ನಿರ್ಭಯಾ-ಇಂಡಿಯಾಸ್ ಡಾಟರ್… ನನಗನಿಸಿದ್ದು…

Nirbhaya Documentary

ಇಂಡಿಯಾಸ್ ಡಾಟರ್

ನಿರ್ಭಯಾ ಮೇಲೆ ನಡೆದ ಹೀನ ಸಾಮೂಹಿಕ ಅತ್ಯಾಚಾರ ಘಟನೆಯನ್ನ ಕಣ್ಣಿಗೆ ಕಟ್ಟುವಂತೆ ಇಂಡಿಯಾಸ್ ಡಾಟರ್ ನಲ್ಲಿ ಕಟ್ಟಿಕೊಡಲಾಗಿದೆ… ಅತ್ಯಾಚಾರಿಯ ನಿರ್ಲಜ್ಜ ಸಮರ್ಥನೆಯನ್ನ ಡಾಕ್ಯುಮೆಂಟರಿಯಲ್ಲಿ ಬಳಿಸಿಕೊಳ್ಳಲಾಗಿದೆ ಅನ್ನೋದನ್ನ ಬಿಟ್ರೆ ನಿಜಕ್ಕೂ ಡಾಕ್ಯುಮೆಂಟರಿ ಇಡೀ ಘಟನೆಯ ಕರಾಳತೆಗೆ ಕನ್ನಡಿ ಹಿಡಿದಂತಿದೆ. ಒಬ್ಬ ಅತ್ಯಾಚಾರಿಯನ್ನ ಸಂದರ್ಶಿಸಲು ನಿರ್ಧೇಶಕಿ ಲೆಸ್ಲಿ ವುಡ್ವಿನ್ ತೆಗೆದುಕೊಂಡ ಶ್ರಮವನ್ನ ಘಟನೆಯ ಪ್ರತ್ಯಕ್ಷ ಸಾಕ್ಷಿ ನಿರ್ಭಯಾಳ ಸ್ನೇಹಿತ. ಇಡೀ ಡಾಕ್ಯುಮೆಂಟರಿಯಲ್ಲಿ ಆತನ ಬಗ್ಗೆ ಅಷ್ಟಾಗಿ ವಿವರವೇ ಇಲ್ಲ. ಘಟನೆಯ ಬಗ್ಗೆ ಆತನಿಂದ ಯಾವುದೇ ಮಾಹಿತಿ ಪಡೆದಿಲ್ಲ. ಅತ್ಯಾಚಾರಿಯೊಬ್ಬನ ಅಸಹ್ಯ ಸಮರ್ಥನೆಯ ಬದಲಿಗೆ ಘಟನೆಯ ಪ್ರತ್ಯಕ್ಷ ಸಾಕ್ಷಿಯ ಹೇಳಿಕೆಯನ್ನ ಬಳಸಬೇಕಿತ್ತು. ಆದ್ರೆ ಅದು ನಿರ್ಧೇಶಕಿಯಿಂದ ಸಾಧ್ಯವಾಗಿಲ್ಲ…         ಆದ್ರೆ ಒಂದು ಗಂಟೆಯಿರುವ ಇಂಡಿಯಾಸ್ ಡಾಟರ್ ಡಾಕ್ಯುಮೆಂಟರಿ ಎರೆಡು ವರ್ಷದ ಹಿಂದೆ ನಡೆದುಹೋದ ಆ ಭೀಕರ ಅತ್ಯಾಚಾರದ ಕರಾಳ ದೃಶ್ಯಗಳನ್ನ ಕಣ್ಣಿಕೆ ಕಟ್ಟಿ ಕೊಡುತ್ತದೆ. ಡಾಕ್ಯುಮೆಂಟರಿಯಲ್ಲಿ ನಿರ್ಭಯಾಳ ಕನಸು, ಆ ಕನಸು ಹೆತ್ತವರ ಮುಂದೆಯೇ ಕಮರಿಹೋದ ರೀತಿ, ಆಕೆಯ ತಂದೆ ತಾಯಿಯ ಕಣ್ಣೀರು, ಒಂದಿನಿತೂ ಪಾಪ ಪ್ರಜ್ಞೆ ಇಲ್ಲದ ಅತ್ಯಾಚಾರಿಗಳು, ಅತ್ಯಾಚಾರಿಗಳ ಮನಸ್ಥಿತಿ, ಅತ್ಯಾಚಾರಿಗಳಿಗಿಂತಲೂ ನಿರ್ಲಜ್ಜತನದಿಂದ ಮಾತನಾಡುವ ಆರೋಪಿಗಳ ಪರ ವಕೀಲರು, ದೆಹಲಿಯಂತಹ ದೊಡ್ಡ ನಗರಗಳಲ್ಲಿನ ಸ್ಲಂ ನಲ್ಲಿರುವ ಬಡತನ, ಅಲ್ಲಿನ ವಾತಾವರಣ, ಅತ್ಯಾಚಾರಿಗಳ ಮನೆಯವರ ಅಸಹಾಯಕತೆ, ಮಕ್ಕಳೆಡೆಗಿನ ಅವರ ಸಮರ್ಥನೆ, ಇದ್ದ ಒಬ್ಬ ಮಗ ಜೈಲು ಪಾಲದ ಅನ್ನೋ ಅವರ ನೋವು, ನಿರ್ಭಯಾ ಅತ್ಯಾಚಾರವಾದ ನಂತ್ರ ನಡೆದ ದೊಡ್ಡ ಮಟ್ಟದ ಹೋರಾಟ, ಆ ನಂತರ ನ್ಯಾಯಾಲಯ ಆರೋಪಿಗಳಿಗೆ ದಂಡನೆ ನೀಡಿದ ವೇಗ ಎಲ್ಲವನ್ನೂ ಇಂಡಿಯಾಸ್ ಡಾಟರ್ ಡಾಕ್ಯುಮೆಂಟರಿ ಹೇಳಿಕೊಂಡು ಹೋಗುತ್ತೆ. ಕೇವಲ ನಿರ್ಭಯಾ ಅತ್ಯಾಚಾರ ಪ್ರಕರಣ ಮತ್ತು ಆ ನಂತರ ನಡೆದ ಹೋರಾಟ ಮಾತ್ರ ಟಿವಿಗಳಲ್ಲಿ ನೋಡಿದ್ದವರಿಗೆ ಇಡೀ ಘಟನೆಯ ಭೀಕರತೆ, ಅತ್ಯಾಚಾರಿಗಳ ನಿರ್ದಯತೆ ಎಲ್ಲವೂ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಇಡೀ ಡಾಕ್ಯುಮೆಂಟರಿಯನ್ನ ಒಂದೇ ಗುಕ್ಕಿನಲ್ಲಿ ನೋಡಿ ಮುಗಿಸಿದವರ ಕಣ್ಣಾಲಿಗಳು ನೀರು ಜಿನುಗುತ್ತವೆ. ಅಷ್ಟರ ಮಟ್ಟಿಗೆ ನಿರ್ಧೇಶಕಿ ಲೆಸ್ಲಿ ವುಡ್ವಿನ್ ಗೆದ್ದಿದ್ದಾರೆ.

ಆ ಊರಿನಲ್ಲಿ ಕಡುಬಡತನದಲ್ಲಿ ಆ ಮಗು ಹುಟ್ಟಿದಾಗ ಆ ಕುಟುಂಬ ಅದೆಷ್ಟು ಸಂಭ್ರಮ ಪಟ್ಟಿತ್ತು ಅಂದ್ರೆ ಊರವರಿಗೆಲ್ಲ ಸಿಹಿ ಹಂಚಿದ್ದರು. ಹೆಣ್ಣು ಮಗು ಹುಟ್ಟಿದ್ರೆ ಶಾಪ ಅನ್ನುವಂತಹ ಹಳ್ಳಿಯಲ್ಲಿ ನಿರ್ಭಯಾ ಹೆತ್ತವರನ್ನ ಹುಚ್ಚರಂತೆ ನೋಡಿದ್ದರು ಆ ಹಳ್ಳಿಯ ಜನ.ನಿರ್ಭಯಾ ಹೆತ್ತವರು ಬಡವರಾಗಿದ್ರೂ ಅವರ ಹೃದಯ ಶ್ರೀಮಂತಿಕೆಗೆ ಯಾರೂ ಸಾಟಿಯಿರಲಿಲ್ಲ.. ಡಾಕ್ಟರ್ ಆಗಬೇಕು ಅಂದುಕೊಂಡಿದ್ದ ಮಗಳ ಕನಸನ್ನ ಸಾಕಾರಗೊಳಿಸೋಕೆ ಆ ಕುಟುಂಬ ಊರಲ್ಲಿದ್ದ ಅಷ್ಟೂ ಆಸ್ತಿಯನ್ನೂ ಮಾರಿ ಆ ಹೆಣ್ಣುಮಗಳ ಓದಿಗಾಗಿ ಮೀಸಲಿಟ್ಟಿತ್ತು. ಆ ಕುಟುಂಬದ ಕಷ್ಟಗಳೆಲ್ಲವೂ ಮುಗಿದುಹೋಗೋಕೆ ಇನ್ನು ಕೇವಲ ಆರು ತಿಂಗಳುಗಳಷ್ಟೇ ಇದ್ವು… ಆರು ತಂಗಳು ಕಳೆದರೆ ತಮ್ಮ ಮಗಳು ಡಾಕ್ಟರ್ ಆಗಿ ಊರಿಗೆ ಬರ್ತಾಳೆ ಅನ್ನೋ ಕನಸು ಕಂಡಿದ್ದರು ಆ ತಂದೆ ತಾಯಿ. ಆದ್ರೆ ಆ ತಂದೆ ತಾಯಿಗಳ ಕಣ್ಣಲ್ಲೀಗ ಸಾಯುವವರೆಗೂ ಒರೆಸಲಾಗದ ಕಣ್ಣೀರೇ ಇದೆ. ತಮ್ಮ ಮಗಳಿಲ್ಲದೇ ಮತ್ತೆ ಬದುಕನ್ನ ಆರಂಭಿಸೋ ಉತ್ಸಾಹವೇ ಇಲ್ಲ ಆ ಅನಾಥ ತಂದೆ ತಾಯಿಗಳಿಗೆ.

ಅತ್ಯಾಚಾರ ಮಾಡಿದ ದುಷ್ಟರ ಕಣ್ಣಲ್ಲಿ ಒಂದಿಷ್ಟೂ ಪಾಪ ಪ್ರಜ್ಞೆ ಇಲ್ಲ ಅನ್ನೋದು ಡಾಕ್ಯುಮೆಂಟರಿಯನ್ನ ನೋಡಿದ್ರೆ ಗೊತ್ತಾಗುತ್ತೆ. ಅದ್ರಲ್ಲೂ ಮುಖೇಶ ಸಿಂಗ್ ತಾನೇನು ತಪ್ಪೇ ಮಾಡಿಲ್ಲ, ಅತ್ಯಾಚಾರದಂತಹ ಘಟನೆಗಳಲ್ಲಿ ಹುಡುಗಿಯರದ್ದೇ ಹೆಚ್ಚು ಜವಾಬ್ದಾರಿ ಇರುತ್ತೆ. ಆಕೆ ರಾತ್ರಿ ಒಂಬತ್ತು ಗಂಟೆ ಸಮಯದಲ್ಲಿ ತನ್ನ ಗೆಳೆಯನೊಂದಿಗೆ ಸಿನಿಮಾ ನೋಡಲು ಹೋಗಿದ್ದೇ ತಪ್ಪು, ಆಕೆ ಅತ್ಯಾಚಾರಕ್ಕೊಳಗಾಗಲು ಒಪ್ಪಿಕೊಳ್ಳಬೇಕಿತ್ತು, ಹೆಣ್ಣಯ ಮಕ್ಕಳು ಮನೆಗೆಲಸ ಮಾಡ್ಕೊಂಡಿರಬೇಕು ಅಂತ ಉಪದೇಶ ಮಾಡ್ತಾನೆ. ಇಷ್ಟಲ್ದ ತನಗೆ ಕೊಟ್ಟಿರೋ ಮರಣದಂಡನೆ ಶಿಕ್ಷೆಯಿಂದ ಮುಂದೆ ನಡೆಯೋ ಅತ್ಯಾಚಾರದಂತಹ ಘಟನೆಗಳಲ್ಲಿ ಅತ್ಯಾಚಾರಿಗಳು ಮಹಿಳೆಯರನ್ನ ಕೊಲ್ಲುತ್ತಾರೆ ಅಂತಾನೆ. ಈತನ ಮಾತುಗಳನ್ನ ಕೇಳಿದ್ರೆ ಅವನ ಹೀನ ಮನಸ್ಥಿತಿ, ನಿರ್ಧಯತೆ, ಮಾಡಿದ ತಪ್ಪಿನ ಬಗ್ಗೆ ಒಂದಿನಿತೂ ಇಲ್ಲದ ಪಶ್ಚಾತಾಪ ಡಾಕ್ಯುಮೆಂಟರಿ ನೋಡುತ್ತಿದ್ದವರಿಗೆ ಸಿಟ್ಟು ತರಿಸುತ್ತದೆ. ಅವತ್ತು ನಡುರಸ್ತೆಯಲ್ಲಿ ಸಿಕ್ಕವಳನ್ನ ಅಷ್ಟು ನಿರ್ಧಯವಾಗಿ ಅತ್ಯಾಚಾರ ಮಾಡಿದ ಕ್ರೂರ ಮನಸುಗಳ ದರ್ಶನವಾಗುತ್ತೆ. ಇದ್ರ ಜೊತೆಗೆ ಹಾಗೆ ಸಿಕ್ಕವಳನ್ನ ಅಷ್ಟು ಅದೆಷ್ಟು ಹಿಂಸಿಸಿ ಅತ್ಯಾಚಾರ ಮಾಡಿದ್ದಾರೆ ಅನ್ನೋದ್ರ ಭೀಕರತೆ ಕೂಡ ನಿಮಗೆ ಅರ್ಥವಾಗತ್ತೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಆಕೆಯೊಳಗೆ ರಾಡ್ ಹಾಕಿ ಆಕೆಯ ಕರುಳನ್ನ ಹೊರಗೆ ತೆಗೆಯುವಷ್ಟರ ಮಟ್ಟಿಗೆ. ಇಂತದ್ದೊಂದು ಭೀಕರ ಸಾಮೂಹಿಕ ಅತ್ಯಾಚಾರ ಇಲ್ಲಿಯವರೆಗೆ ನಡೆದಿರಲಿಲ್ಲ ಅನ್ನೋದೂ ಕೂಡ ಅರ್ಥವಾಗತ್ತೆ.

ಅತ್ಯಾಚಾರಿಗಳಿಗಿಂತಲೂ ನಿರ್ಲಜ್ಜತನದಿಂದ ಮಾತನಾಡಿರೋದು ಅವರ ಪರ ವಕೀಲರುಗಳು. ಮಹಿಳೆಯರು ಹೂ ಇದ್ದ ಹಾಗೆ, ಅವರನ್ನ ರಕ್ಷಣೆ ಮಾಡೋಕೆ ಒಬ್ಬ ಗಂಡು ಬೇಕೇ ಬೇಕು. ನೀವು ವಜ್ರವನ್ನ ರಸ್ತೆಯಲ್ಲಿಟ್ಟರೆ ಅದು ನಾಯಿ ಪಾಲಾಗುತ್ತೆ ಅಂತ ಮಾತಾಡುತ್ತಾನೆ ಅತ್ಯಾಚಾರಿಗಳ ಪರ ವಕೀಲ ಎಂ ಎಲ್ ಶರ್ಮ. ಇದಕ್ಕಿಂತಲೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾತಾಡಿರೋದು ಮತ್ತೊಬ್ವ ಲಾಯರ್ ಎಪಿ ಸಿಂಗ್. ತನ್ನ ಮಗಳೇನಾದರೂ ತಡರಾತ್ರಿ ಗೆಳೆಯನೊಂದಿಗೆ ಸಿನಿಮಾ ನೋಡಲು ಹೋದ್ರೆ ತಾನು ಎಲ್ಲರ ಮುಂದೆ ಬೆಂಕಿಯಿಟ್ಟು ಆಕೆಯನ್ನ ಸುಟ್ಟಾಕ್ತೀನಿ ಅಂತಾನೆ. ಇಂತಹ ಮರ್ಯಾದೆ ಬಿಟ್ಟ ಲಾಯರ್ ಗಳಿಂದ ನಮ್ಮ ಜನಕ್ಕೆ ಅದೇಗೆ ನ್ಯಾಯ ಸಿಗುತ್ತೋ ಆ ದೇವರೇ ಬಲ್ಲ. ಇಡೀ ಡಾಕ್ಯುಮೆಂಟರಿಯಲ್ಲಿ ಈ ಇಬ್ವರು ಲಾಯರ್ ಗಳ ಸಂಕುಚಿತ ಮನಸ್ಥಿತಿ, ನಿರ್ಲಜ್ಜತನ, ಗಂಡಿದ್ದರೆ ಮಾತ್ರ ಹೆಣ್ಣಿಗೆ ರಕ್ಷಣೆ ಅನ್ನೋ ವಾದದ ಹಿಂದೆನ ಇವರ ಕರಾಳ ಮುಖಗಳ ದರ್ಶನವಾಗುತ್ತೆ.

ಇಡೀ ಡಾಕ್ಯುಮೆಂಟರಿಯಲ್ಲಿ ಭಾರತೀಯ ಗಂಡಸರೆಲ್ಲ ಅತ್ಯಾಚಾರೀ ಮನಸ್ಥಿತಿಯವರು ಅಂತ ಎಲ್ಲೂ ಹೇಳಿಲ್ಲ. ಅತ್ಯಾಚಾರದಂತಹ ಘಟನೆಗಳು ಯಾಕೆ ನಡೆಯುತ್ತವೆ ಅನ್ನೊ ಪ್ರಶ್ನೆಗೆ ಹುಡುಕಾಟವಿದೆ. ಇದ್ರ ಜೊತೆಗೆ ನಿರ್ಭಯಾ ಅತ್ಯಾಚಾರ ಘಟನೆಯ ನಂತ್ರ ಇಡೀ ದೇಶ ಆಕೆಯ ಬೆನ್ನಿಗೆ ನಿಂತು ಹೋರಾಟ ಮಾಡಿದ್ದನ್ನ , ಪೊಲೀಸರ ಕ್ಷಿಪ್ರ ತನಿಖೆಯನ್ನ,ನ್ಯಾಯಾಲಯದ ತ್ವರಿತ ವಿಚಾರಣೆಯನ್ನ ಹೇಳುತ್ತೆ. ಅದೆಲ್ಲದಕ್ಕೂ ಆ ಒಂದು ಹೋರಾಟ ಬಲ ತಂದುಕೊಟ್ಟಿತ್ತು. ಬಹುಶಃ ಜಗತ್ತಿನ ಯಾವ ದೇಶದಲ್ಲೂ ಮಹಿಳೆಯೊಬ್ಬಳ ಮೇಲೆ ನಡೆದ ಅತ್ಯಾಚಾರವನ್ನ ಇಷ್ಟು ದೊಡ್ಡ ಮಟ್ಟದಲ್ಲಿ ಖಂಡಿಸಿರಲಿಲ್ಲ. ಅಂತಹ ಹೋರಾಟವನ್ನ ಭಾರತೀಯರು ಮಾಡಿದ್ದಾರೆ ಅನ್ನೋ ದನ್ನೂ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಆದ್ರೆ ಇಡೀ ಡಾಕ್ಯುಮೆಂಟರಿಯ ಒಂದೇ ಒಂದು ಕೊರತೆ ನಿರ್ಭಯಾ ಸ್ನೇಹಿಯನ ಅನುಪಸ್ಥಿತಿ. ಇಡೀ ಘಟನೆಯ ಪ್ರತ್ಯಕ್ಷ ಸಾಕ್ಷಿ ಆತ. ಆದ್ರೆ ಆತನ ಒಂದೇ ಒಂದು ಹೇಳಿಕೆ ಕೂಡ ಡಾಕ್ಯುಮೆಂಟರಿಯಲ್ಲಿಲ್ಲ. ಒಬ್ಬ ಅತ್ಯಾಚಾರಿಯ ಹೀನ ಸಮರ್ಥನೆಯನ್ನ ಹೇಳಲು ಹೊರಟವರು ನಿರ್ಭಯಾಳ ಗೆಳೆಯನನ್ನ ಮಾತಾಡಿಸಬೇಕಿತ್ತು.. ಹಾಗೆ ಆಗಿದ್ದಿದ್ರೆ ಇಡೀ ಡಾಕ್ಯುಮೆಂಟರಿಯ ತೂಕ ಇನ್ನಷ್ಟು ಹೆಚ್ಚಾಗ್ತಾಯಿತ್ತು. ಈ ಡಾಕ್ಯುಮೆಂಟರಿಯನ್ನ ನಿರ್ಭಂದ ಮಾಡುವಂತದ್ದು ಏನೂ ಇಲ್ಲ. ಆ ಒಂದು ಅತ್ಯಾಚಾರಿಯ ಸಮರ್ಥನೆಯನ್ನ ಬಿಟ್ಟು. ಅದನ್ನ ತೆಗೆದುಹಾಕಿ ಭಾರತೀಯರಿಗೆ ಇದನ್ನ ನೋಡುವ ಅವಕಾಶ ಸಿಗುವಂತೆ ಸರ್ಕಾರ ಮಾಡಬೇಕಿದೆ. ಹಾಗೆ ಮಾಡಿದ್ರೆ ಇಡೀ ಘಟನೆಯ ಭೀಕರತೆ ನಮ್ಮ ಜನರಿಗೆ ಅರ್ಥವಾಗುತ್ತೆ.

-ಶಶಿವರ್ಣಂ

 

ಒಬ್ಬ ಅತ್ಯಾಚಾರಿಯ ಮನಸ್ಥಿತಿಯನ್ನ ಅರ್ಥ ಮಾಡಿಕೊಳ್ಳುವುದು ಎಂತ ಪತ್ರಿಕೋದ್ಯಮ…

image

ಇದೆಂತಾ ಪತ್ರಿಕೋದ್ಯಮ…

      ಮತ್ತೆ ಅಂತಹ ಹೀನ ಕೃತ್ಯ ಯಾವ ಹೆಣ್ಣು ಮಗಳ ಮೇಲೂ ಆಗಬಾರದು. ಅಂತಾದ್ದೊಂದು ಹೀನ ಸಾಮೂಹಿಕ ಅತ್ಯಾಚಾರ ಎರೆಡು ವರ್ಷಗಳ ಹಿಂದೆ ನಿರ್ಭಯಾಳ ಮೇಲೆ ನಡೆದು ಹೋಗಿತ್ತು. ಅದಾದ ನಂತ್ರ ಇಡೀ ದೇಶ ನಿರ್ಭಯಾಳಿಗಾಗಿ ಹೋರಾಟ ಮಾಡಿತ್ತು. ಹದಿಮೂರು ದಿನಗಳ ಕಾಲ ಬದುಕಿನೊಂದಿಗೆ ಹೋರಾಟ ಮಾಡಿದ ಆ ಹೆಣ್ಣು ಮಗಳು ಕೊನೆಗೆ ಶರಣಾಗಿದ್ದು ಸಾವಿಗೆ. ಆರು ಮಂದಿ ಮನುಷ್ಯ ರೂಪದ ಮೃಗಗಳು ಆ ಹೆಣ್ಣುಮಗಳ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದರು. ಅಷ್ಟೇ ಅಲ್ಲ ಆಕೆಯ ಮೇಲೆ ಕಬ್ವಿಣದ ರಾಡ್ ನಿಂದ ಹಲ್ಲೆ ನಡೆಸಲಾಗಿತ್ತು. ಈಗ ಆ ಅಮಾನವೀಯ ಅತ್ಯಾಚಾರದಲ್ಲಿ ಭಾಗಿಯಾಗಿದ್ದವನೊಬ್ಬ ಡಾಕ್ಯುಮೆಂಟರಿಗೆಂದು ಸಂದರ್ಶನ ನೀಡಿದ್ದಾನೆ. ಅತ್ಯಾಚಾರ ನಡೆದ ಬಸ್ ಡ್ರೈವರ್ ಆಗಿದ್ದ ಮುಖೇಶ್ ಸಿಂಗ್ ನನ್ನ ‘ ಇಂಡಿಯಾಸ್ ಡಾಟರ್ ‘ ಡಾಕ್ಯುಮೆಂಟರಿಗಾಗಿ ಸಂದರ್ಶಿಸಲಾಗಿದೆ. ಆ ಡಾಕ್ಯುಮೆಂಟರಿ ಇದೇ ಭಾನುವಾರ ಅಂದರೆ ವಿಶ್ವ ಮಹಿಳಾ ದಿನದಂದು ಬಿಬಿಸಿ ಮತ್ತು ಎನ್ ಡಿ ಟಿವಿಯಲ್ಲಿ ಪ್ರಸಾರವಾಗಲಿದೆ. ಒಬ್ಬ ಅತ್ಯಾಚಾರಿಯನ್ನ ಸಂದರ್ಶನ ಮಾಡುವುದು ಎಷ್ಟರ ಮಟ್ಟಿಗೆ ಸರಿ ಅನ್ನುವುದು ಈಗಿನ ಪ್ರಶ್ನೆ. ಮಾನವೀಯತೆಯನ್ನ ಮರೆತು ಅಸಹಾಯಕಳ ಮೇಲರಗಿದ ಕ್ರೂರ ಮೃಗಕ್ಕೆ ವೇದಿಕೆ ನೀಡುವುದು ಎಷ್ಟರಮಟ್ಟಿಗೆ ಸಮ್ಮತ. ಒಂದು ವೇಳೆ ಆ ಅತ್ಯಾಚಾರಿ ತಾನು ಮಾಡಿದ ಕೃತ್ಯಕ್ಕೆ ಪಶ್ಚಾತಾಪ ಪಡುವಂತಹ ಮಾತುಗಳನ್ನಾಡಿದ್ದಿದ್ದರೆ ಆ ಸಂದರ್ಶನವನ್ನ ಒಪ್ಪಬಹುದಿತ್ತೇನೋ… ಆದ್ರೆ ಆ ಅಸಹ್ಯ ನಾಯಿ ಸಂದರ್ಶನದಲ್ಲಿ ಹೇಳಿರೋದು ಏನು ಗೊತ್ತಾ…?

* ಅವತ್ತು ನಡೆದ ಅತ್ಯಾಚಾರ ಮತ್ತು ಮಾರಣಾಂತಿಕ ಹಲ್ಲೆ ಆಕಸ್ಮಿಕ.
* ರೇಪ್ ಗೆ ಹುಡುಗನಿಗಿಂತ ಹುಡುಗಿಯೇ ಹೆಚ್ಚು ಜವಾಬ್ದಾರಿಯಾಗಿರುತ್ತಾಳೆ.
* ಒಂದು ಕೈನಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ
* ರಾತ್ರಿ ಸಮಯದಲ್ಲಿ ಓಡಾಡುವುದು ಮಹಿಳೆಯರ ತಪ್ಪು.
* ಅತ್ಯಾಚಾರಕ್ಕೆ ಸಹಕರಿಸಿದ್ದಿದ್ದರೆ ನಾವು ಹಲ್ಲೆ ಮಾಡುತ್ತಿರಲಿಲ್ಲ
* ನಾವು ರೇಪ್ ಮಾಡುವಾಗ ಅವರು ತಿರುಗಿ ಬೀಳಬಾರದಿತ್ತು, ರೇಪ್ ಮಾಡಲು ಅವಕಾಶ ಮಾಡಿಕೊಡಬೇಕಿತ್ತು.
* ರಾತ್ರಿ ಒಂಬತ್ತು ಘಂಟೆಯ ನಂತರ ಒಳ್ಳೆಯ ಹುಡುಗಿಯರಾರೂ ಹೊರಗೆ ಓಡಾಡುವುದಿಲ್ಲ.
* ಹುಡುಗಿಯರು ಮನೆಗೆಲಸ ಮಾಡಿಕೊಂಡಿರಬೇಕು, ಪಾರ್ಟಿಗಳಿಗೆ ಹೋಗುವಂತಿಲ್ಲ.
* ತನಗೆ ನೀಡಿರುವ ಗಲ್ಲುಶಿಕ್ಷೆಯಿಂದ ಇನ್ನು ಮುಂದೆ ಅತ್ಯಾಚಾರದ ಸಂತ್ರಸ್ಥರಿಗೆ ತೊಂದರೆಯಾಗಲಿದೆ.
* ಇನ್ನು ಮುಂದೆ ಅತ್ಯಾಚಾರ ಮಾಡಿದ ನಂತರ ಆಕೆಯನ್ನ ಕೊಲ್ಲುತ್ತಾರೆ.
* ಮೊದಲಾಗಿದ್ದರೆ ಯಾರಿಗೂ ಹೇಳುವುದಿಲ್ಲ ಎಂದು ಬಿಟ್ಟುಬಿಡುತ್ತಿದ್ದರು.
* ಕೇವಲ ಇಪ್ಪತ್ತು ಪರ್ಸೆಂಟ್ ಹುಡುಗಿಯರು ಮಾತ್ರ ಒಳ್ಳೆಯವರು.

ಇಷ್ಟೆಲ್ಲ ಲೆಕ್ಚರಿಂಗ್ ಕೊಟ್ಟಿದ್ದಾನೆ ಅತ್ಯಾಚಾರ ಮಾಡಿದ್ದ ಮುಖೇಶ್ ಸಿಂಗ್. ತಾನು ಮಾಡಿರುವ ತಪ್ಪಿನ ಬಗ್ಗೆ ಪಾಪಪ್ರಜ್ಞೆ ಕಾಡುವ ಯಾವನೇ ಆಗಲಿ ಇಂತಹ ಮಾತುಗಳನ್ನಾಡುವುದಿಲ್ಲ. ನಿರ್ಭಯಾ ಮೇಲೆ ಅತ್ಯಾಚಾರ ಮಾಡಿದ್ದ ರಾಮ್ ಸಿಂಗ್ ಎಂಬಾತ ತಾನು ಮಾಡಿದ ತಪ್ಪಿನಿಂದ ಪಾಪ ಪ್ರಜ್ಞೆ ಕಾಡಿ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ. ಮಾಡಿದ ತಪ್ಪಿಗೆ ತನಗೆ ತಾನೇ ಶಿಕ್ಷೆ ಕೊಟ್ಟುಕೊಂಡಿದ್ದ. ಆದ್ರೆ ಈ ಮುಖೇಶ್ ಸಿಂಗ್ ತಾನು ಮಾಡಿದ ಹೀನ ಕೃತ್ಯವನ್ನ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುತ್ತಿದ್ದಾನೆ. ಇವನಿಗಿಂತ ಲಜ್ಜೆಗೆಟ್ಟವರು ಇವನನ್ನ ಸಂದರ್ಶನ ಮಾಡಿದವರು ಮತ್ತು ಅದನ್ನ ಪ್ರಸಾರ ಮಾಡಿ ಮಹಿಳೆಯರಿಗೆ ನ್ಯಾಯ ಒದಗಿಸುತ್ತೇವೆ ಅಂತ ಮಾತನಾಡುತ್ತಿರುವವರು.

ಇಂತ ಒಂದು ಸಂದರ್ಶನ ಮಾಡಿರೋದು ಕೂಡ ಒಬ್ವ ಮಹಿಳೆ ಅನ್ನೋದು ನಾಚಿಕೆಗೇಡಿನ ವಿಷಯ. ಲೆಸ್ಲಿ ವುಡ್ವಿನ್ ಎಂಬಾಕೆ ಈ ಸಂದರ್ಶನ ಮಾಡಿದ್ದಾಳೆ. ದೆಹಲಿಯಲ್ಲಿ ನಡೆದ ಆತ್ಯಾಚಾರ ಪ್ರಕರಣ ಅತ್ಯಂತ ಹೀನ ಕೃತ್ಯ. ಇಂತಹ ಹೀನ ಕೃತ್ಯವನ್ನ ಕಥೆಯಾಗಿ ಕಟ್ಟಿಕೊಡುತ್ತೇನೆ ಅಂತಿದ್ದಾಳೆ. ಒಂದು ಒಳ್ಳೆಯ ಉದ್ದೇಶಕ್ಕಾಗಿ ಡಾಕ್ಯುಮೆಂಟರಿ ಮಾಡಿದ್ದಿದ್ದರೆ ಎಲ್ಲರೂ ಈಕೆಯನ್ನ ಗೌರವಿಸುತ್ತಿದ್ದರೇನೋ. ಆದ್ರೆ ಈಕೆ ಅತ್ಯಾಚಾರಿಯೊಬ್ಬನಿಗೆ ವೇದಿಕೆ ಒದಗಿಸಿಕೊಟ್ಟಿದ್ದಾಳೆ. ಅದೂ ಆತ ತಾನು ಮಾಡಿರುವ ಕೃತ್ಯವನ್ನ ನಿರ್ಲಜ್ಜತನದಿಂದ ಸಮರ್ಥಿಸಿಕೊಂಡಿರೋದನ್ನ ಈಕೆ ಜಗತ್ತಿಗೆ ತೋರಿಸಿ ಅದೇನನ್ನ ಸಾಧಿಸುತ್ತಾಳೋ ಗೊತ್ತಿಲ್ಲ. ಆತ ತಾನು ಮಾಡಿರುವ ಕೃತ್ಯವನ್ನ ತಪ್ಪು ಅಂತ ಒಪ್ಪಿಕೊಂಡು ಪಶ್ಚಾತಾಪ ಪಟ್ಟಿದ್ದರೆ ಈ ಡಾಕ್ಯುಮೆಂಟರಿಯನ್ನ ಒಪ್ಪಿಕೊಳ್ಳಬಹುದಿತ್ತೇನೋ. ಆದ್ರೆ ಅತ್ಯಾಚಾರಿಯೊಬ್ಬನ ವಿಕೃತ ಸಮರ್ಥನೆಯನ್ನ ಯಾವ ನಾಗರೀಖ ಸಮಾಜವೂ ಒಪ್ಪಿಕೊಳ್ಳುವುದಿಲ್ಲ. ಇಂತಹ ಒಂದು ಸಂದರ್ಶನವನ್ನ ಮಾಡ್ತಾಯಿರೋದು ಆ ಅತ್ಯಾಚಾರಿಯ ಮನಸ್ಥಿತಿಯನ್ನ ಅರ್ಥ ಮಾಡಿಕೊಳ್ಳುವುದಕ್ಕಂತೆ. ನಾಚಿಕೆಯಾಗಬೇಕು ಇಂತ ಮಾತುಗಳನ್ನ ಹೇಳುವುದಕ್ಕೆ.. ಒಬ್ವ ಹೆಣ್ಣು ಮಗಳನ್ನ ಅಮಾನವೀಯವಾಗಿ ಅತ್ಯಾಚಾರ ಮಾಡುವವನ ಮನಸ್ಥಿತಿ ಎಂತಾದ್ದು ಅನ್ನೋದು ಎಲ್ಲರಿಗೂ ಗೊತ್ತಾಗುತ್ತೆ. ಅದನ್ನ ಮತ್ತೆ ಸಂದರ್ಶನ ಮಾಡಿ ನೋಡಬೇಕಾದ ಅವಶ್ಯಕತೆಯೂ ಇಲ್ಲ. ಅಂತಹ ಅಸಹ್ಯ ಮನುಷ್ಯ ರೂಪದ ಮೃಗಗಳಿಗೆ ವೇದಿಕೆ ಕಲ್ಪಿಸಿಕೊಡುವ ಅಗತ್ಯವೂ ಇಲ್ಲ. ಎಲ್ಲ ಸ್ಟೋರಿಗಳಿಗೆ ಬೇರೆಯದ್ದೇ ಆದ ಒಂದು ಮುಖ ಇರುತ್ತೆ… ಆ ಮುಖವನ್ನ ನಾವು ಈ ಡಾಕ್ಯುಮೆಂ.ಟರಿಯಲ್ಲಿ ತೋರಿಸ್ತೀವಿ ಅಂತಾರೆ. ದೆಹಲಿಯ ನ್ಯಾಯಾಲಯ ಅತ್ಯಾಚಾರ ಮಾಡಿದ ಕಾಮುಕರಿಗೆ ಮರಣದಂಡನೆ ವಿಧಿಸಿದೆ. ಈ ನೆಲದ ಕಾನೂನು ಆ ಘೋರ ಅಪರಾಧ ಮಾಡಿದವರಿಗೆ ಶಿಕ್ಷೆಯನ್ನೂ ನೀಡಿದೆ. ನ್ಯಾಯಾಲಯ ಅಪರಾಧಿಗಳು ಅಂತ ಹೇಳಿ ಶಿಕ್ಷೆ ಕೊಟ್ಟ ಮೇಲೆ ಇವರು ಇನ್ನೊಂದು ಮುಖ ಅಂದರೆ ಏನನ್ನ ತೋರಿಸುತ್ತಾರೆ. ಸಂದರ್ಶನ ಮಾಡುವವರು ತೋರಿಸುತ್ತಿರುವುದು ಅತ್ಯಾಚಾರಿಯೊಬ್ಬನ ಕರಾಳ ಮುಖವನ್ನ. ಎನ್ ಡಿ ಟಿವಿ ಮತ್ತು ಬಿಬಿಸಿ ಯಂತಹ ದೊಡ್ಡ ನ್ಯೂಸ್ ಚಾನಲ್ ಗಳಿಂದ ಯಾರೊಬ್ಬರೂ ಇಂತದ್ದೊಂದು ಹುಚ್ಚು, ವಿಕೃತ ನಡೆಯನ್ನ ನಿರೀಕ್ಷೆ ಮಾಡಿರಲಿಲ್ಲ. ಸದ್ಯಕ್ಕೆ ಸರ್ಕಾರ ಈ ಡಾಕ್ಯುಮೆಂಟರಿಯನ್ನ ಪ್ರಸಾರ ಮಾಡದಂತೆ ನಿಷೇಧ ಮಾಡಿದೆ. ಒಂದು ವೇಳೆ ಅದು ಪ್ರಸಾರವಾಗಿದ್ದೇ ಆದ್ರೆ ಅದು ನಿರ್ಭಯಾ ಮತ್ತು ಆಕೆಯಂತೆ ಅತ್ಯಾಚಾರಕ್ಕೊಳಗಾದ ನೂರಾರು ಅಮಾಯಕ ಮಹಿಳೆಯರಿಗೆ ಮಾಡಿದ ಅವಮಾನವಷ್ಟೇ…. ಒಬ್ಬ ಅತ್ಯಾಚಾರಿಯ ಮನಸ್ಥಿತಿಯನ್ನ ಅರ್ಥ ಮಾಡಿಕೊಳ್ಳುವುದು ಯಾವ ರೀತಿಯ ಪತ್ರಿಕೋದ್ಯಮ. ಇಷ್ಟು ಕೆಳಮಟ್ಟಕ್ಕೆ ಇಳಿದು ಪತ್ರಿಕೋದ್ಯಮ ಮಾಡಬೇಕಾ… ನಾಚಿಕೆಯಾಗಬೇಕು…

ನೈತಿಕ ಪೊಲೀಸ್ ಗಿರಿಯನ್ನ ವಿರೋಧಿಸಲು ಅನೈತಿಕತೆಗಿಳಿಯಬೇಕಾ…?

ಪ್ರತಿಭಟನೆ ಮಾಡೋಕೆ ಎಲ್ಲರಿಗೂ ಹಕ್ಕಿದೆ… ಎಲ್ಲ ವಿಚಾರಗಳ ಬಗ್ಗೆಯೂ ಪ್ರತಿಭಟಿಸುವ ಅವಕಾಶ ಇದೆ.. ಈಗ ನೈತಿಕ ಪೊಲೀಸ್ ಗಿರಿಯನ್ನ ಪ್ರತಿಭಟಿಸೋಕೆ ಕಿಸ್ ಡೇ ಮಾಡುವ ಮೂಲಕ ಪ್ರತಿಭಟಿಸೋಕೆ ಒಂದು ಗುಂಪು ಸಿದ್ದತೆ ನಡೆಸ್ತಾಯಿದೆ.. ಕೇರಳದ ಕೊಚ್ಚಿಯಲ್ಲಿ ಕಿಸ್ಸಿಂಗ್ ಡೇ ಮಾಡಲು ಹೋಗಿ ಅವಾಂತರ ಸೃಷ್ಟಿಸಿದ್ದ ಅದೇ ಮನಸ್ಥಿತಿಯ ಗುಂಪು ಸಿಲಿಕಾನ್ ಸಿಟಿಯಲ್ಲೂ ಕಿಸ್ಸಿಂಗ್ ಡೇ ಮಾಡ್ತೀವಿ ಅಂತ ಓಡಾಡುತ್ತಿದ್ದಾರೆ… ಕಿಸ್ಸಿಂಗ್ ಡೇ ಮಾಡ್ತೀವಿ ಅಂತ ಹಾರಾಡುತ್ತಿರುವವರನ್ನ ಯಾಕೆ ಹೀಗೆ ಪ್ರತಿಭಟಿಸುತ್ತಿದ್ದೀರಾ ಅಂತ ಕೇಳಿದ್ರೆ ನೈತಿಕ ಪೊಲೀಸ್ ಗಿರಿ ಅಂತಾರೆ. ಇತ್ತೀಚೆಗೆ ನೈತಿಕ ಪೊಲೀಸ್ ಗಿರಿ ನಡೆದ ಘಟನೆಗಳಂತೂ ನಮ್ಮ ನಾಡಿನಲ್ಲಿ ನಡೆದಿಲ್ಲ. ಈ ಹಿಂದೆ ಹೋಮ್ ಸ್ಟೇ ನಲ್ಲಿ ದಾಳಿಗಳಾದಾಗ, ಯುವತಿಯರ ಮೇಲೆ ಹಲ್ಲೆಗಳಾದಾಗ ಎಲ್ಲರೂ ನೈತಿಕ ಪೊಲೀಸ್ ಗಿರಿಯನ್ನ ತಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸಿದ್ದಾರೆ. ಆ ಪ್ರತಿಭಟನೆಗಳಿಗೆ ಜನಬೆಂಬಲವೂ ವ್ಯಕ್ತವಾಗಿತ್ತು. ನೈತಿಕ ಪೊಲೀಸ್ ಗಿರಿಯನ್ನ ದೊಡ್ಡ ಮಟ್ಟದಲ್ಲಿ ಖಂಡಿಸಲಾಗಿತ್ತು. ಆ ಘಟನೆಗಳು ನಡೆದ ನಂತ್ರ ನೈತಿಕ ಪೊಲೀಸ್ ಗಿರಿಯ ಆಟಾಟೋಪವೇನೂ ನಡೆದಿಲ್ಲ. ಆದ್ರೆ ಕೆಲವು ವಿಕೃತ ಮನಸಿನ ಗುಂಪುಗಳಂತೂ ನೈತಿಕ ಪೊಲೀಸ್ ಗಿರಿಯನ್ನ ವಿರೋಧಿಸೋಕೆ ಕಿಸ್ಸಿಂಗ್ ಡೇ ಮಾಡುವ ಹುಚ್ಚಾಟಕ್ಕೆ ಮುಂದಾಗಿಬಿಟ್ಟಿದೆ. ಏನೇ ಒಂದು ವಿವಾದ ಸೃಷ್ಟಿ ಮಾಡಿ ಸುದ್ದಿಯಲ್ಲಿರಬೇಕು ಅನ್ನೋ ಉದ್ದೇಶ ಬಿಟ್ರೆ ಇಲ್ಲಿ ನೈತಿಕ ಪೊಲೀಸ್ ಗಿರಿಯನ್ನ ವಿರೋಧಿಸುವ ಪ್ರಮಾಣಿಕ ಉದ್ದೇಶವಂತೂ ಯಾರಿಗೂ ಇಲ್ಲ. ಇಲ್ಲಿ ಪ್ರಶ್ನೆ ಇರೋದು ನೈತಿಕ ಪೊಲೀಸ್ ಗಿರಿಯನ್ನ ವಿರೋಧಿಸೋಕೆ ಅನೈತಿಕತೆಗಿಳಿಯಬೇಕಾ ಅನ್ನೋದು. ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕಾಗಿರೋದನ್ನ ನಡುಬೀದಿಯಲ್ಲಿ ಮಾಡ್ತೀವಿ ಅನ್ನುವವರ ಹುಚ್ಚಾಟಕ್ಕೆ ಕೆಲವು ಸ್ವಯಂಘೋಷಿತ ಬುದ್ದಿ ಜೀವಿಗಳು ಜೈ ಜೈ ಅಂತಿದ್ದಾರೆ… ಇಷ್ಟೇ ಅಲ್ಲ ಕಿಸ್ ಡೇ ಮಾಡೋದು, ಅರೆ ಬಟ್ಟೆ ತೊಟ್ಟು ಆ ಕಿಸ್ ಡೇ ಯಲ್ಲಿ ಭಾಗವಹಿಸಿ ಸಿಕ್ಕಸಿಕ್ಕವರ ಬಾಯಿಗೆ ಮುತ್ತಿಡೋದು ಕೂಡ ಮಹಿಳಾ ಸಬಲೀಕರಣದ ಒಂದು ಭಾಗವಂತೆ.

ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ಶಾಲೆಗಳಲ್ಲಿ ಮಕ್ಕಳ ಮೇಲೆ ಅನಾಚಾರ ಅತ್ಯಾಚಾರಗಳು ನಡೆದು ಹೋದ್ವು. ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರ ನಡೆದ ಘಟನೆಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯ್ತು. ಬಾಯ್ತೆರೆದ ಚರಂಡಿಗೆ ಆಟವಾಡ್ತಿದ್ದ ಮಗು ಬಿದ್ದು ಉಸಿರು ಚೆಲ್ಲಿತ್ತು. ಅನ್ನದಾತರು ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಕ್ತಿಲ್ಲ ಅಂತ ಕಂಗಾಲಾದ್ರು. ಇವೆಲ್ಲವೂ ವ್ಯವಸ್ಥೆಯ ವಿರುದ್ಧ ನಾಗರೀಕ ಸಮಾಜ ಪ್ರತಿಭಟಿಸಲೇ ಬೇಕಾದ ವಿಷಯಗಳು. ಪ್ರತಿಭಟನೆಗಳೂ ವ್ಯಕ್ತವಾದ್ವು. ಆದ್ರೆ ಈ ಕಿಸ್ಸಿಂಗ್ ಡೇ ಮಾಡುವ ಜನ ಮಾತ್ರ ಎಲ್ಲೂ ಕಾಣಿಸಿಕೊಳ್ಳಲಿಲ್ಲ.. ಈಗ ಪ್ರತಿಭಟನೆ ಮಾಡಿ ಎಲ್ಲರ ಕಣ್ಣು ತೆರೆಸುತ್ತಾರಂತೆ. ರಾಜ್ಯದಲ್ಲಿ ಅದೆಷ್ಟೋ ಭಾಗಗಳಲ್ಲಿ ಹೆಣ್ಣುಮಕ್ಕಳು ಮುಟ್ಟಾದರೆ ಊರಿನಿಂದ ಹೊರಗೆ ಇಡುವ ಅನಿಷ್ಟ ಪದ್ದತಿ ಇದೆ. ಅಂತದ್ದನ್ನ ವಿರೋಧಿಸಿ ಇವ್ರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿ ಆರೀತಿಯ ಅನಿಷ್ಟ ಪದ್ದತಿಗೆ ಅಂತ್ಯ ಹಾಡಲಿ. ಪ್ರತಿಭಟನೆ, ಹೋರಾಟ ಮಾಡುವವರಿಗೆ ವಿಷಯಗಳು ತುಂಬಾ ಇವೆ. ಅದನ್ನ ಮಾಡೋದನ್ನ ಬಿಟ್ಟು ವಿಕೃತ ಹುಚ್ಚಾಟ ಮಾಡಿ ಪ್ರಚಾರ ಪಡೆದುಕೊಳ್ಳುವ ಈ ಸ್ವಯಂಘೋಷಿತ ಪ್ರಗತಿಪರರಿಗೆ ಏನ್ ಹೇಳುವುದು. ಹಾಗಂತ ನೈತಿಕ ಪೊಲೀಸ್ ಗಿರಿಯ ವಿರುದ್ಧ ಹೋರಾಡಬಾರದು ಅಂತಲ್ಲ. ಎಲ್ಲ ಹೋರಾಟಗಳಿಗೂ, ಪ್ರತಿಭಟನೆಗಳಿಗೂ ಒಂದು ಇತಿ ಮಿತಿ ಇದ್ದೇ ಇದೆ. ವಿಧಾನಸೌದಕ್ಕೆ ಮುತ್ತಿಗೆ ಹಾಕ್ತೀವಿ ಅಂತ ಅದನ್ನ ದ್ವಂಸ ಮಾಡಿಬಿಡ್ತೀವಿ ಅಂತ ಅಬ್ಬರಿಸಿಬಿಟ್ಟರೆ ಹೇಗೆ.

ಇಷ್ಟಕ್ಕೂ ಇವರು ಕಿಸ್ಸಿಂಗ್ ಡೇ ಮಾಡಿ ಸಮಾಜಕ್ಕೆ ಏನ್ ಮೆಸೇಜ್ ಕೊಡ್ತಿದ್ದಾರೆ.  ನಾಲ್ಕು ಗೋಡೆಗಳ ಮಧ್ಯೆ ನಡೆಯೋದನ್ನ ನಡುಬೀದಿಯಲ್ಲಿ ಮಕ್ಕಳು ಮಹಿಳೆಯರ ಮುಂದೆ ಅಸಹ್ಯ ಮಾಡಿ ಅದೇನು ಸಂದೇಶ ನೀಡಲು ಹೊರಟಿದ್ದಾರೋ..? ಯಾವುದೇ ಒಂದು ಪ್ರತಿಭಟನೆ ಮಾಡಿದ್ರೂ ಅದಕ್ಕೊಂದು ಉದ್ದೇಶ ಇರ್ಬೇಕು. ಈ ರೀತಿ ಕಿಸ್ಸಿಂಗ್ ಡೇ ಮಾಡಿ ಪ್ರತಿಭಟನೆ ಮಾಡ್ತೀವಿ ಅನ್ನೋರಿಗೆ ಆ ರೀತಿಯ ಯಾವ ಉದ್ದೇಶವೂ ಇದ್ದಂತಿಲ್ಲ. ನೈತಿಕ ಪೊಲೀಸ್ ಗಿರಿ ಸಮಾಜಕ್ಕೆ ಎಷ್ಟು ಅಪಾಯವೋ ಅದೇ ರೀತಿ ಈ ಕಿಸ್ಸಿಂಗ್ ಡೇ ಹುಚ್ಚಾಟವೂ ಅಷ್ಟೇ ಅಪಾಯ. ಈ ಕಿಸ್ಸಿಂಗ್ ಡೇ ಮಾಡಿ ಮಹಾನ್ ಪ್ರಗತಿಪರರ ರೀತಿ ಪೋಸ್ ಕೊಡುವ ಇದೇ ಮಂದಿ ನಾಳೆ ಏಯ್ಡ್ಸ್ ದಿನಾಚರಣೆ ದಿನ ಜಾಗೃತಿ ಮೂಡಿಸ್ತೀವಿ ಅಂತ ಬಾವುಟ ಹಿಡಿದುಕೊಂಡು ಬರ್ತಾರೆ. ಇವತ್ತು ನಡುಬೀದಿಯಲ್ಲಿ ಕಿಸ್ಸಿಂಗ್ ಡೇ ಮಾಡಿ ಪ್ರೊಟೆಸ್ಟ್ ಮಾಡ್ತೀವಿ ಅನ್ನೋರು ನಾಳೆ ಮತ್ತೊಂದನ್ನ ಮಾಡಿ ಪ್ರತಿಭಟಿಸ್ತೀವಿ ಅಂತಾರೆ. ಇವ್ರು ಕಿಸ್ಸಿಂಗ್ ಡೇ ಮಾಡ್ತೀವಿ ಅಂತ ತಕ್ಷಣ ತ್ರಿವಿಕ್ರಮನಂತೆ ಅದನ್ನ ವಿರೋಧಿಸೋಕೆ ಎದ್ದು ನಿಂತಿರೋದು ಹೋಮ್ ಸ್ಟೇ ವೀರಭಾಹು ಪ್ರಮೋದ್ ಮುತಾಲಿಕ್. ಅವ್ರು ಕಿಸ್ಸಿಂಗ್ ಡೇ ಮಾಡಿದ್ರೆ ನಾವು ಅದಕ್ಕೆ ಅಡ್ಡಿಪಡಿಸ್ತೀವಿ. ಕಾನೂನು ಸುವ್ಯವಸ್ಥೆಗೆ ದಕ್ಕೆ ಬಂದ್ರೆ ಅದಕ್ಕೆ ಶ್ರೀ ರಾಮಸೇನೆ ಹೊಣೆ ಅಲ್ಲ ಅಂತ ನಡುಬೀದಿಯಲ್ಲಿ ನಿಂತು ಪ್ರಮೋದ್ ಮುತಾಲಿಕ್ ಅಬ್ಬರಿಸ್ತಾಯಿದ್ದಾರೆ. ಕಿಸ್ಸಿಂಗ್ ಡೇ ಮಾಡೋರಿಗೂ ಬೇಕಾಗಿರೋದು ಕೂಡ ಇದೇ ವಿವಾದ ಸೃಷ್ಟಿಯಾಗ್ಬೇಕು ಅದಕ್ಕೆ ರಾಷ್ಟ್ರಮಟ್ಟದಲ್ಲಿ ಪ್ರಚಾರ ಸಿಗ್ಬೇಕು. ತಾವು ಮಹಾನ್ ಪ್ರಗತಿಪರರ ರೀತಿ ಪೋಸ್ ಕೊಡಬೇಕು ಅನ್ನೋದು. ಕಿಸ್ಸಿಂಗ್ ಡೇ ಗೆ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗ್ತಾಯಿದೆ. ಇದು ಕೇವಲ ಹಿಂದೂ ಪರ ಸಂಘಟನೆಗಳ ವಿರೋದ ಅನ್ನೋ ರೀತಿ ಸ್ವಯಂಘೋಷಿತ ಬುದ್ದಿಜೀವಿಗಳು  ಉಯಿಲೆಬ್ಬಿಸ್ತಾಯಿದ್ದಾರೆ. ಒಂದು ಅಸಹ್ಯವನ್ನ ವಿರೋಧಿಸಲಿಕ್ಕೆ ಯಾರಾದರೇನು. ಕಿಸ್ಸಿಂಗ್ ಡೇ ಅನ್ನ ವಿರೋಧಿಸೋರು ಸಂಕುಚಿತ ಮನೋಬಾವದವರೂ ಅಲ್ಲ, ಕಿಸ್ಸಿಂಗ್ ಡೇ ಬೆಂಬಲಿಸೋರು ಮಹಾನ್ ಪ್ರಗತಿಪರರೂ ಅಲ್ಲ. ನಮ್ಮ ಸಂಸ್ಕೃತಿಗೆ ವಿರುದ್ಧವಾಗಿರೋದನ್ನ ಸಾರ್ವಜನಿಕವಾಗಿ ಮಾಡಿ ಇವ್ರು ಸಮಾಜಕ್ಕೆ ಅದೇನು ಸಂದೇಶ ಕೊಡೋಕೆ ಹೊರಟಿದ್ದಾರೆ ಅನ್ನೋದಕ್ಕೆ ಅವರ ಬಳಿ ಉತ್ತರವೇ ಇಲ್ಲ. ಕಿಸ್ಸಿಂಗ್ ಡೇ ಅನ್ನೋ ಹುಚ್ಚಾಟವನ್ನ ವಿರೋಧಿಸಲಿಕ್ಕೆ ಸಮಾನ್ಯ ಪ್ರಜ್ಞೆ ಇದ್ದರಷ್ಟೆ ಸಾಕು. ಇಂತಹ ಹುಚ್ಚಾಟವನ್ನ ವಿರೋಧಿಸೋದ್ರಲ್ಲಿ ಮಹಿಳೆಯರೇ ಹೆಚ್ಚಿದ್ದಾರೆ ಅನ್ನೋದು ಕೂಡ ಅಷ್ಟೇ ಸತ್ಯ. ಈ ಹುಚ್ಚಾಟವನ್ನ ವಿರೋಧಿಸುವವರೆಲ್ರೂ ಹಿಂದೂ ಪರ ಹೋರಾಟಗಾರರು, ಕೋಮುವಾದಿಗಳು ಅನ್ನುವಂತೆ ಬಿಂಬಿಸಲಾಗುತ್ತಿದೆ. ಈ ಕಿಸ್ಸಿಂಗ್ ಡೇ ಯಂತಾ ಅಸಹ್ಯವನ್ನ ವಿರೋಧಿಸಲಿಕ್ಕೆ ಯಾವುದೇ ಜಾತಿಯಾಗ್ಲೀ ಧರ್ಮವಾಗಲೀ ಬೇಕಾಗಿಲ್ಲ ಅನ್ನೋದು ಅಷ್ಟೇ ಸತ್ಯ… ಒಂದು ಸಾಮಾಜಿಕ ಅಸಹ್ಯವನ್ನ ದೈರ್ಯವಾಗಿ ವಿರೋಧಿಸುವ ಮನಸ್ಸು ಬೇಕಷ್ಟೇ. ಮಹಾನ್ ಪ್ರಗತಿಪರರ ರೀತಿ ಮಾತಾಡಿ ಕಿಸ್ಸಿಂಗ್ ಡೇ ಯನ್ನ ಬೆಂಬಲಿಸೋರ ಆತ್ಮಕ್ಕೆ ಶಾಂತಿ ಸಿಗಲಿ…!!!

ಡಬ್ಬಿಂಗ್ ಬೇಡವೇ ಬೇಡಾ ಅಂತ ಅಬ್ಬರಿಸುತ್ತಿರುವವರಿಗೆ ಸಮಸ್ಯೆ ಇರುವುದು ಅವರ ಅಸ್ಥಿತ್ವದ ಬಗ್ಗೆ ಮಾತ್ರ …..

ಕನ್ನಡ ಚಿತ್ರೋಧ್ಯಮಕ್ಕೆ ಡಬ್ಬಿಂಗ್ ಬೇಕಾ, ಬೇಡವಾ ಎಂಬ ಬಗ್ಗೆಯೇ ದೊಡ್ಡ ಚರ್ಚೆ ನಡೆಯುತ್ತಿದೆ. ಬೇಕು ಅನ್ನುವವರೂ ಹೋರಾಟ ಮಾಡ್ತೀವಿ ಅಂತಾರೆ. ಬೇಡ ಅನ್ನುವವರೂ ಕೂಡ ಹೋರಾಟ ಮಾಡ್ತೀವಿ ಅಂತಿದ್ದಾರೆ. ಇವ್ರು ಹೋರಾಟನಾದ್ರೂ ಮಾಡ್ಕೊಳ್ಳಿ, ಹಾರಾಟವಾದ್ರೂ ಮಾಡಿಕೊಳ್ಳಲಿ. ಆದ್ರೆ ನಿಜಕ್ಕೂ ಕನ್ನಡಕ್ಕೆ ಡಬ್ಬಿಂಗ್ ಬೇಕಾ,ಬೇಡವಾ ಅಂತ ನಿರ್ಧರಿಸಬೇಕಾದವರು ಈ ನಾಡಿನ ಜನ. ಈಗ ಡಬ್ಬಿಂಗ್ ಬೇಡ ಅಂತ ಅಬ್ಬರಿಸಿ ಬೊಬ್ಬಿರಿಯುತ್ತಿರುವವರು ಅದೇ ದೈರ್ಯದಿಂದ ಹೇಳಲಿ ನಾವು ರೀಮೇಕ್ ಮಾಡುವುದಿಲ್ಲ ಅಂತ. ಯಾವ ನಟನೂ, ನಿರ್ದೇಶಕನೂ ಈ ಮಾತನ್ನ ಹೇಳುವುದಿಲ್ಲ. ಪರಭಾಷಾ ಚಿತ್ರಗಳನ್ನ ಹೇಗಿದೆಯೊ ಹಾಗೆ ಭಟ್ಟಿ ಇಳಿಸಿ ಕನ್ನಡಿಗರ ಜೇಬಿಗೆ ಕತ್ತರಿ ಹಾಕುವುದರಲ್ಲೇ ಚಿತ್ರೋಧ್ಯಮದ ಬಹುತೇಕರು ಮಾಡ್ತಾಯಿದ್ದಾರೆ. ಯಾಕಂದ್ರೆ ಕಳೆದ ವರ್ಷ ಬಿಡುಗಡೆಯಾದ 127 ಚಿತ್ರಗಳಲ್ಲಿ 87 ಕ್ಕೂ ಅಧಿಕ ಚಿತ್ರಗಳು ರೀಮೇಕ್ ಚಿತ್ರಗಳು. ತೆಲುಗು,ತಮಿಳು,ಹಿಂದಿ ಚಿತ್ರಗಳನ್ನ ನಮ್ಮ ಜನ ಇಲ್ಲಿ ಬಿಡುಗಡೆಯಾದಾಗಲೇ ನೋಡುತ್ತಾರೆ. ಅದನ್ನ ಈ ಸೊ ಕಾಲ್ಡ್ ಚಿತ್ರೋಧ್ಯಮಿಗಳು ಯಥಾವತ್ ಒಂದು ಡೈಲಾಗ್ ಕೂಡ ಬದಲಾಯಿಸದೆ ಭಟ್ಟಿ ಇಳಿಸುತ್ತಾರೆ. ಹಾಗೆ ರೀಮೇಕ್ ಸಿನಿಮಾ ನೋಡುವ ಬದಲು ಅದೇ ಚಿತ್ರವನ್ನ ಡಬ್ಬಿಂಗ್ ನಂತ್ರ ನಮ್ಮ ಭಾಷೆಯಲ್ಲೇ ನೊಡಬಹುದಲ್ಲವಾ. ಇದ್ರಿಂದ ಕರ್ನಾಟಕ ದಲ್ಲಿ ಪರಬಾಷಾ ಚಿತ್ರಗಳ ಪ್ರಭಾವ ಸ್ವಲ್ಪವಾದ್ರೂ ಕಡಿಮೆಯಾಗಿ ಉತ್ತಮ ಚಿತ್ರಗಳನ್ನ ನಮ್ಮ ಭಾಷೆಯಲ್ಲಿಯೇ ನೋಡಬಹುದು. ಜೊತೆಗೆ ಕನ್ನಡದಲ್ಲಿ ಹೆಚ್ಚಾಗಿರುವ ಈ ರೀಮೇಕ್ ಹಆವಳಿಯೂ ತಪ್ಪುತ್ತದೆ. ಪರಭಆಷೆಯ ಚಿತ್ರ ನಮ್ಮ ನಆಡಿನಲ್ಲಿ ನಮ್ಮದೇ ಭಆಷೆಯಲ್ಲಿ ಬಿಡುಗಡೆಯಾದ್ರೆ ಈ ಚಿತ್ರೋಧ್ಯಮದ ಮಂದಿಗೆ ರೀಮೇಕ್ ಸಿನಿಮಆಗಳನ್ನ ಮಆಡಲು ಆಗುವುದಿಲ್ಲವಲ್ಲ. ಒಂದು ವೇಳೆ ಮಾಡಿದ್ರೂ ಒಂದು ಸಾರಿ ಕನ್ನಡದಲ್ಲಿಯೇ ನೋಡಿದ ಸಿನಿಮಆವನ್ನ ಮತ್ತೆ ಯಾರು ತಾನೇ ನೋಡ್ತಾರೆ. ಹಾಗೇನಾದ್ರೂ ಡಬ್ಬಿಂಗ್ ಗೆ ಅವಕಾಶ ಕೊಟ್ರೆ ಈ ರೀಮೇಕ್ ಸಿನಿಮಾ ಮಂದಿಯಿದ್ದಾರಲ್ಲ ಅವರಿಗೆ ಸಮಸ್ಯೆಯಾಗುತ್ತದೆಯೇ ವಿನಃ ಸ್ವಂತ ಚಿತ್ರ ಮಾಡುವವನಿಗೆ ಡಬ್ಬಿಂಗ್ ಸಮಸ್ಯೆಯೇ ಅಲ್ಲ. ಆದ್ರೆ ಈ ಮಾತನ್ನ ಕೆಲವರು ಒಪ್ಪುವುದಿಲ್ಲ. ಯಾಕಂದ್ರೆ ಅದು ಅವರ ಅಸ್ಥಿತ್ವದ ಪ್ರಶ್ನೆ. ಬೇರೇ ಬಾಷೆಯ ಚಿತ್ರಗಳನ್ನ ರೀಮೇಕ್ ಮಾಡುವಷ್ಟು ಸುಲಭವಾಗಿ ಸ್ವಮೇಕ್ ಚಿತ್ರ ಮಾಡಲಾಗದವರು ಮಾತ್ರ ಡಬ್ಬಿಂಗ್ ವಿರೋಧಿಸುತ್ತಿದ್ದಾರೆ. ಬೇರೇ ಭಾಷೆ ಚಿತ್ರ ಇಲ್ಲಿ ಕನ್ನಡದಲ್ಲಿ ಡಬ್ ಆದ್ರೆ ಕನ್ನಡಿಗರು ಉತ್ತಮ ಚಿತ್ರಗಳನ್ನ ನಮ್ಮ ಭಾಷೆಯಲ್ಲೇ ನೋಡಬಹುದು. ಹಾಗೇನಾದ್ರೂ ಡಬ್ಬಿಂಗ್ ಗೆ ಅವಕಾಶ ನೀಡಿದ್ರೆ ಬೇರೇ ಭಾಷೆ ಚಿತ್ರಗಳನ್ನ ರೀಮೇಕ್ ಮಾಡಲು ಆಗುವುದಿಲ್ಲವಲ್ಲ. ಹಾಗೊಮ್ಮೆ ಮಾಡಿದ್ರೂ ಈ ಮೊದಲೇ ನೋಡಿದ ಸಿನಿಮಾವನ್ನ ಯಾರು ತಾನೇ ನೋಡ್ತಾರೆ. ಹಾಗಾಗಿಯೇ ಇದು ಕೆಲವು ಭಟ್ಟಿ ಇಳಿಸುವವರ ಅಸ್ಥಿತ್ವದ ಪ್ರಶ್ನೆ ಅಂತ. ಇವತ್ತು ಡಬ್ಬಿಂಗ್ ಬೇಡವೇ ಬೇಡಾ ಅಂತ ಅಬ್ಬರಿಸುತ್ತಿರುವವರಿಗೆ ನಿಜಕ್ಕೂ ಸಮಸ್ಯೆ ಇರುವುದು ಅವರ ಅಸ್ಥಿತ್ವದ ಪ್ರಶ್ನೆಯಷ್ಟೇ… ಆದ್ರೆ ಅವರ ವರಸೆ ಇರೋದೇ ಬೇರೆ. ಡಬ್ಬಿಂಗ್ ಗೆ ಅವಕಾಶ ನೀಡಿದ್ರೆ ಕನ್ನಡ ಭಾಷೆ ಹಾಳಾಗಿ ಹೋಗುತ್ತೆ, ನಮ್ಮ ಸಂಸ್ಕೃತಿ ಹಾಳಾಗಿ ಹೋಗುತ್ತೆ ಅಂತ. ಹಾಗಾದ್ರೆ ಕನ್ನಡ ಸಿನಿಮಾಗಳಲ್ಲಿ ಬರೋದೆಲ್ಲ ನಮ್ಮ ಸಂಸ್ಕೃತಿಯ ಪ್ರತಿಬಿಂಬನಾ. ಹಾಗೆ ತಿಳಿದುಕೊಳ್ಳೋಕೆ ಕನ್ನಡ ಪ್ರೇಕ್ಷಕನೇನೂ ದಡ್ಡನಲ್ಲ. ಸಿನಿಮಾ ಮತ್ತು ನಿಜ ಜೀವನದ ನಡುವಿನ ವ್ಯತ್ಯಾಸ ಏನೂ ಅಂತ ಜನರಿಗೂ ಗೊತ್ತಿದೆ. ಇವರು ತೋರಿಸುವ ಮಚ್ಚು ಲಾಂಗು ಸಿನಿಮಾಗಳು, ಐಟಂ ಸಾಂಗ್ ಗಳು, ಹಸಿ ಹಸಿ ರೊಮ್ಯಾನ್ಸ್ ಸೀನ್ ಗಳು ಕನ್ನಡ ಸಂಸ್ಕೃತಿಯನ್ನ ಬಿಂಬಿಸುತ್ತವಾ? ನಿಜಕ್ಕೂ ಇಲ್ಲ.
ಇನ್ನು ಡಬ್ಬಿಂಗ್ ಮಾಡೋದ್ರಿಂದ ಕನ್ನಡ ಚಿತ್ರರಂಗ ನಾಶವಾಗುತ್ತೆ ಅನ್ನೋ ವಾದ ಮಾಡುವವರು ಒಂದು ವಿಷಯವನ್ನ ಅರ್ಥ ಮಾಡಿಕೊಳ್ಳಬೇಕು.ದೇಶದ ಎಲ್ಲ ಭಾಷೆಗಳಲ್ಲೂ ಡಬ್ಬಿಂಗ್ ಗೆ ಅವಕಾಶವಿದೆ. ಹಾಗಂತ ಪ್ರಾದೇಶಿಕ ಭಾಷೆಗಳ ಚಿತ್ರರಂಗಗಳೇನೂ ನಾಶವಾಗಿಲ್ಲ. ಬದಲಿಗೆ ಸೃಜನಶೀಲತೆ ಹೆಚ್ಚಾಗಿ ಜನರಿಗೆ ಹೊಸತನ್ನೇನಾದರೂ ಕೊಡುವ ಪ್ರಯತ್ನಗಳು ನಡೆಯುತ್ತಿವೆ. ಕನ್ನಡದಲ್ಲಿ ಡಬ್ಬಿಂಗ್ ಗೆ ಅವಕಾಶ ನೀಡಿದ್ರೆ ರೀಮೇಕ್ ಸಿನಿಮಾಗಳು ಕಡಿಮೆಯಾಗಿ ಹೊಸತನದ ಚಿತ್ರಗಳನ್ನ ನಿರ್ಮಿಸುವ ಕ್ರಿಯಾಶೀಲತೆಯೂ ಬೆಳೆಯುತ್ತೆ. ಡಬ್ಬಿಂಗ್ ವಿರೋಧಿಸೋದು ಮಾಹಿತಿ ಮತ್ತು ಮನರಂಜನೆಯ ಸ್ವಾತಂತ್ರ್ಯವನ್ನ ಹತ್ತಿಕ್ಕುವ ಪ್ರಯತ್ನವಷ್ಟೇ. ಯಾವುದನ್ನ ನೋಡಬೇಕು, ಯಾವುದನ್ನ ನೋಡಬಾರದು ಅನ್ನೊದನ್ನ ನಿರ್ಧರಿಸೋದು ಪ್ರೇಕ್ಷಕನೇ ಹೊರತು ಚಿತ್ರರಂಗದವರಲ್ಲ. ಇನ್ನು ಡಬ್ಬಿಂಗ್ ಗೆ ಅವಕಾಶ ಕೊಟ್ರೆ ಕನ್ನಡದ ಕಲಾವಿದರು,ಕಾರ್ಮಿಕರುರು ಬೀದಿಗೆ ಬೀಳುತ್ತಾರೆ ಅನ್ನೋದು ಡಬ್ಬಿಂಗ್ ವಿರೋಧಿಗಳ ವಾದ. ಹಾಗಾದ್ರೆ ಯಾವ ಕನ್ನಡ ಚಿತ್ರವನ್ನ ಸಂಪೂರ್ಣವಾಗಿ ಕನ್ನಡಿಗರೇ ನಿರ್ಮಿಸುತ್ತಿದ್ದಾರೆ. ಯಾವ ಚಿತ್ರದಲ್ಲಿ ನೋಡಿದ್ರೂ ಪರಭಾಷಾ ಹೀರೊಯಿನ್ ಗಳು, ಮ್ಯೂಸಿಕ್ ಡೈರೆಕ್ಟರ್ ಗಳು, ಗಾಯಕರು, ತಂತ್ರಜ್ಞರೇ ಇರ್ತಾರೆ. ಹಾಗೆ ಡಬ್ಬಿಂಗ್ ಅನ್ನ ವಿರೋಧಿಸುವವರನ್ನ ಕೇವಲ ಕನ್ನಡಿಗರೇ ಸೇರಿ ಚಿತ್ರಗಳನ್ನ ನಿರ್ಮಿಸಿ ಅಂತ ಕೇಳಿ ನೋಡಿದ್ರೆ ಆಕಾಶದಲ್ಲಿ ಕಾಗೆ ಹಾರ್ತಾಯಿದೆಯಾ ಅಂತ ನೋಡ್ತಾರೆಯೇ ವಿನಃ ಈ ಪ್ರಶ್ನೆಗೆ ಉತ್ತರಿಸೋಲ್ಲ. ಇಲ್ಲಿ ಸಿನಿಮಾಗಳನ್ನ ಮಾಡಲು ಪರಭಾಷಿಕರು ಬೇಕು ಆದ್ರೆ ಪರಭಾಷಾ ಸಿನಿಮಾಗಳು ಮಾತ್ರ ಡಬ್ಬಿಂಗ್ ಆಗಬಾರದು ಅಂದ್ರೆ ಯಾವ ನ್ಯಾಯ. ಕನ್ನಡದ ಚಿತ್ರಗಳನ್ನೂ ಕೂಡ ಡಬ್ಬಿಂಗ್ ಮಾಡಿ ಅಕ್ಕ ಪಕ್ಕದ ರಾಜ್ಯಗಳಲ್ಲಿ ಬಿಡುಗಡೆ ಮಾಡಿ ಕಾಸು ಮಾಡಿಕೊಳ್ಳುವವರಿಗೆ ಇಲ್ಲಿ ಡಬ್ಬಿಂಗ್ ಬೇಡಾ ಎನ್ನುವ ಮಡಿವಂತಿಕೆ ಯಾಕೆ. ಇಲ್ಲಿನ ಸಿನಿಮಾಗಳು ಬೇರೆ ಭಾಷೆಗಳಲ್ಲಿ ಡಬ್ ಆದ್ರೆ ಅಲ್ಲಿನ ಕಾರ್ಮಿಕರು ಕೆಲಸ ಕಳೆದುಕೊಳ್ಳುವುದಿಲ್ಲವಾ… ಹಾಗಂತ ಕನ್ನಡ ಚಿತ್ರರಂಗದಲ್ಲೇನೂ ಲಕ್ಷಾಂತರ ಮಂದಿ ಕೆಲಸ ಮಾಡುತ್ತಿಲ್ಲ. ಕೆಲವೇ ಸಾವಿರದಷ್ಟಿರುವ ಕಾರ್ಮಿಕರಿಗಾಗಿ ಕನ್ನಡಿಗರ ಆಯ್ಕೆ ಸ್ವಾತಂತ್ರ್ಯವನ್ನೇಕೆ ಕಿತ್ತುಕೊಳ್ಳಬೇಕು. ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ರೈತರಿಗೆ, ಕೂಲಿ ಕಾರ್ಮಿಕರಿಗೆ, ಚಿಲ್ಲರೆ ಅಂಗಡಿಯವರಿಗೆ ಬಹು ರಾಷ್ಟ್ರೀಯ ಕಂಪನಿಗಳಿಂದ ತೊಂದರೆಗೊಳಗಾಗಿಲ್ಲವೇ.ಅದನ್ನ ನೋಡಿದ್ರೆ ಕೇವಲ ಸಾವಿರದಷ್ಟಿರುವ ಚಿತ್ರರಂಗದ ಕಾರ್ಮಿಕರು ಬೀದಿಗೆ ಬೀಳ್ತಾರೆ ಅಂತ ಹೋರಾಟ ಮಾಡ್ತೀವಿ ಅಂತ ಹಾರಾಡಿದ್ರೆ ಇವರಿಗೆ ಏನೆನ್ನಬೇಕು. ನಿಜಕ್ಕೂ ಕನ್ನಡಕ್ಕೆ, ಕನ್ನಡಿಗರಿಗೆ ಸಮಸ್ಯೆಯಾದಾಗ, ನೆಲ, ಜಲದ ವಿಷಯ ಬಂದಾಗ ಇಷ್ಟು ಉತ್ಸಾಹ ತೊರದ ಈ ಚಿತ್ರೋಧ್ಯಮದ ಮಂದಿ ಈಗ ಅವರ ಅಸ್ಥಿತ್ವದ ಪ್ರಶ್ನೆ ಬಂದಾಗ ನಾವು ಮತ್ತೊಂದು ಗೋಕಾಕ್ ಚಳುವಳಿ ಮಾಡಿಬಿಡ್ತೀವಿ ಅಂತ ಬಡಬಡಿಸುತ್ತಿದ್ದಾರೆ…

ಈಗ ತಮ್ಮ ಹೊಟ್ಟೆಪಾಡಿಗಾಗಿ ಈ ಸಿನಿಮಾ ಮಂದಿ ಕನ್ನಡ ನಾಶವಾಗಿಬಿಡುತ್ತೆ ಅಂತ ಭಾಷೆಯನ್ನ ಅಡವಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸ್ತಾಯಿದ್ದಾರೆ. ಅಸಲಿಗೆ ಈಗ ಬರುತ್ತಿರುವ ಸಿನಿಮಾಗಳಿಂದ ಕನ್ನಡವೇನೂ ಉದ್ಧಾರವಾಗುತ್ತಿಲ್ಲ. ಬದಲಿಗೆ ಕನ್ನಡ ಬೆಳೆಯುತ್ತಿರುವುದು ಸಾಹಿತಿಗಳಿಂದ, ಕನ್ನಡದಲ್ಲಿ ಆಗುತ್ತಿರುವ ಉತ್ತಮ ಸಾಹಿತ್ಯಿಕ ಪ್ರಯತ್ನಗಳಿಂದ. ಆ ರೀತಿಯ ಪ್ರಯತ್ನ ಕನ್ನಡ ಚಿತ್ರರಂಗದಲ್ಲೂ ಆಗಬೇಕಾದ್ರೆ ಇಲ್ಲಿ ಡಬ್ಬಿಂಗ್ ಗೆ ಅವಕಾಶ ನೀಡ್ಬೇಕು. ಆ ಮೂಲಕ ರೀಮೇಕ್ ಚಿತ್ರಗಳ ಹಾವಳಿ ಕಡಿಮೆಯಾಗಿ ಉತ್ತಮ ಕ್ರಿಯಾಶೀಲ ಚಿತ್ರಗಳು ಕನ್ನಡದಲ್ಲಿ ತಯಾರಾಗುವಂತಾಗಲಿ. ಜಗತ್ತಿನ ಅತ್ಯುತ್ತಮ ಕೃತಿಗಳು ಕನ್ನಡಕ್ಕೆ ಅನುವಾದವಾಗ್ತಾನೇ ಇವೆ. ಇದ್ರಿಂದ ಕನ್ನಡ ಸಾಹಿತ್ಯವೇನೂ ನಾಶವಾಗಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಈ ವಿಷಯವನ್ನ ಮೊದಲು ಈ ಡಬ್ಬಿಂಗ್ ವಿರೋಧಿಗಳು ಅರ್ಥ ಮಾಡಿಕೊಳ್ಳಲಿ… ಕನ್ನಡಕ್ಕೆ ಡಬ್ಬಿಂಗ್ ಬೇಡಾ ಅಂತ ಈ ಹಿಂದೆ ಹೊರಾಟ ನಡೆದಾಗ ಇದ್ದ ಪರಿಸ್ಥಿತಿ, ಈಗಿನ ಪರಿಸ್ಥಿತಿ ತೀರಾ ಭಿನ್ನ. ಆಗ ಕನ್ನಡದಲ್ಲಿ ಕೆಲವೇ ಕೆಲವು ಚಿತ್ರಗಳು ನಿರ್ಮಾಣವಾಗ್ತಾಯಿದ್ದವು, ಕಿರುತೆರೆ ಎಂಬ ಉಧ್ಯಮವೇ ಇರಲಿಲ್ಲ. ಆಗ ಡಬ್ಬಿಂಗ್ ಅಂದ್ರೆ ಕೇವಲ ಸಿನಿಮಾಕ್ಕೆ ಮಾತ್ರ ಅನ್ವಯವಾಗ್ತಾಯಿತ್ತು. ಆದ್ರೆ ಈಗಿನ ಸ್ಥಿತಿಯೇ ಬೇರೆ. ಈಗ ಕಿರುತೆರೆ ಉಧ್ಯಮ ಬೆಳ್ಳಿತೆರೆಯನ್ನ ಮೀರಿಸುವಂತೆ ಬೆಳೆದುನಿಂತಿದೆ. ಇಂಗ್ಲಿಷ್ ಮತ್ತು ಇತರ ಭಾಷೆಗಳಲ್ಲಿ ಬರುವ ಉತ್ತಮ ಮಾಹಿತಿ ಮತ್ತು ಚಿತ್ರಗಳನ್ನ ಕನ್ನಡದಲ್ಲಿ ಅಷ್ಟು ಹಣ ಖರ್ಚು ಮಾಡಿ ತಯಾರಿಸಲು ಸಾದ್ಯವಾಗದೇ ಇದ್ದಾಗ ಅದನ್ನ ಕನ್ನಡಿಗ ಪ್ರೇಕ್ಷಕ ಏನು ತಪ್ಪು ಮಾಡಿದ್ದಾನೆ ಅಂತ ಮಿಸ್ ಮಾಡಿಕೊಳ್ಳಬೇಕು. ನೋಡಲೇ ಬೇಕು ಅಂದ್ರೂ ಬೇರೇ ಬಾಷೆಯಲ್ಲಿ ಯಾಕೆ ನೊಡಬೇಕು. ನಮ್ಮ ಭಾಷೆಯಲ್ಲಿಯೇ ನೋಡಬಹುದಲ್ಲವಾ. ನ್ಯಾಷನಲ್ ಜೀಯಾಗ್ರಫಿ, ಡಿಸ್ಕವರಿಯಲ್ಲಿ ಬರುವ ಕಾರ್ಯಕ್ರಮಗಳು ನಮ್ಮ ಭಾಷೆಯಲ್ಲಿ ಬಂದರೆ ಅದ್ರಿಂದ ಕನ್ನಡ ಭಾಷೆಯೇ ತಾನೆ ಬೆಲೆಯುವುದು. ಎಲ್ಲದಕ್ಕೂ ಇಂಗ್ಲಿಷ್ ಅಥವಾ ಬೇರೆ ಭಾಷೆಯನ್ನೇ ಅವಲಂಬಿಸುತ್ತಾ ಹೋದ್ರೆ ಮಕ್ಕಳು ಕನ್ನಡ ಭಾಷೆ ಅಪ್ರಯೋಜಕ ಅಂತ ಭಾವಿಸಿ ಕನ್ನಡದ ಬಗ್ಗೆ ಕೀಳಿರೆಮೆ ಬೆಳೆಸಿಕೊಳ್ಳುತ್ತವೆ. ಅದರ ಪರಿಣಾಮ ಈಗಾಗಲೇ ಆಗುತ್ತಿದೆ. ಡಬ್ಬಿಂಗ್ ನಿಂದ ನಮ್ಮ ಕನ್ನಡದ ಮಕ್ಕಳು ಜಗತ್ತಿನ ಅತ್ಯುತ್ತಮ ಮಾಹಿತಿಗಳನ್ನ ನಮ್ಮದೇ ಬಾಷೆಯಲ್ಲಿ ತಿಳಿದುಕೊಳ್ಳಬಹುದಲ್ವಾ….
ಇನ್ನು ಕನ್ನಡಿಗ ಪ್ರೇಕ್ಷಕರಿಗೆ ಈ ಚಿತ್ರರಂಗದ ಮಂದಿ ಬಿಟ್ಟಿಯಾಗೇನೂ ಸಿನಿಮಾ ತೋರಿಸುವುದಿಲ್ಲವಲ್ಲ. ಹಣ ಕೊಟ್ಟು ನೋಡುವ ಪ್ರೇಕ್ಷಕ ಉತ್ತಮ ಚಿತ್ರಗಳು ಯಾವ ಬಾಷೆಯಲ್ಲಿ ಬಂದ್ರೂ ನೋಡಿಯೇ ನೋಡುತ್ತಾನೆ. ಅದು ಕನ್ನಡವಿರಲಿ ಬೇರೆ ಭಾಷೆಯಾಗಿರಲಿ. ಡಬ್ಬಿಂಗ್ ಮಾಡಿದ ಸಿನಿಮಾ ಚೆನ್ನಾಗಿಲ್ಲದಿದ್ರೆ ಪ್ರೇಕ್ಷಕನಿಗೆ ಅದನ್ನ ತಿರಸ್ಕರಿಸುವ ಹಕ್ಕು ಇದ್ದೇ ಇರುತ್ತದೆ. ನೂರು ರೀಮೇಕ್ ಚಿತ್ರಗಳು,ಪರಬಾಷಾ ಚಿತ್ರಗಳು ಬರುವುದರ ಬದಲು ಕೆಲವೇ ಉತ್ತಮ ಚಿತ್ರಗಳು ಬಂದರೂ ಸಾಕು ಚಿತ್ರೋಧ್ಯಮ ಬೆಳೆಯುತ್ತದೆ.  ಡಬ್ಬಿಂಗ್ ನಿಂದಲಾದ್ರೂ ರೀಮೇಕ್ ಹಾವಳಿ ಕಡಿಮೆಯಾಗಿ ಉತ್ತಮ ಚಿತ್ರಗಳು,ಉತ್ತಮ ಪ್ರಯತ್ನಗಳು ಕನ್ನಡದಲ್ಲಿಯೂ ಆಗುವಂತಾಗಲಿ. ಡಬ್ಬಿಂಗ್ ಬೇಡಾ ಅಂತ ಅಬ್ಬರಿಸುವವರು ಮೊದಲು ರೀಮೇಕ್ ಕೂಡ ಬೇಡ ಅನ್ನುವ ದೈರ್ಯ ತೋರಿಸಲಿ. ಡಬ್ಬಿಂಗ್ ಬೇಕಾ,  ಬೇಡವಾ ಅಂತ ನಿರ್ಧರಿಸಬೇಕಾದವರು ಜನರೇ ಹೊರತು ಚಿತ್ರರಂಗದ ಒಂದು ಗುಂಪಲ್ಲ… ಆಮೇಲೆ ಡಬ್ಬಿಂಗ್ ಬೇಡಾ ಎಂಬ ಬಗ್ಗೆ ಹೋರಾಟಾನಾದ್ರೂ ಮಾಡಿಕೊಳ್ಳಲಿ ಹಾರಾಟಾನಾದ್ರೂ ಮಾಡಿಕೊಳ್ಳಲಿ…

ಗಣೇಶ ನಿಮ್ ಫ್ರೆಂಡ್ ಆಗ್ಬೇಕು ಅಂದ್ರೆ ಮೊದಲು ನೀವು ಇಕೊ ಫ್ರೆಂಡ್ಲಿ ಆಗಿ…….

Image

ಪರಿಸರ ಸ್ನೇಹಿ ಗಣೇಶ

ಗಣೇಶನ ಹಬ್ಬಕ್ಕೆ ಆಗಲೇ ಕ್ಷಣಗಣನೆ ಆರಂಭವಾಗಿದೆ. ಬೀದಿಬೀದಿಗಳಲ್ಲಿ ಗಣೇಶನನ್ನ ಪ್ರತಿಷ್ಠಾಪನೆ ಮಾಡೋಕೆ ಅಂತ ಯುವಕರ ಗುಂಪು ಮೈಕೊಡವಿ ನಿಂತಿವೆ. ಇನ್ನು ಮನೆಗಳಲ್ಲಿ ಗಣೇಶನ ಮೂತರ್ಿಯನ್ನಿಟ್ಟು ಪೂಜಿಸುವವರೂ ಕೂಡ ಗಣೆಶನನ್ನ ಮನೆಗೆ ಸ್ವಾಗತಿಸಲು ಸಂಭ್ರಮದಿಂದ ಕಾಯ್ತಾಯಿದ್ದಾರೆ. ವಿಗ್ನ ವಿನಾಶಕನಾದ ಗಣೇಶ ಯಾಕೊ ಇತ್ತೀಚಿನ ದಿನಗಳಲ್ಲಿ ಸ್ವತಃ ವಿಗ್ನಕಾರಕನಾಗಿಬಿಟ್ಟಿದ್ದಾನೆ. ಅದಕ್ಕೆ ಕಾರಣ ಪ್ಲಾಸ್ಟರ್ ಆಫ್ ಪ್ಯಾರೀಸ್, ಥಮರ್ೋಕೋಲ್ ನಿಂದ ತಯಾರಿಸಲಾಗುತ್ತಿರುವ ಮೂತರ್ಿಗಳು. ಇತ್ತೀಚೆಗಂತೂ ಎಂತೆತಾ ಗಣೇಶನ ವಿಗ್ರಹಗಳನ್ನ ಇಡ್ತಾರಂದ್ರೆ ತಾಲಿಬಾನ್ ಗಣೇಶ, ಲಾಡೆನ್ ಗಣೇಶ, ಉಪೇಂದ್ರನ ಅವತಾರದ ಗಣೇಶ, ಗಾಂದೀಜಿಯ ಗಣೇಶ, ಅಣ್ಣಾ ಹಜಾರೆಯ ಗಣೇಶ, ಬಂದೂಕು ಹಿಡಿದಿರುವ ಗಣೇಶ, ಹರುಕು ಪ್ಯಾಂಟಿನ ಗಣೇಶ ಹೀಗೆ ತಮಗೆ ತೋಚಿದ ರೀತಿ ವಿಚಿತ್ರ ಗಣೇಶಗಳನ್ನ ಇಡ್ತಾರೆ. ಈ ರೀತಿಯ ಗಣೇಶನ ಮೂತರ್ಿಗಳನ್ನ ನೋಡಿದ ಹಿರಿಯರು ಎಂತಾ ಕಾಲ ಬಂತಪ್ಪಾ ಅಂತ ತಲೆತಲೆ ಚೆಚ್ಚಿ ಕೊಳ್ತಾಯಿದ್ದಾರೆ. ನೊಡಲು ಆಕರ್ಷಕವಾಗಿ ಕಾಣೋದ್ರಿಂದಾಗಿ ಆರಂಭದಲ್ಲಿ ಜನ ಪ್ಲಾಸ್ಟರ್ ಆಫ್ ಪ್ಯಾರೀಸ್, ಥಮರ್ೋಕೋಲ್ ನಿಂದ ತಯಾರಿಸುವ ವಿಗ್ರಹಗಳನ್ನ ಮುಗಿಬಿದ್ದು ಕೊಂಡು ಮನೆಯಲ್ಲಿ, ಬೀದಿ ಬೀದಿಗಳಲ್ಲಿ ಕೂರಿಸಿ ಸಂಭ್ರಮಿಸಿದ್ರು. ಆದ್ರೆ ಇತ್ತೀಚೆಗೆ ಈ ರೀತಿಯ ಪ್ರಕೃತಿಗೆ ಮಾರಕವಾದ ಗಣೇಶಗಳ ಬಳಕೆ ಹೆಚ್ಚುತ್ತಾ ಇರೋದ್ರಿಂದಾಗಿ ಪ್ರಕೃತಿ ಪ್ರಿಯ ಗಣೇಶ ಪ್ರಕೃತಿಗೆ ಮಾರಕನಾಗುತ್ತಿದ್ದಾನೆ.
ಇತ್ತೀಚೆಗೆ ಡಿಸೈನ್ ಡಿಸೈನ್ ಗಣೇಶಗಳ ಆರ್ಭಟ ಆರಂಭವಾದ ಮೇಲೆ ಮಣ್ಣಿನ ಗಣೇಶಗಳು ಮೂಲೆಗುಂಪಾಗಿಬಿಟ್ಟಿವೆ. ಪ್ಲಾಸ್ಟರ್ ಆಫ್ ಪ್ಯಾರೀಸ್, ಥಮರ್ೋಕೋಲ್ ಗಳಿಂದ ತಯಾರಿಸಲಾದ ಗಣೆಶನ ವಿಗ್ರಹಗಳು ನೀರಿನಲ್ಲಿ ಕರಗುವುದಿಲ್ಲ. ಇದ್ರ ಜೊತೆಗೆ ಈ ರೀತಿಯ ವಿಗ್ರಹಗಳಲ್ಲಿ ಬಳಸಲಾಗುವ ರಾಸಾಯನಿಕ ಬಣ್ಣಗಳೂ ಕುಡ ವಿಸರ್ಜನೆ ಮಾಡುವಾಗ ನೀರು ಸೇರುತ್ತವೆ. ಪರಿಣಾಮ ನೀರೂ ಮಾಲಿನ್ಯವಾಗುತ್ತದೆ. ಇದ್ರ ಜೊತೆಗೆ ನೀರಿನಲ್ಲಿರುವ ಜಲಚರಗಳಿಗೂ ಹಾನಿ ತಪ್ಪಿದ್ದಲ್ಲ. ಹಾಗಾಗಿ ಜನರು ಪರಿಸರ ಸ್ನೇಹಿ ಗಣೇಶನನ್ನ ಪೂಜಿಸಿದ್ರೆ ನಾವೂ ಪರಿಸರ ಉಳಿಸೋದಕ್ಕೆ ಒಂದೇ ಒಂದು ಸಣ್ಣ ಸಹಕಾರ ನೀಡಿದಂತಾಗುತ್ತದೆ.
ಗಣೇಶನ ಪುನರ್ಜನ್ಮದ ಕತೆ ಎಲ್ಲರಿಗೂ ಗೊತ್ತಿರುವಂತದ್ದೇ. ಆನೆಯ ಮುಖವನ್ನ ದರಿಸಿಕೊಂಡು ಗಣೇಶನಿಗೆ ಈಶ್ವರ ಅಗ್ರಪೂಜೆಯ ವರವನ್ನೂ ನೀಡಿದ. ಗಣೇಶನನ್ನ ಪಕೃತಿ ಪ್ರಿಯ, ಪ್ರಾಣಿ ಪಕ್ಷಿಗಳ ಸಂರಕ್ಷಕ ಅಂತಲೇ ಅನಾದಿ ಕಾಲದಿಂದಲೂ ಪೂಜಿಸಿಕೊಂಡು ಬರಲಾಗುತ್ತಿದೆ. ಆನೆಯ ಮುಖದ ಗಣೆಶ ಪ್ರಕೃತಿಯ ಸಂಕೇತ. ಹಾಗಾಗಿ ಕೆರೆ, ಕಟ್ಟೆ, ಹೊಂಡಗಳ ಬಳಿ ಸಿಗುವ ಜೇಡಿ ಮಣ್ಣಿನಿಂದ ಗಣೇಶನ ಮೂತರ್ಿಗಳನ್ನ ತಯಾರಿಸಿ, ಪೂಜಿಸಿ ನಂತ್ರ ವಿಸರ್ಜನೆ ಮೂಲಕ ಮತ್ತೆ ಪಕೃತಿಗೇ ಮೂತರ್ಿಯನ್ನ ಮರಳಿಸ್ತಾಯಿದ್ದದ್ದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ದತಿ. ಕೆರೆಯಿಂದ ಮಣ್ಣನ್ನ ತಂದು ಮೂತರ್ಿಯನ್ನ ನಿಮರ್ಿಸಿ, ಪೂಜೆ ಮಾಡಿದ ನಂತರ ವಿಗರಹವನ್ನ ಕರೆಯಲ್ಲಿ ವಿಸಜರ್ಿಸುವುದು ಪ್ರಕೃತಿಯ ಪೂಜೆಯೇ ಆಗಿತ್ತು. ಮಣ್ಣಿನ ಗಣಪತಿಯ ಪೂಜೆ ಆರಮಭವಾಗುವುದಕ್ಕೂ ಮೊದಲು ಸಗಣಿಯಲ್ಲಿ ಗರಿಕೆ ಹುಲ್ಲನ್ನ ಇಟ್ಟು ಪೂಜೆ ಮಾಡಲಾಗುತ್ತಿತ್ತು. ಈಗಲೂ ಕೂಡ ಗಣೇಶನ ಮೂತರ್ಿ ಎಷ್ಟೇ ಉದ್ದವಿರಲಿ ಅದರ ಪಕ್ಕ ಸಗಣಿ ಮತ್ತು ಗರಿಕೆ ಹುಲ್ಲಿನ ಗಣಪನನ್ನ ಪೂಜೆ ಮಾಡಲಾಗುತ್ತದೆ. ಪ್ರಕೃತಿ ಪ್ರಿಯ ಗಣೇಶನನ್ನ ಪ್ರಕೃತಿ ಸ್ನೇಹಿ ಮಣ್ಣು ಮತ್ತು ಸಗಣಿಯಿಮದ ಪೂಜಿಸಿದರೇ ಶ್ರೇಷ್ಠ ಅಂತಾರೆ ದಾಮರ್ಿಕ ಕ್ಷೇತ್ರದ ಹಿರಿಯರು.
ಪರಿಸರ ಸ್ನೇಹಿ ಗಣೇಶನ ವಿಗ್ರಹವನ್ನ ಜೇಡಿ ಮಣ್ಣಿನಿಂದ ತಯಾರಿಸಿ ಅದಕ್ಕೆ ನೈಸಗರ್ಿಕವಾದ ಬಣ್ಣಗಳನ್ನೇ ಲೇಪಿಸಬಹುದು. ಗಂಧ, ಅಶ್ವಗಂಧ, ಕೇಸರಿ, ಚಂದನ , ಬೇವಿನ ರಸ, ಅರಿಷಿಣ, ಕುಂಕುಮ, ಗಿಡದ ಲೋಳೆ ರಸ ಇತ್ಯಾದಿಗಳನ್ನ ಬಳಸಿ ಪ್ರಕೃತಿ ಸ್ನೇಹಿಯಾದ ಕಲರ್ ಕಲರ್ ಗಣೇಶನ ವಿಗ್ರಹಗಳನ್ನ ತಯಾರಿಸಬಹುದು. ಈ ರೀತಿಯ ಗಣೇನ ಮೂತರ್ಿ ಗಳನ್ನ ಪೂಜಿಸೋದ್ರಿಂದಾಗಿ ಗಣೇಶನನ್ನ ಪ್ರಕೃತಿ ಪ್ರಿಯನನ್ನಾಗಿ ಮತ್ತೆ ಮಾಡಬೇಕಾಗಿದೆ. ಇನ್ನು ಚಿಕ್ಕ ಚಿಕ್ಕ ಗಣೇಶನ ಮೂತರ್ಿಗಳನ್ನ ಇಟ್ಟು ಮನೆಯ ಬಳಿಯೇ ಬಕೆಟ್ ಗಳಲ್ಲಿ ವಿಸಜರ್ಿಸಿ ಆ ನೀರನ್ನ ಗಿಡಗಳಿಗೆ ಹಾಕೋದ್ರಿಂದಲೂ ಪರಿಸರ ಸ್ನೇಹಿಯಾಗಿ ಗಣೇಶನ ಹಬ್ಬವನ್ನ ಆಚರಿಸಬಹುದು. ಗಣೇಶನ ಮೂತರ್ಿಯನ್ನ ವಿಸರ್ಜನೆ ಮಾಡುವಾಗ ಹೂವು, ಬಾಲೆ ಎಲ್ಲವನ್ನೂ ಕೆರೆಗೆ ಎಸೆಯೋದ್ರಿಮದ ಅವು ನೀರಿನಲ್ಲಿ ಕೊಳೆತು ನೀರು ಮಲಿನವಾಗುತ್ತದೆ. ಹಾಗಾಗಿ ಗಣೆಶನನ್ನ ವಿಸಜರ್ಿಸುವಾಗ ಅವುಗಳನ್ನ ತೆಗೆದಿಟ್ಟು ವಿಸಜರ್ಿಸಿ.
ಇನ್ನು ಗಣೇಶನನ್ನ ಬೀದಿ ಬೀದಿಗಳಲ್ಲಿ ಪ್ರತಿಷ್ಠಾಪನೆ ಮಾಡಿದ ನಂತ್ರ ಮೈಕಾಸುರರ ಆವಳಿಯೇನೂ ಕಡಿಮೆ ಇರೋದಿಲ್ಲ. ಯಾವ ಬಿದಿಯಲ್ಲಿ ನೋಡಿದ್ರೂ ಸಿನೆಮಾ ಹಾಡುಗಳನ್ನ ಹಾಕಿಕೊಂಡು ಟಪಾಂಗುಚ್ಚಿ ಸ್ಟೆಪ್ ಹಾಕೋದು ಎಲ್ಲೆಲ್ಲೂ ಕಾಮನ್. ಇದ್ರ ಜೊತೆಗೆ ಆರ್ ಕೆಸ್ಟ್ರಾ ಗಳವರೂ ಕೂಡ ಸಿನಿಮಾ ಹಾಡುಗಳನ್ನ ತಮ್ಮ ಕೆಟ್ಟ ಕಂಠಗಳಲ್ಲೇ ತಾವೊಬ್ಬ ಮಹಾನ್ ಗಾಯಕರಂತೆ ಪೋಸ್ ಕೊಡ್ತಾ ಹಾಡೋಕೆ ನಿಂತುಬಿಡ್ತಾರೆ. ಭಯಂಕರವಾಗಿ ಸೌಂಡ್ ಕೊಟ್ಟು ಅದು ಇಡೀ ಊರಿಗೇ ಕೇಳಿಸಿವಂತೆ ಮಾಡಿ ಯಾಕಾದ್ರೂ ಗಣೇಶನನ್ನ ಕೂರಿಸ್ತಾರೋ ಅಂತ ಎಲ್ಲರೂ ಶಪಿಸುವಂತೆ ಮಾಡಿಕೊಳ್ಳುವುದನ್ನ ಬಿಟ್ಟು ಕಡಿಮೆ ಶಬ್ದದಲ್ಲಿ ದೇವರ ಹಾಡನ್ನ ಹಾಕಿದ್ರೆ ಗಣೇಶನನ್ನ ಇಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ. ಪರಿಸರ ಮಾಲೀನ್ಯದ ಜೊತೆಗೆ ಶಬ್ದ ಮಾಲೀನ್ಯವನ್ನೂ ತಡೆದು ಆ ಮೂಲಕ ಪರಿಸರ ಸ್ನೇಹಿ ಹಬ್ಬವನ್ನ ಆಚರಿಸಿ ಸಂಭ್ರಮಿಸಬಹುದು. ಗಣೇಶ ನಿಮ್ಮ ಫ್ರೆಂಡ್ ಆಗ್ಬೇಕು ಅಂದ್ರೆ ಅದಕ್ಕೂ ಮೊದಲು ನೀವು ಇಕೊ ಫ್ರೆಂಡ್ಲಿ ಆಗ್ಬೇಕು. ಹಾಗಾದ್ರೆ ಹಬ್ಬದ ಸಂಭ್ರಮದ ಜೊತೆಗೆ ಪರಿಸರ ಉಳಿಸಿದ ಸಂತಸವೂ ಸಿಗುತ್ತದೆ….

ಇದೇನಿದು ಆಪ್ರಿಕಾದಲ್ಲಿ ಅಮಾನವೀಯತೆಯ ಪರಮಾವದಿ….

“ಕಗ್ಗತ್ತಲೆಯ ಖಂಡ ಆಪ್ರಿಕಾ” ಅಂತ ನಾವು ಶಾಲೆಯಲ್ಲಿ ಓದಿದ ನೆನಪು…. ಆದ್ರೆ ಅಲ್ಲಿ ಇಷ್ಟೊಂದು ಕಗ್ಗತ್ತಲೆ ತಾಂಡವವಾಡ್ತಾಯಿದೆ ಅಂತ ನನಗೆ ಅರ್ಥವಾಗಿದ್ದು ಯೂ ಟ್ಯೂಬ್ ನಲ್ಲಿ ಈ ವಿಡಿಯೋ ನೋಡಿದ ಮೇಲೆ… ಆಪ್ರಿಕಾದ ಅನಾಗರೀಕ ದೇಶಗಳಾದ ಕೀನ್ಯಾ, ಜಿಂಬಾಬ್ವೆ, ಪಪುವಾ ನ್ಯೂಗಿನಿ ಮುಂತಾದ ದೇಶಗಳಲ್ಲಿ ಈ ಭೀಕರತೆ ತೀರಾ ಸಾಮಾನ್ಯವಾಗಿಬಿಟ್ಟಿದೆ. ಇಲ್ಲಿ ಬರ್ಭರವಾಗಿ, ಅಮಾನುಷವಾಗಿ ಮನುಷ್ಯರನ್ನ ಸಾರ್ವಜನಿಕವಾಗಿ ಜೀವಂತವಾಗಿ ಸುಟ್ಟು ಹಾಕಲಾಗುತ್ತಿದೆ. ಮನುಷ್ಯ ಮಾತ್ರರಾದವರು ಸಹಿಸಿಕೊಳ್ಳಲಾಗದ, ಅರಗಿಸಿಕೊಳ್ಳಲು ಸಾಧ್ಯವೇ ಆಗದ ಇಂತಹ ಘಟನೆಗಳು ನಾಗರೀಕ ಜಗತ್ತಿಗೆ ಕಪ್ಪು ಚುಕ್ಕೆ… ಇಷ್ಟಕ್ಕೂ ಹೀಗೆ ಮನುಷ್ಯರನ್ನ ಜೀವಂತವಾಗಿ ಸುಟ್ಟು ಹಾಕೋದಕ್ಕೆ ಕಾರಣವಾದ್ರೂ ಏನು ಗೊತ್ತಾ… ಇವರುಗಳು ವಾಮಾಚಾರ ಮಾಡುವವರು, ಮಾಟಗಾರರು ಅಂತ… ಒಂದು ಊರಿನಲ್ಲಿ ಇದ್ದಕ್ಕಿದ್ದ ಹಾಗೇ ಮಕ್ಕಳಿಗೇನಾದ್ರೂ ಕಾಯಿಲೆ ಬಂದರೆ, ಇಲ್ಲವೇ ಮಕ್ಕಳು ಸಾವನ್ನಪ್ಪಿದ್ರೆ, ಅಥವಾ ಊರಿನಲ್ಲಿ ಏನಾದ್ರೂ ಕೆಡಕಾದ್ರೆ ಅದಕ್ಕೆ ಈ ಮಾಟಗಾರರೇ ಕಾರಣ ಅಂತ ಶಂಕಿಸಿ ಸಾರ್ವಜನಿಕವಾಗಿ ಹೊಡೆದು, ಬಡಿದು ಜೀವಂತವಾಗಿ ಸುಟ್ಟು ಹಾಕಲಾಗುತ್ತಿದೆ… ನೂರಾರು ಜನಗಳ ಎದುರೇ ಹೀಗೆ ಅಮಾನುಷವಾಗಿ ಮನುಷ್ಯರನ್ನ ಜೀವಂತವಾಗಿ ಸುಡಲಾಗುತ್ತದೆ. ಅರಾಜಕತೆಯಿಂದ ತಾಂಡವವಾಡ್ತಾಯಿರುವ ಈ ದೇಶಗಳಲ್ಲಿನ ಜನರಲ್ಲಿನ ಮೌಡ್ಯತೆಯ ಪರಮಾವದಿಯಿಂದಲೇ ಈ ರೀತಿಯ ದುರ್ಘಟನೆಗಳು ಆಪ್ರಿಕಾದ ಕೆಲ ದೇಶಗಳಲ್ಲಿ ಆಗಿಂದಾಗ್ಗೆ ನಡೆಯುತ್ತಲೇ ಇರುವಂತೆ ಮಾಡಿದೆ…, ಜನರನ್ನ ಎಜುಕೇಟ್ ಮಾಡಬೇಕಾದ, ನಾಗರೀಕತೆಯ ಪಾಠ ಕಲಿಸಬೇಕಾದ, ಒಂದು ದೇಶವನ್ನ ಮುನ್ನೆಡೆಸುವ ಸಮರ್ಥ ನಾಯಕರಿಲ್ಲದೇ ಇದ್ದಾಗ ಈ ರೀತಿ ನಾಗರೀಕ ಜಗತ್ತು ತಲೆ ತಗ್ಗಿಸುವಂತಹ ಹೇಯ ಕೃತ್ಯಗಳು ಮತ್ತೆ ಮತ್ತೆ ನಡೆಯುತ್ತಲೇ ಇರತ್ತವೆ…

ಜನಲೋಕಪಾಲ್ ಕಾಯ್ದೆ ಬಗ್ಗೆ ನಿಮಗೆಷ್ಟು ಗೊತ್ತು…

* ರಾಷ್ಟ್ರೀಯ ಮಟ್ಟದಲ್ಲಿ ಲೋಕಪಾಲ್ ಮತ್ತು ಎಲ್ಲಾ ರಾಜ್ಯಗಳಲ್ಲೂ ಲೋಕಾಯುಕ್ತ ಸಂಸ್ಥೆ
* ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋಟರ್್ ನಂತೆ ಸಕರ್ಾರದ ನಿಯಂತ್ರಣದಿಂದ ಸಂಪೂರ್ಣ ಮುಕ್ತವಾಗುರುವ ಸಾಂವಿದಾನಿಕ ಸಂಸ್ಥೆ.
* ಮಂತ್ರಿಗಳಾಗಲೀ, ರಾಜಕಾರಿಣಿಗಳಾಗಲೀ ಅಥವಾ ಅಧಿಕಾರಿಗಳಾಗಲೀ ಲೋಕಪಾಲ್ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ.
* ಭ್ರಷ್ಟಚಾರ ಪ್ರಕರಣಗಳ ವಿಚಾರಣೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಿ ಎರೆಡು ವರ್ಷದೊಳಗೆ ಭ್ರಷ್ಟರಿಗೆ ಶಕ್ಷೆ ವಿಧಿಸಲಾಗುವುದು.
* ಭ್ರಷ್ಟ ವ್ಯಕ್ತಿಯಿಂದ ಸಕರ್ಾರಕ್ಕಾಗಿರುವ ನಷ್ಟವನ್ನು ಆತನಿಂದಲೇ ವಸೂಲಿ ಮಾಡುವುದು.
* ಯಾವುದೇ ನಾಗರೀಕ ಸಕರ್ಾರಿ ಕಛೇರಿಗಳಲ್ಲಿ ನಿಗದಿತ ಸಮಯದೊಳಗೆ ತನ್ನ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಯಾವುದೇ ಸಕರ್ಾರೀ ಸೇವೆಗಳನ್ನು ನೀಡಲು ಲಂಚ ಕೇಳಿದರೆ ಅಂತಹ ಅಧಿಕಾರಿಗಳ ವಿರುದ್ದ ಆತ ಲೋಕಪಾಲ್ಗೆ ದೂರು ನೀಡಬಹುದು.
* ಲೋಕಪಾಲರನ್ನು ಆಯ್ಕೆ ಮಾಡಲು ಸುಪ್ರೀಂ ಕೋಟರ್್ ನ ನ್ಯಾಯಮೂತರ್ಿಗಳು, ನಾಗರೀಕ ಪ್ರತಿನಿಧಿಗಳು, ಸಕರ್ಾರದ ಪ್ರತಿನಿಧಿಗಳು ಮತ್ತು ವಿರೋಧ ಪಕ್ಷದ ನಾಯಕರುಗಳನ್ನೊಳಗೊಂಡ ಸಮಿತಿ ಆಯ್ಕೆ ಮಾಡುತ್ತದೆ.
* ಯಾವುದೇ ಲೋಕ್ಪಾಲ್ ಅಧಿಕಾರಿಯ ವಿರುದ್ದ ಭ್ರಷ್ಟಾಚಾರದ ಆರೋಪ ಇದ್ದರೆ ಎರೆಡು ತಿಂಗಳ ಒಳಗೆ ವಿಚಾರಣೆ ನೆಡೆಸಿ ಆತನನ್ನು ಅಮಾನತು ಮಾಡಲಾಗುತ್ತದೆ.
* ಸಿ.ಬಿ.ಐ, ಸಿ.ವಿ.ಸಿ ಗಳು ಲೋಕಪಾಲದೊಂದಿಗೆ ವಿಲೀನ.
* ಪ್ರಧಾನಿ, ಸಂಸದರು, ನ್ಯಾಯಾಂಗ ಮತ್ತು ಅಧಿಕಾರಿಗಳು ಲೋಕಪಾಲ್ ವ್ಯಾಪ್ತಿಗೊಳಪಡುತ್ತಾರೆ.
* ಭ್ರಷ್ಟಚಾರದ ವಿರುದ್ದ ದೂರು ನೀಡಿದವರಿಗೆ ಲೋಕಪಾಲ್ ರಕ್ಷಣೆ ನೀಡುತ್ತದೆ.
* ಅಪರಾಧ ಸಾಬೀತಾದಲ್ಲಿ ಭ್ರಷ್ಟರಿಗೆ 10 ವರ್ಷದವರೆಗೆ ಮತ್ತು ಜೀವಾವದಿ ಶಿಕ್ಷೆ.

 

ನಿಮಗಿದು ಗೊತ್ತಾ…?

Yahoo ಎಂಬುದರ ವಿಸ್ತ್ರುತ ರೂಪ– yet another hierarchical of officious oracle.

ಕಲಾವಿದ ಪಿಕಸೊ ಗೊತ್ತಲ್ಲ, ಆತನ ಪೂರ್ಣ ಹೆಸರು ಹೀಗಿದೆ ಓದಿಕೋಳ್ಳಿ. Pablo Diego Francisco de Paula Juan Nepomuceno Mania de los Remedios Cipriano de la Santisma Trinidad Ruiz Picasso.   ಅಬ್ಬಾ!

ಶಹಜಹಾನ್ನ ಪೂರ್ಣ ಹೆಸರು ಏನು ಗೊತ್ತಾ -Al-Sultan al-‘Azam wal Khaqan al-Mukarram, Abu’l-Muzaffar Shihab ud-din Muhammad, Sahib-i-Qiran-i-Sani, Shah Jahan I Padshah Ghazi

ಅಮೆಜಾನ್ ವನ್ಯರಾಶಿ, ಜಗತ್ತಿನ ಶ್ವಾಶಕೋಶದ ಹಾಗೆ,ಇದರ ವಿಸ್ತಾರ 5100000 ಚದುರ ಕಿಲೋಮೀಟರ್; ಅಂದರೆ ಅರ್ಧ ಯೂರೋಪಿನಷ್ಟು !
ಇಂಗ್ಲಿಷಿನಲ್ಲೇ ಅತಿ ಹೆಚ್ಚು ಅರ್ಥಗಳನ್ನೂ,ವ್ಯಾಖ್ಯಾನಗಳನ್ನೂ ಹೊಂದಿರುವ ಪದ- -‘set’. . ಇದಕ್ಕೆ ನೂರಾ ತೊಂಬತ್ತೆರಡು ವಿಭಿನ್ನ ಅರ್ಥಗಳಿವೆ.

ಸಂಖ್ಯೆಗಳನ್ನು ಆಂಗ್ಲ ಅಕ್ಷರಗಳಲ್ಲಿ one, two, three ಎಂದು ಬರೆಯುವಾಗ 999ನೆಯ ಸಂಖ್ಯೆಯವರೆಗೂ A ಅಕ್ಷರದ ಬಳಕೆಯಾಗುವುದಿಲ್ಲ.

Tips ಅಂದರೆ To insure promt service ಅಂತ ಅರ್ಥ.

ಒಂದು ಪೌಂಡ್(450 ಗ್ರಾಂ) ಕಬ್ಬಣದಲ್ಲಿ ಇರುವ ಅಣುಗಳ ಸಂಖ್ಯೆ 4891500000000000000000000 ಉಪ್.

ಬೇಕಾದರೆ ಪ್ರಯತ್ನಿಸಿ ನೋಡಿ ಕಣ್ಣು ಮುಚ್ಚದೆ ಸೀನು ಹೊಡೆಯಲು ಸಾದ್ಯವೇ ಇಲ್ಲ.

ಮೃತ ಸಮುದ್ರದಲ್ಲಿ ಮಲಗಿಕೊಂಡು ಓದಬಹುದು[ಈ ಸಮುದ್ರದಲ್ಲಿ ಲವಣಾಂಶ ಅತೀ ಹೆಚ್ಚಾಗಿರುವುದರಿಂದ ವಸ್ತುಗಳು ಮುಳುಗಲಾರವು

ಕೋಲ್ಗೇಟ್ ಟೂತ್ ಪೇಸ್ಟ್ ಕಂಪನಿಯವರು ಸ್ಪೇನಿನ ಮಾರುಕಟ್ಟೆಯಲ್ಲಿ ತಮ್ಮ ಬ್ರಾಂಡನ್ನು ಪ್ರಚಾರ ಮಾಡಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ , ಯಾಕೆ ಗೊತ್ತಾ? ಸ್ಪಾನಿಶ್ ಭಾಷೆಯಲ್ಲಿ ಕೋಲ್ಗೇಟ್ ಅಂದರೆ ಹೋಗಿ ನೇಣು ಹಾಕಿಕೋಂಡು ಸಾಯಿ ಅಂತ ಅರ್ಥ.

ನ್ಯೂಜಿಲ್ಯಾಡಿನ ಜನಸಂಖ್ಯೆ 40 ದಶಲಕ್ಷವಾದರೆ ಅಲ್ಲಿರುವ ಕುರಿಗಳ ಸಂಖ್ಯೆ 70 ದಶಲಕ್ಷ.

ಒoದು ದಿನದ ಅವದಿಯಲ್ಲಿ ನಮ್ಮ ದೇಹದ ರಕ್ತ 60 ಸಾವಿರ ಮೆಲಿ ದೂರ ಚಲಿಸುತ್ತದೆ.

ಅಮೇರಿಕಾ ಇಡೀ ವಿಶ್ವದಲ್ಲಿ ಉಪಯೋಗಿಸುವ ಪೆಟ್ರೋಲ್ ಪ್ರಮಾಣದಲ್ಲಿ ಶೇ.29 ರಷ್ಟನ್ನು ಉಪಯೋಗಿಸುತ್ತದೆ ಹಾಗೆಯೇ ಶೇ. 33 ರಷ್ಟು ವಿದ್ಯುತ್ತನ್ನು ಬಳಸುತ್ತದ

ನಂಬಿದರೆ ನಂಬಿ ಬಿಟ್ರೆ ಬಿಡಿ ಸಹರಾ ಮರುಭೂಮಿಯವಿಸ್ತೀರ್ಣ ಪ್ರತೀ ತಿಂಗಳಿಗೂ ಒಂದೊಂದು ಕಿಲೋಮೀಟರ್ ಹೆಚ್ಚುತ್ತಾ ಹೋಗುತ್ತದಂತೆ.

ಇಂಗ್ಲೆಂಡಿನ ಜನರ ಪಾಲಿಗೆ ಅಲ್ಲಿನ ರಾಣಿ ನಿಂತರೂ ಸುದ್ದಿ ಕೂತರೂ ಸುದ್ದಿ, ಅಕಸ್ಮಾತ್ ಜಾರಿ ಬಿದ್ದರಂತೂ ದೋಡ್ಡ ಸುದ್ದಿ . ಆದರೆ ಸ್ವಾರಸ್ಯದ ಸಂಗತಿ ಎoದರೆ ಇಂಗ್ಲೆಂಡಿನ ರಾಣಿಗೆ ದೇಶದ ಚುನಾವಣೆಗಳಲ್ಲಿ ಪಾಲ್ಗೋಂಡು ಮತದಾನ ಮಾಡುವ ಹಕ್ಕಿಲ್ಲ.

ನೀವು ತಿಪ್ಪರಲಾಗ  ಹೋಡೆದರೂ ವಿಂಡೋಸ್ ನಲ್ಲಿ con ಎಂಬ ಪೈಲ್ ಅಥವಾ ಪéೋಲ್ದರ್ನ್ನು ಕ್ರಿಯೇಟ್ ಮಾಡಲು ಸಾದ್ಯವಿಲ್ಲ.

ವಿಶ್ವದ ಇತಿಹಾಸದಲ್ಲಿ ಮಹಾ ಪರಾಕ್ರಮಿಯೆನಿಸಿಕೊಂಡಿದ್ದ ನೆಪೋಲಿಯನ್ ಬೋನಾಪಾಟರ್ೆ ಬೆಕ್ಕನ್ನು ಕಂಡರೆ ವಿಪರೀತ ಹೆದರುತ್ತದ್ದನಂತೆ.

%d bloggers like this: