
ರಾಜ್ಯದಲ್ಲಿ ಎನ್ಐಎ ಅಧಿಕಾರಿಗಳಿಂದ ಆರು ಶಂಕಿತ ಉಗ್ರರ ಬಂಧನ ಮತ್ತು 15 ದಿನಗಳ ಹಿಂದೆ ದೆಹಲಿ ಪೊಲೀಸರಿಂದ ಆಲ್ಖೈದಾ ಶಂಕಿತ ಉಗ್ರ ಮೌಲ್ವಿ ಸೈಯದ್ ಅನ್ಸರ್ ಷಾ ಖಾಸ್ಮಿ ಬಂಧನದ ನಂತರ ರಾಜ್ಯ ಉಗ್ರರಿಗೆ ಸುರಕ್ಷಿಿತ ತಾಣವಾಗಿ ಉಳಿದಿರುವುದು ಮತ್ತೊಮ್ಮೆ ಸಾಭೀತಾಗಿದೆ. ದೇಶದಲ್ಲಿ ನಡೆದ ಹಲವು ಭಯೋತ್ಪಾದನಾ ದಾಳಿಗಳ ಸಂಚು ರಾಜ್ಯದಲ್ಲಿ ರೂಪಿತವಾಗಿತ್ತು ಅನ್ನೋದು ಬಹಿರಂಗವಾಗೇನು ಉಳಿದಿಲ್ಲ. ಆದರೂ ರಾಜ್ಯ ಪೊಲೀಸರು ಮಾತ್ರ ಉಗ್ರರು ಮತ್ತು ಅವರ ಚಟುವಟಿಕೆಗಳನ್ನು ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಕೇಂದ್ರ ತನಿಖಾಧಿಕಾರಿಗಳು ಬಂಧಿಸಿದ ನಂತರ ನಮಗೆ ಮಾಹಿತಿ ಇತ್ತು ಎಂಬ ಸಿದ್ದ ಹೇಳಿಕೆಯನ್ನು ಬಿಟ್ಟರೆ ಇಲ್ಲಿನ ಪೊಲೀಸರಿಗೆ ಉಗ್ರ ಚಟುವಟಿಕೆಗಳ ಮೇಲೆ ಕಣ್ಣಿಡುವ ಕೆಲಸ ಪೊಲೀಸ್ ಇಲಾಖೆ ಮಾಡುತ್ತಿಲ್ಲ.. ಈ ಮೈಮರೆವು ಮುಂದಿನ ದಿನಗಳಲ್ಲಿ ದೊಡ್ಡದೊಂದು ದಾಳಿಗೆ ಮುನ್ನುಡಿಯಾದರೂ ಅಚ್ಚರಿಯಿಲ್ಲ..!
ರಾಜ್ಯದಲ್ಲಿ ದೊಡ್ಡಮಟ್ಟದ ದಾಳಿಯಾಗಿಲ್ಲ..!
ದೇಶದ ಹಲವು ರಾಜ್ಯಗಳಲ್ಲಿ ನಡೆದಿರುವ ಭಯೋತ್ಪಾಾದಕ ದಾಳಿಗಳನ್ನು ಗಮನಿಸಿದರೆ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಉಗ್ರರ ದಾಳಿ ನಡೆದಿಲ್ಲ, ಬಾಂಬ್ ಸ್ಫೋಟ ಆಗಿಲ್ಲ. ಇದೊಂದೇ ಕಾರಣದಿಂದಾಗಿ ರಾಜ್ಯ ಪೊಲೀಸರು ಮೈ ಮರೆವಿನಲ್ಲಿದ್ದಾಾರೆ. ಅಂದರೆ ರಾಜ್ಯದಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿಲ್ಲ. ಮುಂಬೈ ಮತ್ತು ದೆಹಲಿ ಭಯೋತ್ಪಾಾದನಾ ನಿಗ್ರಹ ದಳದ ಅಧಿಕಾರಿಗಳು ಆಗಿದ್ದಾಾಗ್ಗೆ ದೇಶದ ಹಲವೆಡೆ ಉಗ್ರರನ್ನು ಬಂಧಿಸಿ ವಿಚಾರಣೆಗೊಳಪಡಿಸುತ್ತಿದೆ. ಬೆಂಗಳೂರು ಸರಣಿ ಸ್ಫೋಟ ನಡೆದ ನಂತರ ಸರ್ಕಾರ ಆಂತರಿಕ ಭದ್ರತಾ ವಿಭಾಗ ಆರಂಭಿಸಿತ್ತು. ಆ ವಿಭಾಗದಲ್ಲೇ ಭಯೋತ್ಪಾದನಾ ನಿಗ್ರಹ ದಳ ಕೂಡ ಇದೆ. ಆದ್ರೆ ರಾಜ್ಯದಲ್ಲಿರುವ ಭಯೋತ್ಪಾಾದನಾ ನಿಗ್ರಹ ದಳ ಇಲ್ಲಿಯವರೆಗೆ ಅಂತಹ ಯಾವುದೇ ಮಹತ್ವದ ಕಾರ್ಯಾಚರಣೆ ನಡೆಸಿಲ್ಲ. ಇದಕ್ಕೆ ಅಲ್ಲಿನ ಅಧಿಕಾರಿಗಳಿಂದ ಸಿಗುವ ಸಿದ್ದ ಉತ್ತರ ರಾಜ್ಯದಲ್ಲಿ ಉಗ್ರರ ಚಟುವಟಿಕೆಗಳು ಇಲ್ಲ ಅನ್ನೋದು. ಆದರೆ ಕೇಂದ್ರೀಯ ತನಿಖಾ ತಂಡಗಳು ಮಾತ್ರ ಕರ್ನಾಟಕವನ್ನು ಉಗ್ರರಿಗೆ ಸುರಕ್ಷಿಿತ ತಾಣ ಅಂತಲೇ ಪರಿಗಣಿಸಿವೆ.
ದೇಶದೆಲ್ಲೆಡೆ ನಡೆದ ಉಗ್ರ ದಾಳಿಗಳಿಗೆ ಇಲ್ಲಿಂದಲೇ ಸ್ಫೋಟಕ ರವಾನೆಯಾಗಿತ್ತು..!
ಕರ್ನಾಟಕದಲ್ಲಿ ಇದೂವರೆಗೂ ದೊಡ್ಡ ಮಟ್ಟದ ಭಯೋತ್ಪಾಾದಕ ದಾಳಿಯಾಗಿಲ್ಲ ನಿಜ. ಆದರೆ ದೇಶದಲ್ಲಿ ಇಂಡಿಯನ್ ಮುಜಾಹಿದೀನ್ ನಡೆಸಿದ ಬಹುತೇಕ ಸ್ಪೋಟಗಳಿಗೆ ರಾಜ್ಯದಿಂದಲೇ ಸ್ಫೋಟಕಗಳು ರವಾನೆಯಾಗಿತ್ತು ನ್ನೋದು ಎನ್ಐಎ ತನಿಖೆಯಿಂದ ಹೊರಬಿದ್ದಿದ್ದ ಭಯಾನಕ ಸತ್ಯ. 2008ರಲ್ಲಿ ನಡೆದ ಅಹಮದಾಬಾದ್ ಸರಣಿ ಸ್ಫೋಟ, ದೆಹಲಿ ಸರಣಿ ಸ್ಫೋಟ, ಜೈಪುರ ಸರಣಿ ಸ್ಪೋಟ, 2010ರಲ್ಲಿ ನಡೆದ ಪುಣೆ ಜರ್ಮನ ಬೇಕರಿ ಸ್ಫೋಟ, ಬೆಂಗಳೂರಿನಲ್ಲಿ ನಡೆದ ಚಿನ್ನಸ್ವಾಾಮಿ ಕ್ರೀಡಾಂಗಣ ಬಳಿ ನಡೆದ ಸ್ಪೋಟ, 2013 ರಲ್ಲಿ ಹೈದ್ರಾಾಬಾದ್ನ ದಿಲ್ಸುಕ್ನಗರದಲ್ಲಿ ನಡೆದ ಸ್ಫೋಟಗಳಿಗೆ ಚಿಕ್ಕಮಗಳೂರು ಮತ್ತು ಭಟ್ಕಳದಿಂದ ಸ್ಫೋಟಕಗಳು ರವಾನೆಯಾಗಿದ್ದವು. ಪುಣೆಯ ಜರ್ಮನ್ ಬೇಕರಿ ಸ್ಫೋಟದ ಷಡ್ಯಂತ್ರ ಮಂಗಳೂರು ಹೊರವಲಯದ ತೋಟವೊಂದರಲ್ಲಿ ರೂಪಿತವಾಗಿತ್ತ್ತು. ತನ್ನ ಸಹಚರರೊಂದಿಗೆ ತೋಟವೊಂದರಲ್ಲಿ ಯೋಜನೆ ರೂಪಿಸಿದ್ದ ಯಾಸಿನ್ ಭಟ್ಕಳ್ ಜರ್ಮನ್ ಬೇಕರಿಗೆ ತೆರಳಿ ತಾನೇ ಬಾಂಬ್ ಇಟ್ಟಿದ್ದ. ಚಿಕ್ಕಮಗಳೂರಿನಲ್ಲಿನ ಕಲ್ಲು ಕ್ವಾಾರಿಗಳಿಂದ ಇಂಡಿಯನ್ ಮುಜಾಹಿದೀನ್ ಉಗ್ರರು ಅಮೋನಿಯಂ ನೈಟ್ರೇಟ್ ಮತ್ತು ಜಿಲೆಟಿನ್ ಕಡ್ಡಿಗಳನ್ನು ದೇಶದ ವಿವಿದೆಡೆ ನಡೆದ ವಿದ್ವಸಂಸಕ ಕೃತ್ಯಗಳಿಗೆ ಸಾಗಿಸುತ್ತಿದ್ದರೆ ನಮ್ಮ ರಾಜ್ಯದ ಪೊಲೀಸರು ಇದು ನಮಗೆ ಸಂಬಂಧಿಸಿದ ವಿಷಯವೇ ಅಲ್ಲ ಎನ್ನುವಂತಿದ್ದರು. ಎನ್ಐಎ ಮತ್ತು ಮುಂಬೈ ಭಯೋತ್ಪಾಾದಕ ನಿಗ್ರಹ ದಳದ ಅಧಿಕಾರಿಗಳ ತನಿಖೆ ವೇಳೆ ಕರ್ನಾಟಕ ಇಂಡಿಯನ್ ಮುಜಾಹಿದೀನ್ ಉಗ್ರರ ಪಾಲಿಗೆ ಸ್ವರ್ಗವಾಗಿದೆ ಅನ್ನೋದು ಬೆಳಕಿಗೆ ಬಂದಿತ್ತು. ಇಷ್ಟೆಲ್ಲ ಆಘಾತಕಾರಿ ಬೆಳವಣಿಗೆಗಳು ನಡೆದ ಮೇಲೂ ನಮ್ಮ ಗುಪ್ತಚರ ಇಲಾಖೆ ಮತ್ತು ಆಂತರಿಕ ಭದ್ರತಾ ವಿಭಾಗ ಎಚ್ಚೆತ್ತುಕೊಂಡಿಲ್ಲ.
ಸುರಕ್ಷಿತ ತಾಣಗಳನ್ನು ಉಗ್ರರು ಹಾಳು ಮಾಡಿಕೊಳ್ಳುವುದಿಲ್ಲ..!
ಕರ್ನಾಟಕ ರಾಜ್ಯ ಉಗ್ರರ ಪಾಲಿಗೆ ಸುರಕ್ಷಿಿತ ತಾಣವಾಗಿ ಹಲವು ವರ್ಷಗಳೇ ಕಳೆದಿವೆ. ದೇಶದ ಹಲವೆಡೆ ದಾಳಿ ನಡೆಸಿದ ಉಗ್ರರಿಗೆ ರಾಜ್ಯದಲ್ಲಿ ದಾಳಿ ನಡೆಸುವುದು ಕಷ್ಟದ ವಿಷಯವೇನಲ್ಲ. ಆದರೆ ತಮಗೆ ಸುರಕ್ಷಿತವಾಗಿರುವ ಪ್ರದೇಶದಲ್ಲಿ ಬಾಂಬ್ ಸ್ಫೋಟ ನಡೆಸಿ ತಮ್ಮ ಸುರಕ್ಷಿತ ತಾಣಗಳನ್ನು ಹಾಳು ಮಾಡಿಕೊಳ್ಳಲು ಉಗ್ರರು ತಯಾರಿಲ್ಲ. ಇದೇ ಕಾರಣದಿಂದಾಗಿಯೇ ನಗರದಲ್ಲಿ ದೊಡ್ಡ ಮಟ್ಟದ ಭಯೋತ್ಪಾಾದಕ ದಾಳಿಗಳಾಗಿಲ್ಲ. 2008 ರ ಸರಣಿ ಸ್ಪೋಟ, ಮಲ್ಲೇಶ್ವರಂ ಸ್ಪೋಟ ಮತ್ತು ಚರ್ಚ್ ಸ್ಟ್ರೀಟ್ ನಲ್ಲಿ ನಡೆದ ಸ್ಫೋಟಗಳಲ್ಲಿ ಕಡಿಮೆ ತೀವ್ರತೆಯ ಸ್ಪೋಟಕಗಳನ್ನು ಬಳಸಿ ಕೃತ್ಯ ಎಸಗಲಾಗಿತ್ತು. ವ್ಯವಸ್ಥಿತವಾಗಿ ಉಗ್ರ ಜಾಲ ಹೊಂದಿರುವ ತಂಡಗಳು ಈ ಮೇಲಿನ ಸ್ಫೋಟಗಳಲ್ಲಿ ಭಾಗಿಯಾಗಿಲ್ಲ. ಈ ಮೂರೂ ಸ್ಫೋಟಗಳಲ್ಲಿ ಅಲ್ ಉಮಾ ಸಂಘಟನೆಯ ಪಾತ್ರ ಇರುವ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ಇದೆ. ಆದರೆ 2010 ರಲ್ಲಿ ನಡೆದ ಚಿನ್ನಸ್ವಾಾಮಿ ಕ್ರೀಡಾಂಗಣದ ಬಳಿ ನಡೆಸ ಸ್ಪೋಟದಲ್ಲಿ ಇಂಡಿಯನ್ ಮುಜಾಹಿದೀನ್ ಉಗ್ರ ಯಾಸಿನ್ ಭಟ್ಕಳ್ ಸ್ವತಃ ಬಾಂಬ್ ಇಟ್ಟಿಿದ್ದ ಅನ್ನೋ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಬಾಂಬ್ ಸ್ಫೋಟ ನಡೆಸುವ ಮೊದಲು ಆತ ತುಮಕೂರಿನಲ್ಲಿ ಮನೆ ಮಾಡಿಕೊಂಡಿದ್ದ. ಇವುಗಳನ್ನು ಬಿಟ್ಟರೆ ಭೀಕರ ಎನ್ನಿಸುವಂತಹ ದಾಳಿಗಳು ನಮ್ಮ ರಾಜ್ಯದಲ್ಲಿ ನಡೆದಿಲ್ಲ.
’’ಉಗ್ರರು ಕರ್ನಾಟಕದಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಿಲ್ಲ ಅಂದ ಮಾತ್ರಕ್ಕೆ ಇಲ್ಲಿ ಭಯೋತ್ಪಾಾದಕರ ಜಾಡು ಇಲ್ಲ ಎಂದರ್ಥವಲ್ಲ. ಉಗ್ರರು ಕರ್ನಾಟಕದಲ್ಲಿ ದಾಳಿ ನಡೆಸಿ ತಮ್ಮ ಸುರಕ್ಷಿತ ತಾಣವನ್ನು ಹಾಳು ಮಾಡಿಕೊಳ್ಳಲು ಸಿದ್ದರಿಲ್ಲ’’ ಅನ್ನೋದು ಮುಂಬೈ ಹಿರಿಯ ಅಧಿಕಾರಿಯೊಬ್ಬರ ಅಭಿಪ್ರಾಾಯ.
ಕರಾವಳಿ ಉಗ್ರರ ಪ್ರಮುಖ ನೆಲೆ..!
ಇಂಡಿಯನ್ ಮುಜಾಹಿದೀನ್ ಎಂಬ ರಕ್ತಪಿಪಾಸು ಉಗ್ರ ಸಂಘಟನೆ ಆರಂಭವಾಗಿದ್ದೇ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ. ಭಟ್ಕಳ ಸಹೋದರರು ಸ್ಥಾಪಿಸಿದ ಈ ಸಂಘಟನೆ ದೇಶದ ಹಲವೆಡೆ ದಾಳಿಗಳನ್ನು ನಡೆಸಿ ನೂರಾರು ಅಮಾಯಕರನ್ನು ಬಲಿ ಪಡೆದಿದೆ. ಸದ್ಯ ಪಾಕಿಸ್ತಾನದಲ್ಲಿ ತಲೆ ಮರೆಸಿಕೊಂಡಿರುವ ಇಕ್ಬಾಾಲ್ ಭಟ್ಕಳ್, ರಿಯಾಜ್ ಭಟ್ಕಳ್ ಮತ್ತು ಎನ್ಐಎ ವಶದಲ್ಲಿರುವ ಯಾಸಿನ್ ಭಟ್ಕಳ ಸಹೋದರರು ಇಂಡಿಯನ್ ಮುಜಾಹಿದೀನ್ ಸಂಘಟನೆಯನ್ನು ಸ್ಥಾಾಪಿಸಿ ದೇಶಾಧ್ಯಂತ ಮುಸ್ಲಿಂ ಯುವಕರನ್ನು ತಮ್ಮ ಸಂಘಟನೆಯತ್ತ ಸೆಳೆದಿದ್ದರು. ಈಗ ಈ ಕೆಲಸವನ್ನು ಅದೇ ಭಟ್ಕಳದ ಮತ್ತೊಬ್ಬ ಉಗ್ರ ಶಫಿ ಅರ್ಮಾರ್ ಮಾಡುತ್ತಿದ್ದಾಾನೆ. ಈ ಶಫಿ ಅರ್ಮಾರ್ ಐಸಿಸ್ ಗೆ ಭಾರತೀಯ ಯುವಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದ ಸುಲ್ತಾಾನ್ ಅರ್ಮಾರ್ನ ತಮ್ಮ. ಸಿರಿಯಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಸುಲ್ತಾಾನ್ ಅರ್ಮಾರ್ ಸಾವನ್ನಪ್ಪಿದ ನಂತರ ಈಗ ಶಫೀ ಅರ್ಮಾರ್ ಐಸಿಸ್ಗೆ ಯುವಕರನ್ನು ನೇಮಕ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾಾನೆ. ಈತನ ಕೆಲಸಕ್ಕೆ ಭಟ್ಕಳದ ಕೆಲವು ಮುಸ್ಲಿಂ ಯುವಕರು ಮತ್ತು ಬೆಂಗಳೂರಿನಲ್ಲಿರುವ ಕೆಲ ಸಾಫ್ಟ್ವೇರ್ ಎಂಜಿನಿಯರ್ಗಳು ಸಾಥ್ ಕೊಡುತ್ತಿದ್ದಾರೆ. ಶುಕ್ರವಾರ ರಾಜ್ಯದಲ್ಲಿ ಬಂಧಿತರಾದ ಆರು ಮಂದಿ ಶಂಕಿತ ಉಗ್ರರು ಇದೇ ಶಫಿ ಅರ್ಮಾರ್ ಆದೇಶದಂತೆ ಕೆಲಸ ಮಾಡುತ್ತಿದ್ದರು ಎಂದು ಎನ್ಐಎ ಅಧಿಕಾರಿಗಳ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಸಾಮಾಜಿಕ ತಾಣಗಳ ಮೂಲಕ ಉಗ್ರರ ಸೆಳೆಯುವ ಯತ್ನ..!
ಫೇಸ್ಬುಕ್ ಮತ್ತು ಟ್ವಿಟ್ಟರ್ಗಳ ಮೂಲಕ ಮುಸ್ಲಿಂ ಯುವಕರನ್ನು ಭಯೋತ್ಪಾಾದಕ ಕೃತ್ಯಗಳಿಗೆ ಪ್ರೇರೇಪಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಟ್ವಿಿಟ್ಟರ್ ಮೂಲಕ ಐಸಿಸ್ಗೆ ಸೇರಲು ಮುಸ್ಲಿಂ ಯುವಕರನ್ನು ಪ್ರಚೋಧಿಸುತ್ತಿದ್ದ ಆರೋಪದ ಮೇಲೆ ಕಳೆದ ವರ್ಷ ಮಸ್ರೂರ್ ಬಿಸ್ವಾಾಸ್ ಮೆಹದಿಯನ್ನು ಬಂಧಿಸಲಾಗಿತ್ತು. ಆಗಲೇ ಗೊತ್ತಾಗಿದ್ದು, ಉಗ್ರರು ಸಾಮಾಜಿಕ ಜಾಲತಾಣಗಳನ್ನು ಬಳಸಿ ವಿಧ್ಯಾಾವಂತ ಯುವಕರನ್ನು ಉಗ್ರ ಸಂಘಟನೆಗಳತ್ತ ಸೆಳೆಯುತ್ತಿದ್ದಾಾರೆ ಎನ್ನೋ ಆಘಾತಕಾರಿ ವಿಚಾರ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಯುವಕರನ್ನು ಹಾದಿ ತಪ್ಪಿಸಿ ಉಗ್ರಗಾಮಿ ಸಂಘಟನೆಗಳಿಗೆ ಸೆಳೆಯುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿಿದೆ. ಎಂಜಿನಿಯರಿಂಗ್ ಮತ್ತು ವೈಧ್ಯಕೀಯ ವಿಧ್ಯಾಾರ್ಥಿಗಳು ಮತ್ತು ಪ್ರತಿಷ್ಟಿತ ಕಂಪನಿಗಳಲ್ಲಿ ಕೆಲಸ ಮಾಡುವ ಟೆಕ್ಕಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಉಗ್ರ ಸಂಘಟನೆಗಳು ಯುವಕರನ್ನು ಸೆಳೆಯುವ ಕೆಲಸ ಮಾಡುತ್ತಿವೆ. ಆದರೆ ಈ ಪ್ರಯತ್ನವನ್ನು ತಡೆಯುವ ಕೆಲಸ ರಾಜ್ಯ ಪೊಲೀಸರಿಂದ ಸಾಧ್ಯವಾಗಿಲ್ಲ.
ಆಂತರಿಕ ಭದ್ರತಾ ವಿಭಾಗದಲ್ಲಿ ಪರಿಣಿತ ಅಧಿಕಾರಿಗಳಿಲ್ಲ..!
ಭಯೋತ್ಪಾಾದನಾ ನಿಗ್ರಹ ದಳ, ನಕ್ಸಲ್ ನಿಗ್ರಹದಳ, ಕರಾವಳಿ ಭದ್ರತಾ ಪಡೆ ಮತ್ತು ಗುಪ್ತಚರ ವಿಭಾಗಗಳನ್ನೊಳಗೊಂಡ ಆಂತರಿಕ ಭದ್ರತಾ ವಿಭಾಗ ರಾಜ್ಯದಲ್ಲಿ ಕೆಲಸ ಮಾಡುತ್ತಿಿದೆ. ಸರಣಿ ಸ್ಫೋಟ ನಡೆದ ನಂತರ ಈ ವಿಭಾಗವನ್ನು ಆರಂಭಿಸಲಾಗಿದೆ. ಎಡಿಜಿಪಿ ಮಟ್ಟದ ಅಧಿಕಾರಿ ಈ ವಿಭಾಗದ ಮುಖ್ಯಸ್ಥರಾಗಿದ್ದಾಾರೆ. ಆದರೆ ಭಯೋತ್ಪಾಾದನೆ, ಉಗ್ರರ ದಾಳಿ ಇಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ಆಂತರಿಕ ಭದ್ರತಾ ಪಡೆಯ ಸಾಧನೆ ಏನೇನು ಇಲ್ಲ. ರಾಜ್ಯ ಉಗ್ರರ ಅಡಗುತಾಣದಂತಾಗಿದ್ದರೂ ಭತೋತ್ಪಾದಕ ನಿಗ್ರಹ ದಳ ಇಲ್ಲಿಯವರೆಗೂ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿಯೇ ಇಲ್ಲ. ಆಂತರಿಕ ಭದ್ರತಾ ವಿಭಾಗಲ್ಲಿ ಪರಿಣಿತ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಭಯೋತ್ಪಾಾದನೆ, ಉಗ್ರರ ಕುರಿತಾಗಿ ತಿಳಿದುಕೊಂಡಿರುವ ಅಧಿಕಾರಿಗಳೇ ಆ ವಿಭಾಗದಲ್ಲಿಲ್ಲ. ಈ ವಿಭಾಗಕ್ಕೆ ಬರಲು ಧಕ್ಷ ಅಧಿಕಾರಿಗಳು ಮನಸ್ಸು ಮಾಡುವುದಿಲ್ಲ. ಇನ್ನು ಇಲ್ಲಿರುವ ಗುಪ್ತಚರ ವಿಭಾಗದಲ್ಲಿ ಸೂಕ್ತ ಅಧಿಕಾರಿಗಳೇ ಇಲ್ಲ. ಸೈಬರ್ ಮಾನಿಟರಿಂಗ್ ಎಂಬ ಅರ್ಥವೇ ಗೊತ್ತಿಲ್ಲದಂತೆ ಈ ವಿಭಾಗ ಕಾರ್ಯನಿರ್ವಹಿಸುತ್ತಿಿದೆ. ತಂತ್ರಜ್ಞಾಾನದ ಅರಿವು, ಧಕ್ಷ ಅಧಿಕಾರಿಗಳ ಪಡೆ, ಅತ್ಯಾಧುನಿಕ ವ್ಯವಸ್ಥೆ ಯಾವುದೂ ಆಂತರಿಕ ಭದ್ರತಾ ಪಡೆಯಲ್ಲಿಲ್ಲ. ಹೀಗೆ ಬದುಕಿದ್ದೂ ಸತ್ತಂತಿರುವ ಈ ವಿಭಾಗದಿಂದ ಭಯೋತ್ಪಾಾದಕರ ಹೆಡೆಮುರಿ ಕಟ್ಟಲು ಸಾಧ್ಯವೇ ಇಲ್ಲ.
ಇದೇ ರೀತಿ ರಾಜ್ಯದ ಅಧಿಕಾರಿಗಳು ಉಗ್ರ ಚಟುವಟಿಕೆಗಳ ಮೇಲೆ ನಿಗಾ ಇಡದೇ ತಮಗೆ ಸಂಬಂಧವೇ ಇಲ್ಲದಂತೆ ಇದ್ದರೆ ಮುಂದೊಂದು ದಿನ ರಾಜ್ಯ ಭೀಕರ ದಾಳಿಗೆ ತುತ್ತಾಾಗೋದು ನಿಶ್ಚಿತ. ಅದಾದ ನಂತರ ಎಚ್ಚೆೆತ್ತುಕೊಳ್ಳುವ ಬದಲು ಈಗಲೇ ಆಂತರಿಕ ವಿಭಾಗವನ್ನು ಬಲಪಡಿಸುವ ಅಗತ್ಯತೆ ಇದೆ.
ರಾಜ್ಯದಲ್ಲಿ ಉಗ್ರರ ಕರಾಳ ಇತಿಹಾಸ
* 2000 ರಲ್ಲಿ ನಡೆದ ಹುಬ್ಬಳ್ಳಿ, ಗುಲ್ಬರ್ಗಾ ಮತ್ತು ಬೆಂಗಳೂರಿನಲ್ಲಿ ನಡೆದ ಚರ್ಚ್ ಸ್ಪೋಟ
* 2005 ಡಿ.28 ರಂದು ಬೆಂಗಳೂರಿನಲ್ಲಿ ನಡೆದ ಐಐಎಸ್ಸಿ ದಾಳಿ, ವಿಜ್ಞಾಾನಿಯೊಬ್ಬರು ಉಗ್ರರ ಗುಂಡಿಗೆ ಬಲಿಯಾಗಿದ್ದರು
* 2008 ಮೇ.10ರಂದು ನಡೆದ ಹುಬ್ಬಳ್ಳಿಯಲ್ಲಿ ಜೆಎಂಎಫ್ಸಿ ಕೋರ್ಟ್ನಲ್ಲಿ ನಡೆದ ಸ್ಫೋಟ
*2008 ಜು.25ರಂದು ಬೆಂಗಳೂರಿನಲ್ಲಿ ನಡೆದಿದ್ದ ಸರಣಿ ಸ್ಪೋಟ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
* 2010 ಏ.17 ರಂದು ನಡೆದ ಚಿನ್ನಸ್ವಾಾಮಿ ಕ್ರೀಡಾಂಗಣ ಬಳಿಯ ಸ್ಫೋಟ
* 2013 ಏ.17 ರಂದು ನಡೆದ ಮಲ್ಲೇಶ್ವರಂ ಬಾಂಬ್ ಸ್ಪೋಟ
* 2014 ಡಿ.28 ರಂದು ನಡೆದ ಚರ್ಚ್ಸ್ಟ್ರೀಟ್ ಬಾಂಬ್ ಸ್ಫೋಟ. ಘಟನೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು.
ಉಗ್ರರ ಕರಾಳ ಹೆಜ್ಜೆ
*2012 ರಲ್ಲಿ ರಾಜ್ಯದ ಪ್ರಮುಖ ಪತ್ರಕರ್ತರ ಹತ್ಯೆಗೆ ಸಂಚು ರೂಪಿಸಿದ ಆಧಾರದ ಮೇಲೆ 12 ಮಂದಿಯನ್ನು ಬಂಧಿಸಲಾಗಿತ್ತು.
*2014ರ ಅ.6ರಂದು ವಿವೇಕನಗರದಲ್ಲಿ ತಮಿಳುನಾಡು ಪೊಲೀಸರು ಇಬ್ಬರು ಅಲ್ ಉಮಾ ಸಂಘಟನೆಯಉಗ್ರರನ್ನು ಬಂಧಿಸಿದ್ದರು.
* 2014 ರ ಡಿ.13 ರಂದು ಐಸಿಸ್ ಟ್ವಿಟ್ಟರ್ ಕಿಂಗ್ಪಿನ್ ಮೆಹದಿ ಮಸ್ರೂರ್ ಬಿಸ್ವಾಾಸ್ನನ್ನು ಬಂಧಿಸಲಾಗಿತ್ತು.
* 2015ರ ಜ.8ರಂದು ಬೆಂಗಳೂರು ಮತ್ತು ಭಟ್ಕಳದಲ್ಲಿ ಆರು ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು
* 2015 ರ ಜ.24 ರಂದು ಅಸ್ಸಾಾಂ ನ ಬೋಡೋ ಉಗ್ರ ಬಿರ್ಕಾಂಗ್ ನರ್ಜಾರಿ ಬಂಧನ.
* 2015 ಜ.26 ಎಲೆಕ್ಟ್ರಾಾನಿಕ್ ಸಿಟಿಯಲ್ಲಿ ಬೋಡೋ ಉಗ್ರ ಸಂಜು ಬೋರ್ಡ್ ಲಾಯ್ ಬಂಧನ.
* 2015 ರ ಜೂನ್ 6 ರಂದು ಪೀಣ್ಯಾದಲ್ಲಿ ನಾಲ್ವರು ಬೋಡೋ ಉಗ್ರರನ್ನು ಬಂಧಿಸಲಾಗಿತ್ತು
* 2015ರ ಡಿಸೆಂಬರ್ 25 ರಂದು ನಾಗಾ ಉಗ್ರ ಅಟೋಷಿ ಚೋಫೆಯನ್ನು ಬಂಧಿಸಲಾಗಿತ್ತು
* 2016 ಜ.6 ರಂದು ಆಲ್ಖೈದಾ ಶಂಕಿತ ಉಗ್ರ ಸೈಯದ್ ಅನ್ಸರ್ ಷಾ ಖಾಸ್ಮಿಿಯನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು.
*2016 ಜ.22ರಂದು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಮೇಲೆ ಎನ್ಐಎ ಅಧಿಕಾರಿಗಳು ಬೆಂಗಳೂರು, ತುಮಕೂರು ಮತ್ತು ಮಂಗಳೂರಿನಲ್ಲಿ ಆರು ಶಂಕಿತರ ಬಂಧಿಸಿದ್ದಾಾರೆ.
–ಶಶಿವರ್ಣಂ
Like this:
Like ಲೋಡ್ ಆಗುತ್ತಿದೆ...