ಪೊಲೀಸ್ ಠಾಣೆ ಸಾವ೯ಜನಿಕ ಆಸ್ತಿಯಲ್ಲ-ಚರಣ್ ರೆಡ್ಡಿ ಉದ್ಧಟತನ
ಜೂನ್ 5, 2016 1 ಟಿಪ್ಪಣಿ

ಇದು ನನ್ನ ಪ್ರತಿಬಿಂಬ…
ಜೂನ್ 5, 2016 1 ಟಿಪ್ಪಣಿ
ಜೂನ್ 5, 2016 ನಿಮ್ಮ ಟಿಪ್ಪಣಿ ಬರೆಯಿರಿ
ಪೊಲೀಸರ ಪ್ರತಿಭಟನೆಯನ್ನು ಎಸ್ಮಾ ಮತ್ತು ಶಿಸ್ತು ಕ್ರಮದ ಅಸ್ತ್ರ ಉಪಯೋಗಿಸಿ ಹತ್ತಿಕ್ಕುವಲ್ಲಿ ಸರಕಾರವೇನೋ ಯಶಸ್ವಿಯಾಗಿದೆ. ಆದರೆ ಒ೦ದು ಹ೦ತಕ್ಕೆ ಗೆದ್ದಿದ್ದು ಪೊಲೀಸರೇ..
ಜೂನ್ 2, 2016 ನಿಮ್ಮ ಟಿಪ್ಪಣಿ ಬರೆಯಿರಿ
ಜೂನ್ 4ರಂದು ಪೊಲೀಸರ ಪ್ರತಿಭಟನೆಗೆ ಕರೆ ನೀಡಿದ್ದ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್ರನ್ನ ಬಂಧಿಸಲಾಗಿದೆ. ಬುಧವಾರ ರಾತ್ರಿ 12.30ರ ಸಮಯದಲ್ಲಿ ಯಲಹಂಕ ಉಪನಗರದ ಶಶಿಧರ್ರ ಮನೆಯಿಂದ ಪೊಲೀಸರು ಇವರನ್ನ ಬಂಧಿಸಿ ಕರೆದೊಯ್ದಿದ್ದಾರೆ. ಪೊಲೀಸ್ ಪ್ರತಿಭಟನೆ ಹತ್ತಿಕ್ಕಲು ಹಲವು ಸಾಹಸ ಮಾಡಿದ್ದ ಸರಕಾರ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬಿಟ್ಟು ಈ ನಡುರಾತ್ರಿ ಕಾರ್ಯಾಚರಣೆ ನಡೆಸಿದೆ.
ಮುವತ್ತಕ್ಕೂ ಹೆಚ್ಚು ಮಂದಿ ಪೊಲೀಸರು ಶಶಿಧರ್ ಮನೆಗೆ ಏಕಾಏಕಿ ನುಗ್ಗಿ ಶಶಿಧರ್ ಅವರನ್ನು ಬಂಧಿಸಿ ಕರೆದೊಯ್ಯಲಾಯಿದೆ. ಈ ವೇಳೆ ಶಶಿಧರ್ ಮಗ ಜಾಗೃತ್ ಫೋಟೊ ತೆಗೆಯಲು ಮುಂದಾದಾಗ ಬಲವಂತವಾಗಿ ಮೊಬೈಲ್ ಕಿತ್ತು ಒಡೆದುಹಾಕಲಾಗಿದೆ. ಸರ್ಕಾರದ ವಿರುದ್ಧ ಸಮರ, ಒಳಸಂಚು ಮತ್ತು ಪೊಲೀಸರಿಗೆ ಪ್ರತಿಭಟನೆ ಮಾಡುವಂತೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಶಶಿಧರ್ ಅವರನ್ನ ಬಂಧಿಸಲಾಗಿದೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಅವರನ್ನು ಜೂನ್ 16 ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಜೂನ್ 1, 2016 ನಿಮ್ಮ ಟಿಪ್ಪಣಿ ಬರೆಯಿರಿ
ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ಪೊಲೀಸರು ಜೂ.4 ರಂದು ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಅವಧಿಗೂ ಮೀರಿ ಪೊಲೀಸರನ್ನು ದುಡಿಸಿಕೊಳ್ಳಲಾಗುತ್ತಿದೆ ಎಂಬುದು ಪ್ರತಿಭಟನೆಗಿಳಿದಿರುವವರ ಅಳಲು. ಹೌದು ರಾಜ್ಯದಲ್ಲಿ ಪೊಲೀಸರು ಪ್ರತಿದಿನ ಸರಾಸರಿ 12 ರಿಂದ 15 ಗಂಟೆಗಳ ಕಾಲ ದುಡಿಯುತ್ತಾರೆ. ಎಂಟು ಗಂಟೆಗಳ ಕಾಲ ಕೆಲಸ ಎಂಬುದು ಪೊಲೀಸರ ವಿಚಾರದಲ್ಲಿ ಕನಸಿನ ಮಾತೇ ಸರಿ. ಹೀಗೆ ಪೊಲೀಸರನ್ನು ಹೆಚ್ಚು ಅವಧಿಗೆ ದುಡಿಸಿಕೊಳ್ಳಲು ಕಾರಣ ರಾಜ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯ ಕೊರತೆ.
ರಾಜ್ಯ ಪೊಲೀಸ್ ಇಲಾಖೆಗೆ ಮಂಜೂರಾಗಿರುವ ಪೊಲೀಸ್ ಬಲ 1,01053. ಆದರೆ ಸದ್ಯ ರಾಜ್ಯದಲ್ಲಿರುವ ಪೊಲೀಸರ ಸಂಖ್ಯೆ ಕೇವಲ 73,746 ಅಷ್ಟೇ. ಅಂದರೆ ಸದ್ಯ ರಾಜ್ಯದಲ್ಲಿರುವ ಖಾಲಿ ಇರುವ ಹುದ್ದೆಗಳ ಸಂಖ್ಯೆ 33307. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆ ಇರುವುದರಿಂದ ಈಗ ಇರುವ ಪೊಲೀಸರು ಅನಿವಾರ್ಯವಾಗಿ ಹೆಚ್ಚಿನ ಅವಧಿಗೆ ದುಡಿಯುವಂತಾಗಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸರ ನೇಮಕವಾಗುತ್ತಿಲ್ಲ.
ಖಾಸಗಿ ಸಂಸ್ಥೆ ನೀಡಿರುವ ಅಂಕಿ ಅಂಶಗಳ ಪ್ರಕಾರ ರಾಜ್ಯದ ಜನಸಂಖ್ಯೆ 6 ಕೋಟಿ 60 ಲಕ್ಷ. ಇಷ್ಟು ಜನಸಂಖ್ಯೆಗೆ ರಾಜ್ಯದಲ್ಲಿರುವ ಪೊಲೀಸರ ಸಂಖ್ಯೆ ಮಾತ್ರ 73,746. ಅಂದರೆ ರಾಜ್ಯದ ಪ್ರತಿ 894 ಜನರಿಗೆ ಒಬ್ಬ ಪೊಲೀಸ್ ಸಿಬ್ಬಂದಿ ಇದ್ದಾರೆ. ರಾಜ್ಯದಲ್ಲಿ ಈಗ ಇರುವ ಪೊಲೀಸರ ಸಂಖ್ಯೆಯನ್ನು 1.5 ಲಕ್ಷಕ್ಕೆ ಏರಿಕೆ ಮಾಡಬೇಕೆಂದು ಪೊಲೀಸ್ ಇಲಾಖೆ ಸರಕಾರಕ್ಕೆ ಶಿಫಾರಸು ಮಾಡಿ ಎರಡು ವರ್ಷವೇ ಕಳೆದಿದೆ. ಆದರೆ ನೇಮಕ ಪ್ರಕ್ರಿಯೆ ಮಾತ್ರ ಅಂದುಕೊಂಡ ಸಂಖ್ಯೆಯಲ್ಲಿ ಆಗುತ್ತಿಲ್ಲ.
ವಿಪರ್ಯಾಸ ಅಂದರೆ ಪೊಲೀಸರ ಪ್ರತಿಭಟನೆಗೆ ನಮ್ಮ ಬೆಂಬಲ ಇದೆ ಅನ್ನುವ ಬಿಜೆಪಿ ಮುಖಂಡರು ತಮ್ಮ ಸರಕಾರ ಅಸ್ಥಿತ್ವದಲ್ಲಿದ್ದಾಗ ಪೊಲೀಸ್ ನೇಮಕ ಕಾರ್ಯವನ್ನೇ ನಡೆಸಿಲ್ಲ. ಇನ್ನು ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷ ಕಳೆದಿದೆ. ಎಂಟು ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ಘೋಷಣೆ ಮಾಡುತ್ತಲೇ ಇದ್ದಾರೆ. ಆದರೆ ಇನ್ನೂ ಅದು ಕಾರ್ಯಗತವಾಗಿಲ್ಲ. ‘ಜನಸಂಖ್ಯೆಗೆ ಅನುಗುಣವಾಗಿ, ಕಾನೂನು ಸುವ್ಯವಸ್ಥೆ ಮತ್ತು ಅಪರಾಧಗಳ ಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಪೊಲೀಸರ ನೇಮಕ ನಡೆಯದಿರುವ ಕಾರಣಕ್ಕೆ ಮಿತಿ ಮೀರಿದ ಕೆಲಸವನ್ನು ನಾವು ಮೈಮೇಲೆ ಎಳೆದುಕೊಳ್ಳುವಂತಾಗಿದೆ. ವಾರಕ್ಕೆ ಒಂದು ದಿನ ರಜೆ ಪಡೆಯುವುದಿರಲಿ, ತಿಂಗಳಿಗೆ ಒಂದು ದಿನ ರಜೆ ಸಿಕ್ಕರೆ ಅದೇ ಅದೃಷ್ಟ ಎನ್ನುವಂತಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳನ್ನು ಕೇಳಿದರೆ, ಇದು ಅನಿವಾರ್ಯ ಎನ್ನುತ್ತಾರೆ’ ಎಂದು ನೋವು ತೋಡಿಕೊಳ್ಳುತ್ತಾರೆ ನಗರದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಪೇದೆಯೊಬ್ಬರು.
ಸಿಬ್ವಂದಿ ಕೊರತೆಯಿಂದ ಸಮಸ್ಯೆಗಳು
894 ಜನರಿಗೆ ಒಬ್ಬ ಪೊಲೀಸ್!
ಬೆಂಗಳೂರಿನಲ್ಲಿ 766 ಜನರಿಗೆ ಒಬ್ಬ ಪೊಲೀಸ್!
–ಶಶಿವರ್ಣಂ!
ಮೇ 31, 2016 1 ಟಿಪ್ಪಣಿ
ಜೂ.4 ರಂದು ಪೊಲೀಸರು ಕರೆನೀಡಿರುವ ಪ್ರತಿಭಟನೆ ಹತ್ತಕ್ಕಲು ಸರಕಾರ ಎಸ್ಮಾ ಅಸ್ತ್ರ ಬಳಸಿದೆ. ಮಂಗಳವಾರ ಸಂಜೆ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿತ್ತು. ಸಭೆಯ ನಿರ್ಧಾರದಂತೆ ಅಂದು ರಜೆ ಸಲ್ಲಿಸುವ ಪೊಲೀಸರ ಮೇಲೆ ಎಸ್ಮಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಸರಕಾರ ಆದೇಶ ಹೊರಡಿಸಿದೆ. ಒಳಾಡಳಿತ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಪದ್ಮಿನಿ ದೇವಿ ಈ ಆದೇಶ ಹೊರಡಿಸಿದ್ದಾರೆ.
ಪೊಲೀಸರು ಅಪರಾಧ ಪತ್ತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆಯೊಂದಿಗೆ ನಾಗರಿಕರ ಆಸ್ತಿ ಮತ್ತು ಜೀವವನ್ನು ರಕ್ಷಿಸುವುದು ರಾಜ್ಯ ಪೊಲೀಸ್ ಸಿಬ್ಬಂದಿಯ ಮೂಲ ಕರ್ತವ್ಯವಾಗಿರುತ್ತದೆ. ಪೊಲೀಸ್ ಇಲಾಖೆಯ ಸಿಬ್ಬಂದಿಯು ಕಾರ್ಯನಿರ್ವಹಿಸಲು ನಿರಾಕರಿಸಿದಲ್ಲಿ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಸುರಕ್ಷತೆ ಧಕ್ಕೆ ಉಂಟಾಗಿ ಸಮಾಜದ ಸ್ವಾಸ್ಥ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದರಿಂದ ಅಪರಾಧ ಚಟುವಟಿಕೆಗಳು ಹೆಚ್ಚಾಗಿ ಸಾರ್ವಜನಿಕ ಜೀವನ ಅಸ್ಥವ್ಯಸ್ಥವಾಗುತ್ತದೆ ಎಂಬುದು ಸರಕಾರದ ಅಭಿಪ್ರಾಯವಾಗಿದೆ. ಆದ್ದರಿಂದ ರಾಜ್ಯದ ಸುರಕ್ಷತೆ ಚದೃಷ್ಠಿಯಿಂದ ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ಅಧಿನಿಯಮ, 2013(ಎಸ್ಮಾ) ಜಾರಿ ಮಾಡಿ ಈ ಕ್ಷಣದಿಂದಲೇ ಘೋಷಿಸಲಾಗಿದೆ. ರಾಜ್ಯ ಪೊಲೀಸ್ ಸೇವೆಗೆ ಸೇರಿದ ಎಲ್ಲಾ ಸೇವೆಗಳು “ಅತ್ಯಾವಶ್ಯಕ ಸೇವೆ” ಎಂದು ಪರಿಗಣಿಸಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ.
ಈ ಮೂಲಕ ಪ್ರತಿಭಟನೆ ನಡೆಸಲು ಮುಂದಾಗಿದ್ದ ಪೊಲೀಸರ ಮೇಲೆ ಎಸ್ಮಾ ಕಾಯ್ದೆ ಜಾರಿ ಮಾಡಿ ಆದೇಶ ಹೊರಡಿಸಿದೆ.
“ಇದು ಸರಕಾರತದ ದೌರ್ಬಲ್ಯವನ್ನು ತೋರಿಸುತ್ತದೆ. ಪೊಲೀಸರ ಒಗ್ಗಟ್ಟಿನಿಂದ ಸರಕಾರ ಹೆದರಿದೆ. ಮುಂದಿನ ಸಾಧ್ಯಾ ಸಾಧ್ಯತೆಗಳ ಬಗ್ಗೆ ವಕೀಲರಿಂದ ಸಲಹೆ ಪಡೆದು ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು. ಇದು ಸರಕಾರದ ಹೇಡಿತನದ ನಿರ್ಧಾರ. ಪೊಲೀಸರೊಂದಿಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಯಾಕೆಂದರೆ ಇದು ಪೊಲೀಸರ ಜೀವನದ ಪ್ರಶ್ನೆ. ಸರಕಾರ ಪೊಲೀಸರ ಜೀವನದೊಂದಿಗೆ ಆಟವಾಡುತ್ತಿದೆ’ ಎಂದು ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ತಿಳಿಸಿದ್ದಾರೆ.
ಎಸ್ಮಾ ಕಾಯ್ದೆ ಹೇಳುವುದೇನು?
ಅಗತ್ಯ ಸೇವೆಗಳಾದ ಆರೋಗ್ಯ ಸೇವೆಗಳು, ಸಾರ್ವಜನಿಕ ಸಾರಿಗೆ, ವಿದ್ಯುತ್ ಪೂರೈಕೆ, ಅಗತ್ಯ ವಸ್ತುಗಳ ಮಾರಾಟದಲ್ಲಿ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರ ವರ್ಗದವರು ಮುಷ್ಕರ ನಡೆಸದಂತೆ ನೋಡಿಕೊಳ್ಳುವುದೇ ಎಸ್ಮಾ ಕಾಯ್ದೆ. ಈ ಕಾಯ್ದೆ ಜಾರಿಯಾದ ಇಲಾಖೆಗಳ ನೌಕರರು ಮುಷ್ಕರ ನಡೆಸುವುದು ಅಪರಾಧ. ಕಾಯ್ದೆ ಉಲ್ಲಂ ಸಿ ಮುಷ್ಕರದಲ್ಲಿ ಭಾಗಿಯಾದರೆ ದಂಡ ವಿಧಿಸುವ ಮತ್ತು ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವನ್ನು ಈ ಕಾನೂನು ಕಲ್ಪಿಸುತ್ತದೆ.
– ಶಶಿವರ್ಣಂ
ಮೇ 30, 2016 ನಿಮ್ಮ ಟಿಪ್ಪಣಿ ಬರೆಯಿರಿ
ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಪೊಲೀಸರು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಸರಕಾರ ಹಲವು ತಂತ್ರಗಳನ್ನು ಅನುಸರಿಸುತ್ತಿದೆ.ರಜೆ ಮಂಜೂರು ಮಾಡದಂತೆ ಡಿಜಿಪಿ ಮೂಲಕ ಆದೇಶ ಹೊರಡಿಸಿದ್ದ ಸರಕಾರ ನಂತರ ಸಸ್ಪೆಂಡ್ ಮಾಡುವ ಬೆದರಿಕೆಯೊಡ್ಡಿತ್ತು. ಈಗ ಅನಾರೋಗ್ಯದ ನೆಪ ಹೇಳಿ ರಜೆ ಹಾಕುವ ಸಿಬ್ಬಂದಿಗೆ ವೈದ್ಯಕೀಯ ಪ್ರಮಾಣ ಪತ್ರ ನೀಡದಂತೆ ಆರೋಗ್ಯ ಇಲಾಖೆಗೆ ಲಿಖಿತ ಆದೇಶ ನೀಡಿದೆ. ಅಂದು ರಜೆ ಹಾಕುವ ಪೊಲೀಸರಿಗೆ ಅನಾರೋಗ್ಯದ ಕಾರಣದಿಂದಾಗಿ ರಜೆ ಸಲ್ಲಿಸಲೂ ಆಗದಂತೆ ಸರಕಾರ ಹಿಂಬಾಗಿಲ ಮೂಲಕ ಒತ್ತಡ ತಂತ್ರ ಅನುಸರಿಸುತ್ತಿದೆ.ಪ್ರತಿಭಟನೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಪೊಲೀಸರು ಅಂದು ಅನಾರೋಗ್ಯದ ನೆಪದಿಂದ ರಜೆ ಹಾಕಿ ಸಂಭಾವ್ಯ ಶಿಸ್ತು ಕ್ರಮವನ್ನು ತಪ್ಪಿಸಿಕೊಳ್ಳಲು ಯೋಜನೆ ರೂಪಿಸಿದ್ದರು. ಆದರೆ ಈಗ ಪೊಲೀಸರಿಗೆ ಪ್ರಮಾಣ ಪತ್ರ ನೀಡದಂತೆ ಆರೋಗ್ಯ ಇಲಾಖೆಗೆ ಆದೇಶ ನೀಡಿ ಏಟಿಗೆ ಎದಿರೇಟು ಕಾರ್ಯತಂತ್ರಕ್ಕೆ ಸರಕಾರ ಇಳಿದಿದೆ.
ಈ ಕಾರಣದಿಂದ ಜೂ.4 ರಂದು ರಜೆ ಸಲ್ಲಿಸುವ ಪೊಲೀಸರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಪ್ರಮಾಣ ಪತ್ರ ಸಿಗುವುದಿಲ್ಲ.‘ಇದು ಸಂವಿಧಾನ ವಿರೋಧಿ ಸರಕಾರ. ಒಂದು ಪ್ರತಿಭಟನೆಯನ್ನು ಹತ್ತಿಕ್ಕಲು ಸರಕಾರ ತನ್ನ ಅಧಿಕಾರವನ್ನುದುರ್ಬಳಕೆ ಮಾಡಿಕೊಂಡು ಈ ಆದೇಶ ನೀಡಿದೆ. ಈ ರೀತಿಯ ಆದೇಶ ಹೊರಡಿಸಲು ಕಾನೂನಿನ ಪ್ರಕಾರ ಅವಕಾಶವೇ ಇಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಪ್ರಮಾಣ ಪತ್ರ ನೀಡದಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ ನಡೆಸಿ ಅಲ್ಲಿ ಪ್ರಮಾಣ ಪತ್ರ ಪಡೆದುಕೊಳ್ಳುವಂತೆ ಎಲ್ಲ ಪೊಲೀಸರಿಗೆ ಸೂಚನೆ ನೀಡಿದ್ದೇನೆ’ ಎಂದು ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ‘ವಿಶ್ವವಾಣಿ’ಗೆ ತಿಳಿಸಿದ್ದಾರೆ
ಫೇಸ್ಬುಕ್, ವಾಟ್ಸ್ಆಪ್ ಪ್ರಚೋದನೆಗೆ ಕ್ರಮ
ಪೊಲೀಸರು ಉದ್ದೇಶಿಸಿರುವ ಪ್ರತಿಭಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ಮತ್ತು ಪ್ರಚಾರ ಸಿಗುತ್ತಿದೆ. ಇದರಿಂದ ಕಂಗೆಟ್ಟಿರುವ ಗೃಹ ಇಲಾಖೆ ಸಾಮಾಜಿಕ ಜಾಲತಾಣಗಳ ಮೂಲಕ ಪೊಲೀಸರನ್ನು ಪ್ರತಿಭಟನೆಗಿಳಿಯುವಂತೆ ಪ್ರಚೋದನೆ ನೀಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರನ್ನು ಪ್ರತಿಭಟನೆಗೆ ಪ್ರೇರೇಪಿಸುವಂತಹ ಪೋಸ್ಟ್ಗಳನ್ನು ಹಾಕಿದವರ ಪತ್ತೆ ಮಾಡುವ ಕೆಲಸ ನಡೆಯುತ್ತಿದೆ.
ಆತ್ಮಹತ್ಯೆಗೆ ಅನುಮತಿ ಕೊಡಿ: ಪತ್ರ
ನಗರ ಪೊಲೀಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ನಾಲ್ವರು ಪೊಲೀಸ್ ಕಾನ್ಸ್ಟೇಬಲ್ಗಳು ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೋರಿ ರಾಜ್ಯಪಾಲರಿಗೆ ಮನವಿ ಪತ್ರ ಬರೆದಿದ್ದಾರೆ. ವೇತಮ ತಾರತಮ್ಯ, ಅವಧಿ ಮೀರಿದ ಕೆಲಸ, ಹಿರಿಯ ಅಧಿಕಾರಿಗಳಿಂದ ಕಿರುಕುಳ ಸೇರಿದಂತೆ ಹಲವು ಸಮಸ್ಯೆಗಳಿವೆ. ನಮ್ಮ ಹಕ್ಕು ಕೇಳುವ ಉದ್ದೇಶಿದಿಂದ ಜೂ.4 ರಂದು ರಜೆಗಾಗಿ ಅರ್ಜಿ ಸಲ್ಲಿಸಿದ್ದೇವೆ. ಹಿರಿಯ ಅಧಿಕಾರಿಗಳು ರಜೆ ಮಂಜೂರು ಮಾಡದಿದ್ದರೆ ಅಥವಾ ಬೇರೆ ಶಿಸ್ತು ಕ್ರಮ ತೆಗೆದುಕೊಂಡರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ದಯವಿಟ್ಟು ಅನುಮತಿ ನೀಡಿ’ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ದಶಕಗಳ ನಮ್ಮ ನಿಕೃಷ್ಠ ಬದುಕನ್ನು ಕೊನೆಗಾಣಿಸಿ ಬೇಡಿಕೆಗಳನ್ನು ಈಡೇರಿಸಿ ಅಂತಾ ಕೇಳಿದರೆ ನಮ್ಮ ಮೆಲೆ ದಬ್ಬಾಳಿಕೆ ಮಾಡುತ್ತಿರುವ ಸರಕಾರಕ್ಕೆ ನನ್ನದೊಂದು ಪ್ರಶ್ನೆ. ನೀವು ನಮ್ಮ ಮೆಲೆ ಇನ್ನೂ ಬ್ರಿಟಿಷ್ ಆಡಳಿತವನ್ನು ಹೇರಿ ನಮ್ಮನ್ನು ಶೋಷಣೆ ಮಾಡುತ್ತಿದ್ದೀರಲ್ಲಾ. ಇದು ಯಾವ ನ್ಯಾಯ ಸ್ವಾಮಿ..?- ರಮೇಶ್, ಪೇದೆ
ಮೇ 29, 2016 ನಿಮ್ಮ ಟಿಪ್ಪಣಿ ಬರೆಯಿರಿ
ರಾಜ್ಯವ್ಯಾಪಿ ಜೂ.4 ರ೦ದು ಪ್ರತಿಭಟನೆಗೆ ಮು೦ದಾಗಿರುವ ಪೊಲೀಸರ ಸಾಮೂಹಿಕ ರಜೆ ಸಲ್ಲಿಕೆ ಪವ೯ ಮು೦ದುವರಿದಿದೆ. ರಾಜ್ಯ ಪೊಲೀಸ್ ಪಡೆಯ ಅಧ೯ದಷ್ಟು ಮ೦ದಿ ಈಗಾಲೇ ರಜೆ ನೀಡುವ೦ತೆ ಅಜಿ೯ ಸಲ್ಲಿಸಿದ್ದಾರೆ.
ಪ್ರತಿಭಟನೆ ಕೈ ಬಿಡುವ೦ತೆ ರಾಜ್ಯದ ಮುಖ್ಯಮ೦ತ್ರಿ ಮತ್ತು ಗೃಹ ಸಚಿವರ ಮನವಿಗೆ ಪೊಲೀಸರು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಈಗಾಗಲೇ ರಾಜ್ಯಾದ್ಯ೦ತ 35 ಸಾವಿರಕ್ಕೂ ಹೆಚ್ಚು ಪೊಲೀಸರು ಪ್ರತಿಭಟನೆಯಲ್ಲಿ ಭಾಗಿಯಾಗಲು ರಜೆ ನೀಡುವ೦ತೆ ಅಜಿ೯ ಸಲ್ಲಿಸಿದ್ದಾರೆ. ಅ೦ದು ಯಾರಿಗೂ ರಜೆ ಮ೦ಜೂರು ಮಾಡದ೦ತೆ ಡಿಜಿಪಿ ಓ೦ ಪ್ರಕಾಶ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಕ್ಯಾರೆ ಅನ್ನದ ಪೊಲೀಸರು ಸಾಮೂಹಿಕವಾಗಿ ರಜೆಗೆ ಅಜಿ೯ ಸಲ್ಲಿಸುತ್ತಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆಯ ಬಲ 73 ಸಾವಿರ. ಇದರಲ್ಲಿ ಸುಮಾರು 60 ಸಾವಿರದಷ್ಟು ಮ೦ದಿ ಕಾನ್ಸ್ ಟೇಬಲ್ಗಳೇ ಇದ್ದಾರೆ. ರಜೆ ಸಲ್ಲಿಸಿರುವ ಬಹುತೇಕ ಮ೦ದಿ ಕಾನ್ಸ್ಟೇಬಲ್ ಮತ್ತು ಎಎಸ್ಐ ದಜೆ೯ಯ ಸಿಬ್ಬ೦ದಿ. ಅಧ೯ಕ್ಕೂ ಅ˜ಕ ಮ೦ದಿ ಈಗಾಗಲೇ ರಜೆ ಅಜಿ೯ ಸಲ್ಲಿಸಿದ್ದು ಈ ಸ೦ಖ್ಯೆ ಜೂ.4 ರ ವೇಳೆಗೆ ಐವತ್ತು ಸಾವಿರಕ್ಕೆ ದಾಟಿದರೂ ಅಚ್ಚರಿಯಿಲ್ಲ. ಒ೦ದು ವೇಳೆ ಇಷ್ಟು ದೊಡ್ಡ ಸ೦ಖ್ಯೆಯಲ್ಲಿ ಪೊಲೀಸರು ರಜೆ ಹಾಕಿ ಪ್ರತಿಭಟನೆ ನಡೆಸಿದ್ದೇ ಆದರೆ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇ೦ತದ್ದೊ೦ದು ಬೆಳವಣಿಗೆಗೆ ಕಾರಣವಾಗಲಿದೆ.
“ಮೂವತ್ತು ವಷ೯ ಪೊಲೀಸ್ ಇಲಾಖೆಯಲ್ಲಿ ಜೀತದಾಳುಗಳ ರೀತಿ ಕೆಲಸ ಮಾಡುವುದಕ್ಕಿ೦ತ ಜೂ.4 ರ೦ದು ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ. ನನ್ನನ್ನು ಕೆಲಸದಿ೦ದ ತೆಗೆದರೆ ಕಾನೂನು ರೀತಿ ಹೋರಾಟ ಮಾಡುತ್ತೇನೆ. ನನ್ನ ಹಕ್ಕಿನ ರಜೆಯನ್ನು ಕಿತ್ತುಕೊಳ್ಳಲು ಯಾರಿ೦ದಲೂ ಸಾಧ್ಯವಿಲ್ಲ. ಇಷ್ಟು ದಿನ ನಮ್ಮ ಸಮಸ್ಯೆಗಳನ್ನು ಕಿವಿಗೆ ಹಾಕಿಕೊಳ್ಳದವರು ಈಗ ನಮ್ಮ ಒಗ್ಗಟ್ಟು ನೋಡಿ ಸಮಸ್ಯೆ ಬಗೆಹರಿಸುವ ಮಾತು ಗಳನ್ನಾಡುತ್ತಿದ್ದಾರೆ. ಇ೦ತಹ ಓಲ್ಯೆಕೆಗಳಿಗೆ ನಾವು ಬಲಿಯಾಗುವುದಿಲ್ಲ’ ಎ೦ದು ಪೊಲೀಸ್ ಪೇದೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮಾನತು ಬೆದರಿಕೆಗೆ ಜಗ್ಗದ ಪೊಲೀಸರು
ಪ್ರತಿಭಟನೆ ನಡೆಸುವ ಉದ್ದೇಶದಿ೦ದ ಜೂ.4 ರ೦ದು ರಜೆಗೆ ಅಜಿ೯ ಸಲ್ಲಿಸಿರುವ ಪೊಲೀಸರನ್ನು ಸಸ್ಪೆ ೦ಡ್ ಮಾಡಲಾಗುವುದು ಎ೦ಬ ಹಿರಿಯ ಅಕಾರಿಗಳ ಬೆದರಿಕೆಗೆ ಪೇದೆಗಳು ಜಗ್ಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಐಪಿಎಸ್ ಅಕಾರಿಗಳ ಈ ಷಡ್ಯ೦ತ್ರದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. “ಕತ೯ವ್ಯ ನಿರತ ಅಕಾರಿಯನ್ನು ಸಸ್ಪೆ ೦ಡ್ ಮಾಡಲಾಗುತ್ತದೆ ಎ೦ಬ ಬೆದರಿಕೆಯೇ ಕಾನೂನು ಬಾಹಿರ. ಆದರೂ ಈ ರೀತಿ ಸಿಬ್ಬ೦ದಿಯಲ್ಲಿ ಭಯ ಸೃಷ್ಟಿಸಲು ಹಿರಿಯ ಅಕಾರಿಗಳು ಷಡ್ಯ೦ತ್ರ ರೂಪಿಸುತ್ತಿದ್ದಾರೆ. ನಮ್ಮ ಒಗ್ಗಟ್ಟನ್ನು ಒಡೆಯಲು ಈ ರೀತಿ ಮಾಡಲಾಗುತ್ತಿದೆ’ ಎ೦ದು ಪೊಲೀಸರಲ್ಲಿ ಧೈಯ೯ ತು೦ಬುವ ಕೆಲಸ ನಡೆಯುತ್ತಿದೆ.
ದಬ್ಬಾಳಿಕೆಯ ಮೂಲಕ ಕೆಲ ಪೊಲೀಸರಿ೦ದ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ. ರಜೆ ಅಜಿ೯ ಹಾಕಿ ತಪ್ಪು ಮಾಡಿದ್ದೇನೆ ಎ೦ದು ಕೆಲವು ಹಿರಿಯ ಅಕಾರಿಗಳು ಮುಚ್ಚಳಿಕೆ ಬರೆಸಿಕೊಳ್ಳುತ್ತಿ ದ್ದಾರೆ. ಈ ಗೊಡ್ಡು ಬೆದರಿಕೆಗಳಿಗೆ ನಾವು ಜಗ್ಗುವುದಿಲ್ಲ. –ಶಶಿಧರ್, ಕನಾ೯ಟಕ ಪೊಲೀಸ್ ಮಹಾಸ೦ಘದ ಅಧ್ಯಕ್ಷ
ವೇತನ ತಾರತಮ್ಯವೇ ದೊಡ್ಡ ಸಮಸ್ಯೆ
ಕನಾ೯ಟಕ ಪೊಲೀಸ್ ಸಿಬ್ಬ೦ದಿಗಳ ಮೂಲ ವೇತನ 11,600 ಮತ್ತು ಡಿಎ, ಇತರೆ ಭತ್ಯೆಗಳು ಸೇರಿ 17000 ಆಗುತ್ತದೆ. ಅದೇ ರೀತಿ ಹೊರ ರಾಜ್ಯದ ಪೊಲೀಸ್ ಸಿಬ್ಬ೦ದಿಗಳ ಮೂಲ ವೇತನ 23,200 ಮತ್ತು ಡಿಎ, ಇತರೆ ಭತ್ಯೆ ಗಳು ಸೇರಿ ಸುಮಾರು 32,000 ದಿ೦ದ 35000 ಆಗುತ್ತದೆ. ಅ೦ದರೆ ಕನಾ೯ಟಕ ರಾಜ್ಯ ಪೊಲೀಸರಿಗೂ ಹೊರ ರಾಜ್ಯದ ಪೊಲೀಸರಿಗೂ ವೇತನದಲ್ಲಿ ಇರುವ ವ್ಯತ್ಯಾಸ ಸುಮಾರು 15ರಿ೦ದ 18 ಸಾವಿರ.
– ಶಶಿವರ್ಣಂ
ಮೇ 27, 2016 ನಿಮ್ಮ ಟಿಪ್ಪಣಿ ಬರೆಯಿರಿ
ಜೂ.4 ರಂದು ರಾಜ್ಯವ್ಯಾಪಿ ಪ್ರತಿಭಟನೆ ಮಾಡಲು ಮುಂದಾಗಿರುವ ಪೊಲೀಸರಿಗೆ ‘ಸಸ್ಪೆಂಡ್’ ಗುಮ್ಮ ಕಾಡುತ್ತಿದೆ. ಕೆಳ ಹಂತದ ಪೊಲೀಸರಲ್ಲಿನ ಒಗ್ಗಟ್ಟಿನಿಂದ ಕಂಗೆಟ್ಟಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಈಗ ಒತ್ತಡ ತಂತ್ರ ಅನುಸರಿಸಲು ಮುಂದಾಗಿದ್ದಾರೆ.ಹಲವು ಬೇಡಿಕೆ ಮುಂದಿಟ್ಟುಕೊಂಡು ‘ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘ’ದ ರಾಜ್ಯಾಧ್ಯಕ್ಷ ಶಶಿಧರ್ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಪ್ರಚಾರ ಮಾಡಲಾಗುತ್ತಿದ್ದು, ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅನೇಕ ವರ್ಷಗಳಿಂದ ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಕೆಳ ಹಂತದ ಪೊಲೀಸ್ ವಲಯ ಸಹನೆಯ ಕಟ್ಟೆಯೊಡೆದು ಹೋರಾಟಕ್ಕೆ ಮುಂದಾಗಿದೆ
.ಹೇಗಾದರೂ ಮಾಡಿ ಪ್ರತಿಭಟನೆಯನ್ನು ಹತ್ತಿಕ್ಕಲೇ ಬೇಕು ಎಂಬ ನಿರ್ಧಾರಕ್ಕೆ ಬಂದಿರುವ ಐಪಿಎಸ್ ಅಧಿಕಾರಿಗಳ ಬಳಗ ಪ್ರತಿಭಟನೆಯಲ್ಲಿ ಭಾಗಿಯಾಗುವ ಪೊಲೀಸರನ್ನು ಸಸ್ಪೆಂಡ್ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ರಜೆಗೆ ಅರ್ಜಿ ಸಲ್ಲಿಸುತ್ತಿರುವ ಪೊಲೀಸರಿಗೆ ರಜೆ ಮಂಜೂರು ಮಾಡಿ ಎಂದು ಡಿಜಿಪಿ ಓಂ ಪ್ರಕಾಶ್ ಕಟ್ಟು ನಿಟ್ಟಿನ ಸೂಚನೆ ನೀಡಿದ ಬೆನ್ನಲ್ಲೇ ಸಸ್ಪೆಂಡ್ ಮಾಡುವ ಬೆದರಿಕೆ ಒಡ್ಡಲಾಗುತ್ತಿದೆ. ಇದು ಪೊಲೀಸ್ ಕಾನ್ಸ್ಟೇಬಲ್ಗಳ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಗುಂಪು ಗುಂಪಾಗಿ ರಜೆ ಪತ್ರ ನೀಡಿ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಇದರಿಂದ ಸೂರ್ತಿಗೊಂಡಿರುವ ಮತ್ತಷ್ಟು ಪೊಲೀಸರು ರಜೆಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು, ಒತ್ತಡ ಪ್ರಯೋಗಿಸಲಾಗುತ್ತಿದೆ. ತಪ್ಪು ಮಾಡಿದರೆ ನೋಟಿಸ್ ಕೊಡಲಿ. ಪೊಲೀಸರಿಗೆ ಭಯ ಉಂಟು ಮಾಡಿ ಬೆದರಿಕೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಸಸ್ಪೆಂಡ್ ಮಾಡುವುದನ್ನು ಪೂರ್ವ ನಿರ್ಧಾರ ಮಾಡಲು ಸಾಧ್ಯವಿಲ್ಲ. ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ‘ವಿಶ್ವವಾಣಿ’ಗೆ ತಿಳಿಸಿದ್ದಾರೆ.
ಹಲವು ವರ್ಷಗಳಿಂದ ನಮ್ಮ ಪೊಲೀಸರು ಬಿಡುವಿಲ್ಲದೇ ಕೆಲಸ ನಿರ್ವಹಿಸಿದ್ದಾರೆ. ಜೂ.4 ರಂದು ಒಂದು ದಿನ ಸರಕಾರ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಿ. ನಾವು ಶಿಸ್ತಿನ ಸಿಪಾಯಿಗಳು. ಶಾಂತಿಯುತವಾಗಿ ಹೋರಾಟ ನಡೆಸುತ್ತೇವೆ. ನಮ್ಮ ಪೊಲೀಸರು ಅಂದು ರಜೆ ಹಾಕಿ ಮನೆಗಳಲ್ಲಿ ಇರುತ್ತಾರೆ. ಅವರ ಪರವಾಗಿ ಕುಟುಂಬಗಳು ಬೀದಿಗಿಳಿಯಲಿವೆ. ನಮಗೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಯಾವ ಶಕ್ತಿಗಳೂ ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ– ಶಶಿಧರ್ , ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ.
15 ಸಾವಿರ ಮಂದಿಯಿಂದ ರಜೆ ಅರ್ಜಿ
ರಾಜ್ಯದ ಪೊಲೀಸ್ ಬಲ ಇರುವುದು 73 ಸಾವಿರ. ಇಲಾಖೆಗೆ ಕಾನ್ಸ್ಟೇಬಲ್ ಮಟ್ಟದ ಸಿಬ್ಬಂದಿಯೇ ಶಕ್ತಿ. ಸುಮಾರು 60 ಸಾವಿರದಷ್ಟು ಕಾನ್ಸ್ಟೇಬಲ್ಗಳು ರಾಜ್ಯದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಜತೆಗೆ ಎಸ್ಐ ಮಟ್ಟದ ಅಧಿಕಾರಿಗಳಿಂದಲೂ ಹೋರಾಟಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಈಗಾಗಲೇ ಸುಮಾರು 15 ಸಾವಿರ ಪೊಲೀಸರು ಒಂದು ದಿನದ ಕಿರುಕುಳ ರಜೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಫೇಸ್ಬುಕ್, ಟ್ವೀಟರ್ ಮತ್ತು ವಾಟ್ಸ್ ಆಪ್ ಮೂಲಕ ಹೋರಾಟದಲ್ಲಿ ಭಾಗವಹಿಸುವಂತೆ ಪೊಲೀಸರಲ್ಲಿ ಜಾಗೃತಿ ಮೂಡಿ ಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ರಜೆ ಅರ್ಜಿ ಸಲ್ಲಿಸಲು ಮುಂದಾಗಲಿದ್ದಾರೆ.
ಪುಂಡ ಪೋಕರಿಗಳು ಪ್ರತಿಭಟನೆ ಮಾಡ್ತೀವಿ ಅಂತಿದ್ದಾರೆ: ಡಿಜಿಪಿ
ಯಾರೂ ಪ್ರತಿಭಟನೆ ಮಾಡುತ್ತಿಲ್ಲ. ಕೆಲವು ಪುಂಡ ಪೋಕರಿಗಳು ಪ್ರತಿಭಟನೆ ಮಾಡುತ್ತೇವೆ ಎನ್ನುತ್ತಿದ್ದಾರೆ. ನಾವು ಇಲಾಖಾ ಮಟ್ಟದಲ್ಲಿ ಬಗೆಹರಿಸಿಕೊಳ್ಳುತ್ತೇವೆ. ಹೊರಗಿನವರು ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮದು ಶಿಸ್ತಿನ ಇಲಾಖೆ. ಪೊಲೀಸರನ್ನು ಪ್ರತಿಭಟನೆ ಮಾಡಲು ಕುಮ್ಮಕ್ಕು ನೀಡಿದರೆ ಅದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ.
ಪೊಲೀಸ್ ವಲಯದಲ್ಲಿ ಸಮಸ್ಯೆಗಳಿರುವುದು ನಿಜ. ಅವುಗಳನ್ನು ಸರಿಪಡಿಸಲು ನಾವು ಪ್ರಯತ್ನ ಮಾಡುತ್ತಿ ದ್ದೇವೆ. ಈ ಬಗ್ಗೆ ಸರಕಾರದೊಂದಿಗೆ ಮಾತನಾಡುತ್ತಿದ್ದೇವೆ. ಸಾಮೂಹಿಕ ರಜೆ ಹಾಕುತ್ತಿದ್ದಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಪ್ರತಿಭಟನೆಯಲ್ಲಿ ಭಾಗಿಯಾಗುವವರ ವಿರುದ್ಧ ಕಾನೂನಿನ ಆಯ್ಕೆಗಳಿವೆ. ಆ ಪ್ರಕಾರ ಕ್ರಮ ಕೈಗೊಳ್ಳಲು ಚರ್ಚೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ವಿಶ್ವವಾಣಿಗೆ ತಿಳಿಸಿದ್ದಾರೆ.
–ಶಶಿವರ್ಣಂ!
ಮೇ 26, 2016 ನಿಮ್ಮ ಟಿಪ್ಪಣಿ ಬರೆಯಿರಿ
ಪೊಲೀಸರು ಜೂ.4 ರ೦ದು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಿದ್ದಾರೆ ಎ೦ಬ ವಿಚಾರ ಭಾರಿ ಸ೦ಚಲನ ಸೃಷ್ಟಿಸಿದೆ. ಈಗಾಗಲೇ ಪೊಲೀಸರು ಸಾಮೂಹಿಕ ರಜೆ ಹಾಕಿ ಪ್ರತಿ ಭಟನೆಯಲ್ಲಿ ಭಾಗವಹಿಸಲು ಸಜ್ಜಾದರೆ, ರಜೆ ಮ೦ಜೂರು ಮಾಡದ೦ತೆ ಪೊಲೀಸ್ ಮಹಾನಿದೇ೯ಶಕ ಓ೦ ಪ್ರಕಾಶ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿ ರುವ ರಾಜಕೀಯ ಹಸ್ತಕ್ಷೇಪ, ವೇತನ ತಾರತಮ್ಯ, ದೌಜ೯ನ್ಯ ಸೇರಿದ೦ತೆ ಹಲವು ಬೇಡಿಕೆಗಳ ಮು೦ದಿಟ್ಟು ಪ್ರತಿಭಟನೆ ನಡೆಸುವ೦ತೆ ರಾಜ್ಯ ಪೊಲೀಸ್ ಸ೦ಘದ ಅಧ್ಯಕ್ಷ ಶಶಿಧರ್ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣ, ಸ೦ಘಟನೆಗಳಿ೦ದ ಈ ಹೋರಾಟಕ್ಕೆ ಬೆ೦ಬಲ ವ್ಯಕ್ತವಾಗಿದೆ.
ರಾಜ್ಯದ ಪೊಲೀಸರ ಸ೦ಖ್ಯೆ 73 ಸಾವಿರ. ಇದರಲ್ಲಿ 60 ಸಾವಿರಕ್ಕೂ ಹೆಚ್ಚು ಮ೦ದಿ ಕಾನ್ಸ್ಟೇಬಲ್ಗಳೇ ಇದ್ದಾರೆ. ಅ೦ದಾಜಿನ ಪ್ರಕಾರ ಈಗಾಗಲೇ ಹತ್ತು ಸಾವಿರಕ್ಕೂ ಹೆಚ್ಚು ಮ೦ದಿ ಜೂ.4ರ೦ದು ರಜೆ ನೀಡುವ೦ತೆ ಕೋರಿ ಅಜಿ೯ ಸಲ್ಲಿಸಿದ್ದಾರೆ. ಇನ್ನಷ್ಟು ಮ೦ದಿ ರಜೆಗೆ ಅಜಿ೯ ಸಲ್ಲಿಸಲು ಮು೦ದಾಗಿದ್ದಾರೆ. ಕೆಲಸ ಕಳೆದುಕೊಳ್ಳುವ ಭೀತಿಯಿ೦ದ ಕೆಲವರು ರಜೆ ಹಾಕಲು ಹಿ೦ಜರಿಯುತ್ತಿದ್ದಾರೆ.
ಪ್ರತಿಭಟನೆಗೆ ಇಲಾಖೆಯ ಒಳಗೇ ಇಷ್ಟು ದೊಡ್ಡ ಮಟ್ಟದ ಬೆ೦ಬಲ ವ್ಯಕ್ತವಾಗಿರೋದು ಗೃಹ ಸಚಿವ ಜಿ. ಪರಮೇಶ್ವರ್ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಒ೦ದು ವೇಳೆ ಜೂ.4 ರ೦ದು ಪೊಲೀಸರು ಸಾಮೂಹಿಕವಾಗಿ ರಜೆ ಹಾಕಿ ಪ್ರತಿಭಟನೆ ನಡೆಸಿದ್ದೇ ಆದಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಪೊಲೀಸರು ಬೀದಿಗಿಳಿದ೦ತಾಗು ತ್ತದೆ. ಆ ಮೂಲಕ ರಾಜ್ಯ ಸರಕಾರಕ್ಕೆ ದೊಡ್ಡ ಮುಖಭ೦ಗವಾಗಲಿದೆ.
ಈ ಮುಖಭ೦ಗ ತಪ್ಪಿಸಿಕೊಳ್ಳಲು ಪೊಲೀಸ್ ಮಹಾನಿದೇ೯ಶಕ ಓ೦ ಪ್ರಕಾಶ್ ಅ೦ದು ಯಾರಿಗೂ ರಜೆ ಮ೦ಜೂರು ಮಾಡದ೦ತೆ ಎಲ್ಲ ವಲಯಗಳ ಎಡಿಜಿಪಿ, ಎಸ್ಪಿಗಳು ಮತ್ತು ಕಮಿಷನರ್ಗಳಿಗೆ ಲಿಖಿತ ಸೂಚನೆ ನೀಡಿದ್ದಾರೆ. ಇದಷ್ಟೇ ಅಲ್ಲದೇ ರಜೆ ಹಾಕಿ ಪ್ರತಿಭಟನೆಯಲ್ಲಿ ಭಾಗಿಯಾದರೆ ಅ೦ಥವರನ್ನು ಅಮಾನತು ಗೊಳಿಸಲಾಗುವುದು ಎ೦ಬ ಸ೦ದೇಶವನ್ನೂ ನೀಡಲಾಗಿದೆ.
ಅ ನಿಯಮಗಳ ಪ್ರಕಾರ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬ೦ದಿ ಪ್ರತಿಭಟನೆಯಲ್ಲಿ ಭಾಗವಹಿಸುವ೦ತಿಲ್ಲ. ಎಸ್ಮಾ ಕಾಯ್ದೆಯ ಅಡಿಯಲ್ಲಿ ಬರುವುದ ರಿ೦ದ ಪ್ರತಿಭಟನೆ ನಡೆಸುವ ಹಕ್ಕು ಪೊಲೀಸರಿಗಿಲ್ಲ. ಇದನ್ನು ಮೀರಿಯೂ ಪ್ರತಿಭಟನೆ ನಡೆಸಲು ಮು೦ದಾಗಿರೋದು ಮತ್ತು ಅದಕ್ಕೆ ವ್ಯಾಪಕ ಬೆ೦ಬಲ ವ್ಯಕ್ತವಾಗುತ್ತಿರುವುದು ಆಶ್ಚಯ೯ಕ್ಕೆ ಕಾರಣವಾಗಿದೆ.
ಜೂ.4 ರ೦ದು ಸಾಮೂಹಿ ರಜೆ ಹಾಕಿ ಎಲ್ಲ ಪೊಲೀಸರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಪೊಲೀಸ್ ಕುಟು೦ಬಗಳೂ, ಸ೦ಘ ಸ೦ಸ್ಥೆಗಳು ಕೂಡ ಹೋರಾಟಕ್ಕೆ ಕೈ ಜೋಡಿಸಿವೆ. ಆ ಮೂಲಕ ಪೊಲೀಸ್ ಶಕ್ತಿಯನ್ನು ನಾವು ಸರಕಾರಕ್ಕೆ ಮನವರಿಕೆ ಮಾಡಿಕೊಡಲಿದ್ದೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ಉಗ್ರ ಸ್ವರೂಪಕ್ಕೆ ತಿರುಗಲಿದೆ. – ಶಶಿಧರ್ ಪೊಲೀಸ್ ಸ೦ಘದ ಅಧ್ಯಕ್ಷ
ಬೇಡಿಕೆಗಳೇನು?
ನಾವೇಕೆ ಪ್ರತಿಭಟನೆ ಮಾಡಬಾರದು?
–ಶಶಿವರ್ಣಂ!
ಏಪ್ರಿಲ್ 26, 2016 ನಿಮ್ಮ ಟಿಪ್ಪಣಿ ಬರೆಯಿರಿ
ಹಿಂಸಾಚಾರಕ್ಕೆ ಪೊಲೀಸರ ವೈಫಲ್ಯ ಕಾರಣ ಎಂದು ಹೇಳಿಬಿಡುವುದು ಸುಲಭ! ಬೆಂಗಳೂರು ಪೊಲೀಸರು ಸಾಮರ್ಥ್ಯಕ್ಕೂ ಮೀರಿ ಕೆಲಸ ಮಾಡುತ್ತಿದ್ದಾರೆ ಅನ್ನೋದು ವಾಸ್ತವ. ಬೆಂಗಳೂರಿನ 1.15 ಕೋಟಿ ಜನಸಂಖ್ಯೆಗೆ ಇರುವ ಪೊಲೀಸರ ಸಂಖ್ಯೆ ಕೇವಲ 15 ಸಾವಿರ. ಅಂದರೆ 766 ಮಂದಿಗೆ ಒಬ್ಬ ಪೊಲೀಸ್ ಸಿಬ್ಬಂದಿ ಇದ್ದಾರೆ. ಅದೇ ಒಬ್ಬ ವಿಐಪಿ ರಕ್ಷಣೆಗೆ ಇಬ್ಬರು ಪೊಲೀಸರಿದ್ದಾರೆ. ನಗರಕ್ಕೆ ಅಗತ್ಯವಿರುವ ಪೊಲೀಸರ ಸಂಖ್ಯೆ 30 ಸಾವಿರ. ಅದರ ಅರ್ಧದಷ್ಟು ಸಂಖ್ಯಾ ಬಲವೊಂದಿರುವ ಪೊಲೀಸರ ಕಷ್ಟ ಕೇಳುವರಾರು? ಇಲಾಖೆಗೆ ಬಲ ತುಂಬಬೇಕಾದ ಸರ್ಕಾರ ಅನಿಷ್ಟಕ್ಕೆಲ್ಲ ಶನೇಶ್ವರ ಹೊಣೆ ಎಂಬಂತೆ ಎಲ್ಲದಕ್ಕೂ ಪೊಲೀಸರನ್ನೇ ಹೊಣೆ ಮಾಡುತ್ತಿದೆ…
ಗಾಮೆ೯೦ಟ್ಸ್ ನೌಕರರು ನಡೆಸಿದ ಬೃಹತ್ ಪ್ರತಿಭಟನೆ ಹಿ೦ಸಾಚಾರಕ್ಕೆ ತಿರುಗಿದ್ದು ಬೆ೦ಗಳೂರು ಪೊಲೀಸರ ಸಾಮಥ೯್ಯವನ್ನೇ ಬೊಟ್ಟು ಮಾಡಿ ತೋರಿಸುವ೦ತಾಗಿದೆ. ಆದರೆ ಜನಸಾ೦ದ್ರತೆ ಆಧಾರದ ಮೇಲೆ ನಗರ ದಲ್ಲಿರುವ ಪೊಲೀಸರ ಸ೦ಖ್ಯೆಗೂ ಜನ ಸ೦ಖ್ಯೆಗೂ ಅಪಾರ ವ್ಯತ್ಯಾಸವಿದೆ.
ನಗರದಲ್ಲಿ ಪ್ರತಿ 766 ಜನರಿಗೆ ಕೇವಲ ಒಬ್ಬ ಪೊಲೀಸ್ ಸಿಬ್ಬ೦ದಿ ಕಾಯ೯ ನಿವ೯ಹಿ ಸುತ್ತಿದ್ದಾರೆ. ಈ ಸ೦ಖ್ಯಾಬಲದ ಮೇಲೆ ಪೊಲೀಸರ ಸಮಥ೯ ಕಾಯ೯ ನಿವ೯ಹಣೆ ಹೇಗೆ ಸಾಧ್ಯವಾದೀತು ?
ಇತ್ತೀಚಿನ ಅ೦ಕಿ ಅ೦ಶಗಳ ಪ್ರಕಾರ ನಗರದ ಜನಸ೦ಖ್ಯೆ 1.15 ಕೋಟಿ ದಾಟಿದೆ. ದಾಖಲೆಗಳ ಪ್ರಕಾರ ಬೆ೦ಗಳೂರು ಪೊಲೀಸ್ ಇಲಾಖೆಯಲ್ಲಿ ಕಾಯ೯ ನಿವ೯ಹಿಸುತ್ತಿರುವ ಪೊಲೀಸರ ಸ೦ಖ್ಯೆ ಕೇವಲ 15,046. ಅ೦ದರೆ ಪ್ರತೀ 766 ಜನರಿಗೆ ಒಬ್ಬ ಪೊಲೀಸ್ ಸಿಬ್ಬ೦ದಿ ಯಿದ್ದಾರೆ.
ನಗರದಲ್ಲಿರುವ ವಿಐಪಿಗಳ ರಕ್ಷಣೆಗಾಗಿ ಸಿಎಆರ್ ನಲ್ಲಿನ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿದೆ. ಅ೦ಕಿ ಅ೦ಶಗಳ ಪ್ರಕಾರ ಒಬ್ಬ ವಿಐಪಿಗೆ ಇಬ್ಬರು ಪೊಲೀಸರಿದ್ದಾರೆ. ನಗರ ಪೊಲೀಸ್ ಆಯುಕ್ತರು ಪೊಲೀಸರ ಸ೦ಖ್ಯೆಯನ್ನು ಮೂರು ಹ೦ತಗಳಲ್ಲಿ 30 ಸಾವಿರಕ್ಕೆ ಏರಿಕೆ ಮಾಡಬೇಕೆ೦ದು ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದಾರೆ. ಆದರೆ ಇದು ಪ್ರಸ್ತಾಪಕ್ಕೆ ಮಾತ್ರ ಸೀಮಿತವಾಗಿರುವುದು ವಿಪಯಾ೯ಸ.
ಕಾಮಿ೯ಕರ ಪ್ರತಿಭಟನೆ ಯಿ೦ದ ನಡೆದ ಹಿ೦ಸಾಚಾರ, ನೀರಾವರಿಗಾಗಿ ಆಗ್ರಹಿಸಿ ಬಯಲು ಸೀಮೆ ರೈತರು ಹೋರಾಟ ನಡೆಸಿದಾಗ ಇಡೀ ಬೆ೦ಗಳೂರಿ ನಲ್ಲಿ ಅರಾಜಕತೆಯ ವಾತಾವರಣ ನಿಮಾ೯ಣವಾಗಿತ್ತು. ಹೀಗೆ ಆಗಲು ಪ್ರಮುಖ ಕಾರಣ ನಗರದಲ್ಲಿ ಕ್ಷೀಣಿಸುತ್ತಿರುವ ಪೊಲೀಸರ ಸ೦ಖ್ಯೆ. ಎರಡು ದಿನ ನಡೆದ ಪ್ರತಿಭಟನೆಯಲ್ಲಿ 1.25 ಲಕ್ಷಕ್ಕೂ ಅಧಿ ಕ ಜನರು ಭಾಗಿಯಾಗಿದ್ದರು. ಆದರೆ ಇಷ್ಟು ಜನರನ್ನು ನಿಯ೦ತ್ರಿಸಲು ನಗರ ಪೊಲೀಸ ರಿ೦ದ ಹರಸಾಹರ ಪಟ್ಟಿದ್ದರು. ಕಾ೦ಗ್ರೆ ಸ್ ಸರಕಾರ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬ೦ದಾಗಿನಿ೦ದಲೂ ನಗರ ಪೊಲೀಸ್ ವಿಭಾ ಗಕ್ಕೆ ಎರಡು ಸಾವಿರ ಪೊಲೀಸರನ್ನು ನೀಡಲಾ ಗುವುದು ಎ೦ದು ಹೇಳುತ್ತಲೇ ಬ೦ದಿದೆ. ಆದರೆ ಆ ವಿಚಾರ ಇನ್ನೂ ಕಾಗದದ ಮೇಲೆಯೇ ಇದೆ. ಪ್ರತಿ ತಿ೦ಗಳು ನಗರದ ಪೊಲೀಸ್ ವಿಭಾಗದಿ೦ದ ಸರಾಸರಿ 60 ರಿ೦ದ 70 ಮ೦ದಿ ನಿವೃತ್ತರಾಗುತ್ತಿದ್ದಾರೆ. ಅ೦ದರೆ ವಷ೯ಕ್ಕೆ 700 ರಿ೦ದ 800 ಮ೦ದಿ ನಿವೃತ್ತ ರಾಗುತ್ತಿದ್ದಾರೆ. ಇದಕ್ಕೆ ಪೂರಕವಾಗಿ ನೇಮಕಾತಿ ಮಾತ್ರ ನಡೆಯುತ್ತಿಲ್ಲ. ಪರಿಣಾಮ ನಗರ ಪೊಲೀಸರ ಶಕ್ತಿ ದಿನದಿ೦ದ ದಿನಕ್ಕೆ ಕುಸಿಯುವ೦ತಾಗಿದೆ.
ನಗರ ಪೊಲೀಸ್ ವಿಭಾಗದಲ್ಲಿ 15 ಸಾವಿರ ಇರುವ ಪೊಲೀಸರಲ್ಲಿ 2.8 ಸಾವಿರ ಮ೦ದಿ ಸ೦ಚಾರ ಪೊಲೀಸರಾದರೆ, 2 ಸಾವಿರಕ್ಕೂ ಹೆಚ್ಚು ಮ೦ದಿ ಸಶಸ್ತ್ರ ಮೀಸಲು ಪಡೆಯಲ್ಲಿ ದ್ದಾರೆ. ಇವರನ್ನು ಹೊರತುಪಡಿಸಿದರೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಿಗುವ ಪೊಲೀಸರ ಸ೦ಖ್ಯೆ ಕೇವಲ 10 ಸಾವಿರ. ಕಾನೂನು ಸುವ್ಯವಸ್ಥೆ, ಅಪರಾಧ ನಿಯ೦ತ್ರಣ, ಅಪರಾಧ ಪತ್ತೆ, ಸ೦ಚಾರ ನಿವ೯ಹಣೆ, ವಿಐಪಿಗಳ ಭದ್ರತೆ ಎಲ್ಲ ಹೊಣೆ ಯನ್ನೂ ಈ 15 ಸಾವಿರ ಪೊಲೀಸರೇ ನಿವ೯ ಹಿಸಬೇಕು. ದಿಡ್ಹೀರ್ ಪ್ರತಿಭಟನೆ, ಹಿ೦ಸಾ ಚಾರ, ಹೋರಾಟಗಳು ನಡೆದರೆ ಪರಿಸ್ಥಿತಿ ನಿಯ೦ತ್ರಣಕ್ಕೆ ತರಲು ಅವರೇ ಬೀದಿಗಿಳಿಯ ಬೇಕು. ಮೂರು ಸಿಎಆರ್ ವಿಭಾಗಗಳಲ್ಲಿ ರುವ 32 ತುಕಡಿಗಳು ಮತ್ತು ನಗರಕ್ಕೆ ಲಭ್ಯವಿರುವ 25 ಕೆಎಸ್ಆರ್ಪಿ ತುಕಡಿಗಳನ್ನು ಬಳಸಿಕೊ೦ಡು ಪ್ರತಿಭಟನೆ ಹತ್ತಿಕ್ಕಬೇಕಾದ ಅನಿವಾಯ೯ತೆಗೆ ಪೊಲೀಸರು ಸಿಲುಕಿದ್ದಾರೆ.
ಹೊಯ್ಸಳ ಇದ್ದರೂ ಪ್ರಯೋಜನವಿಲ್ಲ: ನಗರದಲ್ಲಿ 184 ಹೊಯ್ಸಳ ವಾಹನಗಳಿವೆ. ಇವುಗಳಲ್ಲಿ 30ರಷ್ಟು ರಸ್ತೆಗಿಳಿಯುವ ಸ್ಥಿತಿಯ ಲ್ಲಿಲ್ಲ. ಉಳಿದ ಐವತ್ತಕ್ಕೂ ಹೆಚ್ಚು ವಾಹನಗಳು ದುಸ್ತೀತಿಯಲ್ಲಿದ್ದರೂ ಅವುಗಳನ್ನೇ ಉಪಯೋ ಗಿಸಿಕೊಳ್ಳಬೇಕಾದ ಅನಿವಾಯ೯ತೆ ಪೊಲೀಸ ರದ್ದು. ಹೊಯ್ಸಳ ವಾಹನಗಳ ಸ೦ಖ್ಯೆಯನ್ನು 520ಕ್ಕೆ ಏರಿಕೆ ಮಾಡಬೇಕೆ೦ದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆಯಾದರೂ ಕೇವಲ 220 ವಾಹನಗಳನ್ನು ನೀಡಲು ಒಪ್ಪಿಗೆ ಸಿಕ್ಕಿದೆಯಷ್ಟೇ. ಅವು ರಸ್ತೆಗಿಳಿಯಲು ಇನ್ನೂ ಎಷ್ಟು ದಿನಗಳನ್ನು ಕಾಯಬೇಕೋ ಗೊತ್ತಿಲ್ಲ. ಏರಿಕೆಯಾಗುತ್ತಿರುವ ಜನಸ೦ಖ್ಯೆಗನು ಗುಣವಾಗಿ ಪೊಲೀಸರ ಸ೦ಖ್ಯೆ ಏರಿಕೆ ಯಾಗುತ್ತಿಲ್ಲ. ಬದಲಾಗಿ ಇಳಿಕೆಯಾಗುತ್ತಿದೆ. ಇದರಿ೦ದ ದೊಡ್ಡ ಹೋರಾಟಗಳು, ಪ್ರತಿಭಟನೆಗಳನ್ನು ನಿಯ೦ತ್ರಣಕ್ಕೆ ತರಲು ನಗರ ಪೊಲೀಸರು ಹ್ಯೆರಾಣಾಗಬೇಕಾದ ಪರಿಸ್ಥಿತಿ ನಿಮಾ೯ಣವಾಗಿದೆ.
ನಗರ ಪೊಲೀಸರ ಸ೦ಖ್ಯೆ ಕೇವಲ 15 ಸಾವಿರ l ಪ್ರತಿ 766 ಮ೦ದಿಗೆ ಒಬ್ಬ ಪೊಲೀಸ್ l ಪ್ರತಿ ಒಬ್ಬ ವಿಐಪಿಗೆ ಇಬ್ಬರು ಪೊಲೀಸ್ l ತಿ೦ಗಳಿಗೆ 700-800 ಮ೦ದಿ ನಿವೃತ್ತಿ l ಜನಸ೦ಖ್ಯೆಗನುಗುಣವಾಗಿ ಪೊಲೀಸರ ಸ೦ಖ್ಯೆ ಹೆಚ್ಚುತ್ತಿಲ್ಲ l ಕನಿಷ್ಠ 30 ಸಾವಿರ ಪೊಲೀಸರು ಬೇಕು.