ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸೂಪರ್ ಪವರ್..! ಅಂತರಿಕ್ಷ ಯುದ್ಧಕ್ಕೆ ಸಿದ್ಧವಾಯ್ತು ದೇಶ..!

ಉಪಗ್ರಹ ನಿಗ್ರಹ ಕ್ಷಿಪಣಿ ಪ್ರಯೋಗ

ಉಪಗ್ರಹ ನಿಗ್ರಹ ಕ್ಷಿಪಣಿ ಪ್ರಯೋಗ

ಭಾರತ ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಸೂಪರ್ ಪವರ್… ಬಾಹ್ಯಾಕಾಶದಲ್ಲಿರುವ ಉಪಗ್ರಹವನ್ನ ಕ್ಷಿಪಣಿಯ ಮೂಲಕ ಹೊಡೆದುರುಳಿಸುವ ತಂತ್ರಜ್ಞಾನವನ್ನ ಭಾರತ ಅಭಿವೃದ್ಧಿ ಪಡಿಸಿದೆ. ಇದ್ದಕ್ಕಿದ್ದಂತೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಅಂತರಿಕ್ಷದಲ್ಲಿದ್ದ ಉಪಗ್ರಹ ಹೊಡೆದುರುಳಿಸಿದ್ದೇವೆ ಅಂತ ಘೋಷಿಸಿದ್ರು.. ಅಲ್ಲಿಗೆ ಭಾರತ ಈ ಸಾಧನೆ ಮಾಡಿದ ಜಗತ್ತಿನ ನಾಲ್ಕನೇ ರಾಷ್ಟ್ರ ಅನ್ನೋ ಖ್ಯಾತಿ ಮುಡಿಗೇರಿಸಿಕೊಂಡಿತು. ಈ ತಂತ್ರಜ್ಞಾನ ಹೊಂದಿರುವ ಅಮೆರಿಕಾ, ರಷ್ಯಾ, ಚೀನಾಗಳ ಸಾಲಿಗೆ ಈಗ ಭಾರತ ಸೇರಿದಂತಾಗಿದೆ. ಜಗತ್ತಿನ ಕೆಲವು ಪ್ರವಲ ದೇಶಗಳಾದ ಇಂಗ್ಲೆಂಡ್, ಜಪಾನ್, ಫ್ರಾನ್ಸ್, ಜರ್ಮನಿಯಂತಹ ರಾಷ್ಟ್ರಗಳು ಮಾಡದ ಸಾಧನೆಯನ್ನ ಭಾರತ ಮಾಡಿದೆ. . ಇಸ್ರೋ ಮತ್ತು ಡಿಆರ್​ಡಿಓ ಇಂತದ್ದೊಂದು ತಂತ್ರಜ್ಞಾನವನ್ನ ಅಭಿವೃದ್ಧಿಪಡಿಸಿವೆ.

ಉಪಗ್ರಹ ನಿಗ್ರಹ ಕ್ಷಿಪಣಿ ಪ್ರಯೋಗದ ತಂತ್ರಜ್ಞಾನದ ಬಗ್ಗೆ ತಿಳೀಬೇಕು ಅಂದ್ರೆ ಸ್ವಲ್ಪ ಇತಿಹಾಸದತ್ತ ನೋಡ್ಬೇಕು. ಅಮೇರಿಕಾ ಮತ್ತು ಸೋವಿಯತ್ ಒಕ್ಕೂಟಗಳ ಮಧ್ಯೆ ನಡೆಯುತ್ತಿದ್ದ ಶೀತಲ ಸಮರ ಖಂಡಾಂತರ ಕ್ಷಿಪಣಿಗಳ ಅಭಿವೃದ್ಧಿಗೆ ಕಾರಣವಾಗಿತ್ತು. ರಷ್ಯಾದ ಕ್ಷಿಪಣಿಗಳು ಆಕಾಶಮಾರ್ಗವಾಗಿ ಅಮೆರಿಕವನ್ನ ನುಗ್ಗಿಬಿಡಬಲ್ಲವು ಅನ್ನೋ ಆತಂಕ ಶುರುವಾಗಿದ್ದು ಈ ತಂತ್ರಜ್ಞಾನ. ಹಾಗೆ ಆಕಾಶ ಮಾರ್ಗವಾಗಿ ಬರುವ ಖಂಡಾಂತರ ಕ್ಷಿಪಣಿಗಳನ್ನು ಮಾರ್ಗಮಧ್ಯೆಯೇ ಹೊಡೆದುರುಳಿಸುವ ತಂತ್ರಜ್ಞಾನವನ್ನ ಅಮೆರಿಕ ಅಭಿವೃದ್ಧಿ ಪಡಿಸಿತು. ಈಗ ಜಗತ್ತಿನ ಹಲವು ದೇಶಗಳು ಕ್ಷಿಪಣಿ ಪ್ರತಿರೋಧಕ ವ್ಯವಸ್ಥೆಯನ್ನ ಹೊಂದಿವೆ. ಇದೇ ರೀತಿಯಲ್ಲೇ ಶತೃ ದೇಶದ ಉಪಗ್ರಹವೊಂದು ಅಂತರಿಕ್ಷಕ್ಕೆ ಹಾರಿ ಅಲ್ಲಿಂದಲೇ ನಮ್ಮ ದೇಶದ ಮೇಲೆ ಕಳ್ಳಗಣ್ಣಿಟ್ಟರೆ..? ಅಥವಾ ಶತೃ ರಾಷ್ಟ್ರದ ಮೇಲೆ ಯುದ್ಧಕ್ಕೆ ದಂಡೆತ್ತಿ ಹೋಗದೇ ನಿಂತ್ರಿಸಬೇಕಾದರೆ..? ಆ ದೇಶದ ಉಪಗ್ರಹವನ್ನ ಭೂಮಿಯಿಂದ ಕ್ಷಿಪಣಿ ಉಡಾಯಿಸಿ ಹೊಡೆದುರುಳಿಸುವ ತಂತ್ರಜ್ಞಾನವೇ ಉಪಗ್ರಹ ಪ್ರತಿರೋಧ ಕ್ಷಿಪಣಿ ಪ್ರಯೋಗದ ತಂತ್ರಜ್ಞಾನ. ಇದನ್ನ ಇಂಗ್ಲೀಷ್​ನಲ್ಲಿ ಎ-ಸ್ಯಾಟ್ ಅಂತ ಕರೀತಾರೆ. ಬಾಹ್ಯಾಕಾಶದಲ್ಲಿದ್ದ ನಮ್ಮದೇ ದೇಶದ ಲೈವ್ ಉಪಗ್ರಹವೊಂದನ್ನ ಕೇವಲ ಮೂರೇ ಮೂರು ನಿಮಿಷಗಳಲ್ಲಿ ಹೊಡೆದುರುಳಿಸಿ ಭಾರತ ಮಹತ್ ಸಾಧನೆ ಮಾಡಿದೆ.

ಈ ಸಾಧನೆಯಿಂದ ಭಾರತಕ್ಕೇನು ಲಾಭ ಅಂದ್ರೆ, ಪಾಕಿಸ್ತಾನ ಅಥವಾ ಚೀನಾದ ಉಪಗ್ರಹಗಳನ್ನ ಹೊಡೆದುರುಳಿಸುವಂತಹ ತಾಕತ್ತಿದೆ ಅಂತ ಅರ್ಥ. ಒಂದು ವೇಳೆ ಭಾರತ ಅಂತರಿಕ್ಷದಲ್ಲಿರುವ ಪಾಕಿಸ್ತಾನದ ಉಪಗ್ರಹಗಳನ್ನ ಕೆಲವೇ ಕ್ಷಣಗಳಲ್ಲಿ ಧ್ವಂಸ ಮಾಡಿಬಿಟ್ಟರೆ, ಪಾಕಿಸ್ತಾನ ಕೆಲವೇ ನಿಮಿಷಗಳಲ್ಲಿ ಭಾರತದ ಮುಂದೆ ನಡು ಬಗ್ಗಿಸಿ ನಿಂತುಬಿಡುತ್ತೆ. ಅಂತಹ ಸಾಮರ್ಥ್ಯ ನಮ್ಮ ದೇಶಕ್ಕೆ ಬಂದಿದೆ. ಆದರೆ ಭಾರತದ ಈ ಸಾಮರ್ಥ್ಯದಿಂದ ಹೆದರಬೇಕಾಗಿದ್ದು ಚೀನಾ ದೇಶವೇ ಹೊರತು ಪಾಕಿಸ್ತಾನ ಅಲ್ಲ.. ಯಾಕಂದ್ರೆ ಆ ದೇಶಕ್ಕೆ ಈ ಬಗ್ಗೆ ಕಿಂಚಿತ್ತೂ ಗೊತ್ತೇ ಇಲ್ಲ ಬಿಡಿ. ಭಾರತದ ವಿರುದ್ಧ ಸದಾ ಕಾಲು ಕೆರೆದು ನಿಲ್ಲುವ ಚೀನಾ ನಮ್ಮ ಉಪಗ್ರಹಗಳನ್ನು ನಿಷ್ಕ್ರಿಯ ಮಾಡಲು ಯತ್ನಿಸಿದರೆ, ತಿರುಗೇಟು ನೀಡೋ ಸಾಮರ್ಥ್ಯ ಭಾರತಕ್ಕಿದೆ. ಅಥವಾ ಭಾರತದ ಮೇಲೆ ಕಳ್ಳಗಣ್ಣು ಇಡಲು ತಮ್ಮ ಉಪಗ್ರಹವನ್ನ ಬಳಸಿಕೊಂಡ್ರೆ ಅವುಗಳನ್ನ ಹೊಡೆದುರುಳಿಸುವ ತಾಕತ್ತು ಭಾರತಕ್ಕಿದೆ. ಅದಕ್ಕೇ ಭಾರತ ಮಾಡಿದ ಈ ಸಾಧನೆಗೆ ಅಷ್ಟೊಂದು ಮಹತ್ವ ಬಂದಿದ್ದು.

ಅಮೆರಿಕಾ ಮತ್ತು ರಷ್ಯಾ ಮಧ್ಯದ ಶೀತಲ ಸಮರ ಅಂತರಿಕ್ಷದಲ್ಲಿನ ಉಪಗ್ರಹಗಳನ್ನ ಹೊಡೆದುರುಳಿಸುವ ತಂತ್ರಜ್ಞಾನ ಅಭಿವೃದ್ಧಿಗೆ ಕಾರಣವಾಯ್ತು. 1980ರಲ್ಲೇ ಅಮೆರಿಕಾ ರಷ್ಯಾದ ಉಪಗ್ರಹಗಳನ್ನು ಹೊಡೆಯುವ ಭಯ ಸೃಷ್ಟಿಸಲು ಈ ತಂತ್ರಜ್ಞಾನವನ್ನ ಅಭಿವೃದ್ಧಿ ಮಾಡಿತು. ಐದೇ ವರ್ಷಗಳಲ್ಲಿ ರಷ್ಯಾ ಕೂಡ ತಾನೇನು ಕಡಿಮೆ ಇಲ್ಲ ಅನ್ನೋದನ್ನ ತೋರಿಸಿತ್ತು. ಅಮೆರಿಕದ ಉಪಗ್ರಹಗಳನ್ನ ಹೊಡೆದುರುಳಿಸುವ ಸಾಮರ್ಥ್ಯವನ್ನ ರಷ್ಯಾ 1985ರಲ್ಲಿ ಗಳಿಸಿಕೊಳ್ತು. ಚೀನಾ 2007ರಲ್ಲಿ ಈ ಸಾಧನೆಯನ್ನ ಮಾಡಿದ ಮೂರನೇ ರಾಷ್ಟ್ರವಾಯಿತು. ಈಗ ಭಾರತದ ಸರದಿ. ಅಂದ ಹಾಗೆ ಇಸ್ರೋ ಮತ್ತು ಡಿಆರ್​ಡಿಓ 2012ರಲ್ಲೇ ಇಂತದ್ದೊಂದು ಪ್ರಯೋಗ ನಡೆಸಲು ಸಿದ್ಧವಿತ್ತು. ಆದ್ರೆ ಅವತ್ತಿನ ಯುಪಿಎ ಸರ್ಕಾರ ದೈರ್ಯ ತೋರಿಸಲಿಲ್ಲ. ಜಗತ್ತಿನ ಪ್ರಬಲ ರಾಷ್ಟ್ರಗಳ ವಿರೋಧ ಕಟ್ಟಿಕೊಳ್ಳಬೇಕಾದೀತು ಅನ್ನೋ ಆತಂಕ ಅಂದಿನ ಯುಪಿಎ ಸರ್ಕಾರಕ್ಕಿತ್ತು. ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಇಸ್ರೋ ಮತ್ತು ಡಿಆರ್​ಡಿಓ ಪ್ರಸ್ತಾಪಕ್ಕೆ ಓಕೆ ಅಂದಿತ್ತು. ಅದರ ಪರಿಣಾಮವೇ ಈಗ ಭಾರತ ಅಂತರಿಕ್ಷ ಕ್ಷೇತ್ರದಲ್ಲಿ ಸೂಪರ್ ಪವರ್ ಅನ್ನೋ ಹಿರಿಮೆಗೆ ಪಾತ್ರವಾಗಿದ್ದು.

ಸಾಮಾನ್ಯವಾಗಿ ಉಪಗ್ರಹಗಳು ಭೂಮಿಯಿಂದ 300 ರಿಂದ 600 ಕಿಲೋಮೀಟರ್ ಎತ್ತರದಲ್ಲಿ ಪ್ರದಕ್ಷಿಣೆ ಹಾಕುತ್ತವೆ. ಇವತ್ತಿನ ನಮ್ಮ ಜನಜೀವನವೆಲ್ಲವೂ ಅವಲಂಭಿತವಾಗಿರೋದು ಈ ಉಪಗ್ರಹಗಳ ಮೇಲೆಯೇ. ನಮ್ಮ ಮೊಬೈಲ್ ಫೋನ್‍ಗಳು, ಇಂಟರ್ ನೆಟ್, ಆರೋಗ್ಯ, ವಿಮಾನದಿಂದ ಹಿಡಿದು ಕ್ಯಾಬುಗಳ ವರೆಗಿನ ಎಲ್ಲ ಸಾರಿಗೆ ವ್ಯವಸ್ಥೆ, ಹವಾಮಾನ ಮುನ್ಸೂಚನೆ, ಸಾಫ್ಟ್ ವೇರ್, ಕೃಷಿ, ರಕ್ಷಣಾ ಕ್ಷೇತ್ರ ಹೀಗೆ ಎಲ್ಲವೂ ಸುಸೂತ್ರವಾಗಿ ನಡೆಯೋದು ಈ ಉಪಗ್ರಹಗಳಿಂದಲೇ. ಇವತ್ತು ಉಪಗ್ರಹಗಳಿಲ್ಲದೆ ಈ ಜಗತ್ತು ಒಂದಿಂಚೂ ಮುಂದೆ ಹೋಗಲು ಸಾಧ್ಯವೇ ಇಲ್ಲ. ಹೀಗಾಗಿ ಶತೃದೇಶವನ್ನ ಒಂದೇ ಒಂದು ಸಾವೂ ಇಲ್ಲದೇ, ಯುದ್ಧ ವಿಮಾನಗಳ ಅಬ್ಬರ, ಬಾಂಬ್ ದಾಳಿ, ಗುಂಡಿನ ಮೊರೆತ ಏನೇನೂ ಇಲ್ಲದೆ ತನ್ನೆದುರು ಮಂಡಿಯೂರಿಸಿಕೊಳ್ಳಬೇಕು ಅಂದ್ರೆ ಅದು ಅಂತರಿಕ್ಷ ಯುದ್ಧದಿಂದ ಮಾತ್ರ ಸಾಧ್ಯ. ಶತೃದೇಶದ ಉಪಗ್ರಹಗಳನ್ನೇ ಉಡಾಯಿಸಿಬಿಟ್ಟರೆ, ಆ ದೇಶ ಕ್ಷಣ ಮಾತ್ರದಲ್ಲಿ ಅಕ್ಷರಶಃ ಸ್ಥಬ್ಧವಾಗಿಬಿಡುತ್ತದೆ. ಯುದ್ಧ ಅಂದಾಕ್ಷಣ ಶತೃ ದೇಶದ ಮೇಲೆ ಬಾಂಬ್ ಹಾಕೋದು, ಸಾವಿರಾರು ಜನರ ಸಾವು, ಆಸ್ತಿ ಪಾಸ್ತಿ ನಷ್ಟ ಇದೆಲ್ಲವೂ ಹಳೇ ಮಾಡೆಲ್ಲು. ಅಂದರೆ ಮುಂದಿನ ದಿನಗಳಲ್ಲಿ ಯುದ್ಧ ಭೂಮಿ, ಆಕಾಶ, ಸಮುದ್ರದಲ್ಲಿ ನಡೆಯೋಲ್ಲ.. ಅಂತರಿಕ್ಷದಲ್ಲಿ ನಡೆಯುತ್ತೆ. ಈ ಅಂತರಿಕ್ಷ ಯುದ್ಧಕ್ಕೆ ಭಾರತ ಈಗಲೇ ಸಜ್ಜಾಗಿದೆ.

ಶಶಿವರ್ಣಂ!

ಆಪರೇಷನ್ ಆಲ್ ಔಟ್- ಕಾಶ್ಮೀರದಲ್ಲಿ ವಿಫಲವಾಯ್ತು ಕೂಲಿಗಾಗಿ ಕಲ್ಲು ಯೋಜನೆ..!

Stone-Pelting-in-Kashmir

ಕಾಶ್ಮೀರದಲ್ಲಿ ವಿಫಲವಾಯ್ತು ಕೂಲಿಗಾಗಿ ಕಲ್ಲು ಯೋಜನೆ..!

ಕಾಶ್ಮೀರದಲ್ಲಿ ನಡೆಯುತ್ತಿದ್ದ ದಿನನಿತ್ಯದ ಕಲ್ಲು ತೂರಾಟಗಳು ಈಗ ನಿಂತೇ ಹೋಗಿವೆ ಎಂಬಷ್ಟರ ಮಟ್ಟಿಗೆ ಕಡಿಮೆಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕಲ್ಲು ತೂರಾಟದ ಪ್ರಕರಣಗಳು ಶೇ.90 ರಷ್ಟು ಕಡಿಮೆಯಾಗಿದೆ. ಮೋದಿ ಸರ್ಕಾರ ಕೈಗೊಂಡ ಬಿಗಿ ಕ್ರಮಗಳಿಂದಾಗಿ ಕಾಶ್ಮೀರ ಶಾಂತಿಯತ್ತ ಹೊರಳುತ್ತಿದೆ..ಪಾಕಿಸ್ತಾನದ ಕೂಲಿಗಾಗಿ ಕಲ್ಲು ಹೊಡೆಯುತ್ತಿದ್ದುದನ್ನೇ ಆಜಾದಿ ಹೋರಾಟ ಎಂದು ಕರೆಯುತ್ತಿದ್ದ ನಮ್ಮ ದೇಶದ ಬುದ್ದಿ ಜೀವಿ ವಲಯ ಈಗ ಸುಮ್ಮನೆ ಕುಳಿತುಬಿಟ್ಟಿದೆ. ಇದು ಮೋದಿ ಸರ್ಕಾರ ಕಾಶ್ಮೀರದಲ್ಲಿ ನಡೆಸಿದ ’ಆಪರೇಷನ್ ಆಲ್ ಔಟ್’

ಕಾಶ್ಮೀರದಲ್ಲಿ ಆಜಾದಿ ಹೆಸರಿನಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದ್ದ ಹೋರಾಟದ ಹೆಸರಿನ ಕಲ್ಲು ತೂರಾಟಕ್ಕೆ ಈಗ ಬ್ರೇಕ್ ಬಿದ್ದಿದೆ. 2016 ರಲ್ಲಿ ದಿನಕ್ಕೆ 40-50 ಕಲ್ಲು ತೂರಾಟದ ಪ್ರಕರಣಗಳು ನಡೆಯುತ್ತಿದ್ದವು. ಆಪರೇಷನ್ ಆಲ್​ ಔಟ್​ ನ ಭಾಗವಾಗಿ ಕಣಿವೆಯಲ್ಲಿ ಪ್ರತ್ಯೇಕತಾವಾದಿಗಳು ಮತ್ತು ಉಗ್ರವಾದಿಗಳ ವಿರುದ್ಧ ಮೋದಿ ಸರ್ಕಾರ ಕೈಗೊಂಡ ಕಟ್ಟನಿಟ್ಟಿನ ಕ್ರಮದಿಂದಾಗಿ ಹಿಂಸಾಚಾರ ಕಡಿಮೆಯಾಗಿದೆ. ಅಲ್ಲಲ್ಲಿ ಸಣ್ಣಪುಟ್ಟ ಪ್ರತಿಭಟನೆಗಳನ್ನು ಹೊರತುಪಡಿಸಿದರೆ ಹಿಂಸಾಚಾರದಂತಹ ಘಟನೆಗಳಿಗೆ ಸಂಪೂರ್ಣ ಬ್ರೇಕ್ ಬಿದ್ದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕಲ್ಲು ತೂರಾಟದ ಪ್ರಕರಣಗಳು ಶೇ.90 ರಷ್ಟು ಕಡಿಮೆಯಾಗಿದೆ. ಇದನ್ನೆಲ್ಲ ಹೇಳಿದ್ದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ಎಸ್​ಪಿ. ವೈದ್.

ಪಾಕಿಸ್ತಾನದ ಮೂಲಕ ಪ್ರ್ಯೇಕತಾವಾದಿಗಳ ಕೈ ಸೇರುತ್ತಿದ್ದ ಹಣದ ಜಾಲವನ್ನೇ ಎನ್​ಐಎ ಕತ್ತರಿಸಿಹಾಕಿದ ಪರಿಣಾಮ ಕಲ್ಲು ತೂರಾಟದ ಹೆಸರಿನ ಹೋರಾಟ ಮತ್ತು ಬುದ್ದಿ ಜೀವಿಗಳ ಹಾರಾಟ ಎರಡೂ ನಿಂತಿವೆ…ಕಾಶ್ಮೀರದಲ್ಲಿನ ಉಗ್ರರ ಮಟ್ಟ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ಈ ವರ್ಷ ಅಭೂತಪೂರ್ವ ಯಶಸ್ಸು ತಂದುಕೊಟ್ಟಿದೆ. ಈ ಒಂದೇ ವರ್ಷದಲ್ಲಿ 170 ಉಗ್ರರನ್ನು ಸೇನೆ ಹೊಡೆದುರುಳಿಸಿದೆ. ಸೇನಾ ದಾಳಿಯಿಂದ ಸತ್ತ ಬಹುತೇಕರು ಉಗ್ರಗಾಮಿ ಸಂಘಟನೆಗಳಲ್ಲಿ ಪ್ರಮುಖ ಹುದ್ದೆಯಲ್ಲಿದ್ದವರು, ಕಮಾಂಡರ್​ಗಳು ಅನ್ನೋದು ವಿಶೇಷ. ಕಾಶ್ಮೀರದಲ್ಲಿ ಸೇನೆಯ ಕಾರ್ಯಾಚರಣೆ ಎಷ್ಟರಮಟ್ಟಿಗೆ ಇದೆ ಎಂದರೆ ಅಲ್ಲಿನ ಹಿಜ್ಬುಲ್ ಮುಜಾಹಿದೀನ್ ಮತ್ತು ಲಷ್ಕರ್ ಎ ತೋಯಿಬಾ ಸಂಘಟನೆಗಳಿಗೆ ಈಗ ಕಮಾಂಡರ್​ಗಳೇ ಇಲ್ಲ. ಅಳಿದುಳಿದ ಮೂರ್ನಾಲ್ಕು ಉಗ್ರ ಕಮಾಂಡರ್​ಗಳಿಗಾಗಿ ಸೇನೆ ಕಾರ್ಯಾಚರಣೆ ನಡೆಸುತ್ತಲೇ ಇದೆ. ಸೇನೆ ಹೊಡೆದುರುಳಿಸುತ್ತಿರುವ ಉಗ್ರರ ಹೆಣಗಳನ್ನು ಹೂಳುವವರೂ ಇಲ್ಲದಂತಹ ಸ್ಥಿತಿಗೆ ಅಲ್ಲಿನ ಭಯೋತ್ಪಾದಕ ಸಂಘಟನೆಗಳು ತಲುಪಿವೆ..

ಪಾಕಿಸ್ತಾನದಿಂದ ಎಂಜಲು ಕಾಸು ಪಡೆದು ಕಾಶ್ಮೀರದಲ್ಲಿರುವ ನಿರುದ್ಯೋಗಿ ಯುವಕರುಗಳಿಂದ ಕಲ್ಲು ತೂರಾಟ ನಡೆಸುವುದು ಪ್ರತ್ಯೇಕತಾವಾದಿಗಳ ಒನ್ ಲೈನ್ ಅಜೆಂಡಾ. ಆದ್ರೆ ನೋಟ್ ಬ್ಯಾನ್ ನಂತರ ಪಾಕಿಸ್ತಾನದಿಂದ ಹರಿದು ಬರುತ್ತಿರುವ ಹಣಕ್ಕೆ ಕತ್ತರಿ ಬಿದ್ದಿದೆ. ದೆಹಲಿಯ ಒಂದೇ ದಿನ ಎನ್​ಐಎ ನಡೆಸಿದ ಕಾರ್ಯಾಚರಣೆಯಲ್ಲಿ 36 ಕೋಟಿ ಹಳೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹವಾಲಾ ಮೂಲಕ ಪಾಕ್​ನಿಂದ ಹಣ ಪಡೆಯುತ್ತಿದ್ದ ಪ್ರತ್ಯೇಕತಾವಾದಿಗಳ ಮನೆಗಳಲ್ಲಿ ಐದು ಕೋಟಿಯಷ್ಟು ಹಣ ಸಿಕ್ಕಿದೆ. ಇನ್ನು ಕಲ್ಲು ತೂರಾಟ ನಡೆಸಲು ಪ್ರೇರೇಪಿಸುವ ಪ್ರ್ಯೇಕತಾವಾದಿಗಳ ಮನೆಗಳ ಮೇಲೆ ರೇಡ್ ಮಾಡಿ ಕೊಟ್ಯಂತರ ರೂ ಹಣ ವಶಪಡಿಸಿಕೊಂಡಿದೆ. ಹಿಂಸಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದ್ದವರ ಮೇಲೆ ಕೇಸುಗಳು ಬಿದ್ದಿವೆ.

ಕಾಶ್ಮೀರ ವಿಚಾರದಲ್ಲಿ ಮೋದಿ ಸರ್ಕಾರದ ನೀತಿ ಸರಿಯಿಲ್ಲ ಎಂದು ಟೀಕಿಸುತ್ತಿದ್ದವರಿಗೆ ಮೋದಿ ಸರ್ಕಾರ ದಿಟ್ಟ ಉತ್ತರವನ್ನೇ ನೀಡಿದೆ. ನಿರಂತರ ಹಿಂಸಾಚಾರ ನಡೆಸಿ ಕಾಶ್ಮೀರದಲ್ಲಿ ಭಾರತ ದೌರ್ಜನ್ಯ ನಡೆಸುತ್ತಿದೆ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುತ್ತಿದ್ದ ಪಾಕಿಸ್ತಾನದ ಕಪಟ ಕೈವಾಡಕ್ಕೂ ಈಗ ಮೋದಿ ಸರ್ಕಾರ ದೊಡ್ಡ ಪೆಟ್ಟು ನೀಡಿದೆ. ಕೇಂದ್ರ ಸರ್ಕಾರ, ಜಮ್ಮು-ಕಾಶ್ಮೀರದ ರಾಜ್ಯ ಸರ್ಕಾರ, ಪೊಲೀಸರು, ಸೇನಾಪಡೆ ಮತ್ತು ಎನ್​ಐಎ ನಡೆಸಿರುವ ಈ ಆಪರೇಷನ್ ಆಲ್​ ಔಟ್ ಕಾರ್ಯಾಚರಣೆ ಸಂಪೂರ್ಣ ಯಶಸ್ಸಿನತ್ತ ಸಾಗುತ್ತಿದೆ. ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಪೂರ್ಣ ವಿರಾಮ ಹಾಕುವ ಪ್ಲಾನ್ ಮೋದಿಗಿದೆ. ಕಾಶ್ಮೀರ ವಿಚಾರದಲ್ಲಿ ಜಗತ್ತಿನೆದರು ಚಿಂತಕರಂತೆ ಪೋಸು ಕೊಡುತ್ತಿದ್ದ ಬುದ್ದಿ ಜೀವಿಗಳು ಈಗ ಮೌನವಾಗಿದ್ದಾರೆ. ಮೋದಿ ಸರ್ಕಾರದ ಕಾಶ್ಮೀರ ನೀತಿಯನ್ನು ಪ್ರಶ್ನಿಸುತ್ತಲೇ ಇದ್ದ ಕಾಂಗ್ರೆಸ್​ ಕೂಡ ಬುದ್ದಿ ಜೀವಿಗಳಂತೆ ಮೌನಕ್ಕೆ ಶರಣಾಗಿದೆ. ಈಗ ಉತ್ತರ ಕೊಡುವ ಜಾಗದಲ್ಲಿ ಬುದ್ದಿಜೀವಿಗಳು ಮತ್ತು ಪ್ರತಿಪಕ್ಷಗಳು ನಿಂತಿವೆ.. ಉತ್ತರಿಸುತ್ತಾರಾ….

ಗಾಂಧಿ ಹತ್ಯೆ ರಹಸ್ಯ..! ಸಮಾಧಿಯೊಳಗಿನ ಸತ್ಯಗಳು…

ಘೋಡ್ಸೆ ಮತ್ತು ಗಾಂಧಿ

ಗಾಂಧಿ ಹತ್ಯೆಯ ಮರು ತನಿಖೆಯಾಗಬೇಕು ಎಂಬ ಒತ್ತಾಯ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದೆ. ಹತ್ಯೆಯಾಗಿ ಹಲವು ದಶಕಗಳೇ ಕಳೆದಿದ್ದರೂ ಮರು ತನಿಖೆ ಯಾಕಾಗಬೇಕು. ಹತ್ಯೆ ಹಿಂದಿನ ರಹಸ್ಯ ಏನು..? ಹತ್ಯೆ ನಂತರ ನಡೆದ ತನಿಖೆಯಲ್ಲಿ ಯಾರನ್ನು ರಕ್ಷಿಸಲಾಗಿತ್ತು..? ಹತ್ಯೆಯ ಮರು ತನಿಖೆಯಾದ್ರೆ ಸತ್ಯ ಹೊರ ಬರುತ್ತಾ…? ನಾಥೂರಾಮ್ ಘೋಡ್ಸೆ ಎಂಬ ಹಿಂದುತ್ವವಾದಿ ಗಾಂಧಿಯನ್ನು ಹತ್ಯೆ ಮಾಡಿದ ಎಂದು ಇತಿಹಾಸ ಹೇಳುತ್ತೆ. ಆದ್ರೆ ಈಗ ಸುಪ್ರೀಂ ಕೋರ್ಟ್​ ಮುಂದೆ ಸಲ್ಲಿಸಲಾಗಿರುವ ಅರ್ಜಿ ಇತಿಹಾಸದ ಮತ್ತೊಂದು ಮುಖವನ್ನು ಅನಾವರಣಗೊಳಿಸುತ್ತಿದೆ. ಮಹಾತ್ಮಾ ಗಾಂಧೀಜಿ ಹತ್ಯೆಯಾಗಿ 70 ವರ್ಷಗಳಾಗುತ್ತಿವೆ. ಆದರೂ ಹತ್ಯೆಯ ಹಿಂದಿನ ಪೂರ್ಣ ಸತ್ಯ ಇದುವರೆಗೂ ದೇಶದ ಜನರಿಗೆ ಇದುವರೆಗೂ ಗೊತ್ತೇ ಇಲ್ಲ. ಈಗ ಗಾಂಧಿ ಹತ್ಯೆ ಪ್ರಕರಣದ ಮರುತನಿಖೆಯಾಗಬೇಕು ಎಂದು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಲಾಗಿದೆ. ಅರ್ಜಿಯನ್ನು ಸ್ವೀಕರಿಸಿರುವ ದೇಶದ ಸರ್ವೋಚ್ಚ ನ್ಯಾಯಾಲಯ ಅಮಿಕಸ್ ಕ್ಯೂರಿಯನ್ನು ನೇಮಕ ಮಾಡಿದೆ..

ಗಾಂಧಿ ಹತ್ಯೆಯ ಮರು ತನಿಖೆ ನಡೆಯಬೇಕು ಎಂದು ಮುಂಬೈ ಮೂಲದ ಪಂಕಜ್ ಫಡ್ನಿಸ್ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ವೀರ ಸಾವರ್ಕರ್ ಅವರ ಅಭಿಮಾನಿ ಎಂದು ಘೋಷಿಸಿಕೊಂಡಿರುವ ಈ ವ್ಯಕ್ತಿ ಕಳೆದ 20 ವರ್ಷಗಳಿಂದ ಗಾಂಧಿ ಹತ್ಯೆಯ ಹಿಂದಿನ ಷಡ್ಯಂತ್ರದ ಬಗ್ಗೆಯೇ ಸಂಶೋಧನೆ ನಡೆಸುತ್ತಿದ್ದಾರೆ. ಗಾಂಧಿ ಹತ್ಯೆಯ ಮರು ತನಿಖೆ ನಡೆದರೆ ಅದು ಭಾರತದ ಇತಿಹಾಸದಲ್ಲೇ ಒಂದು ದೊಡ್ಡ ತುರುವಾಗುತ್ತದೆ ಎಂದು ಪಂಕಜ್ ಫಡ್ನಿಸ್ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಅರ್ಜಿಯ ಜೊತೆ ಪಂಕಜ್ ಫಡ್ನಿಸ್ ಹಲವು ದಾಖಲೆಗಳನ್ನೂ ನೀಡಿದ್ದಾರೆ. ಸುಪ್ರೀಂ ಕೋರ್ಟ್ ನೇಮಿಸಿರುವ ಅಮಿಕಸ್ ಕ್ಯೂರಿ ನೀಡುವ ವರದಿಯನ್ನಾಧರಿಸಿ ಹತ್ಯೆಯ ಮರು ತನಿಖೆ ನಡೆಸುವ ಬಗ್ಗೆ ನ್ಯಾಯಮೂರ್ತಿಗಳು ನಿರ್ಧರಿಸಲಿದ್ದಾರೆ.

1948ರ ಜನವರಿ 30 ರಂದು ಬರ್ಲಾ ಹೌಸ್​ ಆವರಣದಲ್ಲಿ ಗಾಂಧೀಜಿ ಎದೆಗೆ ನಾಥೂರಾಮ ಘೋಡ್ಸೆ ಗುಂಡಿಕ್ಕಿದ. ಘೋಡ್ಸೆ ಬಲಸಿದ್ದ ಬೆರೆಟ್ಟಾ ಪಿಸ್ತೂಲ್​ನಿಂದ ಹಾರಿದ್ದು ಮೂರು ಗುಂಡು. ಘೋಡ್ಸೆ ಪಿಸ್ತೂಲ್​ನಲ್ಲಿದ್ದ ಏಳು ಗುಂಡುಗಳಲ್ಲಿ ಮೂರು ಗಾಂಧಿ ದೇಹ ಹೊಕ್ಕಿದ್ದವು. ಉಳಿದ ನಾಲ್ಕು ಗುಂಡುಗಳು ಪಿಸ್ತೂಲ್​ನಲ್ಲೇ ಉಳಿದಿತ್ತು. ಆದ್ರೆ ಗಾಂಧೀಜಿ ದೇಹದಲ್ಲಿ ಪತ್ತೆಯಾಗಿದ್ದು ಮಾತ್ರ ನಾಲ್ಕು ಗುಂಡುಗಳು. ಹಾಗಾದ್ರೆ ನಾಲ್ಕನೇ ಗುಂಡು ಹಾರಿಸಿದ್ದು ಯಾರು..? ಈ ಅನುಮಾನ ಗಾಂಧಿ ಹತ್ಯೆಯಾದಾಗಿನಿಂದಲೂ ಇದೆ. ಆದ್ರೆ ಇದಕ್ಕೆ ದೊಡ್ಡ ಮಟ್ಟದ ರಾಜಕೀಯ ಬೆಂಬಲ, ಕಾನೂನಿನ ಬೆಂಬಲ ಸಿಗದೇ ಹೋದ ಕಾರಣದಿಂದ ಈ ವಾದಕ್ಕೆ ಮಹತ್ವ ಬರಲೇ ಇಲ್ಲ.

ಗಾಂಧಿ ಹತ್ಯೆ ನಡೆದ ನಂತರ ಕೋರ್ಟ್​ ಹಾಲ್​ನಲ್ಲಿ ನಿಂತು ನಾಥೂರಾಮ ಘೋಡ್ಸೆ ಗಾಂಧಿಯನ್ನು ಕೊಲೆಗೆ ಸಮರ್ಥನೆ ಮಾಡಿಕೊಂಡಿದ್ದ. ಗಾಂಧೀಜಿ ಹತ್ಯೆಯ ಹಿಂದೆ ಯಾವ ಷಡ್ಯಂತ್ರ, ಯಾರ ಪಾತ್ರವೂ ಇಲ್ಲ. ಗಾಂಧೀಜಿಯನ್ನು ಹತ್ಯೆ ಮಾಡುವುದು ನನ್ನ ನಿರ್ಧಾರ. ಉಳಿದೆಲ್ಲ ಆರೋಪಿಗಳು ನಿರಪರಾಧಿಗಳು ಎಂದಿದ್ದ. ತನಗೆ ನೀಡಿದ್ದ ಗಲ್ಲು ಶಿಕ್ಷೆಗೆ ಆತ ಮೇಲ್ಮನವಿಯನ್ನೂ ಸಲ್ಲಿಸಲಿಲ್ಲ. ಹಾಗೆ ಘೋಡ್ಸೆ ಕೋರ್ಟ್​ನಲ್ಲಿ ನಿಂತು ನಾನೇ ಗಾಂಧಿಯನ್ನು ಕೊಂದೆ ಎಂದು ಹೇಳಿದ ನಂತರವೂ ಹತ್ಯೆಯ ಹಿಂದೆ ಯಾರದ್ದೋ ಕೈವಾಡ ಇದೆ ಎಂಬ ಅನುಮಾನ ಇತ್ತು. ಯಾರದ್ದೋ ಕೈಗೊಂಬೆಗಳಾಗಿ ಘೋಡ್ಸೆ ಮತ್ತು ನಾರಾಯಣ್ ಆಪ್ಟೆ ಗಾಂಧಿಯನ್ನು ಕೊಂದು ನೇಣಿಗೇರಿದರಾ ಅನ್ನೋದು ಆ ಅನುಮಾನ.

ಹಾಗಾದ್ರೆ ಗಾಂಧೀಜಿ ಹತ್ಯೆಯ ಹಿಂದೆ ಯಾರಿದ್ದಾರೆ. ಗಾಂಧಿ ಹತ್ಯೆ ನಡೆದ ನಂತರ ಮುಂಬೈನಲ್ಲಿ ನಡೆದ ಗಲಭೆಯ ಹಿಂದೆ ಯಾರಿದ್ದಾರೆ. ಗಾಂಧಿ ಹತ್ಯೆ ಮತ್ತು ಆ ನಂತರದ 15 ಬ್ರಾಹ್ಮಣರ ಕೊಲೆ ಎಲ್ಲವೂ ಷಡ್ಯಂತ್ರದ ಭಾಗ ಎನ್ನುವ ಮಾತು ನಿಜಾನಾ..?. ಹಿಂದುದತ್ವವಾದಿ ಅಜೆಂಡಾದಿಂದ ಈ ಕೊಲೆ ನಡೆದಿಲ್ಲ. ವೀರ ಸಾವರ್ಕರ್ ಅವರು ಗಾಂಧಿಯನ್ನು ಹತ್ಯೆ ಮಾಡಿ ಎಂದು ಘೋಡ್ಸೆ ಮತ್ತು ನಾರಾಯಣ ಆಪ್ಟೆಗೆ ಉಪದೇಶ ಮಾಡಿರಲಿಲ್ಲ. ಘೋಡ್ಸೆ ಮತ್ತು ಆಪ್ಟೆಯನ್ನು ಬಳಸಿಕೊಂಡು ಬಾಹ್ಯ ಶಕ್ತಿಯೊಂದು ಗಾಂಧಿಯನ್ನು ಹತ್ಯೆ ಮಾಡಿದೆ ಎನ್ನೋದು ಪಂಕಜ್ ಫಡ್ನಿಸ್ ಅವರ ವಾದ. ಈ ವಾದಕ್ಕೆ ಪೂರಕವಾಗಿ ಫಡ್ನಿಸ್ ಸುಪ್ರೀಂ ಕೋರ್ಟ್​ಗೆ ಹಲವು ದಾಖಲೆಗಳನ್ನು ಸಲ್ಲಿಸಿದ್ದಾರೆ.

ಗಾಂಧಿ ಹತ್ಯೆಯ ಬಗ್ಗೆ ಇತಿಹಾಸದಲ್ಲೇ ಅತಿ ದೊಡ್ಡ ರಹಸ್ಯವನ್ನು ಮುಚ್ಚಿಡಲಾಗಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿರುವ ಪಂಕಜ್ ಫಡ್ನಿಸ್ ಕೇವಲ ಪ್ರಚಾರಕ್ಕಾಗಿ ಈ ಅರ್ಜಿಯನ್ನು ಸಲ್ಲಿಸಿಲ್ಲ. ಗಾಂಧಿ ಹತ್ಯೆಯ ನಂತರ ನಡೆದ ತನಿಖೆ ಮತ್ತು ಕೋರ್ಟ್​ ವಿಚಾರಣೆಯಲ್ಲಾದ ಲೋಫಗಳನ್ನು ಮುಂದಿಟ್ಟುಕೊಂಡು ಅಗತ್ಯ ದಾಖಲೆಗಳೊಂದಿಗೆ ದೇಶದ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಮಹಾತ್ಮಾ ಗಾಂಧಿ ಹತ್ಯೆಯನ್ನು ಮಾಡಿದವನು ನಾಥೂರಾಮ್ ಘೋಡ್ಸೆ. ಇದು ದೇಶ ಕಲಿಸಿರುವ ಇತಿಹಾಸ. ಗಾಂಧಿ ಹತ್ಯೆಯನ್ನು ಕೇವಲ ನಾಥೂರಾಮ್ ಗೋಡ್ಸೆ ಒಬ್ಬ ಮಾತ್ರ ಮಾಡಲಿಲ್ಲ. ಹತ್ಯೆ ಮಾಡಿದ್ದು ಇಬ್ಬರು ವ್ಯಕ್ತಿಗಳು ಅನ್ನೋ ವಾದ ಫಡ್ನಿಸ್ ಅವರದ್ದು. ಹಾಗಾದ್ರೆ ಆ ಎರಡನೇ ವ್ಯಕ್ತಿ ಯಾರು ಅನ್ನೋದು ಈಗಿನ ಪ್ರಶ್ನೆ. ಆ ಎರಡನೆಯ ವ್ಯಕ್ತಿ ಘೋಡ್ಸೆ ಜೊತೆ ಗಲ್ಲು ಶಿಕ್ಷೆಗೊಳಪಟ್ಟ ನಾರಾಯಣ ಆಪ್ಟೆ ಅಲ್ಲ ಅನ್ನೋದು ಫಡ್ನಿಸ್ ವಾದ.

ಗಾಂಧಿ ಹತ್ಯೆ ಹಿಂದೆ ಬ್ರಿಟೀಷ್ ಸೇನೆ ಕೈವಾಡ..?

ಗಾಂಧಿ ಹತ್ಯೆಯನ್ನು ನಾನೇ ಮಾಡಿದ್ದು ಅಂತ ನಾಥೂರಾಮ್ ಘೋಡ್ಸೆ ಕೋರ್ಟ್​ನಲ್ಲಿಯೇ ಒಪ್ಪಿಕೊಂಡಿದ್ದಾನೆ. ಆದ್ರೆ ಆತನ ಪಿಸ್ತೂಲ್​ನಿಂದ ಸಿಡಿದಿದ್ದು ಮೂರು ಬುಲೆಟ್ ಮಾತ್ರ. ಆದ್ರೆ ಗಾಂಧಿ ದೇಹ ಹೊಕ್ಕಿದ್ದು ನಾಲ್ಕು ಬುಲೆಟ್​ಗಳು ಅನ್ನುತ್ತವೆ ಸಂಶೋಧನೆಗಳು. ಆ ನಾಲ್ಕನೇ ಬುಲೆಟ್ ಅನ್ನು ಫೈರ್ ಮಾಡಿದ್ದು ಯಾರು? ಕೊನೆಯದಾಗಿ ಫೈರ್ ಆದ ಬುಲೆಟ್​ನಿಂದಾಗಿಯೇ ಗಾಂಧಿ ಪ್ರಾಣ ಬಿಟ್ಟರು ಅನ್ನೋ ವಾದ ಹಿಂದಿನಿಂದಲೂ ಇದೆ. ಗಾಂಧಿ ಹತ್ಯೆಯ ಹಿಂದೆ ಎರಡನೇ ಮಹಾಯುದ್ದದ ಅವಧಿಯಲ್ಲಿ ಬ್ರಿಟೀಷ್ ಸೇನೆಯ ವಿದ್ವಂಸಕಾರಿ ಘಟಕವಾಗಿದ್ದ ಫೋರ್ಸ್ 136 ನ ಕೈವಾಡ ಇದೆ ಅನ್ನೋದು ಫಡ್ನಿಸ್ ವಾದ. ಯಾಕಂದ್ರೆ ಗಾಂಧಿ ಹತ್ಯೆಗೆ ಬಳಸಲಾಗಿದ್ದ ಬೆರೆಟ್ಟಾ 1934 ಪಿಸ್ತೂಲ್ ಅನ್ನು ಎರಡನೇ ಮಹಾಯುದ್ಧದಲ್ಲಿ ಬಳಕೆ ಮಾಡಲಾಗಿತ್ತು. ಜನ ಸಾಮಾನ್ಯರಿಗೆ ಅಷ್ಟು ಸುಲಭವಾಗಿ ಸಿಗದ ಈ ಪಿಸ್ತೂಲ್ ಗೋಡ್ಸೆಗೆ ಸಿಕ್ಕಿದ್ದು ಹೇಗೆ..? ಹತ್ಯೆಗೆ ಬಳಸಲಾಗಿದ್ದ ಬೆರೆಟ್ಟಾ ಪಿಸ್ತೂಲನ್ನು ಗೋಡ್ಸೆಗೆ ಕೊಟ್ಟಿದ್ದು ಗ್ವಾಲಿಯರ್​ನ ದತ್ತಾತ್ರೆಯ ಪರ್ಚುರೆ. ಈ ವಿಷಯ ಗೊತ್ತಾಗಿದ್ದು ಗಾಂಧಿ ಹತ್ಯೆ ನಡೆದು ದಶಕಗಳಾದಮೇಲೆ. ಅಷ್ಟರಲ್ಲಾಗಲೇ ಘೋಡ್ಸೆಯನ್ನು ಗಲ್ಲಿಗೇರಿಸಲಾಗಿತ್ತು. ಅದೇ ದತ್ತಾತ್ರೆಯ ಪರ್ಚುರೆ ಬಳಿ ಮತ್ತೊಂದು ಬೆರೆಟ್ಟಾ ಪಿಸ್ತೂಲ್ ಪತ್ತೆಯಾಗಿತಯ್ತು. ಆದ್ರೆ ಆಗಿನ ಕಾಂಗ್ರೆಸ್​ ಸರ್ಕಾರ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲೇ ಇಲ್ಲ.

ಸ್ವಾತಂತ್ರ್ಯಾ ನಂತರ ದೇಶ ವಿಭಜನೆಯಾಗಿ ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾಗಿತ್ತು. ದೇಶ ವಿಭಜನೆ ಅಖಂಡ ಭಾರತದ ಕನಸು ಹೊತ್ತಿದ್ದ ಅನೇಕರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಆ ಆಕ್ರೋಶವನ್ನು ಬ್ರಿಟೀಷ್ ಸೇನೆ ಬಳಸಿಕೊಂಡು ಗಾಂಧಿಯನ್ನು ಹತ್ಯೆ ಮಾಡಿಸಿರಬಹುದು ಅನ್ನೊದು ಅನುಮಾನ. ದೇಶ ವಿಭಜನೆಯ ನಂತರ ಗಾಂಧಿ ವಿರುದ್ಧ ಕೆಂಡ ಕಾರುತ್ತಿದ್ದ ಹಿಂದುತ್ವವಾದಿ ನಾಥೂರಾಮ್ ಘೋಡ್ಸೆಯನ್ನು ಬಳಸಿಕೊಂಡು ಬ್ರಿಟಿಷ್ ಸೇನೆ ಗಾಂಧಿಯನ್ನು ಹತ್ಯೆ ಮಾಡಿರಬಹುದು. ಪಾಕಿಸ್ತಾನಕ್ಕೆ ಗಾಂಧೀಜಿ ಭೇಟಿ ನೀಡುವುದಕ್ಕೆ ಮೊಹಮ್ಮದ್ ಆಲಿ ಜಿನ್ನಾ ಒಪ್ಪಿಕೊಂಡ ನಂತರದ ಮೂರೇ ದಿನಕ್ಕೆ ಗಾಂಧಿ ಹತ್ಯೆಯಾಯಿತು. ಪಾಕಿಸ್ತಾನಕ್ಕೆ ಗಾಂಧಿ ಭೇಟಿ ನೀಡುವ ನಿರ್ಧಾರ ಹತ್ಯೆಗೆ ಕಾರಣವಾಯ್ತಾ ಅನ್ನೋದು ಫಡ್ನಿಸ್ ಅನುಮಾನ.

ಗಾಂಧಿ ಹತ್ಯೆ ರಹಸ್ಯ ಅಮೆರಿಕದಲ್ಲಿದೆ..!

ಗಾಂಧಿ ಹತ್ಯೆ ತನಿಖೆಯೂ ಸಮರ್ಪಕವಾಗಿ ಆಗಿಲ್ಲ ಅನ್ನೋ ವಾದ ಕಳೆದ 70 ವರ್ಷಗಳಿಂದಲೂ ಇದೆ. ಗಾಂಧಿ ಹತ್ಯೆಯನ್ನು ಕೇವಲ 5 ಅಡಿಗಳ ಅಂತರದಿಂದ ನಾನು ನೋಡಿದೆ ಎಂದು ಅಮೆರಿಕ ರಾಯಭಾರ ಕಚೇರಿಯ ಅಧಿಕಾರಿ ಹರ್ಬರ್ಟ್‌ ಟಾಮ್‌ ರೀನರ್‌ ಅಮೆರಿಕಕ್ಕೆ ಟೆಲಿಗ್ರಾಮ್ ಮಾಡಿದ್ದರು. ಹತ್ಯೆ ನಡೆದ ನಂತರ ನಾಥೂರಾಮ್ ಘೋಡ್ಸೆಯನ್ನು ಭದ್ರತಾ ಸಿಬ್ಬಂದಿಯ ಸಹಾಯದೊಂದಿಗೆ ಹರ್ಬರ್ಟ್‌ ಟಾಮ್‌ ರೀನರ್‌ ಹಿಡಿದಿದ್ದರು. ಅಂದು ಸಂಜೆ ಹರ್ಬರ್ಟ್ ಮಾಡಿದ್ದ ಟೆಲಿಗ್ರಾಂ ಅನ್ನು ಅಮೆರಿಕ 70 ವರ್ಷಗಳಿಂದಲೂ ಬಹಿರಂಗಗೊಳಿಸಿಲ್ಲ. ಆ ಟೆಲಿಗ್ರಾಂನಲ್ಲಿ ಹತ್ಯೆ ನಡೆಸಿದ ಎರಡನೇ ವ್ಯಕ್ತಿ ಬಗ್ಗೆ ಉಲ್ಲೇಖ ಇದೆ. ಗಾಂಧಿ ಹತ್ಯೆ ವಿಚಾರ ಅಮೆರಿಕಕ್ಕೆ ಯಾವ ಕಾರಣದಿಂದಲೂ ಸಂಬಂಧವಿಲ್ಲದ ವಿಚಾರ. ಇಂತಹ ವಿಚಾರದಲ್ಲಿರುವ ರಹಸ್ಯವನ್ನು ಅಮೆರಿಕ ರಾಷ್ಟ್ರೀಯ ರಹಸ್ಯ ಎಂದು 70 ವರ್ಷಗಳಿಂದ ಕಾಪಾಡಿಕೊಂಡು ಬರುತ್ತಿರುವುದು ಏಕೆ..? ಈ ಎಲ್ಲ ಕಾರಣಗಳಿಗಾಗಿಯೇ ಹತ್ಯೆ ತನಿಖೆ ಮತ್ತೆ ನಡೆಯಬೇಕು ಎಂದು ಪಂಕಜ್ ಫಡ್ನಿಸ್ ಸುಪ್ರೀಂ ಕೋರ್ಟ್​ ಗೆ ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ಮರು ತನಿಖೆ ನಡೆದರೆ ಗಾಂಧಿ ಹತ್ಯೆಗೆ ನಿಜವಾದ ಕಾರಣ ಏನು, ಗಾಂಧಿ ಹತ್ಯೆ ಹಿಂದೆ ಯಾರಿದ್ದರು ಅನ್ನೋದು ಸ್ಪಷ್ಟವಾಗುತ್ತದೆ.

ಗಾಂಧಿ ಹತ್ಯೆ ನಂತರ ನಡೆದ ತನಿಖೆ, ಕೋರ್ಟ್​ ವಿಚಾರಣೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಆ ಯಾವ ಪ್ರಶ್ನೆಗಳಿಗೂ ನೆಹರೂ ಸರ್ಕಾರ ಉತ್ತರ ನೀಡಲೇ ಇಲ್ಲ. ಹತ್ಯೆ ಮಾಡಿದ ನಾಥುರಾಮ ಘೋಡ್ಸೆ ಕೋರ್ಟ್​ ಕಟಕಟೆಯಲ್ಲಿ ನಿಂತು ನಾನೇಕೆ ಗಾಂಧಿಯನ್ನು ಕೊಂದೆ ಎಂದು ಹೇಳಿದ್ದ. ಆತನ ತಪ್ಪೊಪ್ಪಿಗೆ ಹೇಳಿಕೆಯನ್ನು ಬಹಿರಂಗಪಡಿಸದದೇ ಸೆನ್ಸಾರ್ ಮಾಡಿತ್ತು ನೆಹರೂ ಸರ್ಕಾರ. ಗಾಂಧಿ ಹತ್ಯೆಯ ತನಿಖೆ ಸಮರ್ಪಕವಾಗಿ ನಡೆದಿಲ್ಲ, ಸರಿಯಾದ ತನಿಖೆ ನಡೆದಿದ್ದರೆ ಹಲವರ ಬಂಡವಾಳ ಬಯಲಾಗುತ್ತಿತ್ತು. ಆಗಿನ್ನೂ ದೇಶ ಪೂರ್ಣ ಸಾರ್ವಭೌಮತ್ವ ಹೊಂದಿರದ ಕಾರಣ ಬ್ರಿಟೀಷ್ ಕಾನೂನಿನಡಿಯಲ್ಲೇ ತನಿಖೆ ಮತ್ತು ವಿಚಾರಣೆ ನಡೆದಿತ್ತು. ಈ ಕಾರಣಕ್ಕಾಗಿಯೇ ಕರಾರುವಕ್ಕಾದ ತನಿಖೆ ನಡೆಸದೇ ಅತಿ ದೊಡ್ಡ ಸತ್ಯವೊಂದನ್ನು ಬ್ರಿಟೀಷರು ತಮ್ಮ ಪ್ರಭಾವ ಬೀರಿ ಮುಚ್ಚಿ ಹಾಕಿದ್ದರು.

ಅವರಿಬ್ಬರ ವಿಚಾರಣೆ ಏಕೆ ನಡೆಸಲಿಲ್ಲ..?

ಗಾಂಧಿ ದತ್ತು ಪುತ್ರಿ ಮನುಬೆನ್ ಮತ್ತು ಅಬಾ

ಗಾಂಧಿ ದತ್ತು ಪುತ್ರಿ ಮನುಬೆನ್ ಮತ್ತು ಅಬಾ

ಗಾಂಧಿ ಹತ್ಯೆ ನಡೆದಾಗ ಅವರ ಜೊತೆಯಲ್ಲಿ ಇದ್ದಿದ್ದು ಇಬ್ಬರು ಯುವತಿಯರು. ಅದರಲ್ಲಿ ಒಬ್ಬಾಕೆ ಗಾಂಧಿ ದತ್ತು ಪುತ್ರಿ ಮನುಬೆನ್ ಮತ್ತು ಸರ್ದಾರ್ ಪಟೇಲರ ಮಗಳು ಅಬಾ. ಮನುಬೆನ್​ಳನ್ನು ತನ್ನ ಕೈಯಿಂದ ತಳ್ಳಿದ ನಂತರ ಗಾಂಧಿ ಎದೆಗೆ ಗುಂಡಿಕ್ಕಿದ್ದ ನಾಥೂರಾಮ್ ಘೋಡ್ಸೆ. ಬ್ರಿಟೀಷ್ ಕಾನೂನಿನಡಿಯಲ್ಲಿಯೇ ತನಿಖೆ ನಡೆದರೂ ಪ್ರತ್ಯಕ್ಷದರ್ಶಿಗಳಾಗಿದ್ದ ಈ ಇಬ್ಬರು ಹೆಣ್ಣು ಮಕ್ಕಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕಿತ್ತು. ಆದ್ರೆ ಅದು ಆಗಲೇ ಇಲ್ಲ. ನಾಥೂರಾಮನಿಗೆ ಗಲ್ಲು ಶಿಕ್ಷೆ ವಿಧಿಸುವಾಗಲೂ ಈ ಪ್ರತ್ಯಕ್ಷದರ್ಶಿಗಳಿಬ್ಬರ ಹೇಳಿಕೆ ಪಡೆಯಲೇ ಇಲ್ಲ. ಗಾಂಧಿ ಮೃತದೇಹವನ್ನು ಶುಚಿಗೊಳಿಸುವಾಗ ಸಿಕ್ಕ ಬುಲೆಟ್ ಬಗ್ಗೆಯೂ ತನಿಖೆಯಾಗಲಿಲ್ಲ. ಇನ್ನು ಇಡೀ ಕೋರ್ಟ್​ ಕಲಾಪವನ್ನು ಸಾರ್ವಜನಿಕರಿಗೆ ಮುಕ್ತವಾಗಿರಿಸಲಾಗಿತ್ತು. ಆದ್ರೆ ಯಾವಾಗ ನಾಥೂರಾಮ್ ಘೋಡ್ಸೆ ತನ್ನ ಹೇಳಿಕೆಯನ್ನು ನೀಡಲು ಕೋರ್ಟ್​ನಲ್ಲಿ ಎದ್ದು ನಿಂತನೋ ಕೋರ್ಟ್​ ವಿಚಾರಣೆಗೆ ಸೆನ್ಸಾರ್ ಹೇರಿತ್ತು ಅಂದಿನ ನೆಹರೂ ಸರ್ಕಾರ. ಕೇಂದ್ರದಲ್ಲಿ ಕಾಂಗ್ರೆಸ್​ ಸರ್ಕಾರ ಇರುವವರೆಗೂ ಘೋಡ್ಸೆ ಹೇಳಿಕೆ ಏನು ಅನ್ನೋದು ಈ ದೇಶಕ್ಕೆ ಗೊತ್ತೇ ಆಗಲಿಲ್ಲ. ಅಷ್ಟರಮಟ್ಟಿಗೆ ಪ್ರಕರಣದ ತನಿಖೆ ಮತ್ತು ವಿಚಾರಣೆ ಪಾರದರ್ಶಕವಾಗಿ ನಡೆದೇ ಇಲ್ಲ.

ಪಂಕಜ್ ಫಡ್ನಿಸ್ ವಾದ ಏನು..? 

1. ಗಾಂಧಿ ಹತ್ಯೆ ಮಾಡಿದ್ದು ನಾಥೂರಾಮ್ ಘೋಡ್ಸೆ, ನಾರಾಯಣ ಆಪ್ಟೆ ಮಾತ್ರ ಅಲ್ಲ. ಹತ್ಯೆ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ.
2. ಗಾಂಧಿ ಹತ್ಯೆಗಾಗಿ ನಾಥೂರಾಮ್ ಘೋಡ್ಸೆ ಹಾರಿಸಿದ್ದು ಮೂರು ಗುಂಡುಗಳು. ಆದ್ರೆ ಗಾಂಧಿ ದೇಹ ಹೊಕ್ಕಿದ್ದು ನಾಲ್ಕು ಗುಂಡುಗಳು. ನಾಲ್ಕನೇ ಗುಂಡು ಗುಂಡು ಹಾರಿಸಿದ ಎರಡನೇ ವ್ಯಕ್ತಿ ಯಾರು..?
3. ಗಾಂಧಿ ಹತ್ಯೆಯ ಹಿಂದೆ ಎರಡನೇ ಮಹಾಯುದ್ಧ ಕಾಲದ ಬ್ರಿಟೀಷ್ ಸೇನಾ ಘಟಕ “ಫೋರ್ಸ್ 136” ನ ಕೈವಾಡ ಇದೆ.
4. ಗಾಂಧಿ ಹತ್ಯೆಯನ್ನು ಕೇವಲ ಐದು ಅಡಿಗಳಷ್ಟು ದೂರದಿಂದ ನೋಡಿದ್ದ ಅಮೆರಿಕನ್ ರಾಯಬಾರಿ ಮಾಡಿದ್ದ ಟೆಲಿಗ್ರಾಂ ಬಹಿರಂಗಪಡಿಸಿಲ್ಲ ಯಾಕೆ..?
5. ಮಹಾತ್ಮಾ ಗಾಂಧಿ ಹತ್ಯೆಗೆ ಸಂಬಂಧಿಸಿದ ಟೆಲಿಗ್ರಾಂ ಅನ್ನು 70 ವರ್ಷಗಳಿಂದ ರಹಸ್ಯವಾಗಿಟ್ಟಿರುವ ಉದ್ದೇಶ ಏನು..?
6. ಗಾಂಧಿ ಮೃತದೇಹದ ಮರಣೋತ್ತರ ಪರೀಕ್ಷೆ ಯಾಕೆ ನಡೆಸಿಲ್ಲ..?
7. ಗಾಂಧಿ ಹತ್ಯೆಯಾದಾಗ ಜೊತೆಯಲ್ಲಿದ್ದ ದತ್ತು ಪುತ್ರಿ ಮನು ಬೆನ್ ಮತ್ತು ಸರ್ದಾರ್ ಪಟೇಲ್ ಮಗಳು ಅಬಾ ವಿಚಾರಣೆಯೇ ನಡೆಸಿಲ್ಲ..!
8. ಗಾಂಧೀಜಿ ಪಾಕಿಸ್ತಾನಕ್ಕೆ ಭೇಟಿ ಘೋಷಣೆ ಮಾಡಿದ ಮೂರನೇ ದಿನಕ್ಕೇ ಹತ್ಯೆಯಾಗಿದ್ದು ಯಾಕೆ..?
9. ಗಾಂಧಿ ಹತ್ಯೆ ತನಿಖೆ ವೈಜ್ಞಾನಿಕವಾಗಿ ನಡೆದಿಲ್ಲ, ಕೇವಲ ಹೇಳಿಕೆಗಳ ಆಧಾರದ ಮೇಲೆ ತೀರ್ಪು ನೀಡಲಾಗಿದೆ..!
10. ಗಾಂಧಿ ಹತ್ಯೆಯಾಗಿದ್ದು ಸಂಜೆ 5.17ಕ್ಕೆ. ಆದ್ರೆ ಮಧ್ಯಾಹ್ನ 3 ಗಂಟೆಗೆ ವಿದೇಶಿ ವ್ಯಕ್ತಿಯೊಬ್ಬ ಗಾಂಧಿ ಹತ್ಯೆಯಾಗಿದ್ದಾರೆ ಎಂದು ದೆಹಲಿಯಲ್ಲಿ ಕರಪತ್ರ ಹಂಚುತ್ತಿದ್ದ, ಇದು ಹೇಗೆ ಸಾಧ್ಯ..?
11. ಗಾಂಧಿ ಹತ್ಯೆಗೆ ಮೂರು ದಿನ ಇರುವ ಮೊದಲೇ ಪುಣೆಯ ಕಲೆಕ್ಟರ್ ಪತ್ನಿ ಸರಳಾ ಭಾವೆ ಅವರಿಗೆ “ಗಾಂಧಿ ಹತ್ಯೆ ಮಾಡಲು ಕೆಲವು ವ್ಯಕ್ತಿಗಳು ದೆಹಲಿಗೆ ಹೋಗಿದ್ದಾರೆ” ಎಂದು ವ್ಯಕ್ತಿಯೊಬ್ಬರು ಹೇಳಿದ್ದರು. ಈ ಬಗ್ಗೆ ಪುಣೆಯ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು. ಆದರೂ ಗಾಂಧಿ ಹತ್ಯೆಯನ್ನೇಕೆ ತಪ್ಪಿಸಲಿಲ್ಲ?
12. ಹತ್ಯೆಯಲ್ಲಿ ಬ್ರಿಟೀಷ್ ಕೈವಾಡ ಇದೆ ಎಂಬ ಬಗ್ಗೆ ಅಂದಿನ USSR ನ ಭಾರತೀಯ ರಾಯಭಾರಿ ವಿಜಯ ಲಕ್ಷ್ಮೀ ಪಂಡಿತ್​ಗೆ ವರದಿ ನೀಡಲಾಗಿತ್ತು. ಆದ್ರೆ ಈ ಬಗ್ಗೆ ತನಿಖೆ ನಡೆಯಲೇ ಇಲ್ಲ.

ಇದಿಷ್ಟೂ ಪಂಕಜ್​ ಫಡ್ನಿಸ್​ ಅವರು ಗಾಂಧಿ ಹತ್ಯೆಯ ಮರು ತನಿಖೆ ಯಾಕಾಗಿ ಆಗಬೇಕು ಎಂದು ಎತ್ತಿರುವ ಪ್ರಶ್ನೆಗಳು. ಇನ್ನು ಹತ್ಯೆ ನಂತರ ನಾಥೂರಾಮ್ ಘೋಡ್ಸೆ ಕೆಂಪು ಕೋಟೆಯ ಕೋರ್ಟ್​ ಹಾಲ್​ನಲ್ಲಿ ನಿಂತು ಮಾಡಿಕೊಂಡ ಸಮರ್ಥನೆ ಏನು ಗೊತ್ತಾ..?

ಹತ್ಯೆಗೆ ಘೋಡ್ಸೆ ಸಮರ್ಥನೆ ಏನು..? 

ಕೋರ್ಟ್ ಹಾಲ್ ನಲ್ಲಿ ಘೋಡ್ಸೆ..!

1. ಅಖಂಡ ಭಾರತ ನಿರ್ಮಾಣ ನನ್ನ ಕನಸು. ಗಾಂಧೀಜಿಯಿಂದಾಗಿ ದೇಶ ವಿಭಜನೆಯಾಗಿ ಪಾಕಿಸ್ತಾನ ನಿರ್ಮಾಣವಾಯಿತು..!

2. ದೇಶದ ಮೂರನೇ ಒಂದು ಭಾಗ ಆಗಸ್ಟ್ 15, 1947ರಂದು ವಿದೇಶವಾಗಿ ಹೋಯಿತು. ಅದಕ್ಕೆ ಕಾರಣ ಗಾಂಧಿ..!

3. ದೇಶವೇ ಸಂಕಷ್ಟದಲ್ಲಿದ್ದಾಗ ಗಾಂಧೀಜಿ ಪಾಕಿಸ್ತಾನಕ್ಕೆ 55 ಕೋಟಿ ಪರಿಹಾರ ಕೊಡಿ ಎಂದು ಉಪವಾಸಕ್ಕೆ ಕುಳಿತಿದ್ದರು..!

4. ಗಾಂಧೀಜಿಯ ಮುಸ್ಲಿಂ ಓಲೈಕೆಯಿಂದಾಗಿಯೇ ದೇಶ ವಿಭಜನೆಯಾಗಿದ್ದು..!

5. ದೇಶ ವಿಭಜನೆಯಾಗಿ ಗಡಿಯಲ್ಲಿ ಹಿಂದೂಗಳ ಮಾರಣಹೋಮವಾಗುತ್ತಿದ್ದರೂ ಗಾಂಧಿ ಮೌನ ವಹಿಸಿದ್ದರು..!

6. ಪಾಕಿಸ್ತಾನದಿಂದ ಬಂದ ಹಿಂದೂ ನಿರಾಶ್ರಿತರಿಂದ ತುಂಬಿ ಹೋಗಿದ್ದ ಮಸೀದಿ ಖಾಲಿ ಮಾಡಿ ಮುಸ್ಲಿಮರಿಗೆ ಜಾಗ ಕೊಡಿ ಎಂದು ಗಾಂಧಿ ಉಪವಾಸ ಕುಳಿತಿದ್ದರು..!

7. ದೇಶದಲ್ಲೇ ಉಳಿದುಕೊಂಡ ಮುಸ್ಲಿಮರಿಗೆ ಆಶ್ರಯ ನೀಡಬೇಕು ಎಂದು ಗಾಂಧಿ ಒತ್ತಾಯಿಸಿದರು..!

8. ಪಾಕಿಸ್ತಾನದಿಂದ ಭಾರತಕ್ಕೆ ಬಂದ ನಿರಾಶ್ರಿತ ಹಿಂದೂಗಳ ಬಗ್ಗೆ ಗಾಂಧಿ ಕಿಂಚಿತ್ತೂ ಕರುಣೆ ತೊರಲಿಲ್ಲ..!

9. ಗಾಂಧಿಯನ್ನು ರಾಷ್ಟ್ರಪಿತ ಎನ್ನುವುದಾದರೆ ಅವರು ಆ ಸ್ಥಾನವನ್ನು ಸರಿಯಾಗಿ ನಿಭಾಯಿಸಲಿಲ್ಲ. ಗಾಂಧಿ ಪಾಕಿಸ್ತಾನದ ರಾಷ್ಟ್ರಪಿತ..!

10. ಗಾಂಧಿ ಇಲ್ಲದ ಭಾರತ ಶಕ್ತಿಶಾಲಿಯಾಗುತ್ತದೆ ಎಂಬ ಕಾರಣಕ್ಕೆ ಗಾಂಧಿಯನ್ನು ಕೊಂದೆ..!

ಇದಿಷ್ಟೂ ಕೋರ್ಟ್​ನ ಕಟಕಟೆಯಲ್ಲಿ ನಿಂತು ನಾಥೂರಾಮ ಘೋಡ್ಸೆ ಗಾಂಧಿ ಹತ್ಯೆಯನ್ನು ಸಮರ್ಥಿಸಿಕೊಂಡ ರೀತಿ. ಈ ಕೇಸಿನ ವಿಚಾರಣೆ ಸಾರ್ವಜನಿಕರಿಗೆ ಮುಕ್ತವಾಗಿತ್ತು. ಆದ್ರೆ ಘೋಡ್ಸೆ ತಪ್ಪೊಪ್ಪಿಗೆ ಹೇಳಿಕೆಯನ್ನ ಸರ್ಕಾರ ಸೆನ್ಸಾರ್ ಮಾಡಿತ್ತು. ಆತನ ಮಾತಿನಿಂದ ದೇಶದ ಜನ ಪ್ರಭಾವಿತರಾಗಬಾರದು ಅನ್ನೋದು ನೆಹರೂ ಸರ್ಕಾರದ ಉದ್ದೇಶವಾಗಿತ್ತು. ನಾಥೂರಾಮ್ ಘೋಡ್ಸೆಯ ತಪ್ಪೊಪ್ಪಿಗೆ ಹೇಳಿಕೆ ಮತ್ತು ಪಂಕಜ್ ಫಡ್ನಿಸ್ ಅವರ ಪ್ರಶ್ನೆಗಳೆರಡನ್ನೂ ನೋಡಿದಾಗ ಗಾಂಧಿ ಹತ್ಯೆ ತನಿಖೆಯಲ್ಲಿ ಹಲವು ಮಿಸ್ಸಿಂಗ್ ಲಿಂಕ್​ಗಳಿ ಇವೆ ಅನ್ನೋದು ಸ್ಪಷ್ಟವಾಗುತ್ತದೆ. ಒಂದು ವೇಳೆ ಮರು ತನಿಖೆ ನಡೆದರೆ ಸತ್ಯ ಹೊರಗೆ ಬರಬಹುದು. ಈ ಬಗ್ಗೆ ಸುಪ್ರೀಂ ಕೋರ್ಟ್​ ಇನ್ನು ಕೆಲವೇ ದಿನಗಳಲ್ಲಿ ನಿರ್ಧಾರಕ್ಕೆ ಬರಲಿದೆ. ದೇಶದ ಜನರಿಗೆ ಪೂರ್ಣ ಸತ್ಯ ಗೊತ್ತಾಗಬೇಕಿದೆ…

ಪಾಕಿಸ್ತಾನವಲ್ಲ.. ಟೆರರಿಸ್ತಾನ..! ಜಗತ್ತಿನ ಮುಂದೆ ಒಬ್ಬಂಟಿಯಾಯ್ತು ಪಾಕ್​..!

ಭಾರತಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಎರಡನೇ ಗೆಲುವು ಸಿಕ್ಕಿದೆ. ಯುದ್ಧ ಮಾಡದೆಯೂ ಗೆಲುವು ಸಾಧಿಸಬಹುದು ಅನ್ನೋದನ್ನ ಭಾರತ ಇಂದು ಮತ್ತೆ ರುಜುವಾತು ಮಾಡಿದೆ. ದೋಖ್ಲಾಂ ಗಡಿ ತಂಟೆ ವಿವಾದವನ್ನು ಯುದ್ಧವಿಲ್ಲದೇ ಗೆದ್ದ ಭಾರತ ಈಗ ಪಾಕಿಸ್ತಾನವನ್ನು ಜಗತ್ತಿನ ಎದುರು ಒಬ್ಬಂಟಿಯನ್ನಾಗಿ ಮಾಡಿದೆ. ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ ಪಾಕಿಸ್ತಾನಕ್ಕೆ ಮೋದಿ ಸರ್ಕಾರ ಮಾಸ್ಟರ್ ಸ್ಟ್ರೋಕ್​ ನೀಡಿ ಬಿಸಿ ಮುಟ್ಟಿಸಿದೆ..
ಭಾರತದ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಯನ್ನೇ ತನ್ನ ಅಸ್ತ್ರವಾಗಿ ಮಾಡಿಕೊಂಡಿರುವ ಪಾಕಿಸ್ತಾನಕ್ಕೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮುಖಭಂಗವಾಗಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವನ್ನು ಟೆರರಿಸ್ತಾನ ಎಂದು ಜರಿದಿದೆ. ಈ ಮೂಲಕ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಬಿಂಬಿಸಿಕೊಳ್ಳುತ್ತಿದ್ದ ಪಾಕಿಸ್ತಾನದ ಮುಖವಾಡವನ್ನು ಭಾರತ ಬಯಲಿಗೆಳೆದಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಾನ್ ಅಬ್ಬಾಸಿ ಭಾರತದ ವಿರುದ್ಧ ಹಲವು ಹಸಿ ಸುಳ್ಳುಗಳನ್ನು ಪ್ರಯೋಗಿಸಿದ್ದರು. ಪಾಕಿಸ್ತಾನ ಮಾಡಿದ ಎಲ್ಲ ಸುಳ್ಳು ಆರೋಪಗಳಿಗೆ ಭಾರತ ಅಂತರಾಷ್ಟ್ರೀಯ ವೇದಿಕೆಯಲ್ಲಿ ದಿಟ್ಟ ಉತ್ತರ ನೀಡಿದೆ. ಪಾಕ್​ನ ಪೊಳ್ಳು ವಾದ ಮತ್ತು ಭಾರತದ ದಿಟ್ಟ ಉತ್ತರದ ಸ್ಯಾಂಪಲ್​ ಇಲ್ಲಿದೆ ನೋಡಿ…

ಪಾಕಿಸ್ತಾನದ ಮಾನವನ್ನು ಜಗತ್ತಿನ ಮುಂದೆ ಇಷ್ಟು ಪರಿಣಾಮಕಾರಿಯಾಗಿ ಹಿಂದೆಂದೂ ಭಾರತ ಹರಾಜು ಹಾಕಿರಲಿಲ್ಲ. ಪಾಕಿಸ್ತಾನ ಜಾಗತಿಕ ಭಯೋತ್ಪಾದನೆಯ ಮೂಲ ಕಾರ್ಖಾನೆ ಮತ್ತು ರಫ್ತು ದೇಶ ಎಂದು ಭಾರತ ಕಟು ಶಬ್ಧಗಳಲ್ಲಿ ಟೀಕಿಸಿದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎನ್ನುವುದನ್ನು ಪಾಕ್ ನೆನಪಿನಲ್ಲಿಡಲಿ, ಉಗ್ರರನ್ನು ಗಡಿಯಾಚೆಯಿಂದ ಭಾರತಕ್ಕೆ ನುಸುಳಿ ಬಿಡುವ ಮೂಲಕ ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಹಾಳು ಮಾಡಲು ಪಾಕಿಸ್ತಾನಕ್ಕೆ ಎಂದಿಗೂ ಸಾಧ್ಯವಿಲ್ಲ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಕಾಶ್ಮೀರದ ವಿಚಾರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪದೇ ಪದೇ ಪ್ರಸ್ತಾಪ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಈ ಮೂಲಕ ಮುಖಭಂಗವಾಗಿದೆ..
ಪಾಕಿಸ್ತಾನಕ್ಕೆ ಇವತ್ತು ವಿಶ್ವ ಸಮುದಾಯದ ಮುಂದೆ ಭಾರತ ನೀಡಿದ ದಿಟ್ಟ ಉತ್ತರ ಶ್ಲಾಘನೆಗೆ ಕಾರಣವಾಗಿದೆ. ಇದು ಕಾಶ್ಮೀರ ವಿಚಾರವಾಗಿ ಪದೇ ಪದೇ ಖ್ಯಾತೆ ತೆಗೆಯುತ್ತಿದ್ದ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತಹ ಪೆಟ್ಟು. ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕು ಗಳು ಉಲ್ಲಂಘನೆಯಾಗುತ್ತಿದೆ. ಅಮಾಯಕರನ್ನು ಗುಂಡಿಟ್ಟು ಕೊಲ್ಲಲಾಗುತ್ತಿದೆ ಎಂದು ಪಾಕಿಸ್ತಾನ ಸುಳ್ಳೇ ಸುಳ್ಳು ಆರೋಪ ಮಾಡಿತ್ತು..
ಪಾಕಿಸ್ತಾನದ ಈ ಮಾತುಗಳಿಗೆ ತೀಕ್ಣ ಉತ್ತರ ನೀಡಿರುವ ಭಾರತ, ಪಾಕಿಸ್ತಾನದ ಬೀದಿಗಳಲ್ಲಿ ಉಗ್ರರನ್ನು ರಾಜಾರೋಷವಾಗಿ ಅಲೆಯಲು ಬಿಡಲಾಗಿದೆ. ಉಗ್ರಕೃತ್ಯಗಳಲ್ಲೇ ನಿರತರಾಗಿರುವ ದೇಶ ಭಾರತಕ್ಕೆ ಅಥವಾ ಜಗತ್ತಿಗೆ ಮಾನವ ಹಕ್ಕುಗಳ ರಕ್ಷಣೆಯ ಪಾಠ ಬೇಕಿಲ್ಲ. ತನ್ನ ನೆಲದ ಮಾನವ ಹಕ್ಕು ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸಲು ಹರಸಾಹಸ ಪಡುತ್ತಿರುವ ದೇಶದಿಂದ ಜಗತ್ತಿನ ಯಾವ ರಾಷ್ಟ್ರಗಳೂ ಕಲಿಯಬೇಕಿರುವುದು ಏನೂ ಇಲ್ಲ ಎಂದು ಉತ್ತರ ನೀಡಿದೆ..
ಒಂದು ಕಡೆಯಿಂದ ಶಾಂತಿಯ ಮಾತುಗಳನ್ನಾಡುವ ಪಾಕಿಸ್ತಾನ ಮತ್ತೊಂದು ಕಡೆ ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರವಾಗಿ ಕುಮ್ಮಕ್ಕು ನೀಡುತ್ತಲೇ ಇದೆ. ಲಷ್ಕರ್​ ಎ ತೋಯ್ಬಾ ಮತ್ತು ಆಲ್​ಖೈದಾ ಉಗ್ರ ಮುಖಂಡರಿಗೆ ಪಾಕಿಸ್ತಾನದಲ್ಲೇ ಆಶ್ರಯ ನೀಡಿ ಉಗ್ರವಾದವನ್ನು ಪೋಷಿಸುತ್ತಿರುವ ಮತ್ತು ಉಗ್ರ ತರಭೇತಿ ನೀಡುತ್ತಿರುವ ರಾಷ್ಟ್ರ ಭಯೋತ್ಪಾದನೆಯ ವಿರುದ್ಧ ಹೇಗೆ ಹೋರಾಟ ಮಾಡಲು ಸಾಧ್ಯ. ಒಸಾಮಾ ಬಿನ್​ ಲಾಡೆನ್​ನಿಂದ ಹಿಡಿದು ಮುಲ್ಲಾ ಓಮರ್ ಇಬ್ಬರನ್ನೂ ಪೋಷಿಸಿ, ಆಶ್ರಯು ನೀಡಿದ್ದು ಪಾಕಿಸ್ತಾನ. ಈಗ ಲಷ್ಕರ್​ ಎ ತೋಯ್ಬಾ ಮುಖಂಡನಿಗೆ ರಾಜಕೀಯ ಸ್ಥಾನಮಾನ ನೀಡಲು ಮುಂದಾಗಿರೋದನ್ನ ಭಾರತ ಜಗತ್ತಿನ ಎಲ್ಲ ದೇಶಗಳಿಗೆ ಮನವರಿಕೆ ಮಾಡಿಕೊಟ್ಟಿದೆ..
ಪಾಕಿಸ್ತಾನದ ಡಬಲ್​ ಸ್ಟಾಂಡರ್ಡ್ ಅನ್ನು ಜಗತ್ತಿನ ಮುಂದೆ ಬಯಲು ಮಾಡಿದ್ದು ಭಾರತದ ವಿದೇಶಾಂಗ ನೀತಿಯ ಎಫೆಕ್ಟ್. ಮೋದಿ ಸರ್ಕಾರ ಬಂದ ಮೇಲೆ ಪಾಕಿಸ್ತಾನದ ವಿರುದ್ಧ ಕಠಿಣ ನಿಲುವುಗಳನ್ನೇ ತೆಗೆದುಕೊಳ್ಳುತ್ತಿದೆ. ಜಮ್ಮು ಕಾಶ್ಮೀರದ ಯುವಕರನ್ನು ಭಯೋತ್ಪಾದನೆಯು ವಿಷ ವರ್ತುಲಕ್ಕೆ ದೂಡುತ್ತಿದ್ದ ಪಾಕಿಸ್ತಾನದ ಎಲ್ಲ ದಾರಿಗಳನ್ನೂ ಮೋದಿ ಈಗ ಮುಚ್ಚಿದ್ದಾರೆ. ಪ್ರತ್ಯೇಕತಾವಾದಿ ಮುಖಂಡರಿಗೆ ಪಾಕಿಸ್ತಾನ ನೀಡುತ್ತಿದ್ದ ಎಂಜಲು ಕಾಸೂ ಕೂಡ ಈಗ ಅವರನ್ನು ತಲುಪುತ್ತಿಲ್ಲ. ಕಾಶ್ಮೀರದಲ್ಲಿ ಉಗ್ರ ಕೃತ್ಯಗಳನ್ನು ನಡೆಸಲು ಪಾಕಿಸ್ತಾನದ ಉಗ್ರರಿಗೆ ಮತ್ತು ಐಎಸ್​ಐಗೆ ಈಗ ಮೊದಲಿನಷ್ಟು ಸುಲಭವಿಲ್ಲ. ಹಾಗಾಗಿಯೇ ಪದೇ ಪದೇ ಕಾಶ್ಮೀರದ ವಿಷಯ ಪ್ರಸ್ತಾಪಿಸಿ ಚೀಮಾರಿ ಹಾಕಿಸಿಕೊಳ್ಳುತ್ತಲೇ ಇದೆ. ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಪಾಕಿಸ್ತಾನಕ್ಕೆ ನೀಡುತ್ತಿದ್ದ ನೆರವನ್ನು ಅಮೆರಿಕ ಕಡಿತಗೊಳಿಸಿದೆ. ಸಂಪೂರ್ಣವಾಗಿ ನಿಲ್ಲಿಸುವತ್ತಲೂ ಅಮೆರಿಕ ಗಮನ ಹರಿಸಿದೆ. ಅಷ್ಟೇ ಅಲ್ಲದೇ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವ ಬಗ್ಗೆ ಅಮೆರಿಕ ಪರಿಗಣಿಸುತ್ತಿದೆ. ಇದೆಲ್ಲವೂ ಮೋದಿ ಸರ್ಕಾರದ ವಿದೇಶಾಂಗ ನೀತಿಯ ಫಲ, ರಾಜತಾಂತ್ರಿಕ ನಿಲುವು ಕಾರಣ ಅನ್ನೋದು ಸ್ಪಷ್ಟ. ಭಾರತದ ವಿರುದ್ಧ ಕ್ಯಾತೆ ತೆಗೆಯುತ್ತಿದ್ದ ಪಾಕಿಸ್ತಾನ ಭಾರತದ ದಿಟ್ಟ ನಿಲುವಿನಿಂದ ಜಗತ್ತಿನ ಮುಂದೆ ಅಕ್ಷರಶಃ ಒಬ್ಬಂಟಿಯಾಗಿದೆ.

ಕಾಶ್ಮೀರದಲ್ಲಿ ಕೂಲಿಗಾಗಿ ಕಲ್ಲು ಯೋಜನೆ..! ಹುರಿಯತ್ ಮುಖಂಡ ಕೋರ್ಟ್​ನಲ್ಲಿ ಹೇಳಿದ ಸ್ಫೋಟಕ ಸತ್ಯ..!

ಕಾಶ್ಮೀರದಲ್ಲಿ ಕೂಲಿಗಾಗಿ ಕಲ್ಲು ಯೋಜನೆ..!

ಕಾಶ್ಮೀರದಲ್ಲಿ ನಡೆಯುತ್ತಿರುವ ದಿನ ನಿತ್ಯದ ದಳ್ಳುರಿಗೆ ಪಾಕಿಸ್ತಾನದ ಎಂಜಲು ಕಾಸು ಬಳಕೆಯಾಗುತ್ತಿದೆ ಎಂಬ ಹಲವು ವರ್ಷಗಳ ಅನುಮಾನಕ್ಕೆ ಈಗ ಅಧಿಕೃತ ಮುದ್ರೆ ಸಿಕ್ಕಿದೆ. ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳು ಎಂಬ ಸೋಗು ಹಾಕಿಕೊಂಡು ಸ್ವಾತಂತ್ರ್ಯ ಹೋರಾಟಗಾರರ ಪೋಸು ಕೊಡುತ್ತಿರುವ ಹುರಿಯತ್ ಕಾಂಗ್ರೆಸ್​ ಮುಖಂಡರು ತಿನ್ನುತ್ತಿರುವುದು ಪಾಕಿಸ್ತಾನದ ಎಂಜಲು. ಪಾಕ್​ನಿಂದ ಪಡೆದ ಚಿಲ್ಲರೆ ಕಾಸು ಪಡೆದು ಕಾಶ್ಮೀರಿ ಯುವಕರನ್ನು ದೇಶ ವಿರೋಧಿ ಕೃತ್ಯಕ್ಕೆ ಎತ್ತಿ ಕಟ್ಟುತ್ತಿದ್ದಾರೆ. ಪಾಕಿಸ್ತಾನಿ ಪ್ರಾಯೋಜಿತ ಕಾಶ್ಮೀರಿ ಹಿಂಸಾಚಾರಕ್ಕೆ ಹುರಿಯತ್ ಕಾನ್ಫರೆನ್ಸ್​ನ ಸಹಕಾರ ಇದೆ ಅನ್ನೋದು ಹೊಸ ಸುದ್ದಿಯೇನಲ್ಲ. ದೇಶದ ಬೇಹುಪಡೆ, ಭದ್ರತಾ ಸಂಸ್ಥೆಗಳು ಎಷ್ಟೋ ವರ್ಷಗಳಿಂದ ಈ ಮಾತುಗಳನ್ನು ಹೇಳಿ ಎಚ್ಚರಿಸುತ್ತಲೇ ಇವೆ. ಅಲ್ಪ ಸಂಖ್ಯಾತರ ವೋಟಿಗಾಗಿ ಕಾಯುವ ಕಾಂಗ್ರೆಸ್​, ತಾನು ಆಡಳಿತದಲ್ಲಿದ್ಧಾಗ ಪ್ರತ್ಯೇಕತಾವಾದಿಗಳಿಗೆ ರಾಜ ಮರ್ಯಾದೆ ಕೊಟ್ಟು ಕಾಶ್ಮೀರಿ ಪ್ರತ್ಯೇಕತಾ ಹೋರಾಟ ಜೀವಂತವಾಗಿರುವಂತೆ ನೋಡಿಕೊಂಡಿತ್ತು. ಯಾವಾಗ ಮೋದಿ ಅಧಿಕಾರದ ದಂಡ ಹಿಡಿದರೋ ಹುರಿಯತ್ ಮುಖಂಡರು ಬಾಲ ಸುಟ್ಟ ಬೆಕ್ಕಿನಂತಾಗಿದ್ದಾರೆ. ಕಾಶ್ಮೀರದಲ್ಲಿನ ಹಿಂಸಾಚಾರಕ್ಕೆ ಪಾಕ್​ ಕುಮ್ಮಕ್ಕಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದಿದ್ದ ಎನ್​ಐಎ ಅಧಿಕಾರಿಗಳ ತಂಡ ಇದುವರೆಗೂ 8 ಹುರಿಯತ್ ಕಾನ್ಫರೆನ್ಸ್​ ಮುಖಂಡರನ್ನ ಬಂಧಿಸಿದೆ. ಬಂಧಿತ ಹುರಿಯತ್ ಮುಖಂಡನೊಬ್ಬ ಮ್ಯಾಜಿಸ್ಟ್ರೇಟ್​ ಎದುರು ಕಾಶ್ಮೀರಿ ಹಿಂಸಾಚಾರಕ್ಕೆ ಪಾಕಿಸ್ತಾನ ನಿರಂತರವಾಗಿ ಹಣ ನೀಡುತ್ತಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಮ್ಯಾಜಿಸ್ಟ್ರೇಟ್​ ಮುಂದೆ ನೀಡುವ ಹೇಳಿಕೆ ಅತ್ಯಂತ ಪ್ರಮುಖ ಸಾಕ್ಷಿಯಾಗುತ್ತದೆ.

ಹುರಿಯತ್ ಮುಖಂಡನ ತಪ್ಪೊಪ್ಪಿಗೆ ಏನು..?

ಪಾಕ್​ ಸೂಚನೆಯಂತೆ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹೋರಾಟ
ಹಿಂಸಾಚಾರ ನಡೆಸಲು ಹುರಿಯತ್ ಮುಖಂಡರಿಗೆ ಪಾಕಿಸ್ತಾನದಿಂದ ಹಣ
ಪಾಕಿಸ್ತಾನದಿಂದ ಬಂದ ಹಣ ಕಾಶ್ಮೀರಿ ಹಿಂಸಾಚಾರಕ್ಕೆ ಬಳಕೆ
ಗಲ್ಫ್​ನಲ್ಲಿರುವ ಕಾಶ್ಮೀರಿ ಉದ್ಯಮಿಗಳ ಮೂಲಕ ಹುರಿಯತ್​ ಮುಖಂಡರ ಖಾತೆಗೆ ಹಣ
ಉದ್ಯಮಿಗಳ ಮೂಲಕ ಹುರಿಯತ್​ ಮುಖಂಡರ ಜೇಬು ಸೇರುತ್ತಿದೆ ಪಾಕ್ ಹಣ
ಹವಾಲಾ/ ಬ್ಯಾಂಕ್​ ವ್ಯವಸ್ಥೆ ಮೂಲಕ ಹುರಿಯತ್​ ಮುಖಂಡರಿಗೆ ಹಣ
ಟೆರರ್​ ಕಮಾಂಡರ್​ಗಳಿಗೆ ಹಣ ಕೊಡುವ ಹುರಿಯತ್ ಮುಖಂಡರು
ಪಾಕ್​ ಕೈವಾಡದ ಸಾಕ್ಷ್ಯ ನಾಶಕ್ಕೆ ಹುರಿಯತ್ ಮುಖಂಡರ ನಿರಂತರ ಯತ್ನ

 

ಹುರಿಯತ್ ಕಾನ್ಫರೆನ್ಸ್​ ಮುಖಂಡ ಕೋರ್ಟ್​ ಮುಂದೆ ಅಧಿಕೃತವಾಗಿ ತಪ್ಪೊಪ್ಪಿಕೊಳ್ಳುತ್ತಿದ್ದಂತೆ ಕಾರ್ಯಾಚರಣೆಗಿಳಿದ ಎನ್​ಐಎ ಅಧಿಕಾರಿಗಳ ತಂಡ ಹುರಿಯತ್ ಮುಖಂಡರ ಮನೆಗಳ ಮೇಲೆ ಮುರುಕೊಂಡು ಬಿದ್ದಿದೆ. 27ಕ್ಕೂ ಹೆಚ್ಚು ಹುರಿಯತ್ ಮುಖಂಡರ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು 2.2 ಕೋಟಿ ಹಣ ವಶಪಡಿಸಿಕೊಂಡಿದ್ದಾರೆ. ಎನ್​ಐಎ ಅಧಿಕಾರಿಗಳ ಕಾರ್ಯಾಚರಣೆಯಿಂದ ಬೆಚ್ಚಿ ಬಿದ್ದಿರುವ ಹುರಿಯತ್ ಮುಖಂಡರು ಜೈಲ್​ ಬರೋ ಚಳುವಳಿ ಮೂಲಕ ದೆಹಲಿಗೆ ಮುತ್ತಿಗೆ ಹಾಕ್ತೀವಿ ಅಂತ ಅರಚಾಡುತ್ತಿದ್ದಾರೆ.

ದೇಶದೊಳಗೇ ಇದ್ದಾರೆ ದೇಶ ದ್ರೋಹಿಗಳು..!

ಹುರಿಯತ್ ಮುಖಂಡರು ಮಾಡುತ್ತಿರುವುದು ದೇಶ ದ್ರೋಹಿ ಕೆಲಸ..!

ಕಾಶ್ಮೀರಕ್ಕೆ ಸ್ವಾತಂತ್ರ್ಯ ಕಲ್ಪಿಸಿ ಇಡೀ ಕಾಶ್ಮೀರವನ್ನು ಪಾಕಿಸ್ತಾನದೊಳಕ್ಕೆ ಬಸಿದುಬಿಡುತ್ತೇವೆ ಎಂದು ಹೊರಟಿದ್ದ ಹುರಿಯತ್ ಕಾನ್ಫರೆನ್ಸ್​ ಮುಖಂಡರಾದ ಸೈಯದ್​ ಆಲಿ ಶಾ ಗಿಲಾನಿ, ಯಾಸಿರ್ ಮಲಿಕ್, ಉಮರ್ ಫಾರೂಕ್ ಸೇರಿದಂತೆ ಹಲವರನ್ನು ಎನ್​ಐಎ ಮುಂಜಾಗ್ರತಾ ಕ್ರಮವಾಗಿ ಬಂಧಿಸಿದೆ. ಸುಮಾರು 24 ವರ್ಷಗಳಿಂದ ಪಾಕಿಸ್ತಾನದ ಎಂಜಲು ತಿನ್ನುತ್ತಿದ್ದ ಹುರಿಯತ್ ಮುಖಂಡರು ಮೋದಿ ಸರ್ಕಾರ ಬಂದ ಮೇಲೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಶ್ಮೀರದಲ್ಲಿ ಶಾಂರಿ ನೆಲೆಸಲು ಈ ಪ್ರತ್ಯೇಕವಾದಿಗಳನ್ನು ಮಟ್ಟ ಹಾಕಲೇಬೇಕು ಅನ್ನೋ ಅಭಿಪ್ರಾಯಕ್ಕೆ ಮನ್ನಣೆ ಬಂದಿದೆ. ಇಷ್ಟು ವರ್ಷ ಇಂತವರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್​ ಯಾಕೆ ಮುಂದಾಗಲಿಲ್ಲ ಅನ್ನೋದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ. ಪ್ರತ್ಯೇಕವಾದಿಗಳ ಕಲ್ಲು ತೂರಾಟ ಮತ್ತು ಭಯೋತ್ಪಾದನೆಯನ್ನ ಕಾಶ್ಮೀರದ ಸ್ವಾತಂತ್ರ್ಯ ಹೋರಾಟ ಎಂದು ಬಿಂಬಿಸುವ, ಭಾಷಣ ಬಿಗಿಯುವ ಬುದ್ದಿಜೀವಿಗಳು ನಮ್ಮ ದೇಶದ ತುಂಬಾ ಇದ್ದಾರೆ. ಅಲ್ಲಿ ನಡೆಯುತ್ತಿರುವುದು ಕೂಲಿಗಾಗಿ ಕಲ್ಲು ಯೋಜನೆ ಎಂಬ ಸತ್ಯ ಬಹಿರಂಗವಾದ ನಂತರವಾದರೂ ಈ ಆರಾಮ ಕುರ್ಚಿಯ ಚಿಂತಕರು ತಮ್ಮ ಅಭಿಪ್ರಾಯ ಬದಲಿಸಿಕೊಳ್ಳುತ್ತಾರಾ..?

 

– – ಶಶಿವರ್ಣಂ!

 

 

 

ಬೆಂಗಳೂರು ಸರಣಿ ಸ್ಫೋಟದ ಆರೋಪಿ ಪಾಕ್‌ನಲ್ಲಿ..!

bangalore serial blastಬೆಂಗಳೂರು ಸರಣಿ ಸ್ಫೋಟ ನಡೆದು ಎಂಟು ವರ್ಷಗಳ ನಂತರ ಪ್ರಮುಖ ಸಂಚುಕೋರ ಪಾಕಿಸ್ತಾನದ ಪೇಶಾವರ್‌ನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಎನ್‌ಐಎ ಅಧಿಕಾರಿಗಳು ದೃಢಪಡಿಸಿದ್ದಾರೆ.

ಕೇರಳ ಮೂಲದ ಲಷ್ಕರೆ ತಯ್ಬಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಮಹಮದ್ ಸಬೀರ್ 2008ರ ನವೆಂಬರ್ನಲ್ಲಿ ನಕಲಿ ಪಾಸ್‌ಪೋರ್ಟ್ ಬಳಿಸಿಕೊಂಡು ಮುಂಬೈ ಮಾರ್ಗವಾಗಿ ಪಾಕಿಸ್ತಾನ ತಲುಪಿ ದ್ದಾನೆ. ಕಳೆದ ತಿಂಗಳು ದುಬೈ ಪೊಲೀಸರಿಂದ ಭಾರತಕ್ಕೆ ಗಡೀಪಾರಾಗಿದ್ದ ಸಬೀರ್‌ನ ಸಹಚರ ಕೆ.ಎ. ಅನೂಪ್‌ನ ವಿಚಾರಣೆ ವೇಳೆ ಈ ಮಾಹಿತಿ ಹೊರಬಿದ್ದಿದೆ. ಸದ್ಯ ಅನೂಪ್ ಕೇರಳದ ಎರ್ನಾಕುಲಮ್‌ನ ಜೈಲಿನಲ್ಲಿದ್ದಾನೆ.

2008 ರ ಜು.25 ರಂದು ನಗರದ ಏಳು ಕಡೆ ಒಂಬತ್ತು ಬಾಂಬ್‌ಗಳು ಸರಣಿ ಸ್ಫೋಟಗೊಂಡಿದ್ದವು. ಘಟನೆಯಲ್ಲಿ ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿ ದ್ದರು. 2005ರಲ್ಲಿ ಐಐಎಸ್‌ಸಿ ದಾಳಿ ನಂತರ ನಡೆದ ಎರಡನೇ ಭಯೋತ್ಪಾದಕ ಕೃತ್ಯ ಇದಾಗಿತ್ತು. ಕೇರಳದ ಸಿಮಿ ಉಗ್ರ ಸಂಘಟನೆ ಅಧ್ಯಕ್ಷ ಸಬೀರ್ ಮೇಲೆ ಬೆಂಗಳೂರು ಸರಣಿ ಸ್ಫೋಟ, ಉಗ್ರ ಸಂಘಟನೆಗಳಿಗೆ ಯುವಕರ ನೇಮಕ ಮತ್ತು ಕೇರಳದ ಕೊಚ್ಚಿಯಲ್ಲಿ ಬಸ್ ಸುಟ್ಟುಹಾಕಿದ್ದು ಸೇರಿ ಹಲವು ಪ್ರಕರಣಗಳಿವೆ.

ಅನೂಪ್‌ನ ವಿಚಾರಣೆ ವೇಳೆ ಇಬ್ಬರ ನಡುವೆ ನಡೆದ ದೂರವಾಣಿ ಸಂಭಾಷಣೆಗಳ ಪರಿಶೀಲನೆಯಿಂದ ಆತ ಪಾಕಿಸ್ತಾನದ ಪೇಶಾ ವರ್‌ನಲ್ಲಿ ತಲೆಮರೆಸಿಕೊಂಡಿದ್ದಾನೆ. ಸದ್ಯ ಕೇರಳದಲ್ಲಿರುವ ಸಬೀರ್‌ನ ಪತ್ನಿಯನ್ನು ಹೇಗಾದರೂ ಮಾಡಿ ಪಾಕಿಸ್ತಾನಕ್ಕೆ ಕರೆಸಿ ಕೊಳ್ಳುವ ಉದ್ದೇಶದಿಂದ ಆತ ಅನೂಪ್ನೊಂದಿಗೆ ಈ ಬಗ್ಗೆ ಹಲವು ಬಾರಿ ಚರ್ಚೆ ನಡೆಸಿದ್ದ ಎಂದು ಎನ್‌ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2008ರ ಲಷ್ಕರೆ ತಯ್ಬಾ ಸಂಘಟನೆ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಮಹಮದ್ ಸಬೀರ್ ಉಗ್ರ ಸಂಘಟನೆಗ ಳೊಂದಿಗೆ ಕೈಜೋಡಿಸಿ ಯುವಕರ ಸೆಳೆಯು ತ್ತಿದ್ದ. ಇದೇ ರೀತಿ ಐವರು ಕೇರಳದ ಯುವ ಕರ ತರಬೇತಿಗಾಗಿ ಕಾಶ್ಮೀರದಲ್ಲಿನ ಲಷ್ಕರೆ ತಯ್ಬಾ ಉಗ್ರರ ಬಳಿಗೆ ಕಳಿಸಿ ಕೊಟ್ಟಿದ್ದ. ಆದರೆ ಭದ್ರತಾಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಮೃತಪಟ್ಟು ಅಬ್ದುಲ್ ಜಬ್ಬಾರ್ ಎಂಬಾತ ಬದುಕುಳಿದಿದ್ದ. ನಂತರ ಕೇರಳ ಪೊಲೀಸರು ಬಂಧಿಸಿದ್ದರು.

ಬೆಂಗಳೂರಿನಲ್ಲಿ ಸರಣಿ ಸ್ಫೋಟ ಮತ್ತು ಉಗ್ರ ಸಂಘಟನೆಗಳಿಗೆ ಯುವಕರನ್ನು ಸೆಳೆದ ಆರೋಪದ ಮೇಲೆ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿದ್ದ ಸಬೀರ್ ನಕಲಿ ಪಾಸ್ಪೋರ್ಟ್ ಬಳಿಸಿಕೊಂಡು 2008ರ ನ.21 ರಂದು ಪಾಕಿಸ್ತಾನಕ್ಕೆ ಹಾರಿದ್ದ. ಕೇರಳದ ಶಮೀರ್ ಆಲಿಕುಟ್ಟಿ ಎಂಬಾತನ ಹೆಸರಲ್ಲಿದ್ದ ಪಾಸ್‌ಪೋರ್ಟ್ ನಕಲಿ ಮಾಡಿ ಸಬೀರ್ ತನಿಖಾಧಿಕಾರಿಗಳ ದಾರಿ ತಪ್ಪಿಸಿದ್ದ. ಪಾಕಿಸ್ತಾನದಲ್ಲಿ ಕುಳಿತು ಭಾರತದಲ್ಲಿ ಲಷ್ಕರೆ ಉಗ್ರ ಚಟುವಟಿಕೆಗಳಲ್ಲಿ ನಿರತನಾಗಿದ್ದ ರೆಹಾನ್ ಅಲಿಯಾಸ್ ಆಲಿ ಎಂಬಾತ ಸಬೀರ್ನನ್ನು ಪಾಕಿಸ್ತಾನಕ್ಕೆ ಕರೆಸಿಕೊಂಡಿದ್ದ. ರೆಹಾನ್ ಅಲಿಯಾಸ್ ವಾಲಿ 2008ರ ಮುಂಬೈ ದಾಳಿಯಲ್ಲೂ ಭಾಗಿಯಾಗಿದ್ದ ಎಂದು ಎನ್ಐಎ ಮೂಲಗಳು ತಿಳಿಸಿವೆ.

ABDUL_NASER_MADANIಮದನಿ ಬೆಂಬಲ ಕೋರಿದ್ದ ಎಲ್‌ಇಟಿ: ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಲಷ್ಕರೆ ತಯ್ಬಾ ಉಗ್ರರು 2005ರಲ್ಲಿ ಐಐಎಸ್‌ಸಿ ದಾಳಿ ನಡೆಸಿದ್ದರು. ಆದರೆ ಉಗ್ರರು ರೂಪಿಸಿದ ಯೋಜನೆಯಂತೆ ಆ ದಾಳಿ ನಡೆಯಲಿಲ್ಲ. ಅದಾದ ನಂತರ ನಗರದಲ್ಲಿ ಶಸ ಸಜ್ಜಿತ ದಾಳಿ ನಡೆಸಲು ಸಾಧ್ಯವಾಗದ ಕಾರಣ ಬಾಂಬ್ ಸ್ಫೋಟ ಮಾಡುವ ಸಂಚು ಲಷ್ಕರ್ ಉಗ್ರರು ಮಾಡಿದ್ದರು. ಇದಕ್ಕೆ ಕೇರಳದಲ್ಲಿ ಬೇರೂರಿದ್ದ ಉಗ್ರ ಸಂಘಟನೆಯ ನಾಯಕರ ಸಂಪರ್ಕಿಸಿ ಬೆಂಬಲ ನೀಡುವಂತೆ ಕೋರಲಾಗಿತ್ತು. 1998ರಲ್ಲಿ ಬಿಜೆಪಿ ನಾಯಕ ಎಲ್.ಕೆ ಅಡ್ವಾಣಿ ಅವರ ಗುರಿಯಾಗಿಸಿಕೊಂಡು ಕೋಯಮತ್ತೂರಿನಲ್ಲಿ ನಡೆಸಲಾಗಿದ್ದ ಬಾಂಬ್ ಸ್ಫೋಟದ ಆರೋಪಿ ಅಬ್ದುಲ್ ನಾಸಿರ್ ಮದನಿಯ ಬೆಂಬಲ ಕೇಳಲಾಗಿತ್ತು. ಉಗ್ರರಿಗೆ ಅಗತ್ಯ ಬೆಂಬಲ ನೀಡಲು ಮದನಿ ಒಪ್ಪಿಕೊಂಡಿದ್ದ. ಕೇರಳದ ಕಲ್ಲು ಕ್ವಾರಿಗಳಿಂದ ಅಮೋನಿಯಂ ನೈಟ್ರೇಟ್ ಸಂಗ್ರಹಿಸಿ ಬಾಂಬ್ ತಯಾರಿಸಿ ನಂತರ ದುಷ್ಕೃತ್ಯ ನಡೆಸಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮದನಿ ಸೇರಿದಂತೆ ಮೂವತ್ತಕ್ಕೂ ಹೆಚ್ಚುಮಂದಿಯ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಶಶಿವರ್ಣಂ!

ಭಟ್ಕಳ: ಹೇಗಿದ್ದ ಊರು ಹೇಗಾಯ್ತು..!

M_Id_363122_HF90ರ ದಶಕದ ಮಾತು. ಭಟ್ಕಳವನ್ನು ಮಿನಿ ದುಬೈ ಎ೦ದು ಕರೆಯಲಾಗುತ್ತಿತ್ತು. ದೇಶದಲ್ಲೆಲ್ಲೂ ಸಿಗದ೦ತಹ ಎಲೆಕ್ಟ್ರಾನಿಕ್ ವಸ್ತುಗಳು, ವಿದೇಶಿ ಬಟ್ಟೆಗಳು, ಸುಗ೦ದ ದ್ರವ್ಯಗಳಿಗೆ ಭಟ್ಕಳ ದೊಡ್ಡ ಮಾರುಕಟ್ಟೆಯಾಗಿತ್ತು. ಆದರೆ ಇದೆಲ್ಲವನ್ನೂ ಬದಲಿಸಿದ್ದು 1993 ರಲ್ಲಿ ನಡೆದ ಗಲಭೆ.

ಅದೊ೦ದು ಗಲಭೆ ಇವತ್ತು ಭಟ್ಕಳ ಅನ್ನೋ 40 ಸಾವಿರ ಜನ ವಾಸಿಸುವ ಊರಿಗೆ “ಭಯೋತ್ಪಾದಕರ ಊರು’ ಎ೦ಬ ಕುಖ್ಯಾತಿ ಬರಲು ಕಾರಣವಾಯಿತು. ದೇಶಾದ್ಯ೦ತ ನಡೆದ 10ಕ್ಕೂ ಹೆಚ್ಚು ಬಾ೦ಬ್ ದಾಳಿಗಳಿಗೆ ಕಾರಣವಾದ ಇ೦ಡಿಯನ್ ಮುಜಾಯಿದ್ದೀನ್ ಎ೦ಬ ರಕ್ತ ಪಿಪಾಸು ಉಗ್ರ ಸ೦ಘಟನೆ ಜನ್ಮ ತಳೆದದ್ದು ಭಟ್ಕಳದಲ್ಲೇ. ಇ೦ದು ಜಗತ್ತಿಗೇ ಕ೦ಟಕವಾಗಿರುವ ಐಸಿಸ್ ಉಗ್ರ ಸ೦ಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದೂ ಭಟ್ಕಳ ಮೂಲದವರೇ.

ಶತಮಾನಗಳ ಹಿ೦ದಿನಿ೦ದ ಅರಬ್, ಪಷಿ೯ಯನ್ ಮೂಲದ ನವಾಯತ ಮುಸ್ಲೀಮರು ವ್ಯಾಪಾರಕ್ಕಾಗಿ ಭಟ್ಕಳಕ್ಕೆ ಬ೦ದು ನೆಲೆ ಕ೦ಡುಕೊ೦ಡು ಇಲ್ಲೇ ವಾಸ ಮಾಡುತ್ತಿದ್ದಾರೆ. ಕೊಲ್ಲಿ ರಾಷ್ಟ್ರಗಳೊ೦ದಿಗೆ ವ್ಯಾಪಾರ ವಹಿವಾಟು ಮಾಡುತ್ತಿದ್ದವರು ಅಲ್ಲಿನ ವಸ್ತುಗಳನ್ನು ತ೦ದು ಭಟ್ಕಳದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರ ಪರಿಣಾಮವೇ ಭಟ್ಕಳ ಮಿನಿ ದುಬೈ ಆಗಿತ್ತು.

ಎಲ್ಲವನ್ನೂ ಬದಲಿಸಿದ್ದು ಆ ಗಲಭೆ

1992ರಲ್ಲಿ ಬಾಬ್ರಿ ಮಸೀದಿ ದ್ವ೦ಸದ ನ೦ತರ ದೇಶಾದ್ಯ೦ತ ಹಿ೦ದೂ ಮುಸ್ಲೀಂ ಗಲಭೆಗಳು ನಡೆದಾಗಲೂ ಭಟ್ಕಳ ಅದಕ್ಕೆ ಯಾವ ರೀತಿಯಿ೦ದಲೂ ಪ್ರತಿಕ್ರಿಯಿಸಿರಲಿಲ್ಲ. ಅಲ್ಲಿಯವರೆಗೂ ಭಟ್ಕಳ ಅ೦ದರೆ ಹಿ೦ದೂ-ಮುಸ್ಲೀಂ ಸಾಮರಸ್ಯದ ಸ್ಥಳ ಅ೦ತಲೇ ಹೆಸರಾಗಿತ್ತು. ಆದರೆ 1993ರಲ್ಲಿ ಇಡೀ ದೇಶವೇ ತಿರುಗಿ ನೊಡುವ೦ತಹ ದೊಡ್ಡದೊ೦ದು ಕೋಮುಗಲಭೆಗೆ ಭಟ್ಕಳ ಸಾಕ್ಷಿಯಾಗಿತ್ತು. ಆ ವಷ೯ದ ಏ.1ರ೦ದು ನಡೆದ ರಾಮನವಮಿಯ ರಥೋತ್ಸವಕ್ಕೆ ಮುಸ್ಲೀಮರ ಮನೆಯೊ೦ದ ರಿ೦ದ ಕಲ್ಲು ತೂರಲಾಯಿತು ಎ೦ಬ ವಿಷಯ ಇಡೀ ಊರಿಗೆ ಕಾಳ್ಗಿಚ್ಚಿನ೦ತೆ ಹಬ್ಬಿ ಆರ೦ಭವಾದ ಗಲಭೆ 17 ಜನರನ್ನು ಬಲಿ ಪಡೆದಿತ್ತು.

90 ಮ೦ದಿ ಗ೦ಭೀರವಾಗಿ ಗಾಯಗೊ೦ಡರೆ 226 ಮನೆಗಳನ್ನು ಸುಟ್ಟುಹಾಕಲಾಗಿತ್ತು. ಈ ವೇಳೆ 143 ಅ೦ಗಡಿಗಳನ್ನು ಲೂಟಿ ಮಾಡಲಾಗಿತ್ತು. ಗಲಭೆ ನ೦ತರ ಹಿ೦ದೂ ಮತ್ತು ಮುಸ್ಲೀಮರಲ್ಲಿದ್ದ ಸಾಮರಸ್ಯ ಹಾಳಾಗಿತ್ತು.

ರಾಮಮ೦ದಿರ ಕಟ್ಟುವ ನೆಪದಲ್ಲಿ ಬಿಜೆಪಿ ಇಲ್ಲಿ ನೆಲೆಯೂರಲು ಪ್ರಯತ್ನಿಸಿದರೆ, ಪಾಕಿಸ್ತಾನದ ಗುಪ್ತಚರ ಸ೦ಸ್ಥೆ ಐಎಸ್‍ಐ ಇಲ್ಲಿನ ಮುಸ್ಲೀಂ ಯುವಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಿತ್ತು. ಕೊಲ್ಲಿ ರಾಷ್ಟ್ರಗಳಿಗೆ ವ್ಯವಹಾರಕ್ಕಾಗಿ ಎಡತಾಕುತ್ತಿದ್ದ ಭಟ್ಕಳ ಮೂಲದವರನ್ನು ಸ೦ಪಕಿ೯ಸಿ ದೇಶದಲ್ಲಿ ಶಾ೦ತಿ ಕದಡುವ ಕೆಲಸಕ್ಕೆ ಇಳಿದಿತ್ತು ಪಾಕಿಸ್ತಾನ. ಹಾಗೆ ಐಎಸ್‍ಐನ ಸ೦ಪಕ೯ಕ್ಕೆ ಸಿಕ್ಕವನು ರಿಯಾಜ್ ಭಟ್ಕಳ್. ಹಣದ ಆಸೆಗಾಗಿ ರಿಯಾಜ್ ಭಟ್ಕಳ್ ಪಾಕಿಸ್ತಾನದ ಐಎಸ್‍ಐ ಪರ ಏಜೆ೦ಟ್ ಆಗಿ ಕೆಲಸ ಮಾಡುತ್ತಿದ್ದ. ತನ್ನ ಕೃತ್ಯಕ್ಕೆ ಸೋದರರಾದ ಯಾಸಿನ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್‍ರನ್ನೂ ಬಳಸಿಕೊಳ್ಳುತ್ತಿದ್ದ.

1993ರ ಕೋಮುಗಲಭೆಯ ತನಿಖೆ ನಡೆಸಲು ನ್ಯಾಯಮೂತಿ೯ ಕೆ. ಜಗನ್ನಾಥ ಶೆಟ್ಟಿ ಅವರ ಏಕಸದಸ್ಯ ಆಯೋಗ ರಚಿಸಲಾಗಿತ್ತು. ಆಯೋಗದ ವರದಿಯಲ್ಲಿ ಹಿ೦ದೂ-ಮುಸ್ಲೀಂ ಸಾಮರಸ್ಯವನ್ನು ಮತ್ತಷ್ಟು ಕದಡುವ ಅ೦ಶಗಳಿವೆ ಎ೦ಬ ಕಾರಣಕ್ಕೆ ಜೆ.ಎಚ್.ಪಟೇಲ್ ಸರಕಾರ ಮತ್ತು ಆ ನ೦ತರ ಬ೦ದ ಎಸ್.ಎ೦. ಕೃಷ್ಣ ಸಕಾ೯ರ ಅದನ್ನು ಒಪ್ಪಿಕೊಳ್ಳಲಿಲ್ಲ. ಮೂಲಗಳ ಪ್ರಕಾರ ಜಗನ್ನಾಥ ಶೆಟ್ಟಿ ವರದಿಯಲ್ಲಿ ಭಟ್ಕಳ ಗಲಭೆಗೆ ಮುಸ್ಲೀಮರನ್ನು ಹೊಣೆ ಮಾಡಲಾಗಿತ್ತು. ಮುಸ್ಲೀಂ ವೋಟ್ ಬ್ಯಾ೦ಕ್ ಮೇಲೆ ಕಣ್ಣಿಟ್ಟಿದ್ದ ರಾಜಕೀಯ ಪಕ್ಷಗಳು ಆ ವರದಿ ಬಹಿರ೦ಗವಾಗದ೦ತೆ ನೋಡಿಕೊ೦ಡವು ಎನ್ನಲಾಗುತ್ತದೆ.

ಶಾಸಕ ಚಿತ್ತರ೦ಜನ್ ಹತ್ಯೆ: ಗಲಭೆಯ ಮಾರನೆಯ ವಷ೯ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಚಿತ್ತರ೦ಜನ್ ಶಾಸಕರಾಗಿ ಆಯ್ಕೆಯಾದರು. ಗಲಭೆ ನ೦ತರ ಒಟ್ಟಾದ ಹಿ೦ದೂ ಮತಗಳ ಪರಿಣಾಮ ಚಿತ್ತರ೦ಜನ್ ಆಯ್ಕೆ ಸುಲಭವಾಗಿತ್ತು. 1996ರ ಏ.10ರ೦ದು ಲೋಕಸಭಾ ಚುನಾವಣೆಗೆ ಪಕ್ಷದ ಪರ ಪ್ರಚಾರ ಮುಗಿಸಿ ಮನೆಗೆ ಬ೦ದಿದ್ದ ಅವರನ್ನು ಗು೦ಡಿಟ್ಟು ಹತ್ಯೆ ಮಾಡಲಾಗಿತ್ತು. ರಾಜ್ಯದಲ್ಲಿ ಶಾಸಕರಾಗಿದ್ದವರನ್ನು ಹತ್ಯೆ ಮಾಡಿದ ಮೊದಲ ಪ್ರಕರಣ ಅದಾಗಿತ್ತು. ಈ ಪ್ರಕರಣದ ನ೦ತರ ಭಟ್ಕಳ ಮತ್ತೊ೦ದು ಕೋಮು ಗಲಭೆಗೆ ಸಾಕ್ಷಿಯಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಸಿಬಿಐ ಇದು ಪತ್ತೆಯಾಗದ ಪ್ರಕರಣ ಎ೦ದು ನ್ಯಾಯಾಲಯಕ್ಕೆ “ಸಿ’ ರಿಪೋಟ್‍೯ ಸಲ್ಲಿಸಿ ತನಿಖೆ ಕೈಬಿಟ್ಟಿತ್ತು.

  ಚಿತ್ತರ೦ಜನ್ ಹತ್ಯೆ ಸ೦ಬ೦ಧ ಅ೦ದಿನ ಸಿಎ೦ ಎಚ್ ಡಿ ದೇವೇಗೌಡರು ನ್ಯಾ.ರಾಮಚ೦ದ್ರಯ್ಯ ಆಯೋಗ ರಚಿಸಿದ್ದರು. 1997ರಲ್ಲಿಯೇ ಆಯೋಗ ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿದ್ದರೂ ಇದುವರೆಗೂ ಅದನ್ನು ಬಹಿರ೦ಗಪಡಿಸಲಾಗಿಲ್ಲ. ಚಿತ್ತರ೦ಜನ್ ಕೊಲೆ ನ೦ತರ ಬೂದಿ ಮುಚ್ಚಿದ ಕೆ೦ಡವಾಗಿದ್ದ ಭಟ್ಕಳದಲ್ಲಿ ಮತ್ತೊಮ್ಮೆ ರಕ್ತ ಹರಿದಿತ್ತು. ಸ್ಥಳೀಯ ಬಿಜೆಪಿ ಮುಖ೦ಡ ತಿಮ್ಮಪ್ಪ ನಾಯ್ಕನನ್ನು ಅಪರಿಚಿತ ದುಷ್ಕಮಿ೯ಗಳು 2004ರ ಮೇ.1ರ೦ದು ಹತ್ಯೆ ಮಾಡಿದ್ದರು. ಕೊಲೆ ನಡೆದು ದಶಕ ಕಳೆದರೂ ಪ್ರಕರಣದ ತನಿಖೆ ಮಾತ್ರ ಪೂಣ೯ವಾಗಿಲ್ಲ. ಈ ಎರಡೂ ಕೊಲೆಯ ಹಿ೦ದೆ ಪಾಕಿಸ್ತಾನದ ಐಎಸ್‍ಐ ಜತೆಗೆ ಸ೦ಪಕ೯ ಹೊ೦ದಿದ ಶಕ್ತಿಗಳಿದ್ದವು ಎ೦ಬ ಅನುಮಾನ ತನಿಖಾಧಿಕಾರಿಗೆ ಇವತ್ತಿಗೂ ಇದೆ. ಆದರೆ ಇದಕ್ಕೆ ಸಾಕ್ಷಾಧಾರಗಳಿಲ್ಲ.

  ಇಂಡಿಯನ್ ಮುಜಾಹಿದೀನ್ ಹುಟ್ಟು: ಭಟ್ಕಳ ಗಲಭೆಗಳ ನ೦ತರ ರಿಯಾಜ್ ಭಟ್ಕಳ್ ಮತ್ತು ಸೋದರ ಇಕ್ಬಾಲ್ ಭಟ್ಕಳ್ ತಮ್ಮ ಕುಟು೦ಬದೊ೦ದಿಗೆ ಪುಣೆಯಲ್ಲಿ ವಾಸವಾಗಿದ್ದರು. ಈ ಇಬ್ಬರೂ ಪುಣೆಯಲ್ಲಿ ವಿದ್ಯಾವ೦ತ ಮುಸೀ೦ ಯುವಕರನ್ನು ಒಗ್ಗೂಡಿಸಿ ಹಿ೦ದೂಗಳ ವಿರುದ್ಧ ಎತ್ತಿಕಟ್ಟಲು ಆರ೦ಭೀಸಿದ್ದರು. ಇವರಿಬ್ಬರ ಸೋದರ ಸ೦ಬ೦ಧಿಯಾಗಿದ್ದ ಯಾಸಿನ್ ಭಟ್ಕಳ್ ಕೂಡ ನ೦ತರ ಜತೆಯಾದ. ಹಾಗೆ ಮೂವರು ಜತೆಯಾಗಿ ಆರ೦ಭೀಸಿದ್ದೇ ಇ೦ಡಿಯನ್ ಮುಜಾಹಿದ್ದೀನ್ ಸ೦ಘಟನೆ. ಸಿಮಿ ಸ೦ಘಟನೆಯನ್ನು ಸರಕಾರ ನಿಷೇಧಿಸಿದ ನ೦ತರ ಅದರಲ್ಲಿದ್ದ ಸಕ್ರಿಯ ಕಾಯ೯ಕತ೯ರನ್ನು ತಮ್ಮ ಸ೦ಘಟನೆಯತ್ತ ಸೆಳೆದು ಜನ್ಮಕೊಟ್ಟ ದೇಶದ ವಿರುದ್ಧವೇ ಜಿಹಾದ್‍ಗೆ ನಿ೦ತಿದ್ದರು ಈ ಸಹೋದರರು. ಆ ನ೦ತರ ನಡೆದಿದ್ದೆಲ್ಲವೂ ಭಾರತದ ಪಾಲಿಗೆ ಇತಿಹಾಸ. ಸಾಲು ಸಾಲು ಭಯೋತ್ಪಾದನಾ ದಾಳಿಗಳು ನಡೆದವು. ಅಮಾಯಕರು ಬೀದಿ ಬೀದಿಗಳಲ್ಲಿ ರಕ್ತ ಚೆಲ್ಲಿ ಸತ್ತರು. ಇ೦ಡಿಯನ್ ಮುಜಾಹಿದ್ದೀನ್ ಸ೦ಘಟನೆಯ ಶಕ್ತಿ ಭಾರತೀಯ ತನಿಖಾ ಸ೦ಸ್ಥೆಗಳಿಗೆ ಅರಿವಾಗಿದ್ದು 2008 ರ ದೆಹಲಿ ಸರಣಿ ಸ್ಪೋಟದ ನ೦ತರವೇ. ಈ ಉಗ್ರ ಸ೦ಘಟನೆ ಕಟ್ಟಿ ಭಟ್ಕಳ ಬ್ರದಸ್‍೯ ಅ೦ತಲೇ ಕುಖ್ಯಾತಿ ಗಳಿಸಿದ್ದರು. ಯಾಸಿನ್ ಭಟ್ಕಳ್‍ನನ್ನು 2013ರ ಆ.28 ರ೦ದು ಎನ್‍ಐಎ ಅಧಿಕಾರಿಗಳು ಬಿಹಾರ-ನೇಪಾಳ ಗಡಿಯಲ್ಲಿ ಬ೦ಧಿಸಿದ್ದರು. ರಿಯಾಜ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್ ಪಾಕಿಸ್ತಾನದಲ್ಲೇ ತಲೆಮರೆಸಿಕೊ೦ಡಿದ್ದಾರೆ.

 

Terror

ಇಂಡಿಯನ್ ಮುಜಾಹಿದೀನ್ ಸಂಸ್ಥಾಪಕರಾದ ಭಟ್ಕಳ ಬ್ರದರ್ಸ್ ಮತ್ತು ಐಸಿಸ್ ಉಗ್ರರಾದ ಅರ್ಮಾರ್ ಬ್ರದರ್ಸ್

ಬಾ೦ಬ್ ತಯಾರಿಕೆಯಲ್ಲಿ ಪರಿಣತಿಗಳಿಸಿದ್ದ ಯಾಸಿನ್ ಮ೦ಗಳೂರು ಬಳಿಯ ವಿಠಲಮಕ್ಕಿ ಮತ್ತು ಹಕ್ಕಳಮನೆ ಎ೦ಬ ಸುರಕ್ಷಿತ ತಾಣದಿ೦ದ ಬಾ೦ಬ್‍ಗಳನ್ನು ಪೂರೈಸಲು ಪ್ರಾರ೦ಭೀಸಿದ. ಚಿಕ್ಕಮ೦ಗಳೂರಿನ ಕಲ್ಲು ಕ್ವಾರಿಗಳಲ್ಲಿ ಸುಲಭವಾಗಿ ಸಿಗುತ್ತಿದ್ದ ಅಮೋ ನಿಯ೦ ನೈಟೆರೀಟ್ ಬಳಸಿಕೊ೦ಡು ಬಾ೦ಬ್ ತಯಾರಿಸುವಿಕೆ ಯಲ್ಲಿ ಯಾಸಿನ್ ಪರಿಣತಿ ಪಡೆದುಕೊ೦ಡಿದ್ದ. ಮು೦ದೆ ಇದೇ ಬಾ೦ಬ್‍ಗಳನ್ನು ಬಳಸಿ ದೇಶಾದ್ಯ೦ತ ಹಲವು ವಿದ್ವ೦ಸಕ ಕೃತ್ಯಗಳನ್ನು ಎಸಗಲಾಗಿತ್ತು.

 

 

ಐಸಿಸ್ ದ್ವಜಹಿಡಿದ ಅಮಾ೯ರ್ ಬ್ರದಸ್‍೯: ಇ೦ಡಿಯನ್ ಮುಜಾಹಿದ್ದೀನ್ ಜತೆ ಸೇರಿ ದೇಶಾದ್ಯ೦ತ ವಿದ್ವ೦ಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದ “ಭಟ್ಕಳ ಬ್ರದಸ್‍೯’ ಜತೆಯಲ್ಲಿಯೇ ಇದ್ದ ಸುಲ್ತಾನ್ ಅಮಾ೯ರ್ ಮತ್ತು ಶಫಿ ಅಮಾ೯ರ್ ಭಾರತದಲ್ಲಿ ಐಸಿಸ್ ದ್ವಜ ಹಾರಿಸಲು ಮು೦ದಾಗಿದ್ದರು. ಇ೦ಡಿಯನ್ ಮುಜಾಹಿದ್ದೀನ್ ಸ೦ಘಟನೆಯ ಮೂಲಕ ದೇಶಾದ್ಯ೦ತ ಹಲವು ದುಷ್ಕ್ರತ್ಯಗಳಲ್ಲಿ ಭಾಗಿಯಾಗಿದ್ದ ಈ ಸೋದರರು ಆ ನ೦ತರ ತಮ್ಮದೇ ಆದ ಅನ್ಸರ್‍-ಉಲ್‍-ತವಾಹಿದ್ ಎ೦ಬ ಸ೦ಘಟನೆ ಸ್ಥಾಪನೆ ಮಾಡಿದ್ದರು. ಇ೦ಡಿಯನ್ ಮುಜಾಹಿದ್ದೀನ್ ಮುಖ್ಯಸ್ಥ ಯಾಸಿನ್ ಭಟ್ಕಳ್ ಜತೆಗೆ ಉಗ್ರ ಕೃತ್ಯಗಳಿಗಾಗಿ ಸ೦ಗ್ರಹವಾಗಿದ್ದ ದೇಣಿಗೆ ಬಳಸಿಕೊಳ್ಳುವ ವಿಚಾರವಾಗಿ ಭೀನ್ನಾಭೀಪ್ರಾಯ ಉ೦ಟಾಗಿ ತಮ್ಮದೇ ಪ್ರತ್ಯೇಕ ಸ೦ಘಟನೆ ಮಾಡಿಕೊ೦ಡಿದ್ದರು. ಪಾಕಿಸ್ತಾನದ ಐಎಸ್‍ಐ ನಿಯ೦ತ್ರಣವಿಲ್ಲದ ಒ೦ದು ಸ೦ಘಟನೆ ಆರ೦ಭೀಸಬೇಕು ಎ೦ಬ ಉದ್ದೇಶ ಈ ಸೋದರರಿಗಿತ್ತು.

2012ರಲ್ಲಿ ಪಾಕಿಸ್ತಾನದ ವಜೀರಿಸ್ತಾನದಲ್ಲಿ ತೆಹ್ರಿಕ್‍-ಎ-ತಾಲಿಬಾನ್ ಸ೦ಘಟನೆಯೊ೦ದಿಗೆ ಗುರುತಿಸಿಕೊ೦ಡಿದ್ದ ಅಮಾ೯ರ್ ಸಹೋದರರು ಆಲ್‍ ಖೈದಾಗೆ ಯುವಕರನ್ನು ಸೆಳೆಯುತ್ತಿದ್ದರು. ಒಸಮಾ ಬಿನ್ ಲಾಡೆನ್ ಮೃತಪಟ್ಟ ನ೦ತರ ಐಸಿಸ್‍ನ ಸೆಳೆತಕ್ಕೆ ಒಳಗಾಗಿ ಸಿರಿಯಾ ಸೇರಿಕೊ೦ಡಿದ್ದರು. ಐಸಿಸ್ ಸೇರಿದ್ದ ಸುಲ್ತಾನ್ ಅಮಾ೯ರ್ ಕೆಲವೇ ದಿನಗಳಲ್ಲಿ ಮುಖ್ಯಸ್ಥ ಆಲ್ ಬಾಗ್ದಾದಿ ವಿಶ್ವಾಸ ಗಳಿಸಿದ್ದ. ಭಾರತದಿ೦ದ ಹೇರಳ ಹಣ ಮತ್ತು ಯುವಕರನ್ನು ಐಸಿಸ್ ಪರ ಸೆಳೆಯುತ್ತಿದ್ದ ಸುಲ್ತಾನ್ ಅಮಾ೯ರ್‍ನನ್ನು ಬಾಗ್ದಾದಿ, ಐಸಿಸ್‍ನ ಭಾರತದ ಘಟಕದ ಮುಖ್ಯಸ್ಥನನ್ನಾಗಿ ಸುಲ್ತಾನ್ ಅಮಾ೯ರ್‍ನನ್ನು ನೇಮಕ ಮಾಡಿದ್ದ. ಆದರೆ 2015ರ ಮಾ.6 ರ೦ದು ಸಿರಿಯಾದಲ್ಲಿ ನಡೆದ ವಾಯುದಾಳಿ ಯಲ್ಲಿ ಸುಲ್ತಾನ್ ಅಮಾ೯ರ್ ಮೃತಪಟ್ಟಿದ್ದ. ಇದಾದ ನ೦ತರ ಅಣ್ಣನ ಜಾಗಕ್ಕೆ ಶಫಿ ಅಮಾ೯ರ್‍ನನ್ನು ನೇಮಕ ಮಾಡಲಾಗಿತ್ತು. ಈಗ ಶಫಿ ಅಮಾ೯ರ್ ಕೂಡ ಅಮೆರಿಕ ನಡೆಸಿದ ವಾಯುದಾಳಿಯಲ್ಲಿ ಬಲಿಯಾಗಿದ್ದಾನೆ.

ಭಟ್ಕಳದಲ್ಲಿ ನೆಲೆಯಾಗಿರುವ ನವಾಯತ ಕುಟು೦ಬಗಳ ಕೆಲ ಯುವಕರು ಪಾಕಿಸ್ತಾನದ ಯುವತಿಯರನ್ನು ಮದುವೆಯಾಗಿದ್ದಾರೆ. ಸ್ವಾತ೦ತ್ರ್ಯ ಪೂವ೯ದಲ್ಲಿ ನವಾಯತರು ಭಟ್ಕಳದಿ೦ದ ವ್ಯಾಪಾರಕ್ಕಾಗಿ ಕರಾಚಿಗೆ ಹೋಗುತ್ತಿದ್ದರು. ದೇಶ ವಿಭಜನೆ ನ೦ತರ ಕೆಲವರು ಅಲ್ಲಿಯೇ ನೆಲೆಗೊ೦ಡರು. ಹೀಗಾಗಿ ಅಲ್ಲಿನ ಯುವತಿಯರನ್ನು ಭಟ್ಕಳದ ಯುವಕರು ಮದುವೆ ಯಾಗುತ್ತಾರೆ. ಕೆಲ ಬಾರಿ ಅವರಿಗೆ ವೀಸಾ ಸೌಲಭ್ಯ ಸಿಗದ ಹಿನ್ನೆಲೆಯಲ್ಲಿ ಇಲ್ಲಿನ ಯುವಕರು ಪಾಕಿಸ್ತಾನಕ್ಕೆ ಹೋಗಿ ಬರುತ್ತಾರೆ. ಈ “ಬ೦ಧ’ವೂ ಕೂಡ ಉಗ್ರ ಸ೦ಪಕ೯ಕ್ಕೆ ಪ್ರಮುಖ ಕೊ೦ಡಿ ಎನ್ನುತ್ತವೆ ತನಿಖಾ ಸ೦ಸ್ಥೆಗಳು. ಕಳೆದ ವಷ೯ ನಗರ ಪೊಲೀಸರಿ೦ದ ಬ೦ಧನಕ್ಕೊಳಗಾಗಿದ್ದ ಸೈಯದ್ ಇಸ್ಮಾಯಿಲ್ ಅಫಾ ಕ್ ಕೂಡ ಪಾಕ್ ಯವತಿಯನ್ನು ಮದುವೆಯಾಗಿದ್ದ. ಒ೦ದು ಕಾಲದಲ್ಲಿ ವ್ಯವಹಾರ, ವ್ಯಾಪಾರದ ತಾಣವಾಗಿದ್ದ ಭಟ್ಕಳ ಕೇವಲ ಎರಡು ದಶಕಗಳಲ್ಲಿ ಉಗ್ರರ ಮೂಲ ಸ್ಥಾನ ಎ೦ಬ ಕುಖ್ಯಾತಿ ಪಡೆದುಕೊ೦ಡಿದೆ.

ಶಶಿವರ್ಣಂ

ಸಿರಿಯಾದಿಂದಲೇ ಇಂಡಿಯನ್ ಐಸಿಸ್ ನಿಯಂತ್ರಿಸುತ್ತಿದ್ದ ಶಫಿ ಅರ್ಮಾರ್

shafi-armar-25-1461553204ಶಫಿ ಅರ್ಮಾರ್, ಇಡೀ ಜಗತ್ತಿಗೇ ಕಂಟಕವಾಗಿ ಬೆಳೆಯುತ್ತಿರುವ ಐಸಿಸ್ ಉಗ್ರ ಸಂಘಟನೆಗೆ ಭಾರ ತದ ಮುಖ್ಯಸ್ಥನಾಗಿದ್ದ. ಐಸಿಸ್ ಪರವಾಗಿ ಸಿರಿಯಾದಲ್ಲಿ ಹೋರಾಟ ನಡೆಸುತ್ತಿದ್ದ ಈತ ಅಲ್ಲಿಂದಲೇ ಇಂಡಿಯನ್ ಐಸಿಸ್ ನೆಟ್ವರ್ಕ್ ನಿಯಂತ್ರಿಸುತ್ತಿದ್ದ.

ಐಸಿಸ್ ಉಗ್ರ ಸಂಘಟ ನೆಗೆ ಭಾರತದಿಂದ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ ಈತ ಈಗ ಅಮೆರಿಕ ನಡೆಸಿದ ವಾಯು ದಾಳಿಗೆ ಬಲಿಯಾಗಿದ್ದಾನೆ. ಎನ್‌ಐಎ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದ ಈತನಿಗಾಗಿ ತನಿಖಾ ಸಂಸ್ಥೆಗಳು ಹುಡುಕದ ಸ್ಥಳವಿಲ್ಲ. ಮೊದಲು ಪಾಕಿಸ್ತಾನದಿಂದ ಉಗ್ರ ಚಟುವಟಿಕೆಗಳನ್ನು ಮಾಡುತ್ತಿದ್ದ ಈತ ದುಬೈ ಸೇರಿಕೊಂಡು, ನಂತರ ಐಸಿಸ್ ಪರ ಹೋರಾಟಕ್ಕಾಗಿ ಸಿರಿಯಾಗೆ ಹೋಗಿದ್ದ. ಐಸಿಸ್ ಮುಖ್ಯಸ್ಥ ಆಲ್ ಬಾಗ್ದಾದಿಗೆ ಹತ್ತಿರವಾಗಿದ್ದ ಈತನನ್ನು ಭಾರತದ ಐಸಿಸ್ ಘಟಕಕ್ಕೆ ಮುಖ್ಯ ಸ್ಥನನ್ನಾಗಿ ಮಾಡಲಾಗಿತ್ತು. ಭಾರತದಲ್ಲಿ ಐಸಿಸ್ ನೆಲೆವೂರು ವಂತೆ ಮಾಡುವ ಹೊಣೆಗಾರಿಕೆಯನ್ನು ಶಫಿ ಅರ್ಮಾರ್ವಹಿಸಿಕೊಂಡಿದ್ದ. 2008 ರಲ್ಲಿ ಭಟ್ಕಳ ಮೂಲದ ಉಗ್ರರಾದ ಯಾಸಿನ್ ಭಟ್ಕಳ್, ರಿಯಾಜ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್ ಇಂಡಿಯನ್ ಮುಜಾಹಿದೀನ್ ಸಂಘಟನೆ ಆರಂಭಿಸಿದಾಗ ಅವರೊಂದಿಗೆ ಇದ್ದಿದ್ದು ಅರ್ಮಾರ್ ಸೋದರರು.
ಸುಲ್ತಾನ್ ಅಮಾ೯ರ್ ಮತ್ತು ಶಫಿ ಅಮಾ೯ರ್. ಇ೦ಡಿಯನ್ ಮುಜಾಹಿದೀನ್ ಸ೦ಘಟನೆಯ ಮೂಲಕ ದೇಶಾದ್ಯ೦ತ ಹಲವು ದುಷ¢ತ್ಯಗಳಲ್ಲಿ ಭಾಗಿಯಾಗಿದ್ದ ಈ ಸೋದರರು ಆ ನ೦ತರ ತಮ್ಮದೇ ಆದ ಅನ್ಸರ್ -ಉಲ್‍-ತವಾಹಿದ್ ಎ೦ಬ ಸ೦ಘಟನೆ ಸ್ಥಾಪನೆ ಮಾಡಿದ್ದರು. ಇ೦ಡಿಯನ್ ಮುಜಾಹಿದೀನ್ ಮುಖ್ಯಸ್ಥ ಯಾಸಿನ್ ಭಟ್ಕಳ್ ಜತೆಗೆ ಉಗ್ರ ಕೃತ್ಯಗಳಿಗಾಗಿ ಸ೦ಗ್ರಹವಾಗಿದ್ದ ದೇಣಿಗೆ ಬಳಸಿಕೊಳ್ಳುವ ವಿಚಾರವಾಗಿ ಭೀನ್ನಾಭೀಪ್ರಾಯ ಉ೦ಟಾಗಿ ತನ್ನದೇ ಆದ ಸ೦ಘಟನೆ ಮಾಡಿಕೊ೦ಡಿದ್ದರು. ಪಾಕಿಸ್ತಾನದ ಐಎಸ್‍ಐ ನಿಯ೦ತ್ರಣವಿಲ್ಲದ ಒ೦ದು ಸ೦ಘಟನೆ ಆರ೦ಭೀಸಬೇಕು ಎ೦ಬ ಉದ್ದೇಶ ಈ ಸೋದರರಿಗಿತ್ತು.

2012ರಲ್ಲಿ ಪಾಕಿಸ್ತಾನದ ವಜೀರಿಸ್ತಾನದಲ್ಲಿ ತೆಹ್ರಿಕ್ -ಎ-ತಾಲಿಬಾನ್ ಸ೦ಘಟನೆಯೊ೦ದಿಗೆ ಗುರುತಿಸಿಕೊ೦ಡಿ ದ್ದ ಅಮಾ೯ರ್ ಸಹೋದರರು ಆಲ್‍ಖೈದಾಗೆ ಯುವಕರನ್ನು ಸೆಳೆಯುತ್ತಿದ್ದರು. ಒಸಮಾ ಬಿನ್ ಲಾಡೆನ್ ಮೃತಪಟ್ಟ ನ೦ತರ ಐಸಿಸ್‍ನ ಸೆಳೆತಕ್ಕೆ ಒಳಗಾಗಿ ಸಿರಿಯಾ ಸೇರಿಕೊ೦ಡಿದ್ದರು. ಐಸಿಸ್ ಸೇರಿದ್ದ ಸುಲ್ತಾನ್ ಅಮಾ೯ರ್ ಕೆಲವೇ ದಿನಗಳಲ್ಲಿ ಮುಖ್ಯಸ್ಥ ಆಲ್ ಬಾಗ್ದಾದಿ ವಿಶ್ವಾಸ ಗಳಿಸಿದ್ದ. ಭಾರತದಿ೦ದ ಹೇರಳ ಹಣ ಮತ್ತು ಯುವಕರನ್ನು ಐಸಿಸ್ ಪರ ಸೆಳೆಯುತ್ತಿದ್ದ ಸುಲ್ತಾನ್ ಅಮಾ೯ರ್‍ನನ್ನು ಬಾಗ್ದಾದಿ, ಐಸಿಸ್‍ನ ಭಾರತದ ಘಟಕದ ಮುಖ್ಯಸ್ಥನನ್ನಾಗಿ ಸುಲ್ತಾನ್ ಅಮಾ೯ರ್‍ನನ್ನು ನೇಮಕ ಮಾಡಿದ್ದ. ಈ ನೇಮಕ ಆದೇಶದ ವಿಡಿಯೋ ಉಗ್ರ ಲೋಕದಲ್ಲಿ ದೊಡ್ಡ ಸ೦ಚಲನವನ್ನೇ ಸೃಷ್ಟಿಸಿತ್ತು. ಆದರೆ 2015ರ ಮಾ.6 ರ೦ದು ಸಿರಿಯಾದಲ್ಲಿ ನಡೆದ ವಾಯುದಾಳಿಯಲ್ಲಿ ಸುಲ್ತಾನ್ ಅಮಾ೯ರ್ ಮೃತಪಟ್ಟಿದ್ದ. ಇದಾದ ನ೦ತರ ಅಣ್ಣನ ಜಾಗಕ್ಕೆ ಶಫಿ ಅಮಾ೯ರ್‍ನನ್ನು ನೇಮಕ ಮಾಡಲಾಗಿತ್ತು.

ಇ೦ಡಿಯನ್ ಐಸಿಸ್ ನೃತೃತ್ವ ವಹಿಸಿಕೊ೦ಡಿದ್ದ ಶಫಿ ಅಮಾ೯ರ್ ಭಾರತದಿ೦ದ ಐಸಿಸ್ ಗೆ ಸದಸ್ಯರನ್ನು ನೇಮಕ ಮಾಡಿಕೊಳ್ಳಲು ಜಾಲ ರೂಪಿಸಿದ್ದ. ಕಳೆದ ಜನವರಿಯಲ್ಲಿ ದೇಶಾದ್ಯ೦ತ ಕಾಯಾ೯ಚರಣೆ ನಡೆಸಿದ್ದ ಎನ್‍ಐಎ ಅಧಿಕಾರಿಗಳು 14 ಮ೦ದಿ ಶ೦ಕಿತರನ್ನು ಬ೦ಧಿಸಿದ್ದರು. ಬ೦ಧಿತರ ಜತೆಗೆ ಶಫಿ ಅಮಾ೯ರ್ ನಿರ೦ತರ ಸ೦ಪಕ೯ದಲ್ಲಿದ್ದ ಎ೦ಬ ಮಾಹಿತಿ ತನಿಖಾಧಿಕಾರಿಗಳಿಗೆ ಸಿಕ್ಕಿತ್ತು. ಭಾರತದಲ್ಲಿ ವ್ಯವಸ್ಥಿತವಾಗಿ ಐಸಿಸ್ ನೆಲೆಯೂರುವ೦ತೆ ಮಾಡಲು ಶಫಿ ಅಮಾ೯ರ್ “ಜುನೂದ್ ಇ-ಖಲೀಫಾ ಆಲ್ ಹಿ೦ದ್’ ಎ೦ಬ ಐಸಿಸ್ ಉಗ್ರರ ಪಡೆ ರಚಿಸಲು ಮು೦ದಾಗಿದ್ದ. ಇದಕ್ಕಾಗಿ ಉಗ್ರ ಮುದಬೀರ್ ಮುಷ್ತಾಕ್ ಷೇಕ್‍ನನ್ನು ಮುಖ್ಯಸ್ಥನನ್ನಾಗಿ ಮಾಡಿದ್ದ. ಕಳೆದ ಜನವರಿಯಲ್ಲಿ ಎನ್‍ಐಎ ಅಧಿಕಾರಿಗಳು ಮುಷ್ತಾಕ್ ಷೇಕ್‍ನನ್ನು ಬ೦ಧಿಸಿದ್ದರು. ಭಾರತದಿ೦ದ ಉಗ್ರರನ್ನು ನೇಮಕ ಮಾಡಿಕೊಳ್ಳುವು ದಕ್ಕಾಗಿ ಶಫಿ ಅಮಾ೯ರ್ ಮುಷ್ತಾಕ್ ಷೇಕ್‍ಗೆ ಹವಾಲ ಮೂಲಕ ಹಣ ತಲುಪಿಸುತ್ತಿದ್ದ ಎ೦ಬ ಮಾಹಿತಿ ಆತನ ಬ೦ಧನದ ಬಳಿಕ ಲಭ್ಯವಾಗಿತ್ತು.

ಶಫಿ ಅಮಾ೯ರ್ ಫೆೀಸ್‍ಬುಕ್ ಮತ್ತು ಟ್ವಿಟ್ಟರ್ ಮೂಲಕ ಐಸಿಸ್ ಪರ ಸೆಳೆತ ಇರುವ ಉಗ್ರರನ್ನು ಪತ್ತೆ ಹಚ್ಚಿ ಅವರನ್ನು ಆನ್‍ಲ್ಯೆನ್ ಮೂಲಕ ಸ೦ಪಕ೯ ಮಾಡುತ್ತಿದ್ದ. ನ೦ತರ ಅವರನ್ನು ಇಸ್ಲಾ೦ ಮೂಲಭೂತವಾದದ ಕಡೆಗೆ ಆಕಷಿ೯ಸಿ ಅವರನ್ನು ಐಸಿಸ್ ಸೇರುವ೦ತೆ ಪ್ರೇರೇಪಿಸುತ್ತಿದ್ದ. ಫೆೀಸ್‍ಬುಕ್ ಮತ್ತು ಟ್ವಿಟರ್‍ನಲ್ಲಿ ರಹಸ್ಯ ಗ್ರೂಪ್‍ಗಳನ್ನು ಮಾಡಿಕೊ೦ಡು ಭಾರತದ ಯುವಕರೊ೦ದಿಗೆ ಸ೦ವಹನ ನಡೆಸುತ್ತಿದ್ದ. ವಾಟ್ಸ್ ಆ್ಯಪ್, ಟೆಲಿಗ್ರಾಮ್ ಮೂಲಕ ಯುವಕರಿಗೆ ಜವಾಬ್ದಾರಿಗಳನ್ನು ಹ೦ಚಿಕೆ ಮಾಡುತ್ತಿದ್ದ ಈತ ಹೋರಾಡಲು ತುದಿಗಾಲಲ್ಲಿದ್ದ ಯುವಕರನ್ನು ಸಿರಿಯಾಗೆ ಕರೆಸಿಕೊಳ್ಳುತ್ತಿದ್ದ. ಐಸಿಸ್ ಸೇರಲು ಭಾರತದಿ೦ದ ಸಿರಿಯಾಗೆ ಹೋಗುವ ಪ್ರಯತ್ನ ಮಾಡಿ ಸಿಕ್ಕಿಬಿದ್ದ ಹಲವು ಯುವ ಕರ ವಿಚಾರಣೆ ವೇಳೆ ಶಫಿ ಅಮಾ೯ರ್ ಹೆಸರನ್ನು ಬಾಯ್ಬಿಟ್ಟಿದ್ದರು.
ಭಾರತದಲ್ಲಿ ವ್ಯವಸ್ಥಿತವಾಗಿ ಐಸಿಸ್ ನೆಲೆಯೂರುವ೦ತೆ ಮಾಡಲು ಶಫಿ ಅಮಾ೯ರ್ “ಜುನೂದ್ ಇ-ಖಲೀಫಾ ಆಲ್ ಹಿ೦ದ್’ ಎ೦ಬ ಐಸಿಸ್ ಉಗ್ರರ ಪಡೆ ರಚಿಸಲು ಮು೦ದಾಗಿದ್ದ. ಇದಕ್ಕಾಗಿ ಉಗ್ರ ಮುದಬೀರ್ ಮುಷ್ತಾಕ್ ಷೇಕ್‍ನನ್ನು ಮುಖ್ಯಸ್ಥನನ್ನಾಗಿ ಮಾಡಿದ್ದ.

ಶಶಿವರ್ಣಂ

ಜಾತಿ, ಧರ್ಮ ಕೇಳಿ ಬಂಧಿಸುವ ಸ್ಥಿತಿ ಬೇಡ! 

27812

ಇಂದಿನ ವಿಶ್ವವಾಣಿಯಲ್ಲಿ ನನ್ನ ಲೇಖನ

ದಿನವೊಂದಕ್ಕೆ ಪೊಲೀಸರು ಸಾವಿರಾರು ಜನರನ್ನು ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬಂಧಿ ಸುತ್ತಿದ್ದಾರೆ. ಆಗ ಜಾತಿಯ ಪ್ರಶ್ನೆ, ಧರ್ಮದ ಪ್ರಶ್ನೆ ಬರುವುದಿಲ್ಲ. ಆದರೆ, ಶಂಕಿತ ಉಗ್ರನೆಂಬ ಕಾರಣಕ್ಕೆ ಒಬ್ಬ ಮುಸ್ಲಿಂ ಯುವಕನ ಬಂಧನವಾದರೆ, ಧರ್ಮದ ಹಣೆಪಟ್ಟಿ ಕಟ್ಟಲಾಗುತ್ತದೆ.

ದೇಶಾದ್ಯಂತ ಎನ್‌ಐಎ ಹಲವು ಶಂಕಿತ ಉಗ್ರರನ್ನು ಬಂಧಿಸುತ್ತಿದೆ. ಇಂಥ ಸಮಯದಲ್ಲಿ ಮುಸ್ಲಿಮರೆಲ್ಲರೂ ಭಯೋತ್ಪಾದಕರು ಎಂಬ ವಾದಗಳನ್ನು ತೇಲಿ ಬಿಡುವವರು ಒಂದು ಕಡೆ. ಅವರಿಗೆ ಬಲ­ಪಂಥೀಯರು ಎನ್ನುವ ವಿಶೇಷಣ. ಇನ್ನೊಂದೆಡೆ ಬಂಧಿತರು ಅಮಾಯ­ಕರು, ಉದ್ದೇಶಪೂರ್ವಕವಾಗಿ ಮುಸ್ಲಿಂ ಯುವಕರನ್ನ ಬಂಧಿಸಲಾಗುತ್ತಿದೆ ಎಂದು­ ವಾದ. ಇಂತವರಿಗೆ ಜಾತ್ಯತೀತರು ಎಂಬ ಪಟ್ಟ. ಭಯೋತ್ಪಾದನೆಯ ಆರೋಪದ ಮೇಲೆ ಮುಸ್ಲಿಂ ಯುವಕರನ್ನು ಬಂಧಿಸಿದಾಗಲೆಲ್ಲ ಅವರು ಅಮಾಯಕರು ಎಂಬ ವಾದ ಮಾಡ್ತುತಾರೆ.
ಸ್ವಘೋಷಿತ ಬುದ್ಧಿಜೀವಿಗಳು, ಮುಸ್ಲಿಂ ವೋಟ್ ಬ್ಯಾಂಕ್‌ಗಾಗಿ ಒದ್ದಾಡುವ ಪಕ್ಷಗಳು ಮತ್ತು ಮುಸ್ಲಿಮರನ್ನು ಬೇರೆ ಸಮುದಾಯಗಳಿಂದ ದೂರ ಇಡಬೇಕು ಎಂದು ಶತಮಾನಗಳಿಂದ ಪ್ರಯತ್ನಿಸುತ್ತ ಬಂದಿರುವ ಕೆಲ ಧಾರ್ಮಿಕ ಗುರು­ಗಳು ಈ ವಾದಗಳನ್ನು ಹರಿಬಿಡುತ್ತಾರೆ. ಉಗ್ರ ಚಟುವಟಿಕೆಯ ಆರೋಪದ ಮೇಲೆ ಮುಸ್ಲಿಂ ಯುವಕರನ್ನು ಬಂಧಿಸಿದ ಕೂಡಲೇ ಅವರು ಅಮಾಯಕರು ಎಂದು ಕೂಗಿದರೆ, ಪೊಲೀಸರು ಯಾರನ್ನು ಬಂಧಿಸಬೇಕು. ಬಂಧಿಸಿ ವಿಚಾರಣೆ ನಡೆಸಿದ ನಂತರವೇ ತಾನೇ ಆತ ಅಮಾಯಕನಾ ಅಥವಾ ಅಪರಾಧ ಮಾಡಿದ್ದಾನೆ ಎನ್ನುವುದು ತಿಳಿಯುವುದು. ಅದಕ್ಕೂ ಮೊದಲೇ ಅಮಾಯಕ ಅಲ್ಪಸಂಖ್ಯಾತರನ್ನು ಬಂಧಿಸಲಾಗುತ್ತಿದೆ ಎಂದು ಹೇಳಿದರೆ ತನಿಖಾಧಿಕಾರಿಗಳ ಮನಸ್ಥಿತಿ ಏನಾಗಬೇಕು?

ಯಾವುದೇ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿ­ದರೆ 24 ಗಂಟೆಗಳ ಒಳಗೆ ನ್ಯಾಯಾಲಯದ ಎದುರು ಹಾಜರುಪಡಿಸ­ಬೇಕು ಎಂದಿದೆ ಕಾನೂನಿನಲ್ಲಿ. ಆ 24 ಗಂಟೆಗಳ ಅವಧಿಯಲ್ಲಿ ಬಂಧಿತನ ವಿಚಾರಣೆ ನಡೆಸಿ, ಅಪರಾಧ ನಡೆಸಿದ್ದಾನೆ ಅನ್ನೋದು ಮನವರಿಕೆಯಾದರೆ ಅಂಥವನನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗುತ್ತದೆ. ಒಂದು ವೇಳೆ ಆತ ಅಪರಾಧ ಮಾಡಿರುವ ಬಗ್ಗೆ ಖಚಿತ ಮಾಹಿತಿ ಸಿಗಲಿಲ್ಲವೆಂದಾದರೆ ಆತನನ್ನು ಬಿಡುಗಡೆಗೊಳಿಸುತ್ತಾರೆ. ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸುವಾಗ ಆತ ಅಪರಾಧ ಮಾಡಿಲ್ಲ ಅನ್ನೋದು ತನಿಖಾ ಧಿ ಕಾರಿಗೆ ಖಚಿತವಾದರೆ ಕಾನೂನಿನ ಪ್ರಕಾರ ಬಂಧನವಾದವನು ಬಿಡುಗಡೆಯಾಗುತ್ತಾನೆ. ಇದು ಉಗ್ರಗಾಮಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಬಂಧಿತರಾಗುವ ಶಂಕಿತ ಉಗ್ರರಿಗೂ ಅನ್ವಯವಾಗುತ್ತದೆ.

ದೆಹಲಿಯಲ್ಲಿ ಕುಳಿತಿರುವ ಎನ್‌ಐಎ ಅಧಿಕಾರಿ ಬೆಂಗಳೂರಿನ ಮೂಲೆಯಲ್ಲಿ­ರುವ ಜಕ್ಕಸಂದ್ರಕ್ಕೆ ಬಂದು ಶಂಕಿತನನ್ನು ಬಂಧಿಸಿ ಕರೆದೊಯ್ದರೆ ಅದು ಉದ್ದೇಶಪೂರ್ವಕ ಹೇಗಾಗುತ್ತದೆ. ಹಾಗೊಂದು ವೇಳೆ ಉದ್ದೇಶಪೂರ್ವಕವಾಗಿ ಮುಸ್ಲಿಂ ಯುವಕರನ್ನು ಬಂಧಿಸುವ ಹಾಗಿದ್ದರೆ ಇವತ್ತು ಎಲ್ಲ ಮುಸ್ಲಿಂ ಯುವಕರೂ ಜೈಲಲ್ಲಿರಬೇಕಾಗುತ್ತಿತ್ತು. ಹಾಗಂತ ಇಲ್ಲಿಯವರೆಗೆ ಭಯೋತ್ಪಾದನೆಯ ಆರೋಪದ ಮೇಲೆ ಬಂಧಿತರಾದ ಎಲ್ಲ ಮುಸ್ಲಿಂ ಯುವಕರನ್ನು ಈ ದೇಶದ ನ್ಯಾಯಾಲಯ ಅಪರಾಧಿಗಳು ಅಂತೇನು ಹೇಳಿಲ್ಲ. ದೇಶದಲ್ಲಿ ಒಟ್ಟಾರೆ ದಾಖಲಾಗುವ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ಕೇವಲ 21% ಅಷ್ಟೇ. ಉಳಿದ 79% ಆರೋಪಿಗಳು ಖುಲಾಸೆಯಾಗುತ್ತಾರೆ. ಇದಕ್ಕೆ ಕಾರಣ ವರ್ಷಗಟ್ಟಲೆ ನಡೆಯುವ ಕೋರ್ಟ್ ವಿಚಾರಣೆ. ಒತ್ತಡಕ್ಕೋ, ಹಣದಾಸೆಗೋ ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗುತ್ತಾರೆ. ಪರಿಣಾಮ ಕೇಸುಗಳು ಬಿದ್ದು
ಹೋಗುತ್ತವೆ. ಬಂಧಿತ ಮುಸ್ಲಿಂ ಯುವಕರೆಲ್ಲರೂ ಅಮಾಯಕರು ಎಂದು ಹೇಳೋದಾದರೆ, ಈ ಅಂಕಿ ಅಂಶಗಳ ಪ್ರಕಾರ ಪೊಲೀಸರು ಬಂಧಿ ಸುವ ಶೇ.79%ರಷ್ಟು ಮಂದಿ ಅಮಾಯಕರಾಗುತ್ತಾರೆ.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ತನಿಖಾಧಿಕಾರಿ ತಾನು ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ಯಾರನ್ನು ಬೇಕಾದರೂ ಬಂಧಿಸಿ ವಿಚಾರಣೆ ನಡೆಸಬಹುದು. ಕೆಲವು ವಿಶೇಷ ಸನ್ನಿವೇಶದಲ್ಲಿ ನ್ಯಾಯಾಲಯದ ವಾರೆಂಟ್ ಮೂಲಕ ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ. ಇದನ್ನೇ ಪ್ರಶ್ನಿಸಿ ಅಮಾಯಕರು ಎಂದು ಪುಂಗಿ ಊದಿದರೆ ಹೇಗೆ. ಉಗ್ರಗಾಮಿ ಚಟುವಟಿಕೆಗಳ ಆರೋಪದ ಮೇಲೆ ಬಂಧಿತರಾದವರು ಕೋರ್ಟ್ ವಿಚಾರಣೆ ಮುಗಿದ ನಂತರ ಅಪರಾಧ ಮಾಡಿರುವುದು ರುಜುವಾತಾಗಿ ಶಿಕ್ಷೆ ಅನುಭವಿಸುವಂತಾಗುತ್ತದೆ. ಕೆಲವರು ನಿರಪರಾಧಿಗಳೆಂದು ಬಿಡುಗಡೆಯಾಗುತ್ತಾರೆ. ಇನ್ನೂ ಕೆಲವು ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆ ಮಾಡಲಾಗುತ್ತದೆ. ಖುಲಾಸೆಯಾದವರನ್ನ ನ್ಯಾಯಾಲಯ ಎಂದಿಗೂ ನಿರಪರಾಧಿಗಳೆಂದು ಘೋಷಣೆ ಮಾಡಿಲ್ಲ, ಜತೆಗೆ ಅಮಾಯಕರಲ್ಲ ಎಂದು ಹೇಳಿಬಿಡುತ್ತದೆ. ಹೀಗಿರುವಾಗ ಟಿವಿಗಳಲ್ಲಿ ಶಂಕಿತ ಉಗ್ರನ ಬಂಧನ ಎಂದು ಸುದ್ದಿ ಬಂದ ಕೂಡಲೇ ಅಲರ್ಟ್ ಆಗಿಬಿಡುವ ವಿಚಾರವಾದಿಗಳು ಬಂಧಿತರು ಅಮಾಯಕರು ಎಂದು ಹೇಳಿಬಿಡುತ್ತಾರೆ. ಒಬ್ಬ ನಿರಪರಾ ಧಿಯನ್ನು ಕೇವಲ ಉಗ್ರ ಚಟುವಟಿಕೆಯಷ್ಟೇ ಅಲ್ಲ ಯಾವುದೇ ಕೇಸಿನಲ್ಲೂ ಜೈಲಿನಂತೆ ಕೊಳೆಯುವಂತೆ ಮಾಡಬಾರದು. ಆದರೆ ನಮ್ಮ ಧಿರ್ಘಾವಧಿ ವಿಚಾರಣೆಗಳು ಆರೋಪಿಗಳನ್ನು ಜೈಲಿನ ಕೊಳೆಯುವಂತೆ ಮಾಡುತ್ತಿವೆ. ದಿನವೊಂದಕ್ಕೆ ಈ ದೇಶದಲ್ಲಿ ಪೊಲೀಸರು ಸಾವಿರಾರು ಜನರನ್ನು ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬಂಧಿಸಲಾಗುತ್ತದೆ. ಆಗ ಜಾತಿಯ ಪ್ರಶ್ನೆ, ಧರ್ಮದ ಪ್ರಶ್ನೆ ಬರುವುದೇ ಇಲ್ಲ. ಆದರೆ ಶಂಕಿತ ಉಗ್ರನೆಂಬ ಕಾರಣಕ್ಕೆ ಒಬ್ಬ ಮುಸ್ಲಿಂ ಯುವಕ ಬಂಧನವಾದರೆ ಅಮಾಯಕನನ್ನು ಬಂಧಿಸಲಾಗಿದೆ ಎಂದು ಧರ್ಮದ ಹಣೆಪಟ್ಟಿ ಕಟ್ಟಲಾಗುತ್ತದೆ.

1998ರಲ್ಲಿ ಕೊಯಮತ್ತೂರಿನಲ್ಲಿ ಬಿಜೆಪಿ ಮುಖಂಡ ಅಡ್ವಾಣಿಯನ್ನು ಗುರಿಯಾಗಿಸಿಕೊಂಡು ನಡೆಸಿದ ಬಾಂಬ್ ದಾಳಿಯಲ್ಲಿ 58 ಅಮಾಯಕರು ಸಾವನ್ನಪ್ಪಿ, 200 ಮಂದಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಮದನಿ ಪ್ರಮುಖ ಆರೋಪಿಯಾಗಿದ್ದ. 14 ಆರೋಪಿಗಳ ಪೈಕಿ ಮದನಿಯನ್ನು ಹೊರತುಪಡಿಸಿ ಎಲ್ಲರಿಗೂ ಶಿಕ್ಷೆಯಾಯಿತು. ಮದನಿ ಮೇಲಿದ್ದ ಆರೋಪ ಸಾಬೀತು ಮಾಡಲು ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ನ್ಯಾಯಾಧಿ ಶರು ಆದೇಶ ಬರೆದರು. ಹಾಗಂತ ಮದನಿ ಅಮಾಯಕ ಎಂದೇನು ಕೋರ್ಟ್ ಹೇಳಿಲ್ಲ. ಬೆದರಿಕೆ, ರಾಜಕೀಯ ಒತ್ತಡಗಳ ಕಾರಣದಿಂದ ಸಾಕ್ಷಿಗಳು ಮದನಿ ವಿರುದ್ಧ ಸಾಕ್ಷಿ ಹೇಳಲಿಲ್ಲ. ಈ ಕಾರಣದಿಂದ ಮದನಿ ಖುಲಾಸೆಯಾದ. ಇದೇ ಅಡ್ಡದಾರಿ ಹಿಡಿದು ಬೆಂಗಳೂರು ಸರಣಿ ಸೋಟದಲ್ಲೂ ಕಾನೂನಿನ ಕಣ್ಣಿಗೆ ಮಣ್ಣೆರಚಲು ಮದನಿ ಸಿದ್ದತೆ ನಡೆಸಿರುವುದು ರಹಸ್ಯವಾಗೇನು ಉಳಿದಿಲ್ಲ.

2007ರಲ್ಲಿ ನಡೆದ ಹೈದರಾಬಾದ್ ಮೆಕ್ಕಾ ಮಸೀದಿ ಸ್ಪೋಟದ 17 ಆರೋಪಿಗಳನ್ನು ನ್ಯಾಯಾಲಯ 2009ರಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆ ಮಾಡಿತು. ಆಗ ಆಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಖುಲಾಸೆಯಾದ 17 ಮಂದಿಗೆ ತಲಾ 3 ಲಕ್ಷ ಪರಿಹಾರ ನೀಡುವ ನಿರ್ಧಾರ ಪ್ರಕಟಿಸಿತ್ತು. ದೇಶದಲ್ಲಿ ಆರೋಪಿ ಎಂದು ಸಾಬೀತಾಗದ ವ್ಯಕ್ತಿಗಳಿಗೆ ಸರಕಾರದ ವತಿಯಿಂದ ನೀಡಲಾದ ಮೊದಲ ಪರಿಹಾರದ ಪ್ರಕರಣ ಇದಾಗಿತ್ತು. ಕಣ್ಣ ಮುಂದೆಯೇ ಇದ್ದ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ಪ್ರಕಟಿಸಲಾಗಿತ್ತು. ಆದರೆ ಹೈಕೋರ್ಟ್ ಸರಕಾರದ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿತು. ಹೀಗೆ ಪರಿಹಾರ ನಿಡುವುದಾದರೆ ದೇಶದ 79% ಆರೋಪಿಗಳಿಗೆ ಸರಕಾರ ಪರಿಹಾರ ನೀಡಬೇಕಾಗುತ್ತದೆ.

ಯುಪಿಎ ಸರಕಾರದಲ್ಲಿ ಗೃಹಸಚಿವರಾಗಿದ್ದ ಸುಶೀಲ್ ಕುಮಾರ್ ಶಿಂದೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಭಯೋತ್ಪಾದನೆಯ ಆರೋಪದ ಮೇಲೆ ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸ ಬೇಡಿ ಎಂದು ಪತ್ರ ಬರೆದಿದ್ದರು. ಈ ಪತ್ರ ಬರೆದಾಗ 2014ರ ಲೋಕಸಭಾ ಚುನಾವಣೆಗೆ ಕೇವಲ ಆರು ತಿಂಗಳಷ್ಟೇ ಬಾಕಿಯಿತ್ತು. ಮುಸ್ಲಿಂ ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಉದ್ದೇಶದಿಂದಲೇ ಈ ಪತ್ರ ಬರೆಯಲಾಗಿತ್ತು ಅಂತ ಪ್ರತ್ಯೇಕವಾಗಿಯೇನು ಹೇಳಬೇಕಾಗಿಲ್ಲ. ವೋಟ್ ಬ್ಯಾಂಕ್‌ಗಾಗಿ ಮುಸ್ಲಿಮರನ್ನು ಬಳಸಿಕೊಂಡ ಸಾವಿರ ಸಾವಿರ ಉದಾಹರಣೆಗಳಲ್ಲಿ ಇವು ಕೆಲವಷ್ಟೇ. ಹೀಗೆ ಬಂಧಿತರಾದವರನ್ನು ಅಮಾಯಕರು ಅಂತ ಆರಂಭದ ಹುಯಿಲೆಬ್ಬಿಸುವುದರ ಪರಿಣಾಮ ಮುಂದೆ ತನಿಖಾಧಿಕಾರಿಗಳು ಜಾತಿ, ಧರ್ಮ ಕೇಳಿ ಆರೋಪಿಗಳನ್ನು ಬಂಧಿಸುವ ಸ್ಥಿತಿಗೆ ತಂದರೆ ಆಶ್ಚರ್ಯವಿಲ್ಲ. ಆ ಸ್ಥಿತಿಗೆ ತನಿಖಾಧಿಕಾರಿಗಳು ಬಂದರೆ ಅದಕ್ಕಿಂತಲೂ ಅಪಾಯ ಮತ್ತೊಂದಿಲ್ಲ.

ಭದ್ರತಾ ಸಂಸ್ಥೆಗಳ ಪ್ರಮುಖ ಗುರಿ, ನಡೆಯಲಿರುವ ಅನಾಹುತವನ್ನು ತಪ್ಪಿಸುವುದು ಮತ್ತು ನಡೆದ ಅನಾಹುತಕ್ಕೆ ಕಾರಣಕರ್ತರಾದರಿಗೆ ಶಿಕ್ಷೆ ಕೊಡಿಸುವುದು. ಅವರಿಗೆ ಯಾವ ಪಕ್ಷದ ಸರಕಾರ ಅಧಿಕಾರದಲ್ಲಿದೆ, ಆ ಪಕ್ಷದ ಧೋರಣೆಗಳೇನು, ಆ ಪಕ್ಷ ಅಲ್ಪಸಂಖ್ಯಾತರ ಪರವಾ- ಬಹುಸಂಖ್ಯಾತರ ಪರವಾ ಎಂಬುದನ್ನು ಕಟ್ಟಿಕೊಂಡು ಏನೂ ಆಗಬೇಕಿಲ್ಲ. ತನಿಖಾ ಸಂಸ್ಥೆಗಳು ಹಾಗೆ ಯೋಚಿಸುತ್ತ ಕುಳಿತಿದ್ದರೆ ಉಗ್ರ ದಾಳಿಗಳ ಆರೋಪಿಗಳ ಬಂಧನ ಆಗುತ್ತಲೇ ಇರಲಿಲ್ಲ. ಧರ್ಮ ಆಧಾರಿತ ನಿಲುವುಗಳನ್ನು ಯಾರೂ ಬೆಳೆಸಿಕೊಳ್ಳಬಾರದು. ಆದರೆ, ರಾಜಕಾರಣದಲ್ಲಿ ಆ ವಿಷ ಈಗಾಗಲೇ ಪ್ರವೇಶಿಸಿ ಆಗಿದೆ. ಕೊನೆಪಕ್ಷ ಆಂತರಿಕ ಭದ್ರತೆಯನ್ನಾದರೂ ಅದರಿಂದ ದೂರ ಇಡೋಣ. ಇಲ್ಲದಿದ್ದರೆ, ಭಾರತ ಇನ್ನೊಂದು ಪಾಕಿಸ್ತಾನವಾದೀತು !

– ಶಶಿವರ್ಣಂ

 

ಪಾಕಿಸ್ತಾನದಿಂದ ನ್ಯೂಕ್ಲಿಯರ್ ಬಾಂಬ್ ಪಡೆಯುವ ಹವಣಿಕೆಯಲ್ಲಿದೆ ಐಸಿಸ್…!!

image

ಅಣ್ಬಸ್ತ್ರಗಳು ಉಗ್ರರ ಕೈವಶವಾಗುವ ಭೀತಿ ಹಲವು ವರ್ಷಗಳಿಂದಲೂ ಇದೆ. ಆದ್ರೆ ಈಗ ಆ ಭೀತಿ ನಿಜವಾಗುವ ಸಾಧ್ಯತೆ ಹೆಚ್ಚಾಗಿದೆ. ಪಾಕಿಸ್ತಾನದಿಂದ ನ್ಯೂಕ್ಲಿಯರ್ ಬಾಂಬ್ ಗಳನ್ನ ಕೊಂಡುಕೊಳ್ಳುವ ಹವಣಿಕೆಯಲ್ಲಿದೆ. ಈ ಬಗ್ಗೆ ಐಸಿಸ್ ತನ್ನ ನಿಯತಕಾಲಿಕೆಯಲ್ಲಿ ಹೇಳಿಕೊಂಡಿದೆ. ಒಂದು ವರ್ಷದ ಒಳಗೆ ಪಾಕಿಸ್ತಾನದಿಂದ ಅಣ್ವಸ್ತ್ರಗಳನ್ನ ಕೊಂಡುಕೊಳ್ಳುವ ಎಲ್ಲ ಸಿದ್ದತೆಗಳನ್ನೂ ಮಾಡಿಕೊಳ್ಳಲಾಗಿದೆ ಎಂದು ಐಸಿಸ್ ತನ್ನ ನಿಯತಾಲಿಕೆಯಲ್ಲಿ ಘೋಷಿಸಿಕೊಂಡಿದೆ. ಆ ಮೂಲಕ ಅಮೇರಿಕಾದ ನೆಲದಲ್ಲಿ ಅಣ್ವಸ್ತ್ರ ದಾಳಿ ನಡೆಸಲು ಎಲ್ಲ ಸಿದ್ದತೆಗಳನ್ನೂ ಮಾಡಿಕೊಳ್ಳುತ್ತಿದೆ ಐಸಿಸ್. ಇದಕ್ಕಾಗಿ ಬಿಕಿಯನ್ ಗಟ್ಟಲೇ ಡಾಲರ್ ಹಣ ಖರ್ಚು ಮಾಡಲು ಐಸಿಸ್ ಮುಂದಾಗಿದ್ದು, ಪಾಕಿಸ್ತಾನದ ಭ್ರಷ್ಟ ಅಧಿಕಾರಿಗಳ ಮೂಲಕ ಅಣ್ವಸ್ತ್ರಗಳನ್ನ ಪಡೆಯಲು ಸಂಚು ರೂಪಿಸಿದೆ. ಹಾಗೊಂದು ವೇಳೆ ಐಸಿಸ್ ಅಣ್ವಸ್ತ್ರಗಳನ್ನ ಪಡೆದುಕೊಳ್ಳಲು ಯಶಸ್ವಿಯಾಗಿದ್ದೇ ಆದಲ್ಲಿ ಇಡೀ ಜಗತ್ತು ಅಣ್ವಸ್ತ್ರ ದಾಳಿಯ ಭೀತಿಗೊಳಗಾಗಲಿದೆ. ಈಗ ಅಣ್ವಸ್ತ್ರಗಳನ್ನ ಹೊಂದಿರುವ ಯಾವ ರಾಷ್ಟ್ರಗಳೂ ಅವುಗಳನ್ನ ಯುದ್ಧದಲ್ಲಿ ಬಳಸುವ ದುಸ್ಸಾಹಸ ಮಾಡುವ ಸಾಧ್ಯತೆ ಇಲ್ಲ. ಆದ್ರೆ ನರಮೇದಗಳಿಂದಲೇ ಕುಖ್ಯಾತಿಯಾಗಿರೋ ಐಸಿಸ್ ಗೆ ಅಣ್ವಸ್ತ್ರಗಳು ಸಿಕ್ಕರಂತೂ ಅಪಾಯ ಕಟ್ಟಿಟ್ಟಬುತ್ತಿ. ಪಾಕಿಸ್ತಾನ ತಯಾರಿಸುವ ಅಣ್ವಸ್ತ್ರಗಳು ಉಗ್ರರ ಪಾಲಾಗಬಹುದು ಎಂಬ ಆತಂಕವನ್ನ ಭಾರತ ಹಲವು ವರ್ಷಗಳಿಂದಲೂ ಪ್ರತಿಪಾದಿಸಿಸುತ್ತಲೇ ಬಂದಿತ್ತು. ಈಗ ಅದು ನಿಜವಾಗುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಪಾಕಿಸ್ತಾನದಲ್ಲಿನ ಅಣ್ವಸ್ತ್ರಗಳು ಉಗ್ರರ ಪಾಲಾಗುವುದಿಲ್ಲ ಅಂತ ಅಮೇರಿಕಾ ಪಾಕಿಸ್ತಾನ್ನು ಪೋಷಣೆ ಮಾಡುತ್ತಲೇ ಬಂದಿದೆ. ಆದ್ರೆ ಈಗ ಅದು ಅಮೇರಿಕಾಗೇ ಮುಳುವಾಗುವ ಹಂತಕ್ಕೆ ಬಂದು ನಿಂತಿದೆ. ಈ ಹಿಂದೆ ಉತ್ತರ ಕೋರಿಯಾ ಪಾಕಿಸ್ತಾನಕ್ಕೆ ಲಕ್ಷಾಂತರ ಡಾಲರ್ ಹಣ ಲಂಚ ಕೊಟ್ಟು ಅಣ್ವಸ್ತ್ರ ತಂತ್ರಜ್ಞಾನವನ್ನ ಪಡೆದ ಇತಿಹಾಸವಿದೆ. ಇದು ಗೊತ್ತಿದ್ದರೂ ಪಾಕಿಸ್ತಾನವನ್ನ ಪೋಷಿಸಿದ್ದು ಅಮೇರಿಕಾ ಮಾಡಿದ ಜಾಣ ಕೆಲಸ. ಈಗಾಗಲೇ ಅಣ್ವಸ್ತ್ರಗಳ ತಯಾರಿಕೆಯನ್ನ ದಿನದಿಂದ ದಿನಕ್ಕೆ ಹೆಚ್ಚಿಸುತ್ತಿರುವ ಪಾಕಿಸ್ತಾನ ಈಗಾಗಲೇ ಅಣ್ವಸ್ತ್ರಗಳ ಸಂಖ್ಯೆಯಲ್ಲಿ ಭಾರತ, ಬ್ರಿಟನ್ ಗಳನ್ನ ಹಿಂದಿಕ್ಕಿದೆ. ಜಗತ್ತಿನ ನಂಬಿಕೆಗೆ ಅನರ್ಹವಾದ ದೇಶವೊಂದು ಅಣ್ವಸ್ತ್ರಗಳನ್ನ ಉಗ್ರರಿಗೆ ಮಾರಿಕೊಳ್ಳುವುದಿಲ್ಲ ಅನ್ನುವ ಯಾವ ಖಾತರಿಯೂ ಉಳಿದಿಲ್ಲ. ಈ ಹಿಂದೆ ಅಣ್ವಸ್ತ್ರಗಳು ಆಲ್ ಕಾಯಿದಾ ಪಾಲಾಗುವ ಅಪಾಯ ಎದುರಿಸಿತ್ತು. ಆದ್ರೆ ಆ ಅಪಾಯ ಈಗ ಐಸಿಸ್ ಮೂಲಕ ಎದುರಾಗುತ್ತಿದೆ. ಆಲ್‌ ಕಾಯಿದಾಕ್ಕಿಂತಲೂ ಐಸಿಸ್‌ ಹೆಚ್ಚು ಅಪಾಯಕಾರಿಯಾಗುತ್ತಿದೆ. ತೈಲ ಸಮೃದ್ಧ ಇರಾಕ್‌ ಮತ್ತು ಸಿರಿಯಾದ ಪ್ರದೇಶಗಳು ಐಸಿಸ್‌ನ ನಿಯಂತ್ರಣದಲ್ಲಿರುವುದರಿಂದ ಸುಲಭವಾಗಿ ಆದಾಯ ಬರುತ್ತಿದೆ. ಐಸಿಸ್‌ನಿಂದ ಎದುರಾಗಿರುವ ಬೆದರಿಕೆಯಿಂದಾಗಿಯೇ ಅಲ್‌ ಕಾಯಿದಾ ಈಗ ಭಾರತ ಮತ್ತಿತರ ದೇಶಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಿ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಜಿಹಾದ್‌ ಲೋಕದಲ್ಲೀಗ ಅಲ್‌ ಕಾಯಿದಾಕ್ಕಿಂತ ಐಸಿಸ್‌ ಹೆಚ್ಚು ಬಲಿಷ್ಠ ಮತ್ತು ಆಕರ್ಷಣೀಯವಾಗಿ ಕಾಣುತ್ತಿದೆ. ಯಾಕಂದ್ರೆ ಆಲ್ ಕಾಯಿದಾ ತನ್ನ ಕಾರ್ಯನಿರ್ವಹಣೆಗಾಗಿ ದೇಣಿಗೆಯ ಹಣವನ್ನ ಅವಲಂಬಿಸಿತ್ತು. ಆದ್ರೆ ಐಸಿಸ್ ತೈಲ ಮಾರಾಟ ಮತ್ತು ಒತ್ತೆಯಾಳು ಬಿಡುಗಡೆ ಹಣದಿಂದ ದಿನವೊಂದಕ್ಕೆ 60 ಕೋಟಿಯಷ್ಟು ಹಣ ಗಳಿಸುತ್ತಿದೆ. ತೈಲ ಸಮೃದ್ಧವಾಗಿರುವ ಇರಾಕ್ ಮತ್ತು ಸಿರಿಯಾಗಳಲ್ಲಿ ಐಸಿಸ್ ತೈಲ ಮಾರಾಟದಿಂದಾಗಿ ಕೋಟಿ ಕೋಟಿ ಹಣ ಗಳಿಸುತ್ತಿದೆ. ಹಾಗಾಗಿ ಐಸಿಸ್ ತನ್ನ ಕಾರ್ಯನಿರ್ವಹಣೆಗೆ ಯಾರ ಬಳಿಯೂ ಹಣಕ್ಕಾಗಿ ಅಂಗಲಾಚುವ ಅಗತ್ಯವಿಲ್ಲ. ಇದ್ರಿಂದಾಗಿಯೇ ಜಗತ್ತಿನಲ್ಲಿರುವ ಎಲ್ಲ ಜಿಹಾದಿಗಳೂ ಐಸಿಸ್ ನತ್ತ ಆಕರ್ಷಿತರಾಗುತ್ತಿರೋದು. ಆಲ್ ಕಾಯಿದಾಗೆ ಆಫ್ಘನಿಸ್ತಾನದ ಗಡಿ ಪ್ರದೇಶಗಳು ನೆಲೆಯಾಗಿದ್ರೆ ಐಸಿಸ್ ನೆಲೆ ಇರಾಕ್ ಮತ್ತು ಸಿರಿಯಾಗಳನ್ನೊಳಗೊಂಡು ಬ್ರಿಟನ್ ಗಿಂತಲೂ ಹೆಚ್ಚಿನ ಭೂ ಪ್ರದೇಶವನ್ನ ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಇದ್ರ ಜೊತೆಗೆ ಸಿರಿಯಾದ ವಸ್ತು ಸಂಗ್ರಹಾಲಯಗಳಲ್ಲಿರುವ ಬೆಲೆಬಾಳುವ ಕಲಾಕೃತಿಗಳನ್ನ ಮಾರಿ ಲಕ್ಷಾಂತರ ಡಾಲರ್ ಹಣ ಗಳಿಸುತ್ತಿದೆ. ಕೇವಲ ಒಂದು ವರ್ಷದ ಹಿಂದೆ ಐದು ಸಾವಿರ ಕೋಟಿಯಷ್ಟಿದ್ದ ಐಸಿಸ್ ನ ಆಸ್ತಿ ಈಗ ಹದಿನೈದು ಸಾವಿರ ಕೋಟಿ ರೂ ಗಡಿ ದಾಟಿದೆ. ಇಷ್ಟು ದೊಟ್ಟ ಮಟ್ಟದಲ್ಲಿ ಹಣದ ಆಮದನಿ ಇರುವ ಐಸಿಸ್ ಈಗ ನ್ಯೂಕ್ಲಿಯರ್ ಬಾಂಬ್ ಗಳನ್ನ ಪಡೆಯಲು ಬಿಲಿಯನ್ ಗಟ್ಟಲೆ ಡಾಲರ್ ಹಣವನ್ನ ವ್ಯಯಿಸಲು ಸಿದ್ದವಾಗಿದೆ. ಹಾಗೊಂದು ವೇಳೆ ಐಸಿಸ್ ಉಗ್ರರು ಪಾಕಿಸ್ತಾನದಿಂದ ಅಣ್ವಸ್ತ್ರಗಳನ್ನು ಪಡೆಯುವಲ್ಲಿ ಅಥವಾ ಅಣ್ವಸ್ತ್ರ ತಯಾರಿಕೆಯ ತಂತ್ರಜ್ಞಾನ ಪಡೆಯುವಲ್ಲಿ ಯಶಸ್ವಿಯಾದ್ರೆ ಇಡೀ ಜಗತ್ತು ಅಣ್ವಸ್ತ್ರ ಯುದ್ಧಕ್ಕೆ ಎದುರು ನೋಡಬೇಕಾಗುತ್ತದೆ…

                                                                                               –ಶಶಿವರ್ಣಂ 

ಭಾರತ ತನ್ನ ದೇಶವಲ್ಲ ಅಂದವನಿಗೆ ಈ ದೇಶದ ಪಾಸ್ ಪೋರ್ಟ್ ಯಾಕೆ ಬೇಕು..?

image

ಆತ ತನ್ನ ಜೀವನದುದ್ದಕ್ಕೂ ತಾನು ಭಾರತೀಯ ಎಂದು ಹೇಳಿಕೊಳ್ಳದ ಮನುಷ್ಯ, ದೇಶಕ್ಕೆ ನಿಷ್ಠೆ ತೋರದ ಮನುಷ್ಯ, ಕಾಶ್ಮೀರದಲ್ಲಿ ದೇಶದ್ರೋಹಿ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ವ್ಯಕ್ತಿ, ಕಾಶ್ಮೀರಿ ನಿರುದ್ಯೋಗಿ ಯುವಕರಿಗೆ ಆಮಿಷ ತೋರಿಸಿ ಪಾಕ್ ಪರವಾಗಿ ಹೋರಾಟ ನಡೆಸುವಂತೆ ಪ್ರೇರೇಪಿಸುತ್ತಿರುವ ಪ್ರತ್ಯೇಕತಾವಾದಿ. ತಾನು ಭಾರತೀಯನಲ್ಲ ಎಂದು ಜಗತ್ತಿಗೆ ಕೇಳುವಂತೆ ಬಹಿರಂಗವಾಗಿ ಹೇಳಿದವನು. ಆತನೇ ಸೈಯದ್ ಆಲಿ ಷಾ ಗಿಲಾನಿ. ಇವತ್ತು ಈ ದೇಶದ ಪಾಸ್ ಪೋರ್ಟ್ ಗಾಗಿ ಗಿಲಾನಿ ಅರ್ಜಿ ಸಲ್ಲಿಸಿದ್ದಾನೆ. ಎಲ್ಲ ಭಾರತೀಯರೂ ತಾನೊಬ್ಬ ಭಾರತೀಯ ಅಂತ ಹೇಳಿಕೊಳ್ಳೋಕೆ ಹೆಮ್ಮೆ ಪಡುತ್ತಾರೆ. ಆದ್ರೆ ಈ ದೇಶದ್ರೋಹಿ ಮಾತ್ರ ತಾನು ಭಾರತೀಯನಲ್ಲ ಅಂತ ಬಹಿರಂಗವಾಗಿ ಹೇಳಿಕೊಂಡು ಓಡಾಡುತ್ತಾನೆ. ಈ ಗಿಲಾನಿ ಎಂಬ ಪಾಕ್ ಏಜೆಂಟ್ ಇವತ್ತು ಇಂಡಿಯನ್ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಿದ್ದಾನೆ. ಈ ದೇಶದ ಪಾಸ್ ಪೋರ್ಟ್ ಅನ್ನ ಭಾರತೀಯ ವ್ಯಕ್ತಿ ಮಾತ್ರ ಪಡೆಯಲು ಸಾಧ್ಯ. ಗಿಲಾನಿ ಭಾರತೀಯನಲ್ಲದ ಮೇಲೆ ಆತನಿಗೆ ಈ ನೆಲದ ಪಾಸ್ ಫೊರ್ಟ್ ಆದ್ರೂ ಯಾಕೆ ಬೇಕು. ಈ ಹಿಂದೆಯೂ ಕೂಡ ಈತ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಿದ್ದ. ಮೂರು ಬಾರಿ ಪಾಸ್ ಪೋರ್ಟ್ ನೀಡಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 2013 ರಲ್ಲಿ ಪಾಸ್ ಪೋರ್ಟ್ ತಿರಸ್ಕರಿಸಿತ್ತು. ಆದ್ರೆ ಈ ಬಾರಿ ಆತನಿಗೆ ಮಾನವೀಯ ನೆಲೆಯ ಆಧಾರದ ಮೇಲೆ ಪಾಸ್ ಪೋರ್ಟ್ ನೀಡಬೇಕು ಅನ್ನೋ ಹೇಳಿಕೆಗಳು ವಿವಾದ ಸೃಷ್ಟಿಸಿದೆ. ಜಮ್ಮು ಕಾಶ್ಮೀರದಲ್ಲಿ ಬಿಜೆಪಿಯೊಂದಿಗೆ ಅಧಿಕಾರ ಹಿಡಿದಿರುವ ಪಿಡಿಪಿ ಪ್ರತ್ಯೇಕವಾದಿಗಳ ಬಗ್ಗೆ ಮೃದು ದೋರಣೆ ತಳೆದಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಜಮ್ಮು ಕಾಶ್ಮೀರದಲ್ಲಿ ಅಧಿಕಾರ ಹಿಡಿಯಲೇಬೇಕು ಎಂಬ ಉದ್ದೇಶದಿಂದ ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆದ್ರೆ ಈ ಮೈತ್ರಿ ಕಾಶ್ಮೀರದಲ್ಲಿ ನಡೆಯುತ್ತಿರುವ ದೇಶ ವಿರೋಧಿಗಳಿಗೆ ಬಲತಂದಿರುವುದಂತೂ ನಿಜ. ಇದಕ್ಕಡ ಉತ್ತಮ ಉದಾಹರಣೆ ಬಿಜೆಪಿ-ಪಿಡಿಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ಕೂಡಲೇ ಪ್ರತ್ಯೇಕವಾದಿ ದ್ರೋಹಿ ಮಸರತ್ ಆಲಂ ನನ್ನ ಸೆರೆವಾಸದಿಂದ ಬಿಡುಗಡೆ ಮಾಡಿದ್ದು. ಬಿಜೆಪಿಯ ವಿರೋಧದ ನಡುವೆಯೂ ಮಸರತ್ ಆಲಂನನ್ನ ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿತ್ತು ಪಿಡಿಪಿ. ಆತ ಜೈಲಿನಿಂದ ಹೊರಬಂದ ಕೂಡಲೇ ಕಾಶ್ಮೀರದಲ್ಲಿ ಮತ್ತೆ ದೇಶದ್ರೋಹಿ ಚಟುವಟಿಕೆಗಳು ಆರಂಭವಾಗಿದ್ದವು. ಕಾಶ್ಮೀರದ ಹಲವೆಡೆ ಗಿಲಾನಿಯೊಂದಿಗೆ ಬೀದಿಗಿಳಿದು ಪಾಕಿಸ್ತಾನಿ ದ್ವಜವನ್ನ ಬಹಿರಂಗವಾಗಿಯೇ ಹಾರಿಸಲಾಗಿತ್ತು. ಮತ್ತೆ ಕಾಶ್ಮೀರದಲ್ಲಿ ಬಿಕ್ಕಟ್ಟು ಸೃಷ್ಟಿಸಲು ಮುಂದಾಗಿದ್ದರು. ಇದಾದ ನಂತ್ರ ದೇಶಾಧ್ಯಂತ ವ್ಯಕ್ತವಾದ ತೀವ್ರ ವಿರೋಧದಿಂದ ಮಸರತ್ ಆಲಂನನ್ನ ಮತ್ತೆ ಬಂಧಿಸಲಾಗಿದೆ. ಇದರ ಜೊತೆ ಗಿಲಾನಿಯನ್ನೂ ಗೃಹಬಂಧನದಲ್ಲಿಡಲಾಗಿದೆ. ಈಗ ಗಿಲಾನಿ ಸೌದಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನ ಮಗಳನ್ನ ನೋಡುವ ಉದ್ದೇಶದಿಂದ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಿದ್ದಾನೆ. ಗಿಲಾನಿಗೆ ಮಾನವೀಯ ನೆಲೆಯ ಆಧಾರದ ಮೇಲೆ ಪಾಸ್ ಪೋರ್ಟ್ ನೀಡಬೇಕು ಅನ್ನೋದು ಪಿಡಿಪಿಯ ವಾದ. ಆದ್ರೆ ಆತನಿಗೆ ಪಾಸ್ ಪೋರ್ಟ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಇನ್ನೂ ಅಧಿಕೃತವಾಗಿ ಯಾವುದೇ ನಿಲುವು ಪ್ರಕಟಿಸಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಮೌನ ಮುಂದುವರೆಸಿದೆ. ತನ್ನ ದೇಶಕ್ಕೆ ನಿಷ್ಠೆ ತೋರದ ಮನುಷ್ಯನಿಗೆ ಮಾನವೀಯತೆಯ ನೆಲೆಯಲ್ಲಿ ಪಾಸ್ ಪೋರ್ಟ್ ನೀಡಬೇಕಾ ಅನ್ನೋದು ಈಗ ಎದ್ದಿರುವ ಪ್ರಶ್ನೆ. ಗಿಲಾನಿ ಭಾರತೀಯನಲ್ಲದ ಮೇಲೆ ಆತನಿಗೆ ಭಾರತದ ಪಾಸ್ ಪೋರ್ಟ್ ಆದರೂ ಯಾಕೆ ಬೇಕು. ಪಾಸ್ ಪೋರ್ಟ್ ನೀಡುವುದು ರಾಷ್ಟ್ರೀಯತೆಯ ಆಧಾರದ ಮೇಲೆ ಹೊರತು ಮಾನವೀಯತೆಯ ಆಧಾರದ ಮೇಲಲ್ಲ.  ಗಿಲಾನಿಗೆ ಪಾಸ್ ಪೋರ್ಟ್ ನಿರಾಕರಿಸುವ ದಿಟ್ಟತನವನ್ನ ಮೋದಿ ಸರ್ಕಾರ ಪ್ರದರ್ಶಿಸಬೇಕಿದೆ. ಈ ಮೂಲಕ ಕಾಶ್ಮೀರದಲ್ಲಿ ಬಿಕ್ಕಟ್ಟು ಸೃಷ್ಟಿಸಲು ಮುಂದಾಗುತ್ತಿರುವ ಈ ಪ್ರತ್ಯೇಕವಾದಿಗಳಿಗೆ ಒಂದು ಸ್ಪಷ್ಟ ಸಂದೇಶ ನೀಡಬೇಕಿದೆ. ಇಂತದ್ದೊಂದು ದಿಟ್ಟ ನಿರ್ಧಾರ ಕೈಗೊಳ್ಳುವ ದೈರ್ಯ ತೋರಿಸಿದರೆ ಅಚ್ಚೇ ದಿನ್ ಸರ್ಕಾರ್ ಘೋಷಣೆಗೊಂದು ಅರ್ಥ ಬರುತ್ತದೆ ಮತ್ತು ಕಾಂಗ್ರೆಸ್ ಗಿಂತ ಇದು ಭಿನ್ನ ಸರ್ಕಾರ ಎಂದು ತೋರಿಸಿದಂತಾಗುತ್ತದೆ. ಒಂದು ವೇಳೆ ರಾಜಕೀಯ ಕಾರಣಗಳಿಗಾಗಿ ಗಿಲಾನಿಗೆ ಪಾಸ್ ಪೋರ್ಟ್ ನೀಡಿದ್ದೇ ಆದರೆ ಅದು ಈ ದೇಶದ ಜನರಿಗೆ ಮಾಡಿದ ಅವಮಾನ….

-ಶಶಿವರ್ಣಂ

<span>%d</span> bloggers like this: