ಸಚಿವರ ಕಾಮಪುರಾಣವನ್ನು ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುತ್ತಿರುವವರಿಗೆ ಏನೆನ್ನಬೇಕು

ನೀನು ನೋಡು ನನ್ಗೂ ತೋರಿಸು ಆಯ್ತಾ...

ಅಂತೂ ಕರ್ನಾಟಕ ಮತ್ತು ಕನ್ನಡಿಗರ ಮಾನ ಮೂರಾಬಟ್ಟಿಯಾಗಿ ಹರಾಜಾಗಿಬಿಟ್ಟಿದೆ. ರಾಜಕೀಯದಲ್ಲಿ ದೇವಾಲಯದಷ್ಟೇ ಪಾವಿತ್ರೈತೆ ಹೊಂದಿದ್ದ ಕರ್ನಾಟಕ ವಿಧಾನ ಸಭೆಯಲ್ಲಿ ಸಚಿವ ಮಹಾತ್ರಯರು ಬ್ಲೂ ಫಿಲಂ ನೋಡಿಕೊಂಡು ಕಾಲಕಳೆಯುತ್ತಿದ್ದಂತೂ ನಾಚಿಕೆಗೇಡು. ಈ ಹಿಂದೆ ವಿಧಾನಸಭೆಯಲ್ಲಿಯೇ ಬಟ್ಟೆ ಹರಿದುಕೊಂಡು ಹುಚ್ಚರಂತೆ ಕೂಗಾಡಿದ್ದ ಗಟನೆಗಳು ನಡೆದಿದ್ದವಾದರೂ ಇಂತಹ ಕೀಳು ಮಟ್ಟಕ್ಕೆ ಇಳಿದಿರುವುದು ಮಾತ್ರ ಇದೇ ಮೊದಲು. ವಿಧಾನಸಭೆಯಲ್ಲಿ ಗಂಭಿರವಾದ  ಚರ್ಚೆ ನಡೆಯುತ್ತಿದ್ದರೆ ಅದಕ್ಕೂ ನಮಗೂ ಸಂಬಂದವೇ ಇಲ್ಲವೇನೊ ಎಂಬಂತೆ ಸವದಿ,ಸಿಸಿ ಪಾಟೀಲ್ ಮತ್ತು ಕೃಷ್ಣ ಪಾಲೇಮಾರ್ ಮೂರೂ ಬಿಟ್ಟವರಂತೆ ಕಾಮಕೇಳಿಯ ದೃಶ್ಯಗಳನ್ನು ನೋಡುವುದರಲ್ಲಿ ಮುಳುಗಿದ್ದರು. ಯಾವಾಗ ನ್ಯೂಸ್ ಚಾನಲ್ಗಳಲ್ಲಿ ಮೂರು ಸಚಿವರ ಕಾಮಪುರಾಣ ಬಯಲಿಗೆ ಬಂತೊ ಇಡೀ ರಾಜ್ಯದ ಜನತೆ ಒಂದು ಕ್ಷಣ ಬೆಚ್ಚಿಬಿದ್ದಿದ್ರು. ಇಂತಹ ನಾಚಿಕೆಗೆಟ್ಟವರನ್ನ ಜನರು ಆಯ್ಕೆ ಮಾಡಿ ವಿಧಾನಸಭೆಗೆ ಕಳಿಸಿದ್ದು ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಕ್ಕೇ ಹೊರತು ಸದನದಲ್ಲಿ ಕುಳಿತು ಬ್ಲೂಫಿಲಂ ನೋಡ್ತಾ ಮೋಜು ಮಾಡಲು ಅಲ್ಲ. ಮೊದಲು ಈ ಭಂಡ ಸಚಿವತ್ರಯರು ನಾವು ಏನೂ ಮಾಡಬಾರದ್ದನ್ನ ಮಾಡಿಲ್ಲ ನಾವೇಕೆ ರಾಜೀನಾಮೆ ಕೊಡಬೇಕು ಅಮತ ತಮ್ಮ ಮಹಾ ಕೆಲಸವನ್ನು ಸಮರ್ಥಿಸಿಕೊಂಡರಾದ್ರು ಆಮೇಲೆ ಒತ್ತಡಕ್ಕೆ ಬಿದ್ದು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಅದೂ ಘಟನೆ ನಡೆದು ಹದಿಮೂರು ಗಂಟೆಗಳ ನಂತರ. ಶಿಸ್ತಿನ ಪಕ್ಷವೆಂದೇ ಹೇಳಿಕೊಳ್ಳುವ ಬಿಜೆಪಿಗೆ ಇಂತಹ ಕಳಂಕಿತ ಸಚಿವರನ್ನು ವಜಾಮಾಡುವಷ್ಟೂ ಕೂಡ ಶಕ್ತಿ ಇಲ್ಲವೆಂಬುದು ಕೂಡ ಅಷ್ಟೇ ಸತ್ಯ. ಇದೆಲ್ಲಕ್ಕಿಂತ ವಿಪರ್ಯಾಸವೆಂದರೆ ಈ ಮೂವರು ಸಚಿವರ ಕಾಮಪುರಾಣವನ್ನು ಲಜ್ಜೆಗೆಟ್ಟುಸಮರ್ಥಿಸಿಕೊಳ್ಳುತ್ತಿರುವುದು.ಈ ಮೂವರು ಪೋಲಿ ಸಚಿವರಿಂದ ರಾಜಿನಾಮೆ ಪಡೆದ ಮೇಲೆ ಅವರುಗಳನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕೆಂಬ ಒತ್ತಡ ಹೆಚ್ಚುತ್ತಿದೆ. ಆದ್ರೆ ಆ ಕೆಲಸ ಮಾಡಲು ಬಿಜೆಪಿಯಂತಾ ಶಿಸ್ತಿನ ಪಕ್ಷ ಹಿಂಜರಿಯುತ್ತಿದೆ ಎಂದರೆ ಅದಕ್ಕಿಂತ ಅಸಹ್ಯ ಮತ್ತೊಂದಿಲ್ಲ. ಅಂಪಹ ತಾಖತ್ತು ಬಿಜೆಪಿಗೆ ಇಲ್ಲವೆಂದೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ವಾಜಪೇಯಿ ಮತ್ತು ಅಡ್ವಾಣಿಯಂತವರು ಕಟ್ಟಿಬೆಳೆಸಿದ ಪಕ್ಷಕ್ಕೆ ಇಂತಾ ದುರ್ಗತಿ ಬಂದಿರುವುದು ಮಾತ್ರ ದುರದೃಷ್ಟ. ಭಾರತೀಯ ಸಂಸ್ಕೃತಿಯ ರಕ್ಷಕರೆಂದೇ ಹೇಳಿಕೊಳ್ಳುತ್ತದ್ದ ಬಿಜೆಪೆಯವರು ಮಾಡುತ್ತಿರುವುದಾದ್ರೂ ಏನು. ಹಾಗಂತ ಇಡೀ ಬಿಜೆಪಿ ಪಾಟರ್ಿಯಲ್ಲಿರುವವರೆಲ್ಲರೂ ಇದೇ ರೀತಿಯ ಅಸಹ್ಯದ ಮಂದಿ ಅಂತೇನೂ ನಾನು ಹೇಳುತ್ತಲ್ಲ. ಇಂತಾ ನಾಚಿಕೆಗೇಡಿನ ಕೆಲಸ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವುದಾದ್ರೂ ಯಾಕೆ. ಸದನ ಸಮಿತಿ ನೇಮಕ ಮಾಡಿ ತನಿಕೆ ಮಾಡಿಸಿ ಆಮೇಲೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ತರಿ ಹೇಳ್ತಾಯಿದ್ದಾರೆ. ಇದು ಕಾಲ ಹರಣ ಮಾಡುವ ತಂತ್ರವಲ್ಲದೇ ಮತ್ತೇನೂ ಅಲ್ಲ. ಒಂದಷ್ಟು ದಿನ ತನಿಖೆಯ ಹೆಸರಲ್ಲಿ ಕಾಲ ತಳ್ಳಿದರೆ ಹಾಲಪ್ಪ ಪ್ರಕರಣದಂತೆ ಇದೂ ಕೂಡ ತಣ್ಣಗಾಗುತ್ತೆ ಆಮೇಲೆ ಏನೂ ಆಗೇ ಇಲ್ಲವೆಂಬಂತಿರಬಹುದು ಎಂಬುದು ಬಿಜೆಪಿ ಲೆಕ್ಕಾಚಾರ. ಉಡುಪಿಯಲ್ಲಿ ಪ್ರವಾಸೋಧ್ಯಮದ ಹೆಸರಲ್ಲಿ ರೇವ್ ಪಾರ್ಟಿ ಆಯೋಜಿಸಿ ಕಾಮಕೇಳಿಗೆ ಪ್ರೋತ್ಸಾಹ ನೀಡಿ ಕೋನೆಗೆ ಅಲ್ಲಿ ಅಂತದ್ದೇನೂ ನಡೆದೇ ಇಲ್ಲ ಎಂಬಂತೆ ವರ್ತಿಸಿದ ಇಂತಹ ಸರ್ಕಾರದಿಂದ ಬೇರೆ ಇನ್ನೇನು ತಾನೆ ನಿರೀಕ್ಷಿಸಲಾದೀತು. ಒಟ್ಟಿನಲ್ಲಿ ಸವದಿ ನೋಡಿ ಕೆಟ್ಟ, ಸಿಸಿ ಪಾಟೀಲ್ ಇಣುಕಿ ಕೆಟ್ಟ, ಪಾಲೇಮಾರ್ ಇಡೀ ಕಾರ್ಯಕ್ರಮವನ್ನು ಪ್ರಾಯೋಜಿಸಿ ಕೆಟ್ಟ. ಆದ್ರೆ ನಮ್ಮ ಕ್ಯಾಮೆರಾಮೆನ್ ಗಳು ಮಾತ್ರ ಮೂರು ಸಚಿವರ ಬಲಿ ಪಡೆದು ಭಯಂಕರ ಖುಷಿಯಲ್ಲಿದ್ದಾರೆ.

%d bloggers like this: