ಹೀಗೊಂದು ಕನಸು …..

ಶೋಬನ್ ಸರ್ಕಾರ್ ಗೆ ಕನಸು ಬಿದ್ದ ಹಾಗೆ ನನಗೂ ನಿನ್ನೆ ರಾತ್ರಿ ಒಂದು ಕನಸು ಬಿತ್ತು. ಪರಪ್ಪನ ಅಗ್ರಹಾರ ಜೈಲಿನ ಕೆಳಗೆ 30 ಅಡಿ ಆಳದಲ್ಲಿ 5000 ಟನ್ ಚಿನ್ನ ಇದೆ ಅಂತ. ಈ ಬಗ್ಗೆ ತಲೆಕೆಡೆಸಿಕೊಳ್ಳಬೇಕಾದಾ ಸೈಕೊ ಜೈಶಂಕರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿದ್ದೆಯ ಮಂಪರಿನಲ್ಲಿದ್ದಾನೆ . ಈ ರಾಜ್ಯದಲ್ಲಿ ಚಿನ್ನ ತೆಗೆಯೋರು ಯಾರೂ ಇಲ್ವಾ…..

ಅಮುಲ್ ಬೇಬಿ ರಾಹುಲ್ ಮದುವೆ ಬಗ್ಗೆ ಫೇಸ್‌ಬಕ್ ನಲ್ಲಿ ಅಂತರ್ ರಾಷ್ಟ್ರೀಯ ಚರ್ಚೆ ನಡೀತಾಯಿದೆ……..

ಅಮುಲ್ ಬೇಬಿ ರಾಹುಲ್ ಮದುವೆ ಬಗ್ಗೆ ಫೇಸ್‌ಬಕ್ ನಲ್ಲಿ ಅಂತರ್ ರಾಷ್ಟ್ರೀಯ ಚರ್ಚೆ ನಡೀತಾಯಿದೆ........

ಅಮುಲ್ ಬೇಬಿ ರಾಹುಲ್ ಮದುವೆ ಬಗ್ಗೆ ಫೇಸ್‌ಬಕ್ ನಲ್ಲಿ ಅಂತರ್ ರಾಷ್ಟ್ರೀಯ ಚರ್ಚೆ ನಡೀತಾಯಿದೆ……..

ವಿದಾನಸೌದದಿಂದ ಪರಪ್ಪನ ಅಗ್ರಹಾರಕ್ಕೆ ಸುರಂಗ ಮಾರ್ಗ ನಿರ್ಮಿಸಲು ಸರ್ಕಾರ ನಿರ್ದಾರ…..!

ಇತ್ತೀಚೆಗೆ ರಾಜಕಾರಣಿಗಳು ಪರಪ್ಪನ ಅಗ್ರಹಾರದ ಕಡೆಗೆ ಮುಖಮಾಡುತ್ತಿರುವದರಿಂದ ಈ ಬಗ್ಗೆ ಸಕರ್ಾರ ಗಂಬೀರವಾಗಿ ಯೋಚಿಸಿ ವಿದಾನಸೌದದಿಂದ ಪರಪ್ಪನ ಅಗ್ರಹಾರಕ್ಕೆ ಸುರಂಗ ಮಾರ್ಗ ನಿರ್ಮಿಸಲು ನಿರ್ದರಿಸಿದೆ. ಟ್ರಾಫಿಕ್ ಸಮಸ್ಯೆಯಿಂದಾಗಿ ಸಚಿವರು ಮತ್ತು ಶಾಸಕರು ವಿದಾನಸೌದದಿಂದ ಪರಪ್ಪನ ಅಗ್ರಹಾರಕ್ಕೆ ತಲುಪಲು ತೀವ್ರ ತೋದರೆಯಾಗಿದ್ದು ಅದನ್ನು ತಪ್ಪಿಸಲು ಈ ಯೋಜನೆಯನ್ನು ರೂಪಿಸಲಾಗತ್ತಿದೆ. ಈ ಬಗ್ಗೆ ಇತ್ತೀಚೆಗೆ ನೆಡೆದ ಸಚಿವ ಸಂಪುಟ ಸಬೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೆಂಡದ ಮಂತ್ರಿ ರೇಣುಕಾಚಾರ್ಯ ಮಾದ್ಯಮಗಳಿಗೆ ದೃಡಪಡಿಸಿದ್ದಾರೆ. ಇದೊಂದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಎಂದ ಅವರು ಮುಂದಿನ ದಿನಗಳಲ್ಲಿ ಅಲ್ಲಿಯೇ ಸಂಪುಟ ಸಬೆಗಳನ್ನೂ ಸಹ ನೆಡೆಸಲಾಗುವುದು ಎಂದಿದ್ದಾರೆ. ಆಶ್ಚರ್ಯಕರ ವಿಷಯವೆಂದರೆ ಈ ಯೋಜನೆಗೆ ವಿರೋದ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದು ಕುಮಾರಸ್ವಾಮಿಯವರು ಇದು ಸಕರ್ಾರದ ದಿಟ್ಟ ಕ್ರಮ ಎಂದು ಶ್ಲಾಗಿಸಿದ್ದಾರೆ. ಅಲ್ಲದೇ ಮುಂದಿನ ಅದಿವೇಶನಗಳನ್ನೂ ಅಲ್ಲಿಯೇ ನೆಡೆಸಬಹುದು ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಕುಮಾರಸ್ವಾಮಿಯವರ ಸಲಹೆಯನ್ನು ಗಂಬೀರವಾಗಿ ಪರಿಗಣಿಸುವುದಾಗಿ ಮುಖ್ಯಮಂತ್ರಿ ಸದಾನಂದ ಗೌಡ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಯೆಡೆಯೂರಪ್ಪನವರು ಇದು ಬೆಂಗಳೂರಿನ ಅಬಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಮಾಡಲಾಗಿದೆ. ಕೇಂದ್ರ ಸಕರ್ಾರವೂ ಸಹ  ದೆಹಲಿಯ ತಿಹಾರ್ ಜೈಲಿನಿಂದ ಸಂಸತ್ ಭವನಕ್ಕೆ ಇದೇ ರೀರಿಯ ಸುರಂಗ ಮಾರ್ಗವನ್ನು ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ…………………….!!!!!

%d bloggers like this: