ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಪ್ರಗತಿಪರರ ಪೌರೋಹಿತ್ಯ ಯಾಕೆ..?

CM_PRAGATHI_02ರಾಜ್ಯ ವಿಧಾನಸಭಾ ಚುನಾವಣೆಗೆ ಮಹೂರ್ತ ಫಿಕ್ಸ್ ಆಗುತ್ತಿದ್ದಂತೆ ಈ ರಾಜ್ಯದ ಪ್ರಗತಿಪರರು, ಬುದ್ಧಿಜೀವಿಗಳು ಎನಿಸಿಕೊಂಡವರು ಈಗ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ರಾಜ್ಯದ ಮೂರೂ ರಾಜಕೀಯ ಪಕ್ಷಗಳು ಮೈತ್ರಿ ಬಗ್ಗೆ ಇನ್ನೂ ಚಕಾರವೆತ್ತದೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಚಿತ್ತ ಹರಿಸಿವೆ. ಆದ್ರೆ ಪ್ರಗತಿಪರರು ಈಗಾಗಲೆ ಮೈತ್ರಿ ರಾಜಕಾರಣಕ್ಕೆ ಪೌರೋಹಿತ್ಯ ಆರಂಭಿಸಿದ್ದಾರೆ. ಬಿಜೆಪಿ ವಿರೋಧಿಗಳನ್ನೆಲ್ಲಾ ಒಟ್ಟುಗೂಡಿಸುವ ಕಾರ್ಯಕ್ಕೆ ಪ್ರಗತಿಪರರ ಗುಂಪು ಮುಂದಾಗಿದೆ. ರಾಜ್ಯದ ರಾಜಕೀಯ ಪಕ್ಷಗಳಿಗೇ ಇಲ್ಲದ ಉಸಾಬರಿಯನ್ನು ಈ ಪ್ರಗತಿಪರರು ದುಂಬಾಲು ಬಿದ್ದು ಮಾಡುತ್ತಿರುವುದೇಕೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರಗತಿಪರರ ನಿಯೋಗ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಮತ್ತು ಸಿಎಂ ಸಿದ್ದರಾಮಯ್ಯನವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಜೆಡಿಎಸ್ ಮತ್ತು ಕಾಂಗ್ರೆಸ್​ ಮೈತ್ರಿ ಮಾಡಿಕೊಳ್ಳುವಂತೆ ಪೌರೋಹಿತ್ಯ ನಡೆಸಿವೆ. ಕಾಂಗ್ರೆಸ್ ಮತ್ತು ಜೆಡಿಎಸ್​ ಎರಡೂ ಪಕ್ಷಗಳಿಗೂ ಮೈತ್ರಿ ಬಗ್ಗೆ ಯಾವುದೇ ಮನಸ್ಸಿಲ್ಲದಿದ್ದರೂ ಪ್ರಗತಿಪರರು/ಬುದ್ಧಿಜೀವಿಗಳು ಎಂದು ಹೇಳಿಕೊಳ್ಳುವವರ ಗುಂಪು ರಾಜಕೀಯ ಪಕ್ಷಗಳ ಮಧ್ಯೆ ಮೈತ್ರಿ ಕುದುರಿಸಲು ದಳ್ಳಾಳಿಗಳಂತೆ ಕೆಲಸ ಮಾಡುತ್ತಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಗೆ ಮಹೂರ್ತ ಫಿಕ್ಸ್ ಆಗುತ್ತಿದ್ದಂತೆ ಈ ರಾಜ್ಯದ ಪ್ರಗತಿಪರರು, ಬುದ್ಧಿಜೀವಿಗಳು ಎನಿಸಿಕೊಂಡವರು ಈಗ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ರಾಜ್ಯದ ಮೂರೂ ರಾಜಕೀಯ ಪಕ್ಷಗಳು ಮೈತ್ರಿ ಬಗ್ಗೆ ಇನ್ನೂ ಚಕಾರವೆತ್ತದೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಚಿತ್ತ ಹರಿಸಿವೆ. ಆದ್ರೆ ಪ್ರಗತಿಪರರು ಈಗಾಗಲೆ ಮೈತ್ರಿ ರಾಜಕಾರಣಕ್ಕೆ ಪೌರೋಹಿತ್ಯ ಆರಂಭಿಸಿದ್ದಾರೆ. ಬಿಜೆಪಿ ವಿರೋಧಿಗಳನ್ನೆಲ್ಲಾ ಒಟ್ಟುಗೂಡಿಸುವ ಕಾರ್ಯಕ್ಕೆ ಪ್ರಗತಿಪರರ ಗುಂಪು ಮುಂದಾಗಿದೆ. ರಾಜ್ಯದ ರಾಜಕೀಯ ಪಕ್ಷಗಳಿಗೇ ಇಲ್ಲದ ಉಸಾಬರಿಯನ್ನು ಈ ಪ್ರಗತಿಪರರು ದುಂಬಾಲು ಬಿದ್ದು ಮಾಡುತ್ತಿರುವುದೇಕೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರಗತಿಪರರ ನಿಯೋಗ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಮತ್ತು ಸಿಎಂ ಸಿದ್ದರಾಮಯ್ಯನವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಜೆಡಿಎಸ್ ಮತ್ತು ಕಾಂಗ್ರೆಸ್​ ಮೈತ್ರಿ ಮಾಡಿಕೊಳ್ಳುವಂತೆ ಪೌರೋಹಿತ್ಯ ನಡೆಸಿವೆ. ಕಾಂಗ್ರೆಸ್ ಮತ್ತು ಜೆಡಿಎಸ್​ ಎರಡೂ ಪಕ್ಷಗಳಿಗೂ ಮೈತ್ರಿ ಬಗ್ಗೆ ಯಾವುದೇ ಮನಸ್ಸಿಲ್ಲದಿದ್ದರೂ ಪ್ರಗತಿಪರರು/ಬುದ್ಧಿಜೀವಿಗಳು ಎಂದು ಹೇಳಿಕೊಳ್ಳುವವರ ಗುಂಪು ರಾಜಕೀಯ ಪಕ್ಷಗಳ ಮಧ್ಯೆ ಮೈತ್ರಿ ಕುದುರಿಸಲು ದಳ್ಳಾಳಿಗಳಂತೆ ಕೆಲಸ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಮತ್ತು ಸಂವಿಧಾನ ರಕ್ಷಿಸಲು ಈ ಪ್ರಯತ್ನ ನಡೆಸಿರುವುದಾಗಿ ಪ್ರಗತಿಪರರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಎಚ್​ಡಿ ದೇವೇಗೌಡರ ಮನೆಯಲ್ಲಿ ನಡೆದ ಪೌರೋಹಿತ್ಯ ಸಭೆ ನಂತರ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡರು, ‘ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ದವಿದ್ದರೆ ಅವರೇ ಸೀಟು ಹಂಚಿಕೆಯನ್ನು ಘೋಷಣೆ ಮಾಡಲಿ’ ಎಂದು ವ್ಯಂಗ್ಯವಾಡಿದ್ದರು. ಇದನ್ನೇ ಆಸೆಗಣ್ಣಿನಿಂದ ನೋಡುತ್ತಿದ್ದ ಪ್ರಗತಿಪರರು ತಾವು ಬಂದ ಕೆಲಸ ಸಾಧಿಸಿಯೇಬಿಟ್ಟೆವು, ಕಾಂಗ್ರೆಸ್​ ಜೊತಿಗಿನ ಮೈತ್ರಿಗೆ ಗೌಡರು ಒಪ್ಪಿಯೇಬಿಟ್ಟರು ಎಂದು ಯುದ್ಧ ಗೆದ್ದ ಸಂತಸದಿಂದ ಅಲ್ಲಿಂದ ತೆರಳಿದರು. ಅಷ್ಟರಲ್ಲಾಗಲೇ ಕಾಂಗ್ರೆಸ್​ ಜೊತೆ ಮೈತ್ರಿಗೆ ದೊಡ್ಡ ಗೌಡರು ಸಿದ್ದ ಅನ್ನೋ ಸುದ್ದಿ ಸುದ್ದಿ ವಾಹಿನಿಗಳಲ್ಲಿ ರಾರಾಜಿಸುತ್ತಿತ್ತು. ತಕ್ಷಣ ಎಚ್ಚೆತ್ತ ದೊಡ್ಡಗೌಡರು ಪತ್ರಿಕಾಗೋಷ್ಠಿ ಕರೆದು ಮತ್ತೊಂದು ದಾಳ ಉರುಳಿಸಿಬಿಟ್ಟರು. ‘ಒಳ್ಳೆಯ ಸದುದ್ದೇಶದಿಂದ ಪ್ರಗತಿಪರರು ತಮ್ಮನ್ನು ಭೇಟಿಯಾಗಿದ್ದರು. ಮೈತ್ರಿ ಮಾಡಿಕೊಳ್ಳುವ ಉದ್ದೇಶ ಕಾಂಗ್ರೆಸ್​ಗೆ ಇದ್ದರೆ ಸೀಟು ಹಂಚಿಕೆಯನ್ನು ಬಹಿರಂಗವಾಗಿ ಘೋಷಿಸುವಂತೆ ಸಾಂಧರ್ಬಿಕವಾಗಿ ಹೇಳಿದ್ದೆ ಅಷ್ಟೇ. ವ್ಯಂಗ್ಯವಾಗಿ ಹೇಳಿದ್ದನ್ನೇ ಮೈತ್ರಿಗೆ ಸಿದ್ದ ಎಂದು ಬಿಂಬಿಸಲಾಗುತ್ತಿದೆ. ಈಗ ಮೈತ್ರಿ ಮಾಡಿಕೊಳ್ಳುವುದಕ್ಕೆ ಸಮಯ ಎಲ್ಲಿದೆ, ಮೈತ್ರಿಗೆ ನಾಯಕತ್ವ ವಹಿಸುವವರಾರು’ ಎಂದು ಹೇಳಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಬಗ್ಗೆ ತಮಗೆ ಮನಸ್ಸಿಲ್ಲ ಎಂದುಬಿಟ್ಟರು. ಅಲ್ಲಿಗೆ ಯುದ್ಧ ಗೆದ್ದ ಸಂತಸದಲ್ಲಿದ್ದ ಪ್ರಗತಿಪರರ ಸಂಭ್ರಮವೂ ಮುಗಿದಿತ್ತು.

ರಾಜ್ಯದಲ್ಲಿ ಸಿದ್ದರಾಮಯ್ಯನವರನ್ನು ಮತ್ತೆ ಮುಖ್ಯಮಂತ್ರಿಯಾಗದಂತೆ ತಡೆಯಲು ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಮತ್ತು ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಹೋರಾಟಕ್ಕಿಳಿದಿದ್ದಾರೆ. ಈ ಮಧ್ಯೆ ಕಾಂಗ್ರೆಸ್​ ಜೊತೆ ಮೈತ್ರಿಗೆ ಬನ್ನಿ ಎಂದು ಆಹ್ವಾನಿಸಲು ಹೋದ ಪ್ರಗತಿಪರರನ್ನು ದೇವೇಗೌಡರು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಅನ್ನೋದು ಇಂಟರ್ನಲ್ ಮಾಹಿತಿ. ಕಾಂಗ್ರೆಸ್ ರೈತರು ಮತ್ತು ಅಲ್ಪಸಂಖ್ಯಾತರ ವಿಚಾರದಲ್ಲಿ ಹೇಗೆ ನಡೆದುಕೊಂಡಿದೆ ಅನ್ನೋದನ್ನ ಪ್ರಗತಿಪರರಿಗೆ ಮುಖಕ್ಕೆ ಹೊಡೆದಂತೆ ದೊಡ್ಡಗೌಡರು ಹೇಳಿ ಬಿಸಿ ಮುಟ್ಟಿಸಿದ್ದಾರೆ. ಆದರೂ ಬಿಜೆಪಿಯನ್ನು ಮಣಿಸಲು ತಾವು ಪ್ರಯತ್ನಿಸುವುದಾಗಿ ಹೇಳಿ ಮನೆಯವರೆಗೂ ಬಂದಿದ್ದವರನ್ನು ಸಾಗಹಾಕಿದ್ದಾರೆ..

ದೇವೇಗೌಡರ ಮನೆಯಲ್ಲಿ ನಡೆದ ಪೌರೋಹಿತ್ಯಕ್ಕೆ ಬೆಲೆ ಸಿಗಲಿಲ್ಲ ಅನ್ನೋದು ಗೊತ್ತಾಗುತ್ತಿದ್ದಂತೆ ಈ ಪ್ರಗತಿಪರರ ಗುಂಪು ಛಲಬಿಡದಂತೆ ತಮ್ಮ ಪ್ರಯತ್ನವನ್ನು ಮುಂದುವರಿಸಿ ಸಿಎಂ ಸಿದ್ದರಾಮಯ್ಯನವರನ್ನೂ ಭೇಟಿ ಮಾಡಿ ಜೆಡಿಎಸ್​ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಮನವೊಲಿಸುವ ಮಾತನ್ನಾಡಿದ್ದಾರೆ. ಈ ರಾಜ್ಯದಲ್ಲಿ ಪ್ರಗತಿಪರರು ಮತ್ತು ಬುದ್ಧಿಜೀವಿಗಳು ಕಾಂಗ್ರೆಸ್​ನ ಬಿ ಟೀಂ ನಂತೆಯೇ ಕೆಲಸ ಮಾಡುವುದರಿಂದ ಸಿಎಂ ಸಿದ್ದರಾಮಯ್ಯ ತಮ್ಮನ್ನು ಭೇಟಿ ಮಾಡಿದವರ ಜೊತೆ ಸಂತಸದಿಂದಲೇ ಮಾತನಾಡಿದ್ದಾರೆ. ಚುನಾವಣಾ ಪೂರ್ವವಾಗಿ ಜೆಡಿಎಸ್​ ಜೊತೆ ಮೈತ್ರಿ ಮಾಡಿಕೊಳ್ಳುವ ಅಗತ್ಯ ಕಾಂಗ್ರೆಸ್​ಗೆ ಇಲ್ಲ. ಕಾಂಗ್ರೆಸ್​ ಸ್ವಂತಬಲದಿಂದಲೇ ಅಧಿಕಾರ ಹಿಡಿಯಲಿದೆ. ಒಂದು ವೇಳೆ ಅತಂತ್ರದ ಪರಿಸ್ಥಿತಿ ಬಂದರೆ ನಿಮ್ಮ ಮನವಿಯನ್ನು ಪರಿಗಣಿಸಲಾಗುವುದು ಎಂದು ಹೇಳಿ ತಮ್ಮನ್ನು ಭೇಟಿ ಮಾಡಿದವರ ನಿರೀಕ್ಷೆ ಹುಸಿಯಾಗದಂತೆ ಮಾಡಿ ಕಳಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ‘ತಾನು ಬಿಜೆಪಿ ಪಕ್ಕ ನಿಂತು ಕೆಮ್ಮಿದರೆ ಸಾಕು ಕಾಂಗ್ರೆಸ್ ದೂಳಿಪಟವಾಗಿಬಿಡುತ್ತದೆ’ ಎಂದು ಎಚ್​ಡಿ ಕುಮಾರಸ್ವಾಮಿ ಹೇಳಿಕೆ ನೀಡುತ್ತಿದ್ದಂತೆ ಪ್ರಗತಿಪರರ ಪೌರೋಹಿತ್ಯ ಆರಂಭವಾಗಿದೆ. ಜೆಡಿಎಸ್ ಬಿಜೆಪಿಯತ್ತ ಸರಿಯುತ್ತಿರೋ ಸೂಚನೆ ಅರಿತು ಪ್ರಗತಿಪರರ ಗುಂಪು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ.

ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಮೋದಿ ವಿರೋಧಿ ಕಾರ್ಯತಂತ್ರವನ್ನೇ ಅನುಸರಿಸುತ್ತಿರುವ ಪ್ರಗತಿಪರರ ಗುಂಪು ಒಂದೇ ಒಂದು ದಿನವೂ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಮಾತನಾಡಿಯೇ ಇಲ್ಲ. ಮಾತನಾಡುವ ಸಂದರ್ಭಗಳು ಬಂದಾಗಲೂ ಈ ಗುಂಪು ಜಾಣ ಮೌನಕ್ಕೇ ಶರಣಾಗಿತ್ತು. ರಾಜ್ಯದಲ್ಲಿ ಸಾಲು ಸಾಲು ರೈತರು ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಾಗ ಯಾವ ಬುದ್ಧಿಜೀವಿ, ಪ್ರಗತಿಪರರೂ ಸರ್ಕಾರದ ವಿರುದ್ಧ ಮಾತನಾಡಲಿಲ್ಲ, ಸರ್ಕಾರವನ್ನು ಎಚ್ಚರಿಸಲೂ ಇಲ್ಲ. ಟಿಪ್ಪು ಜಯಂತಿ ವಿಚಾರವಾಗಿ ಆಕ್ರೋಶ ವ್ಯಕ್ತವಾದಾಗಲೂ ಈ ಸಮುದಾಯ ಸಿಎಂ ಸಿದ್ದರಾಮಯ್ಯನವರ ಬೆನ್ನಿಗೇ ನಿಂತಿತ್ತು. ಬೆಂಗಳೂರಿನಲ್ಲಿ ಆರೂವರೆ ಕಿಲೋಮೀಟರ್ ರಸ್ತೆಗೆ ಸ್ಟೀಲ್​ ಬ್ರಿಡ್ಜ್​ ನಿರ್ಮಿಸಲು ಸರ್ಕಾರ 1800 ಕೋಟಿ ಸುರಿಯಲು ಮುಂದಾದಾಗ ಬೆಂಗಳೂರಿಗೆ ಬೆಂಗಳೂರೇ ಬೀದಿಗೆ ಬಂದು ಸರ್ಕಾರದ ವಿರುದ್ಧ ನಿಂತಿತ್ತು. ಇಂತಹ ಸಂದರ್ಭದಲ್ಲಿಯೂ ಈ ಪ್ರಗತಿಪರರ ಗುಂಪು ಮಾತಾಡಲಿಲ್ಲ. ರೈತರ ಸಾವಿರಾರು ಎಕರೆ ಜಮೀನು ಕೊಳ್ಳೆ ಹೊಡೆದ ಆರೋಪ ಹೊತ್ತ ಅಶೋಕ್​ ಖೇಣಿಯನ್ನು ಸಿಎಂ ಸಿದ್ದರಾಮಯ್ಯನವರೇ ಅಪ್ಪಿಕೊಂಡು ಕಾಂಗ್ರೆಸ್​ಗೆ ಸೇರಿಸಿಕೊಂಡಾಗಲೂ ಇವರದ್ದು ಅದೇ ದಿವ್ಯ ಮೌನ. ಬಂಡವಾಳಶಾಹಿಗಳ ಬಗ್ಗೆ ಮಾತನಾಡುವ ಪ್ರಗತಿಪರರಿಗೆ ಅಶೋಕ್​ ಖೇಣಿ ಬಡವರ ಬಂಧುವಂತೆ ಕಾಣಿಸಿದರಾ..? ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆಯಾದಾಗ ಸಿಎಂ ಸಿದ್ದರಾಮಯ್ಯನವರ ಆಡಳಿತವನ್ನು ಪ್ರಶ್ನಿಸದೇ ತಮ್ಮ ಬಾಣವನ್ನು ಮೋದಿ ಕಡೆಗೆ ಹೂಡಿದ್ದು ಇದೇ ಪ್ರಗತಿಪರರು. ಗೌರಿ ಹಂತಕರನ್ನು ಆರು ತಿಂಗಳಾದರೂ ಬಂಧಿಸದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಚಕಾರವನ್ನೂ ಎತ್ತುತ್ತಿಲ್ಲ. ರಾಜ್ಯಾದ್ಯಂತ ಕಾಂಗ್ರೆಸ್​ ಆಡಳಿತದ ಅವಧಿಯಲ್ಲಿ ರಾಜಕೀಯ ಹತ್ಯೆಗಳಾದಾಗ, ಲೋಕಾಯುಕ್ತರ ಕಚೇರಿಗೇ ನುಗ್ಗಿ ಲೋಕಾಯುಕ್ತರ ಹತ್ಯೆಗೆ ಯತ್ನಿಸಿದ ಘಟನೆ ನಡೆದಾಗ, ನಲಪಾಡ್ ಎಂಬ ಕಾಂಗ್ರೆಸ್​ನ ಪುಂಡ ಗೂಂಡಾಗಿರಿ ನಡೆಸಿದಾಗ, ಈ ಯಾವ ಸನ್ನಿವೇಶಗಳಲ್ಲೂ ಪ್ರಗತಿಪರ/ಬುದ್ಧಿಜೀವಿಗಳ ವಲಯ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಒಂದೇ ಒಂದು ಮಾತನ್ನೂ ಆಡಲಿಲ್ಲ. ಬಿಜೆಪಿ ಮತ್ತು ಮೋದಿ ವಿರುದ್ಧ ಕೆಂಡಕಾರುವವರು ಇಂತಹ ಯಾವುದಾದರೂ ಒಂದು ಸನ್ನಿವೇಶದಲ್ಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರಶ್ನಿಸಬಹುದಿತ್ತು ಅಲ್ಲವಾ..? ಇಂತವರು ಈಗ ಕಾಂಗ್ರೆಸ್ ಪರ ಬ್ಯಾಟಿಂಗ್​ಗೆ ಇಳಿದಿದ್ದಾರೆ. ಈ ಗುಂಪು ತಮ್ಮನ್ನು ತಾವು ಪ್ರಗತಿಪರರು, ಬುದ್ಧಿಜೀವಿಗಳು ಎಂದು ಕರೆದುಕೊಳ್ಳುವುದನ್ನು ಬಿಟ್ಟು ಕಾಂಗ್ರೆಸ್​ ವಕ್ತಾರರು, ಕಾರ್ಯಕರ್ತರು, ಅವಕಾಶವಾದಿಗಳು ಎಂದು ಕರೆದುಕೊಂಡರೆ ಅರ್ಥಪೂರ್ಣವಾಗಿರುತ್ತದೆ. ಆ ಮೂಲಕವಾದರೂ ತಮ್ಮ ಮುಖವಾಡವನ್ನು ಕಳಚಿಕೊಂಡು ಅಸಲೀ ಮುಖವನ್ನು ಪ್ರದರ್ಶಿಸಿದಂತಾಗುತ್ತದೆ. ಇವರಿಗೂ ಮೋದಿ ಭಕ್ತರಿಗೂ ಯಾವ ವ್ಯತ್ಯಾಸವಿದೆ ಹೇಳಿ..

ಬಿಜೆಪಿ ಅಧಿಕಾರದಲ್ಲಿದ್ದರೆ ಸಂವಿಧಾನಕ್ಕೆ ದಕ್ಕೆಯಾಗುತ್ತದೆ ಅನ್ನೋದು ಈ ಅವಕಾಶವಾದಿಗಳ ವಾದ. ಕೇಂದ್ರದಲ್ಲಿ ಮತ್ತು 22 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಸಂವಿಧಾನಕ್ಕೆ ಯಾವ ಅಪಾಯವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಇದ್ದರೆ ಮಾತ್ರ ಸಂವಿಧಾನ ರಕ್ಷಣೆಯಾಗುತ್ತಾ..? ಇದೇ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯಿಂದಲೇ ಅಲ್ಲವಾ ಮೋದಿ ಪ್ರಧಾನಿಯಾಗಿರೋದು, ಬಿಜೆಪಿ 22 ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವುದು. ರಾಜಕೀಯ ಪಕ್ಷವಾಗಿ ಬಿಜೆಪಿಯನ್ನು ರಾಜಕೀಯವಾಗಿ ಎದುರಿಸುವುದನ್ನು ಬಿಟ್ಟು ಕಾಂಗ್ರೆಸ್ ಈ ಪ್ರಗತಿಪರರನ್ನು ಅಸ್ತ್ರದಂತೆ ಬಚ್ಚಿಟ್ಟುಕೊಂಡು ಚುನಾವಣೆ ಸಂದರ್ಭದಲ್ಲಿ ಹೊರಬಿಡುತ್ತದೆಯಾ..? ಸಂವಿಧಾನ ರಕ್ಷಣೆ ಮಾಡೋದಕ್ಕೆ ಪ್ರಗತಿಪರರೇನು ಗುತ್ತಿಗೆ ಪಡೆದುಕೊಂಡಿದ್ದಾರಾ…? ಈ ಹಿಂದೆ ಇದೇ ರೀತಿ ಅವಾರ್ಡ್​ ವಾಪ್ಸಿ ಅಭಿಯಾನ ಮಾಡಿ ನಗೆಪಾಟಲಿಗೀಡಾಗಿದ್ದ ಈ ಬುದ್ಧಿಜೀವಿಗಳ ವಲಯ ಈಗ ಸಂವಿಧಾನದ ರಕ್ಷಣೆಯ ಸೋಗಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕವನ್ನು ಜಯಿಸಿದರೆ ಮೋದಿ 2019ರಲ್ಲಿ ಮತ್ತೆ ಪ್ರಧಾನಿಯಾಗೋದಕ್ಕೆ ಹಾದಿ ಸುಗಮವಾಗುತ್ತದೆ. ಇದೇ ಕಾರಣದಿಂದಲೇ ಮತ್ತೆ ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಜಾತ್ಯಾತೀತ ಶಕ್ತಿಯ ಹೆಸರಿನಲ್ಲಿ ಎಲ್ಲ ಪ್ರಗತಿಪರರು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಹೊರಗುತ್ತಿಗೆ ಪಡೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಮೋದಿ ವಿರುದ್ಧವಾಗಿ ಪರ್ಯಾಯ ಶಕ್ತಿ ರೂಪಿಸಲು ಪ್ರಾದೇಶಿಕ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸುತ್ತಿವೆ. ಅದು ರಾಜಕೀಯ ಪಕ್ಷಗಳು ತಮ್ಮ ಅಸ್ಥಿತ್ವ ಸೃಷ್ಟಿಸಿಕೊಳ್ಳಲು ಮಾಡಲೇಬೇಕಾದ ಅನಿವಾರ್ಯ ಹೋರಾಟ. ಆದ್ರೆ ಈ ರಾಜ್ಯದ ಪ್ರಗತಿಪರರೇಕೆ ರಾಜಕೀಯ ಪಕ್ಷಗಳಂತೆ ವರ್ತಿಸುತ್ತಿವೆ. ಮೈತ್ರಿ ವಿಚಾರ ನಿರ್ಧರಿಸಬೇಕಾದವರು ರಾಜಕೀಯ ಪಕ್ಷಗಳು. ಅವರೇ ಸುಮ್ಮನಿರುವಾಗ ಇಲ್ಲದ ಉಸಾಬರಿ ಇವರಿಗೇಕೆ. ಈ ಪ್ರಗತಿಪರ, ಬುದ್ಧಿಜೀವಿಗಳ ಸಮುದಾಯ ಕಾಂಗ್ರೆಸ್​ ಪರ ಬ್ಯಾಟಿಂಗ್​ಗೆ ಇಳಿದಿರುವುದು ಯಾಕೆ..? ಒಂದು ರಾಜಕೀಯ ಪಕ್ಷವಾಗಿ ಬಿಜೆಪಿಯನ್ನು ವಿರೋಧಿಸಲು ಪ್ರಗತಿಪರರಿಗೆ ತಮ್ಮದೇ ಆದ ಕಾರಣಗಳಿರಬಹುದು. ಆದ್ರೆ ಕಾಂಗ್ರೆಸ್​ ಅನ್ನು ಮೋಹಿಸಲು ಇರುವ ಕಾರಣಗಳೇನು. ಬಿಜೆಪಿಯನ್ನು ವಿರೋಧಿಸಿ ಕಾಂಗ್ರೆಸ್​ ಅನ್ನು ಅಪ್ಪಿಕೊಳ್ಳುವುದು ಎಷ್ಟು ಸಮಂಜಸ.? ಕಾಂಗ್ರೆಸ್​ ಅಧಿಕಾರದಲ್ಲಿರುವಾಗ ಇದೇ ಬುದ್ಧಿಜೀವಿಗಳ ವಲಯ ಆಸ್ಥಾನ ಕಲಾವಿದರಂತೆ ಕಾಣಿಸಿಕೊಂಡು ಅನುಕೂಲಗಳನ್ನು ಆಸ್ವಾದಿಸಿಕೊಳ್ಳೋದು ಬಹಿರಂಗ ರಹಸ್ವವೇನಲ್ಲ. ಇಂತವರುಗಳನ್ನು ಮುಂದಿಟ್ಟುಕೊಂಡೇ ಕಾಂಗ್ರೆಸ್ ತಾನು ಜಾತ್ಯಾತೀತವಾದಿ ಅನ್ನೋ ಪೋಸ್​ ಕೊಡುತ್ತಿದೆ. ಈ ದೇಶದಲ್ಲಿ ಧರ್ಮದ ಹೆಸರಿನಲ್ಲಿ ಬಿಜೆಪಿ ರಾಜಕೀಯ ನಡೆಸಿದರೆ, ಜಾತಿಯ ಹೆಸರಿನಲ್ಲಿ ಕಾಂಗ್ರೆಸ್​ ರಾಜಕೀಯ ನಡೆಸುತ್ತದೆ. ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಷ್ಟೇ. ಜಾತ್ಯಾತೀತ ಎಂದು ಕರೆದುಕೊಳ್ಳುವ ಕಾಂಗ್ರೆಸ್​ಗೆ ಜಾತಿ ಬಿಟ್ಟರೆ ಬೇರೆ ರಾಜಕೀಯ ಪಟ್ಟುಗಳೇ ಇಲ್ಲ. ಇಂತಹ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಂದ ಅಂತರ ಕಾಪಾಡಿಕೊಂಡು ಜನರ ಪರವಾಗಿ ಕೆಲಸ ಮಾಡಬೇಕಾದ ಈ ಸ್ವಯಂಘೋಷಿತ ಪ್ರಗತಿಪರರು, ಬುದ್ಧಿಜೀವಿಗಳು ಕಾಂಗ್ರೆಸ್​ನ ಬಾಲಬುಡುಕರಂತೆ ವರ್ತಿಸುತ್ತಿರುವುದು ಮಾತ್ರ ನಾಚಿಕೆಗೇಡು. ಅಧಿಕೃತವಾಗಿ ಈ ಗುಂಪು ತಮ್ಮನ್ನು ತಾವು ಕಾಂಗ್ರೆಸ್ಸಿಗರು ಎಂದು ಒಪ್ಪಿಕೊಂಡು ಕಾಂಗ್ರೆಸ್​ನ ಪ್ರಗತಿಪರ/ಬುದ್ಧಿಜೀವಿಗಳ ಘಟಕ ಎಂದು ಘೋಷಿಸಿಕೊಳ್ಳುವುದು ಒಳಿತು..

ರೋಹಿಂಗ್ಯಾ ಮುಸ್ಲಿಮರಿಗೆ ಭಾರತವೇಕೆ ಆಶ್ರಯ ನೀಡಬೇಕು..?

 

BANGLADESH-MYANMAR-REFUGEE-UNREST-DIPLOMACY

ರೋಹಿಂಗ್ಯಾ ಪರ ಪ್ರತಿಭಟನೆ..

ದೇಶದ ಭದ್ರತೆಗೆ ರೋಹಿಂಗ್ಯಾ ಮುಸ್ಲಿಮರು ಕಂಟಕವಾಗಬಹುದು ಎಂಬ ಗುಪ್ತಚರ ಮಾಹಿತಿಗಳಿದ್ದರೂ ಅವರಿಗೆ ಭಾರತದಲ್ಲಿ ಆಶ್ರಯ ನೀಡಬೇಕಾ..? ರೋಹಿಂಗ್ಯಾಗಳಿಗೆ ನೆಲೆ ನೀಡಲು ಮುಸ್ಲಿಂ ರಾಷ್ಟ್ರಗಳೇ ಹಿಂಜರಿಯುತ್ತಿರುವಾಗ ಭಾರತ ನೆಲೆ ನೀಡಬೇಕಾ..? ಬಾಂಗ್ಲಾದಿಂದ ಮಯನ್ಮಾರ್​ಗೆ ನೂರಾರು ವರ್ಷಗಳ ಹಿಂದೆಯೇ ವಲಸೆ ಹೋಗಿರುವ ರೋಹಿಂಗ್ಯಾ ಮುಸ್ಲಿಮರನ್ನು ಬಾಂಗ್ಲಾದೇಶವೇ ಬೇಡ ಎನ್ನುತ್ತಿರುವಾಗ ಭಾರತ ದೇಶವೇಕೆ ಅವರನ್ನು ದೇಶದ ಒಡಲಲ್ಲಿಟ್ಟುಕೊಂಡು ಸಲುಹಬೇಕು..? ಇದ್ದಕ್ಕಿದ್ದಂತೆ ರೋಹಿಂಗ್ಯಾ ಮುಸ್ಲಿಮರ ಪರವಾಗಿ ದೇಶದ ಮುಸ್ಲಿಂ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸುತ್ತಿವೆ. ಮಯನ್ಮಾರ್​ನಲ್ಲಿ ರೋಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸುವ ಮಟ್ಟಕ್ಕೆ ಈ ಪ್ರತಿಭಟನೆಗಳು ಸೀಮಿತವಾಗಿದ್ದರೆ ತಮ್ಮ ಧರ್ಮದವರ ವಿರುದ್ಧ ಮರುಕ ತೋರುತ್ತಿದ್ದಾರೆ ಅಂದುಕೊಳ್ಳಬಹುದಾಗಿತ್ತು. ಆದ್ರೆ ವಿಚಾರ ಅದಲ್ಲ. ಮಯನ್ಮಾರ್​ನಿಂದ ಅಕ್ರಮವಾಗಿ ದೇಶಕ್ಕೆ ವಲಸೆ ಬಂದಿರುವ 40 ಸಾವಿರ ರೋಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ನೀಡಬೇಕು ಅನ್ನೋ ಆಗ್ರಹ ಕೇಳಿಬಂದಿದೆ. ದೇಶದಲ್ಲಿ ನೆಲೆಸಿರುವ ಅಕ್ರಮ ರೋಹಿಂಗ್ಯಾ ಮುಸ್ಲಿಮರ ಸಂಖ್ಯೆ 40 ಸಾವಿರ ಅಂತ ಸರ್ಕಾರ ಹೇಳುತ್ತದೆ. ಆದ್ರೆ ಈ ಸಂಖ್ಯೆ ಸುಮಾರು ಒಂದು ಲಕ್ಷದಷ್ಟಿದೆ ಅನ್ನೋ ಮಾಹಿತಿಗಳೂ ಇವೆ. ಇದಕ್ಕೆಲ್ಲಾ ಸೊಪ್ಪು ಹಾಕದ ಕೇಂದ್ರ ಸರ್ಕಾರ ದೇಶದಲ್ಲಿರುವ ರೋಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡಲು ನಿರ್ಧರಿಸಿದೆ.
ಮಯನ್ಮಾರ್​ನಲ್ಲಿನ ಹಿಂಸಾಚಾರದಿಂದಾಗಿ ಭಾರತಕ್ಕೆ ವಲಸೆ ಬಂದಿರುವ ಬೃಹತ್ ಸಂಖ್ಯೆಯ ರೋಹಿಂಗ್ಯಾ ಮುಸ್ಲಿಮರು ದೇಶದ ಭದ್ರತೆಗೆ ಕುತ್ತಾಗುವ ಸಾಧ್ಯತೆ ಇದೆ. ರೋಹಿಂಗ್ಯಾ ಮುಸ್ಲಿಮರಿಗೆ ಐಸಿಸ್​ ಉಗ್ರ ಸಂಘಟನೆ ಮತ್ತು ಪಾಕಿಸ್ತಾನದ ಐಎಸ್ಐ ಜೊತೆ ಸಂಪರ್ಕ ಇದೆ. ಹೀಗಾಗಿ ರೋಹಿಂಗ್ಯಾ ಮುಸ್ಲಿಮರಿಗೆ ದೇಶದಲ್ಲಿ ಆಶ್ರಯ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ನಲ್ಲಿ ಅಫಿಡೆವಿಟ್​ ಸಲ್ಲಿಸಿದೆ. ರೋಹಿಂಗ್ಯಾಗಳನ್ನು ಗಡೀಪಾರು ಮಾಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್​ ಹಸ್ತಕ್ಷೇಪ ಮಾಡಬಾರದು. ಇದು ಸರ್ಕಾರದ ಆಡಳಿತಾತ್ಮಕ ವಿಚಾರ ಎಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಸರ್ಕಾರದ ಈ ತೀರ್ಮಾನ ಕೆಲವು ಮುಸ್ಲಿಂ ಮುಖಂಡರ ಮತ್ತು ಸ್ವಯಂ ಘೋಷಿತ ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಬುದ್ದಿಜೀವಿಗಳಿಗೆ ಪಥ್ಯವಾಗಿಲ್ಲ. ಅವರ ಪ್ರಕಾರ ರೋಹಿಂಗ್ಯಾ ಮುಸ್ಲಿಮರನ್ನು ದೇಶದೊಳಗಿಟ್ಟುಕೊಂಡೇ ಸಲುಹಬೇಕು. ಈಗಾಗಲೇ ದೇಶದ ಹಲವೆಡೆ ತಳವೂರಿರುವ ರೋಹಿಂಗ್ಯಾಗಳು ಅಕ್ರಮವಾಗಿ ಆಧಾರ್ ಕಾರ್ಡ್, ವೋಟರ್ ಐಡಿಗಳನ್ನು ಮಾಡಿಸಿಕೊಂಡಿದ್ದಾರೆ. ಕಾಶ್ಮೀರದಲ್ಲಿರುವ ಹತ್ತು ಸಾವಿರ ರೋಹಿಂಗ್ಯಾಗಳಲ್ಲಿ ಕೆಲವರು ಪರ್ಮನೆಂಟ್ ರೆಸಿಡೆಂಟ್ ಸರ್ಟಿಫಿಕೇಟ್​ಗಳನ್ನೂ ಮಾಡಿಸಿಕೊಂಡಿದ್ದಾರೆ. ಹೀಗೆ ಯಾವುದೋ ದೇಶದ ಜನ ಅಕ್ರಮವಾಗಿ ಗಡಿ ನುಸುಳಿ ಒಳಬಂದವರನ್ನು ಭಾರತೀಯರು ಎಂದು ನಾವು ಒಪ್ಪಿಕೊಳ್ಳಬೇಕಾ..?

 

ಸಮುದ್ರ ಮಾರ್ಗದ ಮೂಲಕ ದೇಶದೊಳಕ್ಕೆ ಅಕ್ರಮವಾಗಿ ಬರುತ್ತಿರುವ ರೋಹಿಂಗ್ಯಾಗಳು

ಸಮುದ್ರ ಮಾರ್ಗದ ಮೂಲಕ ದೇಶದೊಳಕ್ಕೆ ಅಕ್ರಮವಾಗಿ ಬರುತ್ತಿರುವ ರೋಹಿಂಗ್ಯಾಗಳು

ಮಯನ್ಮಾರ್​ ದೇಶದ ರಖಿನೆ ಎಂಬ ರಾಜ್ಯದಲ್ಲಿ ವಾಸ ಮಾಡುವವರೇ ರೋಹಿಂಗ್ಯಾ ಮುಸ್ಲಿಮರು. ಆದ್ರೆ ಈ ಜನರನ್ನು ಮಯನ್ಮಾರ್​ ತನ್ನ ಪ್ರಜೆಗಳು ಎಂದು ಒಪ್ಪಿಕೊಳ್ಳೋದಕ್ಕೆ ಸಿದ್ದವಿಲ್ಲ. ಬಾಂಗ್ಲಾದಿಂದ ಅಕ್ರಮವಾಗಿ ದೇಶಕ್ಕೆ ಬಂದು ವಾಸಿಸುತ್ತಿದ್ದಾರೆ, ರೋಹಿಂಗ್ಯಾಗಳು ತನ್ನ ಪ್ರಜೆಗಳಲ್ಲ ಅನ್ನೋದು ಮಯಾನ್ಮಾರ್​ನ ವಾದ. ಇದಕ್ಕೆ ತದ್ವಿರುದ್ಧವಾಗಿ ರೋಹಿಂಗ್ಯಾಗಳನ್ನು ತನ್ನ ದೇಶಕ್ಕೆ ಬಿಟ್ಟುಕೊಳ್ಳಲು ಬಾಂಗ್ಲಾದೇಶ ತಯಾರಿಲ್ಲ. ಬೌದ್ಧ ಧರ್ಮೀಯರೇ ಬಹುಸಂಖ್ಯಾತವಾಗಿರುವ ಮಯನ್ಮಾರ್ ದೇಶ ರೋಹಿಂಗ್ಯಾಗಳನ್ನು ದೇಶದಿಂದ ಓಡಿಸಲು ನಿರಂತರವಾಗಿ ಯತ್ನಿಸುತ್ತಲೇ ಇದೆ. ಉದ್ಯೋಗ, ಶಿಕ್ಷಣ, ಧಾರ್ಮಿಕ ಸ್ವಾತಂತ್ರ್ಯ, ಆರೋಗ್ಯ ಸೇವೆ, ಮದುವೆ ಪ್ರತಿಯೊಂದಕ್ಕೂ ರೋಹಿಂಗ್ಯಾಗಳ ಮೇಲೆ ನಿರ್ಬಂಧ ಹೇರಲಾಗಿದೆ. ಪರಿಣಾಮ ರೋಹಿಂಗ್ಯಾ ಮುಸ್ಲಿಮರ ಮಾರಣ ಹೋಮ ನಡೆಯುತ್ತಲೇ ಇದೆ. ಜೀವ ಉಳಿಸಿಕೊಳ್ಳಲು ಈ ರೋಹಿಂಗ್ಯಾ ಮುಸ್ಲಿಮರು ಅಕ್ಕ ಪಕ್ಕದ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಮಯನ್ಮಾರ್​ನಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಮಾನವ ಹಕ್ಕುಗಳ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ ಜಗತ್ತು ಏನು ಬೇಕಾದರೂ ತಿಳಿದುಕೊಳ್ಳಲಿ, ನಮಗೆ ನಮ್ಮ ದೇಶದ ರಕ್ಷಣೆಯಷ್ಟೇ ಮುಖ್ಯ ಎಂದು ಹೇಳಿದ್ದಾರೆ. ಮಯನ್ಮಾರ್​ ದೇಶವೇ ರೋಹಿಂಗ್ಯಾಗಳಿಂದ ದೇಶದ ಭದ್ರತೆಗೆ ಅಪಾಯವಿದೆ ಎನ್ನುವಂತಹ ಮಾತುಗಳನ್ನಾಡುವಾಗ ಅಂತವರನ್ನು ದೇಶದೊಳಕ್ಕೆ ಬಿಟ್ಟುಕೊಳ್ಳಬೇಕಾ.. ಮಾನವ ಹಕ್ಕುಗಳ ಹೋರಾಟಗಾರ್ತಿ ಸೂಕಿಯ ಬಾಯಲ್ಲಿ ದೇಶ ರಕ್ಷಣೆಯ ಮಾತು ಬಂತೋ ಅಂತರಾಷ್ಟ್ರೀಯ ಮಾಧ್ಯಮಗಳು ಸೂಕಿ ವಿರುದ್ಧ ಆಕ್ರೋಶ ಹೊರಹಾಕಿದ್ದವು. ಇದರಿಂದ ಎಚ್ಚೆತ್ತ ಸೂಕಿ ಈಗ ಧರ್ಮ ಮತ್ತು ಜನಾಂಗದ ನೆಲೆಯಲ್ಲಿ ಛಿದ್ರವಾಗಿರುವ ಮ್ಯಾನ್ಮಾರ್‌ ಒಗ್ಗಟ್ಟಾಗಿ ಮುಂದುವರಿಯಲು ನೆರವಾಗುವಂತೆ ಅಂತರರಾಷ್ಟ್ರೀಯ ಸಮುದಾಯವನ್ನು ಕೋರಿದ್ದಾರೆ. ಸೇನಾ ಕಾರ್ಯಾಚರಣೆಯಿಂದ ಬೆದರಿ ದೇಶ ತೊರೆದು ಹೋಗಿರುವ ರೋಹಿಂಗ್ಯಾ ಸಮುದಾಯದ ಮುಸ್ಲಿಮರು ಮ್ಯಾನ್ಮಾರ್‌ಗೆ ಮರಳುವಂತೆ ಮನವಿ ಮಾಡಿಕೊಂಡಿದ್ದಾರೆ. ಹಾಗಾದ್ರೆ ಭಾರತದಲ್ಲಿ ನಿರಾಶ್ರಿತರಂತಿರುವ ರೋಹಿಂಗ್ಯಾಗಳು ಈಗ ತಮ್ಮ ತವರಿಗೆ ಹೋಗಬಹುದಲ್ಲವಾ..?

 

ನಿರಾಶ್ರಿತ ರೋಹಿಂಗ್ಯಾ ಮುಸ್ಲಿಮರು

ನಿರಾಶ್ರಿತ ರೋಹಿಂಗ್ಯಾ ಮುಸ್ಲಿಮರು

ರೋಹಿಂಗ್ಯಾ ಮುಸ್ಲಿಮರ ಮೇಲೆ ಮಯನ್ಮಾರ್​ ಮತ್ತು ಬಾಂಗ್ಲಾ ಗಡಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಇಡೀ ಒಂದು ಸಮುದಾಯವೇ ಯಾವ ದೇಶಕ್ಕೂ ಅಪಾಯಕಾರಿಯಾಗಿ ನಿಲ್ಲಲು ಸಾಧ್ಯವಿಲ್ಲ. ಒಂದು ವೇಳೆ ರೋಹಿಂಗ್ಯಾ ಮುಸ್ಲಿಮರಲ್ಲಿ ಉಗ್ರ ಚಟುವಟಿಕೆಗಳಲ್ಲಿ ನಿರತರಾಗಿದ್ದವರಿದ್ದರೆ ಅಂತವರನ್ನು ಗುರುತಿಸಿ ಅವರ ವಿರುದ್ಧ ಮಯನ್ಮಾರ್ ಕ್ರಮ ತೆಗೆದುಕೊಳ್ಳಲಿ. ಅನ್ನ, ನೀರು ಸಿಗದೇ ಅಮಾಯಕ ಮಕ್ಕಳು, ಮಹಿಳೆಯರು ಜೀವ ಕೈಲ್ಲಿ ಹಿಡಿದುಕೊಂಡು ಪರ ದೇಶಗಳಿಗೆ ಓಡಿಹೋಗಬೇಕಾ.. ಅಂತವರ ರಕ್ಷಣೆಗೆ ಅಂತರಾಷ್ಟ್ರೀಯ ಸಮುದಾಯ, ನೆರೆಯ ದೇಶ ಭಾರತ ನೆರವಾಗಬೇಕು ನಿಜ. ನೆರವಾಗುವುದು ಅಂದರೆ ಅಷ್ಟೂ ಜನರನ್ನು ದೇಶದೊಳಕ್ಕೆ ಬಿಟ್ಟುಕೊಳ್ಳಬೇಕು ಅಂತೇನು ಅಲ್ಲವಲ್ಲ. ರಾಜತಾಂತ್ರಿಕ ಮಾರ್ಗದ ಮೂಲಕ ರೋಹಿಂಗ್ಯಾಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ ನಿಲ್ಲುವಂತೆ ಮಾಡಿ ಅವರು ಮಯನ್ಮಾರ್​ನಲ್ಲಿ ನೆಮ್ಮದಿಯ ಜೀವನ ನಡೆಸುವಂತೆ ಮಾಡುವುದು ಸಮಸ್ಯೆಗೆ ಪರಿಹಾರ ಅಲ್ಲವಾ. ಅದನ್ನು ಬಿಟ್ಗಟು ರೋಹಿಂಗ್ಯಾಗಳಿಗೆ ಭಾರತದಲ್ಲಿ ಇರಲು ಅವಕಾಶ ಮಾಡಿಕೊಡಿ ಎಂದರೆ ಹೇಗೆ..? ಈಗಾಗಲೇ ಈಶಾನ್ಯ ರಾಜ್ಯಗಳಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರಿಂದ ಆಗಿರುವ ಸಮಸ್ಯೆಗಳನ್ನು ರೋಹಿಂಗ್ಯಾಗಳ ವಿಷಯದಲ್ಲೂ ಈ ದೇಶ ಸಮಸ್ಯೆ ಸೃಷ್ಟಿಸಿಕೊಳ್ಳಬೇಕಾ…? ಈಗಾಗಲೇ ಹಲವು ದಿನಗಳಿಂದ ರೋಹಿಂಗ್ಯಾಗಳಿಗೆ ಆಶ್ರಯ ನೀಡಲಾಗಿದೆ. ಇದು ತಾತ್ಕಾಲಿಕ ವ್ಯವಸ್ಥೆಯಾಗಬೇಕೇ ವಿನಃ ಅವರನ್ನೆಲ್ಲಾ ಶಾಶ್ವತವಾಗಿ ಭಾರತದ ಪ್ರಜೆಗಳಂತೆ ದೇಶದೊಳಗಿರಲು ಅವಕಾಶ ನೀಡಬೇಕು ಎಂದು ವಾದಿಸಿದರೆ ಹೇಗೆ. ಒಂದು ದೇಶವಾಗಿ ಎಲ್ಲ ದೇಶಗಳ ನಿರಾಶ್ರಿತರಿಗೆ ಜಾಗ ಕೊಡಲಾಗುವುದಿಲ್ಲವಲ್ಲ, ಮಾನವೀಯತೆಯ ಆಧಾರದ ಮೇಲೆ ಒಂದಷ್ಟು ದಿನವಷ್ಟೇ ಅವಕಾಶ ನೀಡಬಹುದು. ಆ ಕೆಲಸ ಈಗಾಗಲೇ ಆಗಿದೆ.
ಒಂದು ಜವಾಬ್ದಾರಿಯುತ ದೇಶವಾಗಿ ಮಯನ್ಮಾರ್​ನಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ಭಾರತ ಖಂಡಿಸಿದೆ. ಅಷ್ಟೇ ಅಲ್ಲದೇ ರೋಹಿಂಗ್ಯಾಗಳಿಗೆ ಅಗತ್ಯವಿರುವ ನೆರವನ್ನೂ ಭಾರತ ನೀಡುತ್ತಿದೆ. ಆದ್ರೆ ಇದ್ದಕ್ಕಿಂದ್ದಂತೆ ದೇಶದ ಕೆಲ ಮುಸ್ಲಿಂ ಸಂಘಟನೆಗಳು ರೋಹಿಂಗ್ಯಾ ಮುಸ್ಲಿಮರಿಗೆ ದೇಶದಲ್ಲಿ ಆಶ್ರಯ ಕೊಡಬೇಕು ಎಂದು ಆಗ್ರಹಿಸುತ್ತಿವೆ. ರೋಹಿಂಗ್ಯಾ ಮುಸ್ಲಿಮರಿಗೆ ದೇಶದಲ್ಲಿ ಆಶ್ರಯ ನೀಡಬೇಕು ಅನ್ನೋ ಹಕ್ಕೊತ್ತಾಯವನ್ನು ಅಸಾದುದ್ದೀನ್​ ಓವೈಸಿ ಮಾಡಿದ್ದಾರೆ. ಯಾವುದೋ ದೇಶದ ನಿರಾಶ್ರಿತರನ್ನು ಕೇವಲ ಮುಸ್ಲಿಮರು ಎಂಬ ಕಾರಣಕ್ಕೆ ಅವಕಾಶ ನೀಡಬೇಕಾ ಅನ್ನೋದು ಈಗಿನ ಪ್ರಶ್ನೆ. ರೋಹಿಂಗ್ಯಾಗಳನ್ನು ದೇಶದೊಳಕ್ಕೆ ಬಿಟ್ಟುಕೊಳ್ಳಲು ಮುಸ್ಲಿಂ ದೇಶಗಳೇ ನಿರಾಕರಿಸುತ್ತಿರುವಾಗ ದೇಶದ ಭದ್ರತೆಯನ್ನು ಪಣಕ್ಕಿಟ್ಟು ಕೇವಲ ಮುಸ್ಲಿಮರು ಎಂಬ ಕಾರಣಕ್ಕೆ ರೋಹಿಂಗ್ಯಾಗಳಿಗೆ ಆಶ್ರಯ ನೀಡಬೇಕಾ ಅನ್ನೋದು ಹಿಂದೂ ಪರ ಸಂಘಟನೆಗಳ ಪ್ರಶ್ನೆ.. ಸಿರಿಯಾದಲ್ಲಿ ಐಸಿಸ್ ಉಗ್ರರ ಉಪಟಳ ಅತಿಯಾದಾಗ ಅಲ್ಲಿನ ನಾಗರೀಕರು ಸಾಮೂಹಿಕವಾಗಿ ವಲಸೆ ಹೊರಟರು. ಅವರನ್ನು ಅಕ್ಕಪಕ್ಕದ ಯಾವ ಮುಸ್ಲಿಂ ದೇಶಗಳೂ ಒಳಬಿಟ್ಟುಕೊಳ್ಳಲಿಲ್ಲ. ಟರ್ಕಿಯ ಸಮುದ್ರ ತೀರಕ್ಕೆ ಅಪ್ಪಳಿಸುವ ಅಲೆಯ ನಡುವೆ ಪುಟ್ಟ ಕಂದಮ್ಮನ ಶವದ ಪೋಟೋ ಇಡೀ ಜಗತ್ತಿನ ಮಾನವೀಯತೆಯನ್ನೇ ಪ್ರಶ್ನೆ ಮಾಡಿತ್ತು. ಆಗಲೂ ಯಾವ ಮುಸ್ಲಿಂ ರಾಷ್ಟ್ರಗಳೂ ತಮ್ಮ ’ಸೋದರ’ರನ್ನು ಒಳಬಿಟ್ಟುಕೊಳ್ಳಲಿಲ್ಲ. ಆಗ ಸುಮಾರು 38 ಲಕ್ಷ ವಲಸಿಗರಿಗೆ ಜಾಗ ಕೊಟ್ಟಿದ್ದು ಯೂರೋಪ್ ರಾಷ್ಟ್ರಗಳು. ಜೀವ ಉಳಿಸಿಕೊಳ್ಳಲು ಹೋದ ಸಿರಿಯನ್ನರ ಜೊತೆ ಕೆಲವು ಐಸಿಸ್ ಉಗ್ರರೂ ಯೂರೋಪ್ ಸೇರಿಕೊಂಡಿದ್ದೂ, ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದೂ ಎಲ್ಲವೂ ಈಗ ಇತಿಹಾಸ. ಈ ಸತ್ಯ ಜಗತ್ತಿನ ಕಣ್ಣ ಮುಂದೆ ಇರುವಾಗ ಭಾರತ ಅಕ್ರಮ ವಲಸಿಗರಿಗೆ ತನ್ನ ನೆಲದಲ್ಲಿ ಜಾಗ ಕೊಡಬೇಕಾ.. ಜಾಗ ಕೊಟ್ಟರೆ ಅದು ಮಾನವೀಯತೆಯ ಮಹಾ ಕಾರ್ಯವಾಗುತ್ತಾ..?

–  ಶಶಿವರ್ಣಂ!

#IndiaForIndians #SendBackRohingyas #TerrorThreat #India #RohingyaMuslims

ರಾಹುಲ್ ಗಾಂಧಿ ಘರ್ ವಾಪಸಿಗೆ ಕಾಂಗ್ರೆಸಿಗರ ಸಂಭ್ರಮ..!!

image

ರಾಹುಲ್ ಘರ್ ವಾಪಸಿ..!!!

ಕಳೆದ ಐವತ್ತಾರು ದಿನಗಳಿಂದ ನಾಪತ್ತೆಯಾಗಿದ್ದ ರಾಹುಲ್ ಗಾಂಧಿ ತಮ್ಮ ಸುದೀರ್ಘ ರಜೆ ಮುಗಿಸಿ ಮರಳಿದ್ದಾರೆ. ರಾಹುಲ್ ಘರ್ ವಾಪಸಿ ಗೆ ಕಾಂಗ್ರೆಸ್ಸಿಗರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಎರೆಡು ತಿಂಗಳ ಕಾಲ ನಾಪತ್ತೆಯಾಗಿದ್ದ ರಾಹುಲ್ ಅದೇನು ಮಹಾನ್ ಸಾಧನೆ ಮಾಡಿದ್ದಾರೆ ಅಂತ ಈ ಕಾಂಗ್ರೆಸ್ಸಿಗರು ಸಂಭ್ರಮಿಸುತ್ತಿದ್ದಾರೋ ಅರ್ಥವಾಗುತ್ತಿಲ್ಲ. ಯುದ್ದ ಗೆದ್ದ ಸೈನಿಕರನ್ನ, ಆಟ ಗೆದ್ದ ಸಾಧಕರನ್ನ, ಪ್ರಶಸ್ತಿ ಪಡೆದ ಕಲಾವಿಧರನ್ನ ಸಂಭ್ರಮಿಸಿ ಸ್ವಾಗತಿಸೋದರಲ್ಲಿ ಅರ್ಥವಿದೆ. ಆದ್ರೆ ಇಡೀ ದೇಶ ಬಜೆಟ್ ಅಧಿವೇಶನಕ್ಕೆ ಸಿದ್ದವಾಗುತ್ತಿದ್ದಾಗ ಇದ್ದಕ್ಕಿದ್ದಂತೆ ನಾಪತ್ತೆಯಾದ ರಾಹುಲ್ ಗಾಂಧಿಯನ್ನ ಇಷ್ಟು ಸಂಭ್ರಮಿಸಿಕೊಂಡು ಸ್ವಾಗತಿಸಬೇಕಾ…? ಹಾಗಿದ್ರೆ ಎರೆಡು ತಿಂಗಳ ಅವದಿಯಲ್ಲಿ ರಾಹುಲ್ ಗಾಂಧಿ ಸಾಧಿಸಿದ್ದಾದ್ರೂ ಏನು..? ಯಾವ ಕಾಂಗ್ರೆಸಿಗನ ಬಳಿಯೂ ಇದಕ್ಕೆ ಉತ್ತರವಿಲ್ಲ. ದೇಶದ ಇತಿಹಾಸದಲ್ಲಿ ಯಾವುದೇ ಒಂದು ಪಕ್ಷದ ನಾಯಕ ಇಷ್ಟು ದಿನ ನಾಪತ್ತೆಯಾಗಿದ್ದ ಉದಾಹರಣೆಗಳಿಲ್ಲ. ಕಾಂಗ್ರೆಸ್ ನ ಪ್ರಮುಖರಿಗೇ ರಾಹುಲ್ ಗಾಂಧಿ ಎಲ್ಲಿದ್ದರು ಅನ್ನೋದು ಗೊತ್ತಿಲ್ಲ. ರಾಹುಲ್ ಗಾಂಧಿ ಇವತ್ತು ಬರ್ತಾರೆ, ನಾಳೆ ಬರ್ತಾರೆ ಅಂತ ಒಂದಷ್ಟು ದಿನ ಹೇಳಿಕೊಂಡು ಕಾಲತಳ್ಳಿದ ಕಾಂಗ್ರೆಸಿಗರಿಗೂ ರಾಹುಲ್ ಗಾಂಧಿ ಹೋಗಿದ್ದಾದ್ರೂ ಎಲ್ಲಿಗೆ ಅನ್ನೋ ಕುತೂಹಲ ಹುಟ್ಟಿದ್ದು ಹೌದು. ಆದ್ರೆ ಭಟ್ಟಂಗಿ ಕಾಂಗ್ರೆಸ್ಸಿಗರ ಥಿಯರಿಗಳಿಗೇನೂ ಕಡಿಮೆಯಿಲ್ಲ. ರಾಹುಲ್ ಗಾಂಧಿ ಪಕ್ಷವನ್ನ ಸಮರ್ಥವಾಗಿ ಮುನ್ನೆಡೆಸುವ ದೃಷ್ಠಿಯಿಂದ ಚಿಂತನ ಮಂಥನಕ್ಕೆ ಹೋಗಿದ್ದಾರೆ ಅಂತ ಕಥೆ ಕಟ್ಟಲಾಯಿತು. ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಮುಖಭಂಗವಾದಾಗ ನಡೆಯದ ಚಿಂತನ ಮಂಥನ ಈಗ ಮಾಡುತ್ತಿದ್ದಾರಂತೆ ರಾಹುಲ್ ಗಾಂಧಿ. ಹಾಗಂತ ಕಾಂಗ್ರೆಸ್ಸಿಗರು ಪುಂಗಿ ಊದುತ್ತಿದ್ದಾರೆ. ಯಾವೊಬ್ಬ ಕಾಂಗ್ರೆಸ್ಸಿಗನಿಗೂ ರಾಹುಲ್ ಗಾಂಧಿ ಕಳೆದ ಎರೆಡು ತಿಂಗಳಿಂದ ಎಲ್ಲಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ. ಎಲ್ಲ ವಿರೋಧ ಪಕ್ಷಗಳ ಮುಖಂಡರು ಬಜೆಟ್ ಅಧಿವೇಷನದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡೋಕೆ ಯೋಜನೆ ರೂಪಿಸ್ತಾಯಿದ್ರೆ ಕಾಂಗ್ರೆಸ್ ನ ಯುವರಾಜ ಮಾತ್ರ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಅದೂ ಅಧಿವೇಷನದಲ್ಲಿ ಭೂ ಸ್ವಾಧೀನ ವಿಧೇಯಕದ ತಿದ್ದುಪಡಿಯಂತಹ ಪ್ರಮುಖ ವಿಚಾರದ ಬಗ್ಗೆ ಚರ್ಚೆಯಾಗುತ್ತಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಸಂಸತ್ ಗೆ ಬಂಕ್ ಹಾಕಿದ್ರು. ರಾಹುಲ್ ಗಾಂಧಿ ರಜೆಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆದೇ ರಜೆ ಪಡೆದಿದ್ದಾರೆ ಅಂತ ಕಾಂಗ್ರೆಸಿಗರು ನಾಚಿಕೆಯಿಲ್ಲದೆ ಹೇಳಿಕೊಂಡು ಓಡಾಡಿದರು. ಅಮ್ಮ ಮಗನ ಪಾರ್ಟಿಯಲ್ಲಿ ರಜೆ ಕೊಡುವವರು ಯಾರು, ತಗೊಳ್ಳೋರು ಯಾರು..? ರಾಹುಲ್ ಗಾಂಧಿ ಎರೆಡು ತಿಂಗಳು ಎಲ್ಲಿದ್ದರು ಅನ್ನೋ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಆದ್ರೆ ಈಗ ರಾಹುಲ್ ವಾಪಸ್ ಬಂದ ತಕ್ಷಣ ಕಾಂಗ್ರೆಸಿಗರು ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಪಾರಧರ್ಶಕತೆಯ ಬಗ್ಗೆ ಪುಂಕಾನುಪುಂಕವಾಗಿ ಭಾಷಣ ಮಾಡುವ ರಾಹುಲ್ ಗಾಂಧಿಗೆ ಎರೆಡು ತಿಂಗಳ ಕಾಲ ತಾನು ಎಲ್ಲಿದ್ದೆ ಅನ್ನೋದನ್ನ ಜನರ ಮುಂದೆ ಹೇಳುವ ದೈರ್ಯವಿಲ್ಲ. ಅಷ್ಟು ರಹಸ್ಯವಾಗಿ ಎರೆಡು ತಿಂಗಳ ಕಾಲ ಇರಬೇಕಾದ ಅವಶ್ಯಕತೆಯಾದ್ರೂ ಇದೆಯಾ… ಒಬ್ಬ ಜನನಾಯಕ ಇರಬೇಕಾದ ರೀತಿಯಾ ಇದೆ. ಕಾಂಗ್ರೆಸ್ಸಿಗರು ಇದು ರಾಹುಲ್ ದ ವಯಕ್ತಿಕ ವಿಚಾರ, ಪ್ರೈವಸಿಯ ವಿಚಾರ ಅಂತಾರೆ. ಪ್ರೈವಸಿಗೂ, ಸೀಕ್ರೆಸಿಗೂ ವ್ಯತ್ಯಾಸ ಇದೆ. ರಾಹುಲ್ ಗಾಂಧಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರೆ ಯಾರೂ ಈ ಪ್ರಶ್ನೆಗಳನ್ನ ಕೇಳುತ್ತಿರಲಿಲ್ಲ. ರಾಹುಲ್ ಗಾಂಧಿ ಈ ದೇಶದ ಸಂಸದ, ಅತ್ಯಂತ ಹಳೆಯ ಮತ್ತು ದೊಡ್ಡ ಪಕ್ಷ ಕಾಂಗ್ರೆಸ್ ನ ಉಪಾಧ್ಯಕ್ಷ. ಆಯ್ಕೆ ಮಾಡಿದ ಜನರಿಗೆ ತಮ್ಮ ಸಂಸದ ಎರೆಡು ತಿಂಗಳ ಕಾಲ ಎಲ್ಲಿ ನಾಪತ್ರೆಯಾಗಿದ್ದ ಅಂತ ಕೇಳುವ ಅಧಿಕಾರ ಇದೆ. ಜನರಿಗೆ ಉತ್ತರ ಹೇಳಬೇಕಾದ ಜವಾಬ್ದಾರಿಯೂ ರಾಹುಲ್ ಗಿದೆ. ಅಮೇತಿಯಲ್ಲಿ ರಾಹುಲ್ ರನ್ನ ಹುಡುಕಿಕೊಡಿ ಅಂತ ಪೋಸ್ಟರ್ ಗಳನ್ನ ಹಾಕುವಷ್ಟರ ಮಟ್ಟಿಗೆ ರಾಹುಲ್ ಅಲ್ಲಿನ ಜನರಿಂದ ದೂರ. ರಾಜಕೀಯವಾಗಿ ಒಬ್ಬ ವಿಪಲ ವ್ಯಕ್ತಿಯನ್ನ ಬಲವಂತವಾಗಿ ನಾಯಕನನ್ನಾಗಿ ಮಾಡಲು ಹೊರಟಿದೆ ಕಾಂಗ್ರೆಸ್. ಇದಕ್ಕೆ ಕಾಂಗ್ರೆಸ್ ಗಾಂಧಿ ಕುಟುಂಬದ ನಿಷ್ಟರು , ಭಟ್ಟಂಗಿಗಳು ಉಘೇ ಉಘೇ ಎನ್ನುತ್ತಿದ್ದಾರೆ. ರಾಹುಲ್ ಮರಳಿ ಬಂದ ತಕ್ಚಣವೇ ಅಧ್ಯಕ್ಷ ಪಟ್ಟ ಕಟ್ಟಬೇಕು ಅಂತಿದ್ದಾರೆ ದಿಗ್ವಿಜಯ್ ಸಿಂಗ್. ಇಷ್ಟುಕ್ಕೂ ರಾಹುಲ್ ಗಾಂಧಿಯ ಇಷ್ಟುದಿನದ ರಾಜಕೀಯ ಜೀವನದಲ್ಲಿ ಸಾಧಿಸಿದ್ದಾದ್ರೂ ಏನು ಅಂತ ಕೇಳಿದ್ರೆ ದಿಗ್ವಿಜಯ್ ಸಿಂಗ್ ಗೆ ಮಾತ್ರವಲ್ಲ ಸ್ವತಃ ರಾಹುಲ್ ಗಾಂಧಿಗೂ ತಾನು ಮಾಡಿದ್ದೇನು ಅನ್ನೋದು ಗೊತ್ತಿಲ್ಲ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನ ಒಂದು ರಾಜ್ಯದ ಮುಖ್ಯಮಂತ್ರಿ ಬೇಟಿಯಾಗಬೇಕು ಅಂದ್ರೆ ತಿಂಗಳಿಗೆ ಮೊದಲೇ ದಿನಾಂಕ ನಿಗದಿಯಾಗಬೇಕು. ಅಷ್ಟರ ಮಟ್ಟಿಗೆ ಅವರು ಎಲ್ಲರಿಂದ ದೂರ. ಇತ್ತೀಚೆಗೆ ದೆಹಲಿಗೆ ಹೋಗಿದ್ದ ಸಿದ್ದರಾಮಯ್ಯ ಸೋನಿಯಾ ಬೇಟಿಗಾಗಿ ದಿನಗಟ್ಟಲೇ ಕಾದಿದ್ದರು. ಒಬ್ವ ಮುಖ್ಯಮಂತ್ರಿಯ ಸ್ಥಿತಿಯೇ ಹೀಗಿರುವಾಗ ಸಾಮಾನ್ಯಜನ  ಇಂತವರಿಂತ ಏನನ್ನ ತಾನೆ ನಿರೀಕ್ಷೆ ಮಾಡೋಕೆ ಸಾಧ್ಯ. ಎಲ್ಲ ರಾಜಕೀಯ ನಾಯಕರೂ ಕೂಡ ಮಾಧ್ಯಮಗಳಿಗೆ ಲಭ್ಯರಿರ್ತಾರೆ. ಪ್ರಮುಖ ವಿಚಾರಗಳ, ಬೆಳವಣಿಗೆಗಳ ಬಗ್ಗೆ ಪ್ರತಿಕ್ರಯಿಸ್ತಾರೆ,  ಆದ್ರೆ ರಾಹುಲ್ ಗಾಂಧಿ ಮಾತ್ರ ಎಲ್ಲರಿಂದ ದೂರ ದೂರ. ಅಟ್ ಲೀಸ್ಟ್ ಎಲ್ಲ ರಾಜಕೀಯ ಮುಖಂಡರು ಕೂಡ ಟ್ವಿಟ್ಟರ್, ಪೇಸ್ ಬುಕ್  ಮೂಲಕ ಸಾಮಾನ್ಯ ಜನರಿಗೆ ಸಿಕ್ತಾರೆ. ಆದ್ರೆ ರಾಹುಲ್ ಗಾಂಧಿ ಇಲ್ಲೂ ನಾಪತ್ತೆ. ಈ ದೇಶದ ಪ್ರಧಾನಿ, ರಾಷ್ಟ್ರಪತಿ ಸಾಮಾಜಿಕ ಜಾಲತಾಣದ ಮೂಲಕ ಜನರೊಂದಿಗೆ ಸಂಪರ್ಕ ಇಟ್ಟುಕೊಳ್ಳೋಕೆ ಬಯಸ್ತಾರೆ. ಆದ್ರೆ ರಾಹುಲ್ ಗೆ ಮಾತ್ರ ಇದ್ಯಾವುದರ ಅಗತ್ಯವೂ ಇಲ್ಲ.ವಿಶ್ವದ ದೊಡ್ಡಣ್ಣ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮ ಟ್ವಿಟ್ಟರ್ ಮೂಲಕ ಜನರೊಂದಿಗೆ ಸಂಪರ್ಕದಲ್ಲಿದ್ದಾರೆ. ಆದ್ರೆ ರಾಹುಲ್ ಗಾಂಧಿ ಮಾತ್ರ ಇದೆಲ್ಲಕ್ಕೂ ಅಪವಾದ. ಯಾಕಂದ್ರೆ ಆತ ಕಾಂಗ್ರೆಸ್ ನ ಯುವರಾಜ. ಇಂತ ಒಬ್ಬ ವಿಪಲ ನಾಯಕನಿಂದ ಕಾಂಗ್ರೆಸ್ ಪಕ್ಷವಾಗಲೀ, ಈ ದೇಶವಾಗಲೀ ಏನನ್ನ ತಾನೆ ನಿರೀಕ್ಷೆ ಮಾಡಲು ಸಾಧ್ಯ….

ಒಬ್ಬ ರಾಹುಲ್ ನನ್ನ ರಕ್ಷಿಸಲು ಕಾಂಗೆಸ್ ನಲ್ಲಿರುವ ಭಟ್ಟಂಗಿಗಳೆಲ್ರೂ ಫುಲ್ ಟೈಂ ಡ್ಯೂಟಿ ಮಾಡ್ತಾಯಿದ್ದಾರೆ….

ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಪಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಎಲ್ಲ ನಾಲ್ಕೂ ರಾಜ್ಯಗಳಲ್ಲೂ ಸೋಲಿಗೆ ಶರಣಾಗಿದ್ರೆ ಬಿಜೆಪಿ ಮೂರು ರಾಜ್ಯಗಳಲ್ಲಿ ಗೆದ್ದು ದೆಹಲಿಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಹೇಳಲಾಗಿದ್ದ ಮ್ಯಾಚ್ ನಲ್ಲಿ ಬಿಜೆಪಿ ವಿನ್ ಆಗಿದೆ. ಆದ್ರೆ ಮ್ಯಾನ್ ಆಫ್ ದಿ ಮ್ಯಾಚ್ ಯಾರು. ಮ್ಯಾನ್ ಆಫ್ ದಿ ಡಿಫೀಟ್ ಯಾರು ಅನ್ನೋ ಚಚರ್ೆ ಶುರುವಾಗಿಬಿಟ್ಟಿದೆ. ಬಿಜೆಪಿಯವರು ನರೇಂದ್ರ ಮೋದಿ ಜಪ ಮಾಡ್ತಾಯಿದ್ದಾರೆ. ಮೋದಿಯಿಂದಾಗಿಯೇ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡೋಕೆ ಸಾಧ್ಯವಾಗಿದೆ ಅಂತ ಹಾರಾಡ್ತಾಯಿದ್ದಾರೆ. ಆದ್ರೆ ಸೂತಕದ ಮನೆ ಕಾಂಗ್ರೆಸ್ ನಲ್ಲಿ ಎಲ್ಲವೂ ನೀರವ ಮೌನ. ಕಾಂಗ್ರೆಸ್ ಪಕ್ಷದ ವಕ್ತಾರರು ತಮ್ಮ ಪಕ್ಷ ಮತ್ತು ರಾಹುಲ್ ಗಾಂಧಿಯನ್ನ ಸಮಥರ್ಿಸಿಕೊಳ್ಳೋಕೆ ಪರದಾಡ್ತಾಯಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಈ ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲಿ ಏನಾದ್ರೂ ಉತ್ತಮ ಸಾಧನೆ ಮಾಡಿಬಿಟ್ಟಿದ್ರೆ ಪರಿಸ್ಥಿತಿ ಹೇಗಿರ್ತಾಯಿತ್ತು ಗೊತ್ತಾ… ಅದು ಮಾತ್ರ ಹರಿ ಭಯಂಕರ. ಈ ದೇಶ ರಾಹುಲ್ ಗಾಂಧಿಯವರ ನಾಯಕತ್ವವನ್ನ ಒಪ್ಪಿಕೊಂಡಿದೆ. ರಾಹುಲ್ ಪ್ರಧಾನಿ ಅಭ್ಯಥರ್ಿಯಾಗೋದಕ್ಕೆ ಈಗ ಸಮಯ ಪರಿಪಕ್ವವಾಗಿದೆ. ಇಡೀ ಕಾಂಗ್ರೆಸ್ ಪಕ್ಷ ರಾಹುಲ್ ಅವ್ರನ್ನ ಬೆಂಬಲಿಸುತ್ತದೆ. ಈ ವಿಜಯ ರಾಹುಲ್ ಗಾಂಧಿಗೆ ಮತ್ತು ಅವ್ರ ಹೋರಾಟಕ್ಕೆ ಸಲ್ಲಬೇಕು. ಯುವಜನತೆ ರಾಹುಲ್ ಜಪ ಮಾಡ್ತಾಯಿದ್ದಾರೆ ಅಂತ ಕಾಂಗ್ರೆಸ್ ನ ಸಮಸ್ತರೂ ಟೀವಿ ಚಾನಲ್ ಗಳ ಮುಂದೆ ಕೂತು ಹೀಗೆ ಪುಂಗಿ ಊದಿ ಬಿಡ್ತಾಯಿದ್ರು. ಆದ್ರೆ ಈಗ ನೋಡಿದ್ರೆ ಅವ್ರು ಹೇಳ್ತಿರೋದೇ ಬೇರೆ. ಇದು ಸಂಘಟಿದ ವೈಪಲ್ಯ. ಸೋಲಿನ ಹೊಣೆಯನ್ನ ಸಾಮೂಹಿಕವಾಗಿ ಒಪ್ಪಿಕೊಳ್ತೇವೆ. ಈ ಸೋಲಿಗೆ ರಾಹುಲ್ ಗಾಂಧಿ ಕಾರಣ ಅಲ್ಲ. ನಾವು ಒನ್ ಮ್ಯಾನ್ ಶೊ ನಲ್ಲಿ ನಂಬಿಕೆ ಇಟ್ಟಿಲ್ಲ. ಸೋಲಿನ ಹೊಣೆಯನ್ನ ಇಡೀ ಪಕ್ಷ ಒಪ್ಪಿಕೊಳ್ಳುತ್ತದೆ ಅಂತಿದ್ದಾರೆ. ಅಬ್ಬಾ… ಭಟ್ಟಂಗಿತನ ಅಂದ್ರೆ ಇದೇ ಅಲ್ವಾ… ಖಂಡಿತ ಅಲ್ಲ. ಇದು ಭಟ್ಟಂಗಿತನದ ಪರಮಾವಧಿ. ಒಬ್ಬ ರಾಹುಲ್ ನನ್ನ ರಕ್ಷಿಸಲಿಕ್ಕೆ ಕಾಂಗ್ರಸ್ ನಲ್ಲಿರುವ ಭಟ್ಟಂಗಿಗಳೆಲ್ರೂ ಫುಲ್ ಟೈಂ ಡ್ಯೂಟಿ ಮಾಡ್ತಾಯಿದ್ದಾರೆ. ಕಾಂಗ್ರಸ್ ನ ಕೂಗುಮಾರಿ ಮಧ್ಯಪ್ರದೇಶದ ‘ದಿಗ್ವಿಜಯ’ ಸಿಂಗ್ ಎಲ್ಲಿ ಹೋಯ್ತು ಅಂತಾನೇ ಗೊತ್ತಿಲ್ಲ… ನಿನ್ನೆಯಿಂದ ಯಾವ ಚಾನಲ್ ನಲ್ಲೂ ಈ ಕೂಗುಮಾರಿಯ ಮುಖ ಕಾಣ್ತಾನೇ ಇಲ್ಲ. ಒಂದು ವೇಳೆ ಕಾಂಗ್ರಸ್ ಏನಾದ್ರೂ ಗೆದ್ದಿದ್ದಿದ್ರೆ ನೋಡ್ಬೇಕಿತ್ತಲ್ಲ ಈಯಪ್ಪನ ವರಸೇನಾ… ಈ ದೇಶದ ಜನ ಮೋದಿಯನ್ನ ತಿರಸ್ಕರಿಸಿದ್ದಾರೆ. ಮುಂದಿನ ಲೋಕಸಬಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಗೆದ್ದು ಈ ಗಾಂಧಾರ ದೇಶಕ್ಕೆ ಪ್ರಧಾನಿಯಾಗಿಬಿಡ್ತಾನೆ ಅಂತ ಹುಯಿಲೆಬಬ್ಬಿಸಿಬಿಡ್ತಿದ್ದ ದಿಗ್ವಿಜಯ್ ಸಿಂಗ್ ಬಾಯಿ ಈಗ ಮ್ಯೂಟ್ ಆಗಿಬಿಟ್ಟಿದೆ. ಕೇವಲ ಸೋನಿಯಾ ಗಾಂಧಿ ಮತ್ತು ಅಮೂಲ್ ಬೇಬಿಯನ್ನ ಹೊಗಳುವುದರಲ್ಲಿ ಕಾಲ ಕಳೆಯೋದು ಬಿಟ್ಟಿದ್ದಿದ್ರೆ ಬಹುಶಃ ಕಾಂಗ್ರಸ್ ಅಲ್ಲಿ ಇಲ್ಲಿ ಸ್ವಲ್ಪನಾದ್ರೂ ಗೆಲುವು ಕಾಣ್ತಾಯಿತ್ತೇನೊ. ಈಗ ಕಾಂಗ್ರಸ್ ಪಾಲಿನ ಯುವರಾಜ(?) ಆಮ್ ಆದ್ಮಿ ಪಾಟರ್ಿಯ ಆಫೀಸ್ ನಲ್ಲಿ ಇಂಟರ್ನಷಿಪ್ ಮಾಡಿದ್ರೆ ಲೋಕಸಭಾ ಚುನಾವಣೆ ಹೊತ್ತಿಗೆ ಅಮೂಲ್ ಬೇಬಿಗೆ ಎಲೆಕ್ಷನ್ ಅಂದ್ರೆ ಏನೂ ಅಂತ ಅರ್ಥವಾಗ್ಬಹುದು. ದೇಶದ ಬಗ್ಗೆ ಕಿಂಚಿತ್ತೂ ಗೊತ್ತಿಲ್ಲದ, ತನ್ನ ಸಾಧನೆ ಏನೂ ಅಂತ ಕೇಳಿದ್ರೆ ಹೇಳಲಿಕ್ಕೇ ಒಂದೂ ಪದವಿಲ್ಲದೇ ಒದ್ದಾಡುವ ಅಮೂಲ್ ಬೇಬಿ ಈ ದೇಶದ ಒಂದು ಪಕ್ಷವೊಂದರ ಉಪಾಧ್ಯಕ್ಷ. ಮತ್ತು ಆ ಉಪಾಧ್ಯಕ್ಷರನ್ನ ಹೊಗಳಲಿಕ್ಕೆ ಒಂದಷ್ಟು ಮಂದಿ ಭಟ್ಟಂಗಿಗಳ ಪಡೆ. ಆ ಪಡೆಗೆ ಈ ಕೂಗುಮಾರಿ ದಿಗ್ವಿಜಯ್ ಸಿಂಗ್ ಅಧ್ಯಕ್ಷ. ಈಗ ಸೋತಿದ್ದಾರೆ ಅಂತೇನೂ ಇವರು ಪುಂಗಿ ಊದೋದನ್ನ ನಿಲ್ಲಿಸೋದಿಲ್ಲ. ಕಾಂಗ್ರಸ್ ಮಂದಿ ರಾಹುಲ್ ನನ್ನ ಅಪ್ರತಿಮ ನಾಯಕ ಅಂತ ಒಪ್ಪಿಕೊಂಡುಬಿಟ್ಟಿದೆ. ಅದೂ ಆ ಪಕ್ಷದ ಭಟ್ಟಂಗಿ ಮನಸ್ಥಿತಿ. ಈ ಸೋಲನ್ನ ಕಾಂಗೆಸ್ ಮಂದಿನ ಕೆಲವೇ ದಿನಗಳಲ್ಲಿ ಮರೆತು ಮತ್ತೆ ರಾಹುಲ್ ಜಪ ಮಾಡ್ತಾರೆ. ಯಾಕಂದ್ರೆ ಅದು ಅವರ ಹೊಟ್ಟೆಪಾಡು. ಇಲ್ಲದಿದ್ರೆ ಅಲ್ಲಿ ಅವರಿಗೆ ಉಳಿಗಾಲವಿಲ್ಲವಲ್ಲ…

ಶಶಿ

 

ಸಮೋಸದಲ್ಲಿ ಆಲೂ ಇನ್ನೂ ಇದೆ, ಆದ್ರೆ ಬಿಹಾರದಲ್ಲಿ ಈಗ ಲಾಲೂ ಇಲ್ಲ….

ಸಮೋಸದಲ್ಲಿ ಆಲೂ ಎಲ್ಲಿಯವರೆಗೂ ಇರುತ್ತದೊ ಅಲ್ಲಿಯವರೆಗೂ ಲಾಲೂ ಬಿಹಾರದಲ್ಲಿ ಇರುತ್ತಾರೆ. ಇದು ಲಾಲೂ ಪ್ರಸಾದ್ ಯಾದವ್ ಹಿಂದೊಮ್ಮೆ ಹೇಳಿದ ಮಾತು. ಈ ಮಾತು ನಿನ್ನೆ ಮೊನ್ನೆಯವರೆಗೂ ನಿಜವಾಗಿತ್ತೂ ಕೂಡ. ಆದ್ರೆ ಈಗ ಅದು ಕೇವಲ ಲಾಲೂ ಕಂಡಿದ್ದ ಅಲ್ಪಾವದಿ ಕನಸು ಅನ್ನೋದು ಸಾಭೀತಾಗಿದೆ. ಹಸುಗಳು ತಿನ್ನಬೇಕಾದ ಮೇವನ್ನ ಅಡ್ಡಡ್ಡ ತಿಂದು ಮುಗಿಸಿ ರಾಜಾರೋಷವಾಗಿ ಓಡಾಡಿಕೊಂಡಿದ್ದ ಲಾಲೂ ಈಗ ಕಂಬಿಯ ಹಿಂದೆ ಸರಿದಿದ್ದಾರೆ. 17 ವರ್ಷಗಳ ಹಿಂದೆ ಮಾಡಿದ್ದ ಮಣ್ಣು ತಿನ್ನುವ ಕೆಲಸಕ್ಕೆ ಈಗ ಉತ್ತರ ಸಿಕ್ಕಿದೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಅದನ್ನೂ ಅತಿಯಾಗಿ ತಿಂದರೆ ಕುಡಿಯಲೂ ನೀರು ಕೂಡ ಸಿಗುವುದಿಲ್ಲ. ಇದು ಲಾಲೂ ಗೆ ಈಗ ಬಂದಿರುವ ಸ್ಥಿತಿ. ಮೇವು ಹಗರಣದಲ್ಲಿ ಬಾಗಿಯಾಗಿ ಸರ್ಕಾರದ ಹಣ ತಿಂದ ತಪ್ಪಿಗೆ ಲಾಲೂ ಇನ್ನು ಐದು ವರ್ಷ ಜೈಲಿನಲ್ಲಿ ಕಳೆಯಬೇಕಿದೆ. ಇದ್ರಿಂದಾಗಿ ಲಾಲೂ ರಾಜಕೀಯ ಜೀವನವೂ ಬಹುತೇಕ ಮುಗಿದಂತಾಗಿದೆ. ಜನಪ್ರತಿನಿಧಿಗಳು ಎರಡು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೊಳಗಾದರೆ ಸಂಸದ ಸ್ಥಾನ ತಕ್ಷಣದಿಂದಲೇ ರದ್ದಾಗುತ್ತದೆ ಎಂಬ ಸುಪ್ರೀಂ ಕೋರ್ಟ್  ಇತ್ತೀಚೆಗೆ ತೀರ್ಪು ನೀಡಿತ್ತು. ಈ ತೀರ್ಪು ಲಾಲೂ ರಾಜಕೀಯ ಜೀವನಕ್ಕೆ ಮುಳುಗುನೀರು ತಂದಿದೆ. ಜೈಲಿನಿಂದ ಬಿಡುಗಡೆಯಾದ ಮೇಲೆ ಆರು ವರ್ಷಗಳ ನಂತ್ರ ಚುನಾವಣೆಗೆ ಸ್ಪರ್ಧಿಸಲು ಕಳಂಕಿತ ಜನಪ್ರತಿನಿಧಿಗಳಿಗೆ ಸುಪ್ರೀಂ ಕೋಟ್ರ್ ಅವಕಾಶ ನೀಡಿದೆ. ಲಾಲೂ ಗೆ ಈಗ ಐದು ವರ್ಷ ಜೈಲುವಾಸವಾದ್ರೆ ಇನ್ನಾರು ವರ್ಷ ವನವಾಸವಾಗಲಿದೆ. 

ಅವಿಭಜಿತ ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲೂ ಪ್ರಸಾದ್ ಯಾದವ್ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು(ಸದ್ಬಳಕೆ ಯಾವತ್ತಾಗಿತ್ತು?) ಚಾಯ್ ಬಾಸಾ ಜಿಲ್ಲೆಯ ಕಜಾನೆಯಿಂದ 38 ಕೋಟಿ ಹಣವನ್ನ ಅಕ್ರಮವಾಗಿ ತಮ್ಮ ಪಟಾಲಂ ಜೊತೆ ಸೇರಿ ನುಂಗಿ ನೀರು ಕುಡಿದಿದ್ದರು. ಪ್ರಾಮಾಣಿಕ ಐಎಎಸ್ ಅಧಿಕಾರಿ ಅಮಿತ್ ಖರೆ ಈ ಹಗರಣವನ್ನ ಬಯಲಿಗೆಳೆದು ಇವತ್ತು ಲಾಲೂ ಕಂಬಿ ಏಣಿಸುವಂತೆ ಮಾಡಿದವರು. 1996 ರಲ್ಲಿ ಚಾಯ್ ಬಾಸಾ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪಶುಸಂಗೋಪನಾ ಇಲಾಖೆಯಲ್ಲಿ ಹಗರಣ ನಡೆಯುತ್ತಿರುವ ಅನುಮಾನ ಮೂಡಿತ್ತು. ಆ ಅನುಮಾನ ಆಧಾರದ ಮೇಲೆಯೇ ತನಿಖೆ ನಡೆಸಲು ಮುಂದಾಗಿದ್ದರು. ಆಗಲೇ ಗೊತ್ತಾಗಿದ್ದು ಜಂಗಲ್ ರಾಜ್ಯದ ದೊರೆಯಾಗಿದ್ದ ಲಾಲೂ ಹಸುಗಳು ತಿನ್ನುವ ಮೇವಿನ ಹಣವನ್ನೂ ಬಿಡದೆ ನುಂಗಿದ್ದಾರೆ ಅನ್ನುವುದು. ಚಾಯ್ ಬಾಸಾ ಜಿಲ್ಲೆಯ ಪಶುಸಂಗೋಪನಾ ಇಲಾಖೆಯ ಕಚೇರಿಗೆ ದಾಳಿ ಮಾಡಿದ ಅಮಿತ್ ಖರೆಯವರಿಗೆ ಭ್ರಷ್ಟಾಚಾರದ ವಿಶ್ವರೂಪವೇ ಪರಿಚಯವಾಗಿತ್ತು. ಅವತ್ತು ದಾಳಿ ಮಾಡಿ ದಾಖಲೆಗಳನ್ನ ಕಲೆಕ್ಟ್ ಮಾಡಿದ್ದ ಅಮಿತ್ ಖರೆ ಎಲ್ಲವನ್ನೂ ಕ್ಯಾಮೆರಾಲ್ಲಿ ಸೆರೆಹಿಡಿಸಿದ್ದರು. ಇಷ್ಟೆಲ್ಲಾ ಆದ ನಂತ್ರ ಪ್ರಕರಣವನ್ನ ಸಿಬಿಐ ಗೆ ವರ್ಗಾಯಿಸಲಾಯಿತು. ಲಾಲೂ ಅಂದ್ರೆ ಸುಮ್ನೇನಾ. ಸಿಬಿಐ ನ ಆಗಿನ ನಿರ್ಧೇಶಕ ಜೋಗಿಂದರ್ ಮತ್ತು ಅಂದಿನ ಡಿಐಜಿ ಯಾಗಿದ್ದ ರಂಜಿತ್ ಸಿನ್ಹಾ ಮೇಲೆ ಪ್ರಭಾವ ಬೀರಿ ಇಡೀ ಹಗರಣದಿಂದ ಪಾರಾಗಲು ಕಳ್ಳ ದಾರಿ ಹಿಡಿದಿದ್ದರು ಈ ಲಾಲೂ.

ಆದ್ರೆ ಸಿಬಿಐ ನಲ್ಲೂ ಒಬ್ಬ ಹೀರೊ ಇದ್ದರಲ್ಲ, ಅವರೇ ಉಪೇಂದ್ರನಾಥ ಬಿಸ್ವಾಸ್. ಮೇವು ಹಗರಣದ ತನಿಖೆಯ ಹೊಣೆ ಹೊತ್ತಿದ್ದ ಅಂದಿನ ಸಿಬಿಐ ಅಧಿಕಾರಿಯಾಗಿದ್ದ ಉಪೇಂದ್ರನಾಥ್ ಬಿಸ್ವಾಸ್ ಲಾಲೂ ವಿರುದ್ಧ ಬಲವಾದ ಸಾಕ್ಷಿಗಳನ್ನೇ ಕಲೆಹಾಕಿದ್ದರು. ಇಡೀ ಹಗರಣದ ಮೂಲ ಪುರುಷ ಲಾಲೂ ಅನ್ನೋದರ ಬಗ್ಗೆ ತನಿಖೆ ನಡೆಸಿ ಆ ತನಿಖಾ ವರದಿಯನ್ನ ಪಾಟ್ನಾ ಹೈಕೋರ್ಟ್ ಗೆ ಸಲ್ಲಿಸಿದ್ದರು. ವರದಿ ಸಲ್ಲಿಸುವುದಕ್ಕೂ ಮೊದಲೇ ಸಿಬಿಐ ನಲ್ಲಿ ಹೈಡ್ರಾಮ ನಡೆದುಹೋಗಿತ್ತು. ಉಪೇಂದ್ರನಾಥ್ ಬಿಸ್ವಾಸ್ ನೀಡಿದ್ದ ತನಿಖಾ ವರದಿಯನ್ನೇ ತಿರುಚಲಾಗಿತ್ತು. ಆ ಮಟ್ಟದ ಪವರ್ ಲಾಲೂ ಗೆ ಇತ್ತು. ಅಂದಿನ ಸಿಬಿಐ ಡಿಐಜಿ ರಂಜಿತ್ ಸಿನ್ಹಾ ಮತ್ತು ಅಂದಿನ ಸಿಬಿಐ ನಿರ್ಧೇಶಕ ಜೋಗಿಂದರ್ ಸಿಂಗ್ ಉಪೇಂದ್ರನಾಥ್ ಬಿಸ್ವಾಸ್ ನೀಡಿದ್ದ ವರದಿಯನ್ನ ತಿರುಚಿ, ಲಾಲೂ ಗೆ ಅನುಕೂಲವಾಗುವಂತೆ ವರದಿ ಸಿದ್ದಪಡಿಸಿ ಪಾಟ್ನಾ ಹೈ ಕೋರ್ಟ್ಗೆ ಸಲ್ಲಿಸಿದ್ದರು. ಇನ್ನೇನು ಲಾಲೂ ಈ ಪ್ರಕರಣದಲ್ಲಿ ನಿರ್ಧೂಷಿ ಯಾಗಬೇಕಿತ್ತು ಅಷ್ಟೇ. ಅಷ್ಟರಲ್ಲೇ ಸಿಡಿದೆದ್ದಿದ್ದರಲ್ಲ ಉಪೇಂದ್ರನಾಥ ಬಿಸ್ವಾಸ್. ತಾನು ನೀಡಿದ್ದ ತನಿಖಾ ವರದಿಯನ್ನ ತಿರುಚಲಾಗಿದೆ ಅಂತ ನ್ಯಾಯಾಧೀಶರಿಗೆ ಮನವರಿಕೆ ಮಾಡಿ ಮೂಲ ತನಿಖಾ ವರದಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸ್ವತಂ ಸಿಬಿಐ ನ ಧಣಿಗಳೇ ಲಾಲೂ ಪಾದಕ್ಕೆ ಶರಣಾಗಿಬಿಟ್ಟಿದ್ದರು. ಆ ಮೂಲಕ ಸಿಬಿಐ ನ ಮಯರ್ಾದೆ ದೇಶದ ಮುಂದೆ ಮೂರಾಬಟ್ಟೆಯಾಗಿಬಿಟ್ಟಿತ್ತು. ಹಾಗೆ ಸಿಬಿಐ ಅಧಿಕಾರಿಯಾಗಿದ್ದ ಉಪೇಂದ್ರನಾಥ ಬಿಸ್ವಾಸ್ ಅವ್ರ ಪ್ರಾಮಾಣಿಕತೆಯಿಂದಾಗಿ ಇವತ್ತು ಲಾಲೂ ಜೈಲಿನಲ್ಲಿ ತಿಗಣೆಗಳೊಂದಿಗೆ ಬೆಡ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ದುರಂತ ಅಂದ್ರೆ ಅವತ್ತು ಮೇವು ಹಗರಣದ ತನಿಖಾ ವರದಿಯನ್ನೇ ತಿರುಚಿದ್ದ ರಂಜಿತ್ ಸಿನ್ಹಾ ಇವತ್ತು ಸಿಬಿಐ ನ ಡೈರೆಕ್ಟರ್. ಅವ್ರನ್ನ ಆ ಜಾಗಕ್ಕೆ ತಂದು ಕೂರಿಸಿದ್ದು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ. ಭ್ರಷ್ಟಾಚಾರದ ಬ್ರಮ್ಹಾಂಡವನ್ನೇ ಹೊತ್ತು ಮೆರೆಯುತ್ತಿರುವ ಕೇಂದ್ರ ಸರ್ಕಾರಕ್ಕೆ ರಕ್ಷಕರು ಯಾರಾದ್ರೂ ಬೇಕಲ್ವ ಅದಕ್ಕಾಗಿಯೇ ಸಿಬಿಐ ಅನ್ನ ತನ್ನ ನಿಯಂತ್ರಣದಲ್ಲಿರಿಸಿಕೊಂಡು ಇಂತಹ ಮಾನಗೇಡಿ ಅಧಿಕಾರಿಗಳನ್ನ ಅದರ ಮುಖ್ಯಸ್ಥರನ್ನಾಗಿಸಿದೆ. ಏನೇ ಆದ್ರೂ ಕಾಲ ಲಾಲೂ ಪ್ರಸಾದ್ ಯಾದವ್ ಗೆ ಸರಿಯಾದ ಉತ್ತರವನ್ನೇ ನೀಡಿದೆ. ಈಗ ಲಾಲೂ ಬಿಹಾರವನ್ನ ಜಂಗಲ್ ರಾಜ್ಯವನ್ನಾಗಿ ಮಾಡಿದ ಅಪಕೀರ್ತಿಯನ್ನ ಹೊತ್ತು ಜೈಲಂತೂ ಸೇರಿದ್ದಾರೆ. ಹಾಗಂತ ಲಾಲೂ ಏನು ತಾವೊಬ್ಬರೇ ಜೈಲು ಸೇರಿಲ್ಲ ತಮ್ಮೊಂದಿಗೆ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಮತ್ತು ಇತರ 45 ಮಂದಿಯೊಂದಿಗೆ ಒಂದು ಟೀಂ ಅನ್ನೇ ಕರೆದೊಯ್ದಿದ್ದಾರೆ.

ಕಮಲ್ ಫಾರೂಖಿ ಎಂಬ ಮೂರ್ಖನಿಗೆ ಪ್ರಜ್ಞೆಯೂ ಇಲ್ಲ, ಪರಿಜ್ಙಾನವೂ ಇಲ್ಲ….

ದೇಶಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಂಡ್ ಭಯೋತ್ಪಾದಕ ಯಾಸಿನ ಭಟ್ಕಳ್ ನನ್ನ ನಮ್ಮ ಸೆಕ್ಯೂರಿಟಿ ಏಜೆನ್ಸಿಗಳು ಕಷ್ಟಪಟ್ಟು ಬಂಧಿಸಿ ಕಾನೂನಿನ ಕುಣಿಕೆ ಬಳಿ ತಂದು ನಿಲ್ಲಿಸವೆ. ಇಡೀ ಭಾರತವೇ ಯಾಸಿನ್ ಬಂಧನದ ಸುದ್ದಿಯನ್ನ ಕೇಳಿ ಸಂಭ್ರಮಿಸಿದೆ. ಬಾಂಬ್ ಸ್ಪೊಟಗಳಲ್ಲಿ ಪ್ರಾಣ ಕಳೆದುಕೊಂಡ ಅದೆಷ್ಟೋ ಅಮಾಯಕರ ಕುಟುಂಬಗಳು ಯಾಸಿನ್ ಗೆ ನೇಣು ಭಿಗಿಯುವುದನ್ನ ನಿರೀಕ್ಷೆ ಮಾಡ್ತಾಯಿವೆ. ಆದ್ರೆ ಯಾಸಿನ್ ಬಂಧನದ ಬಗ್ಗೆ ಒಬ್ಬೇ ಒಬ್ಬ ಮೂರ್ಖನಿಗೆ ಮಾತ್ರ ಒಂದು ಭಯಂಕರ ಅನುಮಾನ ಬಂದುಬಿಟ್ಟಿತ್ತು. ಆತನನ್ನ ಬಂಧಿಸಿರೋದು ಆತ ಮುಸ್ಲಿಂ ಅನ್ನುವ ಕಾರಣಕ್ಕೊ ಅಥವಾ ಆತ ಮಾಡಿದ ಅಪರಾಧಕ್ಕೊ ಅಂತ. ಅವನ ಹೆಸ್ರು ಕಮಲ್ ಫಾರೂಖಿ, ಸಮಾಜವಾದಿ ಪಕ್ಷದ ಮುಖಂಡ(?). ಯಾವ ಚಪ್ಪಲಿಯಲ್ಲಿ ಹೊಡೆಯಬೇಕು ಈ ಅಸಹ್ಯದ ಮನುಷ್ಯನಿಗೆ ಅನ್ನುವುದೇ ಅರ್ಥವಾಗುತ್ತಿಲ್ಲ. 350 ಕ್ಕೂ ಹೆಚ್ಚು ಅಮಾಯಕರ ಸಾವಿಗೆ ಕಾರಣನಾದ ಒಬ್ಬ ಉಗ್ರಗಾಮಿಯನ್ನ , ದೇಶದ ವಿರುದ್ಧ ಜಿಹಾದ್ ಸಾರಿದ ದೇಶ ದ್ರೋಹಿಯನ್ನ ನಮ್ಮದೇ ದೇಶದ ಒಬ್ಬ ಅಸಹ್ಯದ ರಾಜಕಾರಣಿಯೊಬ್ಬ ಸಮಥರ್ಿಸಿಕೊಳ್ಳುತ್ತಾನೆ. ಧರ್ಮದ ಆದಾರದ ಮೇಲೆ ಯಾಸಿನ್ ಭಟ್ಕಳ್ ನನ್ನೇನಾದರೂ ಬಂಧಿಸಿದ್ರೆ ಅದು ಅಲ್ಪ ಸಂಖ್ಯಾತ ಸಮುದಾಯಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಅನ್ನೋದು ಈ ಮೂರ್ಖನ ಕಳಕಳಿಯಂತೇ… ಯಾವನೇ ಒಬ್ಬ ಜವಾಬ್ದಾರಿಯಿರುವ, ಕನಿಷ್ಠ ಪ್ರಜ್ಞೆ ಇರುವ ಮನುಷ್ಯ ಇಂತ ಹೇಳಿಕೆಗಳನ್ನು ಕೊಡಲಾರ. ಈ ಕಮಲ್ ಫಾರೂಕಿ ಎಂಬ ಅಸಹ್ಯದ ಮನುಷ್ಯನಿಗೆ ಪ್ರಜ್ಞೆಯೂ ಇಲ್ಲ, ಪರಿಜ್ಙಾನವೂ ಇಲ್ಲ. Imageನಾಚಿಕೆಯಾಗಬೇಕು ನಮಗೆ. ಇಂತಹ ನಾಲಾಯಕ್ ಮನುಷ್ಯರಲ್ಲಾ ನಮ್ಮ ಜನ ಚುನಾವಣೆಯಲ್ಲಿ ಗೆಲ್ಲಿಸುತ್ತಾರಲ್ಲ ಅಂತ. ಅತ್ತ ತನಿಖಾ ತಂಡದ ಮುಂದೆ ಬಾಂಬ್ ಸ್ಪೊಟಿಸಿ ಅಮಾಯಕರ ಪ್ರಾಣ ತೆಗೆದಿದ್ದಕ್ಕೆ ತನಗೆ ಯಾವ ಪಶ್ಚಾತಾಪವೂ ಇಲ್ಲ ಅಂತ ಯಾಸಿನ್ ಹೇಳ್ತಾಯಿದ್ರೆ, ಇಲ್ಲಿ ಈ ಅಸಹ್ಯದ ಮನುಷ್ಯ ಒಬ್ಬ ಯಾಸಿನ್ ಬಂಧನದ ಬಗ್ಗೆ ಅಪಸ್ವರವೆತ್ತಿದ್ದಾನೆ. ದೇಶದ ರಕ್ಷಣೆಯ ವಿಚಾರದಲ್ಲಿ ಎಲ್ಲರ ದ್ವನಿಯೂ ಒಟ್ಟಾಗಿರಬೇಕು. ಆದ್ರೆ ಈ ವಿಷಯದಲ್ಲೂ ಜಾತಿ, ಧರ್ಮವನ್ನು ತಳುಕು ಹಾಕೋದು ಎಷ್ಟರ ಮಟ್ಟಿಗೆ ಸರಿ. ಅದಕ್ಕೆ ಕಾರಣವೂ ಇದೆ. ಅದು ವೋಟ್ ಬ್ಯಾಂಕ್ ಪಾಲಿಟಿಕ್ಸ್. ಮುಸ್ಲಿಮರ ವೋಟ್ ಗಾಗಿ ಅವ್ರನ್ನ ಓಲೈಕೆ ಮಾಡಲು ಇಂತಹ ಅಸಹ್ಯದ ರಾಜಕಾರಣಿಗಳು ಎಂತಹ ನೀಚ ಹೇಳಿಕೆಯನ್ನು ಬೇಕಾದರೂ ನೀಡಲು ಸಿದ್ದರಿರ್ತಾರೆ. ಒಬ್ಬ ಭಯೋತ್ಪಾದಕ ಬಂಧನವಾದ್ರೆ ಆತನ ಬಗ್ಗೆ ಗೊತ್ತಿರುತ್ತೊ ಇಲ್ಲವೋ ಆತ ಅಮಾಯಕ, ಉಗ್ರಗಾಮಿ ಚಟುವಟಿಕೆಗಳಲ್ಲಿ ಬಾಗವಹಿಸಿಲ್ಲ. ಪೊಲೀಸರು ಸುಖಾಸುಮ್ಮನೆ ಬಂಧಿಸಿದ್ದಾರೆ ಇದರ ಬಗ್ಗೆ ತನಿಖೆ ನಡೆಯಬೇಕು ಅಂತ ಉಯಿಲೆಬ್ಬಿಸಿಬಿಟ್ಟರೆ, ಒಬ್ಬ ಅತ್ಯಾಚಾರಿ ಹಿಂದೂ ಆಗಿದ್ದರೆ ಆತನ ಪರವಾಗಿ ಆತ ಅಮಾಯಕ ಅಂತ ಸಮರ್ಥನೆಗೆ ನಿಂತುಬಿಟ್ಟರೆ, ಒಬ್ಬ ದಲಿತನನ್ನ ಕಳ್ಳ ಅಂತ ಬಂಧಿಸಿದರೆ ಆತ ಅಮಾಯಕ ಅಂತ ಸಮರ್ಥನೆ ಮಾಡಿಕೊಳ್ಳಲು ಹೋದರೆ ಹೇಗೆ. ಈ ದೇಶದಲ್ಲಿ ಒಬ್ಬ ಭಯೋತ್ಪಾದಕ ಭಯೋತ್ಪಾದಕ ಅಷ್ಟೇ. ಒಬ್ಬ ಅತ್ಯಾಚಾರಿ ಒಬ್ಬ ಅತ್ಯಾಚಾರಿಯಷ್ಟೇ, ಒಬ್ಬ ಭ್ರಷ್ಟ ಒಬ್ಬ ಭ್ರಷ್ಟನಷ್ಟೇ, ಒಬ್ಬ ಕಳ್ಳ ಕಳ್ಳನಷ್ಟೇ, ಒಬ್ಬ ದೇಶ ದ್ರೋಹಿ ದೇಶ ದ್ರೋಹಿಯಷ್ಟೇ. ಎಲ್ಲರೂ ಜಾತಿ, ಧರ್ಮದ ಆಧಾರದ ಮೇಲೆ ತಮ್ಮ ತಮುದಾಯದವರೂ ಏನು ಮಾಡಿದ್ರೂ ಸಮಥರ್ಿಸಿಕೊಳ್ಳಲು ಮುಂದಾದ್ರೆ ಖಂಡಿಯ ದೇಶಕ್ಕೆ ಅಪಾಯವಿದ್ದೇ ಇದೆ. ಈ ವಿಚಾರವನ್ನ ಈ ಫಾರೂಕಿಯಂತಹ ಅಸಹ್ಯದ ರಾಜಕಾರಣಿಗಳೂ, ದಿಘ್ವಿಜಯ್ ಸಿಂಗ್ ನಂತಹ ಕೂಗುಮಾರಿಗಳೂ ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದ್ರೆ ನಾವೇ ಅರ್ಥ ಮಾಡಿಕೊಂಡು ಅಂತಹ ರಾಜಕಾರಣಿಗಳಿಗೆ ಮನೆ ದಾರಿ ತೋರಿಸಬೇಕು.

ಬಿಜೆಪಿಯ ಭೀಷ್ಮನ ಸಹನೆಗೂ ಒಂದು ಮಿತಿಯಿದೆ…

ಬಿಜೆಪಿಯ ಭೀಷ್ಮನ ಸಹನೆಗೂ ಒಂದು ಮಿತಿಯಿದೆ...

ಅಡ್ವಾಣಿಯವರು ರಾಜನಾಥಸಿಂಗ್ ಗೆ ಬರೆದ ರಾಜಿನಾಮೆ ಪತ್ರ…..

ಕಸಬ್ ನನ್ನೇನೊ ಗಲ್ಲಿಗೆ ಹಾಕುತ್ತೇವೆ…. ಇವರನ್ನೇನು ಮಾಡಬೇಕು……

ಕರ್ನಾಟಕದಲ್ಲಿ ಒಂದು ಕಡೆ ಜನ್ರು ಬರದಿಂದ ಕಂಗೆಟ್ಟು ಕುಡಿಯಲು ನೀರೂ ಇಲ್ಲದೇ ಪರದಾಡ್ತಾಯಿದ್ದಾರೆ… ಬಡ ರೈತ ಮಳೆಗಾಗಿ ಆಕಾಶದತ್ತ ನೋಡ್ತಾ ನೋಡ್ತಾ ಆತ್ಮಹತ್ಯೆಯ ಕಡೆಗೆ ಮುಖ ಮಾಡ್ತಾಯಿದ್ದಾರೆ… ಇನ್ನು ಬೆಂಗಳೂರಂತೂ ಗಾರ್ಡನ್ ಸಿಟಿಯ ಬದಲು ಗಾರ್ಬೇಜ್ ಸಿಟಿಯಾಗ್ತಾಯಿದೆ. ಎಲ್ಲಿ ನೋಡಿದ್ರೂ ಕಸದ ರಾಶಿಯೇ ತಾಂಡವವಾಡ್ತಾಯಿದೆ. ಇನ್ನು ವಿಧ್ಯುತ್ ಕಥೆಯಂತೂ ಹೇಳತೀರದು. ಬೆಂಗಳೂರನ್ನ ಹೊರತುಪಡಿಸಿದರೆ ರಾಜ್ಯಾಧ್ಯಂತ ಕರೆಂಟು ಕಣ್ನಾಮುಚ್ಚಾಲೆಯಾಡ್ತಾಯಿದೆ…. ರಾಜ್ಯದಲ್ಲಿ ಇಷ್ಟೊಂದು ಸಮಸ್ಯೆಗಳಿದ್ರೂ ಜವಾಬ್ದಾರಿ ಹೊತ್ತಿರೊ ನಮ್ಮ ಸಚಿವರು, ಶಾಸಕರೂ ಮಾಡ್ತಾಯಿರೊದಾದ್ರೂ ಏನು….. ಮೋಜು, ಮಸ್ತಿ, ಬರ ಪ್ರವಾಸದ ನೆಪದಲ್ಲಿ ಭಲ ಪ್ರದರ್ಶನ..
ಇಲ್ಲಿ ಜನ್ರು ಸಮಸ್ಯೆಗಳಿಂದ ಸಾಯ್ತಾಯಿದ್ರೆ ನಮ್ಮ ಶಾಸಕ ಮಹಾಸಯರು ಅಧ್ಯಯನದ ನೆಪದಲ್ಲಿ ವಿದೇಶ ಪ್ರವಾಸದ ಮೊಜು ಅನುಭವಿಸ್ತಾಯಿದ್ದಾರೆ… ವಿದೇಶ ಪ್ರವಾಸಕ್ಕೆ ಹೊರಟ ಯಾವನೆ ಶಾಸಕನಿಗಾದ್ರೂ ನಿಜಕ್ಕೂ ಅದ್ಯಯನ ಮಾಡ್ಬೇಕು ಅನ್ಸಿದ್ರೆ ಅವ್ರು ಉತ್ತರ ಕರ್ನಾಟಕದಲ್ಲಿ ಬರದಿಂದ ಕಂಗೆಟ್ಟ ಜನ್ರ ಬಳಿ ಹೋಗ್ಬೇಕಿತ್ತು… ಆದ್ರೆ ಇವರಾರಿಗೂ ಜನರ ಕಷ್ಟ ಬೇಕಾಗಿಯೇ ಇಲ್ಲ. ಇವರಿಗೆ ಬೇಕಿರುವುದು ಮೋಜು, ಮಸ್ತಿ ಮತ್ತು ಸರ್ಕಾರದ ಖಜಾನೆ ಕಾಲಿ ಮಾಡುವ ಹಕೀಕತ್ತು ಅಷ್ಟೆ. ಇವ್ರು ಮೋಜು ಮಾಡಲು ಹೊರಟಿರೊದು ಜನರ ತೆರಿಗೆಯ ದುಡ್ಡಿನಿಂದ.. ಜಾಲಿ ಟೂರಿಗೆ ಹೊರಟಿರುವ ಯಾವನೇ ಶಾಸಕರ ಮುಖ ನೋಡಿದ್ರೂ ಅವ್ರು ಮಾಡಿ ಬರುವ ಅಧ್ಯಯನದ ಹೆಸರಿನ ಮೊಜು ಎಲ್ಲರಿಗೂ ಅರ್ಥವಾಗುತ್ತೆ. ಸಮಸ್ಯೆಗಳೇ ತುಂಬಿರುವಾಗ ಶಾಸಕರು ವಿದೇಶ ಪ್ರವಾಸಕ್ಕೆ ಹೋಗಬಾರದು ಅನ್ನೊ ಪ್ರಶ್ನೆ ಬಂದಾಗ ಈ ಹೊಣೆಗೇಡಿ ಶಾಸಕರು ಹೆಳಿದ್ದೇನು ಗೊತ್ತಾ…. ಅಜ್ಮಲ್ ಅಮೀರ್ ಕಸಬ್ ನ ರಕ್ಷಣೆಗಾಗಿ ಸರ್ಕಾರ 25 ಕೋಟಿ ಖರ್ಚು ಮಾಡ್ಬೇಕಾದ್ರೆ ನಾವು ಈ ದೇಶದ ಹೆಮ್ಮೆಯ ಪುತ್ರರು ನಾವು ಪ್ರವಾಸಕ್ಕೆ ಹೊಗೋದ್ರಲ್ಲಿ ತಪ್ಪೇನೂ ಇಲ್ಲ ಅಂದಿದ್ದು ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್. ಯಾವನೇ ಆದ್ರೂ ತಲೆಯಲ್ಲಿ ಕನಿಷ್ಟ ಬುದ್ದಿ ಇರುವವನಾದ್ರೂ ಈ ರೀತಿಯ ಮೂರ್ಖತನದ ಮಾತುಗಳನ್ನಾಡುವುದಿಲ್ಲ.  ಈ ಬಾರೀ ಮೀಸೆ ಹೊತ್ತಿರುವ ಬಿ.ಸಿ ಪಾಟೀಲ್ ಗೆ ಒಂದು ಪ್ರಶ್ನೆ ಕೇಳ್ಬೇಕು ಅನ್ನಿಸ್ತಿದೆ. ಕಸಬ್ ನ ರಕ್ಷಣೆಗೆ ಹಣ ಖರ್ಚು ಮಾಡುತ್ತಿದ್ದೇವೆ ನಿಜ. ಅವನನ್ನು ಮುಂದಿನ ದಿನಗಳಲ್ಲಿ ನೇಣಿಗೆ ಹಾಕುತ್ತೇವೆ… ಆದ್ರೆ ಈ ಪಾಟೀಲಪ್ಪನನ್ನೇನು ಮಾಡ್ಬೇಕು… ಉತ್ತರ ಅವ್ರೇ ಹೇಳ್ಬೇಕು… ಇಂತ ಲಜ್ಜೆಗೆಟ್ಟವರನ್ನ ವಿದಾನಸಭೆಗೆ ಆಯ್ಕೆ ಮಾಡಿದ ಮತದಾರನಿಗೆ ಈಗಲಾದ್ರೂ ಅರ್ಥವಾಗುತ್ತಾ…, ಅಥವಾ ದುಡ್ಡಿನ ಬಲದಲ್ಲಿ ಮತ್ತೆ ಗೆಲ್ಲಬಹುದು ಎಂಬ ಹುಂಬತನವಿರುವ ಇಂತಾ ಶಾಸಕರಿಗೆ ಮುಂದಿನ ಚುನಾವಣೆ ಪಾಠವಾಗುತ್ತಾ… ಕಾದು ನೋಡ್ಬೇಕು….
ಈಗಂತೂ ಯಾರ ಬಾಯಲ್ಲಿ ನೋಡಿದ್ರೂ ಬರ ಪ್ರವಾಸದ ಮಾತುಗಳೇ ಕೇಳಿ ಬರುತ್ತಿವೆ. ಆಡಳಿತ ಪಕ್ಷದವರಿಂದ ಹಿಡಿದು ವಿರೋದ ಪಕ್ಷದ ವರೆಗೂ ಎಲ್ಲರೂ ಬರ ಪ್ರವಾಸದ ಮಾತುಗಳನ್ನಾಡುತ್ತಿದ್ದಾರೆ… ದಿನದಿಂದ ದಿನಕ್ಕೆ ರಾಜ್ಯದಲ್ಲಿ ಬರದ ಛಾಯೆ ಮಗ್ಗುಲಿಗೆ ಸರಿಯುತ್ತಿದೆ. ಬರ ರೈತನ ಕುತ್ತಿಗೆಗೆ ಹಾರವಾಗುತ್ತಿದ್ದಾಗ ಎಲ್ಲರೂ ಇದ್ದದ್ದು ರೆಸಾರ್ಟ್ ಗಳು, ಹೊಟೆಲ್ಗಳಲ್ಲಿ ಮತ್ತು ಜಾತಿ ರಾಜಕಾರಣದ ಕೆಸರಿನಲ್ಲಿ… ರೈತ ಕಂಗೆಟ್ಟು ಕುತಿದ್ದಾಗ ಈಗ ಪ್ರವಾಸ ಮಾಡುತ್ತಿರುವ ಯಡಿಯೂರಪ್ಪ ಆಗಲೀ, ಸದಾನಂದ ಗೌಡರಿಗಾಗಲೀ , ಕಾಂಗ್ರೆಸ್ನ ಮುಖಂಡರಿಗಾಗಲೀ ಯಾರಿಗೂ ಬರದಿಂದ ನಲುಗಿರುವ ರೈತ ನೆನಪಾಗಲೇ ಇಲ್ಲ. ಆಗ ಆಡಳಿತ ಪಕ್ಷ ಬಿಜೆಪಿ ಶಾಸಕರು ಮತ್ತು ಸಚಿವರು ಭಿನ್ನಮತದ ಹಾಸಿಗೆಯಲ್ಲಿ ಹೊರಳಾಡುತ್ತಿದ್ದರು. ಯಡಿಯೂರಪ್ಪನವರಂತೂ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಏನೇನು ಮಾಡಬಾರದೊ ಎಲ್ಲವನ್ನೂ ಲಜ್ಜೆಯಿಲ್ಲದೇ ಮಾಡಿಬಿಟ್ಟರು. ಸದಾನಂದ ಗೌಡರಿಗೆ ಖುರ್ಚಿ ಕಾಯವ ಕಾಯಕದ ಹೊರತಾಗಿ ಮತ್ತೇನನ್ನೂ ಮಾಡಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಜವಾಬ್ದಾರಿಯಿಂದ ಸರ್ಕಾರವನ್ನು ಸರಿದಾರಿಗೆ ತರಲು ಯತ್ನಿಸಬೇಕಾದ ಪ್ರತಿಪಕ್ಷಗಳೂ ರೊಟ್ಟಿ ತಿನ್ನಲು ಹಸಿದ ನಾಯಿ ಕಾದಂತೆ ಸರ್ಕಾರ ಯಾವಾಗ ಬಿದ್ದು ಹೋಗುತ್ತೇ ಅಂತ ಕಾದಿದ್ದೇ ಆಯ್ತು. ಇಡೀ ರಾಜ್ಯದ ಮರ್ಯಾದೆ ಬೀದಿಯಲ್ಲಿ ಮೂರು ಕಾಸಿಗೆ ಹರಾಜಾಗಿ ಹೋಗಿತ್ತು. ಯಾರಿಗೂ ಬಡ ರೈತನ ಪರಿಸ್ಥಿತಿ ಅರ್ಥವಾಗಲೇ ಇಲ್ಲ. ಎಲ್ಲ ಶಾಸಕ ಸಚಿವರೂ ರೆಸಾರ್ಟ್, ಹೊಟೆಲ್ ಗಳಲ್ಲಿ ತಿಂದು ಕುಡಿದದ್ದೇ ಬಂತು. ಯಾರಿಗೂ ರೈತ ನೆನಪಾಗಲೇ ಇಲ್ಲ. ಈಗ ಇದ್ದಕ್ಕಿಂದಂತೆ ಎಲ್ಲರಿಗೂ ಬಡ ರೈತ ನೆನಪಾಗಿದ್ದಾನೆ. ಅದಕ್ಕೆ ಕಾರಣವೂ ಇದೆ. ಇನ್ನು ಆರೇಳು ತಿಂಗಳುಗಳಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆ. ಇದಕ್ಕಾಗಿಯೆ ಎಲ್ಲರೂ ದಂಡೆತ್ತಿದವರಂತೆ ಬರ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಆದ್ರೆ ಈಗ ಮಾಡುತ್ತಿರುವ ಪ್ರವಾಸವಾದ್ರೂ ರೈತನ ಮೇಲಿರುವ ಕಾಳಜಿಯಿಂದಲಾ ಅಂತ ನೊಡಿದರೆ ಅದರ ಒಂದು ಎಳೆಯೂ ಕಾಣುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯನ್ನ ಹೇಗಾದ್ರೂ ಮಾಡಿ ಪಡೆಯಲೇ ಬೇಕು ಎಂಬ ಹಟಕ್ಕೆ ಬಿದ್ದಿರುವ ಯಡಿಯೂರಪ್ಪ ಜನ ಬೆಂಬಲ ಗಳಿಸಲು ಸರ್ಕಸ್ ಮಾಡ್ತಾಯಿದ್ದಾರೆ. ಇನ್ನು ಯಡಿಯೂರಪ್ಪನವರ ಆಸೆಗೆ ತಣ್ಣೀರೆರಚಲು ಸದಾನಂದ ಗೌಡ ಮತ್ತು ಈಶ್ವರಪ್ಪ ಒಂದೊಂದು ಕಡೆ ಪ್ರವಾಸ ಮಾಡ್ತಾಯಿದ್ದಾರೆ. ಬಿಜೆಪಿ ನಾಯಕರುಗಳ ಪ್ರವಾಸಸದಿಂದ ಕಂಗೆಟ್ಟ ಕಾಂಗ್ರೆಸ್ ನಾಯಕರೂ ಒಂದೊಂದು ಕಡೆ ಪ್ರವಾಸ ಮಾಡ್ತಾಯಿದ್ದಾರೆ. ಯಾರಲ್ಲಿಯತೂ ಕೂಡ ಬಡ ರೈತನ ಪರಿಸ್ಥಿತಿಯನ್ನ ಪ್ರಾಮಾಣಿಕವಾಗಿ ನೊಡುವ, ಅವನಿಗೆ ಸಾಂತ್ವಾನ ಹೇಳುವ, ದೈರ್ಯ ತುಂಬುವ ಮನಸ್ಸಿಲ್ಲ. ಎಲ್ಲರದ್ದೂ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುವ ಮನಸ್ಥಿತಿಯಷ್ಟೇ. ಇವರುಗಳು ಮಾಡುತ್ತಿರುವ ಬರ ಪ್ರವಾಸವಾದ್ರು ಏನು ಗೊತ್ತಾ… ಹಿಂಡು ಹಿಂಡು ಪುಡಾರಿಗಳನ್ನ ಹಿಂದಿಕ್ಕಿಕೊಂಡು ಸಾಲು ಸಾಲು ಕಾರುಗಳಲ್ಲಿ ಮೆರವಣಿಗೆ ಹೊರಟವರಂತೆ ಹೊರಟಿದ್ದಾರಷ್ಟೇ. ಕಾರಿನಿಂದ ಕೆಳಗಿಳಿದು ಮಳೆಯೇ ಇಲ್ಲದ ನೆಲದ ಮೇಲೆ ಇವರುಗಳು ಕಾಲಿಟ್ಟರೆ ಅದೇ ಅದೃಷ್ಟ ಅನ್ನುವಂತಾಗಿದೆ. ಕಾಲಿಡದಿರುವುದೇ ವಾಸಿ ಅನ್ನಿಸಿತ್ತೆ. ಯಾಕಂದ್ರೆ ಇವರು ಕಾಲಿಟ್ಟ ಜಾಗದಲ್ಲಿ ಗರಿಕೆ ಹುಲ್ಲು ಬೆಳೆಯುತ್ತಾ ಅನ್ನೋ ಅನುಮಾನವೂ ಇದೆ. ಇಂತಹ ಲಜ್ಜೆಗೆಟ್ಟ ಶಾಸಕರು, ಸಚಿವರು, ರಾಜಕೀಯ ಮುಂಖಂಡರು ನಮ್ಮ ರಾಜ್ಯದಲ್ಲಿರುವುದಕ್ಕೆ ನಮಗೆ ನಾಚಿಕೆಯಾಗುತ್ತದೆ ಅಷ್ಟೆ.

ವಿವೇಚನೆ, ವಿವೇಕವಿದ್ದವರಾರೂ ಉದ್ದಟತನ ತೋರುವ ಭಂಡತನ ಮಾಡುವುದಿಲ್ಲ….

ಮಾಧ್ಯಮದವರ ಮೇಲೆ ವಕೀಲರು ನಡೆಸಿದ ದಾಳಿಯ ಬಗ್ಗೆ ಈಗ ಏನೇನೊ ಮಾತುಗಳು ಹೊರಬರುತ್ತಿವೆ.ಮೀಡಿಯಾದವರ ಬ್ರೇಕಿಂಗ್ ನ್ಯೂಸ್ ಹಪಾಹಪಿಯಿಂದ ಇಷ್ಟೆಲ್ಲಾ ಅವಾಂತರ ಆಯ್ತು. ನ್ಯಾಯಾಲಯದ ಆವರಣದಲ್ಲಿ ಮಾದ್ಯಮದವರು ವಕೀಲರೊಂದಿಗೆ ಸರಿಯಾಗಿ ನಡೆದುಕೊಳ್ಳಲಿಲ್ಲ ಅನ್ನುವ ಮಾತುಗಳು ಕೇಳಿಬರುತ್ತಿವೆ. ಮೊದಲನೆಯದಾಗಿ ಅಂದು ಯಾವ ಮೀಡಿಯಾದವರೂ ಕ್ಯಾಮೆರಾ ಹಿಡಿದಾಗಲೀ, ಇಲ್ಲವೇ ವರದಿಗಾರರಾಗಲೀ ಕೋರ್ಟ್ ಕಲಾಪಕ್ಕೆ ಹೋಗಿ ಸೆನ್ಸೇಷನಲ್ ನ್ಯೂಸ್ ಕೊಡಬೇಕೆಂದೇನೂ ಹೋಗಿರಲಿಲ್ಲ. ಮಾದ್ಯಮ ಪ್ರತಿನಿಧಿಗಳಿಗೆ ನ್ಯಾಯಾಲಯಗಳಲ್ಲಿ ಹೇಗಿರ್ಬೇಕು ಅನ್ನೋದು ಗೊತ್ತಿದೆ. ಜನಾರ್ದನ ರೆಡ್ಡಿಯನ್ನ ಕೋರ್ಟ್ ಒಳಗೆ ಕರೆದೊಯ್ಯುವ ದೃಷ್ಯ ಸೆರೆ ಹಿಡಿಯಲು ಒಬಿ ವ್ಯಾನ್ ಗಳ ಸಮೇತ ಕ್ಯಾಮರಾದೊಂದಿಗೆ ನ್ಯಾಯಾಲಯದ ಆವರಣದಲ್ಲಿ ನಿಂತಿದ್ದರು. ಯಾವ ವರದಿಗಾರನೂ ನ್ಯಾಯಾಲಯದ ಒಳಗೆ ಹೋಗಿರಲಿಲ್ಲ. ಇನ್ನೇನು ರೆಡ್ಡಿಯನ್ನ 10 ನಿಮಿಷಗಳಲ್ಲಿ ಕರ್ಕೊಂಡು ಬರ್ತಾರೆ ಅನ್ನೊವಾಗ 30-40 ವಕೀಲರು ಬಂದು ಕ್ಯಾಮೆರಾ ಮತ್ತು ಟ್ರೈಪಾಡ್ ಗಳನ್ನ ಎತ್ತಿ ಬಿಸಾಕಲು ಪ್ರಾರಂಬಿಸಿದ್ರು. ಅದಾದ ನಂತ್ರ ರೆಡ್ಡಿಯನ್ನ ನ್ಯಾಯಾಲಯದ ಒಳಗೆ ಕರೆ ತಂದಾಗಲೂ ಕೂಡ ಕೆಲ ವಕೀಲರ ಗುಂಪು ಪತ್ರಕರ್ತರೆಡೆಗೆ ಕಲ್ಲು ತೂರಿದ್ರು. ನ್ಯಾಯಾಲಯಕ್ಕೆ ಬರ್ಬೇಡಿ ಅನ್ನೋದಕ್ಕೆ ಕೋರ್ಟ್ ಏನೂ ವಕೀಲರುಗಳ ಆಸ್ತಿಯೇನಲ್ಲ. ಹಾಗೆ ಪ್ರಾರಂಭವಾದ ವಕೀಲರ ಉದ್ಧಟತನ ವರದಿಗಾರರನ್ನ ಸಿಕ್ಕ ಸಿಕ್ಕಲ್ಲಿ ಹೊಡೆಯುವವರೆಗೆ ಹೋಯ್ತು. ಸುಮ್ಮನೇ ವಿಶ್ಲೇಷಣೆ ನೆಪದಲ್ಲಿ ಕೆಲವರುಗಳು ವಕೀಲರುಗಳನ್ನ ಸಮಥರ್ಿಸಿಕೊಳ್ಳುತ್ತಿದ್ದಾರೆ. ಇಡೀ ವಕೀಲ ಸಮುದಾಯವನ್ನೇ ಗೂಂಡಾಗಳೆಂದು ಯಾವ ಮಾಧ್ಯಮವೂ ಕರೆದಿಲ್ಲ. ಪುಂಡಾಟಿಕೆ ಮಾಡಿದವರನ್ನ ಪುಂಡರು ಎನ್ನದೇ ಪೂಜ್ಯರು ಅನ್ನಬೇಕಾ? ಇದಕ್ಕೆ ಉತ್ತರ ಹೇಳುವವರಾರು…. ಲಾಯರ್ ಗಳು ಅಹಂಕಾರದಿಂದ ವರದಿಗಾರರಿಗೆ ಹೊಡೆಯುವಾಗ ನಮ್ಮ ವರದಿಗಾರರಿಗೂ ನೋವಾಗಿತ್ತು ಅಲ್ಲವಾ? ಮಾಧ್ಯಮದವರೇನೂ ಆಕಾಶದಿಂದೇನೂ ಉದುರಿಲ್ಲ ಅವರಿಗೂ ನೊವಾಗುತ್ತೆ ತಾನೆ? ತಾವು ಆರಂಬಿಸಿದ ಪುಂಡಾಟಿಕೆಯನ್ನ, ಪುಂಡಾಟಿಕೆಯ ಪರಮಾವಧಿಯನ್ನ ನಿಯಂತ್ರಿಸೊಕೆ ಅಂತ ಪೊಲೀಸ್ರು ಬಲಪ್ರಯೋಗ ಮಾಡಿದ್ದಾರೆ. ಅದರಲ್ಲಿ ಮಾಧ್ಯಮದವರ ಕುಮ್ಮಕ್ಕೇನೂ ಇಲ್ಲ. ಅವತ್ತು ಆದ ಘಟನೆ ಪೂರ್ವ ನಿಯೋಜಿತ. ರೆಡ್ಡಿಯನ್ನ ನ್ಯಾಯಾಲಯಕ್ಕೆ ಹಾಜರುಪಡಿಸುವ ದಿನ ಮಾದ್ಯಮದವರು ಬರ್ತಾರೆ ಅಂತಾ ಗೊತ್ತಿದ್ದರಿಂದಲೇ ಕೆಲ ವಕೀಲರು ಜಗಳಕ್ಕಿಳಿದಿದ್ದು. ಏನೊ ತಮ್ಮ ಮೇಲೆ ಮಹಾನ್ ದೌರ್ಜನ್ಯವೇ ನಡೆದು ಹೋಯ್ತೇನೊ ಎಂಬಂತೆ ಅವತ್ತು ಬೆಂಗಳೂರಿನ ಜನರನ್ನ ಸತತ 7 ಗಂಟೆಗಳ ಕಾಲ ಟ್ರಾಪಿಕ್ನಲ್ಲಿ ಸೊರಗುವಂತೆ ಮಾಡಿದ್ದರಲ್ಲಿ ಯಾವ ಪುರುಷಾರ್ಥವಿದೆ. ಅವತ್ತು ಮೀಡಿಯಾದವರು ಜನರ ಪರವಾಗಿ, ಜನರಿಗಾದ ಸಮಸ್ಯೆಗಳ ಬಗ್ಗೆ ಮತ್ತು ಪೊಲೀಸ್ ಇಲಾಕೆಯ ನಿಷ್ಕ್ರಿಯತೆಯ ಬಗ್ಗೆ ವರದಿ ಮಾಡಿದ್ದವು. ಅದರಲ್ಲಿ ವಾಸ್ತವಿಕತೆಯಿತ್ತೇ ಹೊರತು ಅತಿಶಯೋಕ್ತಿತ ವರದಿಗಳೇನೂ ಇರಲಿಲ್ಲ. ಅಂದು ಸಾರ್ವಜನಿಕರ ಮೆಲೆಯೇ ಹಲ್ಲೆ ಮಾಡುವಷ್ಟರ ಬಗ್ಗೆ ವಕೀಲರ ಗುಂಪು ಮಿತಿಮೀರಿದ್ದಕ್ಕೆ ಆ ವಕೀಲರ ಗುಂಪಿಗೆ ಗೂಂಡಾಗಳೆಂದು ಕರೆದದ್ದು ಸತ್ಯ. ಗೋಡಾ ರೀತಿ ಯಾವನೇ ವ್ಯಕ್ತಿ ವತರ್ಿಸಿದರು ಅವನನ್ನ ಗೂಮಡಾ ಅಂತ ಕರೆಯಲು ಯಾರಪ್ಪನ ಅಪ್ಪಣೆಯೂ ಬೇಕಿಲ್ಲ. ರಾಜಕಾರಿಣಿ ಗೂಂಡಾ ನಡವಳಿಕೆ ತೋರಿದ್ರೆ ಅವನನ್ನೂ ಮಾದ್ಯಮಗಳು ರೌಡಿ ಅಂತಲೇ ಕರೆಯೊದು. ಮತ್ತೊಬ್ಬ ಯಾವನೇ ಮಾಡಿದ್ರು ಅವನನ್ನೂ ರೌಡಿ ಅಂತಲೇ ಕರೆಯೋದು. ತಾವು ಮಾಡಿದ್ದೇ ಸರಿ, ತಾವು ಮಾಡಿದ್ದೇ ನ್ಯಾಯ ಅನ್ನೊದಾದ್ರೆ ಕಾನೂನು ಇರೋದಾದ್ರು ಯಾಕೆ. ಕಾನೂನನ್ನ ಪಾಲಿಸ್ತೀವಿ, ಕಾಪಾಡ್ತಿವಿ ಅನ್ನೋರ್ಯಾಕೆ ಕಾನೂನಿನ ವ್ಯಾಪ್ತಿ ಮೀರಿ ಹೊಡೆದಾಟಕ್ಕಿಳೀತಾರೆ. ಯಾವ ಕಾನೂನಿನಲ್ಲಿ ಹೇಳಿದೆ ಕಲ್ಲು ತಗೊಂಡು ಜನರ ಮೇಲೆ ತೂರಬೇಕು ಅಂತ…. ನನಗಂತೂ ಗೊತ್ತಿಲ್ಲ ಯಾಕಂದ್ರೆ ನಾವು ಕಾನೂನು ಓದಿಕೊಂಡಿಲ್ಲವಲ್ಲ….

ಸಚಿವರ ಕಾಮಪುರಾಣವನ್ನು ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುತ್ತಿರುವವರಿಗೆ ಏನೆನ್ನಬೇಕು

ನೀನು ನೋಡು ನನ್ಗೂ ತೋರಿಸು ಆಯ್ತಾ...

ಅಂತೂ ಕರ್ನಾಟಕ ಮತ್ತು ಕನ್ನಡಿಗರ ಮಾನ ಮೂರಾಬಟ್ಟಿಯಾಗಿ ಹರಾಜಾಗಿಬಿಟ್ಟಿದೆ. ರಾಜಕೀಯದಲ್ಲಿ ದೇವಾಲಯದಷ್ಟೇ ಪಾವಿತ್ರೈತೆ ಹೊಂದಿದ್ದ ಕರ್ನಾಟಕ ವಿಧಾನ ಸಭೆಯಲ್ಲಿ ಸಚಿವ ಮಹಾತ್ರಯರು ಬ್ಲೂ ಫಿಲಂ ನೋಡಿಕೊಂಡು ಕಾಲಕಳೆಯುತ್ತಿದ್ದಂತೂ ನಾಚಿಕೆಗೇಡು. ಈ ಹಿಂದೆ ವಿಧಾನಸಭೆಯಲ್ಲಿಯೇ ಬಟ್ಟೆ ಹರಿದುಕೊಂಡು ಹುಚ್ಚರಂತೆ ಕೂಗಾಡಿದ್ದ ಗಟನೆಗಳು ನಡೆದಿದ್ದವಾದರೂ ಇಂತಹ ಕೀಳು ಮಟ್ಟಕ್ಕೆ ಇಳಿದಿರುವುದು ಮಾತ್ರ ಇದೇ ಮೊದಲು. ವಿಧಾನಸಭೆಯಲ್ಲಿ ಗಂಭಿರವಾದ  ಚರ್ಚೆ ನಡೆಯುತ್ತಿದ್ದರೆ ಅದಕ್ಕೂ ನಮಗೂ ಸಂಬಂದವೇ ಇಲ್ಲವೇನೊ ಎಂಬಂತೆ ಸವದಿ,ಸಿಸಿ ಪಾಟೀಲ್ ಮತ್ತು ಕೃಷ್ಣ ಪಾಲೇಮಾರ್ ಮೂರೂ ಬಿಟ್ಟವರಂತೆ ಕಾಮಕೇಳಿಯ ದೃಶ್ಯಗಳನ್ನು ನೋಡುವುದರಲ್ಲಿ ಮುಳುಗಿದ್ದರು. ಯಾವಾಗ ನ್ಯೂಸ್ ಚಾನಲ್ಗಳಲ್ಲಿ ಮೂರು ಸಚಿವರ ಕಾಮಪುರಾಣ ಬಯಲಿಗೆ ಬಂತೊ ಇಡೀ ರಾಜ್ಯದ ಜನತೆ ಒಂದು ಕ್ಷಣ ಬೆಚ್ಚಿಬಿದ್ದಿದ್ರು. ಇಂತಹ ನಾಚಿಕೆಗೆಟ್ಟವರನ್ನ ಜನರು ಆಯ್ಕೆ ಮಾಡಿ ವಿಧಾನಸಭೆಗೆ ಕಳಿಸಿದ್ದು ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಕ್ಕೇ ಹೊರತು ಸದನದಲ್ಲಿ ಕುಳಿತು ಬ್ಲೂಫಿಲಂ ನೋಡ್ತಾ ಮೋಜು ಮಾಡಲು ಅಲ್ಲ. ಮೊದಲು ಈ ಭಂಡ ಸಚಿವತ್ರಯರು ನಾವು ಏನೂ ಮಾಡಬಾರದ್ದನ್ನ ಮಾಡಿಲ್ಲ ನಾವೇಕೆ ರಾಜೀನಾಮೆ ಕೊಡಬೇಕು ಅಮತ ತಮ್ಮ ಮಹಾ ಕೆಲಸವನ್ನು ಸಮರ್ಥಿಸಿಕೊಂಡರಾದ್ರು ಆಮೇಲೆ ಒತ್ತಡಕ್ಕೆ ಬಿದ್ದು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಅದೂ ಘಟನೆ ನಡೆದು ಹದಿಮೂರು ಗಂಟೆಗಳ ನಂತರ. ಶಿಸ್ತಿನ ಪಕ್ಷವೆಂದೇ ಹೇಳಿಕೊಳ್ಳುವ ಬಿಜೆಪಿಗೆ ಇಂತಹ ಕಳಂಕಿತ ಸಚಿವರನ್ನು ವಜಾಮಾಡುವಷ್ಟೂ ಕೂಡ ಶಕ್ತಿ ಇಲ್ಲವೆಂಬುದು ಕೂಡ ಅಷ್ಟೇ ಸತ್ಯ. ಇದೆಲ್ಲಕ್ಕಿಂತ ವಿಪರ್ಯಾಸವೆಂದರೆ ಈ ಮೂವರು ಸಚಿವರ ಕಾಮಪುರಾಣವನ್ನು ಲಜ್ಜೆಗೆಟ್ಟುಸಮರ್ಥಿಸಿಕೊಳ್ಳುತ್ತಿರುವುದು.ಈ ಮೂವರು ಪೋಲಿ ಸಚಿವರಿಂದ ರಾಜಿನಾಮೆ ಪಡೆದ ಮೇಲೆ ಅವರುಗಳನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕೆಂಬ ಒತ್ತಡ ಹೆಚ್ಚುತ್ತಿದೆ. ಆದ್ರೆ ಆ ಕೆಲಸ ಮಾಡಲು ಬಿಜೆಪಿಯಂತಾ ಶಿಸ್ತಿನ ಪಕ್ಷ ಹಿಂಜರಿಯುತ್ತಿದೆ ಎಂದರೆ ಅದಕ್ಕಿಂತ ಅಸಹ್ಯ ಮತ್ತೊಂದಿಲ್ಲ. ಅಂಪಹ ತಾಖತ್ತು ಬಿಜೆಪಿಗೆ ಇಲ್ಲವೆಂದೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ವಾಜಪೇಯಿ ಮತ್ತು ಅಡ್ವಾಣಿಯಂತವರು ಕಟ್ಟಿಬೆಳೆಸಿದ ಪಕ್ಷಕ್ಕೆ ಇಂತಾ ದುರ್ಗತಿ ಬಂದಿರುವುದು ಮಾತ್ರ ದುರದೃಷ್ಟ. ಭಾರತೀಯ ಸಂಸ್ಕೃತಿಯ ರಕ್ಷಕರೆಂದೇ ಹೇಳಿಕೊಳ್ಳುತ್ತದ್ದ ಬಿಜೆಪೆಯವರು ಮಾಡುತ್ತಿರುವುದಾದ್ರೂ ಏನು. ಹಾಗಂತ ಇಡೀ ಬಿಜೆಪಿ ಪಾಟರ್ಿಯಲ್ಲಿರುವವರೆಲ್ಲರೂ ಇದೇ ರೀತಿಯ ಅಸಹ್ಯದ ಮಂದಿ ಅಂತೇನೂ ನಾನು ಹೇಳುತ್ತಲ್ಲ. ಇಂತಾ ನಾಚಿಕೆಗೇಡಿನ ಕೆಲಸ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವುದಾದ್ರೂ ಯಾಕೆ. ಸದನ ಸಮಿತಿ ನೇಮಕ ಮಾಡಿ ತನಿಕೆ ಮಾಡಿಸಿ ಆಮೇಲೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ತರಿ ಹೇಳ್ತಾಯಿದ್ದಾರೆ. ಇದು ಕಾಲ ಹರಣ ಮಾಡುವ ತಂತ್ರವಲ್ಲದೇ ಮತ್ತೇನೂ ಅಲ್ಲ. ಒಂದಷ್ಟು ದಿನ ತನಿಖೆಯ ಹೆಸರಲ್ಲಿ ಕಾಲ ತಳ್ಳಿದರೆ ಹಾಲಪ್ಪ ಪ್ರಕರಣದಂತೆ ಇದೂ ಕೂಡ ತಣ್ಣಗಾಗುತ್ತೆ ಆಮೇಲೆ ಏನೂ ಆಗೇ ಇಲ್ಲವೆಂಬಂತಿರಬಹುದು ಎಂಬುದು ಬಿಜೆಪಿ ಲೆಕ್ಕಾಚಾರ. ಉಡುಪಿಯಲ್ಲಿ ಪ್ರವಾಸೋಧ್ಯಮದ ಹೆಸರಲ್ಲಿ ರೇವ್ ಪಾರ್ಟಿ ಆಯೋಜಿಸಿ ಕಾಮಕೇಳಿಗೆ ಪ್ರೋತ್ಸಾಹ ನೀಡಿ ಕೋನೆಗೆ ಅಲ್ಲಿ ಅಂತದ್ದೇನೂ ನಡೆದೇ ಇಲ್ಲ ಎಂಬಂತೆ ವರ್ತಿಸಿದ ಇಂತಹ ಸರ್ಕಾರದಿಂದ ಬೇರೆ ಇನ್ನೇನು ತಾನೆ ನಿರೀಕ್ಷಿಸಲಾದೀತು. ಒಟ್ಟಿನಲ್ಲಿ ಸವದಿ ನೋಡಿ ಕೆಟ್ಟ, ಸಿಸಿ ಪಾಟೀಲ್ ಇಣುಕಿ ಕೆಟ್ಟ, ಪಾಲೇಮಾರ್ ಇಡೀ ಕಾರ್ಯಕ್ರಮವನ್ನು ಪ್ರಾಯೋಜಿಸಿ ಕೆಟ್ಟ. ಆದ್ರೆ ನಮ್ಮ ಕ್ಯಾಮೆರಾಮೆನ್ ಗಳು ಮಾತ್ರ ಮೂರು ಸಚಿವರ ಬಲಿ ಪಡೆದು ಭಯಂಕರ ಖುಷಿಯಲ್ಲಿದ್ದಾರೆ.

ರಾಜಕಾರಣಿಗಳಿಂದ ಲೋಕಾಯುಕ್ತವನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುವ ಪ್ರಯತ್ನ

 ಎಲ್ಲರೂ ಒಮ್ಮಿಂದೊಮ್ಮಿಗೇ ಲೋಕಾಯುಕ್ತ ಸಂಸ್ಥೆ ಮತ್ತದರ ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗ್ಡೆಯ ಮೇಲೆ ಮುಗಿಬಿದ್ದಿದ್ದಾರೆ. ಲೋಕಾಯುಕ್ತ ಸಂಸ್ಥೆಯೇ ಭ್ರಷ್ಟಗೊಂಡಿದೆ. ಅಂತಹ ಸಂಸ್ಥೆಯಿಂದ ಭ್ರಷ್ಟಾಚಾರ ತಡೆಯಲು ಸಾಧ್ಯವೇ ಇಲ್ಲ . ಸಂತೋಷ್ ಹೆಗ್ಡೆ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಇದು ಈ ರಾಜ್ಯದ ರಾಜಕಾರಣಿಗಳು ಎನಿಸಿಕೊಂಡಿರುವವರ ಬಾಯಿಂದ ಉದುರುತ್ತಿರುವ ನುಡಿಮುತ್ತುಗಳು. ಯಡಿಯೂರಪ್ಪನವರಿಂದ ಹಿಡಿದು ಅವರ ಮುಖವಾಣಿಯಂತಿರುವ ರೇಣುಕಾಚಾರ್ಯನವರೆಗೆ, ದೇವೇಗೌಡರಿಂದ ಹಿಡಿದು ಅವರ ಸಂತಾನ ಕುಮಾರಸ್ವಾಮಿಯವರೆಗೇ ಎಲ್ಲರಿಗೂ ಈಗ ಒಂದು ಬಲಿ ಬೇಕಾಗಿದೆ. ಅದು ಲೋಕಾಯುಕ್ತ ಸಂಸ್ಥೆಯೇ ಆಗಿರಬಹುದು ಇಲ್ಲವೇ ಸಂತೋಷ್ ಹೆಗ್ಡೆಯೇ ಆಗಿರಬಹುದು. ಒಟ್ಟಿನಲ್ಲಿ ರಾಜ್ಯದ ಜನರ ಮುಂದೆ ಲೋಕಾಯುಕ್ತ ಮತ್ತು ಸಂತೋಷ್ ಹೆಗ್ಡೆಯವರನ್ನು ತಪ್ಪಿತಸ್ಥರಂತೆ ನಿಲ್ಲಿಸಿ ತಾವೆಲ್ಲರೂ ಪರಮ ಪ್ರಾಮಾಣಿಕರೆಂದು ಬಿಂಬಿಸಿಕೊಳ್ಳಲು ಎಲ್ಲರೂ ಯತ್ನಿಸುತ್ತಿದ್ದಾರೆ. ಇನ್ನು ಈಶ್ವರಪ್ಪನವರಂತೂ ಲೋಕಾಯುಕ್ತವನ್ನು ಮುಚ್ಚೇಬಿಡಬೇಕೆಂದು ಪಾಮರ್ಾನು ಹೊರಡಿಸಿದ್ದಾರೆ. ಇದಕ್ಕೆಲ್ಲ ಕಾರಣ ಲೋಕಾಯುಕ್ತ ಅಧಿಕಾರಿಯಾಗಿದ್ದ ಮಧುಕರ ಶೆಟ್ಟಿ ನೀಡಿರುವ ಹೆಳಿಕೆ. ಲೋಕಾಯುಕ್ತದಲೂ ಭ್ರಷ್ಟರಿದ್ದಾರೆ ಅಂತ. ಸುಮ್ಮನೆ ಒಬ್ಬ ಅಧಿಕಾರಿ ಬೇಜಾವಾಬ್ದಾರಿಯುತ ಹೇಳಿಕೆ ನೀಡಿದರೆ ಹಾಗುವುದೇ ಹೀಗೆ. ಮುಗುಮ್ಮಾಗಿ ಲೋಕಾಯುಕ್ತದಲ್ಲಿಯೂ ಭ್ರಷ್ಟರಿದ್ದಾರೆ. ನಾನೇನೂ ಪ್ರಾಮಾಣಿಕನಲ್ಲ ಎಂದು ಕನಸಿನಲ್ಲಿ ಕನವರಿಸಿದಂತೆ ಹೇಳಿಕೆ ನೀಡುವ ಬದಲು ಸ್ಪಷ್ಟವಾಗಿ ಯಾರು ಭ್ರಷ್ಟರು, ಅಲ್ಲಿ ನೆಡೆದ ಅಕ್ರಮಗಳಾದರೂ ಏನು ಎಂಬದನ್ನ ಹೇಳಿದ್ದರೆ ಅವರ ಈ ವೈರಾಗ್ಯದ ಮಾತುಗಳನ್ನು ಒಪ್ಪ ಬಹುದಿತ್ತ. ಲೋಕಾಯುಕ್ತದಲ್ಲಿರುವವರೂ ಮನುಷ್ಯರೇ ಅವರೇನು ದೈವಾಂಶ ಸಂಭೂತರಲ್ಲ. ಅಲ್ಲಿಯೂ ಭ್ರಷ್ಟರಿದ್ದಾರೆ. ಹಾಗಂತ ಸಂತೋಷ್ ಹೆಗ್ಡೆಯವರೇ ಹೆಳಿದ್ದಾರೆ.,ಲೋಕಾಯುಕ್ತದಲ್ಲಿರುವವರು ಪರಮ ಪ್ರಾಮಾಣಿಕರು ಎಂದು ಅವರು ಯಾವತ್ತೂ ಹೇಳಿಲ್ಲ. ಅಲ್ಲಿದ್ದ ಭ್ರಷ್ಟರನ್ನು ಹೊರ ಹಾಕಿ ಲೋಕಾಯುಕ್ತವನ್ನು ಒಂದು ಉತ್ತಮ ಸಂಸ್ಥೆಯನ್ನಾಗಿ ಪರಿವರ್ತಿಸಿ ಪ್ರಾಮಾಣಿಕತೆಯನ್ನು ತಂದವರು ಸಂತೋಷ್ ಹೆಗ್ಡೆ.

ಕರ್ನಾಟಕ ಲೋಕಾಯುಕ್ತ

 ಸಂತೋಷ್ ಹೆಗ್ಡೆಯವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವವರು ಮೊದಲು ಆತ್ಮ ವಿಮಷರ್ೆ ಮಾಡಿಕೊಂಡರೆ ಉತ್ತಮ. ರೇಣುಕಾಚಾರ್ಯನಂತವರು ಪ್ರಾಮಾಣಿಕತೆಯ ಬಗ್ಗೆ ಮಾತಾಡಿದರೆ ಅದಕ್ಕಿಂತ ದುರಂತ ಇನ್ನೇನಿದೆ. ರೇಣುಕಾಚಾರ್ಯ ಯಾವಾಗಲೂ ಹೇಳುವುದು ಒಂದೇ ಒಂದು ಮಾತನ್ನ. ನನಗೆ ಲೋಕಾಯುಕ್ತದ ಬಗ್ಗೆ ಗೌರವವಿದೆ. ಸಂತೋಷ್ ಹೆಗ್ಡೆಯವರ ಮೇಲೆ ಗೌರವವಿದೆ ಅಂತ. ಹೀಗೆ ಹಿಂದೊಮ್ಮೆ ಸಚಿವ ಸ್ಥನ ಸಿಗಲಿಲ್ಲವೆಂಬ ಕಾರಣಕ್ಕೆ ಒಂದಿಷ್ಟು ಶಾಸಕರನ್ನ ಹೈದರಾಬಾದ್ ಗೆ ಹೈಜಾಕ್ ಮಾಡಿಕೊಂಡು ಹೋದಾಗಲೂ ರೇಣುಕಾಚಾರ್ಯ ಹೇಳಿದ್ದು ಅದನ್ನೇ ನನಗೆ ಯಡಿಯೂರಪ್ಪನವರ ಮೇಲೆ ಬಹಳ ಗೌರವವಿದೆ ಅಂತ. ಅದು ಯಾವ ರೀತಿಯ ಗೌರವವೊ ಏನೊ ಗೊತ್ತಿಲ್ಲ. ಸಂತೋಷ್ ಹೆಗಡೆಯವರೇನೂ ಯಡಿಯೂರಪ್ಪನವರನ್ನ ಜೈಲಿಗೆ ಹಾಕಿ ಎಂದೇನೂ ವರದಿ ನೀಡಿಲ್ಲ. ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಬೇಕೆಂದೇನೂ ಅವರು ವರದಿಯಲ್ಲಿ ಹೇರಳಿರಲಿಲ್ಲ. ಅದು ಅವರ ಕೆಲಸವೂ ಅಲ್ಲ. ಅವರು ಹೇಳಿದ್ದು ಯಡೆಯೂರಪ್ಪನವರನ್ನು ಕಾನೂನಿನ ಪ್ರಕಾರ ವಿಚಾರಣೆ ನೆಡೆಸಿ ಅಂತ. ಅದು ನೆಡೆಯುತ್ತಿದೆಯಷ್ಟೆ. ಇದಕ್ಕೆ ಸಂತೋಷ್ ಹೆಗ್ಡೆಯವರೇಕೆ ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಇನ್ನು ಹೆಗ್ಡೆಯವರ ರಾತ್ರಿ ಜೀವನದ ಖಚರ್ುಗಳ ಬಗ್ಗೆ ಮಾತಾಡಿ ಸಂತೋಷ್ ಹೆಗ್ಡೆಯವರಿಂದ ಛೀಮಾರಿ ಹಾಕಿಸಿಕೊಂಡಿದ್ದ ಕುಮಾರಸ್ವಾಮಿ ಹೆಗ್ಡೆಯವರ ಅಕ್ರಮಗಳನ್ನ ಬಯಲಿಗೆಳೀತೀನಿ, ದಾಖಲೆಗಳನ್ನ ಬಿಡುಗಡೆ ಮಾಡ್ತೀನಿ ಅಂತ ಉತ್ತರಕುಮಾರನ ಹಾಗೆ ಬಡಬಡಿಸುತ್ತಲೇ ಇದ್ದಾರೆ. ಇನ್ನು ಮಾಜಿ ನಪ್ರಧಾನಿಯಾಗಿ ಪಂಚಾಯಿತಿ ಮಟ್ಟದಲ್ಲಿಯೂ ರಾಜಕೀಯ ಮಾಡುವ ದೇವೇಗೌಡರು ತಮ್ಮ ಮಗ ಬಾಲಕೃಷ್ನಗೌಡರ ಪ್ರಕರಣ ತನಿಕೆ ಮಾಡುತ್ತಿದ್ದ ಜೀವನ್ ಕುಮಾರ್ ನ್ನ ಬೆದರಿಸುತ್ತಾರೆ. ಅದನ್ನ ಕೆಳಿದರೆ ನಾನು ಬೆದರಿಸಿಲ್ಲ ಎಚ್ಚರಿಸಿದ್ದೇನೆ ಅಂತಾರೆ. ಎರೆಡೂ ಒಂದೇ ಅಳಿಯ ಅಲ್ಲ ಮಗಳ ಗಂಡ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರ ಅವರನ್ನು ವರ್ಗಾವಣೆ ಮಾಡಿದೆ. ತಮಗೆ ಬೇಕಾದವರನ್ನು ರಕ್ಷಿಸಿಕೊಳ್ಳಲು ಒಬ್ಬ ಧಕ್ಷ ಅಧಿಕಾರಿಯನ್ನು ರಾತ್ರೊರಾತ್ರಿ ವರ್ಗಾವಣೆ ಮಾಡಲಾಗಿದೆ. ಲೋಕಾಯುಕ್ತವನ್ನು ಬಲಪಡಿಸುತ್ತೇವೆ ಅಂತ ಕುಮಾರಸ್ವಾಮಿಯಿಂದಿಡಿದು ಈಗಿನ ಸದಾನಂದಗೌಡರವರೆಗೇ ಎಲ್ಲರೂ ಹೇಳುತ್ತಲೇ ಇದ್ದಾರೆ. ಆದರೆ ಮಾಡುತ್ತಿರುವುದು ಮಾತ್ರ ಅದನ್ನು ದುರ್ಬಲಗೊಳಿಸುವ ಪ್ರಯತ್ನ. ಲೋಕಾಯುಕ್ತ ದಾಳಿಗೊಳಗಾದವರನ್ನು ಕೆಲಕಾಲ ಅಮಾನತು ಮಾಡಿ ಆಮೇಲೆ ಅವರಿಗೆ ಬಡ್ತಿ ನೀಡಿದರೆ ಯಾವ ವ್ಯವಸ್ಥೆಯಾದರೂ ಉದ್ಧಾರವಾದೀತು. ಒಬ್ಬೊಬ್ಬರಾಗಿ ಜೈಲಿನ ಹಾದಿ ಹಿಡಿಯುತ್ತಿರುವುದನ್ನು ತಪ್ಪಿಸಲು ಎಲ್ಲ ಪಕ್ಷಗಳೂ ಸೇರಿ ಲೋಕಾಯುಕ್ತವನ್ನು ಬಲಿ ತಗೆದುಕೊಳ್ಳಲು ಹವಣಿಸುತ್ತಿವೆ.

ಬಳ್ಳಾರಿಯ ಒಡಲನ್ನೇ ಬಗೆದವರಿಗೆ ಇದೆಂತಾ ಸ್ವಾಭಿಮಾನ…..

ಈಗ ಶ್ರೀ ರಾಮುಲು ಬಾಯಲ್ಲಿ ಸ್ವಾಭಿಮಾನದ ಮಾತುಗಳು ಬರುತ್ತಿವೆ. ಅನವಶ್ಯಕವಾಗಿ ನನ್ನ ಹೆಸರನ್ನ ಲೋಕಾಯುಕ್ತ ವರಧಿಯಲ್ಲ ಪ್ರಸ್ತಾಪಿಸಲಾಗಿದೆ. ಗಣಿಗಾರಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ಅದೂ ಇದೂ ಅಂತ ಕನವರಿಸತೊಡಗಿದ್ದಾರೆ. ಆದ್ರೆ ಇದೇ ಸ್ವಾಭಿಮಾನ ಅವರಿಗೆ ಅಕ್ರಮ ಗಣಿ ಸಂಪತ್ತನ್ನ ಕೊಳ್ಳೆ ಹೊಡೆಯುವಾಗ ಇರಲೇ ಇಲ್ಲ. ಎಲ್ಲರಿಗೂ ಗೊತ್ತು ಇದೇ ರೆಡ್ಡಿಗಳು ಮತ್ತು ಶ್ರೀರಾಮುಲು ಇಡೀ ಬಳ್ಳಾರಿ ಜಿಲ್ಲೆಯ ಗಣಿ ಸಂಪತ್ತನ್ನು ಕೊಳ್ಳೆ ಹೊಡೆದದ್ದು ಅಂತ. ಬಳ್ಳಾರಿ ಅಕ್ರಮ ಗಣಿಗಾರಿಕೆಯ ಗಣರಾಜ್ಯವೆಂದೇ ಕಖ್ಯಾತಿ ಪಡೆಯೊಕೆ ಕಾರಣವಾದವರೇ ಈ ರೆಡ್ಡಿ ಬ್ರದರ್ಸ್ ಮತ್ತು ಶ್ರೀರಾಮುಲು.

ಶ್ರೀ ರಾಮುಲು

ಸದಾನಂದಗೌಡರ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಶ್ರೀರಾಮುಲು ರಾಜೀನಾಮೆ ಕೊಟ್ಟಿದ್ದು. ಹೇಗಾದರೂ ಮಾಡಿ ಸಚಿವನಾಗಲೇ ಬೇಕೂ ಆ ಮೂಲಕ ಬಳ್ಳಾರಿ ತಮ್ಮ ಹಿಡಿತದಲ್ಲೇ ಇರಬೇಕೆಂಬುದು ರೆಡ್ಡಿಗಳ ತಂತ್ರ. ಅದರ ಮೊದಲ ಭಾಗವಾಗಿ ಶ್ರೀರಾಮುಲು ಇಂದ ರಾಜೀನಾಮೆ ಕೊಡಿಸುವ ಒತ್ತಡವೇರಿ ಆ ಮೂಲಕ ಸಚಿವ ಸ್ಥಾನ ಗಿಟ್ಟಿಸುವುದು ಅವರ ಉದ್ದೇಶವಾಗಿತ್ತು. ಆದ್ರೆ ಅವರ ಉದ್ದೇಶಕ್ಕೆ ತಣ್ಣೀರೆರೆಚಿದ್ದು ಸಿಬಿಐ. ಯಾವುದೇ ಸಣ್ಣ ಸುಳಿವೂ ಕೂಡ ಕೊಡದೆ ಇದ್ದಕ್ಕಿದ್ದಂತೆ ಜನಾರ್ಧನ ರೆಡ್ಡಿಯನ್ನ ಬಂದಿಸಿ ಆಂದ್ರದ ಚಂಚಲಗೂಡ ಜೈಲಿಗೆಹಾಕಲಾಯಿತು. ಅಲ್ಲಿಗೆ ರೆಡ್ಡಿಗಳು ಹೆಣೆದಿದ್ದ ತಂತ್ರಗಾರಿಕೆ ವಿಪಲವಾಗಿತ್ತು. ಶ್ರೀರಾಮುಲು ನೀಡಿದ್ದ ರಾಜೀನಾಮೆಯನ್ನ ಬಿಜೆಪಿ ಅಳೆದೂ ತೂಗಿ ಕೊನೆಗೆ ಯಾವುದೇ ದಾರಿಯಿಲ್ಲದೆ ರಾಜೀನಾಮೆಯನ್ನ ಅಂಗೀಕರಿಸಿತು. ಈಗ ರಾಜ್ಯ ಮತ್ತೊಂದು ಉಪಚುನಾವಣೆಗೆ ಸಜ್ಜಾಗಿ ನಿಂತಿದೆ. ಇವರ ಆಟಾಟೊಪಗಳಿಗೆ ಜನರ ತೆರಿಗೆಯ ದುಡ್ಡು ಅನಗತ್ಯವಾಗಿ ವ್ಯಚ್ಚವಾಗ್ತಿದೆ. ಏನೇ ಆದ್ರೂ ಈ ಉಪಚುನಾವಣೆಯಲ್ಲಿ ಶ್ರೀರಾಮುಲು ಗೆಲ್ಲುವುದು ಬಹುತೇಕ ಖಚಿತ. ದುಡ್ಡಿನ ಮೂಟೆಯನ್ನೇ ಚೆಲ್ಲಿ ಚುನಾವಣೆ ಗೆಲ್ಲುವ ಇವರಿಗೆ ಈ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವುದು ಅಷ್ಟು ಕಷ್ಟವೇನಲ್ಲ. ಇದರ ಜೋತೆಗೆ ಶ್ರೀ ರಾಮುಲುಗೆ ಜನಬೆಂಬಲವಿರುವುದೂ ಸಹ ಅಷ್ಟೇ ಸತ್ಯ. ಹಾಗಂತ ಅವರು ಗೆದ್ದುಬಿಟ್ರೆ ಅವರ ಮೇಲಿನ ಆರೋಪಗಳಾಗಲೀ, ಅವರು ಮಾಡಿದ ಭ್ರಷ್ಟಾಚಾರವಾಗಲೀ ಸುಳ್ಳೆಂದು ಸಾಭೀತೇನೂ ಆಗುವುದಿಲ್ಲ. ಅವರು ಈಗ ಕಳೆದುಕೊಂಡಿದ್ದೇನೆ ಅಂತ ಹೇಳುತ್ತಿರುವ ಸ್ವಾಭಿಮಾನವೂ ವಾಪಸ್ ಬರುವುದಿಲ್ಲ.

ಹೋರಾಟಗಳು ಪ್ರಜಾಪ್ರಭುತ್ವಕ್ಕೆ ಮಾರಕವೇ?

ಅಣ್ಣಾ ಹಜಾರೆ ಜನಲೋಕಪಾಲ್ ಮಸೂದೆಗಾಗಿ ನೆಡೆಸಿದ ಉಪವಾಸ ಸತ್ಯಾಗ್ರಹ ಮತ್ತು ಅವರನ್ನು ಬೆಂಬಲಿಸಿ ದೇಶಾಧ್ಯಂತ ನೆಡೆದ ಹೋರಾಟ ಪ್ರಜಾಪ್ರಭುತ್ವಕ್ಕೆ ಮಾರಕವೇ? ಪ್ರಜಾಫ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ ಸವರ್ೊಚ್ಚ, ಹಾಗೆಂದು ಕೆಲ ರಾಜಕಾರಣಿಗಳು ವಿತಂಡ ವಾದ ಮಂಡಿಸಿತ್ತಿದ್ದಾರೆ. ಹಾಗಾದರೆ ಸಂಸತ್ತಿಗೆ ಪ್ರತಿನಿದಿಗಳನ್ನು ಆರಿಸಿ ಕಳುಹಿಸಿದ ಜನತೆ ಸಂಸತ್ ಸದಸ್ಯರ ಅಡಿಯಾಳುಗಳೇ? ಈ ಬಗ್ಗೆ ಚಚರ್ೆಗಳು ನೆಡೆಯುತ್ತಿವೆ. ಮೋದಲಿಗೆ ಈ  ವಾದವನ್ನು ಮುಂದಿಟ್ಟು ಹಜಾರೆಯವರ ಹೋರಾಟವನ್ನು ದಿಕ್ಕುಪಪ್ಪಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಿತು. ಹಜಾರೆಯವರ ಉಪವಾಸ ಸತ್ಯಗ್ರಹ 10 ನೇ ದಿನಕ್ಕೆ ತಲುಪುತ್ತಿದ್ದಂತೆ ಪಟ್ಟಿಗೆ ಮಣಿದ ಸಕರ್ಾರ ಸಂಸತ್ತಿನಲ್ಲಿ ಜನಲೋಕಪಾಲ್ ಬಗ್ಗೆ ಚಚರ್ಿಸಲು ನಿರ್ಧರಿಸಿತು. ಸಂಸತ್ತಿನಲ್ಲಿ ಮಾತನಾಡಲು ನಿಂತ ರಾಹುಲ್ ಗಾಂದಿಯ ಬಗ್ಗೆ ಜನತೆ ತುಂಬಾ ನಿರೀಕ್ಷೆಯಿಟ್ಟುಕೊಂಡಿದ್ದರು. ಆದರೆ ರಾಹುಲ್ ಮಲಗಿದ್ದ ಮಗು ಎದ್ದು ಕಿಟಾರನೆ ಕಿರುಚುವಂತೆ ಹಜಾರೆಯವರು ಮಾಡುತಿರುವ ಉಪವಾಸ ಸತ್ಯಾಗ್ರಹ ಮತ್ತು ಪ್ರತಿಭಟನೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ದವಾದುದು ಜನಲೋಕಪಾಲ್ ಗಿಂತಲೂ ಭಲಿಷ್ಟವಾದ ಕಾಯಿದೆಯನ್ನು ತರುವ ಅಗತ್ಯವಿದೆ ಎಂದು ಬಡಬಡಿಸಿಬಿಟ್ಟರು.

ಹೋರಾಟ,ಪ್ರತಿಭಟನೆಗಳು ಬೇಕು..

ಅವರದೇ ಸಕರ್ಾರದ ಮಂತ್ರಿಗಳು ಜನರ ದುಡ್ಡನ್ನು ಕೊಳ್ಳೆ ಹೊಡೆಯುವಾಗ ನೆನಪಾಗದ ಪ್ರಜಾಪ್ರಭುತ್ವ ಇದ್ದಕ್ಕಿದ್ದ ಹಾಗೆ ಅವರಿಗೆ ನೆನಪಾಗಿದ್ದು ಮಾತ್ರ ದುರಾದೃಷ್ಟ. ರಾಹುಲ್ ಗಾಂದಿ ಹೇಳಿದ ಈ ಮಾತುಗಳನ್ನು ಕಾಂಗ್ರೆಸ್ ನವರಂತೂ ವೇದವಾಕ್ಯವೇನೊ ಎಂಬಂತೆ ಸಮಥರ್ಿಸಿಕೊಂಡರು. ಅದು ಅವರು ಸಮಥರ್ಿಸಿಕೊಳ್ಳಲೇಬೇಕು ಇಲ್ಲದಿದ್ದರೆ ಅವರಿಗೆ ಪಕ್ಷದಲ್ಲಿ ಉಳಿಗಾಲವಿಲ್ಲ. ಅದು ಅವರ ಕರ್ಮ. ಆದರೆ ಕೆಲ ರಾಷ್ಟ್ರೀಯ ಸುದ್ದಿವಾಹಿನಿಗಳೂ ಸಹ ನಮೊ ರಾಹುಲ್ ಗಾಂದಿ ಎಂದುಬಿಟ್ಟವು. ಹಜಾರೆಯವರನ್ನು ಬಂದಿಸಿದಾಗ ಮತ್ತು ಅವರ ಉಪವಾಸ 10 ದಿನಗಳು ಕಳೆದ ನಂತರ ರಾಹುಲ್ ಗಾಂದಿಗೆ ಪ್ರಜಾಪ್ರಭುತ್ವ ನೆನಪಾಗಿಬಿಟ್ಟಿತ್ತು. ಆದರೆ ಅಸಲಿಗೆ ನಿಜವಾದ ಚಚರ್ೆ ಆರಂಭವಾಗಿದ್ದು ಆಗಸ್ಟ್ 27 ರಂದು. ದಿನವಿಡೀ ನೆಡೆದ ಚಚರ್ೆಗಳು ಸಂಸತ್ತಿನ ಗೌರವವನ್ನು ಎತ್ತಿಹಿಡಿಯುವಂತಿದ್ದವು. ಈ ರೀತಿಯ ಚಚರ್ೆಯನ್ನು ಇನ್ನಷ್ಟು ಮುಂಚೆಯೇ ಮಾಡಿದ್ದರೆ ಹಜಾರೆಯವರು ಸತ್ಯಾಗ್ರಹ ನೆಡೆಸುವಂತಹ ಅಗತ್ಯವೇ ಇರಲಿಲ್ಲ. ಇದನ್ನು ರಾಹುಲ್ ಗಾಂದಿಯನ್ನು ರಾಷ್ಟ್ರ ನಾಯಕನೆಂಬಂತೆ ಬಿಂಬಿಸುತ್ತಿರುವ ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು. ಹಾಗೆಯೇ ಎಲ್ಲ ರಾಜಕೀಯ ಪಕ್ಷಗಳೂ ಸಹ. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕಾರದ ವಿರುದ್ಧ ಪ್ರತಿಭಟಿಸುವುದು ಜನರ ಹಕ್ಕು. ಆ ಪ್ರತಿಭಟನೆಗಳು ಹಾದಿ ತಪ್ಪದಂತೆ ನೋಡಿಕೊಳ್ಳುವುದು ಮತ್ತು ಜನರ ಬೇಡಿಕೆಗಳನ್ನು ಮನ್ನಿಸುವುದು ಸಕರ್ಾರದ ಕರ್ತವ್ಯ. ಪ್ರಜಾಪ್ರಭುತ್ವ ಎಂದರೆ ಜನರಿಂದ,ಜನರಿಗಾಗಿ, ಜನರಿಗೋಸ್ಕರವೇ ಹೊರತು. ರಾಜಕಾರಣಿಗಳಿಂದ, ರಾಜಕಾರಣಿಗಳಿಗಾಗಿ, ರಾಜಕಾರಣಿಗಳಿಗೊಸ್ಕರ ಅಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.

ರಾಜಕಾರಣಿಗಳಿಂದ ಅಣ್ಣಾ ಹಜಾರೆ ಹೋರಾಟವನ್ನು ಹತ್ತಿಕ್ಕುವ, ದಿಕ್ಕುತಪ್ಪಿಸುವ ಪ್ರಯತ್ನ

ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರುದ್ದದ ಹೋರಾಕ್ಕೆ ಸಿಕ್ಕಿರುವ ದೇಶವ್ಯಾಪಿ ಬೆಂಬಲದಿಂದ ಕೆಲವರಂತೂ ಕುಂತಲ್ಲೇ ಇರುವೆ ಬಿಟ್ಟುಕೊಂಡವರಂತೆ ಆಡ್ತಾಯಿದ್ದಾರೆ. ಅಂತವರ ಪ್ರಶ್ನೆ ಎಂದರೆ ಈ ಹೋರಾಟಕ್ಕೆ ಬೆಂಬಲ ಸೂಚಿಸುವವರಿಗೆ ಸಕರ್ಾರದ ಲೋಕಪಾಲ್ ಕರಡು ಮತ್ತು ಅಣ್ಣ ತಂಡದ ಜನಲೋಕಪಾಲ್ ಕರಡಿನ ಬಗ್ಗೆ ಗೊತ್ತಿಲ್ಲ ಎನ್ನುವುದು. ಟಿವಿ ಕ್ಯಾಮರಾಗಳ ಮುಂದೆ ಬಾಯಿಗೆ ಬಂದಂತೆ ಅರಚಿಕೊಳ್ಳುವ ಇಂತವರು ಈ ದೇಶದಲ್ಲಿ ಜಾರಿಯಾಗುವ ಎಲ್ಲ ಮಸೂದೆಗಲ ಬಗ್ಗೆ ತಿಳಿದುಕೊಂಡಿದ್ದಾರಾ ಎಂಬುದು ನನ್ನ ಪ್ರಶ್ನೆ. ಈ ಹೋರಾಟಕ್ಕೆ ಬೆಂಬಲ ಇಡೀ ಕರಡುಗಳೆಲ್ಲವನ್ನೂ ಓದಿಕೊಳ್ಳಲೇಬೇಕೆಂದೇನೂ ಇಲ್ಲ ಅವುಗಳ ಬಗ್ಗೆ ತಿಳಿದುಕೊಂಡರೆ ಸಾಕು. ನನ್ನ ಪ್ರಕಾರ ಅಲ್ಪವಾದರೂ ತಿಳಿದುಕೊಳ್ಳದೇ ಸಕರ್ಾರದ ವಿರುದ್ದ ಘೋಷಣೆ ಕೂಗಲು ಇಲ್ಲಿ ಬರುತ್ತಿರುವವರನ್ನು ದುಡ್ಡು ಕೊಟ್ಟು ಕರೆದು ತಂದಿಲ್ಲ.

ಅಣ್ಣಾ ಹಜಾರೆ

ಅಣ್ಣ ಹಜಾರೆ ಮಾಡುತ್ತಿರುವ ಹೋರಾಟ ಪಕ್ಷಾತೀತ ಮತ್ತು ಜಾತ್ಯಾತೀತ ಅದರಿಂದಾಗಿಯೇ ಅವರಿಗೆ ಈ ಮಟ್ಟದ ಜನಬೆಂಬಲ ವ್ಯಕ್ತವಾಗುತ್ತಿರುವುದು. ಈ ಹೋರಾಟಕ್ಕೆ ಬೆಂಬಲ ಸೂಚಿಸಿ ಬರುವ ಜನರಿಗೆ ಭ್ರಷ್ಟಾಚಾರದ ವಿರುದ್ದ ಭಾರತ ಸಂಘಟನೆಯ ಕಾರ್ಯಕರ್ತರು ಲೋಕಪಾಲ್ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಈ ಹೋರಾಟ  ಭ್ರಷ್ಟಗೊಂಡಿರುವ ಇಡೀ ವ್ಯವಸ್ಥೆಯ ವಿರುದ್ದದ ಜನರ ಸಾತ್ವಿಕ ಆಕ್ರೋಶ. ಅಣ್ಣಾ ಹಜಾರೆ ಇಲ್ಲಿ ನೆಪ ಮಾತ್ರ. ಜನರ ಆಕ್ರೋಶಕ್ಕೆ ಒಬ್ಬ ನಾಯಕ ಬೇಕಾಗಿತ್ತು. ಅದನ್ನು ಅಣ್ಣ ಹಜಾರೆ ಯಶಸ್ವಿಯಾಗಿಯೇ ಮಾಡುತ್ತಿದ್ದಾರೆ. ಅಣ್ಣನನ್ನು ಬಂಧಿಸಿ ನಂತರ ಬಿಡುಗಡೆ ಮಾಡಿ ಈಗ ಇಂಗು ತಿಂದ ಮಂಗನಂತಾಗಿರುವ ಕೇಂದ್ರ ಸಕರ್ಾರ ಈಗಲಾದರೂ ಪ್ರಬಲ ಜನಲೋಕಪಾಲ್ ಮಸೂದೆ ಜಾರಿಗೊಳಿಸಲು ಚಿಂತಿಸಬೇಕಾಗಿದೆ.
ಇನ್ನು ಅಣ್ಣಾ ಹಾಜಾರೆಯವರು ಮಾಡುತ್ತಿರುವ ಹೋರಾಟವನ್ನು ಪ್ರಜಾಪ್ರಭುತ್ವ, ಸಂವಿದಾನ ಮತ್ತು ಸಂಸತ್ತಿಗೆ ವಿರುದ್ದವಾದುದು ಎಂಬ ವಾದವನ್ನು ಕಾಂಗ್ರೆಸ್ಸಿಗರು ಹರಿಯಬಿಡುತ್ತಿದ್ದಾರೆ. 2ಜಿ ಹಗರಣ, ಕಾಮನ್ ವೆಲ್ತ್ ಹಗರಣ, ಆದರ್ಶ ಹೌಸಿಂಗ್ ಹಗರಣಗಳಲ್ಲಿ ಕೋಟ್ಯಾಂತರ ಹಣವನ್ನು ಇದೇ ರಾಜಕಾರಣಿಗಳು ತಿಂದು ತೇಗುತ್ತಿದ್ದಾಗ ಇವರಿಗೆ ಪ್ರಜಾಪ್ರಭುತ್ವ ನೆನಪಾಗಲಿಲ್ಲ. ಯಾವುದೇ ರಾಜಕೀಯ ಪಕ್ಷಗಳಿಗೂ ಪ್ರಬಲ ಲೋಕಪಾಲ ಬೇಕಿಲ್ಲ. ಅದಕ್ಕಾಗಿಯೇ ಈಗ ಇಲ್ಲ ಸಲ್ಲದ ವಾದಗಳನ್ನು ಮಾಡುತ್ತಿದ್ದಾರೆ. ಅಣ್ಣಾ ಹಜಾರೆಯವರು ಉಪವಾಸ ಕೂತು ಸಕರ್ಾರವನ್ನು ಬ್ಲಾಕಮೇಲ್ ಮಾಡುತ್ತಿದ್ದಾರೆ ಎಂಬುದು ಕಾಂಗ್ರೆಸ್ಸಿಗರ ಮತ್ತೊಂದು ಆರೋಪ. ಜನರ ತೆರಿಗೆ ದುಡ್ಡನ್ನು ಹಾಡು ಹಗಲೇ ದರೋಡೆ ಮಾಡುತ್ತಿದ್ದವರಿಗೆ ಜನಲೋಕಪಾಲ್ ಬಂದರೆ ಅದು ಸಾಧ್ಯವಾಗುವುದಿಲ್ಲ ಎಂಬ ಆತಂಕ. ಅದೂ ಅಲ್ಲದೇ ಅಣ್ಣ ಹಜಾರೆಯವರೂ ಸಹ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿಕೆಗಳನ್ನು ನೀಡಲಾಯಿತು. ಹಜಾರೆಯವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ಮೋದುಲು ಎಲ್ಲರೂ ಒಮ್ಮೆ ಆತ್ಮ ನಿವೇದನೆ ಮಾಡಿಕೊಳ್ಳುವುದು ಉತ್ತಮ. ಅಣ್ಣನಿಗೆ ದಿನಕಳೆದಂತೆ ವ್ಯಕ್ತವಾಗುತ್ತಿರುವ ಬೆಂಬಲದಿಂದ ಮುಜುಗರಕ್ಕೀಡಾಗಿರುವ ಕೇಂದ್ರ ಅಣ್ಣಾ ಮತ್ತು ಅವರ ತಂಡದ ವಿರುದ್ದ ಹೇಳಿಕೆಗಳನ್ನು ನೀಡುತ್ತಾ ಹೋರಾಟವನ್ನು ಹತ್ತಿಕ್ಕುವ, ದಿಕ್ಕುತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಹೋರಾಟದಲ್ಲಿ ಪಾಲ್ಗೊಂಡಿರುವ ಜನಸ್ತೋಮ

ಈಗ ಸಕರ್ಾರ ಅಣ್ಣಾ ನೀಡಿರುವ 30 ನೇ ತಾರೀಕಿನ ಗಡುವಿನ ಒಳಗಾಗಿ ಜನಲೋಕಪಾಲ್ ಮಸೂದೆಯನ್ನು ಜಾರಿಗೆ ತರಲು ಸಾಧ್ಯವಿಲ್ಲ. ಅವಸರವಾಗಿ ಕಾಯಿದೆಗಳನ್ನು ರೂಪಿಸಲು ಆಗುವುದಿಲ್ಲ, ಜನಲೋಕಪಾಲ್ ಕರಡನ್ನು ಸ್ಥಾಯಿ ಸಮಿತಿ ಮುಂದಿಟ್ಟು ನಂತರ ಮಂಡಿಸಬೇಕು ಎನ್ನುತ್ತಿದೆ. ಸಕರ್ಾರ ತನಗೆ ಬೇಕೆಂದಾಗ ಕೇವಲ ಹತ್ತು ನಿಮಿಷಗಳಲ್ಲಿ ಹತ್ತಾರು ಮಸೂದೆಗಳನ್ನು ಮಂಡಿಸಲು ಸಾಧ್ಯವಾಗುವುದಾದರೆ ಜನಲೋಕಪಾಲ್ ಮಸೂದೆಯನ್ನು ಮಂಡಿಸಲು ಮಾತ್ರ ಯಾಕೆ ಸಾಧ್ಯವಿಲ್ಲ. ಯಾಕೆಂದರೆ ಸಕರ್ಾರಕ್ಕೆ ಜನಲೋಕಪಾಲ್ ಮಂಡಿಸುವ ಇಚ್ಚಾಶಕ್ತಿಯೇ ಇಲ್ಲ. ಇನ್ನು ಮಾತಿಗೆ ಮೋದಲು ನಾವೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎನ್ನುವ ಬಿ.ಜೆ.ಪಿ ಇಲ್ಲಿಯವರೆಗೂ ಜನಲೋಕಪಾಲ್ ಬಗ್ಗೆ ಯಾವುದೇ ನಿಲುವನ್ನು ತಗೆದುಕೊಂಡಿಲ್ಲ. ಯಾಕೆಂದ್ರೆ ಅವರಿಗೂ ಲೋಕಪಾಲ್ ಬೇಕಿಲ್ಲ. ಕನರ್ಾಟಕದ ಗಣಿ ದೂಳಿನಲ್ಲಿ ಮಿಂದು ಹೋಗಿರುವ ಘಟ್ಕರಿಯಂತಹ ವ್ಯಕ್ತಿ ಅಧ್ಯಕ್ಷಗಾದಿಯಲ್ಲಿರುವಾಗ ಮತ್ತು ಸ್ವತಃ ಭ್ರಷಚಾರ ಆರೋಪದಲ್ಲಿ ಸಿಲುಕಿರುವ ಯಡಿಯೂರಪ್ಪ ಹಜಾರೆಯವರ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆ ಮಾಡ್ತೀನಿ ಅಂತ ಹೇಳಿ ಅದು ಸಾಧ್ಯವಾಗದಿದ್ದಾಗ ಬೀದಿಯಲ್ಲಿ ನಿಂತು ಜನಲೋಕಪಾಲ್ಗಾಗಿ ಹೋರಾಟ ಮಾಡಿದರೆ ಏನೂ ಆಗುವುದಿಲ್ಲ ಸಂಸತ್ತಿನಲ್ಲಿ ಚಚರ್ೆಯಾಗಬೇಕು ಅನ್ನುತ್ತಿದ್ದಾರೆ ಇಂತಹ ಬಿ.ಜೆ.ಪಿ ಯಿಂದ ಏನು ತಾನೆ ಬಯಸಲು ಸಾಧ್ಯ. ಈ ದೇಶದ ಭ್ರಷ್ಟ ವ್ಯವಸ್ಥೆ ಸರಿಯಾಗಬೇಕಾದರೆ ಜನಲೋಕಪಾಲದಂತಹ ಮಸೂದೆ ಜಾರಿಯಾಗಲೇ ಬೇಕು. ಈ ಹೋರಾಟವನ್ನು ಟೀಕಿಸಿ ಪ್ರಚಾರ ಪಡೆಯಲೆತ್ನಿಸುತ್ತುರುವವರು ದಯವಿಟ್ಟು ಈ ದೇಶದ ಸಾಮಾನ್ಯ ಜನರು ಭ್ರಷ್ಟ ವ್ಯವಸ್ಥೆಯಿಂದ ಅನುಭವಿಸುತ್ತಿರುವ ಕಷ್ಟವನ್ನೊಮ್ಮೆ ನೋಡಬೇಕು. ಈ ಕಾಯಿದೆಯಿಂದ ಭ್ರಷ್ಟಾಚಾರ ಸಮಸ್ಯೆ ಇನ್ನಿಲ್ಲದಂತೆ ಪರಿಹಾರವಾಗುತ್ತದೆ ಎಂದೇನೂ ನಾನು ಹೇಳುತ್ತಿಲ್ಲ ಆದರೆ ಆ ದಿಕ್ಕಿನಲ್ಲಿ ಪರಿಣಾಮಕಾರಿ ಬದಲಾವಣೆಯನ್ನು ನಾವು ನಿರೀಕ್ಷಿಸಬಹುದು.

ಈ ಬುದ್ದಿಜೀವಿಗಳ ಮೂರ್ಖತನಕ್ಕೆ ಏನೆನ್ನಬೇಕು, ಅಫ್ಜಲ್ ಗುರುವಿಗೆ ಗಲ್ಲು ಬೇಡವಂತೆ

2001 ರ ಸಂಸತ್ ಭವನದ ಮೇಲಿನ ದಾಳಿಯ ರುವಾರಿಗೆ ಮರಣದಂಡನೆ ಕಾಯಂಗೊಳಿಸಿ ಗೃಹ ಇಲಾಖೆ ಆದೇಶ ಹೊರಡಿಸಿದೆ. ಆದರೆ ನಮ್ಮ ದೇಶದ ಕೆಲವು ಸ್ವಯಂಘೋಷಿತ ಬುದ್ದಿಜೀವಿಗಳಿಗೆ ಆತನನ್ನು ಗಲ್ಲಿಗೇರಿಸಬಾರದಂತೆ. ಮಾನವೀಯತೆಯ ಆಧಾರದ ಮೇಲೆ ಆತನಿಗೆ ವಿದಿಸಿರುವ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕಂತೆ. ಇಂತಹ ಮೂರ್ಖ ಬುದ್ದಿ ಜೀವಿಗಳಿಗೆ ಏನೆನ್ನಬೇಕು. ಸಂಸತ್ ಭವನದ ಮೇಲೆ ನೆಡೆದ ದಾಳಿ ಭಾರತದ ಸಾರ್ವಭೌಮತೆಯ ಮೇಲೆ ನೆಡೆದ ದಾಳಿ,

ದಾಳಿಯ ಭೀಕರತೆ

ಭಾರತದ ಸ್ವಾಭಿಮಾನದ ಮೇಲೆ ನೆಡೆದ ಹಲ್ಲೆ ಎಂಬುದನ್ನು ಈ “ದುಬರ್ುದಿ”್ದ ಜೀವಿಗಳೇಕೆ ಅರ್ಥ ಮಾಡಿಕೊಳ್ಳುತ್ತಿಲ್ಲ. ಇನ್ನು ಕೆಲವರ ಪ್ರಕಾರ ಅಫ್ಜಲ್ ಗುರುವನ್ನು ಕಾಶ್ಮೀರದ ಹೋರಾಟಗಾರನಂತೆ, ಮಹಾನ್ ಮುಗ್ದನಂತೆ ಬಿಂಬಿಸುತ್ತಿರುವುದು ಮಾತ್ರ ಅಕ್ಷಮ್ಯ. ಸುಪ್ರೀಂಕೋಟರ್್ ದೆಹಲಿ ಹೈಕೋಟರ್್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದು 2004 ರಲ್ಲೇ ಅಫ್ಜಲ್ ಗುರುವಿಗೆ ಗಲ್ಲಿ ಶಿಕ್ಷೆ ಕಾಯಂಗೊಳಿಸಿತ್ತು. ಆದರೆ ಅಫ್ಜಲ್ ಗುರು ಕ್ಷಮಾದಾನ ಕೋರಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದ. ಮುಸ್ಲಿಮರ ಮನವೊಲಿಸಲು ಮುಂದಾದ ಕಾಂಗ್ರೆಸ್ ಸಕರ್ಾರ ಗಲ್ಲು ಶಿಕ್ಷೆ ವಿದಿಸಲು ಮೀನಾಮೇಶ ಏಣಿಸುತ್ತ ಅನಗತ್ಯ ವಿಳಂಬ ಮಾಡಿತು. ಒಂದು ವೇಳೆ ಸಕರ್ಾರ ಆತನ ಕ್ಷಮಾದಾನದ ಮನವಿಯನ್ನು ಸ್ವೀಕರಿಸಿ ಕ್ಷಮಾದಾನ ನೀಡಿದರೆ ದೇಶದ ಜನರ

ಅಫ್ಜಲ್ ಗುರು

ಪ್ರತಿರೋದವನ್ನೆದುರಿಬೇಕಾಗುತ್ತಿತ್ತು. ಅದನ್ನರಿತೇ ಸಕರ್ಾರ ವಿದಿಯಿಲ್ಲದೆ ಆತನಿಗೆ ಶಿಕ್ಷೆಯನ್ನು ಕಾಯಂಗೊಳಿಸಿದೆ. ಅಫ್ಜಲ್ ಗೆ ಗಲ್ಲು ಶಿಕ್ಷೆ ವಿದಿಸಬೇಕೆಂಬ ಒತ್ತಡ ಕಾಂಗ್ರೆಸ್ ಸಕರ್ಾರ ಮೇಲೆ 2004 ರಿಂದಲೂ ಇತ್ತು. ಅದೇ ರೀತಿ ಆತ ನಿರಪರಾಧಿ, ಮುಗ್ದ ಎಂದು ವಾಧಿಸುವವರೂ ಸೃಷ್ಟಿಯಾದರು. ಅರುಂದತಿ ರಾಯ್ ಮತ್ತು ಪ್ರಫುಲ್ ಬಿದ್ವಾಯ್ ರಂತಹ ಸ್ವಯಂ ಘೋಷಿತ ಬುದ್ದಿ ಜೀವಿಗಳು ದೇಶ ದ್ರೋಹಿ ಅಫ್ಜಲ್  ನಿರಪರಾದಿ ಆತನನ್ನು ಗಲ್ಲಿಗೇರಿಸಬಾರದು ಎಂದು ಬಹಿರಂಗವಾಗಿಯೇ ಬೊಬ್ಬೆ ಹಾಕತೊಡಗಿದರು.
ಆದರೆ ಈಗ ಕೇಂದ್ರ ಸಕರ್ಾರ ಅಫ್ಜಲ್ ಕ್ಷಮಾದಾನದ ಅಜರ್ಿಯನ್ನು ತಿರಸ್ಕರಿಸಿದ ಮೇಲೆ ಮತ್ತೊಮ್ಮೆ ಬುದ್ದಿಜೀವಿಗಳೆನಿಸಿಕೊಂಡವರು ಆತ ನಿರಪರಾಧಿ ಎಂಬ ಹೇಳಿಕೆಗಳನ್ನು ಹರಿಯಬಿಡುತ್ತಿದ್ದಾರೆ. ನಜಕ್ಕೂ ಇಂತವರಿಗೆ ನಾಚಿಕೆಯಾಗಬೇಕು. ಸಂಸತ್ ಭವನದ ಮೇಲಿನ ದಾಳಿಯ ರುವಾರಿ ಅಫ್ಜಲ್ ಗುರುವೇ ಎಂದು ದಾಖಲೆಗಳ ಸಮೇತ ಸಾಭೀತಾಗಿದ್ದರೂ ಸಹ ಪ್ರಚಾರ ಬಯಸುತ್ತಿರುವ ಇಂತಹವರು ವಿಕೃತ ಪ್ರಲಾಪ ಮಾಡತೊಡಗಿದ್ದಾರೆ.

ಆತಂಕದ ಸಂಗತಿ ಎಂದರೆ ಕಾಶ್ಮಿರದ ಕೆಲ ನಾಯಕರುಗಳೂ ಸಹ ಅಫ್ಜಲ್ ನಿರಪರಾಧಿ ಎಂದು ಬಡಬಡಿಸತೊಡಗಿದ್ದಾರೆ. ಅಲ್ಲದೇ ಆತನನ್ನು ಗಲ್ಲಿಗೇರಿಸಿದರೆ ಭಾರತ ಮತ್ತು ಪಾಕಿಸ್ತಾನದ ಶಾಂತಿ ಮಾತುಕತೆಗಳಿಗೆ ಹಿನ್ನೆಡಿಯಾಗುತ್ತದೆ ಎನ್ನುವುದು ಕೆಲವರ ವಾದ. ಒಂದೆಡೆ ಭಯೋತ್ಪಾದನೆಯ ವಿರುದ್ದ ಹೊರಾಟ ಮಾಡುವುದಾಗಿ ಹೇಳಿ ಮತ್ತೊಂದೆಡೆ ಭಯೋತ್ಪಾದಕರನ್ನು ಸಾಕಿ ಭಾರತದ ವಿರುದ್ಧ ಎತ್ತಿಕಟ್ಟುತ್ತಿರುವ ಪಾಕಿಸ್ತಾನದೊಂದಿಕೆ ನಿಜಕ್ಕೂ ಶಾಂತಿ ಮಾತುಕತೆ ಬೇಕಾ? ಇನ್ನು ಅಫ್ಜಲ್ನನ್ನು ನೇಣಿಗೇರಿಸುವುದು ತಪ್ಪೇ ಸರಿಯೇ ಎಂಬ ಬಗ್ಗೆ ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಚಚರ್ೆಗಳಾಗುತ್ತಿವೆ. ಒಬ್ಬ ದೇಶ ದ್ರೋಹಿಯನ್ನೂ ಸಹ ಸಮಥರ್ಿಸಿಕೊಳ್ಳುವವರೂ ಸಹ ಈ ದೇಶದಲ್ಲಿ ಇದ್ದಾರಲ್ಲ ಅದು

ಮಾತ್ರ ವಿಪಯರ್ಾಸ. ಈಗ ಈತನನ್ನು ಗಲ್ಲಿಗೇರಿಸಬಾರದೆಂದು ವಾದಿಸುತ್ತಿರುವವರು ನಾಳೆ ಮುಂಬೈ ಮಾರಣಹೊಮದ ರುವಾರಿ ಕಸಬ್ನನ್ನೂ ಕೂಡ ಗಲ್ಲಿಗೇರಿಸಬೇಡಿ ಮಾನವೀಯತೆಯ ಆದಾರದ ಮೇಲೆ ಬಿಟ್ಟುಬಿಡಿ ಎಂದರೂ ಅಚ್ಚರಿಯಿಲ್ಲ. ಭಯೋತ್ಪಾದಕ ದಾಳಿಗಳು ನೆಡೆದಾಗ ವೀರಾವೇಶದ ಮಾತುಗಳನ್ನಾಡುವವರು ಕೆಲದಿನಗಳ ನಂತರ ಉಗ್ರರ ವಿರುದ್ಧ ಮೃದು ಧೋರಣೆ ತಳೆಯುತ್ತಿದ್ದಾರೆ.
ಆದರೆ ಇಂತಹ ಮೊಂಡುವಾದಗಳನ್ನು ಮಾಡುತ್ತಿರುವ ಮೂರ್ಖರು ಒಮ್ಮೆಯಾದರೂ ಯೋಚನೆ ಮಾಡಬೇಕಾದ್ದೆಂದ್ರೆ ಅವತ್ತು ಸಂಸತ್ ಭವನದ ಮೇಲಿನ ಅಫ್ಜಲ್ ದಾಳಿ ಯಶಸ್ವಿಯಾಗಿದ್ದರೆ ಎಷ್ಟು ಜೀವಗಳು ಬಲಿಯಾಗುತ್ತಿದ್ದವು. ಸಂಸತ್ ನ ಉಭಯ ಸದನಗಳು ದಿನದಮಟ್ಟಿಗೆ ಮುಂದೂಡಿಕಡಯಾಗಿ ಕೇವಲ 40 ನಿಮಿಷಗಳಷ್ಟೇ ಆಗಿತ್ತು ದೇಶದ ಪ್ರಮುಖ ನಾಯಕರು, ಸಂಸದರು ಅಧಿಕಾರಿಗಳು ಇನ್ನೂ ಸಂಸತ್ ಭವನದಲ್ಲಿಯೇ ಇದ್ದರು. ಅಂದು ಉಗ್ರರ ವಿರುದ್ಧ ಹೋರಾಡಿ ಮಡಿದ  ವೀರ ಯೋದರು ಇವರಿಗೆ ಇಂದು ನೆನಪಾಗುತ್ತಿಲ್ಲ. ಮಾನವೀಯತೆಯ ಮಾತುಗಳನ್ನಾಡುತ್ತಾರೆ. ಅಮಾಯಕ ಜನರನ್ನು ವಿನಾಕಾರಣ ಹತ್ಯೆ ನೆಡೆಸುವ ಉಗ್ರರಿಗೆ ಇರದ ಮಾನವೀಯತೆಯ ಪ್ರಶ್ನೆ ಅವರನ್ನು ಶಿಕ್ಷಿಸುವಾಗ ಕೇಳುತ್ತಾರೆ. ನಾಚಿಕೆಯಾಗಬೇಕು ಇಂತಹ ಮೂರ್ಖರಿಗೆ.
ಏನೇ ಆಗಲಿ ಅಫ್ಜಲ್ ಗುರುವೆಂಬ ಕ್ರಿಮಿಯನ್ನು ನೇಣಿಗೇರಿಸಿ ಭಯೋತ್ಪಾದಕರಿಗೆ ಮತ್ತು ಅವರನ್ನು ಹಿಂಬಾಗಿಲ ಮೂಲಕ ಬೆಂಬಲಿಸುತ್ತಿರುವ ಪಾಕಿಸ್ತಾನಕ್ಕೆ ಸಮರ್ಥ ಉತ್ತರ ಕೊಡಲೇ ಬೇಕು.

ಒಳ್ಳೆಯ ದಿನಗಳು ಬರುತ್ತಿವೆಯೇನೊ ಅನಿಸುತ್ತಿದೆ….

ಇತ್ತೀಚೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನೆಡೆಯುತ್ತಿರುವ ಬೆಳವಣೆಗೆಗಳನ್ನ ನೋಡ್ತಾಯಿದ್ರೆ ಜನರಲ್ಲಿ ಆಶಾವಾದ ಮೂಡ್ತಾಯಿದೆಯೇನೊ ಅನ್ಸುತ್ತೆ. ಯಾಕಂದ್ರೆ ಜನರ

ನಮಸ್ತೆ ಹೋಗಿ ಬನ್ನಿ

ದುಡ್ಡನ್ನು ತಿಂದು ತಿಂದು ಅರಗಿಸಿಕೊಳ್ಳಲಾಗದ ಭ್ರಷ್ಟ ರಾಜಕಾರಿಣಿಗಳು, ಅಧಿಕಾರಿಗಳು ಒಬ್ಬೊಬ್ಬರಾಗಿ ಜೈಲು ಸೇರ್ತಾಯಿದ್ದಾರೆ. ಯಡೆಯೂರಪ್ಪ ಭ್ರಷ್ಟತೆಯನ್ನೇ ಮೈಗೂಡಿಸಿಕೊಂಡವರಂತೆ ದುಡ್ಡುಮಾಡಲು ಹೋಗಿ ಈಗ ಅಧಿಕಾರವನ್ನೇ ಕಳ್ಕೊಳ್ಬೇಕಾಯ್ತು. ಗಣಿ ಹಗರಣಮತ್ತು ಜೋತೆಗೆ ಭೂ ಹಗರಣದಲ್ಲಿನ ಅವರ “ಪಾಲು”ನೋಡ್ತಾಯಿದ್ರೆ ಮಾಜಿ ಮುಖ್ಯಮಂತ್ರಿ ಇನ್ನೇನೂ ಜೈಲಿಗೆ ಹೋದ್ರೂ ಸಹ ಅಚ್ಚರಿಯಿಲ್ಲ.

ಸಾಕುಬಿಡಿ ತಿಂದದ್ದು

40 ವರ್ಷಗಳ ಹೋರಾಟದ ಪಲವಾಗಿ ಸಿಕ್ಕಿದ್ದ ಮುಖ್ಯಮಂತ್ರಿ ಪದವಿಯನ್ನ ಹಸಿದ ಮಕ್ಕಳು ತಿನ್ನುವಂತೆ ತಿನ್ನಲು ಹೋಗಿ ಹಾಳುಮಾಡಿಕೊಂಡರು. ಯಡೆಯೂರಪ್ಪ ಮುಖ್ಯಮಂತ್ರಿಯಾದಾಗ ಜನರಲ್ಲಿ ಇವರು ಒಳ್ಳೆಯ ಕೆಲಸ ಮಾಡ್ತಾರೆ ಅನ್ನೊ ನಿರೀಕ್ಷೆಯಿತ್ತು. ಆದ್ರೆ ಅವರು ಮಾಡಿದ್ದಾದ್ರೂ ಏನು? ಗಣಿ ದೂಳನ್ನ ಮೈ ತುಂಬಾ ಹಚ್ಚಿಕೊಂಡ್ರು, ಆದ್ರೆ ಅವರು ಮಾತ್ರಭಂಡತನದಿಂದ ರಾಜ್ಯವನ್ನ ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೆ ತಂದಿದ್ದೀನಿ ಅಂತಾನೇ ಹೇಳ್ತಾಯಿದ್ದಾರೆ. 60 ವರ್ಷದಲ್ಲಿ ಆಗ್ದೇ ಇರೊಅಷ್ಟು ಕೆಲಸವನ್ನ ಕೇವಲ ಮೂರೇ ವರ್ಷದಲ್ಲಿ ಮಾಡಿದ್ದಾರಂತೆ.ಜಟ್ಟಿ ಕೆಳಗೆ ಬಿದ್ರೂ ಮೀಸೆ ಮೀಸೆ ಮಣಾಗಿಲ್ಲ ಅಂದಾಗಾಯ್ತಲ್ವಾ.

ಬಳ್ಳಾರಿಯನ್ನೇ ತಮ್ಮ ಜಹಗೀರನ್ನಾಗಿಸಿಕೊಂಡ್ದುಕ್ರಮವಾಗಿ ಭೂ ತಾಯಿಯ ಒಡಲು ಬಗೆಯುತ್ತಿದ್ದ ರೆಡ್ಡ್ಡಿ ಸಹೋದರರು ಗಣಿಹಗರಣದ ಗುಂಡಿಯಲ್ಲಿ ಬಿದ್ದಿದ್ದಾರೆ. ಈಗ ಅಧಿಕಾರ ಕಳೆದುಕೊಂ ಇನ್ನು ಕಟ್ಟಾ ಸುಭ್ರಮಣ್ಯನಾಯ್ಡು ಮತ್ತು ಆತನ

ಕಟ್ಟಾ... ಕೆಟ್ಟಾ...

ಸಂತಾನ ಜಗಧೀಶ್ ಕಟ್ಟಾ ಬಡ ರೈತರ ಭೂಮಿ ನುಂಗಲು ಹೋಗಿ ಈಗ ಜೈಲು ಸೇರಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು, ಅತಿಯಾಗಿ ತಿಂದವರು ಜೈಲಿನಲ್ಲಿ ಮುದ್ದೆ ಮುರಿಯಲೇಬೇಕು. ರಾಜ್ಯದಲ್ಲಿ ನೆಡೆದ ಈ ಎಲ್ಲ ಹಗರಣಗಳನ್ನು ದಾಖಲೆ ಸಮೇತ ಬಯಲಿಗೆಳೆದ ಸಂತೋಷ್ ಹೆಗ್ಡೆಯವರ ಕಾರ್ಯ ಧಕ್ಷತೆಯನ್ನ ಎಲ್ರೂ ಒಪ್ಪಿಕೊಳ್ಳಲೇಬೇಕು.

ಏನೊ ಮಾಡಲು ಹೋಗಿ....

ಹಗರಣಗಳ ಮಹಾತಾಯಿ ಎಂದೇ ಕುಖ್ಯಾತಿ ಪಡಿದಿರುವ 2ಜಿ ಹಗರಣದಿಂದಾಗಿ ಎ.ರಾಜ, ಕರುಣಾನಿಧಿ ಪುತ್ರಿ ಕನ್ನಿಮೊಳಿಯಂತ ಘಟಾನುಘಟಿ ರಾಜಕಾರಿಣಿಗಳು, ಅಧಿಕಾರಿಗಳು ಮತ್ತು ಕಾಪರ್ೊರೇಟ್ ಮಂದಿ ಜೈಲಿನ ಕಂಬಿ ಏಣಿಸುತ್ತಿದ್ದಾರೆ. ಯಾವಾಗಲೂ ಕೇಂದ್ರ ಸಕರ್ಾರದ ಅಣತಿಯಂತೆಯೇ ಕೆಲಸ ಮಾಡ್ತಾಯಿದ್ದ ಸಿ.ಬಿ.ಐ 2ಜಿ ಹಗರಣದ ತನಿಖೆಯಲ್ಲಿ ಚುರುಕಾಗಿ ಕೆಲಸ ಮಾಡ್ತಾಯಿದೆ.ಯಾಕಂದ್ರೆ ತನಿಕೆ ನೆಡಿತಾಯಿರೋದು ಸುಪ್ರೀಂಕೋಟರ್್ನ ಮೂಗಿನಡಿಯಲ್ಲಿ.

ಎಷ್ಟು ಯೋಚನೆ ಮಾಡಿದ್ರು ಅಷ್ಟೇನೆ

ಇನ್ನು ಮುಂಬೈನಲ್ಲಿ ಕಾಗರ್ಿಲ್ ಯುದ್ದದಲ್ಲಿ ಮಡಿದ ಕುಟುಂಬಗಳವಾಸಕ್ಕಾಗಿ ನಿಮರ್ಿಸುತ್ತಿದ್ದ ಆದರ್ಶ ಹೌಸಿಂಗ್ಹಗರಣದಲ್ಲಿ ಸಿಕ್ಕು ಮಹಾರಾಷ್ಟರ ಮುಖ್ಯಮಂತ್ರಿಯಾಗಿದ್ದ ಅಶೋಕ್ ಚೌಹಾಣ್ ಅಧಿಕಾರ ಕಳ್ಕೊಂಡ್ರು. ಕಾಮನ್ವೆಲ್ತ್ಕ್ರೀಡಾ ಕೂಟದ ಅವ್ಯವಹಾರದಲ್ಲಿ ಈಗಾಗಲೇ ಕಲ್ಮಾಡಿ ಕಂಬಿ ಏಣಿಸುತ್ತಿದ್ದಾರೆ. ಈಗ ಕಾಮನ್ವೆಲ್ತ್ ಹಗರಣದ ನಂಟು ದೆಹಲಿ ಮುಖ್ಯಮಂತ್ರಿಯನ್ನೂ ಮುತ್ತಿಕೊಳ್ತಿದೆ. ಜನರಿಂದ ಆಯ್ಕೆಯಾದವರು ಜನರ ದುಡ್ಡನ್ನು ಎಷ್ಟು ಸಾಧ್ಯವೊ ಅಷ್ಟನ್ನೂ ತಿನ್ನುತ್ತಿರುವವರಿಗೆ ಈ ಬೆಳವಣಿಗೆಗಳು ನಿಜವಾಗ್ಲು ಒಂದು ಒಳ್ಳೆ ಪಾಠ. ಈ ಎಲ್ಲ ಬೆಳವಣಿಗೆಗಳನ್ನೂ ಗಮನಿಸಿದ್ರೆ ಒಳ್ಳೆಯದಿನಗಳು ಬರ್ತಿವೆಯೇನೊ ಅನಸುತ್ತೆ

 

%d bloggers like this: