ಸಮಯ ಟಿವಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ…

ಹಲವು ದಿನಗಳ ಅನಿಶ್ಚಿತತೆಗೆ ತೆರೆ ಬಿದ್ದಿದೆ. ಕೆಲಸ ಮಾಡಿದರೆ ಟಿವಿ ಚಾನಲ್ ನಲ್ಲೇ ಮಾಡಬೇಕು ಅದು ರಿಪೋರ್ಟರ್ ಅಥವಾ ಕಾಪಿ ಎಡಿಟರ್ ಆಗಿಯೇ ಮಾಡಬೇಕು ಎಂದು ಈ ಮೋದಲೇ ನಿರ್ಧರಿಸಿ ಬಿಟ್ಟಿದ್ದೆ. ಉದಯ ಟಿವಿಯವರು ವಿಡಿಯೊ ಎಡಿಟಿಂಗ್ ಕೆಲಸವಿದೆ ಬನ್ನಿ ಎಂದು ನಾಲ್ಕೈದು ತಿಂಗಳಿಂದಲೂ ದಮ್ಮಯ್ಯ ಗುಡ್ಡೆ ಹಾಕುತ್ತಿದ್ದರೂ ಅತ್ತ ಕಡೆ ತಲೆಯೂ ಹಾಕಿರಲಿಲ್ಲ. ನನಗೆ ಆಸಕ್ತಿ ಇರುವುದು ಟಿವಿ ಪತ್ರಿಕೋಧ್ಯಮದಲ್ಲಿ. ನನಗೆ ಕನ್ನಡ ತಪ್ಪಿಲ್ಲದಂತೆ ಬರೆಯಲು ಬರುವುದಿಲ್ಲ ಎಂಬ ಒಂದೇ ಒಂದು ನೆಗೆಟಿವ್ ಪಾಯಿಂಟ್ ಬಿಟ್ಟರೆ ಟಿವಿ ಜಗತ್ತಿಗೆ ನಾನು ತುಂಬಾ ಸೂಕ್ತ ಅಂತ ನನಗೆ ಎರೆಡು ವರ್ಷಕ್ಕೆ ಮುನ್ನವೇ ಗೊತ್ತಾಗಿಬಿಟ್ಟಿತ್ತು. ಈ ಮದ್ಯೆ ಉಶಾರಿಲ್ಲದೆ  2 ತಿಂಗಳು ಮನೆಯಲ್ಲೇ ಮಲಗಿ ಈ ಜನ್ಮಕ್ಕಾಗುವಷ್ಟು ನಿದ್ದೆ ಮಾಡಿ ಸಾಕಾಗಿ ಹೋಗಿತ್ತು .ಇದೇ ತಿಂಗಳ 15 ನೆ ತಾರೀಕಿನಿಂದ ಸಮಯ ಟಿವಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದೇನೆ. ಜಿ.ಎನ್ ಮೋಹನ್ ಸರ್ ಅವರು ಅದ್ಬುತವಾದ ಟೀಂ ಕಟ್ಟಿಕೊಂಡು ಸಮಯ ಟಿವಿಗೆ ಹೋಸತನ ನೀಡ್ತಾಯಿದ್ದಾರೆ. ಅಂತ ದೊಡ್ಡ ದೊಡ್ಡ ತಿಮಿಂಗಿಲಗಳೇ ಇರುವ ಸಮಯ ಟಿವಿಯಲ್ಲಿ ನಾನೊಂದು ಸಣ್ಣ ಮೀನು..! ಈ ಮೋದಲೇ ಸಮಯ ಟಿವಿಯಲ್ಲಿ ಇಂಟೆರ್ನಶಿಪ್ ಮಾಡಿದ್ದೆನಾದ್ದರಿಂದ ಅಲ್ಲಿರುವ ಹೆಚ್ಚಿನವರು ಪರಿಚಯವಿದ್ದಾರೆ. ಇಷ್ಟದ ಕೆಲಸವನ್ನು ಇಷ್ಟ ಪಟ್ಟು ಮಾಡ್ತಾಯಿದ್ದೇನೆ. ಇನ್ನು”ಸಮಯ”ದ ಪರಿವೇ ಇಲ್ಲದಂತೆ ಕೆಲಸ ಮಾಡಬೇಕು………………….!!!!!!!!!!!!!!!!

ನೈಜ ಸುದ್ಧಿಗಾಗಿ

ಭ್ರಷ್ಟಾಚಾರದ ವಿರುದ್ದದ ಅಣ್ಣಾ ಹಜಾರೆ ಹೋರಾಟದಲ್ಲಿ ನಾನೂ ಪಾಲ್ಗೊಂಡೆ….

 

 

 

 

 

 

 

 

ಜನ ಲೋಕಪಾಲ್ ಮಸೂದೆಗಾಗಿ ಹೋರಾಡುತ್ತಿರುವ ಅಣ್ಣ ಹಜಾರೆಗೆ ದೇಶಾಧ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಮನೆಯಲ್ಲಿ ಕೂತು ಟಿವಿ ನೋಡುತ್ತಾ ಅಣ್ಣನಿಗೆ ನನ್ನ ಬೆಂಬಲವಿದೆ ಅನ್ನೊ ಬದಲು, ಫೇಸ್ ಬುಕ್ ನಲ್ಲಿ ಎಂದು ಅರಚಿಕೊಳ್ಳುವ ಬದಲು ನಾನೂ ಹೋರಾಟದಲ್ಲಿ ಭಾಗವಹಿಸಬೇಕೆಂದು ಫ್ರೀಡಂ ಪಾಕರ್್ಗೆ ಹೋಗಿದ್ದೆ. ಭ್ರಷ್ಟಾಚಾರದ ವಿರುದ್ದ ಭಾರತ ಸಂಘಟನೆ ತುಂಬಾ ವ್ಯವಸ್ಥತವಾಗಿ ಪ್ರತಿಭಟನೆಯನ್ನು ಆಯೋಜಿಸಿದ್ದು. ಹೋರಾಟದಲ್ಲಿ ಪಾಲ್ಗೊಳ್ಳಲು ಬರುವ ಎಲ್ಲರಿಗೂ ಜನಲೋಕಪಾಲ್ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಅಲ್ಲದೇ ಈ ಹೋರಾಟಕ್ಕೆ ಭಾಗವಹಿಸಲು ದಿನವೂ ಸಾವಿರಾರು ಮಂದಿ ಪ್ರವಾಹೋಪಾದಿಯಲ್ಲಿ ಹರಿದು ಬಂದು ಅಣ್ಣನ ಕೂಗಿಗೆ ದ್ವನಿಯಾಗುತ್ತಿದ್ದಾರೆ. ಫ್ರೀಡಂ ಪಾಕರ್್ನಲ್ಲಂತೂ ದೇಶ ಭಕ್ತಿ ಗೀತೆಗಳ ಕಲರವ ಹೇಳತೀರದು. ವಂದೇ ಮಾತರಂ ಹಾಡು ಬಂದಾಗಲಂತೂ ಅಲ್ಲಿದ್ದ ಎಲ್ಲ ಜನರಲ್ಲೂ ಮಿಂಚಿನ ಸಂಚಾರ ಜೊತೆಗೆ ಎಲ್ಲರಲ್ಲೂ ಭಾರತ್ ಮಾತಾಕಿ ಜೈ ಎನ್ನುವ ಉದ್ಘಾರ. ಇಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯಾರನ್ನೂ ದುಡ್ಡು ಕೊಟ್ಟಾಗಲೀ, ಬಲವಂತದಿಂದಾಗಲೀ ಕರೆತಂದಿಲ್ಲ ಎಲ್ಲರೂ ಸ್ವಯಂಪ್ರೇರಿತವಾಗಿ ಬಂದು ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ. ಇನ್ನು ಈ ಹೋರಾಟದಲ್ಲಿ ಭಾಗವಹಿಸುತ್ತಿರುವವರು ಕೇವಲ ಮಧ್ಯಮ ವರ್ಗದವರು ಮಾತ್ರ, ಐಟಿ ಮಂದಿ ಮಾತ್ರ, ಯಾರೋ ಕೆಲಸವಿಲ್ಲದವರು ಮಾತ್ರ ಹೀಗೆ ವಾದಗಳನ್ನು ಮುಂದಿಡುತ್ತಿರುವ ಮೂರ್ಖರಿಗೆ ಏನು ಹೇಳಬೇಕೊ. ನಾನು ಸ್ವತಂ ನೋಡಿದಂತೆ ಹೋರಾಟದಲ್ಲಿ ಎಲ್ಲ ವಿಧ್ಯಾಥರ್ಿಗಳು, ಉಧ್ಯೋಗಸ್ಥರು, ಮಧ್ಯಮವರ್ಗದವರು, ಸ್ವಯಂ ಉಧ್ಯೋಗಿಗಳು ಹೀಗೆ ಎಲ್ಲ ರೀತಿಯ ಎಲ್ಲ ವರ್ಗಗಳ ಜನರೂ ಕೂಡ ಪಾಲ್ಗೊಳ್ಳುತ್ತಿದ್ದಾರೆ. ನನ್ನ ಸಲಹೆ ಎಂದರೆ ಇಲ್ಲಿಯವರೆಗೂ ಹೋರಾಟದಲ್ಲಿ ಭಾಗವಹಿಸದೇ ಮನೆಯಲ್ಲೇ ಕೂತು ವಂದೇ ಮಾತರಂ ಎನ್ನುವವರು ದಯವಿಟ್ಟು ಒಮ್ಮೆ ಹೋಗಿ ಬನ್ನಿ.

%d bloggers like this: