ಒಬ್ಬ ರಾಹುಲ್ ನನ್ನ ರಕ್ಷಿಸಲು ಕಾಂಗೆಸ್ ನಲ್ಲಿರುವ ಭಟ್ಟಂಗಿಗಳೆಲ್ರೂ ಫುಲ್ ಟೈಂ ಡ್ಯೂಟಿ ಮಾಡ್ತಾಯಿದ್ದಾರೆ….

ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಪಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಎಲ್ಲ ನಾಲ್ಕೂ ರಾಜ್ಯಗಳಲ್ಲೂ ಸೋಲಿಗೆ ಶರಣಾಗಿದ್ರೆ ಬಿಜೆಪಿ ಮೂರು ರಾಜ್ಯಗಳಲ್ಲಿ ಗೆದ್ದು ದೆಹಲಿಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಹೇಳಲಾಗಿದ್ದ ಮ್ಯಾಚ್ ನಲ್ಲಿ ಬಿಜೆಪಿ ವಿನ್ ಆಗಿದೆ. ಆದ್ರೆ ಮ್ಯಾನ್ ಆಫ್ ದಿ ಮ್ಯಾಚ್ ಯಾರು. ಮ್ಯಾನ್ ಆಫ್ ದಿ ಡಿಫೀಟ್ ಯಾರು ಅನ್ನೋ ಚಚರ್ೆ ಶುರುವಾಗಿಬಿಟ್ಟಿದೆ. ಬಿಜೆಪಿಯವರು ನರೇಂದ್ರ ಮೋದಿ ಜಪ ಮಾಡ್ತಾಯಿದ್ದಾರೆ. ಮೋದಿಯಿಂದಾಗಿಯೇ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡೋಕೆ ಸಾಧ್ಯವಾಗಿದೆ ಅಂತ ಹಾರಾಡ್ತಾಯಿದ್ದಾರೆ. ಆದ್ರೆ ಸೂತಕದ ಮನೆ ಕಾಂಗ್ರೆಸ್ ನಲ್ಲಿ ಎಲ್ಲವೂ ನೀರವ ಮೌನ. ಕಾಂಗ್ರೆಸ್ ಪಕ್ಷದ ವಕ್ತಾರರು ತಮ್ಮ ಪಕ್ಷ ಮತ್ತು ರಾಹುಲ್ ಗಾಂಧಿಯನ್ನ ಸಮಥರ್ಿಸಿಕೊಳ್ಳೋಕೆ ಪರದಾಡ್ತಾಯಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಈ ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲಿ ಏನಾದ್ರೂ ಉತ್ತಮ ಸಾಧನೆ ಮಾಡಿಬಿಟ್ಟಿದ್ರೆ ಪರಿಸ್ಥಿತಿ ಹೇಗಿರ್ತಾಯಿತ್ತು ಗೊತ್ತಾ… ಅದು ಮಾತ್ರ ಹರಿ ಭಯಂಕರ. ಈ ದೇಶ ರಾಹುಲ್ ಗಾಂಧಿಯವರ ನಾಯಕತ್ವವನ್ನ ಒಪ್ಪಿಕೊಂಡಿದೆ. ರಾಹುಲ್ ಪ್ರಧಾನಿ ಅಭ್ಯಥರ್ಿಯಾಗೋದಕ್ಕೆ ಈಗ ಸಮಯ ಪರಿಪಕ್ವವಾಗಿದೆ. ಇಡೀ ಕಾಂಗ್ರೆಸ್ ಪಕ್ಷ ರಾಹುಲ್ ಅವ್ರನ್ನ ಬೆಂಬಲಿಸುತ್ತದೆ. ಈ ವಿಜಯ ರಾಹುಲ್ ಗಾಂಧಿಗೆ ಮತ್ತು ಅವ್ರ ಹೋರಾಟಕ್ಕೆ ಸಲ್ಲಬೇಕು. ಯುವಜನತೆ ರಾಹುಲ್ ಜಪ ಮಾಡ್ತಾಯಿದ್ದಾರೆ ಅಂತ ಕಾಂಗ್ರೆಸ್ ನ ಸಮಸ್ತರೂ ಟೀವಿ ಚಾನಲ್ ಗಳ ಮುಂದೆ ಕೂತು ಹೀಗೆ ಪುಂಗಿ ಊದಿ ಬಿಡ್ತಾಯಿದ್ರು. ಆದ್ರೆ ಈಗ ನೋಡಿದ್ರೆ ಅವ್ರು ಹೇಳ್ತಿರೋದೇ ಬೇರೆ. ಇದು ಸಂಘಟಿದ ವೈಪಲ್ಯ. ಸೋಲಿನ ಹೊಣೆಯನ್ನ ಸಾಮೂಹಿಕವಾಗಿ ಒಪ್ಪಿಕೊಳ್ತೇವೆ. ಈ ಸೋಲಿಗೆ ರಾಹುಲ್ ಗಾಂಧಿ ಕಾರಣ ಅಲ್ಲ. ನಾವು ಒನ್ ಮ್ಯಾನ್ ಶೊ ನಲ್ಲಿ ನಂಬಿಕೆ ಇಟ್ಟಿಲ್ಲ. ಸೋಲಿನ ಹೊಣೆಯನ್ನ ಇಡೀ ಪಕ್ಷ ಒಪ್ಪಿಕೊಳ್ಳುತ್ತದೆ ಅಂತಿದ್ದಾರೆ. ಅಬ್ಬಾ… ಭಟ್ಟಂಗಿತನ ಅಂದ್ರೆ ಇದೇ ಅಲ್ವಾ… ಖಂಡಿತ ಅಲ್ಲ. ಇದು ಭಟ್ಟಂಗಿತನದ ಪರಮಾವಧಿ. ಒಬ್ಬ ರಾಹುಲ್ ನನ್ನ ರಕ್ಷಿಸಲಿಕ್ಕೆ ಕಾಂಗ್ರಸ್ ನಲ್ಲಿರುವ ಭಟ್ಟಂಗಿಗಳೆಲ್ರೂ ಫುಲ್ ಟೈಂ ಡ್ಯೂಟಿ ಮಾಡ್ತಾಯಿದ್ದಾರೆ. ಕಾಂಗ್ರಸ್ ನ ಕೂಗುಮಾರಿ ಮಧ್ಯಪ್ರದೇಶದ ‘ದಿಗ್ವಿಜಯ’ ಸಿಂಗ್ ಎಲ್ಲಿ ಹೋಯ್ತು ಅಂತಾನೇ ಗೊತ್ತಿಲ್ಲ… ನಿನ್ನೆಯಿಂದ ಯಾವ ಚಾನಲ್ ನಲ್ಲೂ ಈ ಕೂಗುಮಾರಿಯ ಮುಖ ಕಾಣ್ತಾನೇ ಇಲ್ಲ. ಒಂದು ವೇಳೆ ಕಾಂಗ್ರಸ್ ಏನಾದ್ರೂ ಗೆದ್ದಿದ್ದಿದ್ರೆ ನೋಡ್ಬೇಕಿತ್ತಲ್ಲ ಈಯಪ್ಪನ ವರಸೇನಾ… ಈ ದೇಶದ ಜನ ಮೋದಿಯನ್ನ ತಿರಸ್ಕರಿಸಿದ್ದಾರೆ. ಮುಂದಿನ ಲೋಕಸಬಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಗೆದ್ದು ಈ ಗಾಂಧಾರ ದೇಶಕ್ಕೆ ಪ್ರಧಾನಿಯಾಗಿಬಿಡ್ತಾನೆ ಅಂತ ಹುಯಿಲೆಬಬ್ಬಿಸಿಬಿಡ್ತಿದ್ದ ದಿಗ್ವಿಜಯ್ ಸಿಂಗ್ ಬಾಯಿ ಈಗ ಮ್ಯೂಟ್ ಆಗಿಬಿಟ್ಟಿದೆ. ಕೇವಲ ಸೋನಿಯಾ ಗಾಂಧಿ ಮತ್ತು ಅಮೂಲ್ ಬೇಬಿಯನ್ನ ಹೊಗಳುವುದರಲ್ಲಿ ಕಾಲ ಕಳೆಯೋದು ಬಿಟ್ಟಿದ್ದಿದ್ರೆ ಬಹುಶಃ ಕಾಂಗ್ರಸ್ ಅಲ್ಲಿ ಇಲ್ಲಿ ಸ್ವಲ್ಪನಾದ್ರೂ ಗೆಲುವು ಕಾಣ್ತಾಯಿತ್ತೇನೊ. ಈಗ ಕಾಂಗ್ರಸ್ ಪಾಲಿನ ಯುವರಾಜ(?) ಆಮ್ ಆದ್ಮಿ ಪಾಟರ್ಿಯ ಆಫೀಸ್ ನಲ್ಲಿ ಇಂಟರ್ನಷಿಪ್ ಮಾಡಿದ್ರೆ ಲೋಕಸಭಾ ಚುನಾವಣೆ ಹೊತ್ತಿಗೆ ಅಮೂಲ್ ಬೇಬಿಗೆ ಎಲೆಕ್ಷನ್ ಅಂದ್ರೆ ಏನೂ ಅಂತ ಅರ್ಥವಾಗ್ಬಹುದು. ದೇಶದ ಬಗ್ಗೆ ಕಿಂಚಿತ್ತೂ ಗೊತ್ತಿಲ್ಲದ, ತನ್ನ ಸಾಧನೆ ಏನೂ ಅಂತ ಕೇಳಿದ್ರೆ ಹೇಳಲಿಕ್ಕೇ ಒಂದೂ ಪದವಿಲ್ಲದೇ ಒದ್ದಾಡುವ ಅಮೂಲ್ ಬೇಬಿ ಈ ದೇಶದ ಒಂದು ಪಕ್ಷವೊಂದರ ಉಪಾಧ್ಯಕ್ಷ. ಮತ್ತು ಆ ಉಪಾಧ್ಯಕ್ಷರನ್ನ ಹೊಗಳಲಿಕ್ಕೆ ಒಂದಷ್ಟು ಮಂದಿ ಭಟ್ಟಂಗಿಗಳ ಪಡೆ. ಆ ಪಡೆಗೆ ಈ ಕೂಗುಮಾರಿ ದಿಗ್ವಿಜಯ್ ಸಿಂಗ್ ಅಧ್ಯಕ್ಷ. ಈಗ ಸೋತಿದ್ದಾರೆ ಅಂತೇನೂ ಇವರು ಪುಂಗಿ ಊದೋದನ್ನ ನಿಲ್ಲಿಸೋದಿಲ್ಲ. ಕಾಂಗ್ರಸ್ ಮಂದಿ ರಾಹುಲ್ ನನ್ನ ಅಪ್ರತಿಮ ನಾಯಕ ಅಂತ ಒಪ್ಪಿಕೊಂಡುಬಿಟ್ಟಿದೆ. ಅದೂ ಆ ಪಕ್ಷದ ಭಟ್ಟಂಗಿ ಮನಸ್ಥಿತಿ. ಈ ಸೋಲನ್ನ ಕಾಂಗೆಸ್ ಮಂದಿನ ಕೆಲವೇ ದಿನಗಳಲ್ಲಿ ಮರೆತು ಮತ್ತೆ ರಾಹುಲ್ ಜಪ ಮಾಡ್ತಾರೆ. ಯಾಕಂದ್ರೆ ಅದು ಅವರ ಹೊಟ್ಟೆಪಾಡು. ಇಲ್ಲದಿದ್ರೆ ಅಲ್ಲಿ ಅವರಿಗೆ ಉಳಿಗಾಲವಿಲ್ಲವಲ್ಲ…

ಶಶಿ

 

%d bloggers like this: