ಭಾರತ- ಇಸ್ರೇಲ್ ಸಂಬಂಧವನ್ನು ಜಗತ್ತೇಕೆ ಬೆರಗುಗಣ್ಣಿನಿಂದ ನೋಡುತ್ತೆ..?

2ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್​ಗೆ ಭೇಟಿ ನೀಡಿದಾಗ ಇಡೀ ವಿಶ್ವ ಆ ಬೆಳವಣಿಗೆಯನ್ನು ಬೆರಗುಗಣ್ಣಿನಿಂದ ನೋಡಿತ್ತು. ಇದಾದ ಆರು ತಿಂಗಳ ನಂತರ ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತಕ್ಕೆ ಭೇಟಿ ನೀಡಿದ್ದಾರೆ.. ಜಗತ್ತು ಮತ್ತೆ ಈ ಬೆಳವಣಿಗೆಯನ್ನು ಅತ್ಯಾಶ್ಚರ್ಯದಿಂದ ನೋಡುತ್ತಿದೆ. ಜಗತ್ತಿನ ಪುಟ್ಟ ರಾಷ್ಟ್ರವಾದ ಇಸ್ರೇಲ್ ಪ್ರಧಾನಿ ಭಾರತಕ್ಕೆ ಭೇಟಿ ನೀಡೋದು.. ವಿಶ್ವದ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ ಭಾರತದ ಪ್ರಧಾನಿ ಇಸ್ರೇಲ್​ನಂತಹ ಪುಟ್ಟ ರಾಷ್ಟ್ರಕ್ಕೆ ಭೇಟಿ ನೀಡೋದು ಐತಿಹಾಸಿಕ ಬೆಳವಣಿಗೆಗಳು ಎಂದು ಇತಿಹಾಸ ದಾಖಲಿಸಿಕೊಳ್ಳುತ್ತೆ.

ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೇತನ್ಯಾಹು ಆರು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದಿಳಿದಿದ್ದಾರೆ. 15 ವರ್ಷಗಳ ನಂತರ ಇಸ್ರೇಲ್​ನ ಪ್ರಧಾನಿಯೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಪ್ರಧಾನಿ ಮೋದಿ ತಮ್ಮ ಐತಿಹಾಸಿಕ ಇಸ್ರೇಲ್​ ಪ್ರವಾಸಕ್ಕೆ ಹೋಗಿಬಂದ ಆರು ತಿಂಗಳಲ್ಲೇ ಇಸ್ರೇಲ್​ ಪ್ರಧಾನಿ ನೇತನ್ಯಾಹು ಭಾರತಕ್ಕೆ ಬಂದಿಳಿದಿದ್ಧಾರೆ. ಕಳೆದ ವರ್ಷ ಪ್ರಧಾನಿ ಮೋದಿ ಇಸ್ರೇಲ್​ಗೆ ಭೇಟಿ ನೀಡಿದಾಗ ವಿಶ್ವದ ಹಲವು ದೇಶಗಳು ಅಚ್ಚರಿಗೊಳಗಾಗಿದ್ದವು. ಸ್ವಾತಂತ್ರ್ಯಾ ನಂತರ ಯಾವೊಬ್ಬ ಪ್ರಧಾನಿಯೂ ಇಸ್ರೇಲ್​ಗೆ ಬೇಟಿ ನೀಡಿರಲಿಲ್ಲ. ಯಾಕೆಂದ್ರೆ ಇಸ್ರೇಲ್​ ಎಂಬ ಯಹೂದಿಗಳ ದೇಶಕ್ಕೆ ಭೇಟಿ ನೀಡಿದರೆ ದೇಶದ ಮುಸ್ಲಿಮರು, ಮುಸ್ಲಿಂ ರಾಷ್ಟ್ರಗಳು, ಅರಬ್ ರಾಷ್ಟ್ರಗಳ ಮುಂದೆ ತಮ್ಮ ಸೆಕ್ಯುಲರಿಸಂನ ಮುಖವಾಡ ಕಳಚಿಬೀಳಲಿದೆ ಅನ್ನೋ ಅವ್ಯಕ್ತ ಭಯ ದೇಶವನ್ನಾಳಿದ ಹಲವು ಪ್ರಧಾನಿಗಳಿಗಿತ್ತು.. ಅದೇ ಕಾರಣಕ್ಕೆ ಯಾರೂ ಇಸ್ರೇಲ್​ಗೆ ಹೋಗುವ ರಿಸ್ಕ್​ ತೆಗೆದುಕೊಂಡಿರಲಿಲ್ಲ. ಮೋದಿ ಇಸ್ರೇಲ್​ಗೆ ಭೇಟಿ ನೀಡಿದಾಗ ನಮ್ಮದೇ ದೇಶದ ಸೋ ಕಾಲಡ್​ ಸೆಕ್ಯುಲರಿಸ್ಟ್​ಗಳು ಮೋದಿಯ ನಡೆಯನ್ನು ಅನುಮಾನದಿಂದ ನೋಡಿದ್ದರು..
4
2008ರಲ್ಲಿ ಅಂದಿನ ಗೃಹ ಸಚಿವರಾಗಿದ್ದ ಎಲ್.ಕೆ. ಅಡ್ವಾಣಿ, 2008ರಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, 2014ರಲ್ಲಿ ಗೃಹ ಸಚಿವ ರಾಜ್ ನಾಥ್ ಸಿಂಗ್, 2015ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಕಳೆದ ವರ್ಷ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಭೇಟಿ ನೀಡಿದ್ದರು. ಈ ಸಾಲು ಸಾಲು ಭೇಟಿಗಳು ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯಕ್ಕೆ ಮುನ್ನುಡಿ ಬರೆದಿದ್ದವು. ಕಳೆದ ವರ್ಷ ಮೋದಿ ಭೇಟಿ ನೀಡಿದ್ದು ಎರಡೂ ರಾಷ್ಟ್ರಗಳ ಸಂಬಂಧ ವೃದ್ಧಿಯಲ್ಲಿ ಮೈಲಿಗಲ್ಲಿನಂತಹ ಬೆಳವಣಿಗೆಯಾಗಿತ್ತು. ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೇತನ್ಯಾಹು ಭಾರತಕ್ಕೆ ಭೇಟಿ ನೀಡುವ ವೇಳೆ ತಮ್ಮ ವಿಮಾನಕ್ಕೆ ಭಾರತದ ತ್ರಿವರ್ಣ ಧ್ವಜವನ್ನು ಕಟ್ಟಿಕೊಂಡು ಬಂದಿದ್ದರು. ಭಾರತದ ಮೇಲಿನ ಇಸ್ರೇಲ್ ಪ್ರೀತಿಗೆ ಇದೊಂದು ಉದಾಹರಣೆ ಸಾಕಿತ್ತು. ಇಸ್ರೇಲ್ ಪ್ರಧಾನಿಯನ್ನು ಸ್ವಾಗತಿಸಲು ಪ್ರಧಾನಿ ಮೋದಿ ಶಿಷ್ಟಾಚಾರವನ್ನು ಬದಿಗೊತ್ತಿ ವಿಮಾನ ನಿಲ್ದಾಣಕ್ಕೆ ಹೋಗಿ ಬೆಂಜಮಿನ್​ ಅವರನ್ನು ಪ್ರೀತಿಯಿಂದ ಆಲಂಗಿಸಿಕೊಂಡು ಬರಮಾಡಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಜುಲೈನಲ್ಲಿ ಇಸ್ರೇಲ್ ಗೆ ಭೇಟಿ ನೀಡಿದ್ದಾಗ ಇಸ್ರೇಲ್ ಪ್ರಧಾನಿ ನೇತನ್ಯಾಹು ಸಹ ಶಿಷ್ಟಾಚಾರ ಬದಿಗಿರಿಸಿ ನಮ್ಮ ಪ್ರಧಾನಿಯನ್ನು ಸ್ವಾಗತಿಸಿದ್ದರು.

ಭಾರತ ದೇಶ ಹೊಂದಿರುವ ಭೂ ಭಾಗದ ಅಗಾಧತೆ, 130 ಕೋಟಿ ಜನಸಂಖ್ಯೆಗೂ ಇಸ್ರೇಲ್ ಎಂಬ ರಾಷ್ಟ್ರ ಯಾವ ಕಾರಣಕ್ಕೂ ಈ ದೇಶದೊಂದಿಗೆ ಹೊಂದಾಣಿಕೆಯಾಗುವುದಿಲ್ಲ.. ಇಸ್ರೇಲ್​ ಎಂಬ ಪುಟ್ಟ ರಾಷ್ಟ್ರದ ಜನಸಂಖ್ಯೆ 88 ಲಕ್ಷ. ವಿಸ್ತೀರ್ಣದಲ್ಲಿ ನಮ್ಮ ಕರ್ನಾಟಕದ ಒಂಭತ್ತನೇ ಒಂದು ಭಾಗ ಮಾತ್ರ ಇಸ್ರೇಲ್​ನದ್ದು. ಆದ್ರೆ ಆ ಪುಟ್ಟ ರಾಷ್ಟ್ರ ಇವತ್ತು ಜಗತ್ತಿನ ಬಲಾಡ್ಯ ರಾಷ್ಟ್ರಗಳಲ್ಲೊಂದು. ಮಿಲಿಟರಿ ಸಾಮರ್ಥ್ಯದಲ್ಲಿ ಯಾವುದೇ ರಾಷ್ಟ್ರ ಎದುರಿಗೆ ಬಿದ್ದರೂ ತನ್ನ ಮಿಲಿಟರಿ ಶಕ್ತಿಯಿಂದ ಸುಲಭವಾಗಿ ಬಡಿದುಬಿಡುವಂತಹ ದೇಶ ಇಸ್ರೇಲ್..

1947 ರಲ್ಲಿ ಭಾರತ ಸ್ವಾತಂತ್ರ್ಯಗೊಂಡರೆ, ತನ್ನದೊಂದು ದೇಶವಿಲ್ಲದೇ ವಿಶ್ವಾದ್ಯಂತ ಮಾರಣಹೋಮಗಳಿಗೆ ತುತ್ತಾಗಿದ್ದರು ಯಹೂದಿಗಳು. ಬದುಕುಳಿದು ಹಲವು ದೇಶಗಳಲ್ಲಿ ಹಂಚಿಹೋಗಿದ್ದ ಯಹೂದಿಗಳೆಲ್ಲರೂ ಸೇರಿ 1948 ರಲ್ಲಿ ಸ್ವತಂತ್ರ ದೇಶ ಇಸ್ರೇಲ್​ ಅನ್ನು ರೂಪಿಸಿಕೊಂಡರು. ಭಾರತದ ಸುತ್ತ ಪಾಕಿಸ್ತಾನ, ಚೀನಾ ದೇಶಗಳು ಬದ್ದವೈರಿಗಳಂತೆ ಕಾಲು ಕೆರೆದು ಜಗಳಕ್ಕೆ ನಿಂತಿದ್ದರೆ, ಇಸ್ರೇಲ್​ ಎಂಬ ಪುಟ್ಟ ರಾಷ್ಟ್ರದ ಸುತ್ತ ಸಿರಿಯಾ, ಇರಾಕ್, ಇರಾನ್, ಪ್ಯಾಲಿಸ್ತೇನ್, ಸೌದಿ ಅರೇಬಿಯಾ, ಈಜಿಫ್ಟ್​ ಎಂಬ ಶತೃ ದೇಶಗಳನ್ನಿಟ್ಟುಕೊಂಡಿದೆ. ಈ ಎಲ್ಲ ದೇಶಗಳೂ ಇಸ್ರೇಲ್​ ಎಂದರೆ ಬೆಂಕಿಯುಗುಳುತ್ತವೆ. ಇದುವರೆಗೂ 17 ಯುದ್ಧಗಳನ್ನು ಮಾಡಿರುವ ಇಸ್ರೇಲ್ ಒಂದರಲ್ಲೂ ಸೋಲು ಕಂಡೇ ಇಲ್ಲ.. ಇಂತದ್ದೊಂದು ರಾಷ್ಟ್ರದ ಸ್ನೇಹ ಭಾರತಕ್ಕೆ ಮಿಲಿಟರಿ ದೃಷ್ಟಿಯಿಂದ ಅಷ್ಟೊಂದು ಪ್ರಾಮುಖ್ಯತೆ ಇದೆ.

ಕೇವಲ ಮಿಲಿಟರಿ ಶಕ್ತಿಯಿಂದಷ್ಟೇ ಅಲ್ಲ.. ಕೃಷಿಯಲ್ಲಿ ಅತ್ಯಾಧುನಿಕ ತಾಂತ್ರಿಕತೆ ಅಳವಡಿಸಿಕೊಂಡು ನೀರೇ ಇಲ್ಲದ ಬರಡು ನೆಲದಲ್ಲಿ ಬಂಗಾರ ಬೆಳೆಯುತ್ತಿದೆ ಇಸ್ರೇಲ್. ಕೃಷಿ ಕ್ಷೇತ್ರದಲ್ಲಿ ಇಸ್ರೇಲ್ ಸಾಧಿಸಿರುವ ಪ್ರಗತಿಯನ್ನು ಇಡೀ ವಿಶ್ವ ಅಚ್ಚರಿಯಿಂದ ನೋಡುತ್ತಿದೆ. ಅಷ್ಟೇ ಅಲ್ಲ.. ನೀರೇ ಇಲ್ಲದ ನಾಡಾದ ಇಸ್ರೇಲ್​ ಇವತ್ತು ಸಮುದ್ರದಿಂದ ಉಪ್ಪು ನೀರನ್ನು ಸಿಹಿ ನೀರನ್ನಾಗಿಸುವ ತಂತ್ರಜ್ಞಾನ ಕಂಡುಕೊಂಡಿದೆ. ಕಳೆದ ವರ್ಷ ಮೋದಿ ಇಸ್ರೇಲ್ ಪ್ರವಾಸದಲ್ಲಿ ಬೆಂಜಮಿನ್ ನೆತನ್ಯಾಹು, ಮೋದಿ ಅವರನ್ನು ಸಮುದ್ರದ ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ತೋರಿಸಿಕೊಟ್ಟಿದ್ದರು.

ಕೃಷಿ ಪ್ರಧಾನವಾದ ರಾಷ್ಟ್ರ ಭಾರತ ಇಸ್ರೇಲ್​ ಎಂಬ ಪುಟ್ಟ ರಾಷ್ಟ್ರದಿಂದ ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕಾದ ತಂತ್ರಜ್ಞಾನ ಬಹಳಷ್ಟಿದೆ. ನಮ್ಮ ದೇಶದ ನಗರಗಳು ಕುಡಿಯುವ ನೀರಿಗಾಗಿ ಆಹಾಕಾರವೆದ್ದಿರುವ ಈ ಸ್ಥಿತಿಯಲ್ಲಿ ಇಸ್ರೇಲ್​ನ ಸಮುದ್ರದ ನೀರನ್ನು ಸಿಹಿನೀರನ್ನಾಗಿ ಪರಿವರ್ತಿಸುವ ತಂತ್ರಜ್ಞಾನ ಅಕ್ಷಯ ಪಾತ್ರೆಯಂತೆಯೇ ಸರಿ. ಭಾರತದ ಮೂರೂ ಕಡೆ ಸಮುದ್ರವೇ ಆವರಿಸಿರುವುದರಿಂದ ಈ ತಂತ್ರಜ್ಞಾನ ಭಾರತಕ್ಕೆ ಬಂದರೆ ಇದು ಒಂದು ನವಯುಗದ ಕ್ರಾಂತಿಗೆ ಮುನ್ನುಡಿಯಾಗಲಿದೆ..
ಭಾರತದೊಂದಿಗೆ ಬಾಂಧವ್ಯ ಗಟ್ಟಿ ಮಾಡಿಕೊಳ್ಳಲು ಇಸ್ರೇಲ್​ಗೆ ಐತಿಹಾಸಿಕ ಕಾರಣ ಇದೆ. ಇಡೀ ಜಗತ್ತೇ ಯಹೂದಿಗಳನ್ನು ಮಾರಣಹೋಮ ನಡೆಸುತ್ತಿದ್ದಾಗ ಅವರಿಗೆ ಜಾಗ ಕೊಟ್ಟಿದ್ದು ಭಾರತ. ಭಾರತದಲ್ಲಿ ಮಾತ್ರ ಯಹೂದಿಗಳ ಮೇಲೆ ಯಾವುದೇ ಹಿಂಸಾಚಾರ ನಡೆದ ಉದಾಹರಣೆಗಳಿಲ್ಲ. 1500 ವರ್ಷಗಳ ಹಿಂದೆಯೇ ಯಹೂದಿಗಳು ಭಾರತಕ್ಕೆ ಬಂದ ಮತ್ತು ಅಲ್ಲಿಂದ ಇಸ್ರೇಲ್​ ಎಂಬ ರಾಷ್ಟ್ರ ಸೃಷ್ಟಿಯಾಗುವವರೆಗೂ ಇಲ್ಲೇ ಇದ್ದ ಉದಾಹರಣೆಗಳಿವೆ. ಇಸ್ರೇಲ್ ರಾಷ್ಟ್ರವಾದ ಮೇಲೆ ಎಲ್ಲ ದೇಶಗಳಿಂದ ಇಸ್ರೇಲ್​ಗೆ ಯಹೂದಿಗಳು ಹೋದಂತೆ ಇಲ್ಲಿಂದಲೂ ಅಲ್ಲಿಗೆ ಹೋಗಿದ್ದಾರೆ. ಆದರೂ ಭಾರತವನ್ನು ಮಾತೃಭೂಮಿಯಂತೆ ಫೂಜಿಸುವ ಯಹೂದಿಗಳಿದ್ದಾರೆ. ಇದೇ ಕಾರಣಕ್ಕೆ ಭಾರತವೆಂದರೆ ಇಸ್ರೇಲ್​ ಪಾಲಿಗೆ ಅತ್ಯಂತ ನಂಬುಗೆಯ ರಾಷ್ಟ್ರ…

ಇಸ್ರೇಲ್ ಮತ್ತು ಭಾರತದ ಬಾಂಧವ್ಯದಿಂದ ಎರಡೂ ರಾಷ್ಟ್ರಗಳಿಗೂ ಭದ್ರತೆ ಮತ್ತು ವ್ಯಾವಹಾರಿಕ ದೃಷ್ಟಿಯಲ್ಲಿ ಭಾರೀ ಅನುಕೂಲಗಳಿವೆ. ಭಾರತಕ್ಕಂತೂ ಇಸ್ರೇಲ್​ನ ಸ್ನೇಹ ಮಿಲಿಟರಿ ದೃಷ್ಟಿಯಿಂದ ಅತ್ಯಂತ ಪ್ರಮುಖ ವಿಚಾರ. ಇಸ್ರೇಲ್​ ಎಂಬ ಪುಟ್ಟ ರಾಷ್ಟ್ರದ ಮಿಲಿಟರಿ ಶಕ್ತಿ, ಆ ದೇಶದ ಶಕ್ತಿಶಾಲಿ ಇಂಟೆಲಿಜೆನ್ಸ್​ ಏಜೆನ್ಸಿ ಮೊಸ್ಸಾದ್​ ಇಡೀ ವಿಶ್ವಕ್ಕೇ ಮಾದರಿ. ಒಬ್ಬ ಇಸ್ರೇಲಿಗನನ್ನು ಕೊಂದರೆ ಅದಕ್ಕೆ ಪ್ರತಿಯಾಗಿ ಐವತ್ತು ಜನ ಶತೃಗಳನ್ನು ಕೊಲ್ಲುತ್ತೇವೆ ಅನ್ನೋದು ಇಸ್ರೇಲ್​ನ ಶಕ್ತಿಶಾಲಿ ಇಂಟೆಲಿಜೆನ್ಸ್ ಏಜೆನ್ಸಿ ಮೊಸಾದ್​ನ ಧ್ಯೇಯ ವಾಕ್ಯ. ತನ್ನ ಪ್ರಜೆಯನ್ನು ಯಾವುದಾದರೂ ಒಂದು ದೇಶ ಕೊಲೆ ಮಾಡಿದರೆ ಅದೇ ದೇಶದೊಳಕ್ಕೆ ನುಗ್ಗಿ ಅಲ್ಲಿನ ಐವತ್ತು ಮಂದಿಯ ಹೆಣವುರುಳಿಸುವ ಕಲೆ ಇಸ್ರೇಲಿಗಳ ರಕ್ತದಲ್ಲೇ ಇದೆ. ಇಂತಹ ದೇಶದಿಂದ ನಮ್ಮ ದೇಶದ ಭದ್ರತಾ ಸಂಸ್ಥೆಗಳು ಕಲಿಯಬೇಕಿರುವುದು ಸಾಕಷ್ಟಿದೆ. ಇದೇ ಕಾರಣಕ್ಕೆ ಮೋದಿ ಇಸ್ರೇಲ್​ ಜೊತೆಗೆ ಸಂಬಂಧ ಸುಧಾರಣೆ ಬಯಸುತ್ತಿರುವುದು. ವಿಶ್ವದ ಬಲಾಡ್ಯ ಮಿಲಿಟರಿ ರಾಷ್ಟ್ರಗಳಿಗೆ ಯುದ್ಧ ಸಾಮಗ್ರಿಗಳು ಮತ್ತು ಯುದ್ಧ ವಿಮಾನಗಳನ್ನು ಮಾರಾಟ ಮಾಡುವ ಮೂಲಕ ಅತಿ ದೊಡ್ಡ ಯಶಸ್ಸು ಗಳಿಸಿರುವುದು ಇಸ್ರೇಲ್​ನ ಶಕ್ತಿ.

1ಇಸ್ರೇಲ್ ತಯಾರಿಸುವ ಯುದ್ಧ ಸಾಮಗ್ರಿಗಳಿಗೆ ಅತಿ ದೊಡ್ಡ ಗ್ರಾಹಕ, ಭಾರತ. 2012ರಿಂದ 2016ರವರೆಗೆ ಭಾರತೀಯ ಸಮಗ್ರ ಸೇನಾ ಬಲಕ್ಕೆ ಬೇಕಾದ ಒಟ್ಟು ಯುದ್ಧ ಸಾಮಗ್ರಿಗಳಲ್ಲಿ ಶೇ. 40ರಷ್ಟನ್ನು ಭಾರತ, ಇಸ್ರೇಲ್ ನಿಂದಲೇ ಪಡೆದಿದೆ. ರಷ್ಯಾ ಮತ್ತು ಅಮೆರಿಕದ ನಂತರ ಭಾರತ ಇಸ್ರೇಲ್​ನಿಂದ ಅತಿ ಹೆಚ್ಚು ಮಿಲಿಟರಿ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತದೆ. ಪಾಕಿಸ್ತಾನ ಮತ್ತು ಚೀನಾದಂತಹ ಮಗ್ಗುಲು ಮುಳ್ಳುಗಳನ್ನು ಮಟ್ಟ ಹಾಕಲು ಭಾರತಕ್ಕೆ ಇಸ್ರೇಲ್​ನಂತಹ ದೇಶದ ಜೊತೆಗಿನ ಬಾಂಧವ್ಯ ಅಗತ್ಯವಾಗಿ ಬೇಕೇ ಬೇಕು. ಭಾರತಕ್ಕೆ ಭೇಟಿ ನೀಡಿರೋ ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೇತನ್ಯಾಹುಗೆ ಭಾರತ ಅತ್ಯುನ್ನತ ಗೌರವಾದರಗಳಿಂದ ಸ್ವಾಗತಿಸಿದೆ. ಭಾರತ ಮತ್ತು ಇಸ್ರೇಲ್ ದೇಶಗಳ ಹೊಸ ಸ್ನೇಹ ಯುಗದ ಅಧಿಪತಿಗಳು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಬಣ್ಣಿಸಿದ್ದಾರೆ. ಭಾರತ ಮತ್ತು ಇಸ್ರೇಲ್​ನ ಸಂಬಂಧ ಸ್ವರ್ಗದಲ್ಲೇ ನಿಶ್ಚಯವಾಗಿದೆ ಎನ್ನೋದು ಬೆಂಜಮಿನ್ ಅವರ ಭಾರತದೆಡೆಗಿನ ಪ್ರೀತಿಯನ್ನು ತೋರಿಸುತ್ತದೆ. ರಾಜಧಾನಿ ಜೆರುಸಲೇಂ ವಿವಾದ ಕುರಿತ ವಿಶ್ವಸಂಸ್ಥೆಯಲ್ಲಿ ಭಾರತ ಇಸ್ರೇಲ್​ ವಿರುದ್ಧ ಮತದಾನ ಮಾಡಿದ ವಿಚಾರ ಉಭಯ ದೇಶಗಳ ನಡುವಿನ ಸಂಬಂಧದ ಪರಿಣಾಮ ಬೀರದು ಅನ್ನೋ ಮಾತನ್ನೂ ಬೆಂಜಮಿನ್ ಹೇಳಿದ್ದಾರೆ.

ಬೆಂಜಮಿನ್ ನೇತನ್ಯಾಹು ಭಾರತ ಭೇಟಿಯ ವೇಳೆ ಪ್ರಧಾನಿ ಮೋದಿಯ ಬಗ್ಗೆ ಅಪಹಾಸ್ಯ ಮಾಡುವಂತಹ ವಿಡಿಯೋವನ್ನು ಬಿಡುಗಡೆ ಮಾಡಿ ಕಾಂಗ್ರೆಸ್ ಎಲ್ಲ ಸಂದರ್ಭಗಳಲ್ಲಿಯೂ ತಾನು ರಾಜಕೀಯವನ್ನೇ ಮಾಡುವುದಾಗಿ ತನ್ನತನವನ್ನು ಮತ್ತೊಮ್ಮೆ ತೋರಿಸಿಕೊಂಡಿದೆ. ವಿಶ್ವದ ಬಲಾಡ್ಯ ದೇಶವೊಂದರ ನಾಯಕ ಭಾರತದ ಸ್ನೇಹವನ್ನರಸಿ ದೇಶಕ್ಕೆ ಬಂದಾಗ ತನ್ನ ದೇಶದ ಪ್ರಧಾನಿಯನ್ನು ಹೀಗೆಳೆದು ಅಪಹಾಸ್ಯ ಮಾಡುವುದು ದೇಶದ ವಿರೋಧ ಪಕ್ಷದ ರಚನಾತ್ಮಕ ಕೆಲಸವಾ..?

ಎರಡೂ ದೇಶಗಳ ಸ್ನೇಹ ಬಾಂಧವ್ಯ ವೃದ್ಧಿಯಿಂದ ಭಾರತ ಕೃಷಿ, ಕುಡಿಯುವ ನೀರು, ತಂತ್ರಜ್ಞಾನ ಮತ್ತು ಮಿಲಿಟರಿ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಮೋದಿ-ಬೆಂಜಮಿನ್ ಮಧ್ಯೆ ಇರುವ ಭಾಯಿ ಭಾಯಿ ಬಾಂಧವ್ಯ ಇದೇ ರೀತಿಯೇ ಮುಂದುವರಿದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ಇನ್ನಷ್ಟು ಬಲಗೊಳ್ಳಲಿದೆ. ಅಷ್ಟೇ ಅಲ್ಲ ಆಂತರಿಕವಾಗಿಯೂ ಅಭಿವೃದ್ಧಿಯ ವೇಗ ಇಮ್ಮಡಿಯಾಗಲಿದೆ…

ಗಾಂಧಿ ಹತ್ಯೆ ರಹಸ್ಯ..! ಸಮಾಧಿಯೊಳಗಿನ ಸತ್ಯಗಳು…

ಘೋಡ್ಸೆ ಮತ್ತು ಗಾಂಧಿ

ಗಾಂಧಿ ಹತ್ಯೆಯ ಮರು ತನಿಖೆಯಾಗಬೇಕು ಎಂಬ ಒತ್ತಾಯ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದೆ. ಹತ್ಯೆಯಾಗಿ ಹಲವು ದಶಕಗಳೇ ಕಳೆದಿದ್ದರೂ ಮರು ತನಿಖೆ ಯಾಕಾಗಬೇಕು. ಹತ್ಯೆ ಹಿಂದಿನ ರಹಸ್ಯ ಏನು..? ಹತ್ಯೆ ನಂತರ ನಡೆದ ತನಿಖೆಯಲ್ಲಿ ಯಾರನ್ನು ರಕ್ಷಿಸಲಾಗಿತ್ತು..? ಹತ್ಯೆಯ ಮರು ತನಿಖೆಯಾದ್ರೆ ಸತ್ಯ ಹೊರ ಬರುತ್ತಾ…? ನಾಥೂರಾಮ್ ಘೋಡ್ಸೆ ಎಂಬ ಹಿಂದುತ್ವವಾದಿ ಗಾಂಧಿಯನ್ನು ಹತ್ಯೆ ಮಾಡಿದ ಎಂದು ಇತಿಹಾಸ ಹೇಳುತ್ತೆ. ಆದ್ರೆ ಈಗ ಸುಪ್ರೀಂ ಕೋರ್ಟ್​ ಮುಂದೆ ಸಲ್ಲಿಸಲಾಗಿರುವ ಅರ್ಜಿ ಇತಿಹಾಸದ ಮತ್ತೊಂದು ಮುಖವನ್ನು ಅನಾವರಣಗೊಳಿಸುತ್ತಿದೆ. ಮಹಾತ್ಮಾ ಗಾಂಧೀಜಿ ಹತ್ಯೆಯಾಗಿ 70 ವರ್ಷಗಳಾಗುತ್ತಿವೆ. ಆದರೂ ಹತ್ಯೆಯ ಹಿಂದಿನ ಪೂರ್ಣ ಸತ್ಯ ಇದುವರೆಗೂ ದೇಶದ ಜನರಿಗೆ ಇದುವರೆಗೂ ಗೊತ್ತೇ ಇಲ್ಲ. ಈಗ ಗಾಂಧಿ ಹತ್ಯೆ ಪ್ರಕರಣದ ಮರುತನಿಖೆಯಾಗಬೇಕು ಎಂದು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಲಾಗಿದೆ. ಅರ್ಜಿಯನ್ನು ಸ್ವೀಕರಿಸಿರುವ ದೇಶದ ಸರ್ವೋಚ್ಚ ನ್ಯಾಯಾಲಯ ಅಮಿಕಸ್ ಕ್ಯೂರಿಯನ್ನು ನೇಮಕ ಮಾಡಿದೆ..

ಗಾಂಧಿ ಹತ್ಯೆಯ ಮರು ತನಿಖೆ ನಡೆಯಬೇಕು ಎಂದು ಮುಂಬೈ ಮೂಲದ ಪಂಕಜ್ ಫಡ್ನಿಸ್ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ವೀರ ಸಾವರ್ಕರ್ ಅವರ ಅಭಿಮಾನಿ ಎಂದು ಘೋಷಿಸಿಕೊಂಡಿರುವ ಈ ವ್ಯಕ್ತಿ ಕಳೆದ 20 ವರ್ಷಗಳಿಂದ ಗಾಂಧಿ ಹತ್ಯೆಯ ಹಿಂದಿನ ಷಡ್ಯಂತ್ರದ ಬಗ್ಗೆಯೇ ಸಂಶೋಧನೆ ನಡೆಸುತ್ತಿದ್ದಾರೆ. ಗಾಂಧಿ ಹತ್ಯೆಯ ಮರು ತನಿಖೆ ನಡೆದರೆ ಅದು ಭಾರತದ ಇತಿಹಾಸದಲ್ಲೇ ಒಂದು ದೊಡ್ಡ ತುರುವಾಗುತ್ತದೆ ಎಂದು ಪಂಕಜ್ ಫಡ್ನಿಸ್ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಅರ್ಜಿಯ ಜೊತೆ ಪಂಕಜ್ ಫಡ್ನಿಸ್ ಹಲವು ದಾಖಲೆಗಳನ್ನೂ ನೀಡಿದ್ದಾರೆ. ಸುಪ್ರೀಂ ಕೋರ್ಟ್ ನೇಮಿಸಿರುವ ಅಮಿಕಸ್ ಕ್ಯೂರಿ ನೀಡುವ ವರದಿಯನ್ನಾಧರಿಸಿ ಹತ್ಯೆಯ ಮರು ತನಿಖೆ ನಡೆಸುವ ಬಗ್ಗೆ ನ್ಯಾಯಮೂರ್ತಿಗಳು ನಿರ್ಧರಿಸಲಿದ್ದಾರೆ.

1948ರ ಜನವರಿ 30 ರಂದು ಬರ್ಲಾ ಹೌಸ್​ ಆವರಣದಲ್ಲಿ ಗಾಂಧೀಜಿ ಎದೆಗೆ ನಾಥೂರಾಮ ಘೋಡ್ಸೆ ಗುಂಡಿಕ್ಕಿದ. ಘೋಡ್ಸೆ ಬಲಸಿದ್ದ ಬೆರೆಟ್ಟಾ ಪಿಸ್ತೂಲ್​ನಿಂದ ಹಾರಿದ್ದು ಮೂರು ಗುಂಡು. ಘೋಡ್ಸೆ ಪಿಸ್ತೂಲ್​ನಲ್ಲಿದ್ದ ಏಳು ಗುಂಡುಗಳಲ್ಲಿ ಮೂರು ಗಾಂಧಿ ದೇಹ ಹೊಕ್ಕಿದ್ದವು. ಉಳಿದ ನಾಲ್ಕು ಗುಂಡುಗಳು ಪಿಸ್ತೂಲ್​ನಲ್ಲೇ ಉಳಿದಿತ್ತು. ಆದ್ರೆ ಗಾಂಧೀಜಿ ದೇಹದಲ್ಲಿ ಪತ್ತೆಯಾಗಿದ್ದು ಮಾತ್ರ ನಾಲ್ಕು ಗುಂಡುಗಳು. ಹಾಗಾದ್ರೆ ನಾಲ್ಕನೇ ಗುಂಡು ಹಾರಿಸಿದ್ದು ಯಾರು..? ಈ ಅನುಮಾನ ಗಾಂಧಿ ಹತ್ಯೆಯಾದಾಗಿನಿಂದಲೂ ಇದೆ. ಆದ್ರೆ ಇದಕ್ಕೆ ದೊಡ್ಡ ಮಟ್ಟದ ರಾಜಕೀಯ ಬೆಂಬಲ, ಕಾನೂನಿನ ಬೆಂಬಲ ಸಿಗದೇ ಹೋದ ಕಾರಣದಿಂದ ಈ ವಾದಕ್ಕೆ ಮಹತ್ವ ಬರಲೇ ಇಲ್ಲ.

ಗಾಂಧಿ ಹತ್ಯೆ ನಡೆದ ನಂತರ ಕೋರ್ಟ್​ ಹಾಲ್​ನಲ್ಲಿ ನಿಂತು ನಾಥೂರಾಮ ಘೋಡ್ಸೆ ಗಾಂಧಿಯನ್ನು ಕೊಲೆಗೆ ಸಮರ್ಥನೆ ಮಾಡಿಕೊಂಡಿದ್ದ. ಗಾಂಧೀಜಿ ಹತ್ಯೆಯ ಹಿಂದೆ ಯಾವ ಷಡ್ಯಂತ್ರ, ಯಾರ ಪಾತ್ರವೂ ಇಲ್ಲ. ಗಾಂಧೀಜಿಯನ್ನು ಹತ್ಯೆ ಮಾಡುವುದು ನನ್ನ ನಿರ್ಧಾರ. ಉಳಿದೆಲ್ಲ ಆರೋಪಿಗಳು ನಿರಪರಾಧಿಗಳು ಎಂದಿದ್ದ. ತನಗೆ ನೀಡಿದ್ದ ಗಲ್ಲು ಶಿಕ್ಷೆಗೆ ಆತ ಮೇಲ್ಮನವಿಯನ್ನೂ ಸಲ್ಲಿಸಲಿಲ್ಲ. ಹಾಗೆ ಘೋಡ್ಸೆ ಕೋರ್ಟ್​ನಲ್ಲಿ ನಿಂತು ನಾನೇ ಗಾಂಧಿಯನ್ನು ಕೊಂದೆ ಎಂದು ಹೇಳಿದ ನಂತರವೂ ಹತ್ಯೆಯ ಹಿಂದೆ ಯಾರದ್ದೋ ಕೈವಾಡ ಇದೆ ಎಂಬ ಅನುಮಾನ ಇತ್ತು. ಯಾರದ್ದೋ ಕೈಗೊಂಬೆಗಳಾಗಿ ಘೋಡ್ಸೆ ಮತ್ತು ನಾರಾಯಣ್ ಆಪ್ಟೆ ಗಾಂಧಿಯನ್ನು ಕೊಂದು ನೇಣಿಗೇರಿದರಾ ಅನ್ನೋದು ಆ ಅನುಮಾನ.

ಹಾಗಾದ್ರೆ ಗಾಂಧೀಜಿ ಹತ್ಯೆಯ ಹಿಂದೆ ಯಾರಿದ್ದಾರೆ. ಗಾಂಧಿ ಹತ್ಯೆ ನಡೆದ ನಂತರ ಮುಂಬೈನಲ್ಲಿ ನಡೆದ ಗಲಭೆಯ ಹಿಂದೆ ಯಾರಿದ್ದಾರೆ. ಗಾಂಧಿ ಹತ್ಯೆ ಮತ್ತು ಆ ನಂತರದ 15 ಬ್ರಾಹ್ಮಣರ ಕೊಲೆ ಎಲ್ಲವೂ ಷಡ್ಯಂತ್ರದ ಭಾಗ ಎನ್ನುವ ಮಾತು ನಿಜಾನಾ..?. ಹಿಂದುದತ್ವವಾದಿ ಅಜೆಂಡಾದಿಂದ ಈ ಕೊಲೆ ನಡೆದಿಲ್ಲ. ವೀರ ಸಾವರ್ಕರ್ ಅವರು ಗಾಂಧಿಯನ್ನು ಹತ್ಯೆ ಮಾಡಿ ಎಂದು ಘೋಡ್ಸೆ ಮತ್ತು ನಾರಾಯಣ ಆಪ್ಟೆಗೆ ಉಪದೇಶ ಮಾಡಿರಲಿಲ್ಲ. ಘೋಡ್ಸೆ ಮತ್ತು ಆಪ್ಟೆಯನ್ನು ಬಳಸಿಕೊಂಡು ಬಾಹ್ಯ ಶಕ್ತಿಯೊಂದು ಗಾಂಧಿಯನ್ನು ಹತ್ಯೆ ಮಾಡಿದೆ ಎನ್ನೋದು ಪಂಕಜ್ ಫಡ್ನಿಸ್ ಅವರ ವಾದ. ಈ ವಾದಕ್ಕೆ ಪೂರಕವಾಗಿ ಫಡ್ನಿಸ್ ಸುಪ್ರೀಂ ಕೋರ್ಟ್​ಗೆ ಹಲವು ದಾಖಲೆಗಳನ್ನು ಸಲ್ಲಿಸಿದ್ದಾರೆ.

ಗಾಂಧಿ ಹತ್ಯೆಯ ಬಗ್ಗೆ ಇತಿಹಾಸದಲ್ಲೇ ಅತಿ ದೊಡ್ಡ ರಹಸ್ಯವನ್ನು ಮುಚ್ಚಿಡಲಾಗಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿರುವ ಪಂಕಜ್ ಫಡ್ನಿಸ್ ಕೇವಲ ಪ್ರಚಾರಕ್ಕಾಗಿ ಈ ಅರ್ಜಿಯನ್ನು ಸಲ್ಲಿಸಿಲ್ಲ. ಗಾಂಧಿ ಹತ್ಯೆಯ ನಂತರ ನಡೆದ ತನಿಖೆ ಮತ್ತು ಕೋರ್ಟ್​ ವಿಚಾರಣೆಯಲ್ಲಾದ ಲೋಫಗಳನ್ನು ಮುಂದಿಟ್ಟುಕೊಂಡು ಅಗತ್ಯ ದಾಖಲೆಗಳೊಂದಿಗೆ ದೇಶದ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಮಹಾತ್ಮಾ ಗಾಂಧಿ ಹತ್ಯೆಯನ್ನು ಮಾಡಿದವನು ನಾಥೂರಾಮ್ ಘೋಡ್ಸೆ. ಇದು ದೇಶ ಕಲಿಸಿರುವ ಇತಿಹಾಸ. ಗಾಂಧಿ ಹತ್ಯೆಯನ್ನು ಕೇವಲ ನಾಥೂರಾಮ್ ಗೋಡ್ಸೆ ಒಬ್ಬ ಮಾತ್ರ ಮಾಡಲಿಲ್ಲ. ಹತ್ಯೆ ಮಾಡಿದ್ದು ಇಬ್ಬರು ವ್ಯಕ್ತಿಗಳು ಅನ್ನೋ ವಾದ ಫಡ್ನಿಸ್ ಅವರದ್ದು. ಹಾಗಾದ್ರೆ ಆ ಎರಡನೇ ವ್ಯಕ್ತಿ ಯಾರು ಅನ್ನೋದು ಈಗಿನ ಪ್ರಶ್ನೆ. ಆ ಎರಡನೆಯ ವ್ಯಕ್ತಿ ಘೋಡ್ಸೆ ಜೊತೆ ಗಲ್ಲು ಶಿಕ್ಷೆಗೊಳಪಟ್ಟ ನಾರಾಯಣ ಆಪ್ಟೆ ಅಲ್ಲ ಅನ್ನೋದು ಫಡ್ನಿಸ್ ವಾದ.

ಗಾಂಧಿ ಹತ್ಯೆ ಹಿಂದೆ ಬ್ರಿಟೀಷ್ ಸೇನೆ ಕೈವಾಡ..?

ಗಾಂಧಿ ಹತ್ಯೆಯನ್ನು ನಾನೇ ಮಾಡಿದ್ದು ಅಂತ ನಾಥೂರಾಮ್ ಘೋಡ್ಸೆ ಕೋರ್ಟ್​ನಲ್ಲಿಯೇ ಒಪ್ಪಿಕೊಂಡಿದ್ದಾನೆ. ಆದ್ರೆ ಆತನ ಪಿಸ್ತೂಲ್​ನಿಂದ ಸಿಡಿದಿದ್ದು ಮೂರು ಬುಲೆಟ್ ಮಾತ್ರ. ಆದ್ರೆ ಗಾಂಧಿ ದೇಹ ಹೊಕ್ಕಿದ್ದು ನಾಲ್ಕು ಬುಲೆಟ್​ಗಳು ಅನ್ನುತ್ತವೆ ಸಂಶೋಧನೆಗಳು. ಆ ನಾಲ್ಕನೇ ಬುಲೆಟ್ ಅನ್ನು ಫೈರ್ ಮಾಡಿದ್ದು ಯಾರು? ಕೊನೆಯದಾಗಿ ಫೈರ್ ಆದ ಬುಲೆಟ್​ನಿಂದಾಗಿಯೇ ಗಾಂಧಿ ಪ್ರಾಣ ಬಿಟ್ಟರು ಅನ್ನೋ ವಾದ ಹಿಂದಿನಿಂದಲೂ ಇದೆ. ಗಾಂಧಿ ಹತ್ಯೆಯ ಹಿಂದೆ ಎರಡನೇ ಮಹಾಯುದ್ದದ ಅವಧಿಯಲ್ಲಿ ಬ್ರಿಟೀಷ್ ಸೇನೆಯ ವಿದ್ವಂಸಕಾರಿ ಘಟಕವಾಗಿದ್ದ ಫೋರ್ಸ್ 136 ನ ಕೈವಾಡ ಇದೆ ಅನ್ನೋದು ಫಡ್ನಿಸ್ ವಾದ. ಯಾಕಂದ್ರೆ ಗಾಂಧಿ ಹತ್ಯೆಗೆ ಬಳಸಲಾಗಿದ್ದ ಬೆರೆಟ್ಟಾ 1934 ಪಿಸ್ತೂಲ್ ಅನ್ನು ಎರಡನೇ ಮಹಾಯುದ್ಧದಲ್ಲಿ ಬಳಕೆ ಮಾಡಲಾಗಿತ್ತು. ಜನ ಸಾಮಾನ್ಯರಿಗೆ ಅಷ್ಟು ಸುಲಭವಾಗಿ ಸಿಗದ ಈ ಪಿಸ್ತೂಲ್ ಗೋಡ್ಸೆಗೆ ಸಿಕ್ಕಿದ್ದು ಹೇಗೆ..? ಹತ್ಯೆಗೆ ಬಳಸಲಾಗಿದ್ದ ಬೆರೆಟ್ಟಾ ಪಿಸ್ತೂಲನ್ನು ಗೋಡ್ಸೆಗೆ ಕೊಟ್ಟಿದ್ದು ಗ್ವಾಲಿಯರ್​ನ ದತ್ತಾತ್ರೆಯ ಪರ್ಚುರೆ. ಈ ವಿಷಯ ಗೊತ್ತಾಗಿದ್ದು ಗಾಂಧಿ ಹತ್ಯೆ ನಡೆದು ದಶಕಗಳಾದಮೇಲೆ. ಅಷ್ಟರಲ್ಲಾಗಲೇ ಘೋಡ್ಸೆಯನ್ನು ಗಲ್ಲಿಗೇರಿಸಲಾಗಿತ್ತು. ಅದೇ ದತ್ತಾತ್ರೆಯ ಪರ್ಚುರೆ ಬಳಿ ಮತ್ತೊಂದು ಬೆರೆಟ್ಟಾ ಪಿಸ್ತೂಲ್ ಪತ್ತೆಯಾಗಿತಯ್ತು. ಆದ್ರೆ ಆಗಿನ ಕಾಂಗ್ರೆಸ್​ ಸರ್ಕಾರ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲೇ ಇಲ್ಲ.

ಸ್ವಾತಂತ್ರ್ಯಾ ನಂತರ ದೇಶ ವಿಭಜನೆಯಾಗಿ ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾಗಿತ್ತು. ದೇಶ ವಿಭಜನೆ ಅಖಂಡ ಭಾರತದ ಕನಸು ಹೊತ್ತಿದ್ದ ಅನೇಕರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಆ ಆಕ್ರೋಶವನ್ನು ಬ್ರಿಟೀಷ್ ಸೇನೆ ಬಳಸಿಕೊಂಡು ಗಾಂಧಿಯನ್ನು ಹತ್ಯೆ ಮಾಡಿಸಿರಬಹುದು ಅನ್ನೊದು ಅನುಮಾನ. ದೇಶ ವಿಭಜನೆಯ ನಂತರ ಗಾಂಧಿ ವಿರುದ್ಧ ಕೆಂಡ ಕಾರುತ್ತಿದ್ದ ಹಿಂದುತ್ವವಾದಿ ನಾಥೂರಾಮ್ ಘೋಡ್ಸೆಯನ್ನು ಬಳಸಿಕೊಂಡು ಬ್ರಿಟಿಷ್ ಸೇನೆ ಗಾಂಧಿಯನ್ನು ಹತ್ಯೆ ಮಾಡಿರಬಹುದು. ಪಾಕಿಸ್ತಾನಕ್ಕೆ ಗಾಂಧೀಜಿ ಭೇಟಿ ನೀಡುವುದಕ್ಕೆ ಮೊಹಮ್ಮದ್ ಆಲಿ ಜಿನ್ನಾ ಒಪ್ಪಿಕೊಂಡ ನಂತರದ ಮೂರೇ ದಿನಕ್ಕೆ ಗಾಂಧಿ ಹತ್ಯೆಯಾಯಿತು. ಪಾಕಿಸ್ತಾನಕ್ಕೆ ಗಾಂಧಿ ಭೇಟಿ ನೀಡುವ ನಿರ್ಧಾರ ಹತ್ಯೆಗೆ ಕಾರಣವಾಯ್ತಾ ಅನ್ನೋದು ಫಡ್ನಿಸ್ ಅನುಮಾನ.

ಗಾಂಧಿ ಹತ್ಯೆ ರಹಸ್ಯ ಅಮೆರಿಕದಲ್ಲಿದೆ..!

ಗಾಂಧಿ ಹತ್ಯೆ ತನಿಖೆಯೂ ಸಮರ್ಪಕವಾಗಿ ಆಗಿಲ್ಲ ಅನ್ನೋ ವಾದ ಕಳೆದ 70 ವರ್ಷಗಳಿಂದಲೂ ಇದೆ. ಗಾಂಧಿ ಹತ್ಯೆಯನ್ನು ಕೇವಲ 5 ಅಡಿಗಳ ಅಂತರದಿಂದ ನಾನು ನೋಡಿದೆ ಎಂದು ಅಮೆರಿಕ ರಾಯಭಾರ ಕಚೇರಿಯ ಅಧಿಕಾರಿ ಹರ್ಬರ್ಟ್‌ ಟಾಮ್‌ ರೀನರ್‌ ಅಮೆರಿಕಕ್ಕೆ ಟೆಲಿಗ್ರಾಮ್ ಮಾಡಿದ್ದರು. ಹತ್ಯೆ ನಡೆದ ನಂತರ ನಾಥೂರಾಮ್ ಘೋಡ್ಸೆಯನ್ನು ಭದ್ರತಾ ಸಿಬ್ಬಂದಿಯ ಸಹಾಯದೊಂದಿಗೆ ಹರ್ಬರ್ಟ್‌ ಟಾಮ್‌ ರೀನರ್‌ ಹಿಡಿದಿದ್ದರು. ಅಂದು ಸಂಜೆ ಹರ್ಬರ್ಟ್ ಮಾಡಿದ್ದ ಟೆಲಿಗ್ರಾಂ ಅನ್ನು ಅಮೆರಿಕ 70 ವರ್ಷಗಳಿಂದಲೂ ಬಹಿರಂಗಗೊಳಿಸಿಲ್ಲ. ಆ ಟೆಲಿಗ್ರಾಂನಲ್ಲಿ ಹತ್ಯೆ ನಡೆಸಿದ ಎರಡನೇ ವ್ಯಕ್ತಿ ಬಗ್ಗೆ ಉಲ್ಲೇಖ ಇದೆ. ಗಾಂಧಿ ಹತ್ಯೆ ವಿಚಾರ ಅಮೆರಿಕಕ್ಕೆ ಯಾವ ಕಾರಣದಿಂದಲೂ ಸಂಬಂಧವಿಲ್ಲದ ವಿಚಾರ. ಇಂತಹ ವಿಚಾರದಲ್ಲಿರುವ ರಹಸ್ಯವನ್ನು ಅಮೆರಿಕ ರಾಷ್ಟ್ರೀಯ ರಹಸ್ಯ ಎಂದು 70 ವರ್ಷಗಳಿಂದ ಕಾಪಾಡಿಕೊಂಡು ಬರುತ್ತಿರುವುದು ಏಕೆ..? ಈ ಎಲ್ಲ ಕಾರಣಗಳಿಗಾಗಿಯೇ ಹತ್ಯೆ ತನಿಖೆ ಮತ್ತೆ ನಡೆಯಬೇಕು ಎಂದು ಪಂಕಜ್ ಫಡ್ನಿಸ್ ಸುಪ್ರೀಂ ಕೋರ್ಟ್​ ಗೆ ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ಮರು ತನಿಖೆ ನಡೆದರೆ ಗಾಂಧಿ ಹತ್ಯೆಗೆ ನಿಜವಾದ ಕಾರಣ ಏನು, ಗಾಂಧಿ ಹತ್ಯೆ ಹಿಂದೆ ಯಾರಿದ್ದರು ಅನ್ನೋದು ಸ್ಪಷ್ಟವಾಗುತ್ತದೆ.

ಗಾಂಧಿ ಹತ್ಯೆ ನಂತರ ನಡೆದ ತನಿಖೆ, ಕೋರ್ಟ್​ ವಿಚಾರಣೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಆ ಯಾವ ಪ್ರಶ್ನೆಗಳಿಗೂ ನೆಹರೂ ಸರ್ಕಾರ ಉತ್ತರ ನೀಡಲೇ ಇಲ್ಲ. ಹತ್ಯೆ ಮಾಡಿದ ನಾಥುರಾಮ ಘೋಡ್ಸೆ ಕೋರ್ಟ್​ ಕಟಕಟೆಯಲ್ಲಿ ನಿಂತು ನಾನೇಕೆ ಗಾಂಧಿಯನ್ನು ಕೊಂದೆ ಎಂದು ಹೇಳಿದ್ದ. ಆತನ ತಪ್ಪೊಪ್ಪಿಗೆ ಹೇಳಿಕೆಯನ್ನು ಬಹಿರಂಗಪಡಿಸದದೇ ಸೆನ್ಸಾರ್ ಮಾಡಿತ್ತು ನೆಹರೂ ಸರ್ಕಾರ. ಗಾಂಧಿ ಹತ್ಯೆಯ ತನಿಖೆ ಸಮರ್ಪಕವಾಗಿ ನಡೆದಿಲ್ಲ, ಸರಿಯಾದ ತನಿಖೆ ನಡೆದಿದ್ದರೆ ಹಲವರ ಬಂಡವಾಳ ಬಯಲಾಗುತ್ತಿತ್ತು. ಆಗಿನ್ನೂ ದೇಶ ಪೂರ್ಣ ಸಾರ್ವಭೌಮತ್ವ ಹೊಂದಿರದ ಕಾರಣ ಬ್ರಿಟೀಷ್ ಕಾನೂನಿನಡಿಯಲ್ಲೇ ತನಿಖೆ ಮತ್ತು ವಿಚಾರಣೆ ನಡೆದಿತ್ತು. ಈ ಕಾರಣಕ್ಕಾಗಿಯೇ ಕರಾರುವಕ್ಕಾದ ತನಿಖೆ ನಡೆಸದೇ ಅತಿ ದೊಡ್ಡ ಸತ್ಯವೊಂದನ್ನು ಬ್ರಿಟೀಷರು ತಮ್ಮ ಪ್ರಭಾವ ಬೀರಿ ಮುಚ್ಚಿ ಹಾಕಿದ್ದರು.

ಅವರಿಬ್ಬರ ವಿಚಾರಣೆ ಏಕೆ ನಡೆಸಲಿಲ್ಲ..?

ಗಾಂಧಿ ದತ್ತು ಪುತ್ರಿ ಮನುಬೆನ್ ಮತ್ತು ಅಬಾ

ಗಾಂಧಿ ದತ್ತು ಪುತ್ರಿ ಮನುಬೆನ್ ಮತ್ತು ಅಬಾ

ಗಾಂಧಿ ಹತ್ಯೆ ನಡೆದಾಗ ಅವರ ಜೊತೆಯಲ್ಲಿ ಇದ್ದಿದ್ದು ಇಬ್ಬರು ಯುವತಿಯರು. ಅದರಲ್ಲಿ ಒಬ್ಬಾಕೆ ಗಾಂಧಿ ದತ್ತು ಪುತ್ರಿ ಮನುಬೆನ್ ಮತ್ತು ಸರ್ದಾರ್ ಪಟೇಲರ ಮಗಳು ಅಬಾ. ಮನುಬೆನ್​ಳನ್ನು ತನ್ನ ಕೈಯಿಂದ ತಳ್ಳಿದ ನಂತರ ಗಾಂಧಿ ಎದೆಗೆ ಗುಂಡಿಕ್ಕಿದ್ದ ನಾಥೂರಾಮ್ ಘೋಡ್ಸೆ. ಬ್ರಿಟೀಷ್ ಕಾನೂನಿನಡಿಯಲ್ಲಿಯೇ ತನಿಖೆ ನಡೆದರೂ ಪ್ರತ್ಯಕ್ಷದರ್ಶಿಗಳಾಗಿದ್ದ ಈ ಇಬ್ಬರು ಹೆಣ್ಣು ಮಕ್ಕಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕಿತ್ತು. ಆದ್ರೆ ಅದು ಆಗಲೇ ಇಲ್ಲ. ನಾಥೂರಾಮನಿಗೆ ಗಲ್ಲು ಶಿಕ್ಷೆ ವಿಧಿಸುವಾಗಲೂ ಈ ಪ್ರತ್ಯಕ್ಷದರ್ಶಿಗಳಿಬ್ಬರ ಹೇಳಿಕೆ ಪಡೆಯಲೇ ಇಲ್ಲ. ಗಾಂಧಿ ಮೃತದೇಹವನ್ನು ಶುಚಿಗೊಳಿಸುವಾಗ ಸಿಕ್ಕ ಬುಲೆಟ್ ಬಗ್ಗೆಯೂ ತನಿಖೆಯಾಗಲಿಲ್ಲ. ಇನ್ನು ಇಡೀ ಕೋರ್ಟ್​ ಕಲಾಪವನ್ನು ಸಾರ್ವಜನಿಕರಿಗೆ ಮುಕ್ತವಾಗಿರಿಸಲಾಗಿತ್ತು. ಆದ್ರೆ ಯಾವಾಗ ನಾಥೂರಾಮ್ ಘೋಡ್ಸೆ ತನ್ನ ಹೇಳಿಕೆಯನ್ನು ನೀಡಲು ಕೋರ್ಟ್​ನಲ್ಲಿ ಎದ್ದು ನಿಂತನೋ ಕೋರ್ಟ್​ ವಿಚಾರಣೆಗೆ ಸೆನ್ಸಾರ್ ಹೇರಿತ್ತು ಅಂದಿನ ನೆಹರೂ ಸರ್ಕಾರ. ಕೇಂದ್ರದಲ್ಲಿ ಕಾಂಗ್ರೆಸ್​ ಸರ್ಕಾರ ಇರುವವರೆಗೂ ಘೋಡ್ಸೆ ಹೇಳಿಕೆ ಏನು ಅನ್ನೋದು ಈ ದೇಶಕ್ಕೆ ಗೊತ್ತೇ ಆಗಲಿಲ್ಲ. ಅಷ್ಟರಮಟ್ಟಿಗೆ ಪ್ರಕರಣದ ತನಿಖೆ ಮತ್ತು ವಿಚಾರಣೆ ಪಾರದರ್ಶಕವಾಗಿ ನಡೆದೇ ಇಲ್ಲ.

ಪಂಕಜ್ ಫಡ್ನಿಸ್ ವಾದ ಏನು..? 

1. ಗಾಂಧಿ ಹತ್ಯೆ ಮಾಡಿದ್ದು ನಾಥೂರಾಮ್ ಘೋಡ್ಸೆ, ನಾರಾಯಣ ಆಪ್ಟೆ ಮಾತ್ರ ಅಲ್ಲ. ಹತ್ಯೆ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ.
2. ಗಾಂಧಿ ಹತ್ಯೆಗಾಗಿ ನಾಥೂರಾಮ್ ಘೋಡ್ಸೆ ಹಾರಿಸಿದ್ದು ಮೂರು ಗುಂಡುಗಳು. ಆದ್ರೆ ಗಾಂಧಿ ದೇಹ ಹೊಕ್ಕಿದ್ದು ನಾಲ್ಕು ಗುಂಡುಗಳು. ನಾಲ್ಕನೇ ಗುಂಡು ಗುಂಡು ಹಾರಿಸಿದ ಎರಡನೇ ವ್ಯಕ್ತಿ ಯಾರು..?
3. ಗಾಂಧಿ ಹತ್ಯೆಯ ಹಿಂದೆ ಎರಡನೇ ಮಹಾಯುದ್ಧ ಕಾಲದ ಬ್ರಿಟೀಷ್ ಸೇನಾ ಘಟಕ “ಫೋರ್ಸ್ 136” ನ ಕೈವಾಡ ಇದೆ.
4. ಗಾಂಧಿ ಹತ್ಯೆಯನ್ನು ಕೇವಲ ಐದು ಅಡಿಗಳಷ್ಟು ದೂರದಿಂದ ನೋಡಿದ್ದ ಅಮೆರಿಕನ್ ರಾಯಬಾರಿ ಮಾಡಿದ್ದ ಟೆಲಿಗ್ರಾಂ ಬಹಿರಂಗಪಡಿಸಿಲ್ಲ ಯಾಕೆ..?
5. ಮಹಾತ್ಮಾ ಗಾಂಧಿ ಹತ್ಯೆಗೆ ಸಂಬಂಧಿಸಿದ ಟೆಲಿಗ್ರಾಂ ಅನ್ನು 70 ವರ್ಷಗಳಿಂದ ರಹಸ್ಯವಾಗಿಟ್ಟಿರುವ ಉದ್ದೇಶ ಏನು..?
6. ಗಾಂಧಿ ಮೃತದೇಹದ ಮರಣೋತ್ತರ ಪರೀಕ್ಷೆ ಯಾಕೆ ನಡೆಸಿಲ್ಲ..?
7. ಗಾಂಧಿ ಹತ್ಯೆಯಾದಾಗ ಜೊತೆಯಲ್ಲಿದ್ದ ದತ್ತು ಪುತ್ರಿ ಮನು ಬೆನ್ ಮತ್ತು ಸರ್ದಾರ್ ಪಟೇಲ್ ಮಗಳು ಅಬಾ ವಿಚಾರಣೆಯೇ ನಡೆಸಿಲ್ಲ..!
8. ಗಾಂಧೀಜಿ ಪಾಕಿಸ್ತಾನಕ್ಕೆ ಭೇಟಿ ಘೋಷಣೆ ಮಾಡಿದ ಮೂರನೇ ದಿನಕ್ಕೇ ಹತ್ಯೆಯಾಗಿದ್ದು ಯಾಕೆ..?
9. ಗಾಂಧಿ ಹತ್ಯೆ ತನಿಖೆ ವೈಜ್ಞಾನಿಕವಾಗಿ ನಡೆದಿಲ್ಲ, ಕೇವಲ ಹೇಳಿಕೆಗಳ ಆಧಾರದ ಮೇಲೆ ತೀರ್ಪು ನೀಡಲಾಗಿದೆ..!
10. ಗಾಂಧಿ ಹತ್ಯೆಯಾಗಿದ್ದು ಸಂಜೆ 5.17ಕ್ಕೆ. ಆದ್ರೆ ಮಧ್ಯಾಹ್ನ 3 ಗಂಟೆಗೆ ವಿದೇಶಿ ವ್ಯಕ್ತಿಯೊಬ್ಬ ಗಾಂಧಿ ಹತ್ಯೆಯಾಗಿದ್ದಾರೆ ಎಂದು ದೆಹಲಿಯಲ್ಲಿ ಕರಪತ್ರ ಹಂಚುತ್ತಿದ್ದ, ಇದು ಹೇಗೆ ಸಾಧ್ಯ..?
11. ಗಾಂಧಿ ಹತ್ಯೆಗೆ ಮೂರು ದಿನ ಇರುವ ಮೊದಲೇ ಪುಣೆಯ ಕಲೆಕ್ಟರ್ ಪತ್ನಿ ಸರಳಾ ಭಾವೆ ಅವರಿಗೆ “ಗಾಂಧಿ ಹತ್ಯೆ ಮಾಡಲು ಕೆಲವು ವ್ಯಕ್ತಿಗಳು ದೆಹಲಿಗೆ ಹೋಗಿದ್ದಾರೆ” ಎಂದು ವ್ಯಕ್ತಿಯೊಬ್ಬರು ಹೇಳಿದ್ದರು. ಈ ಬಗ್ಗೆ ಪುಣೆಯ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು. ಆದರೂ ಗಾಂಧಿ ಹತ್ಯೆಯನ್ನೇಕೆ ತಪ್ಪಿಸಲಿಲ್ಲ?
12. ಹತ್ಯೆಯಲ್ಲಿ ಬ್ರಿಟೀಷ್ ಕೈವಾಡ ಇದೆ ಎಂಬ ಬಗ್ಗೆ ಅಂದಿನ USSR ನ ಭಾರತೀಯ ರಾಯಭಾರಿ ವಿಜಯ ಲಕ್ಷ್ಮೀ ಪಂಡಿತ್​ಗೆ ವರದಿ ನೀಡಲಾಗಿತ್ತು. ಆದ್ರೆ ಈ ಬಗ್ಗೆ ತನಿಖೆ ನಡೆಯಲೇ ಇಲ್ಲ.

ಇದಿಷ್ಟೂ ಪಂಕಜ್​ ಫಡ್ನಿಸ್​ ಅವರು ಗಾಂಧಿ ಹತ್ಯೆಯ ಮರು ತನಿಖೆ ಯಾಕಾಗಿ ಆಗಬೇಕು ಎಂದು ಎತ್ತಿರುವ ಪ್ರಶ್ನೆಗಳು. ಇನ್ನು ಹತ್ಯೆ ನಂತರ ನಾಥೂರಾಮ್ ಘೋಡ್ಸೆ ಕೆಂಪು ಕೋಟೆಯ ಕೋರ್ಟ್​ ಹಾಲ್​ನಲ್ಲಿ ನಿಂತು ಮಾಡಿಕೊಂಡ ಸಮರ್ಥನೆ ಏನು ಗೊತ್ತಾ..?

ಹತ್ಯೆಗೆ ಘೋಡ್ಸೆ ಸಮರ್ಥನೆ ಏನು..? 

ಕೋರ್ಟ್ ಹಾಲ್ ನಲ್ಲಿ ಘೋಡ್ಸೆ..!

1. ಅಖಂಡ ಭಾರತ ನಿರ್ಮಾಣ ನನ್ನ ಕನಸು. ಗಾಂಧೀಜಿಯಿಂದಾಗಿ ದೇಶ ವಿಭಜನೆಯಾಗಿ ಪಾಕಿಸ್ತಾನ ನಿರ್ಮಾಣವಾಯಿತು..!

2. ದೇಶದ ಮೂರನೇ ಒಂದು ಭಾಗ ಆಗಸ್ಟ್ 15, 1947ರಂದು ವಿದೇಶವಾಗಿ ಹೋಯಿತು. ಅದಕ್ಕೆ ಕಾರಣ ಗಾಂಧಿ..!

3. ದೇಶವೇ ಸಂಕಷ್ಟದಲ್ಲಿದ್ದಾಗ ಗಾಂಧೀಜಿ ಪಾಕಿಸ್ತಾನಕ್ಕೆ 55 ಕೋಟಿ ಪರಿಹಾರ ಕೊಡಿ ಎಂದು ಉಪವಾಸಕ್ಕೆ ಕುಳಿತಿದ್ದರು..!

4. ಗಾಂಧೀಜಿಯ ಮುಸ್ಲಿಂ ಓಲೈಕೆಯಿಂದಾಗಿಯೇ ದೇಶ ವಿಭಜನೆಯಾಗಿದ್ದು..!

5. ದೇಶ ವಿಭಜನೆಯಾಗಿ ಗಡಿಯಲ್ಲಿ ಹಿಂದೂಗಳ ಮಾರಣಹೋಮವಾಗುತ್ತಿದ್ದರೂ ಗಾಂಧಿ ಮೌನ ವಹಿಸಿದ್ದರು..!

6. ಪಾಕಿಸ್ತಾನದಿಂದ ಬಂದ ಹಿಂದೂ ನಿರಾಶ್ರಿತರಿಂದ ತುಂಬಿ ಹೋಗಿದ್ದ ಮಸೀದಿ ಖಾಲಿ ಮಾಡಿ ಮುಸ್ಲಿಮರಿಗೆ ಜಾಗ ಕೊಡಿ ಎಂದು ಗಾಂಧಿ ಉಪವಾಸ ಕುಳಿತಿದ್ದರು..!

7. ದೇಶದಲ್ಲೇ ಉಳಿದುಕೊಂಡ ಮುಸ್ಲಿಮರಿಗೆ ಆಶ್ರಯ ನೀಡಬೇಕು ಎಂದು ಗಾಂಧಿ ಒತ್ತಾಯಿಸಿದರು..!

8. ಪಾಕಿಸ್ತಾನದಿಂದ ಭಾರತಕ್ಕೆ ಬಂದ ನಿರಾಶ್ರಿತ ಹಿಂದೂಗಳ ಬಗ್ಗೆ ಗಾಂಧಿ ಕಿಂಚಿತ್ತೂ ಕರುಣೆ ತೊರಲಿಲ್ಲ..!

9. ಗಾಂಧಿಯನ್ನು ರಾಷ್ಟ್ರಪಿತ ಎನ್ನುವುದಾದರೆ ಅವರು ಆ ಸ್ಥಾನವನ್ನು ಸರಿಯಾಗಿ ನಿಭಾಯಿಸಲಿಲ್ಲ. ಗಾಂಧಿ ಪಾಕಿಸ್ತಾನದ ರಾಷ್ಟ್ರಪಿತ..!

10. ಗಾಂಧಿ ಇಲ್ಲದ ಭಾರತ ಶಕ್ತಿಶಾಲಿಯಾಗುತ್ತದೆ ಎಂಬ ಕಾರಣಕ್ಕೆ ಗಾಂಧಿಯನ್ನು ಕೊಂದೆ..!

ಇದಿಷ್ಟೂ ಕೋರ್ಟ್​ನ ಕಟಕಟೆಯಲ್ಲಿ ನಿಂತು ನಾಥೂರಾಮ ಘೋಡ್ಸೆ ಗಾಂಧಿ ಹತ್ಯೆಯನ್ನು ಸಮರ್ಥಿಸಿಕೊಂಡ ರೀತಿ. ಈ ಕೇಸಿನ ವಿಚಾರಣೆ ಸಾರ್ವಜನಿಕರಿಗೆ ಮುಕ್ತವಾಗಿತ್ತು. ಆದ್ರೆ ಘೋಡ್ಸೆ ತಪ್ಪೊಪ್ಪಿಗೆ ಹೇಳಿಕೆಯನ್ನ ಸರ್ಕಾರ ಸೆನ್ಸಾರ್ ಮಾಡಿತ್ತು. ಆತನ ಮಾತಿನಿಂದ ದೇಶದ ಜನ ಪ್ರಭಾವಿತರಾಗಬಾರದು ಅನ್ನೋದು ನೆಹರೂ ಸರ್ಕಾರದ ಉದ್ದೇಶವಾಗಿತ್ತು. ನಾಥೂರಾಮ್ ಘೋಡ್ಸೆಯ ತಪ್ಪೊಪ್ಪಿಗೆ ಹೇಳಿಕೆ ಮತ್ತು ಪಂಕಜ್ ಫಡ್ನಿಸ್ ಅವರ ಪ್ರಶ್ನೆಗಳೆರಡನ್ನೂ ನೋಡಿದಾಗ ಗಾಂಧಿ ಹತ್ಯೆ ತನಿಖೆಯಲ್ಲಿ ಹಲವು ಮಿಸ್ಸಿಂಗ್ ಲಿಂಕ್​ಗಳಿ ಇವೆ ಅನ್ನೋದು ಸ್ಪಷ್ಟವಾಗುತ್ತದೆ. ಒಂದು ವೇಳೆ ಮರು ತನಿಖೆ ನಡೆದರೆ ಸತ್ಯ ಹೊರಗೆ ಬರಬಹುದು. ಈ ಬಗ್ಗೆ ಸುಪ್ರೀಂ ಕೋರ್ಟ್​ ಇನ್ನು ಕೆಲವೇ ದಿನಗಳಲ್ಲಿ ನಿರ್ಧಾರಕ್ಕೆ ಬರಲಿದೆ. ದೇಶದ ಜನರಿಗೆ ಪೂರ್ಣ ಸತ್ಯ ಗೊತ್ತಾಗಬೇಕಿದೆ…

ಸಿರಿಯಾದಿಂದಲೇ ಇಂಡಿಯನ್ ಐಸಿಸ್ ನಿಯಂತ್ರಿಸುತ್ತಿದ್ದ ಶಫಿ ಅರ್ಮಾರ್

shafi-armar-25-1461553204ಶಫಿ ಅರ್ಮಾರ್, ಇಡೀ ಜಗತ್ತಿಗೇ ಕಂಟಕವಾಗಿ ಬೆಳೆಯುತ್ತಿರುವ ಐಸಿಸ್ ಉಗ್ರ ಸಂಘಟನೆಗೆ ಭಾರ ತದ ಮುಖ್ಯಸ್ಥನಾಗಿದ್ದ. ಐಸಿಸ್ ಪರವಾಗಿ ಸಿರಿಯಾದಲ್ಲಿ ಹೋರಾಟ ನಡೆಸುತ್ತಿದ್ದ ಈತ ಅಲ್ಲಿಂದಲೇ ಇಂಡಿಯನ್ ಐಸಿಸ್ ನೆಟ್ವರ್ಕ್ ನಿಯಂತ್ರಿಸುತ್ತಿದ್ದ.

ಐಸಿಸ್ ಉಗ್ರ ಸಂಘಟ ನೆಗೆ ಭಾರತದಿಂದ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ ಈತ ಈಗ ಅಮೆರಿಕ ನಡೆಸಿದ ವಾಯು ದಾಳಿಗೆ ಬಲಿಯಾಗಿದ್ದಾನೆ. ಎನ್‌ಐಎ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದ ಈತನಿಗಾಗಿ ತನಿಖಾ ಸಂಸ್ಥೆಗಳು ಹುಡುಕದ ಸ್ಥಳವಿಲ್ಲ. ಮೊದಲು ಪಾಕಿಸ್ತಾನದಿಂದ ಉಗ್ರ ಚಟುವಟಿಕೆಗಳನ್ನು ಮಾಡುತ್ತಿದ್ದ ಈತ ದುಬೈ ಸೇರಿಕೊಂಡು, ನಂತರ ಐಸಿಸ್ ಪರ ಹೋರಾಟಕ್ಕಾಗಿ ಸಿರಿಯಾಗೆ ಹೋಗಿದ್ದ. ಐಸಿಸ್ ಮುಖ್ಯಸ್ಥ ಆಲ್ ಬಾಗ್ದಾದಿಗೆ ಹತ್ತಿರವಾಗಿದ್ದ ಈತನನ್ನು ಭಾರತದ ಐಸಿಸ್ ಘಟಕಕ್ಕೆ ಮುಖ್ಯ ಸ್ಥನನ್ನಾಗಿ ಮಾಡಲಾಗಿತ್ತು. ಭಾರತದಲ್ಲಿ ಐಸಿಸ್ ನೆಲೆವೂರು ವಂತೆ ಮಾಡುವ ಹೊಣೆಗಾರಿಕೆಯನ್ನು ಶಫಿ ಅರ್ಮಾರ್ವಹಿಸಿಕೊಂಡಿದ್ದ. 2008 ರಲ್ಲಿ ಭಟ್ಕಳ ಮೂಲದ ಉಗ್ರರಾದ ಯಾಸಿನ್ ಭಟ್ಕಳ್, ರಿಯಾಜ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್ ಇಂಡಿಯನ್ ಮುಜಾಹಿದೀನ್ ಸಂಘಟನೆ ಆರಂಭಿಸಿದಾಗ ಅವರೊಂದಿಗೆ ಇದ್ದಿದ್ದು ಅರ್ಮಾರ್ ಸೋದರರು.
ಸುಲ್ತಾನ್ ಅಮಾ೯ರ್ ಮತ್ತು ಶಫಿ ಅಮಾ೯ರ್. ಇ೦ಡಿಯನ್ ಮುಜಾಹಿದೀನ್ ಸ೦ಘಟನೆಯ ಮೂಲಕ ದೇಶಾದ್ಯ೦ತ ಹಲವು ದುಷ¢ತ್ಯಗಳಲ್ಲಿ ಭಾಗಿಯಾಗಿದ್ದ ಈ ಸೋದರರು ಆ ನ೦ತರ ತಮ್ಮದೇ ಆದ ಅನ್ಸರ್ -ಉಲ್‍-ತವಾಹಿದ್ ಎ೦ಬ ಸ೦ಘಟನೆ ಸ್ಥಾಪನೆ ಮಾಡಿದ್ದರು. ಇ೦ಡಿಯನ್ ಮುಜಾಹಿದೀನ್ ಮುಖ್ಯಸ್ಥ ಯಾಸಿನ್ ಭಟ್ಕಳ್ ಜತೆಗೆ ಉಗ್ರ ಕೃತ್ಯಗಳಿಗಾಗಿ ಸ೦ಗ್ರಹವಾಗಿದ್ದ ದೇಣಿಗೆ ಬಳಸಿಕೊಳ್ಳುವ ವಿಚಾರವಾಗಿ ಭೀನ್ನಾಭೀಪ್ರಾಯ ಉ೦ಟಾಗಿ ತನ್ನದೇ ಆದ ಸ೦ಘಟನೆ ಮಾಡಿಕೊ೦ಡಿದ್ದರು. ಪಾಕಿಸ್ತಾನದ ಐಎಸ್‍ಐ ನಿಯ೦ತ್ರಣವಿಲ್ಲದ ಒ೦ದು ಸ೦ಘಟನೆ ಆರ೦ಭೀಸಬೇಕು ಎ೦ಬ ಉದ್ದೇಶ ಈ ಸೋದರರಿಗಿತ್ತು.

2012ರಲ್ಲಿ ಪಾಕಿಸ್ತಾನದ ವಜೀರಿಸ್ತಾನದಲ್ಲಿ ತೆಹ್ರಿಕ್ -ಎ-ತಾಲಿಬಾನ್ ಸ೦ಘಟನೆಯೊ೦ದಿಗೆ ಗುರುತಿಸಿಕೊ೦ಡಿ ದ್ದ ಅಮಾ೯ರ್ ಸಹೋದರರು ಆಲ್‍ಖೈದಾಗೆ ಯುವಕರನ್ನು ಸೆಳೆಯುತ್ತಿದ್ದರು. ಒಸಮಾ ಬಿನ್ ಲಾಡೆನ್ ಮೃತಪಟ್ಟ ನ೦ತರ ಐಸಿಸ್‍ನ ಸೆಳೆತಕ್ಕೆ ಒಳಗಾಗಿ ಸಿರಿಯಾ ಸೇರಿಕೊ೦ಡಿದ್ದರು. ಐಸಿಸ್ ಸೇರಿದ್ದ ಸುಲ್ತಾನ್ ಅಮಾ೯ರ್ ಕೆಲವೇ ದಿನಗಳಲ್ಲಿ ಮುಖ್ಯಸ್ಥ ಆಲ್ ಬಾಗ್ದಾದಿ ವಿಶ್ವಾಸ ಗಳಿಸಿದ್ದ. ಭಾರತದಿ೦ದ ಹೇರಳ ಹಣ ಮತ್ತು ಯುವಕರನ್ನು ಐಸಿಸ್ ಪರ ಸೆಳೆಯುತ್ತಿದ್ದ ಸುಲ್ತಾನ್ ಅಮಾ೯ರ್‍ನನ್ನು ಬಾಗ್ದಾದಿ, ಐಸಿಸ್‍ನ ಭಾರತದ ಘಟಕದ ಮುಖ್ಯಸ್ಥನನ್ನಾಗಿ ಸುಲ್ತಾನ್ ಅಮಾ೯ರ್‍ನನ್ನು ನೇಮಕ ಮಾಡಿದ್ದ. ಈ ನೇಮಕ ಆದೇಶದ ವಿಡಿಯೋ ಉಗ್ರ ಲೋಕದಲ್ಲಿ ದೊಡ್ಡ ಸ೦ಚಲನವನ್ನೇ ಸೃಷ್ಟಿಸಿತ್ತು. ಆದರೆ 2015ರ ಮಾ.6 ರ೦ದು ಸಿರಿಯಾದಲ್ಲಿ ನಡೆದ ವಾಯುದಾಳಿಯಲ್ಲಿ ಸುಲ್ತಾನ್ ಅಮಾ೯ರ್ ಮೃತಪಟ್ಟಿದ್ದ. ಇದಾದ ನ೦ತರ ಅಣ್ಣನ ಜಾಗಕ್ಕೆ ಶಫಿ ಅಮಾ೯ರ್‍ನನ್ನು ನೇಮಕ ಮಾಡಲಾಗಿತ್ತು.

ಇ೦ಡಿಯನ್ ಐಸಿಸ್ ನೃತೃತ್ವ ವಹಿಸಿಕೊ೦ಡಿದ್ದ ಶಫಿ ಅಮಾ೯ರ್ ಭಾರತದಿ೦ದ ಐಸಿಸ್ ಗೆ ಸದಸ್ಯರನ್ನು ನೇಮಕ ಮಾಡಿಕೊಳ್ಳಲು ಜಾಲ ರೂಪಿಸಿದ್ದ. ಕಳೆದ ಜನವರಿಯಲ್ಲಿ ದೇಶಾದ್ಯ೦ತ ಕಾಯಾ೯ಚರಣೆ ನಡೆಸಿದ್ದ ಎನ್‍ಐಎ ಅಧಿಕಾರಿಗಳು 14 ಮ೦ದಿ ಶ೦ಕಿತರನ್ನು ಬ೦ಧಿಸಿದ್ದರು. ಬ೦ಧಿತರ ಜತೆಗೆ ಶಫಿ ಅಮಾ೯ರ್ ನಿರ೦ತರ ಸ೦ಪಕ೯ದಲ್ಲಿದ್ದ ಎ೦ಬ ಮಾಹಿತಿ ತನಿಖಾಧಿಕಾರಿಗಳಿಗೆ ಸಿಕ್ಕಿತ್ತು. ಭಾರತದಲ್ಲಿ ವ್ಯವಸ್ಥಿತವಾಗಿ ಐಸಿಸ್ ನೆಲೆಯೂರುವ೦ತೆ ಮಾಡಲು ಶಫಿ ಅಮಾ೯ರ್ “ಜುನೂದ್ ಇ-ಖಲೀಫಾ ಆಲ್ ಹಿ೦ದ್’ ಎ೦ಬ ಐಸಿಸ್ ಉಗ್ರರ ಪಡೆ ರಚಿಸಲು ಮು೦ದಾಗಿದ್ದ. ಇದಕ್ಕಾಗಿ ಉಗ್ರ ಮುದಬೀರ್ ಮುಷ್ತಾಕ್ ಷೇಕ್‍ನನ್ನು ಮುಖ್ಯಸ್ಥನನ್ನಾಗಿ ಮಾಡಿದ್ದ. ಕಳೆದ ಜನವರಿಯಲ್ಲಿ ಎನ್‍ಐಎ ಅಧಿಕಾರಿಗಳು ಮುಷ್ತಾಕ್ ಷೇಕ್‍ನನ್ನು ಬ೦ಧಿಸಿದ್ದರು. ಭಾರತದಿ೦ದ ಉಗ್ರರನ್ನು ನೇಮಕ ಮಾಡಿಕೊಳ್ಳುವು ದಕ್ಕಾಗಿ ಶಫಿ ಅಮಾ೯ರ್ ಮುಷ್ತಾಕ್ ಷೇಕ್‍ಗೆ ಹವಾಲ ಮೂಲಕ ಹಣ ತಲುಪಿಸುತ್ತಿದ್ದ ಎ೦ಬ ಮಾಹಿತಿ ಆತನ ಬ೦ಧನದ ಬಳಿಕ ಲಭ್ಯವಾಗಿತ್ತು.

ಶಫಿ ಅಮಾ೯ರ್ ಫೆೀಸ್‍ಬುಕ್ ಮತ್ತು ಟ್ವಿಟ್ಟರ್ ಮೂಲಕ ಐಸಿಸ್ ಪರ ಸೆಳೆತ ಇರುವ ಉಗ್ರರನ್ನು ಪತ್ತೆ ಹಚ್ಚಿ ಅವರನ್ನು ಆನ್‍ಲ್ಯೆನ್ ಮೂಲಕ ಸ೦ಪಕ೯ ಮಾಡುತ್ತಿದ್ದ. ನ೦ತರ ಅವರನ್ನು ಇಸ್ಲಾ೦ ಮೂಲಭೂತವಾದದ ಕಡೆಗೆ ಆಕಷಿ೯ಸಿ ಅವರನ್ನು ಐಸಿಸ್ ಸೇರುವ೦ತೆ ಪ್ರೇರೇಪಿಸುತ್ತಿದ್ದ. ಫೆೀಸ್‍ಬುಕ್ ಮತ್ತು ಟ್ವಿಟರ್‍ನಲ್ಲಿ ರಹಸ್ಯ ಗ್ರೂಪ್‍ಗಳನ್ನು ಮಾಡಿಕೊ೦ಡು ಭಾರತದ ಯುವಕರೊ೦ದಿಗೆ ಸ೦ವಹನ ನಡೆಸುತ್ತಿದ್ದ. ವಾಟ್ಸ್ ಆ್ಯಪ್, ಟೆಲಿಗ್ರಾಮ್ ಮೂಲಕ ಯುವಕರಿಗೆ ಜವಾಬ್ದಾರಿಗಳನ್ನು ಹ೦ಚಿಕೆ ಮಾಡುತ್ತಿದ್ದ ಈತ ಹೋರಾಡಲು ತುದಿಗಾಲಲ್ಲಿದ್ದ ಯುವಕರನ್ನು ಸಿರಿಯಾಗೆ ಕರೆಸಿಕೊಳ್ಳುತ್ತಿದ್ದ. ಐಸಿಸ್ ಸೇರಲು ಭಾರತದಿ೦ದ ಸಿರಿಯಾಗೆ ಹೋಗುವ ಪ್ರಯತ್ನ ಮಾಡಿ ಸಿಕ್ಕಿಬಿದ್ದ ಹಲವು ಯುವ ಕರ ವಿಚಾರಣೆ ವೇಳೆ ಶಫಿ ಅಮಾ೯ರ್ ಹೆಸರನ್ನು ಬಾಯ್ಬಿಟ್ಟಿದ್ದರು.
ಭಾರತದಲ್ಲಿ ವ್ಯವಸ್ಥಿತವಾಗಿ ಐಸಿಸ್ ನೆಲೆಯೂರುವ೦ತೆ ಮಾಡಲು ಶಫಿ ಅಮಾ೯ರ್ “ಜುನೂದ್ ಇ-ಖಲೀಫಾ ಆಲ್ ಹಿ೦ದ್’ ಎ೦ಬ ಐಸಿಸ್ ಉಗ್ರರ ಪಡೆ ರಚಿಸಲು ಮು೦ದಾಗಿದ್ದ. ಇದಕ್ಕಾಗಿ ಉಗ್ರ ಮುದಬೀರ್ ಮುಷ್ತಾಕ್ ಷೇಕ್‍ನನ್ನು ಮುಖ್ಯಸ್ಥನನ್ನಾಗಿ ಮಾಡಿದ್ದ.

ಶಶಿವರ್ಣಂ

ಪಾಕಿಸ್ತಾನದಿಂದ ನ್ಯೂಕ್ಲಿಯರ್ ಬಾಂಬ್ ಪಡೆಯುವ ಹವಣಿಕೆಯಲ್ಲಿದೆ ಐಸಿಸ್…!!

image

ಅಣ್ಬಸ್ತ್ರಗಳು ಉಗ್ರರ ಕೈವಶವಾಗುವ ಭೀತಿ ಹಲವು ವರ್ಷಗಳಿಂದಲೂ ಇದೆ. ಆದ್ರೆ ಈಗ ಆ ಭೀತಿ ನಿಜವಾಗುವ ಸಾಧ್ಯತೆ ಹೆಚ್ಚಾಗಿದೆ. ಪಾಕಿಸ್ತಾನದಿಂದ ನ್ಯೂಕ್ಲಿಯರ್ ಬಾಂಬ್ ಗಳನ್ನ ಕೊಂಡುಕೊಳ್ಳುವ ಹವಣಿಕೆಯಲ್ಲಿದೆ. ಈ ಬಗ್ಗೆ ಐಸಿಸ್ ತನ್ನ ನಿಯತಕಾಲಿಕೆಯಲ್ಲಿ ಹೇಳಿಕೊಂಡಿದೆ. ಒಂದು ವರ್ಷದ ಒಳಗೆ ಪಾಕಿಸ್ತಾನದಿಂದ ಅಣ್ವಸ್ತ್ರಗಳನ್ನ ಕೊಂಡುಕೊಳ್ಳುವ ಎಲ್ಲ ಸಿದ್ದತೆಗಳನ್ನೂ ಮಾಡಿಕೊಳ್ಳಲಾಗಿದೆ ಎಂದು ಐಸಿಸ್ ತನ್ನ ನಿಯತಾಲಿಕೆಯಲ್ಲಿ ಘೋಷಿಸಿಕೊಂಡಿದೆ. ಆ ಮೂಲಕ ಅಮೇರಿಕಾದ ನೆಲದಲ್ಲಿ ಅಣ್ವಸ್ತ್ರ ದಾಳಿ ನಡೆಸಲು ಎಲ್ಲ ಸಿದ್ದತೆಗಳನ್ನೂ ಮಾಡಿಕೊಳ್ಳುತ್ತಿದೆ ಐಸಿಸ್. ಇದಕ್ಕಾಗಿ ಬಿಕಿಯನ್ ಗಟ್ಟಲೇ ಡಾಲರ್ ಹಣ ಖರ್ಚು ಮಾಡಲು ಐಸಿಸ್ ಮುಂದಾಗಿದ್ದು, ಪಾಕಿಸ್ತಾನದ ಭ್ರಷ್ಟ ಅಧಿಕಾರಿಗಳ ಮೂಲಕ ಅಣ್ವಸ್ತ್ರಗಳನ್ನ ಪಡೆಯಲು ಸಂಚು ರೂಪಿಸಿದೆ. ಹಾಗೊಂದು ವೇಳೆ ಐಸಿಸ್ ಅಣ್ವಸ್ತ್ರಗಳನ್ನ ಪಡೆದುಕೊಳ್ಳಲು ಯಶಸ್ವಿಯಾಗಿದ್ದೇ ಆದಲ್ಲಿ ಇಡೀ ಜಗತ್ತು ಅಣ್ವಸ್ತ್ರ ದಾಳಿಯ ಭೀತಿಗೊಳಗಾಗಲಿದೆ. ಈಗ ಅಣ್ವಸ್ತ್ರಗಳನ್ನ ಹೊಂದಿರುವ ಯಾವ ರಾಷ್ಟ್ರಗಳೂ ಅವುಗಳನ್ನ ಯುದ್ಧದಲ್ಲಿ ಬಳಸುವ ದುಸ್ಸಾಹಸ ಮಾಡುವ ಸಾಧ್ಯತೆ ಇಲ್ಲ. ಆದ್ರೆ ನರಮೇದಗಳಿಂದಲೇ ಕುಖ್ಯಾತಿಯಾಗಿರೋ ಐಸಿಸ್ ಗೆ ಅಣ್ವಸ್ತ್ರಗಳು ಸಿಕ್ಕರಂತೂ ಅಪಾಯ ಕಟ್ಟಿಟ್ಟಬುತ್ತಿ. ಪಾಕಿಸ್ತಾನ ತಯಾರಿಸುವ ಅಣ್ವಸ್ತ್ರಗಳು ಉಗ್ರರ ಪಾಲಾಗಬಹುದು ಎಂಬ ಆತಂಕವನ್ನ ಭಾರತ ಹಲವು ವರ್ಷಗಳಿಂದಲೂ ಪ್ರತಿಪಾದಿಸಿಸುತ್ತಲೇ ಬಂದಿತ್ತು. ಈಗ ಅದು ನಿಜವಾಗುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಪಾಕಿಸ್ತಾನದಲ್ಲಿನ ಅಣ್ವಸ್ತ್ರಗಳು ಉಗ್ರರ ಪಾಲಾಗುವುದಿಲ್ಲ ಅಂತ ಅಮೇರಿಕಾ ಪಾಕಿಸ್ತಾನ್ನು ಪೋಷಣೆ ಮಾಡುತ್ತಲೇ ಬಂದಿದೆ. ಆದ್ರೆ ಈಗ ಅದು ಅಮೇರಿಕಾಗೇ ಮುಳುವಾಗುವ ಹಂತಕ್ಕೆ ಬಂದು ನಿಂತಿದೆ. ಈ ಹಿಂದೆ ಉತ್ತರ ಕೋರಿಯಾ ಪಾಕಿಸ್ತಾನಕ್ಕೆ ಲಕ್ಷಾಂತರ ಡಾಲರ್ ಹಣ ಲಂಚ ಕೊಟ್ಟು ಅಣ್ವಸ್ತ್ರ ತಂತ್ರಜ್ಞಾನವನ್ನ ಪಡೆದ ಇತಿಹಾಸವಿದೆ. ಇದು ಗೊತ್ತಿದ್ದರೂ ಪಾಕಿಸ್ತಾನವನ್ನ ಪೋಷಿಸಿದ್ದು ಅಮೇರಿಕಾ ಮಾಡಿದ ಜಾಣ ಕೆಲಸ. ಈಗಾಗಲೇ ಅಣ್ವಸ್ತ್ರಗಳ ತಯಾರಿಕೆಯನ್ನ ದಿನದಿಂದ ದಿನಕ್ಕೆ ಹೆಚ್ಚಿಸುತ್ತಿರುವ ಪಾಕಿಸ್ತಾನ ಈಗಾಗಲೇ ಅಣ್ವಸ್ತ್ರಗಳ ಸಂಖ್ಯೆಯಲ್ಲಿ ಭಾರತ, ಬ್ರಿಟನ್ ಗಳನ್ನ ಹಿಂದಿಕ್ಕಿದೆ. ಜಗತ್ತಿನ ನಂಬಿಕೆಗೆ ಅನರ್ಹವಾದ ದೇಶವೊಂದು ಅಣ್ವಸ್ತ್ರಗಳನ್ನ ಉಗ್ರರಿಗೆ ಮಾರಿಕೊಳ್ಳುವುದಿಲ್ಲ ಅನ್ನುವ ಯಾವ ಖಾತರಿಯೂ ಉಳಿದಿಲ್ಲ. ಈ ಹಿಂದೆ ಅಣ್ವಸ್ತ್ರಗಳು ಆಲ್ ಕಾಯಿದಾ ಪಾಲಾಗುವ ಅಪಾಯ ಎದುರಿಸಿತ್ತು. ಆದ್ರೆ ಆ ಅಪಾಯ ಈಗ ಐಸಿಸ್ ಮೂಲಕ ಎದುರಾಗುತ್ತಿದೆ. ಆಲ್‌ ಕಾಯಿದಾಕ್ಕಿಂತಲೂ ಐಸಿಸ್‌ ಹೆಚ್ಚು ಅಪಾಯಕಾರಿಯಾಗುತ್ತಿದೆ. ತೈಲ ಸಮೃದ್ಧ ಇರಾಕ್‌ ಮತ್ತು ಸಿರಿಯಾದ ಪ್ರದೇಶಗಳು ಐಸಿಸ್‌ನ ನಿಯಂತ್ರಣದಲ್ಲಿರುವುದರಿಂದ ಸುಲಭವಾಗಿ ಆದಾಯ ಬರುತ್ತಿದೆ. ಐಸಿಸ್‌ನಿಂದ ಎದುರಾಗಿರುವ ಬೆದರಿಕೆಯಿಂದಾಗಿಯೇ ಅಲ್‌ ಕಾಯಿದಾ ಈಗ ಭಾರತ ಮತ್ತಿತರ ದೇಶಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಿ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಜಿಹಾದ್‌ ಲೋಕದಲ್ಲೀಗ ಅಲ್‌ ಕಾಯಿದಾಕ್ಕಿಂತ ಐಸಿಸ್‌ ಹೆಚ್ಚು ಬಲಿಷ್ಠ ಮತ್ತು ಆಕರ್ಷಣೀಯವಾಗಿ ಕಾಣುತ್ತಿದೆ. ಯಾಕಂದ್ರೆ ಆಲ್ ಕಾಯಿದಾ ತನ್ನ ಕಾರ್ಯನಿರ್ವಹಣೆಗಾಗಿ ದೇಣಿಗೆಯ ಹಣವನ್ನ ಅವಲಂಬಿಸಿತ್ತು. ಆದ್ರೆ ಐಸಿಸ್ ತೈಲ ಮಾರಾಟ ಮತ್ತು ಒತ್ತೆಯಾಳು ಬಿಡುಗಡೆ ಹಣದಿಂದ ದಿನವೊಂದಕ್ಕೆ 60 ಕೋಟಿಯಷ್ಟು ಹಣ ಗಳಿಸುತ್ತಿದೆ. ತೈಲ ಸಮೃದ್ಧವಾಗಿರುವ ಇರಾಕ್ ಮತ್ತು ಸಿರಿಯಾಗಳಲ್ಲಿ ಐಸಿಸ್ ತೈಲ ಮಾರಾಟದಿಂದಾಗಿ ಕೋಟಿ ಕೋಟಿ ಹಣ ಗಳಿಸುತ್ತಿದೆ. ಹಾಗಾಗಿ ಐಸಿಸ್ ತನ್ನ ಕಾರ್ಯನಿರ್ವಹಣೆಗೆ ಯಾರ ಬಳಿಯೂ ಹಣಕ್ಕಾಗಿ ಅಂಗಲಾಚುವ ಅಗತ್ಯವಿಲ್ಲ. ಇದ್ರಿಂದಾಗಿಯೇ ಜಗತ್ತಿನಲ್ಲಿರುವ ಎಲ್ಲ ಜಿಹಾದಿಗಳೂ ಐಸಿಸ್ ನತ್ತ ಆಕರ್ಷಿತರಾಗುತ್ತಿರೋದು. ಆಲ್ ಕಾಯಿದಾಗೆ ಆಫ್ಘನಿಸ್ತಾನದ ಗಡಿ ಪ್ರದೇಶಗಳು ನೆಲೆಯಾಗಿದ್ರೆ ಐಸಿಸ್ ನೆಲೆ ಇರಾಕ್ ಮತ್ತು ಸಿರಿಯಾಗಳನ್ನೊಳಗೊಂಡು ಬ್ರಿಟನ್ ಗಿಂತಲೂ ಹೆಚ್ಚಿನ ಭೂ ಪ್ರದೇಶವನ್ನ ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಇದ್ರ ಜೊತೆಗೆ ಸಿರಿಯಾದ ವಸ್ತು ಸಂಗ್ರಹಾಲಯಗಳಲ್ಲಿರುವ ಬೆಲೆಬಾಳುವ ಕಲಾಕೃತಿಗಳನ್ನ ಮಾರಿ ಲಕ್ಷಾಂತರ ಡಾಲರ್ ಹಣ ಗಳಿಸುತ್ತಿದೆ. ಕೇವಲ ಒಂದು ವರ್ಷದ ಹಿಂದೆ ಐದು ಸಾವಿರ ಕೋಟಿಯಷ್ಟಿದ್ದ ಐಸಿಸ್ ನ ಆಸ್ತಿ ಈಗ ಹದಿನೈದು ಸಾವಿರ ಕೋಟಿ ರೂ ಗಡಿ ದಾಟಿದೆ. ಇಷ್ಟು ದೊಟ್ಟ ಮಟ್ಟದಲ್ಲಿ ಹಣದ ಆಮದನಿ ಇರುವ ಐಸಿಸ್ ಈಗ ನ್ಯೂಕ್ಲಿಯರ್ ಬಾಂಬ್ ಗಳನ್ನ ಪಡೆಯಲು ಬಿಲಿಯನ್ ಗಟ್ಟಲೆ ಡಾಲರ್ ಹಣವನ್ನ ವ್ಯಯಿಸಲು ಸಿದ್ದವಾಗಿದೆ. ಹಾಗೊಂದು ವೇಳೆ ಐಸಿಸ್ ಉಗ್ರರು ಪಾಕಿಸ್ತಾನದಿಂದ ಅಣ್ವಸ್ತ್ರಗಳನ್ನು ಪಡೆಯುವಲ್ಲಿ ಅಥವಾ ಅಣ್ವಸ್ತ್ರ ತಯಾರಿಕೆಯ ತಂತ್ರಜ್ಞಾನ ಪಡೆಯುವಲ್ಲಿ ಯಶಸ್ವಿಯಾದ್ರೆ ಇಡೀ ಜಗತ್ತು ಅಣ್ವಸ್ತ್ರ ಯುದ್ಧಕ್ಕೆ ಎದುರು ನೋಡಬೇಕಾಗುತ್ತದೆ…

                                                                                               –ಶಶಿವರ್ಣಂ 

<span>%d</span> bloggers like this: