವಾಗಿ ನನ್ನ ಹೆಸರನ್ನ ಲೋಕಾಯುಕ್ತ ವರಧಿಯಲ್ಲ ಪ್ರಸ್ತಾಪಿಸಲಾಗಿದೆ. ಗಣಿಗಾರಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ಅದೂ ಇದೂ ಅಂತ ಕನವರಿಸತೊಡಗಿದ್ದಾರೆ. ಆದ್ರೆ ಇದೇ ಸ್ವಾಭಿಮಾನ ಅವರಿಗೆ ಅಕ್ರಮ ಗಣಿ ಸಂಪತ್ತನ್ನ ಕೊಳ್ಳೆ ಹೊಡೆಯುವಾಗ ಇರಲೇ ಇಲ್ಲ. ಎಲ್ಲರಿಗೂ ಗೊತ್ತು ಇದೇ ರೆಡ್ಡಿಗಳು ಮತ್ತು ಶ್ರೀರಾಮುಲು ಇಡೀ ಬಳ್ಳಾರಿ ಜಿಲ್ಲೆಯ ಗಣಿ ಸಂಪತ್ತನ್ನು ಕೊಳ್ಳೆ ಹೊಡೆದದ್ದು ಅಂತ. ಬಳ್ಳಾರಿ ಅಕ್ರಮ ಗಣಿಗಾರಿಕೆಯ ಗಣರಾಜ್ಯವೆಂದೇ ಕಖ್ಯಾತಿ ಪಡೆಯೊಕೆ ಕಾರಣವಾದವರೇ ಈ ರೆಡ್ಡಿ ಬ್ರದರ್ಸ್ ಮತ್ತು ಶ್ರೀರಾಮುಲು.

ಶ್ರೀ ರಾಮುಲು

ಸದಾನಂದಗೌಡರ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಶ್ರೀರಾಮುಲು ರಾಜೀನಾಮೆ ಕೊಟ್ಟಿದ್ದು. ಹೇಗಾದರೂ ಮಾಡಿ ಸಚಿವನಾಗಲೇ ಬೇಕೂ ಆ ಮೂಲಕ ಬಳ್ಳಾರಿ ತಮ್ಮ ಹಿಡಿತದಲ್ಲೇ ಇರಬೇಕೆಂಬುದು ರೆಡ್ಡಿಗಳ ತಂತ್ರ. ಅದರ ಮೊದಲ ಭಾಗವಾಗಿ ಶ್ರೀರಾಮುಲು ಇಂದ ರಾಜೀನಾಮೆ ಕೊಡಿಸುವ ಒತ್ತಡವೇರಿ ಆ ಮೂಲಕ ಸಚಿವ ಸ್ಥಾನ ಗಿಟ್ಟಿಸುವುದು ಅವರ ಉದ್ದೇಶವಾಗಿತ್ತು. ಆದ್ರೆ ಅವರ ಉದ್ದೇಶಕ್ಕೆ ತಣ್ಣೀರೆರೆಚಿದ್ದು ಸಿಬಿಐ. ಯಾವುದೇ ಸಣ್ಣ ಸುಳಿವೂ ಕೂಡ ಕೊಡದೆ ಇದ್ದಕ್ಕಿದ್ದಂತೆ ಜನಾರ್ಧನ ರೆಡ್ಡಿಯನ್ನ ಬಂದಿಸಿ ಆಂದ್ರದ ಚಂಚಲಗೂಡ ಜೈಲಿಗೆಹಾಕಲಾಯಿತು. ಅಲ್ಲಿಗೆ ರೆಡ್ಡಿಗಳು ಹೆಣೆದಿದ್ದ ತಂತ್ರಗಾರಿಕೆ ವಿಪಲವಾಗಿತ್ತು. ಶ್ರೀರಾಮುಲು ನೀಡಿದ್ದ ರಾಜೀನಾಮೆಯನ್ನ ಬಿಜೆಪಿ ಅಳೆದೂ ತೂಗಿ ಕೊನೆಗೆ ಯಾವುದೇ ದಾರಿಯಿಲ್ಲದೆ ರಾಜೀನಾಮೆಯನ್ನ ಅಂಗೀಕರಿಸಿತು. ಈಗ ರಾಜ್ಯ ಮತ್ತೊಂದು ಉಪಚುನಾವಣೆಗೆ ಸಜ್ಜಾಗಿ ನಿಂತಿದೆ. ಇವರ ಆಟಾಟೊಪಗಳಿಗೆ ಜನರ ತೆರಿಗೆಯ ದುಡ್ಡು ಅನಗತ್ಯವಾಗಿ ವ್ಯಚ್ಚವಾಗ್ತಿದೆ. ಏನೇ ಆದ್ರೂ ಈ ಉಪಚುನಾವಣೆಯಲ್ಲಿ ಶ್ರೀರಾಮುಲು ಗೆಲ್ಲುವುದು ಬಹುತೇಕ ಖಚಿತ. ದುಡ್ಡಿನ ಮೂಟೆಯನ್ನೇ ಚೆಲ್ಲಿ ಚುನಾವಣೆ ಗೆಲ್ಲುವ ಇವರಿಗೆ ಈ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವುದು ಅಷ್ಟು ಕಷ್ಟವೇನಲ್ಲ. ಇದರ ಜೋತೆಗೆ ಶ್ರೀ ರಾಮುಲುಗೆ ಜನಬೆಂಬಲವಿರುವುದೂ ಸಹ ಅಷ್ಟೇ ಸತ್ಯ. ಹಾಗಂತ ಅವರು ಗೆದ್ದುಬಿಟ್ರೆ ಅವರ ಮೇಲಿನ ಆರೋಪಗಳಾಗಲೀ, ಅವರು ಮಾಡಿದ ಭ್ರಷ್ಟಾಚಾರವಾಗಲೀ ಸುಳ್ಳೆಂದು ಸಾಭೀತೇನೂ ಆಗುವುದಿಲ್ಲ. ಅವರು ಈಗ ಕಳೆದುಕೊಂಡಿದ್ದೇನೆ ಅಂತ ಹೇಳುತ್ತಿರುವ ಸ್ವಾಭಿಮಾನವೂ ವಾಪಸ್ ಬರುವುದಿಲ್ಲ.

%d bloggers like this: