ಮೋದಿ 20 ಲಕ್ಷ ಕೋಟಿ ಪ್ಯಾಕೇಜ್, ಅಂಗೈಯಲ್ಲಿ ಆಕಾಶ..?

1111111ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿದಾಗ ಲಾಕ್​ಡೌನ್​ನಿಂದಾಗಿ ಸಂಕಷ್ಟದಲ್ಲಿದ್ದ ಬಡವರು ನಿಟ್ಟುಸಿರು ಬಿಟ್ಟಿದ್ದರು. ಕೆಲಸವಿಲ್ಲದೇ ಬರಿಗೈ ಆಗಿದ್ದವರು ಸರ್ಕಾರದಿಂದ ಧನ ಸಹಾಯ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿದ್ದರು. ಅವತ್ತು ಪ್ರಧಾನಿ ಮಾತನಾಡಿದ ರೀತಿಯೂ ಈ ನಿರೀಕ್ಷೆ ಹೆಚ್ಚು ಮಾಡೋದಕ್ಕೆ ಕಾರಣವಾಗಿತ್ತು. ಆತ್ಮ ನಿರ್ಬರ ಭಾರತ ಅಂತ ಅರ್ಥವಾಗದ ಭಾಷೆಯಲ್ಲಿ ಹೇಳಿದಾಗಲೂ ಇನ್ನು ಮುಂದೆ ನಮ್ಮ ಹಸಿವು ನೀಗಲಿದೆ ಅಂತಲೇ ಅಂದುಕೊಂಡಿತ್ತು ದೇಶ. ಆದ್ರೆ ಐದು ಹಂತಗಳಲ್ಲಿ ನಿರ್ಮಲಾ ಸೀತಾರಾಮನ್ 20.97 ಲಕ್ಷ ಕೋಟಿ ಪ್ಯಾಕೇಜ್​ನ ವಿವರಗಳನ್ನ ದೇಶದ ಮುಂದಿಟ್ಟಾಗ ಅದು ಜನ ಸಾಮಾನ್ಯರಿಗೆ ಅರ್ಥವಾಗಲೇ ಇಲ್ಲ. ಬಡವರು ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಬರಬಹುದು ಅಂತ ಕಾದಿದ್ದೇ ಆಯ್ತು. ನಿರ್ಮಲಾ ಸೀತಾರಾಮನ್ ಆ ಬಗ್ಗೆ ಮಾತನಾಡಲೇ ಇಲ್ಲ. ಇಂಥಾ ಸಂದರ್ಭದಲ್ಲಿ ಬಡವನ ಬೆನ್ನಿಗೆ ನಿಲ್ಲದೆ ಇನ್ಯಾವ ಸಂದರ್ಭದಲ್ಲಿ ನಿಲ್ಲೋದಕ್ಕೆ ಸಾಧ್ಯ..? ಲಾಕ್​ಡೌನ್ ಮಾಡಿ ಇಡೀ ದೇಶಕ್ಕೆ ದೇಶವನ್ನೇ ಬಂದ್ ಮಾಡಿದಾಗ ಅದನ್ನ ಒಪ್ಪಿಕೊಂಡು ಪಾಲಿಸಿದರಲ್ಲ ಅವರಿಗೆ ಸಹಾಯ ಮಾಡಬೇಕಿದ್ದದ್ದು ಸರ್ಕಾರದ ಕರ್ತವ್ಯ.
 
ಪ್ಯಾಕೇಜ್​ನ ಅರ್ಧ ಭಾಗ ಸಾಲದ ರೂಪದಲ್ಲಿ..!
 
ನರೇಂದ್ರ ಮೋದಿ ಸರ್ಕಾರ ಘೋಷಿಸಿದ 20.97 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ಶೇ 50% ಗಿಂತಲೂ ಹೆಚ್ಚು ಮೊತ್ತ ಸಾಲ ಮತ್ತು ಸಾಲದ ಗ್ಯಾರಂಟಿ ರೂಪದಲ್ಲೇ ಇದೆ. ಉಳಿದದ್ದು ಹೂಡಿಕೆ ಘೋಷಣೆಗಳು ಮತ್ತೊಂದಿಷ್ಟು ಸುಧಾರಣಾ ಕ್ರಮಗಳು. ನಿರ್ಮಲಾ ಸೀತಾರಾಮನ್ ಐದು ದಿನಗಳ ಕಾಲ ಭೂಮಿಯಾಳದಿಂದ ಹಿಡಿದು ಬಾಹ್ಯಾಕಾಶದವರೆಗೂ ಘೋಷಣೆಗಳನ್ನ ಮಾಡಿಬಿಟ್ಟರು. ಆದ್ರೆ ತುತ್ತು ಅನ್ನಕ್ಕಾಗಿ, ದಿನ ನಿತ್ಯದ ಅಗತ್ಯಗಳಿಗಾಗಿ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದವರಿಗೆ ಏನೆಂದರೆ ಏನೂ ಸಿಗಲೇ ಇಲ್ಲ. ನಿರ್ಮಲಾ ಭಾಷಣ, ಬಜೆಟ್ ಭಾಷಣದ ಮುಂದಿನ ಭಾಗದಂತಿತ್ತೇ ಹೊರತು ಲಾಕ್​ಡೌನ್​ನಿಂದ ಕುಸಿದುಬಿದ್ದವರನ್ನ ಮೇಲೆತ್ತುವ ಘೋಷಣೆಗಳೇ ಬರಲಿಲ್ಲ. 20 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ಆರ್ಥಿಕ ಚೇತರಿಕೆಗಾಗಿ ಹಲವು ಘೋಷಣೆಗಳನ್ನ ಮಾಡಿದ್ದು ಒಳ್ಳೆಯದೇ. ಇದರಿಂದ ಉದ್ಯೋಗ ಸೃಷ್ಟಿ ಗಣನೀಯ ಪ್ರಮಾಣದಲ್ಲಿ ಆಗಲಿದೆ ಅನ್ನೋದು ನಿಜವೇ. ಆದ್ರೆ ಇವತ್ತಿನ ಹಸಿವು ನೀಗಿಸುವ ಕೆಲಸ ಸರ್ಕಾರದ ಮೊದಲ ಆಧ್ಯತೆಯಾಗಬೇಕಿತ್ತು.
 
20 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ಬಡವನಿಗೆಷ್ಟು..?
 
ಒಟ್ಟಾರೆ 30 ಸಾವಿರ ಕೋಟಿಯಷ್ಟು ದುಡ್ಡನ್ನ ನೇರ ನಗದು ಪಾವತಿ ಮೂಲಕ ಬಡವರ ಖಾತೆಗೆ ಹಾಕಿದ್ದೇವೆ ಅಂತ ಹೇಳುತ್ತೆ ಸರ್ಕಾರ. 20 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ಬಡವರಿಗೆ ಉಚಿತ ಪಡಿತರ ನೀಡುವ ಘೋಷಣೆ ಮಾಡಲಾಯ್ತು. ಲಾಕ್​ಡೌನ್ ಸಂದರ್ಭದಲ್ಲಿ ಹಸಿದವರ ಹೊಟ್ಟೆ ತುಂಬಿಸೋ ಕೆಲಸವನ್ನ ಸರ್ಕಾರಕ್ಕಿಂತಲೂ ಈ ದೇಶದ ಜನರೇ ಹೆಚ್ಚು ಮಾಡಿದ್ದಾರೆ. ವಿಧವಾ ವೇತನ, ವೃದ್ಧಾಪ್ಯ ವೇತನವನ್ನೂ ಮೂರು ತಿಂಗಳು ಹೆಚ್ಚುವರಿಯಾಗಿ ನೀಡುವ ಘೋಷಣೆ ಮಾಡಿತು. ಇದಕ್ಕಾಗಿ ಸರ್ಕಾರ 1,400 ಕೋಟಿ ಖರ್ಚು ಮಾಡಿದೆ. 7.47 ಕೋಟಿ ರೈತರ ಖಾತೆಗಳಿಗೆ 14,946 ಕೋಟಿ ಹಣವನ್ನ ಸರ್ಕಾರ ಹಾಕಿದೆ. ಆದ್ರೆ ಈ ಯೋಜನೆ ಮೊದಲೇ ಇತ್ತು, ಈ ಸಂದರ್ಭದಲ್ಲೂ ಮುಂದುವರಿಸಿದೆಯಷ್ಟೆ. 2.17 ಕೋಟಿ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ 3,071 ಕೋಟಿ ಖರ್ಚು ಮಾಡಿದ್ದೇವೆ ಅನ್ನುತ್ತೆ ಸರ್ಕಾರ. ಮಹಿಳೆಯರ ಜನ್ ಧನ್ ಬ್ಯಾಂಕ್ ಖಾತೆಗಳಿಗೆ ಮೂರು ತಿಂಗಳ ಕಾಲ 500 ರೂ ನೀಡುತ್ತೇವೆ ಅಂದಿತು ಸರ್ಕಾರ. ಸರ್ಕಾರದ ಅಂಕಿ ಅಂಶಗಳ ಪ್ರಕಾರ 19.86 ಕೋಟಿ ಮಹಿಳೆಯರ ಖಾತೆಗೆ 9,930 ಕೋಟಿಯಷ್ಟು ಹಣ ಹಾಕಲಾಗಿದೆ. ದುಡಿಯುತ್ತಿದ್ದ ಕೈಗಳೆಲ್ಲ ಮನೆಯಲ್ಲೇ ಕುಳಿತಿರುವಾಗ ಮಹಿಳೆಯ ಖಾತೆಗೆ ತಿಂಗಳಿಗೆ 500 ರೂ ಕೊಟ್ಟರೆ ಜೀವನ ನಡೆಸೋದಕ್ಕೆ ಸಾಧ್ಯವಾಗುತ್ತಾ..? ಆದ್ರೆ ಬೇಡಿಕೆ ಇದ್ದದ್ದು ಬಡವರ ಖಾತೆಗೆ ತಿಂಗಳಿಗೆ ಕನಿಷ್ಟ 5 ಸಾವಿರ ಹಣ ಹಾಕಬೇಕು ಅನ್ನೋದು. ಆದ್ರೆ ಸರ್ಕಾರ ಈ ಬಗ್ಗೆ ತುಟಿಬಿಚ್ಚಲೇ ಇಲ್ಲ. ಸರ್ಕಾರ ಬಡವರಿಗಾಗಿ ಅಕ್ಕಿ, ಗೋದಿ, ಬೇಳೆ ಕೊಟ್ಟಿತೇನೋ ನಿಜ. ಇದರಾಚೆಗೂ ಜೀವನ ನಡೆಸಬೇಕಲ್ಲ. ಅವತ್ತಿನ ದುಡಿಮೆಯಿಂದ ಅವತ್ತಿನ ಬದುಕು ದೂಡುವವರ ಸಂಖ್ಯೆಯೇ ದೇಶದಲ್ಲಿ 25 ಕೋಟಿಗೂ ಹೆಚ್ಚಿದೆ. ಅಂಥವರು ಸರ್ಕಾರ ಕೊಟ್ಟ ಪಡಿತರವನ್ನಷ್ಟೇ ತಿಂದು ಜೀವನ ಮಾಡೋದಕ್ಕೆ ಸಾಧ್ಯವಾ..? ಮೋದಿ ಸರ್ಕಾರ ಮಾಡಿದ್ದ ಇಷ್ಟೆಲ್ಲ ಯೋಜನೆಗಳಿಗೆ ಖರ್ಚಾಗಿದ್ದು ಕೇವಲ 1.92 ಲಕ್ಷ ಕೋಟಿಯಷ್ಟೇ.. ಉಳಿದದ್ದು ಈ ದೇಶದ ಬಡವರಿಗೆ ಮುಟ್ಟೋ ಲಕ್ಷಣಗಳೂ ಇಲ್ಲ.
 
20 ಲಕ್ಷ ಕೋಟಿಯಲ್ಲಿ ಬಡವರಿಗೆ 2 ಲಕ್ಷ ಕೋಟಿ ಸಾಕಿತ್ತು.
 
ಲಾಕ್​ಡೌನ್​ನಿಂದ ಸಂಕಷ್ಟದಲ್ಲಿದ್ದವರಿಗೆ ಒಂದು ಬಾರಿಯ ಪರಿಹಾರವಾಗಿ 5 ಸಾವಿರ ರೂಪಾಯಿ ಹಣವನ್ನ ಬಡವರ ಖಾತೆಗೆ ಹಾಕಬೇಕು ಅನ್ನೋ ಸಲಹೆ ಕೊಟ್ಟಿತ್ತು ಭಾರತೀಯ ಕೈಗಾರಿಕಾ ಒಕ್ಕೂಟ. ಈ ಸಲಹೆಯ ಪ್ರಕಾರ ಲಾಕ್​ಡೌನ್ ನಿಂದ ಹಣವಿಲ್ಲದೇ ಬರಿಗೈ ಆಗಿದ್ದ ಬಡವರು, ಕಾರ್ಮಿಕರಿಗೆ ನೇರ ನಗದು ವರ್ಗಾವಣೆ ಮೂಲಕ ಹಣ ಕೊಡಬೇಕು. 40 ಕೋಟಿ ಬಡ ಜನರ ಬ್ಯಾಂಕ್ ಖಾತೆಗೆ ಒಂದು ಬಾರಿಯ ಪರಿಹಾರವಾಗಿ 5 ಸಾವಿರ ಜಮಾ ಮಾಡಬೇಕು, ಅಥವಾ ಹತ್ತು ಸಾವಿರ ಪರಿಹಾರದಂತೆ 20 ಕೋಟಿ ಬಡವರ ಖಾತೆಗೆ ಹಣ ಹಾಕಬೇಕು ಅಂತ ಸಲಹೆ ನೀಡಿತ್ತು. ಈ ಯೋಜನೆಯನ್ನ ಜಾರಿಗೆ ತರೋದಕ್ಕೆ ಸರ್ಕಾರಕ್ಕೆ ಬೇಕಾಗಿರೋ ಹಣ 2 ಲಕ್ಷ ಕೋಟಿಯಷ್ಟೇ. 20 ಲಕ್ಷ ಕೋಟಿಯ ಪ್ಯಾಕೇಜ್​ ನಲ್ಲಿ 2 ಲಕ್ಷ ಕೋಟಿಯನ್ನ ಬಡವರ ಖಾತೆಗೆ ಹಾಕಿದ್ದರೆ, ಈ ದೇಶದ ಬಡವ ಮೋದಿ ಸರ್ಕಾರವನ್ನ ಅದೆಷ್ಟು ವರ್ಷ ನೆನೆಯುತ್ತಿದ್ದನೋ… 13 ಕೋಟಿ ಬಡವರಿಗೆ ಒಂದು ಬಾರಿಯ ಪರಿಹಾರ ಅಂತ 5 ಸಾವಿರ ಹಣವನ್ನ ಬಡವರ ಖಾತೆಗೆ ಹಾಕಿದ್ದರೂ ಅದರಿಂದ ಸರ್ಕಾರಕ್ಕೆ ಹೊರೆಯಾಗುತ್ತಿದ್ದದ್ದು 65 ಸಾವಿರ ಕೋಟಿ.
 
ಕೇಂದ್ರದ ಪ್ಯಾಕೇಜ್ 10% ಜಿಡಿಪಿಯಷ್ಟಲ್ಲ ಕೇವಲ 1%..?
 
ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಿಸಿದಾಗ ಜಿಡಿಪಿಯ ಶೇ.10 ರಷ್ಟು ಪ್ಯಾಕೇಜ್ ಘೋಷಿಸಿದ್ದೇವೆ ಅಂತ ಹೇಳಿತ್ತು. ಜಗತ್ತಿನಲ್ಲೇ ಮೂರನೇ ಅತಿದೊಡ್ಡ ಆರ್ಥಿಕ ಪ್ಯಾಕೇಜ್ ಅಂದಿತ್ತು ಸರ್ಕಾರ. ದಿನ ಕಳೆದಂತೆ ಪ್ಯಾಕೇಜ್​ನ ಅಸಲಿಯತ್ತು ಬಯಲಾಗುತ್ತಿದೆ. ಪ್ಯಾಕೇಜ್​ನ ಬಹುಪಾಲು ಮೊತ್ತ ಆರ್​ಬಿಐ ನೀತಿ, ಸಾಲ, ಸಾಲದ ಗ್ಯಾರಂಟಿ, ಹೂಡಿಕೆ ರೀತಿಯಲ್ಲೇ ಇದೆ. ಹೀಗಾಗಿ ಪ್ಯಾಕೇಜ್ ಜಿಡಿಪಿಯ ಹತ್ತರಷ್ಟಲ್ಲ, ಕೇವಲ ಒಂದು ಪರ್ಸೆಂಟ್ ಅಷ್ಟೆ ಅನ್ನೋ ಅಭಿಪ್ರಾಯ ರೇಟಿಂಗ್ ಏಜೆನ್ಸಿಗಳು ಮತ್ತು ಆರ್ಥಿಕ ತಜ್ಞರದ್ದು. ಒಂದು ಪರ್ಸೆಂಟ್ ಅಂದ್ರೆ ಕೊರೊನಾ ಪ್ಯಾಕೇಜ್ 2 ಲಕ್ಷ ಕೋಟಿಯಷ್ಟೇ ಆಗಲಿದೆ. ಇದರ ಜತೆಗೆ ಕೊರೊನಾ ಲಾಕ್​ ಡೌನ್​ ನಿಂದ ನಷ್ಟ ಅನುಭವಿಸಿರುವವರಿಗೆ, ತೀವ್ರ ಸಂಕಷ್ಟದಲ್ಲಿದ್ದವರಿಗೆ ಈ ಪ್ಯಾಕೇಜ್​ನಿಂದ ಪರಿಹಾರ ಸಿಕ್ಕಿಲ್ಲ ಅನ್ನೋ ಆತಂಕವನ್ನೂ ರೇಟಿಂಗ್ ಏಜೆನ್ಸಿಗಳು ವ್ಯಕ್ತಪಡಿಸಿವೆ.
 
 
ಬಡವರ ಡೇಟಾ ಮೋದಿ ಸರ್ಕಾರದ ಬಳಿಯಿದೆ..!
ಸ್ವಾತಂತ್ರ್ಯಾ ನಂತರ ದೇಶದ ಯಾವ ಸರ್ಕಾರಗಳೂ ಬಡವರ ಸಂಖ್ಯೆಯನ್ನ ದಾಖಲು ಮಾಡುವ ವ್ಯವಸ್ಥೆಯನ್ನೇ ಮಾಡಲಿಲ್ಲ. ಬಡವರು ಅನ್ನೋ ಸಾಕ್ಷಿಗೆ ರೇಷನ್ ಕಾರ್ಡ್​ ಗಳನ್ನ ಕೊಟ್ಟಿದ್ದು ಬಿಟ್ಟರೆ ಯಾವ ಸರ್ಕಾರಗಳೂ ಬಡವರ ಡೇಟಾ ಸಂಗ್ರಹಿಸಲಿಲ್ಲ. ಆದ್ರೆ ಈಗ ಪರಿಸ್ಥಿತಿ ಹಾಗಿಲ್ಲ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 40 ಕೋಟಿ ಬಡವರಿಗಾಗಿ ಜನ್​ ಧನ್ ಖಾತೆ ತೆರೆದಿದೆ. ಆಧಾರ್ ಕಾರ್ಡ್​ಗಳನ್ನ ಬ್ಯಾಂಕ್​ಗಳಿಗೆ ಲಿಂಕ್ ಮಾಡಲಾಗಿದೆ. ರೈತರ ಖಾತೆಗಳಿಗೆ ನೇರವಾಗಿ ಸಹಾಯ ಧನ ಹಾಕಿ ಸರ್ಕಾರ ಯಶಸ್ವಿಯೂ ಆಗಿದೆ. ಬಡವರ ಡೇಟಾ ಇಟ್ಟುಕೊಂಡು ಸುಮ್ಮನೆ ಕೂರುವ ಬದಲು 20 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ಬಡವರ ಜೇಬಿಗೆ ಹಣ ಹಾಕಬಹುದಿತ್ತಲ್ಲವಾ..?
 
ಸಿಎಂ ಕೊಟ್ಟ ಪ್ಯಾಕೇಜ್ ಯಾವಾಗ ಸಿಗುತ್ತೆ..?
 
ಬಿಎಸ್​ ಯಡಿಯೂರಪ್ಪ ಮೂರು ಹಂತಗಳಲ್ಲಿ 2,272 ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸಿದ್ದಾರೆ. ದೇಶದ ಯಾವ ರಾಜ್ಯವೂ ಈ ಬಗ್ಗೆ ಯೋಚನೆ ಮಾಡದೇ ಇರೋ ಸಮಯದಲ್ಲಿ ಬಿಎಸ್​ವೈ ಬಡವರ ಬ್ಯಾಂಕ್ ಖಾತೆಗಳಿಗೆ ಹಣ ಹಾಕುವ ಘೋಷಣೆ ಮಾಡಿದರು. ಹೂ, ಹಣ್ಣು-ತರಕಾರಿ, ಮೆಕ್ಕೆ ಜೋಳ ಬೆಳೆಯುವ ರೈತರಿಗೆ ಬೆಳೆ ನಷ್ಟ ಪರಿಹಾರ, ಕ್ಷೌರಿಕರಿಗೆ, ಡೋಬಿಗಳಿಗೆ. ಆಟೋ-ಕ್ಯಾಬ್ ಚಾಲಕರಿಗೆ ಒಂದು ಬಾರಿಯ 5 ಸಾವಿರ ಪರಿಹಾರ ಘೋಷಿಸಿದ್ದಾರೆ. ರೈತರಿಗೆ ಪರಿಹಾರವನ್ನ ಸರ್ಕಾರ ಹೇಗೋ ಕೊಟ್ಟುಬಿಡುತ್ತೆ. ಆದ್ರೆ ಕ್ಷೌರಿಕರು ಮತ್ತು ಡೋಬಿಗಳು ಪರಿಹಾರ ಹೇಗೆ ಕೊಡುತ್ತೆ. ಜಾತಿಯ ಆಧಾರದ ಮೇಲೆ ಪರಿಹಾರ ಕೊಡುವ ಸರ್ಕಾರದ ಬಳಿ ಜಾತಿಯ ಆಧಾರದಲ್ಲಿ ಬಡವರ ಬ್ಯಾಂಕ್ ಖಾತೆಯ ವಿವರ ಇರಬೇಕಲ್ಲ. ಆಟೋ-ಕ್ಯಾಬ್ ಚಾಲಕರ ಪಟ್ಟಿ ಆರ್ ಟಿ ಓ ಹತ್ತಿರ ಇದೆಯಾದರೂ ಅವರ ಬ್ಯಾಂಕ್ ಖಾತೆಗಳ ವಿವರ ಇಲ್ಲ. ಸಿಎಂ ಬಿಎಸ್​ವೈ ಪ್ಯಾಕೇಜ್​ ಘೋಷಣೆ ಮಾಡಿ ದಿನಗಳು ಕಳೆಯುತ್ತಲೇ ಇವೆ. ಆದ್ರೆ ಪ್ಯಾಕೇಜ್​ನ ಹಣ ಫಲಾನುಭವಿಗಳಿಗೆ ತಲುಪೋದಕ್ಕೆ ಇನ್ನು ಎಷ್ಟು ದಿನ ಬೇಕಾಗುತ್ತೋ..? ಈ ಪ್ರಶ್ನೆಗೆ ಸರ್ಕಾರದ ಬಳಿಯೂ ಉತ್ತರವಿದ್ದಂತಿಲ್ಲ.
 
ಭಾರತ ಕೊರೊನಾ ಯುದ್ಧ ಗೆದ್ದಿಲ್ಲ..!
 
ಜಗತ್ತಿನ ಬೇರೆಲ್ಲ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಕೊರೊನಾ ವೈರಸ್​ನ ಆರ್ಭಟ ಅಷ್ಟಾಗಿಲ್ಲ. ಹಾಗಂತ ನಾವೇನು ಕೊರೊನಾ ವಿರುದ್ಧದ ಯುದ್ಧವನ್ನ ಗೆದ್ದಿಲ್ಲ. ಯೂರೋಪ್, ಅಮೆರಿಕ, ರಷ್ಯಾದಲ್ಲಿ ವ್ಯಾಪಕವಾಗಿ ಹರಡುತ್ತಿರೋ ಕೊರೊನಾ ವೈರಸ್ ನಿಧಾನಗತಿಯಲ್ಲಿದೆ ಅಷ್ಟೆ. ವಿಶ್ವದ ಇತರ ದೇಶಗಳಿಗಿಂತ ನಾವೇ ಬೆಸ್ಟ್ ಅಂತ ಹೆಮ್ಮೆ ಪಟ್ಟುಕೊಳ್ಳುತ್ತಿರುವಾಗಲೇ ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿಬಿಟ್ಟಿದೆ. ಸಾವಿನ ಸಂಖ್ಯೆ 3 ಸಾವಿರ ದಾಟಿದೆ. ಇನ್ನೂ ನಾವು ಬೆಸ್ಟ್ ಅಂತ ಸಂಭ್ರಮಿಸೋ ವಾತಾವರಣ ಈಗಿಲ್ಲ. ಮೊದಲ 60 ದಿನದಲ್ಲಿ ದೇಶದಲ್ಲಿ 1635 ಸೋಂಕಿತರಿದ್ದರು. ಆ ನಂತರದ 45 ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದೆ. ದೇಶದ ಜನಸಂಖ್ಯೆಗೆ ಹೋಲಿಸಿದರೆ ಸೋಂಕಿತರ ಸಂಖ್ಯೆ ಕಡಿಮೆ ಇದೆ ನಿಜ. ಹಾಗಂತ ಕೊರೊನಾ ವಿರುದ್ಧ ಗೆದ್ದೇ ಬಿಟ್ಟೆವು ಎಂದು ಸಂಭ್ರಮಿಸೋ ಸ್ಥಿತಿಯಲ್ಲಿಲ್ಲ.
 
ವಲಸೆ ಕಾರ್ಮಿಕರ ನಿಭಾಯಿಸುವಲ್ಲಿ ಸೋತ ಸರ್ಕಾರ..!
 
20 ಲಕ್ಷ ಕೋಟಿ ಪ್ಯಾಕೇಜ್​ನಲ್ಲಿ ವಲಸೆ ಕಾರ್ಮಿಕರಿಗೆ ಉಚಿತ ಪಡಿತರ ಕೊಡುವ ಘೋಷಣೆಯನ್ನೇನೋ ಸರ್ಕಾರ ಮಾಡಿದೆ. ಆದ್ರೆ ಲಾಕ್ ಡೌನ್ ಘೋಷಣೆಯಾದ ನಂತರ ವಲಸೆ ಕಾರ್ಮಿಕರ ಸಮಸ್ಯೆಯನ್ನ ನಿಭಾಯಿಸೋದ್ರಲ್ಲಿ ಮೋದಿ ಸರ್ಕಾರ ಸೋತಿದೆ ಅನ್ನೋದು ವಾಸ್ತವ. ಲಾಕ್​ಡೌನ್ ಘೋಷಣೆಯಾದ ಕೆಲವೇ ದಿನಕ್ಕೆ ವಲಸೆ ಕಾರ್ಮಿಕರು ದೆಹಲಿಯಲ್ಲಿ ಬೀದಿಗೆ ಬಂದರಲ್ಲ ಆಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಇದ್ದ ಕೆಲಸ ಕಳೆದುಕೊಂಡು ಬರಿಗೈಯಾಗಿದ್ದ ಕಾರ್ಮಿಕರು, ಮಕ್ಕಳು, ಮಹಿಳೆಯರನ್ನ ಕಟ್ಟಿಕೊಂಡು ಸಾವಿರಾರು ಕಿಲೋಮೀಟರ್ ದೂರ ನಡೆಯುವ ಕರುಣಾಜನಕ ದೃಶ್ಯಗಳು ಕಣ್ಣಿಗೆ ರಾಚುವಂತೆ ಓಡಾಡಿದರೂ ಕಾರ್ಮಿಕರಿಗಾಗಿ ಸರ್ಕಾರ ಮಿಡಿಯಲಿಲ್ಲ. ವಲಸೆ ಕಾರ್ಮಿಕರಿಗಾಗಿ ವಿಶೇಷ ರೈಲುಗಳನ್ನ ಓಡಿಸುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು.
 
.

ಬೆಂಗಳೂರು ಭೂಗತ ಲೋಕದ ರೋಚಕ ಕಥೆ..! ಜಯರಾಜ್​ ನನ್ನು ಮುತ್ತಪ್ಪ ರೈ ಕೊಂದಿದ್ಯಾಕೆ..?

ಜಯರಾಜ್​ ನನ್ನ ಮುತ್ತಪ್ಪ ರೈ ಕೊಂದಿದ್ಯಾಕೆ..?ಬೆಂಗಳೂರಿನಲ್ಲಿ ಬಂದೂಕಿಗೆ ಬಲಿಯಾದ ಮೊದಲ ಭೂಗತ ಪಾತಕಿ ಎಂ.ಪಿ ಜಯರಾಜ್. ರಾಜ್ಯದಲ್ಲೇ ಮೊದಲಿಗೆ ಪಾತಕಲೋಕದಲ್ಲಿ ಡಾನ್ ಪಟ್ಟವನ್ನ ಗಿಟ್ಟಿಸಿಕೊಂಡವನೂ ಇದೇ ಜಯರಾಜ್. ಇಂಥಾ ಜಯರಾಜ್ ನನ್ನ ಗುಂಡಿಕ್ಕಿ ಕೊಲ್ಲಿಸಿ ನಂತರ ಡಾನ್ ಪಟ್ಟಕ್ಕೇರಿದ್ದು ಮುತ್ತಪ್ಪ ರೈ. ಮಚ್ಚು, ಲಾಂಗುಗಳೇ ಅಬ್ಬರಿಸಿಸುತ್ತಿದ್ದ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಗುಂಡಿನ ಶಬ್ಧ ಕೇಳಿಸಿತ್ತು. ಅದರ ಹಿಂದೆಯೇ ಕೇಳಿಸಿದ್ದು ಮುತ್ತಪ್ಪ ರೈ ಅನ್ನೋ ಹೆಸರು. ಹಾಗೆ ಭೂಗತ ಲೋಕಕ್ಕೆ ಎಂಟ್ರಿಯಾಗಿದ್ದರು ಮುತ್ತಪ್ಪ ರೈ.

ಪುತ್ತೂರಿನಿಂದ ಬೆಂಗಳೂರಿಗೆ ಬಂದು ವಿಜಯಾಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಮುತ್ತಪ್ಪ ರೈ ಆ ಕೆಲಸ ಬಿಟ್ಟು ಬ್ರಿಗೇಡ್ ರಸ್ತೆಯಲ್ಲಿ ಉಮರ್ ಖಯ್ಯಾಂ ಹೆಸರಿನ ಡ್ಯಾನ್ಸ್ ಬಾರ್ ನಡೆಸ್ತಿದ್ರು. 80-90 ರ ದಶಕದಲ್ಲಿ ಹಫ್ತಾ ವಸೂಲಿ, ಡ್ಯಾನ್ಸ್ ಬಾರ್ ದಂಧೆ, ಆಯಿಲ್ ಮಾಫಿಯಾ ಅಂದ್ರೆ ಕಲಬೆರಕೆ ದಂಧೆ, ಸುಫಾರಿ ಕೊಲೆಗಳಿಗೆ ಸೀಮಿತವಾಗಿತ್ತು ಬೆಂಗಳೂರಿನ ಭೂಗತ ಜಗತ್ತು. ರಾಜಧಾನಿಯ ರೌಡಿಸಂಗೆ ಮುಂಬೈನಿಂದ ಹಿಡಿದು ದುಬೈ ವರೆಗೆ ಲಿಂಕ್ ಬೆಳೆಸಿದ್ದು ಮುತ್ತಪ್ಪ ರೈ. ರೈ ನಡೆಸುತ್ತಿದ್ದ ಉಮರ್ ಖಯ್ಯಾಂ ಡ್ಯಾನ್ಸ್ ಬಾರ್ ಗೆ ಹಫ್ತಾ ಕೇಳಲು ಜಯರಾಜ್ ನ ಕಡೆಯ ಹುಡುಗರು ಬರುತ್ತಿದ್ದರು. ಅವತ್ತಿನ ಕಾಲಕ್ಕೆ ಅದು ಮಾಮೂಲಿಯಾಗಿತ್ತು, ರೈ ಕೂಡ ದುಡ್ಡು ಕೊಟ್ಟು ಕಳಿಸಿ ಸುಮ್ಮನಾಗ್ತಿದ್ರು. ಅಲ್ಲಿಯವರೆಗೆ ಜಯರಾಜ್ ಮತ್ತು ಮುತ್ತಪ್ಪ ರೈ ಮಧ್ಯೆ ಯಾವ ದ್ವೇಷವೂ ಇರಲಿಲ್ಲ. ಆ ನಂತರವೂ ಇರಲಿಲ್ಲವಾದರೂ ಜಯರಾಜ್ ನನ್ನ ಕೊಲ್ಲುವ ಹೊಣೆಯನ್ನ ಹೆಗಲೇರಿಸಿಕೊಂಡು ಅದನ್ನ ಡೀಲ್ ಮಾಡಿದ್ದು ಇದೇ ಮುತ್ತಪ್ಪ ರೈ.

ಅವತ್ತಿನ ಕಾಲಕ್ಕೆ ಬೆಂಗಳೂರನ್ನ ಮತ್ತು ಬೆಂಗಳೂರಿನ ಪೊಲೀಸರನ್ನ ನಡುಗಿಸುತ್ತಿದ್ದವನು ರೌಡಿ ಜಯರಾಜ್. ಬೆಂಗಳೂರಿನ ಇಡೀ ಭೂಗತ ಲೋಕವನ್ನ ತನ್ನ ಬೆರಳ ತುದಿಯಲ್ಲಿ ಆಡಿಸಿದವನು ಜಯರಾಜ್. ಇಂಥಾ ಜಯರಾಜ್ ಗೆ ಪೊಲೀಸರ ಮೇಲೆ ಮೂರು ಜನ್ಮಕ್ಕೂ ಮೀರಿದ ದ್ವೇಷವಿತ್ತು. ಪೊಲೀಸರನ್ನ ನಾಯಿಗಳೂ ಅಂತಲೇ ಕರೆಯುತ್ತಿದ್ದ. ಇಂಥಾ ಸಮಯದಲ್ಲೇ ಬೆಂಗಳೂರಿನಲ್ಲಿ ಆಯಿಲ್ ಕುಮಾರ್ ಇಡೀ ಆಯಿಲ್ ದಂಧೆಯನ್ನ ನಿಯಂತ್ರಿಸುತ್ತಿದ್ದ. ಇವತ್ತು ಬಡವರ ಜಮೀನಿಗೆ ಬೇಲಿ ಸುತ್ತಿ ರಿಯಲ್ ಎಸ್ಟೇಟ್ ದಂಧೆ ಮಾಡಿ ದುಡ್ಡು ಮಾಡುವಂತೆ, ಅವತ್ತು ಆಯಿಲ್ ಕಲಬೆರೆಕೆ ದಂಧೆಯಿಂದ ಕೈ ತುಂಬಾ ದುಡ್ಡು ಮಾಡುತ್ತಿದ್ದವನು ಆಯಿಲ್ ಕುಮಾರ್. ಈ ದಂಧೆಯನ್ನ ಹಿಡಿತಕ್ಕೆ ತೆಗೆದುಕೊಳ್ಳೋದಕ್ಕೆ ಜಯರಾಜ್ ಯತ್ನಿಸುತ್ತಿದ್ದ. ಹಫ್ತಾ ವಸೂಲಿ, ಸೇಟು ಮಾರ್ವಾಡಿಗಳಿಂದ ಬರ್ತಿದ್ದ ದುಡ್ಡಿನ ಜತೆಗೆ ಆಯಿಲ್ ಮಾಫಿಯಾವನ್ನೂ ಆಳಲು ಮುಂದಾಗಿದ್ದ ಜಯರಾಜ್. ಆಯಿಲ್ ಮಾಫಿಯಾ ತನ್ನ ಕೈತಪ್ಪಿಬಿಡುತ್ತೆ ಅಂತ ಆಯಿಲ್ ಕುಮಾರ್ ಚಡಪಡಿಸುತ್ತಿದ್ದಾಗಲೇ ಅವನ ಕಣ್ಣಿಗೆ ಬಿದ್ದಿದ್ದು ಇದೇ ಮುತ್ತಪ್ಪ ರೈ. ಜಯರಾಜ್ ಬದುಕಿಗೆ ಫುಲ್ ಸ್ಟಾಪ್ ಹಾಕೋ ನಿರ್ಧಾರಕ್ಕೆ ಬಂದಿದ್ದ ಆಯಿಲ್ ಕುಮಾರ. ಆ ಕಾಲದ ಸ್ಟೂಡೆಂಟ್‌ ಲೀಡರ್‌ ಮತ್ತು ಅಬಕಾರಿ ಕಂಟ್ರಾಕ್ಟರ್‌ ಆಗಿದ್ದ ಅಮರ್‌ ಆಳ್ವಗೆ ಮುಂಬಯಿ ಭೂಗತ ಜಗತ್ತಿನ ಪರಿಚಯವಿತ್ತು. ಅವನೇ ಮುತ್ತಪ್ಪ ರೈಗೆ ಮುಂಬೈ ಭೂಗತ ಜಗತ್ತನ್ನು ಪರಿಚಯಿಸಿದ್ದು. ಮುತ್ತಪ್ಪ ರೈ ಮೂಲಕ ಮುಂಬಯಿ ಶೂಟರ್‌ಗಳನ್ನು ಕರೆಸಿ ಜಯರಾಜ್ ನನ್ನ ಮುಗಿಸಬಹುದು ಅನ್ನೋ ಲೆಕ್ಕಾಚಾರ ಆಯಿಲ್‌ ಕುಮಾರ್‌ದಾಗಿತ್ತು.

ಆಯಿಲ್ ಕುಮಾರನೊಬ್ಬನಿಂದಲೇ ಜಯರಾಜ್ ನನ್ನ ಮುಗಿಸೋದಕ್ಕೆ ಸಾಧ್ಯವೇ ಇರಲಿಲ್ಲ. ಯಾಕಂದ್ರೆ ಅವತ್ತಿಗೆ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಜಯರಾಜ್ ನ ಬೆಂಬಲಿಗರಿದ್ದರು. ಮುತ್ತಪ್ಪ ರೈ ಬಂದೂಕಿನ ಗುಂಡಿನಿಂದ ಜಯರಾಜ್ ಹೆಣವಾಗೋದಕ್ಕೆ ಕಾರಣವಾಗಿದ್ದು ಅದೊಂದು ಮರ್ಡರ್ ಕೇಸ್. ಹೌದು 1987 ರಲ್ಲಿ ಕೇರಳದ ವಕೀಲ ರಶೀದ್ ಎಂಬಾತನನ್ನ ತಮಿಳುನಾಡಿನಲ್ಲಿ ಕೊಲೆ ಮಾಡಲಾಗಿತ್ತು. ಆ ಕೊಲೆ ಕೇಸ್ ನಲ್ಲಿ ಅವತ್ತಿನ ಗೃಹ ಸಚಿವ ಆರ್ ಎಲ್ ಜಾಲಪ್ಪ ಮತ್ತು ಪೊಲೀಸ್ ಅಧಿಕಾರಿಗಳೇ ಭಾಗಿಯಾಗಿದ್ದರು ಅನ್ನೋ ಆರೋಪವಿತ್ತು. ಸಿಬಿಐ ತನಿಖೆಗೆ ಕೋರ್ಟ್ ಆದೇಶ ನೀಡಿತ್ತು. ಪೊಲೀಸರೆಂದರೆ ಕೆಂಡಾಮಂಡಲನಾಗ್ತಿದ್ದ ಜಯರಾಜ್ ಈ ಕೇಸ್ ಅನ್ನ ಬಳಸಿಕೊಂಡು ಪೊಲೀಸರನ್ನ ಹೆಣೆಯಲು ನಿಂತುಬಿಟ್ಟ. ರಶೀದ್ ಕೊಲೆ ಕೇಸ್ ನಲ್ಲಿ ಜಾಲಪ್ಪ, ಡಿಸಿಪಿ ನಾರಾಯಣ್ ಸೇರಿ ಹಲವರು ಅರೆಸ್ಟ್ ಆದ್ರು. ಈ ಕೇಸ್ ನಲ್ಲಿ ಸಾಕ್ಷಿಧಾರರ ಬೆನ್ನಿಗೆ ನಿಂತು ಸಿಬಿಐ ಕೋರ್ಟ್ ನಲ್ಲಿ ಸಾಕ್ಷಿ ಹೇಳಿಸುವ ಜವಾಬ್ದಾರಿ ಹೊತ್ತುಕೊಂಡಿದ್ದ ಜಯರಾಜ್. ಯಾವಾಗ ಪೊಲೀಸರ ವಿರುದ್ಧವೇ ಜಯರಾಜ್ ನಿಂತನೋ ಆಗಲೇ ಅವನ ಕೊನೆಯ ದಿನಗಳೂ ಹತ್ತಿರವಾದವು.

ಜಯರಾಜ್ ನನ್ನ ವಿರೋಧಿಸುತ್ತಿದ್ದ ಆಯಿಲ್ ಕುಮಾರನ ಗ್ಯಾಂಗು ಮತ್ತು ಜಯರಾಜ್ ನನ್ನ ವಿರೋಧಿಸುತ್ತಿದ್ದ ಪೊಲೀಸ್ ಟೀಂ ಒಂದಾಯ್ತು. ಈ ಎರಡೂ ಟೀಂಗೆ ಕೊಂಡಿಯಾಗಿದ್ದು ಮುತ್ತಪ್ಪ ರೈ. ಜಯರಾಜ್ ನನ್ನ ಕೊಲ್ಲುವ ಗಂಡು ಬೆಂಗಳೂರಲ್ಲೇ ಇಲ್ಲ ಅಂತ ಪೊಲೀಸ್ ಅಧಿಕಾರಿಯೊಬ್ಬ ಹೇಳಿದಾಗ, ಯಾಕೆ ಅವನ ಮೈಯಲ್ಲಿ ಗುಂಡು ಇಳಿಯುವುದಿಲ್ಲವಾ ಎಂದು ಗುಂಡು ಹೊಡೆದಂತೆ ಮಾತನಾಡಿದ್ದು ಇದೇ ಮುತ್ತಪ್ಪ ರೈ. ಆ ನಂತರವೇ ನಡೆದದ್ದು ಜಯರಾಜ್ ಮೇಲಿನ ಎರಡು ಹತ್ಯಾ ಪ್ರಯತ್ನಗಳು, ಮತ್ತು ಮೂರನೇ ಸಕ್ಸಸ್ ಫುಲ್ ಆಪರೇಷನ್.

1989ರ ಸೆಪ್ಟೆಂಬರ್‌ ಕೊನೆಯಲ್ಲಿ ಈಗಿನ ಫ್ರೀಡಂ ಪಾರ್ಕ್ ಬಳಿಯಿದ್ದ ಅವತ್ತಿನ ಸೆಂಟ್ರಲ್ ಜೈಲಿನ ಮುಂದೆ ಜಯರಾಜ್‌ ಮೇಲೆ ಮೊದಲ ದಾಳಿ ನಡೆದಿತ್ತು. ಕಾಟನ್‌ಪೇಟೆ ಪುಷ್ಪ, ಬೆಕ್ಕಿನಕಣ್ಣು ರಾಜೇಂದ್ರ, ಚಕ್ರೆ ಟೀಂ ನಡೆಸಿದ್ದ ದಾಳಿಯನ್ನು ಹಿಮ್ಮೆಟ್ಟಿಸಿ ಜಯರಾಜ್‌ ಬಚಾವಾಗಿದ್ದ. ಮಚ್ಚು ಲಾಂಗ್ ಗಳಿಂದ ಜಯರಾಜ್ ನನ್ನ ಕೊಲ್ಲೋದು ಸಾಧ್ಯವೇ ಇಲ್ಲ ಅಂತ ರೈ ಗೆ ಅರ್ಥವಾಗಿತ್ತು. ಮೊದಲ ದಾಳಿ ಬಳಿಕ ಜಯರಾಜ್ ಬೆಂಗಳೂರು ಸೆಂಟ್ರಲ್ ಜೈಲಿನಿಂದ ಮೈಸೂರು ಜೈಲಿಗೆ ಶಿಫ್ಟ್ ಆಗಿದ್ದ. ಮೈಸೂರಿನ ಕೆಆರ್ ಆಸ್ಪತ್ರೆಯ ಜೈಲ್ ವಾರ್ಡ್ ನಲ್ಲಿದ್ದ ಜಯರಾಜ್ ಮೇಲೆ ಮುಂಬೈನಿಂದ ಬಂದಿದ್ದ ಶೂಟರ್ ಗಳು ಗುಂಡಿನ ದಾಳಿ ನಡೆಸಿದ್ರು. ಅವತ್ತಿನ ಮಟ್ಟಿಗೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಬಂದೂಕುಗಳು ಅಬ್ಬರಿಸಿದ್ದವು. ಜೈಲ್‌ ವಾರ್ಡ್‌ನಲ್ಲೇ ಕೈ ಬಾಂಬ್‌ಗಳನ್ನು ಇಟ್ಟುಕೊಂಡಿದ್ದ ಜಯರಾಜ್‌ ಅವುಗಳನ್ನೆಸೆದಯ ಬಚಾವ್ ಆಗಿಬಿಟ್ಟ. ಈ ದಾಳಿಯಲ್ಲಿ ಬೆಂಗಳೂರಿನ ಯಾವ ರೌಡಿಗಳೂ ಭಾಗಿಯಾಗಿರಲಿಲ್ಲ. ಮುಂಬೈ ಶೂಟರ್ ಗಳು ಜಯರಾಜ್ ನನ್ನ ಮುಗಿಸಲು ಬಂದಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಾಗ ಅದರ ಬೆನ್ನ ಹಿಂದೆ ಕೇಳಿಸಿದ್ದ ಮುತ್ತಪ್ಪ ರೈ ಹೆಸರು.

ತನ್ನ ಮೇಲೆ ಎರಡು ದಾಳಿಯಾದರೂ ಜಯರಾಜ್ ಎಂಎಲ್ ಎ ಆಗುವ ಉಮೇದಿಯಲ್ಲಿದ್ದ. ಎಂಎಲ್ ಎ ಆಗಿಬಿಡುವ ತನ್ನನ್ನ ಮುಟ್ಟೋರು ಯಾರಿದ್ದಾರೆ ಅನ್ನೋ ಹುಂಬತನ. ಈ ಹುಂಬತನವೇ ಜಯರಾಜ್ ಗೆ ಮುಳುವಾಗಿತ್ತು. ಎಲೆಕ್ಷನ್ ಗೆ ನಿಲ್ಲೋದಕ್ಕೆ ಅಂತ ಜಾಮೀನಿನ ಮೇಲೆ ಜಯರಾಜ್ ಹೊರಗೆ ಬಂದ. ಜಾಮೀನಿನ ಷರತ್ತಿನಂತೆ ಜಯರಾಜ್‌ ಪ್ರತೀ ದಿನ ಸಿದ್ದಾಪುರ ಪೊಲೀಸ್ ಠಾಣೆಗೆ ಬಂದು ಸಹಿ ಮಾಡಿ ಹೋಗಬೇಕಿತ್ತು. ಅವತ್ತಿಗೆ ಜಯರಾಜ್ ಗೆ ನೀಡಲಾಗಿದ್ದ ಜಾಮೀನಿನ ಅವಧಿ ಮುಗಿದಿತ್ತು. ಮಾರನೆಯ ದಿನ ಜೈಲಿಗೆ ಹೋಗಬೇಕಾಗಿತ್ತು. 1989ರ ನ.21 ನೇ ತಾರೀಕು ಪೊಲೀಸ್ ಸ್ಟೇಷನ್ ಗೆ ಬಂದು ಸಹಿ ಮಾಡಿ ವಾಪಸಾಗುವಾಗ ಲಾಲ್‌ಬಾಗ್‌ನ ಸಿದ್ದಾಪುರ ಗೇಟ್‌ ಎದುರಿಗೇ ಜಯರಾಜ್‌ ಮೇಲೆ ಮೂರನೇ ದಾಳಿ ನಡೆಯಿತು. ವಕೀಲ ವರ್ಧಮಾನಯ್ಯ ಮತ್ತು ಜಯರಾಜ್‌ ಗುಂಡಿಗೆ ಬಲಿಯಾದರು. ಈ ಬಾರಿ ಬಂದಿದ್ದವರು ಮುಂಬೈನ ಮಾಮೂಲಿ ಶೂಟರ್‌ಗಳಲ್ಲ, ಶಾರ್ಪ್‌ ಶೂಟರ್‌ಗಳು. ಅಲ್ಲಿಗೆ ಬೆಂಗಳೂರನ್ನ ನಡುಗಿಸಿದ್ದ ಮೊದಲ ಡಾನ್ ಜಯರಾಜ್ ನ ಹೆಣ ಉರುಳಿತ್ತು. ಅಲ್ಲಿ ಮತ್ತೊಬ್ಬ ಡಾನ್ ಉದಯಿಸಿದ್ದ ಆತನೇ ಮುತ್ತಪ್ಪ ರೈ. ಜಯರಾಜ್‌ ಕೊಲೆ, ಮುತ್ತಪ್ಪ ರೈ ಹೆಸರನ್ನು ಇಡೀ ಕರ್ನಾಟಕ ಮತ್ತು ಮುಂಬೈ ವರೆಗೂ ಕರೆದುಕೊಂಡು ಹೋಯ್ತು. ಅದುವರೆಗೂ ರೌಡಿ ಜಗತ್ತಿಗೆ ಮಾತ್ರ ಗೊತ್ತಿದ್ದ ರೈ ಹೆಸರು ಇಲ್ಲಿಂದ ಮುಂದಕ್ಕೆ ದಾವೂದ್‌ ಇಬ್ರಾಹಿಂವರೆಗೂ ತಲುಪಿಬಿಟ್ಟಿತು.

ಮುತ್ತಪ್ಪ ರೈ ಇನ್ನಿಲ್ಲ..! ಹೇಗಿದ್ದವು ಗೊತ್ತಾ ಮುತ್ತಪ್ಪ ರೈ ಕೊನೆಯ ದಿನಗಳು..?

ಮುತ್ತಪ್ಪ ರೈ ಕಡೆಯ ದಿನಗಳುಮಾಜಿ ಡಾನ್, ಸಮಾಜ ಸೇವಕ, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅನ್ನ ನಾಳದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮುತ್ತಪ್ಪ ರೈಗೆ ಅಂಟಿದ್ದ ಕ್ಯಾನ್ಸರ್ ಅಂತಿಮ ಹಂತ ತಲುಪಿದ್ದರಿಂದಾಗಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ರು. ಚಿಕಿತ್ಸೆ ಫಲಕಾರಿಯಾಗದೇ ರೈ ಕೊನೆಯುಸಿರೆಳೆದಿದ್ದಾರೆ. ಮೂರು ತಿಂಗಳ ಹಿಂದೆ ಮಾಧ್ಯಮಗಳ ಮುಂದೆ ಬಂದು ತಮಗೆ ಕ್ಯಾನ್ಸರ್ ಬಂದಿದೆ ಅನ್ನೋ ವಿಚಾರವನ್ನ ಬಹಿರಂಗಪಡಿಸಿದ್ದರು. ವೈದ್ಯರು ಸಾಯುತ್ತೇನೆ ಎಂದು ಹೇಳಿದ್ದಾರೆ.. ಆದರೆ ನಾನು ಸಾವಿಗೆ ಹೆದರೋದಿಲ್ಲ ಎಂದು ಹೇಳಿದ್ದರು. ಆದ್ರೀಗ ಕ್ಯಾನ್ಸರ್ ಮುತ್ತಪ್ಪ ರೈ ಅವರ ಜೀವವನ್ನ ಬಲಿ ಪಡೆದುಬಿಟ್ಟಿದೆ. ಕ್ಯಾನ್ಸರ್ ವಿರುದ್ಧ ಕೊನೇ ಕ್ಷಣದವರೆಗೂ ಹೋರಾಡಿದ ಮುತ್ತಪ್ಪ ರೈ ಇನ್ನು ನೆನಪು ಮಾತ್ರ.

ಅಪಾರ ಅಭಿಮಾನಿಗಳು, ದೊಡ್ಡ ಕುಟುಂಬದವನ್ನ ಬಿಟ್ಟು ಮುತ್ತಪ್ಪ ರೈ ಹೊರಟು ಹೋಗಿದ್ದಾರೆ. ಮುತ್ತಪ್ಪ ರೈ ಅನ್ನೋ ವರ್ಣರಂಜಿತ ಬದುಕಿನ ಕಥೆ ಇಲ್ಲಿಗೆ ಮುಕ್ತಾಯವಾಗಿದೆ. ಮುತ್ತಪ್ಪ ರೈ ಅನ್ನೋ ಕಲರ್ ಫುಲ್ ಪರ್ಸನಾಲಿಟಿ ಇನ್ನು ನೆನಪು ಮಾತ್ರ. ತಾವು ಆಪ್ತವಾಗಿ ಪ್ರೀತಿಸ್ತಿದ್ದ ಬಿಡದಿಯ ಮನೆ, ಸಕಲೇಶಪುರದ ತೋಟ, ಬೆಂಗಳೂರಿನ ಸದಾಶಿವನಗರದ ಅಪಾರ್ಟ್ ಮೆಂಟು, ಸಾವಿರಾರು ಕೋಟಿ ಆಸ್ತಿ ಎಲ್ಲವನ್ನೂ ಬಿಟ್ಟು ಹೋಗಿದ್ದಾರೆ ಮುತ್ತಪ್ಪ ರೈ. ಕಳೆದ ಐದಾರು ತಿಂಗಳಿಂದ ಮುತ್ತಪ್ಪ ರೈ ಹೆಚ್ಚು ಕಾಲ ಆಸ್ಪತ್ರೆಯಲ್ಲೇ ದಿನ ಕಳೆದಿದ್ರು. ಅಂಡರ್ ವರ್ಲ್ಡ್ ನ ಕಠೋರ ದಿನಗಳಿಗಿಂತ ಕ್ಯಾನ್ಸರ್ ನೊಂದಿಗಿನ ಹೋರಾಟವೇ ಅವರನ್ನ ಹೈರಣಾಗಿಸಿತ್ತು.

ದಶಕಗಳ ಕಾಲ ವಿದೇಶದಲ್ಲೇ ಇದ್ದು ಭಾರತದ ಭೂಗತ ಲೋಕವನ್ನ ನಿಯಂತ್ರಿಸಿದ್ದ ಡಾನ್ ನಂತ್ರ ತಮ್ಮ ರೌಡಿಸಂ ಚಟುವಟಿಕೆಯಿಂದ ವಿಆರ್ ಎಸ್ ಪಡೆದಿದ್ರು. ಕ್ಯಾನ್ಸರ್ ವಿರುದ್ಧ ಹೋರಾಡ್ತಿದ್ದ ಮುತ್ತಪ್ಪ ರೈ ಕೊನೆ ದಿನಗಳಲ್ಲಿ ಸಾವಿನ ದಿನವನ್ನ ಮುಂದೆ ಹಾಕೋದಕ್ಕೆ ಇನ್ನಿಲ್ಲದ ಪ್ರಯತ್ನ ನಡೆಸಿದ್ರು. ಆದ್ರೆ ಸಾವು ಅವರ ಬದುಕಿನಲ್ಲಿ ತುಂಬಾ ದಿನಗಳ ಕಾಲ ಅಂದರ್ ಬಾಹರ್ ಆಟವಾಡಿತ್ತು. ಮುತ್ತಪ್ಪ ರೈಗೆ ಕೂಡಾ ಸಾವಿನ ದಿನಗಳು ಸಮೀಪಿಸುತ್ತಿದ್ದ ಸಮಯದಲ್ಲಿ ವಿಧಿ ಯಾಕೆ ನನ್ನನ್ನ ಹೀಗೆಲ್ಲಾ ಆಡಿಸುತ್ತಿದೆ ಅಂತ ಅಂದುಕೊಂಡಿದ್ರು. ಮುತ್ತಪ್ಪ ರೈ ಅಂದ್ರೇನೆ ಗಟ್ಟಿಮುಟ್ಟಿನ ದೇಹ, ತಮ್ಮದೇ ಖದರ್, ತಮ್ಮದೇ ಸ್ಟೈಲ್, ಆತ್ಮ ವಿಶ್ವಾಸದ ನಡೆ, ಅವರ ಹಿಂದೆ ಹುಡುಗರ ದಂಡು. ಆದ್ರೆ ಅವತ್ತು ಪ್ರೆಸ್ ಮೀಟ್ ನಲ್ಲಿ ಮುತ್ತಪ್ಪ ರೈ ಅವರನ್ನ ನೋಡಿದವರಿಗೆ ತುಂಬಾ ದಿನ ಇವರು ಬದುಕೋದಿಲ್ಲ ಅನ್ನಿಸಿತ್ತು. ಮುತ್ತಪ್ಪ ರೈ ಕೂಡ ಅದನ್ನೇ ಹೇಳಿದ್ರು.

ಮುತ್ತಪ್ಪ ರೈ ಇದ್ದಕ್ಕಿದ್ದ ಹಾಗೆ ಕಳೆದ ವರ್ಷ ನಾಪತ್ತೆಯಾಗಿದ್ರು. ಎಲ್ಲಿದ್ದಾರೆ ಏನು ಮಾಡ್ತಿದ್ದಾರೆ ಅನ್ನೋದು ಯಾರಿಗೂ ಗೊತ್ತೇ ಇರಲಿಲ್ಲ. ನಂತ್ರ ವಿಷಯ ಗೊತ್ತಾದಾಗ ಕ್ಯಾನ್ಸರ್ ಅನ್ನೋ ಮಾರಕ ಖಾಯಿಲೆ ಗಟ್ಟಿಗುಂಡಿಗೆಯ ರೈ ಅನ್ನ ಕರಗಿಸ್ತಿದೆ ಅನ್ನೋದು ಗೊತ್ತಾಗಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬರ್ತಿದ್ದ ಹಾಗೆ ರೈ ಮಾಧ್ಯಮಗಳನ್ನ ಕರೆದು ಸುದ್ದಿಗೋಷ್ಠಿ ನಡೆಸಿದ್ರು. ಸಾವು, ಬದುಕು, ಪ್ರೀತಿಯ ಬಗ್ಗೆ ಮಾಜಿ ಡಾನ್ ಸಂತನಂತೆ ಮಾತನಾಡಿದ್ರು. ಇವ್ರೇನಾ ಅಂಡರ್ ವರ್ಲ್ಡ್ ನ ಡಾನ್ ಅಂತ ಅನುಮಾನ ಮೂಡಿಸುವಷ್ಟು ಅಧ್ಯಾತ್ಮದ ಬಗ್ಗೆ ಮಾತನಾಡಿದ್ರು.

ಆಸ್ತಿ,ಹಣ ಇವೆಲ್ಲಾ ಇವತ್ತಿಗೆ ಯಾವುದು ನನ್ನದಲ್ಲ ಅನ್ನೋದನ್ನ ಕೊನೆ ಕ್ಷಣದಲ್ಲಿ ಅವರೇ ಒಪ್ಪಿಕೊಂಡಿದ್ರು.  ಸಾವಿರಾರು ಕೋಟಿ ರೂಪಾಯಿ ಆಸ್ತಿಯ ಒಡೆಯ ಒಮ್ಮೆಲೇ ಬುದ್ಧನಂತಾಗಿ ಹೋಗಿದ್ದ. ಅವತ್ತಿನ ಪ್ರೆಸ್ ಮೀಟ್ ಆದ ನಂತರ ಟಿವಿ ಚಾನಲ್ಲುಗಳಿಗೆ ಸಂದರ್ಶನ ಕೊಟ್ಟ ಮುತ್ತಪ್ಪ ರೈ ಆಮೇಲೆ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳಲೇ ಇಲ್ಲ. ರೈ ಅನಾರೋಗ್ಯದ ಬೆನ್ನಲ್ಲೆ, ಸಾವಿನ ದಾರಿಯಲ್ಲಿ ನಡೆಯುವಾಗ್ಲೇ ಆಸ್ತಿ ವಿಚಾರವಾಗಿ ಎಲ್ಲಾ ಪ್ರೋಸೆಸ್ ನಡೆಸೋದಕ್ಕೆ ಶುರುಮಾಡಿದ್ರು. ಆಗ್ಲೇ ಅವರೊಳಗೆ ಬುದ್ಧನ ಜೊತೆ ಇನ್ನೊಬ್ಬ ರೌಡಿ ಇದ್ದಾನೆ ಅನ್ನೋದು ಗೊತ್ತಾಗಿತ್ತು. ಜೊತೆಗಿದ್ದವರ ಮರ್ಡರ್ ಸುಪಾರಿ ಕೇಸ್ ಜೀವನದ ಕೊನೇ ಹಂತದಲ್ಲಿ ಅವರನ್ನ ಇನ್ನಷ್ಟು ಹಿಂಡಿ ಹಿಪ್ಪೆ ಮಾಡಿ ಹಾಕಿತ್ತು. ಅದರ ನಡುವಲ್ಲೇ ರೈ ಅವರನ್ನ ಸಿಸಿಬಿ ಪೊಲೀಸ್ರು ವಿಚಾರಣೆ ನಡೆಸಿದ್ರು.  ಅದಾದ ಕೆಲ ದಿನಗಳಿಗೆ ರೈ ಮೃತಪಟ್ಟಿದ್ದಾರೆ ಅನ್ನೋ ಸುಳ್ಳುಸುದ್ದಿ ಹರಡೋದಕ್ಕೆ ಶುರುವಾಗಿತ್ತು. ಆಗ ರೈ ತಮ್ಮ ಸೋದರಿ ಜತೆ ಚೆಸ್ ಆಡ್ತಿದ್ದ ಪೋಟೋವೊಂದನ್ನ ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟು ರೈ ಸಾವಿನ ಸುದ್ದಿಗಳಿಗೆ ಫುಲ್ ಸ್ಟಾಪ್ ಹಾಕಿದ್ರು.  ಕೊನೆಯ ದಿನಗಳಲ್ಲಾದರೂ ಎಲ್ಲ ಜಂಜಾಟಗಳಿಂದ ದೂರವಿದ್ದು ನೆಮ್ಮದಿಯಾಗಿ ಕಳೆಯಬೇಕು ಅಂದುಕೊಂಡಿದ್ದ ಮುತ್ತಪ್ಪ ರೈಗೆ ಅದು ಸಾಧ್ಯವಾಗಲೇ ಇಲ್ಲ.

ಕಡೆಯ ದಿನಗಳಲ್ಲಿ ಸಾವಿಗೆ ನಾನು ಹೆದರೋದಿಲ್ಲ ಅಂದಿದ್ದ ಮುತ್ತಪ್ಪ ರೈ ಸಾವನ್ನ ತಪ್ಪಿಸಿಕೊಳ್ಳೋದಕ್ಕೆ ಏನೆಲ್ಲಾ ಮಾಡಬೇಕೋ ಎಲ್ಲ ಪ್ರಯತ್ನಗಳನ್ನೂ ಮಾಡಿಬಿಟ್ಟರು. ಯುವರಾಜ್ ಸಿಂಗ್ ಗೆ ಕ್ಯಾನ್ಸರ್ ಚಿಕಿತ್ಸೆ ನೀಡಿದ ವೈದ್ಯರಿಂದ ಹಿಡಿದು, ಪ್ರಖ್ಯಾತ ವೈದ್ಯರ ಬಳಿಗೆಲ್ಲಾ ಹೋಗಿಬಂದ್ರು. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲೂ ಏರ್ ಆ್ಯಂಬ್ಯುಲೆನ್ಸ್ ಮಾಡಿಕೊಂಡು ಗುಜರಾತ್ ನ ಅಹಮದಾಬಾದ್ ಗೆ ಹೋಗಿಬಂದ್ರು. ಆದ್ರೆ ಅಲ್ಲಿ ಟ್ರೀಟ್ ಮೆಂಟ್ ಸಿಗದೇ ಬೆಂಗಳೂರಿಗೆ ವಾಪಸ್ ಆಗಿ ಮಣಿಪಾಲ್ ಆಸ್ಪತ್ರೆಗೆ ಅಡ್ಮಿಟ್ ಆಗಿದ್ರು.

ಮುತ್ತಪ್ಪ ರೈ ಹುಟ್ಟು ಹೋರಾಟಗಾರ. ಮೂರು ಗುಂಡುಗಳು ಎದೆಯನ್ನ ಸೀಳಿದ್ರು ಸಾವನ್ನ ಗೆದ್ದು ಬಂದಿದ್ರು. ಬದುಕಿರೋ ವೇಳೆ ಎಲ್ಲವನ್ನ ಕಂಡಿದ್ದ ಅವರನ್ನ ಕ್ಯಾನ್ಸರ್ ಹೆಚ್ಚು ಹೆದರಿಸಿತ್ತು. ಬಹಿರಂಗವಾಗಿ ತಾನು ಎದೆಗುಂದಿದ್ದೇನೆ ಅನ್ನೋದನ್ನ ರೈ ತೋರಿಸಿಕೊಳ್ಳದೇ ದೈರ್ಯವಾಗಿಯೇ ಇದ್ದರು. ದಿನದಿಂದ ದಿನಕ್ಕೆ ಕುಗ್ಗಿಹೋಗುತ್ತಿದ್ದ ದೇಹ, ಮಾನಸಿಕ ಜರ್ಜರಿತ ಎಲ್ಲವೂ ಅವರನ್ನ ಇನ್ನಿಲ್ಲದಂತೆ ಕಾಡಿತ್ತು. ಸಾಮಾಜಿಕವಾಗಿ ತಮ್ಮದೇ ಆತ ವರ್ಚಸ್ಸನ್ನ ಬೆಳೆಸಿಕೊಂಡಿದ್ದ ಮುತ್ತಪ್ಪ ರೈ ಅವರಿಗೆ ಸಾವಿನ ಸಮಯದಲ್ಲಿನ ಸನ್ನಿವೇಶಗಳು ಬದುಕಿನ ನಿಜ ದರ್ಶನವನ್ನ ಮಾಡಿಸಿತ್ತು. ಆದ್ರೆ ಎಲ್ಲೂ ರೈ ತಮ್ಮ ಆತ್ಮವಿಶ್ವಾಸವನ್ನ ಬಿಟ್ಟುಕೊಡಲಿಲ್ಲ. ಕಣ್ಣು ಮುಂದಿರೋ ಸಾವು, ದಕ್ಕಿದ್ದಷ್ಟೇ ಪ್ರೀತಿ, ಬದುಕಿದ್ದಷ್ಟೇ ಜೀವನ ಅನ್ನೋ ಬ್ರಹ್ಮಾಂಡ ಸತ್ಯವನ್ನ ಅರ್ಥ ಮಾಡಿಸಿತ್ತು. ಕೊನೆಗೆ ಕ್ಯಾನ್ಸರ್ ರೋಗ ಮುತ್ತಪ್ಪ ರೈ ಅವರನ್ನ ಇನ್ನೊಂದು ಪ್ರಪಂಚಕ್ಕೆ ಕರ್ಕೊಂಡು ಹೋಗಿದೆ.

ಭೂಗತ ಲೋಕದಿಂದ ಹೊರಬಂದು ಸಮಾಜ ಸೇವಕನ ಇಮೇಜ್ ಕಟ್ಟಿಕೊಳ್ಳೋದು ಅಸಾಧ್ಯ. ಆದ್ರೆ ಈ ಅಸಾಧ್ಯವಾದುದನ್ನ ರೈ ಸಾಧಿಸಿ ತೋರಿಸಿದರು. ಸಾಯೋ ಕೊನೆಕ್ಷಣದವರೆಗೂ ದಾನ ಧರ್ಮಗಳಲ್ಲಿ ನಿರತರಾಗಿದ್ದ ರೈ, ಕರಾಳ ಜಗತ್ತಿನ ವ್ಯಕ್ತಿಯೊಬ್ಬ ವ್ಯಕ್ತಿತ್ವವನ್ನ ಬದಲಿಸಿಕೊಂಡು ಬದುಕಬಹುದು ಅನ್ನೋದನ್ನ ತೋರಿಸಿ ಹೋಗಿದ್ದಾರೆ.

 

ಕಿಮ್ ಜಾಂಗ್ ಉನ್, ಜಗತ್ತು ಈತನಿಗೆ ಹೆದರೋದ್ಯಾಕೆ..?

North-Korea-North-Korea-Kim-Jong-un-North-Korea-Kim-Jong-il-North-Korea-Kim-Il-sung-North-Korea-Pyongyang-North-Korea-901544ಕಿಮ್ ಜಾಂಗ್ ಉನ್… ಕೊರೊನಾ ಹೊಡೆತದ ಮಧ್ಯೆಯೂ ಇಡೀ ಜಗತ್ತಿನಾದ್ಯಂತ ಕೇಳಿಬರುತ್ತಿರೋ ಹೆಸರು. ಉತ್ತರ ಕೊರಿಯಾ ಅನ್ನೋ ದುರಂತ ದೇಶದ ಸರ್ವಾಧಿಕಾರಿ ಈತ. ಜಗತ್ತನ್ನ ಆಳಿ ಹೋದ ಹಲವು ಸರ್ವಾಧಿಕಾರಿಗಳ ಸಾಲಿನಲ್ಲಿ ನಿಲ್ಲುವ ವ್ಯಕ್ತಿ. ಹಿಟ್ಲರ್, ಮುಸಲೋನಿ, ಸದ್ದಾಂ ಹುಸೇನ್, ಗಡ್ಡಾಫಿ, ಇದಿ ಅಮೀನ್ ರಂಥ ನರ ರಾಕ್ಷಸರನ್ನೂ ಮೀರಿಸಬಲ್ಲಂತವನು ಈತ. ಒಂದಿಡೀ ದೇಶವನ್ನ ತನ್ನ ಮುಷ್ಠಿಯಲ್ಲಿಟ್ಟುಕೊಂಡು ಆಡಿಸುತ್ತಿರೋ ವ್ಯಕ್ತಿ. ತನ್ನ ಹುಚ್ಚು ನಿರ್ಧಾರಗಳು, ನಿಗೂಢ ಬದುಕಿನ ಕಾರಣದಿಂದಲೇ ಇಡೀ ಜಗತ್ತಿನ ಗಮನ ಸೆಳೆದವನು. ಅಮೆರಿಕದಂತಹ ಬಲಾಡ್ಯ ದೇಶವನ್ನೇ ಹೈಡ್ರೋಜನ್ ಬಾಂಬ್ ಹಾಕಿ ಉಡಾಯಿಸಿಬಿಡ್ತೀನಿ ಎಂದು ಬೆದರಿಕೆ ಹಾಕಿದ್ದ ಭೂಪ ಈತ. ಇವನನ್ನ ಕಂಡರೆ ಜಗತ್ತಿನ ಹಲವು ದೇಶಗಳು ಹೆದರುತ್ವೆ. ಇಂಥಾ ಕಿಮ್ ಜಾಂಗ್ ಉನ್ ಈಗ ಸತ್ತೇ ಹೋಗಿದ್ದಾನೆ ಎಂದು ಸುದ್ದಿಯಾಗುತ್ತಿದೆ. ಉತ್ತರ ಕೊರಿಯಾಗೆ ಮಹಿಳೆಯೊಬ್ಬಳು ಉತ್ತರಾಧಿಕಾರಿಯಾಗಲಿದ್ದಾಳೆ ಅನ್ನೋ ಸುದ್ದಿಗಳು ಬರಲಾರಂಭಿಸಿವೆ. ಕಿಮ್ ಜಾಂಗ್ ಉನ್ ಸತ್ತಿದ್ದಾನೋ ಇಲ್ಲವೋ ಅನ್ನೋದನ್ನ ಇದುವರೆಗೂ ಆ ದೇಶ ಖಚಿತಪಡಿಸುತ್ತಿಲ್ಲ. ಒಂದಿಡೀ ದೇಶವನ್ನ ಜಗತ್ತಿನಿಂದಲೇ ದೂರವಿಟ್ಟು ತನ್ನ ಬೆರಳ ನೇರಕ್ಕೆ ಆಡಿಸುತ್ತಿರೋ ಈತನ ಹಿನ್ನೆಲೆಯೇನು..? ಕೇವಲ 27 ವರ್ಷಕ್ಕೆ ಈತ ಒಂದು ದೇಶದ ಸರ್ವಾಧಿಕಾರಿಯಾಗಿದ್ದು ಹೇಗೆ..? ಅಧಿಕಾರ ಉಳಿಸಿಕೊಳ್ಳಲು ಈತ ಮಾಡಿದ ಪಾತಕಗಳೆಷ್ಟು..? ಉರುಳಿಸಿದ ತಲೆಗಳೆಷ್ಟು..?
ಕಿಮ್ ಜಾಂಗ್ ಉನ್… ಈತ ಉತ್ತರ ಕೊರಿಯಾದ ಮೂರನೇ ಸರ್ವಾಧಿಕಾರಿ. ಇವನಿಗೂ ಮೊದಲು ಇವನ ಅಪ್ಪ, ತಾತ ಆ ದೇಶವನ್ನ ನಿರ್ಧಾಕ್ಷಿಣ್ಯವಾಗಿ ಆಳಿ ಹೋಗಿದ್ದಾರೆ. 2011 ರಿಂದ ಕಿಮ್ ಉತ್ತರ ಕೊರಿಯಾದ ಸುಪ್ರೀಂ ಲೀಡರ್ ಆಗಿ ಅಧಿಕಾರ ನಡೆಸುತ್ತಿದ್ದಾನೆ. ಅಲ್ಲಿ ಇವನು ಮಾಡಿದ್ದೇ ಕಾನೂನು, ಹೇಳಿದ್ದೇ ನ್ಯಾಯ. ಎಲ್ಲಿಯವರೆಗೆ ಅಂದ್ರೆ ಆ ದೇಶದಲ್ಲಿ ಹೇರ್ ಕಟ್ ಯಾವ ರೀತಿ ಮಾಡಿಸಬೇಕು ಅನ್ನೋದನ್ನೂ ನಿರ್ಧರಿಸೋದು ಇವನೇ. ಇವನು ಹೇಳಿದ್ದನ್ನ ಬಿಟ್ಟು ಬೇರೆ ರೀತಿಯ ಹೇರ್ ಕಟ್ ಮಾಡಿಸಿಕೊಂಡ ಅಂದ್ರೆ ಮುಗಿದೇ ಹೋಯ್ತು ಕತೆ. ಅಂಥವನೆದೆಗೆ ಗುಂಡು ಬಿತ್ತು ಅಂತಲೇ ಅರ್ಥ. ಇವನೆಂಥಾ ಹುಚ್ಚು ದೊರೆ ಅನ್ನೋದಕ್ಕೆ ಇದೊಂದು ಉದಾಹರಣೆ ಸಾಕು. ಅಧಿಕಾರಕ್ಕಾಗಿ ತನ್ನ ಅಣ್ಣನನ್ನೇ ಕೊಲೆ ಮಾಡಿಸಿದ ಕ್ರೂರಿ ಈತ. ಅಷ್ಟೇ ಅಲ್ಲ, ತನ್ನ ಮಾತು ಕೇಳಲಿಲ್ಲ ಅನ್ನೋ ಕಾರಣಕ್ಕೆ ಸ್ವಂತ ಮಾವನಿಗೇ ಮರಣದಂಡನೆ ವಿಧಿಸಿದ ಪಾಪಿ ಇವನು. ಜಗತ್ತಿನ ಎಲ್ಲ ದೇಶಗಳಲ್ಲಿ ಮರಣದಂಡನೆ ಅನ್ನೋದು ಕಟ್ಟ ಕಡೇ ಶಿಕ್ಷೆಯಾದ್ರೆ ಈತನ ಆಡಳಿತದಲ್ಲಿ ಮರಣದಂಡನೆಯೇ ಮೊಟ್ಟ ಮೊದಲ ಶಿಕ್ಷೆ.
ಈ ಕಿಮ್ ಜಾಂಗ್ ಉನ್ ಬಗ್ಗೆ ಹೇಳಬೇಕು ಅಂದ್ರೆ ಉತ್ತರ ಕೊರಿಯಾದ ಇತಿಹಾಸದ ಬಗ್ಗೆಯೂ ಹೇಳಲೇಬೇಕು. ಮೊದಲಿಗೆ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಎರಡೂ ಒಂದೇ ದೇಶವಾಗಿದ್ದವು. ವಸಾಹತುಶಾಹಿ ವ್ಯವಸ್ಥೆ ಉತ್ತುಂಗದಲ್ಲಿದ್ದಂತ ಸಂದರ್ಭದಲ್ಲಿ ಬಲಿಷ್ಠವಾಗಿದ್ದ ಜಪಾನ್ 1910ರಲ್ಲಿ ಈ ದೇಶವನ್ನ ಆಕ್ರಮಿಸಿಕೊಳ್ತು. 1945ರ ವರೆಗೆ ಅಂದ್ರೆ ಎರಡನೇ ಮಹಾಯುದ್ಧ ಮುಗಿಯೋವರೆಗೆ ಜಪಾನ್ ಕೊರಿಯಾದಲ್ಲಿ ಅಧಿಕಾರ ನಡೆಸಿತ್ತು. ಎರಡನೇ ಮಹಾಯುದ್ಧದಲ್ಲಿ ಜಪಾನ್ ಸೋತ ಮೇಲೆ ಅಮೆರಿಕ ಮತ್ತು ರಷ್ಯಾ ಒಟ್ಟಾಗಿದ್ದ ಕೊರಿಯಾವನ್ನ ಉತ್ತರ ಮತ್ತು ದಕ್ಷಿಣ ಭಾಗಗಳಾಗಿ ಹಂಚಿಕೊಂಡ್ವು. ಉತ್ತರ ಕೊರಿಯಾ ರಷ್ಯಾದ ಪಾಲಾಗಿ ಕಮ್ಯುನಿಸಂ ಅನ್ನ ಅಳವಡಿಸಿಕೊಂಡ್ರೆ, ದಕ್ಷಿಣ ಕೊರಿಯಾ ವಶಪಡಿಸಿಕೊಂಡ ಅಮೆರಿಕ ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಾರಣವಾಯ್ತು. ಹಾಗೆ ರೂಪುಗೊಂಡಿದ್ದೇ ಕಮ್ಯುನಿಸ್ಟ್ ದೇಶ ಉತ್ತರ ಕೊರಿಯಾ. ಒಂದು ದೇಶವನ್ನ ಎರಡು ತುಂಡು ಮಾಡಿದ ಅಮೆರಿಕ ಮತ್ತು ರಷ್ಯಾ 1948-49ರ ವೇಳೆಗೆ ಅಲ್ಲಿಂದ ಎದ್ದು ಹೋದವು. ಆಗ ಉತ್ತರ ಕೊರಿಯಾದ ಅಧಿಕಾರ ಹಿಡಿದವನು ಕಿಮ್ ಇಲ್ ಸಂಗ್. ಈತ ಉತ್ತರ ಕೊರಿಯಾದ ಪಿತಾಮಹ. ಇವನು ಉತ್ತರ ಕೊರಿಯಾವನ್ನ 40 ವರ್ಷಗಳ ಕಾಲ ಆಳಿದ್ದ. ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೀಡಾದ ಕಿಮ್ ಇಲ್ ಸಂಗ್ ಸೂಕ್ತ ಚಿಕಿತ್ಸೆ ಸಿಗದೇ ನರಳಿ ಸತ್ತುಹೋದ. ನಂತರ ಅಧಿಕಾರ ಹಿಡಿದವನು ಈತನ ಮಗ ಕಿಮ್ ಜಾಂಗ್ ಇಲ್. ಈತನ ಅವಧಿಯಲ್ಲೇ ಆ ದೇಶ ರಕ್ಷಣೆಯ ವಿಚಾರದಲ್ಲಿ ಬಲಿಷ್ಠವಾಗಿದ್ದು. ಇದಕ್ಕೆ ಚೀನಾ ಬೆನ್ನಿಗಿತ್ತು ಅನ್ನೋದೂ ಅಷ್ಟೇ ನಿಜ. 1994 ರಿಂದ 2011 ರವರೆಗೆ ದೇಶದ ಸರ್ವಾಧಿಕಾರಿಯಾಗಿದ್ದ. 2011ರಲ್ಲಿ ಕಿಮ್ ಜಾಂಗ್ ಇಲ್ ಅನಾರೋಗ್ಯದಿಂದ ಮೃತಪಟ್ಟಾಗ ತನ್ನ 27 ನೇ ವರ್ಷಕ್ಕೆ ಸರ್ವಾಧಿಕಾರಿಯಾದವನು ಈಗಿನ ಕಿಮ್ ಜಾಂಗ್ ಉನ್.
ಉತ್ತರ ಕೊರಿಯಾದ ಜನರ ಪಾಲಿಗೆ ಕಿಮ್ ಜಾಂಗ್ ಉನ್, ಆತನ ತಂದೆ ಮತ್ತು ತಾತ ಸಾಕ್ಷಾತ್ ದೇವರುಗಳೇ. ದೇಶೋದ್ಧಾರಕ್ಕಾಗಿ ಸ್ವರ್ಗದಿಂದಲೇ ಇಳಿದುಬಂದವರು. ಹಾಗಂತ ಇಡೀ ದೇಶದ ಜನರನ್ನ ನಂಬಿಸಲಾಗಿದೆ. ನಂಬದೇ ಇರುವವರನ್ನ ಬಂದೂಕಿನ ನಳಿಕೆಯಿಟ್ಟು ನಂಬಿಸಲಾಗುತ್ತೆ. ಈ ಸರ್ವಾಧಿಕಾರಿಗಳು ಮಾಡೋ ಹುಚ್ಚಾಟವನ್ನ ಅಲ್ಲಿನ ಜನ ಸಾಕ್ಷಾತ್ ದೇವರ ಲೀಲೆ ಅಂತಲೇ ನಂಬುತ್ತಾರೆ. ಹಾಗೆ ಅವರನ್ನ ಈ ಸರ್ವಾಧಿಕಾರಿಗಳೇ ನಂಬಿಸಿದರೋ, ಅಥವಾ ಜನರೇ ವದಂತಿಗಳನ್ನ ಸೃಷ್ಟಿಸಿಕೊಂಡು ನಂಬಿದರೋ ಗೊತ್ತಿಲ್ಲ. ಆದ್ರೆ ಒಂದಿಡೀ ದೇಶವನ್ನ ಈ ಕಿಮ್ ನ ಕುಟುಂಬ ಕಳೆದ 70 ವರ್ಷಗಳಿಂದ ಇಡೀ ಜಗತ್ತಿನಿಂದಲೇ ದೂರ ಇಟ್ಟಿದೆ. ಉತ್ತರ ಕೊರಿಯಾ ಜಗತ್ತಿನಲ್ಲೇ ಸುಭಿಕ್ಷ ದೇಶ ಅಂತ ಅಲ್ಲಿನ ಜನರನ್ನ ನಂಬಿಸಲಾಗಿದೆ. ಇಡೀ ಜಗತ್ತಿನದ್ದೇ ಒಂದು ದಾರಿಯಾದ್ರೆ, ಉತ್ತರ ಕೊರಿಯಾದ್ದೇ ಮತ್ತೊಂದು ದಾರಿ. ಈ ದೇಶದೊಳಗೆ ಏನಾಗುತ್ತೆ ಅನ್ನೋದು ಹೊರ ಜಗತ್ತಿಗೆ ಗೊತ್ತಾಗುವುದೇ ಇಲ್ಲ. ಇನ್ನು ಹೊರಜಗತ್ತಿನ ಆಗುಹೋಗುಗಳು ಇಲ್ಲಿನ ಜನರಿಗೆ ತಿಳಿಯುವುದೇ ಇಲ್ಲ. ಯಾಕಂದ್ರೆ ಅಲ್ಲಿ ಇಂಟರ್ ನೆಟ್ ಎಲ್ಲರಿಗೂ ಲಭ್ಯವಿಲ್ಲ. ಮೊಬೈಲ್ ಫೋನ್ ಸಂಪರ್ಕ ಇದೆಯಾದ್ರೂ ಅದು ದೇಶದ ಒಳಗೆ ಮಾತ್ರ. ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಅಲ್ಲಿ ಪ್ರವೇಶವಿಲ್ಲ. ವಿದೇಶಿ ಸಂಗೀತಕ್ಕೂ ನಿಷೇಧವಿದೆ. ಅದೊಂತರ ಇಡೀ ಜಗತ್ತಿನ ಪಾಲಿಗೆ ನಿಗೂಢ ದೇಶ. ಆ ದೇಶದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನ ಬದುಕು ಕೂಡ ಅಷ್ಟೇ ನಿಗೂಢ.
ತನ್ನ 27 ನೇ ವರ್ಷಕ್ಕೆ ಉತ್ತರ ಕೊರಿಯಾದ ಸರ್ವಾಧಿಕಾರಿಯಾದ ಕಿಮ್ ಜಾನ್ ಉನ್ ಇನ್ನೇನು ಮಾಡಬಲ್ಲ ಅಂತಲೇ ಜಗತ್ತು ಭಾವಿಸಿತ್ತು. ಆದ್ರೆ ಅಧಿಕಾರ ಹಿಡಿದ ಎರಡೇ ವರ್ಷಕ್ಕೆ ಜಗತ್ತಿನ ಪ್ರಭಾವಿ ವ್ತಕ್ತಿಗಳ ಸಾಲಿಗೆ ಬಂದುಬಿಟ್ಟ. ಎರಡೂವರೆ ಕೋಟಿ ಜನಸಂಖ್ಯೆಯ ದೇಶದಲ್ಲಿ ಹತ್ತು ಲಕ್ಷ ಸೈನಿಕರ ಸೇನೆ ಕಟ್ಟಿದ. ತನ್ನ ಆದೇಶವನ್ನ ಮೀರಿದವರನ್ನ ನಿರ್ಧಾಕ್ಷಿಣ್ಯವಾಗಿ ನೇಣಿಗೇರಿಸಿದ. ಅಂಥವರ ಇಡೀ ಕುಟುಂಬವನ್ನೇ ಜೈಲಿಗೆ ದೂಡುಬಿಡುತ್ತಿದ್ದ. ಹಾಗೆ ಉಸಿರು ಚೆಲ್ಲಿದವರ ಸಂಖ್ಯೆ ಅದೆಷ್ಟೋ. ಸರ್ಕಾರದಲ್ಲಿ ತನ್ನ ಮಾತು ಕೇಳದ ಅಧಿಕಾರಿಗಳನ್ನ ಗುಂಡಿಟ್ಟು ಮುಗಿಸಿಬಿಡುತ್ತಿದ್ದ. ಜನ ಇವನ ಆಡಳಿತವನ್ನ ನೋಡಿ ಈ ಹುಚ್ಚು ದೊರೆ ಹೇಳಿದ್ದನ್ನ ಚಾಚೂ ತಪ್ಪದೇ ಪಾಲಿಸಲಾರಂಭಿಸಿದ್ರು. ಅಧಿಕಾರ ಉಳಿಸಿಕೊಳ್ಳಲು ಏನೆಲ್ಲಾ ಕ್ರೌರ್ಯಗಳನ್ನ ಮಾಡಬೇಕೋ ಅದನ್ನೆಲ್ಲವನ್ನೂ ಮಾಡಿಬಿಟ್ಟ. ಇಂಥಾ ಕಿಮ್ 2009ರಲ್ಲೇ ರಿ ಸೋಲ್ ಜು ಎಂಬಾಕೆಯನ್ನ ಮದುವೆಯಾಗಿದ್ದ. ಈತ ಹೋದಲ್ಲಿ ಬಂದಲ್ಲೆಲ್ಲಾ ಆಕೆ ಕಾಣಿಸಿಕೊಳ್ತಿದ್ಲು. ಆದ್ರೆ ಕಳೆದ ಒಂದೆರಡು ವರ್ಷಗಳಿಂದ ಆಕೆ ಎಲ್ಲಿದ್ದಾಳೆ, ಏನಾದಳು ಅನ್ನೋ ಮಾಹಿತಿಯೇ ಇಲ್ಲ.
ಕಿಮ್ ಜಾಂಗ್ ಉನ್ ಅನ್ನೋ ಆಕೃತಿಯನ್ನ ನೋಡಿದ್ರೆ ಆತನ ದೇಶದ ಜನರಷ್ಟೇ ನಡುಗೋದಿಲ್ಲ. ಜಗತ್ತಿನ ಬಲಾಡ್ಯ ದೇಶ ಅಂತ ಹೇಳಿಕೊಳ್ಳೋ ಅಮೆರಿಕವೂ ಕೂಡ ಈತನನ್ನ ನೋಡಿದ್ರೆ ಹೆದರುತ್ತೆ. ಯಾವಾಗ ತನ್ನ ದೇಶದ ಮೇಲೆ ದಂಡೆತ್ತಿ ಬರುತ್ತಾನೋ ಅಂತ ದಕ್ಷಿಣ ಕೊರಿಯಾ ದಿನದ 24 ಗಂಟೆಯೂ ಯುದ್ಧ ಸನ್ನದ್ಧವಾಗಿಯೇ ಇರುತ್ತೆ. ಜಪಾನ್ ಈತನ ಮೇಲೆ ಯಾವಾಗಲೂ ಒಂದು ಕಣ್ಣಿಟ್ಟೇ ಇರುತ್ತೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾವನ್ನ ಆಜನ್ಮ ವೈರಿಗಳೆಂದೇ ಪರಿಗಣಿಸೋ ಕಿಮ್ ಜಾಂಗ್ ಉನ್ ಒಂದರ ಬೆನ್ನಿಗೊಂದರಂತೆ ನ್ಯೂಕ್ಲಿಯರ್ ಬಾಂಬ್ ಪ್ರಯೋಗಿಸಿಬಿಟ್ಟ. ಇಡೀ ಜಗತ್ತನ್ನೇ ಬೂದಿ ಮಾಡಿಬಿಡಬಲ್ಲ ಹೈಡ್ರೋಜನ್ ಬಾಂಬ್ ಪ್ರಯೋಗಿಸಿ ಅಮೆರಿಕವನ್ನ ಅಕ್ಷರಶಃ ನಡುಗಿಸಿದ್ದ. ನ್ಯೂಕ್ಲಿಯರ್ ಬಾಂಬ್ ಮತ್ತು ಹೈಡ್ರೋಜನ್ ಬಾಂಬ್ ಪ್ರಯೋಗಿಸಿದ್ದಕ್ಕೆ ಸಿಟ್ಟಿಗೆದ್ದಿದ್ದ ಡೊನಾಲ್ಡ್ ಟ್ರಂಪ್, ಉತ್ತರ ಕೊರಿಯಾದ ಮೇಲೆ ಯುದ್ಧ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ಕೊಟ್ಟಿದ್ದರು. ಆದ್ರೆ ಇದ್ಯಾವುದಕ್ಕೂ ತಲೆ ಕೆಡೆಸಿಕೊಳ್ಳದ ಕಿಮ್ ಜಾಂಗ್ ಉನ್ ಅಮೆರಿಕದ ಮೇಲೆ ಹೈಡ್ರೋಜನ್ ಬಾಂಬ್ ಹಾಕಿ ಉಡಾಯಿಸಿಬಿಡ್ತೀನಿ ಎಂದು ಬೆದರಿಕೆ ಹಾಕಿದ್ದ. ಆಗಲೇ ವಿಶ್ವದ ದೊಡ್ಡಣ್ಣ ಅಂತ ಬೀಗುತ್ತಿದ್ದ ಅಮೆರಿಕ ನಡುಗೋದಕ್ಕೆ ಶುರುವಾಗಿದ್ದು. ಅದಾದ ಮೇಲೆ ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜಾಂಗ್ ಉನ್ ಮಧ್ಯೆ ಶಾಂತಿಯ ಮಾತುಕತೆ ನಡೆದಿತ್ತು. ಈ ಮಾತುಕತೆಯ ನಂತರವೂ ಈತನನ್ನ ಜಗತ್ತಿನ ಯಾವ ದೇಶವೂ ನಂಬೋದಿಲ್ಲ, ಚೀನಾವೊಂದನ್ನ ಬಿಟ್ಟು.
ಇಂಥಾ ತಿಕ್ಕಲು ಸರ್ವಾಧಿಕಾರಿ ಈಗ ಹೃದಯ ಶಸ್ತ್ರಚಿಕಿತ್ಸೆಯಿಂದಾದ ಯಡವಟ್ಟಿನಿಂದ ಸಾಯುವ ಹಂತದಲ್ಲಿದ್ದಾನೆ. ಸತ್ತೇ ಹೋಗಿದ್ದಾನೆ ಅನ್ನೋ ಸುದ್ದಿಗಳು ಬರುತ್ತಿವೆ. ಇವನು ಬದುಕಿ ಬಂದರೆ ಉತ್ತರ ಕೊರಿಯಾದ ಜನರ ಪಾಲಿನ ನರಕ ಮುಂದುವರಿಯುತ್ತೆ. ಸತ್ತು ಹೋಗಿದ್ದೇ ನಿಜವಾದ್ರೆ ಆ ದೇಶವನ್ನ ಈತನ ತಂಗಿ ಕಿಮ್ ಯೋ ಜಾಂಗ್ ಆಳ್ವಿಕೆ ಮಾಡಬಹುದು. ಇಲ್ಲವೇ ಉತ್ತರ ಕೊರಿಯಾದ ಮೇಲೆ ನಿಯಂತ್ರಣ ಸಾಧಿಸಲು ಅಮೆರಿಕ, ಚೀನಾ ಮೆಲಾಟ ನಡೆಸಲೂಬಹುದು. ಎಲ್ಲವೂ ಕಿಮ್ ನ ಸಾವು-ಬದುಕಿನ ಮೇಲೆ ನಿರ್ಧಾರವಾಗಲಿದೆ.

ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ 100 ವರ್ಷ..!

ಜಲಿಯನ್ ವಾಲಾಬಾಗ್ ಹತ್ಯಾಕಾಂಡ

ಜಲಿಯನ್ ವಾಲಾಬಾಗ್ ಹತ್ಯಾಕಾಂಡ

ಅದು 100 ವರ್ಷಗಳ ಹಿಂದೆ ನಡೆದುಹೋದ ಭೀಕರ ಮಾರಣಹೋಮ. ಮನುಕುಲದ ಇತಿಹಾಸದ ಅತ್ಯಂತ ನಿರ್ಧಯ ಹತ್ಯಾಕಾಂಡ. ಅದೇ ಜಲಿಯನ್ ವಾಲಾಬಾಗ್ ಹತ್ಯಾಕಾಂಡ. ಇಂತಹ ಮತ್ತೊಂದು ನಿರ್ಧಯ ಮಾರಣಹೋಮ ದೇಶದ ಇತಿಹಾಸದಲ್ಲಿ ದಾಖಲಾಗಿಯೇ ಇಲ್ಲ… ನೂರು ವರ್ಷಗಳ ಹಿಂದೆ ನಡೆದು ಹೋದ ಆ ಹಳೇ ಗಾಯದ ಗುರುತು ಇನ್ನೂ ಮಾಸಿಲ್ಲ.. ಹತ್ಯಾಕಾಂಡದ ಬಗ್ಗೆ ಬ್ರಿಟನ್ ಪ್ರಧಾನಿ ತೆರೇಸಾ ಮೇ ಮೊನ್ನೆ ಮೊನ್ನೆಯಷ್ಟೇ ವಿಷಾಧ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ನೂರು ವರ್ಷಗಳ ನಂತರ ಇಂಗ್ಲೆಂಡ್ ಗೆ ಇದೊಂದು ನಾಚಿಗೆಗೇಡಿನ ಕೃತ್ಯ ಅಂತ ಅನ್ನಿಸಿದೆ..

        ಅದು ಸಿಖ್​ರ ನಾಡು ಪಂಜಾಬ್​ನ ಅಮೃತಸರದಲ್ಲಿ ನಡೆದು ಹೋದ ಭೀಕರ ಮಾರಣ ಹೋಮ. ಅದು 1919ರ ಏಪ್ರಿಲ್ 13 ನೇ ತಾರೀಖಿನ ಭಾನುವಾರ. ಅವತ್ತು ಸಿಖ್ಖರ ಪಾಲಿನ ಯುಗಾದಿ ಬೈಸಾಕಿ ಹಬ್ಬ. ಹೊಸ ವರ್ಷ ಆಚರಿಸಲು ಸಾವಿರಾರು ಜನ ಅಮೃತಸರದ ಜಲಿಯನ್ ವಾಲಾಬಾಗ್ ಉದ್ಯಾನವನದಲ್ಲಿ ಸೇರಿದ್ರು. ಆರರಿಂದ ಏಳು ಎಕರೆ ವಿಸ್ತೀರ್ಣದ ಪಾರ್ಕ್ ಅದು. ಎಲ್ಲರೂ ಬೈಸಾಕಿ ಹಬ್ಬದ ಸಂಭ್ರಮದಲ್ಲಿದ್ರು. ಇನ್ನೇನು ಸೂರ್ಯ ಮುಳುಗುವ ಸಮಯ. ಆಗ ಅಲ್ಲಿಗೆ ಬಂದಿದ್ದು ತೊಂಭತ್ತು ಸೈನಿಕರ ಬ್ರಿಟೀಷ್ ತುಕಡಿ. ಯಾರೂ ತಪ್ಪಿಸಿಕೊಳ್ಳಬಾರದೆಂದು ಉದ್ಯಾನವನಕ್ಕಿದ್ದ ಒಂದೇ ಒಂದು ಬಾಗಿಲನ್ನ ಮುಚ್ಚಲಾಯಿತು. ಬ್ರಿಟೀಷ್ ಸೈನಿಕ ತುಕಡಿ ಪೊಸೀಷನ್ ತೆಗೆದುಕೊಂಡು ತಮ್ಮ ಬಂದೂಕುಗಳಿಂದ ಗುಂಡುಗಳ ಮಳೆಗರೆದರು. ಅದು ಸುಮಾರು 10 ನಿಮಿಷಗಳ ಕಾಲ ನಡೆದ ಗುಂಡಿನ ಬೋರ್ಗರೆತ. ಹಬ್ಬದ ಸಂಭ್ರಮದಲ್ಲಿದ್ದ ಉದ್ಯಾನವನ ಅಕ್ಷರಶಃ ಸ್ಮಶಾನವಾಗಿತ್ತು. ಅವತ್ತು ಹಾಗೆ ಬ್ರಿಟೀಷರ ಗುಂಡಿಗೆ ಪ್ರಾಣ ತೆತ್ತವರ ಸಂಖ್ಯೆ 1200 ಕ್ಕೂ ಹೆಚ್ಚು. ಗುಂಡಿನ ಬೋರ್ಗರೆತದಿಂದ ತಪ್ಪಿಸಿಕೊಳ್ಳಲು ಉದ್ಯಾನದಲ್ಲಿದ್ದ ಭಾವಿಗೆ ಬಿದ್ದು ಪ್ರಾಣಬಿಟ್ಟವರ ಸಂಖ್ಯೆಯೇ 120 ಕ್ಕೂ ಹೆಚ್ಚು. ಎಳೆಯ ಕಂದಮ್ಮಗಳು, ಮಕ್ಕಳು, ಮಹಿಳೆಯರೂ, ವೃದ್ಧರೂ ಅನ್ನೋದನ್ನೂ ನೋಡದೇ ನಿರ್ಧಯವಾಗಿ ಮಾರಣಹೋಮ ನಡೆಸಲಾಗಿತ್ತು. ಇಂತದ್ದೊಂದು ಘೋರ ಹತ್ಯಾಕಾಂಡ ನಡೆಸಿದವನ ಹೆಸರು ಜನರಲ್ ಡಯರ್. ಬ್ರಿಟೀಷ್-ಇಂಡಿಯಾ ಸೇನೆಯ ಅಧಿಕಾರಿಯಾಗಿದ್ದ ಈತನನ್ನ ಇತಿಹಾಸ ರಕ್ತ ಪಿಪಾಸು ಅಂತಲೇ ಗುರುತಿಸುತ್ತೆ.

          ಇಂತದ್ದೊಂದು ಭೀಕರ ಹತ್ಯಾಕಾಂಡ ನಡೆಸಲಿಕ್ಕೆ ಅಲ್ಲಿ ಸೇರಿದ್ದ ಜನ ಮಾಡಿದ್ದ ತಪ್ಪಾದ್ರೂ ಏನು ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಬ್ರಿಟೀಷರ ವಿರುದ್ಧ ಭಾರತೀಯರು ದಂಗೆಯೇಳಬಹುದು ಅನ್ನೋ ಕಾರಣಕ್ಕೆ ಎಲ್ಲ ಸಭೆ ಸಮಾರಂಭಗಳನ್ನೂ ನಿಷೇಧಿಸಲಾಗಿತ್ತು. ಬ್ರಿಟೀಷ್ ಅಧಿಕಾರಿಗಳೂ ಹೇರಿದ್ದ ನಿಷೇಧಾಜ್ಞೆ ಉಲ್ಲಂಘಿಸಿ ಹಬ್ಬದ ಸಂಭ್ರಮಕ್ಕೆ ಸೇರಿದ್ದೇ ಆ ಜನ ಮಾಡಿದ್ದ ತಪ್ಪು. ಈ ಹತ್ಯಾಕಾಂಡದಲ್ಲಿ ಪ್ರಾಣ ತೆತ್ತವರ ಸಂಖ್ಯೆ 1200ಕ್ಕೂ ಹೆಚ್ಚು ಅನ್ನುತ್ತದೆ ಇತಿಹಾಸ. ಆದ್ರೆ ಅವತ್ತಿನ ಬ್ರಿಟೀಷ್ ಸರ್ಕಾರ ಸತ್ತವರ ಸಂಖ್ಯೆ ಕೇವಲ 379 ಅನ್ನೋ ಕಾಟಾಚಾರದ ಲೆಕ್ಕ ಕೊಟ್ಟಿತ್ತು.

ರಕ್ತಪಿಪಾಸು ಜನರಲ್ ಡಯರ್

ರಕ್ತಪಿಪಾಸು ಜನರಲ್ ಡಯರ್

        ಜನರಲ್ ಡಯರ್ ಮಾಡಿದ ಕೆಲಸಕ್ಕೆ ಬ್ರಿಟನ್ ನಲ್ಲಿ ಶ್ಲಾಘನೆಯೂ ವ್ಯಕ್ತವಾಗಿತ್ತು. ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವನ್ನ ಜನರಲ್ ಡಯರ್ ಹತ್ತಿಕ್ಕಿದ ಅಂತ ಸಂಭ್ರಮಿಸಿದ್ದರು ಬ್ರಿಟಿಷರು. ಅವತ್ತು ಆತನಿಗೆ ಶಿಕ್ಷೆ ಕೊಡಿ ಅಂತ ಕೇಳುವ ಗಟ್ಟಿ ದ್ವನಿ ಗಾಂಧೀಜಿ, ನೆಹರೂ ಸೇರಿದಂತೆ ಯಾರಿಗೂ ಇರಲಿಲ್ಲ. ಅವತ್ತಿಗೆ ಜನರಲ್ ಡಯರ್ ಮತ್ತು ಬ್ರಿಟೀಷ್ ಆಡಳಿತದ ವಿರುದ್ಧ ಪಂಜಾಬ್ ಸೇರಿದಂತೆ ಇಡೀ ದೇಶದಲ್ಲಿ ಆಕ್ರೋಶದ ಜ್ವಾಲೆ ಕುದಿಯುತ್ತಿತ್ತು. ಆಕ್ರೋಶಕ್ಕೆ ಮಣಿದ ಬ್ರಿಟೀಷ್ ಸರ್ಕಾರ ಕಾಟಾಚಾರಕ್ಕೊಂದು ತನಿಖೆಯನ್ನೂ ಮಾಡಿ, ಡಯರ್ ನನ್ನ ಲಂಡನ್ ಗೆ ವಾಪಸ್ ಕರೆಸಿಕೊಂಡಿತ್ತು. 1200 ಕ್ಕೂ ಹೆಚ್ಚು ಜನರ ರಕ್ತ ಕುಡಿದವನು ಕೆಲ ವರ್ಷಗಳ ನಂತರ ಬ್ರಿಟನ್ ನಲ್ಲಿ ಪಾರ್ಶ್ವವಾಯು ರೋಗಕ್ಕೆ ತುತ್ತಾಗಿ ಮಲಗಿದ್ದಲ್ಲೇ ಸತ್ತ.

     ಹಬ್ಬದ ಸಂಭ್ರಮದಲ್ಲಿದ್ದವರನ್ನ ಮಾರಣ ಹೋಮ ಮಾಡಿದ್ದನ್ನ ಬಾಲಕ ಉದಮ್ ಸಿಂಗ್ ಕಣ್ಣಾರೆ ನೋಡಿದ್ದ. ಅವತ್ತು ತನ್ನವರನ್ನೆಲ್ಲಾ ಕಳೆದುಕೊಂಡು ಗುಂಡೇಟಿನಿಂದ ಗಾಯಗೊಂಡಿದ್ದ ಉದಮ್ ಸಿಂಗ್ ಹತ್ಯಾಕಾಂಡಕ್ಕೆ ಪ್ರತೀಕಾರದ ಪಣ ತೊಟ್ಟಿದ್ದ. ಜಲಿಯನ್ ವಾಲಾಬಾಗ್ ನಲ್ಲಿನ ಮಣ್ಣನ್ನ ಮನೆಗೆ ಕೊಂಡೊಯ್ದು, ತನ್ನ ಜೀವಿತಾವಧಿವರೆಗೆ ಜತೆಗೇ ಇಟ್ಟುಕೊಂಡಿದ್ದ ಉದಮ್ ಸಿಂಗ್. ಹತ್ಯಾಕಾಂಡ ನಡೆಸಿದವನು ಮಲಗಿದ್ದಲ್ಲೇ ಪ್ರಾಣ ಬಿಟ್ಟ ಅನ್ನೋದೇನೋ ನಿಜ. ಆದರೆ ಉದಮ್ ಸಿಂಗ್ ನ ಪ್ರತೀಕಾರದ ಜ್ವಾಲೆ ಮಾತ್ರ ಆರಿರಲಿಲ್ಲ. ಆದರೆ ಪ್ರತೀಕಾರ ಯಾರ ವಿರುದ್ಧ..? ಸಾಮೂಹಿಕವಾಗಿ ಮಾರಣ ಹೋಮ ನಡೆಸಿದವನು ಪ್ರಾಣ ಬಿಟ್ಟಾಗಿತ್ತು. ಗುಂಡಿನ ಮಳೆ ಸುರಿಸುವಂತೆ ಜನರಲ್ ಡಯರ್ ಗೆ ಆದೇಶ ಕೊಟ್ಟಿದ್ದನಲ್ಲ ಅವನ ವಿರುದ್ಧ. ಆತನ ಹೆಸರೇ ಮೈಕಲ್ ಓಡ್ವೈರ್. ಜಲಿಯನ್​ ವಾಲಾ ಬಾಗ್ ಹತ್ಯಾಕಾಂಡ ನಡೆದಾಗ ಪಂಜಾಬ್​ನ ಲೆಫ್ಟಿನೆಂಟ್ ಗೌವರ್ನರ್​ ಆಗಿದ್ದವನು ಈ ಮೈಕಲ್. ಹತ್ಯಾಕಾಂಡದ ನಂತರ ಮಾತನಾಡಿದ್ದ ಮೈಕಲ್ ಬ್ರಿಟೀಷ್ ಸೇನೆ ಮಾಡಿದ್ದು ಸರಿಯಾದ ಕ್ರಮ ಎಂದಿದ್ದ.

       

ಉದಮ್ ಸಿಂಗ್

ಪ್ರತೀಕಾರ ತೀರಿಸಿಕೊಂಡ ಉದಮ್ ಸಿಂಗ್

ಹೇಗಾದರೂ ಮಾಡಿ ಹತ್ಯಾಕಾಂಡ ನಡೆಸಲು ಕಾರಣನಾಗಿದ್ದ ಲೆಫ್ಟಿನೆಂಟ್ ಗೌವರ್ನರ್ ಮೈಕಲ್ ಓಡ್ವೈರ್ ನನ್ನ ಹತ್ಯೆ ಮಾಡೋದು ಉದಮ್ ಸಿಂಗ್ ನ ಗುರಿಯಾಗಿತ್ತು. 21 ವರ್ಷಗಳ ಹೋರಾಟದ ನಂತರ ಉದಮ್ ಸಿಂಗ್ ಮೈಕೆಲ್​ನನ್ನು ಕೊಂದು ಪ್ರತೀಕಾರ ತೀರಿಸಿಕೊಂಡಿದ್ದ. ಪ್ರತೀಕಾರದ ನಿರ್ಧಾರ ಮಾಡಿದ್ದ ಉದಮ್​ ಸಿಂಗ್ 1934 ರಲ್ಲಿ ಕಾಶ್ಮೀರ ಮೂಲಕ ಇಸ್ಲಾಮಾಬಾದ್, ಕಾಬೂಲ್ ದಾಟಿ ಜರ್ಮನಿ ಸೇರಿಕೊಂಡ. ಕೆಲಕಾಲ ಜರ್ಮನಿಯಲ್ಲಿದ್ದು ನಂತರ ಇಂಗ್ಲೆಂಡ್ ತಲುಪಿಕೊಂಡಿದ್ದ. ಅಲ್ಲೊಂದು ಬಾಡಿಗೆ ಮನೆ ಮಾಡಿಕೊಂಡು ಮೈಕಲ್ ಓಡ್ವೈರ್​ ನ ಹತ್ಯೆಗೆ ಸಂಚು ಮಾಡುತ್ತಲೇ ಇದ್ದ. ಅದು 1940 ಮಾರ್ಚ್ 13 ನೇ ತಾರೀಕಿನ ದಿನ. ಲಂಡನ್ ನ ಕ್ಯಾಕ್ ಸ್ಟನ್ ಹಾಲ್ ನಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಲೆಫ್ಟಿನೆಂಟ್ ಗೌವರ್ನರ್ ಮೈಕಲ್​ ಬಂದಿದ್ದ. ಆ ಕಾರ್ಯಕ್ರಮಕ್ಕೆ ಹೋಗಿದ್ದ ಉದಮ್​ ಸಿಂಗ್​ ಪಿಸ್ತೂಲ್​ನಿಂದ ಮೈಕೆಲ್​ನ ಎದೆಗೆ ಗುಂಡಿಕ್ಕಿ ಪ್ರತೀಕಾರ ಮುಗಿಸಿದ್ದ. ತನ್ನ ನೆಲದಲ್ಲಿ ಮಾರಣ ಹೋಮ ನಡೆಸಿದವನನ್ನ ಅವನದ್ದೇ ನೆಲಕ್ಕೆ ನುಗ್ಗಿ ಕೊಂದು ಹಾಕಿದ್ದ ಉದಮ್ ಸಿಂಗ್. ಅವತ್ತು ಜಲಿಯನ್ ವಾಲಾಬಾಗ್ ನಲ್ಲಿ ರಕ್ತ ಚೆಲ್ಲಿದ ಸಾವಿರಾರು ಜನರ ಆತ್ಮಗಳ ಆರ್ತನಾದಕ್ಕೆ ಅಂತ್ಯ ಸಿಕ್ಕಿತ್ತು.

ಲೆಫ್ಟಿನೆಂಟ್ ಗೌವರ್ನರ್ ಮೈಕಲ್

ಲೆಫ್ಟಿನೆಂಟ್ ಗೌವರ್ನರ್ ಮೈಕಲ್

       ಪ್ರತೀಕಾರದ ಜ್ವಾಲೆಯನ್ನ ತೀರಿಸಿಕೊಂಡ ಉದಮ್ ಸಿಂಗ್ ಲಂಡನ್ ಕೋರ್ಟ್​ನಲ್ಲಿ ನಿಂತು ಹೇಳಿದ್ದು ಮಾತ್ರ ಕೆಚ್ಚದೆಯ ಮಾತುಗಳನ್ನ. ನನ್ನ ಜನಗಳ ರಕ್ತ ಕುಡಿದವನನ್ನ ನಾನು ಕೊಂದು ಹಾಕಿದೆ. ನನಗೀಗ ಆನಂದವಾಗಿದೆ, ಇದು ತಾಯ್ನಾಡಿಗಾಗಿ ನಾನು ಮಾಡಿದ ಕರ್ತವ್ಯ. ಪ್ರಾಣ ತ್ಯಾಗ ಮಾಡುವುದಕ್ಕಿಂತಲೂ ಹೆಚ್ಚಿನ ಗೌರವ ಇನ್ನೇನಿದೆ ಎಂಬ ದಿಟ್ಟ ಮಾತುಗಳನ್ನಾಡಿದ್ದ. ಈ ಘಟನೆ ನಡೆದ ಮೂರು ತಿಂಗಳಲ್ಲೇ ಉದಮ್ ಸಿಂಗ್ ನನ್ನ ಲಂಡನ್ ನಲ್ಲಿ ನೇಣಿಗೇರಿಸಲಾಯಿತು.
    ಅವತ್ತು ಧೀರ ಉದಮ್ ಸಿಂಗ್ ತೋರಿದ ದೈರ್ಯ ಸಾಹಸ ನೂರಾರು ಸ್ವಾತಂತ್ರ ಹೋರಾಟಗಾರರಿಗೆ ಸ್ಪೂರ್ತಿಯಾಗಿತ್ತು. ಈ ಘಟನೆ ನಡೆದ ಏಳು ವರ್ಷಗಳ ನಂತರ ಸ್ವಾತಂತ್ರ್ಯ ಭಾರತದ ಉದಯವಾಗಿತ್ತು. ಇವತ್ತಿಗೂ ಅಮೃತಸರದಲ್ಲಿರುವ ಇವತ್ತಿಗೂ ಜಲಿಯನ್ ವಾಲಾಬಾಗ್ ನ ಗೋಡೆಗಳ ಮೇಲಿರೋ ಗುಂಡಿನ ದಾಳಿಯ ಗುರುತುಗಳು ಸಾವಿರಾರು ಜನರ ಆರ್ತನಾದದ ಕಥೆ ಹೇಳುತ್ವೆ.. ಈ ಏಪ್ರಿಲ್ 13ಕ್ಕೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು ನೂರು ವರ್ಷಗಳಾಗುತ್ತೆ. ಆ ಮಾರಣ ಹೋಮ ನಡೆದು ನೂರು ವರ್ಷಗಳಾದ್ರೂ ಅವತ್ತು ಆದ ಗಾಯ ಇನ್ನೂ ಮಾಸಿಲ್ಲ ಅನ್ನೋದು ಮಾತ್ರ ಸತ್ಯ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸೂಪರ್ ಪವರ್..! ಅಂತರಿಕ್ಷ ಯುದ್ಧಕ್ಕೆ ಸಿದ್ಧವಾಯ್ತು ದೇಶ..!

ಉಪಗ್ರಹ ನಿಗ್ರಹ ಕ್ಷಿಪಣಿ ಪ್ರಯೋಗ

ಉಪಗ್ರಹ ನಿಗ್ರಹ ಕ್ಷಿಪಣಿ ಪ್ರಯೋಗ

ಭಾರತ ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಸೂಪರ್ ಪವರ್… ಬಾಹ್ಯಾಕಾಶದಲ್ಲಿರುವ ಉಪಗ್ರಹವನ್ನ ಕ್ಷಿಪಣಿಯ ಮೂಲಕ ಹೊಡೆದುರುಳಿಸುವ ತಂತ್ರಜ್ಞಾನವನ್ನ ಭಾರತ ಅಭಿವೃದ್ಧಿ ಪಡಿಸಿದೆ. ಇದ್ದಕ್ಕಿದ್ದಂತೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಅಂತರಿಕ್ಷದಲ್ಲಿದ್ದ ಉಪಗ್ರಹ ಹೊಡೆದುರುಳಿಸಿದ್ದೇವೆ ಅಂತ ಘೋಷಿಸಿದ್ರು.. ಅಲ್ಲಿಗೆ ಭಾರತ ಈ ಸಾಧನೆ ಮಾಡಿದ ಜಗತ್ತಿನ ನಾಲ್ಕನೇ ರಾಷ್ಟ್ರ ಅನ್ನೋ ಖ್ಯಾತಿ ಮುಡಿಗೇರಿಸಿಕೊಂಡಿತು. ಈ ತಂತ್ರಜ್ಞಾನ ಹೊಂದಿರುವ ಅಮೆರಿಕಾ, ರಷ್ಯಾ, ಚೀನಾಗಳ ಸಾಲಿಗೆ ಈಗ ಭಾರತ ಸೇರಿದಂತಾಗಿದೆ. ಜಗತ್ತಿನ ಕೆಲವು ಪ್ರವಲ ದೇಶಗಳಾದ ಇಂಗ್ಲೆಂಡ್, ಜಪಾನ್, ಫ್ರಾನ್ಸ್, ಜರ್ಮನಿಯಂತಹ ರಾಷ್ಟ್ರಗಳು ಮಾಡದ ಸಾಧನೆಯನ್ನ ಭಾರತ ಮಾಡಿದೆ. . ಇಸ್ರೋ ಮತ್ತು ಡಿಆರ್​ಡಿಓ ಇಂತದ್ದೊಂದು ತಂತ್ರಜ್ಞಾನವನ್ನ ಅಭಿವೃದ್ಧಿಪಡಿಸಿವೆ.

ಉಪಗ್ರಹ ನಿಗ್ರಹ ಕ್ಷಿಪಣಿ ಪ್ರಯೋಗದ ತಂತ್ರಜ್ಞಾನದ ಬಗ್ಗೆ ತಿಳೀಬೇಕು ಅಂದ್ರೆ ಸ್ವಲ್ಪ ಇತಿಹಾಸದತ್ತ ನೋಡ್ಬೇಕು. ಅಮೇರಿಕಾ ಮತ್ತು ಸೋವಿಯತ್ ಒಕ್ಕೂಟಗಳ ಮಧ್ಯೆ ನಡೆಯುತ್ತಿದ್ದ ಶೀತಲ ಸಮರ ಖಂಡಾಂತರ ಕ್ಷಿಪಣಿಗಳ ಅಭಿವೃದ್ಧಿಗೆ ಕಾರಣವಾಗಿತ್ತು. ರಷ್ಯಾದ ಕ್ಷಿಪಣಿಗಳು ಆಕಾಶಮಾರ್ಗವಾಗಿ ಅಮೆರಿಕವನ್ನ ನುಗ್ಗಿಬಿಡಬಲ್ಲವು ಅನ್ನೋ ಆತಂಕ ಶುರುವಾಗಿದ್ದು ಈ ತಂತ್ರಜ್ಞಾನ. ಹಾಗೆ ಆಕಾಶ ಮಾರ್ಗವಾಗಿ ಬರುವ ಖಂಡಾಂತರ ಕ್ಷಿಪಣಿಗಳನ್ನು ಮಾರ್ಗಮಧ್ಯೆಯೇ ಹೊಡೆದುರುಳಿಸುವ ತಂತ್ರಜ್ಞಾನವನ್ನ ಅಮೆರಿಕ ಅಭಿವೃದ್ಧಿ ಪಡಿಸಿತು. ಈಗ ಜಗತ್ತಿನ ಹಲವು ದೇಶಗಳು ಕ್ಷಿಪಣಿ ಪ್ರತಿರೋಧಕ ವ್ಯವಸ್ಥೆಯನ್ನ ಹೊಂದಿವೆ. ಇದೇ ರೀತಿಯಲ್ಲೇ ಶತೃ ದೇಶದ ಉಪಗ್ರಹವೊಂದು ಅಂತರಿಕ್ಷಕ್ಕೆ ಹಾರಿ ಅಲ್ಲಿಂದಲೇ ನಮ್ಮ ದೇಶದ ಮೇಲೆ ಕಳ್ಳಗಣ್ಣಿಟ್ಟರೆ..? ಅಥವಾ ಶತೃ ರಾಷ್ಟ್ರದ ಮೇಲೆ ಯುದ್ಧಕ್ಕೆ ದಂಡೆತ್ತಿ ಹೋಗದೇ ನಿಂತ್ರಿಸಬೇಕಾದರೆ..? ಆ ದೇಶದ ಉಪಗ್ರಹವನ್ನ ಭೂಮಿಯಿಂದ ಕ್ಷಿಪಣಿ ಉಡಾಯಿಸಿ ಹೊಡೆದುರುಳಿಸುವ ತಂತ್ರಜ್ಞಾನವೇ ಉಪಗ್ರಹ ಪ್ರತಿರೋಧ ಕ್ಷಿಪಣಿ ಪ್ರಯೋಗದ ತಂತ್ರಜ್ಞಾನ. ಇದನ್ನ ಇಂಗ್ಲೀಷ್​ನಲ್ಲಿ ಎ-ಸ್ಯಾಟ್ ಅಂತ ಕರೀತಾರೆ. ಬಾಹ್ಯಾಕಾಶದಲ್ಲಿದ್ದ ನಮ್ಮದೇ ದೇಶದ ಲೈವ್ ಉಪಗ್ರಹವೊಂದನ್ನ ಕೇವಲ ಮೂರೇ ಮೂರು ನಿಮಿಷಗಳಲ್ಲಿ ಹೊಡೆದುರುಳಿಸಿ ಭಾರತ ಮಹತ್ ಸಾಧನೆ ಮಾಡಿದೆ.

ಈ ಸಾಧನೆಯಿಂದ ಭಾರತಕ್ಕೇನು ಲಾಭ ಅಂದ್ರೆ, ಪಾಕಿಸ್ತಾನ ಅಥವಾ ಚೀನಾದ ಉಪಗ್ರಹಗಳನ್ನ ಹೊಡೆದುರುಳಿಸುವಂತಹ ತಾಕತ್ತಿದೆ ಅಂತ ಅರ್ಥ. ಒಂದು ವೇಳೆ ಭಾರತ ಅಂತರಿಕ್ಷದಲ್ಲಿರುವ ಪಾಕಿಸ್ತಾನದ ಉಪಗ್ರಹಗಳನ್ನ ಕೆಲವೇ ಕ್ಷಣಗಳಲ್ಲಿ ಧ್ವಂಸ ಮಾಡಿಬಿಟ್ಟರೆ, ಪಾಕಿಸ್ತಾನ ಕೆಲವೇ ನಿಮಿಷಗಳಲ್ಲಿ ಭಾರತದ ಮುಂದೆ ನಡು ಬಗ್ಗಿಸಿ ನಿಂತುಬಿಡುತ್ತೆ. ಅಂತಹ ಸಾಮರ್ಥ್ಯ ನಮ್ಮ ದೇಶಕ್ಕೆ ಬಂದಿದೆ. ಆದರೆ ಭಾರತದ ಈ ಸಾಮರ್ಥ್ಯದಿಂದ ಹೆದರಬೇಕಾಗಿದ್ದು ಚೀನಾ ದೇಶವೇ ಹೊರತು ಪಾಕಿಸ್ತಾನ ಅಲ್ಲ.. ಯಾಕಂದ್ರೆ ಆ ದೇಶಕ್ಕೆ ಈ ಬಗ್ಗೆ ಕಿಂಚಿತ್ತೂ ಗೊತ್ತೇ ಇಲ್ಲ ಬಿಡಿ. ಭಾರತದ ವಿರುದ್ಧ ಸದಾ ಕಾಲು ಕೆರೆದು ನಿಲ್ಲುವ ಚೀನಾ ನಮ್ಮ ಉಪಗ್ರಹಗಳನ್ನು ನಿಷ್ಕ್ರಿಯ ಮಾಡಲು ಯತ್ನಿಸಿದರೆ, ತಿರುಗೇಟು ನೀಡೋ ಸಾಮರ್ಥ್ಯ ಭಾರತಕ್ಕಿದೆ. ಅಥವಾ ಭಾರತದ ಮೇಲೆ ಕಳ್ಳಗಣ್ಣು ಇಡಲು ತಮ್ಮ ಉಪಗ್ರಹವನ್ನ ಬಳಸಿಕೊಂಡ್ರೆ ಅವುಗಳನ್ನ ಹೊಡೆದುರುಳಿಸುವ ತಾಕತ್ತು ಭಾರತಕ್ಕಿದೆ. ಅದಕ್ಕೇ ಭಾರತ ಮಾಡಿದ ಈ ಸಾಧನೆಗೆ ಅಷ್ಟೊಂದು ಮಹತ್ವ ಬಂದಿದ್ದು.

ಅಮೆರಿಕಾ ಮತ್ತು ರಷ್ಯಾ ಮಧ್ಯದ ಶೀತಲ ಸಮರ ಅಂತರಿಕ್ಷದಲ್ಲಿನ ಉಪಗ್ರಹಗಳನ್ನ ಹೊಡೆದುರುಳಿಸುವ ತಂತ್ರಜ್ಞಾನ ಅಭಿವೃದ್ಧಿಗೆ ಕಾರಣವಾಯ್ತು. 1980ರಲ್ಲೇ ಅಮೆರಿಕಾ ರಷ್ಯಾದ ಉಪಗ್ರಹಗಳನ್ನು ಹೊಡೆಯುವ ಭಯ ಸೃಷ್ಟಿಸಲು ಈ ತಂತ್ರಜ್ಞಾನವನ್ನ ಅಭಿವೃದ್ಧಿ ಮಾಡಿತು. ಐದೇ ವರ್ಷಗಳಲ್ಲಿ ರಷ್ಯಾ ಕೂಡ ತಾನೇನು ಕಡಿಮೆ ಇಲ್ಲ ಅನ್ನೋದನ್ನ ತೋರಿಸಿತ್ತು. ಅಮೆರಿಕದ ಉಪಗ್ರಹಗಳನ್ನ ಹೊಡೆದುರುಳಿಸುವ ಸಾಮರ್ಥ್ಯವನ್ನ ರಷ್ಯಾ 1985ರಲ್ಲಿ ಗಳಿಸಿಕೊಳ್ತು. ಚೀನಾ 2007ರಲ್ಲಿ ಈ ಸಾಧನೆಯನ್ನ ಮಾಡಿದ ಮೂರನೇ ರಾಷ್ಟ್ರವಾಯಿತು. ಈಗ ಭಾರತದ ಸರದಿ. ಅಂದ ಹಾಗೆ ಇಸ್ರೋ ಮತ್ತು ಡಿಆರ್​ಡಿಓ 2012ರಲ್ಲೇ ಇಂತದ್ದೊಂದು ಪ್ರಯೋಗ ನಡೆಸಲು ಸಿದ್ಧವಿತ್ತು. ಆದ್ರೆ ಅವತ್ತಿನ ಯುಪಿಎ ಸರ್ಕಾರ ದೈರ್ಯ ತೋರಿಸಲಿಲ್ಲ. ಜಗತ್ತಿನ ಪ್ರಬಲ ರಾಷ್ಟ್ರಗಳ ವಿರೋಧ ಕಟ್ಟಿಕೊಳ್ಳಬೇಕಾದೀತು ಅನ್ನೋ ಆತಂಕ ಅಂದಿನ ಯುಪಿಎ ಸರ್ಕಾರಕ್ಕಿತ್ತು. ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಇಸ್ರೋ ಮತ್ತು ಡಿಆರ್​ಡಿಓ ಪ್ರಸ್ತಾಪಕ್ಕೆ ಓಕೆ ಅಂದಿತ್ತು. ಅದರ ಪರಿಣಾಮವೇ ಈಗ ಭಾರತ ಅಂತರಿಕ್ಷ ಕ್ಷೇತ್ರದಲ್ಲಿ ಸೂಪರ್ ಪವರ್ ಅನ್ನೋ ಹಿರಿಮೆಗೆ ಪಾತ್ರವಾಗಿದ್ದು.

ಸಾಮಾನ್ಯವಾಗಿ ಉಪಗ್ರಹಗಳು ಭೂಮಿಯಿಂದ 300 ರಿಂದ 600 ಕಿಲೋಮೀಟರ್ ಎತ್ತರದಲ್ಲಿ ಪ್ರದಕ್ಷಿಣೆ ಹಾಕುತ್ತವೆ. ಇವತ್ತಿನ ನಮ್ಮ ಜನಜೀವನವೆಲ್ಲವೂ ಅವಲಂಭಿತವಾಗಿರೋದು ಈ ಉಪಗ್ರಹಗಳ ಮೇಲೆಯೇ. ನಮ್ಮ ಮೊಬೈಲ್ ಫೋನ್‍ಗಳು, ಇಂಟರ್ ನೆಟ್, ಆರೋಗ್ಯ, ವಿಮಾನದಿಂದ ಹಿಡಿದು ಕ್ಯಾಬುಗಳ ವರೆಗಿನ ಎಲ್ಲ ಸಾರಿಗೆ ವ್ಯವಸ್ಥೆ, ಹವಾಮಾನ ಮುನ್ಸೂಚನೆ, ಸಾಫ್ಟ್ ವೇರ್, ಕೃಷಿ, ರಕ್ಷಣಾ ಕ್ಷೇತ್ರ ಹೀಗೆ ಎಲ್ಲವೂ ಸುಸೂತ್ರವಾಗಿ ನಡೆಯೋದು ಈ ಉಪಗ್ರಹಗಳಿಂದಲೇ. ಇವತ್ತು ಉಪಗ್ರಹಗಳಿಲ್ಲದೆ ಈ ಜಗತ್ತು ಒಂದಿಂಚೂ ಮುಂದೆ ಹೋಗಲು ಸಾಧ್ಯವೇ ಇಲ್ಲ. ಹೀಗಾಗಿ ಶತೃದೇಶವನ್ನ ಒಂದೇ ಒಂದು ಸಾವೂ ಇಲ್ಲದೇ, ಯುದ್ಧ ವಿಮಾನಗಳ ಅಬ್ಬರ, ಬಾಂಬ್ ದಾಳಿ, ಗುಂಡಿನ ಮೊರೆತ ಏನೇನೂ ಇಲ್ಲದೆ ತನ್ನೆದುರು ಮಂಡಿಯೂರಿಸಿಕೊಳ್ಳಬೇಕು ಅಂದ್ರೆ ಅದು ಅಂತರಿಕ್ಷ ಯುದ್ಧದಿಂದ ಮಾತ್ರ ಸಾಧ್ಯ. ಶತೃದೇಶದ ಉಪಗ್ರಹಗಳನ್ನೇ ಉಡಾಯಿಸಿಬಿಟ್ಟರೆ, ಆ ದೇಶ ಕ್ಷಣ ಮಾತ್ರದಲ್ಲಿ ಅಕ್ಷರಶಃ ಸ್ಥಬ್ಧವಾಗಿಬಿಡುತ್ತದೆ. ಯುದ್ಧ ಅಂದಾಕ್ಷಣ ಶತೃ ದೇಶದ ಮೇಲೆ ಬಾಂಬ್ ಹಾಕೋದು, ಸಾವಿರಾರು ಜನರ ಸಾವು, ಆಸ್ತಿ ಪಾಸ್ತಿ ನಷ್ಟ ಇದೆಲ್ಲವೂ ಹಳೇ ಮಾಡೆಲ್ಲು. ಅಂದರೆ ಮುಂದಿನ ದಿನಗಳಲ್ಲಿ ಯುದ್ಧ ಭೂಮಿ, ಆಕಾಶ, ಸಮುದ್ರದಲ್ಲಿ ನಡೆಯೋಲ್ಲ.. ಅಂತರಿಕ್ಷದಲ್ಲಿ ನಡೆಯುತ್ತೆ. ಈ ಅಂತರಿಕ್ಷ ಯುದ್ಧಕ್ಕೆ ಭಾರತ ಈಗಲೇ ಸಜ್ಜಾಗಿದೆ.

ಶಶಿವರ್ಣಂ!

ಶಬರಿಮಲೆಗೆ ಸ್ತ್ರೀ ಪ್ರವೇಶ, ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರ ಅನ್ನುವವರು ಇಲ್ಲಿ ನೋಡಿ…

ಶಬರಿಮಲೆಯ ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶದಿಂದ ಹಿಂದೂ ಧರ್ಮಕ್ಕೆ ಅಪಚಾರವಾಯ್ತು, ಅಯ್ಯಪ್ಪನ ಸನ್ನಿಧಿಯ ಪಾವಿತ್ರ್ಯತೆ ಹಾಳಾಯ್ತು, ಇದು ಹಿಂದೂ ಧರ್ಮದ ವಿರುದ್ಧದ ಷಡ್ಯಂತ್ರ ಎಂದೆಲ್ಲ ಕನವರಿಸುತ್ತಿರುವವರಲ್ಲಿ, ನೊಂದುಕೊಳ್ಳಿತ್ತಿರುವವರಿಗೆ ಒಂದು ಮನವಿ. ಅದೇ ದೇಗುಲದಲ್ಲಿ ಈಗಾಗಲೇ ಹಲವು ಮಹಿಳೆಯರು ಅಯ್ಯಪ್ಪನ ದರ್ಶನ ಪಡೆದವರಿದ್ದಾರೆ. ಸ್ವಾತಂತ್ರಾ ಪೂರ್ವದಲ್ಲಿ ಮತ್ತು ನಂತರದಲ್ಲಿ ಟ್ರವಾಂಕೂರು ರಾಜಮನೆತನದ ರಾಣಿಯರು ದೇವಸ್ಥಾನಕ್ಕೆ ಬಂದು ಹೋಗುತ್ತಿದ್ದ ಬಗ್ಗೆ ಇತಿಹಾಸದಲ್ಲಿ ಉಲ್ಲೇಖಗಳಿವೆ. 1986ರಲ್ಲಿ ಬಂದ ನಂಬಿನಾರ್ ಕೆಡುವತ್ತಿಲ್ಲೈ ಅನ್ನೋ ಸಿನಿಮಾದಲ್ಲಿ ನಾಯಕ ನಟಿ ಅಯ್ಯಪ್ಪನ ಸನ್ನಿಧಾನದಲ್ಲಿ ದೇವರ ದರ್ಶನ ಪಡೆದ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. 1820ರ ಕಾಲದ ಕೆಲವು ಬ್ರಿಟಿಷ್ ದಾಖಲೆಗಳಲ್ಲಿ ಈ ದೇವಸ್ಥಾನಕ್ಕೆ ಮಹಿಳೆಯರು ಬರುವುದಿಲ್ಲ ಎಂದು ಉಲ್ಲೇಖಿಸಲಾಗಿದೆ. ಹಾಗಂತ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧವಿದೆ ಅಂತೇನೂ ಅಲ್ಲಿ ಹೇಳಿಲ್ಲ. ರಸ್ತೆ ಸಂಪರ್ಕವಿಲ್ಲದ ಆ ದಟ್ಟ ಕಾಡಿನ ಮಧ್ಯೆ ಇರುವ ದೇವಸ್ಥಾನಕ್ಕೆ ಆ ಕಾಲದಲ್ಲಿ ಮಹಿಳೆಯರು ತಿಂಗಳುಗಟ್ಟಲೆ ನಡೆದು ಹೋಗಲು ಸಾಧ್ಯ ವಿಲ್ಲ ಅನ್ನೋ ಕಾರಣಕ್ಕೆ ಹೋಗುತ್ತಿರಲಿಲ್ಲವೇನೋ.. ಅಥವಾ ಕಾಡಿನ ಮಧ್ಯೆ ಹೋಗುವಾಗ ಮುಟ್ಟಾದರೆ ಕಷ್ಟ ಎಂಬ ಕಾರಣಕ್ಕೋ ಮಹಿಳೆಯರು ಹೋಗದಿರುವ ಸಾಧ್ಯತೆಗಳಿವೆ. ಅದೇ ಕಾರಣಕ್ಕೋ ಏನೋ ಋತು ಚಕ್ರದ ವಿಷಯ ಶಬರಿಮಲೆಯಲ್ಲಿ ಸಂಘರ್ಷ ಸೃಷ್ಟಿಗೆ ಕಾರಣವಾಗಿರಬಹುದು.

1970ರ ನಂತರ ಶಬರಿಮಲೆಗೆ ಉತ್ತಮವಾದ ರಸ್ತೆ ಸಂಪರ್ಕ ನಿರ್ಮಾಣವಾಯಿತು. ಆ ನಂತರ ಮಹಿಳೆಯರು ಬರಲಾರಂಭಿಸಿದಾಗ ಶುರುವಾಗಿದ್ದು ಇಷ್ಟೆಲ್ಲ ಹಗ್ಗ ಜಗ್ಗಾಟ. 1990ರಲ್ಲಿ ಟ್ರವಾಂಕೂರ್ ದೇವಸ್ವಂ ಮಂಡಳಿ ಮಾಜಿ ಕಮಿಷನರ್ ಆಗಿದ್ದ ಚಂದ್ರಿಕಾ ತಮ್ಮ ಮೊಮ್ಮಗುವಿಗೆ ಮೊದಲ ಅನ್ನದ ತುತ್ತು ತಿನ್ನಿಸುವ ಕಾರ್ಯಕ್ರಮ ಮಾಡಿದ್ದು ಅಲ್ಲೇ. ಈ ವೇಳೆ ಚಂದ್ರಿಕಾ ಅವರ ಮಗಳೂ ಕೂಡ ಅಯ್ಯಪ್ಪನ ಸನ್ನಿಧಾನದಲ್ಲೇ ಇದ್ರು. ಇದರ ಫೋಟೋ ಆಗಸ್ಟ್ 19, 1990 ರಲ್ಲಿ ಜನ್ಮಭೂಮಿ ಅನ್ನೋ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಫೋಟೋ ನೋಡಿದ ಮಹೇಂದ್ರನ್ ಅನ್ನೋ ಅಯ್ಯಪ್ಪನ ಭಕ್ತ ಕೇರಳ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದ. ಆಗ ಟ್ರವಾಂಕೂರ್ ದೇವಸ್ವಂ ಬೋರ್ಡ್ ಮತ್ತು ಅಯ್ಯಪ್ಪ ಸೇವಾ ಸಂಘಂ ಹೈಕೋರ್ಟ್ ಗೆ ಒಂದು ಅಫಿಡೆವಿಟ್ ಸಲ್ಲಿಸಿದ್ದವು. ಯುವತಿಯರು, ನವ ದಂಪತಿಗಳು ಸೇರಿದಂತೆ ಎಲ್ಲ ವಯಸ್ಸಿನ ಮಹಿಳೆಯರೂ ಅಯ್ಯಪ್ಪನ ದೇವಸ್ಥಾನಕ್ಕೆ ಬರುತ್ತಾರೆ ಅಂದಿತ್ತು ಆ ಅಫಿಡೆವಿಟ್. 1940ರಲ್ಲಿ ನನ್ನ ತಾಯಿಯ ಮಡಿಲಲ್ಲಿ ಮಲಗಿ ನನ್ನ ಮೊದಲ ತುತ್ತು ತಿನ್ನುವ ಕಾರ್ಯಕ್ರಮ ಅಯ್ಯಪ್ಪನ ಸನ್ನಿಧಿಯಲ್ಲಿ ನಡೆದಿತ್ತು ಅನ್ನೋದನ್ನ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲಹೆಗಾರರಾಗಿದ್ದ ಟಿಕೆಎಸ್ ನೈಯರ್ ಬಹಿರಂಗವಾಗಿ ಹೇಳಿಯೇ ಹಲವು ವರ್ಷಗಳಾಗಿವೆ. ಆದ್ರೆ 1991 ರಲ್ಲಿ ಬಂದ ಕೇರಳ ಹೈಕೋರ್ಟ್ ಆದೇಶ 10 ರಿಂದ 50 ವರ್ಷದ ಮಹಿಳೆಯರ ಪ್ರವೇಶ ನಿರ್ಬಂಧಕ್ಕೆ ಕಾನೂನಿನ ಮಾನ್ಯತೆ ನೀಡಿತ್ತು. ಅದಾದ ಮೇಲೆ ಅಷ್ಟಮಂಗಲ ಪ್ರಶ್ನೆ ಅನ್ನೋ ಪೂಜೆಯಲ್ಲಿ ಮಹಿಳಾ ಪ್ರವೇಶವಾಗಿದೆ ಅನ್ನೋ ಉತ್ತರ ಬಂದಿದ್ದು, ಆ ನಂತರ ನಟಿ ಜಯಮಾಲ ನಾನು ಅಯ್ಯಪ್ಪನ ದರ್ಶನ ಮಾಡಿದ್ದೆ ಅಂದಿದ್ದು ಎಲ್ಲವೂ ಆಗಿತ್ತು.

10 ರಿಂದ 50 ವರ್ಷದ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಅನ್ನೋದಕ್ಕೆ ಯಾವುದೇ ಐತಿಹಾಸಿಕ ಸಾಕ್ಷ್ಯಗಳಾಗಲೀ, ಶಾಸ್ತ್ರೀಯ ಉಲ್ಲೇಖಗಳಾಗಲೀ ಇಲ್ಲ. ಇದನ್ನ ಸಂಪ್ರದಾಯ ಅನ್ನೋಣ ಅಂದರೆ ನೂರಾರು ವರ್ಷ ಈ ರೀತಿಯ ಆಚರಣೆ ನಡೆದುಕೊಂಡು ಬಂದಿಲ್ಲ. ಈಗ ಪ್ರಶ್ನೆ ಇರೋದು ಅಯ್ಯಪ್ಪನ ದೇಗುಲಕ್ಕೆ ಮಹಿಳಾ ಪ್ರವೇಶ ಅಪಚಾರ, ಅಯ್ಯಪ್ಪನ ಪಾವಿತ್ರ್ಯತೆಗೆ ದಕ್ಕೆ, ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರ, ಅಯ್ಯಪ್ಪನ ಭಕ್ತರ ಭಾವನೆಗಳಿಗೆ ದಕ್ಕೆ ಅನ್ನೂ ವಿಚಾರದಲ್ಲಿ. ತಮ್ಮ ಧರ್ಮ, ಸಂಸ್ಕೃತಿ, ಆಚರಣೆ ವಿರುದ್ಧ ಏನೋ ಮಸಲತ್ತು ನಡೆಯುತ್ತಿದೆ ಅಂದಾಗ ಅದನ್ನ ಪ್ರತಿಭಟಿಸೋದು ತಪ್ಪಲ್ಲ. ಧಾರ್ಮಿಕ ನಂಬಿಕೆಗಳಿಗೆ ಘಾಸಿಯಾದಾಗ ದನಿಯೆತ್ತುವುದು ಸಹಜ. ಆದ್ರೆ ನಿಜಕ್ಕೂ ಇಬ್ಬರ ಮಹಿಳೆಯರ ದೇವಸ್ಥಾನದಿಂದ ಹಿಂದೂ ಧರ್ಮಕ್ಕೆ ಅಪಚಾರವಾಯ್ತಾ..? ಹಿಂದೂ ಧರ್ಮವನ್ನ ಮುಗಿಸಿಬಿಡಲು ಮಾಡಿದ ಹುನ್ನಾರವಾ ಇದು ಅಂತ ನೋಡಿದ್ರೆ ಅದರ ಲವಲೇಶವೂ ಕಾಣೋದಿಲ್ಲ. ಯಾಕಂದ್ರೆ ಹಿಂದೂ ಧರ್ಮದ ಯಾವ ಶಾಸ್ತ್ರಗಳಲ್ಲೂ 10 ರಿಂದ 50 ವರ್ಷದ ಮಹಿಳೆಯರಿಗೆ ನಿರ್ಬಂಧ ವಿಧಿಸಬೇಕು ಎಂದಿಲ್ಲ. ಯಾವ ಧರ್ಮ ಗ್ರಂಥಗಳಲ್ಲೂ ಇದರ ಉಲ್ಲೇಖ ಇಲ್ಲ. ಟ್ರವಾಂಕೂರು ರಾಜಮನೆತನದ ದಾಖಲೆಗಳಲ್ಲೂ ಈ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಇನ್ನು ಇತಿಹಾಸದಲ್ಲಾದರೂ ಈ ಬಗ್ಗೆ ಸ್ಪಷ್ಟವಾಗಿ ದಾಖಲಾಗಿದೆಯಾ ಅಂದರೆ ಅದೂ ಇಲ್ಲ. ಹಾಗಾಗಿ ಮಹಿಳೆಯರಿಗೆ ನಿರ್ಬಂಧ ವಿಧಿಸುವ ಸಂಪ್ರದಾಯಕ್ಕೆ ಧರ್ಮದ ಬೆಂಬಲವೇ ಇಲ್ಲ ಅಂತಾಯ್ತು. ಇದನ್ನೆಲ್ಲ ನೋಡಿದ್ರೆ ಮಹಿಳೆಯರ ಪ್ರವೇಶದಿಂದ ಧರ್ಮಕ್ಕೆ ಅಪಚಾರ, ಪಾವಿತ್ರ್ಯತೆಗೆ ದಕ್ಕೆ ಎಂಬ ವಾದಗಳಲ್ಲಿ ಹುರುಳಿಲ್ಲ ಅನ್ನೋದು ಸ್ಪಷ್ಟವಾಗುತ್ತೆ.

ಇನ್ನು ಮಹಿಳೆಯರ ಪ್ರವೇಶಕ್ಕೆ ಒತ್ತಾಯಿಸುವ ಹೋರಾಟ ಹಿಂದೂ ಧರ್ಮದ ವಿರುದ್ಧದ ಷಡ್ಯಂತ್ರವಾ…? ಅಥವಾ ಹಿಂದೂ ಧರ್ಮವನ್ನು ಮುಗಿಸಿಬಿಡುವ ಮಸಲತ್ತಾ ಅಂತ ನೋಡಿದರೆ ಅದೂ ಅಲ್ಲ. ಯಾಕಂದ್ರೆ ಹಿಂದೂ ಧರ್ಮ ಇಂತಹ ನೂರಾರು ಆಚರಣೆ. ಮೂಢ ನಂಬಿಕೆ ಮತ್ತು ಕಂದಾಚಾರಗಳನ್ನು ಮೆಟ್ಟಿ ನಿಂತಿರೋದಕ್ಕೆ ಇವತ್ತು ಇಷ್ಟು ಗಟ್ಟಿಯಾಗಿ ನೆಲೆಯೂರಿರೋದು. ಹಿಂದೂ ಧರ್ಮ ಯಾವುದೇ ರಚಿತ ಪುಸ್ತಕದ (scripted) ಆಧಾರದ ಮೇಲೆ ನಿಂತಿಲ್ಲ. ಹಿಂದೂ ಧರ್ಮ ಅನ್ನೋದು ಜೀವನ ಕ್ರಮ, ನಂಬಿಕೆಯ ನೆಲೆಗಟ್ಟು. scripted ಧರ್ಮಗಳು ಕಣ್ಣು ಬಿಡುವ ಸಾವಿರಾರು ವರ್ಷಗಳ ಹಿಂದೆಯೇ ಬೇರೂರಿರುವಂತಹ ಧರ್ಮ. ಮಹಾ ಭಾರತ, ರಾಮಾಯಣ, ಭಗವದ್ಗೀತೆ, ವೇದಗಳು ಇವೆಯಾದರೂ ಅವು ಹಿಂದೂಗಳ ಪಾಲಿಗೆ ಬರೆದಿಟ್ಟ ಶಾಸನಗಳೇನೂ ಅಲ್ಲ. ಅಲ್ಲಿ ಬರೆದಿದ್ದನ್ನೇ ಪಾಲಿಸಬೇಕು ಅನ್ನುವ ಕಟ್ಟಳೆಗಳೇನು ಇಲ್ಲ. ಹಾಗಂತ ಧರ್ಮ ಗ್ರಂಥಗಳನ್ನ ಅಗೌರವ ತೋರಿಸಬೇಕು ಅಂತಲ್ಲ. ಈ ಕಾಲಘಟ್ಟಕ್ಕೆ ಯಾವುದು ಸರಿಯೋ, ಯಾವುದು ಧರ್ಮ ಸಮ್ಮತವೋ..? ಯಾವುದಕ್ಕೆ ಕಾನೂನಿನ ಸಮ್ಮತಿಯಿದೆಯೋ ಅದನ್ನ ಅನುಸರಿಸಿದರೆ ಸಾಕು. 300 ವರ್ಷಗಳ ಮುಸ್ಲಿಂ ದೊರೆಗಳ ಆಡಳಿತ, 200 ವರ್ಷಗಳ ಕ್ರಿಶ್ಚಿಯನ್ ಬ್ರಿಟಿಷ್ ಆಡಳಿತದ ಕಾಲದಲ್ಲೇ ಹಿಂದೂ ಧರ್ಮವನ್ನ ಮುಗಿಸಿಬಿಡಲು ಸಾಧ್ಯವಾಗಲಿಲ್ಲ. ತನ್ನನ್ನು ತಾನು ರಕ್ಷಿಸಿಕೊಳ್ಳುವ ತಾಕತ್ತು ಈ ಧರ್ಮಕ್ಕಿದೆ. ಹಾಗಂತ ಏನೇ ಆದರೂ ಧರ್ಮವೇ ಕಾಪಾಡಿಕೊಳ್ಳುತ್ತದೆ ಅಂತ ಕೈಕಟ್ಟಿ ಕೂರಬೇಕು ಅಂತೇನೂ ಅಲ್ಲ. ಅಂತಹ ಸಂದರ್ಭಗಳು ಬಂದಾಗ ಹಿಂದೂಗಳು ತಿರುಗಿಬಿದ್ದ ಘಟನೆಗಳು ಇತಿಹಾಸದಲ್ಲಿವೆ. ಇಬ್ಬರು ಹೆಣ್ಣು ಮಕ್ಕಳ ಅಯ್ಯಪ್ಪನ ದೇಗುಲ ಪ್ರವೇಶದಿಂದ ಹಿಂದೂ ಧರ್ಮದ ಅಸ್ಥಿತ್ವಕ್ಕೆ ಯಾವ ಅಪಾಯವೂ ಆಗೋದಿಲ್ಲ. ಹಾಗಾಗಿ ಇದನ್ನು ಧರ್ಮದ ವಿರುದ್ಧದ ಷಡ್ಯಂತ್ರ ಎಂದು ಭಾವಿಸಿ ಯಾರೂ ಮನಸ್ಸಿಗೆ ನೋವು ಮಾಡಿಕೊಳ್ಳಬೇಕಾಗಿಲ್ಲ. ಹಿಂದೂ ಧರ್ಮದಲ್ಲಾದ ನೂರಾರು ಸುಧಾರಣೆಗಳಲ್ಲಿ ಇದೂ ಒಂದಾಗಲಿದೆ ಅಷ್ಟೇ. ಇಲ್ಲವಾದ್ರೆ ಸತಿ ಸಹಗಮನ ಪದ್ದತಿ, ದಲಿತರಿಗೆ ದೇಗುಲ ಪ್ರವೇಶಕ್ಕೆ ನಿರ್ಬಂಧ, ದೇವದಾಸಿ ಪದ್ದತಿ ಸೇರಿದಂತೆ ಹಲವು ಕರ್ಮಟ ಪದ್ದತಿಗಳು ಇವತ್ತಿಗೂ ಇರುತ್ತಿದ್ದವು.

ಯಾವ ಧರ್ಮ ಬದಲಾವಣೆಗಳಿಗೆ ತೆರೆದುಕೊಳ್ಳದೇ ನಿಂತ ನೀರಾಗುತ್ತದೋ ಅಲ್ಲಿ ಮೂಲಭೂತವಾದ ಸೃಷ್ಟಿಯಾಗಯತ್ತೆ. ಕರ್ಮಟತನ ಉಲ್ಬಣವಾಗುತ್ತೆ. ಪ್ರತೀ ಬದಲಾವಣೆಗಳನ್ನೂ ವಿರೋಧಿಸುತ್ತಾ ಮೂಲಭೂತವಾದಿಗಳ ಮಾದರಿಯನ್ನು ಅನುಸರಿಸುವ ದರ್ದು ಈ ಧರ್ಮಕ್ಕೆ ಬೇಕಾಗಿಲ್ಲ. ಹಿಂದೂ ಧರ್ಮ ಸಾವಿರಾರು ವರ್ಷಗಳಿಂದ ನಿರಂತರವಾಗಿ ಕಾಲಕ್ಕನುಗುಣವಾಗಿ ಬದಲಾಗುತ್ತಲೇ ಇದೆ. ನಿರಂತರ ಬದಲಾವಣೆಗೆ ತೆರೆದುಕೊಂಡಿರುವುದರಿಂದಲೇ ಭಾರತದಲ್ಲಿ ಗಟ್ಟಿಯಾಗಿ ನೆಲೆಯೂರಿರೋದು. ಆತ್ಮ ವಿಮರ್ಷೆಗೆ ಒಳಗಾದರೆ ಮನುಷ್ಯ ಹೇಗೆ ಅಂತರ್ ಶುದ್ಧನಾಗುತ್ತಾನೋ ಹಾಗೆ ಒಂದು ಧರ್ಮವೂ ವಿಮರ್ಷೆಗೊಳಪಡುತ್ತಿದ್ದರೆ ಅದು ಶುದ್ಧವಾಗುತ್ತಲೇ ಇರುತ್ತದೆ. ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ಹಿಂದೂಗಳು ಒಪ್ಪಿಕೊಂಡರೆ ಈ ಧರ್ಮ ನಿಂತ ನೀರಲ್ಲ ಅಂತ ಮತ್ತೊಮ್ಮೆ ಸಾರಿದಂತಾಗುತ್ತದೆ.

ಕೆಲವು ಬದಲಾವಣೆಗಳು ತನ್ನಿಂದ ತಾನೇ ಘಟಿಸುತ್ತಿರುತ್ತವೆ.. ಆದ್ರೆ ಕೆಲ ಬದಲಾವಣೆಗಳಿಗೆ ಹೋರಾಟ ಅಗತ್ಯ. ಹಾಗಂತ ಮಹಿಳಾ ಹಕ್ಕುಗಳ ಹೋರಾಟಕ್ಕೆ, ಚಳವಳಿಗೆ ಧಾರ್ಮಿಕ ಕ್ಷೇತ್ರಗಳು ವೇದಿಕೆಯಾಗಬಾರದು. ಎಲ್ಲ ಮಹಿಳೆಯರಿಗೂ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಿ ಸುಪ್ರೀಂ ಕೋರ್ಟ್ ನ ಆದೇಶ ಮಾಡಿರೋದೇ ಮಹಿಳಾ ಹೋರಾಟಕ್ಕೆ ಸಿಕ್ಕ ದೊಡ್ಡ ಜಯ. ತೀರ್ಪು ಬಂದ ನಂತರ ದೇಗುಲ ಪ್ರವೇಶಿಸಿ ಅದೇನನ್ನೋ ಸಾಧಿಸಿಬಿಡ್ತೀವಿ ಅಂತ ಹಠಕ್ಕೆ ಬಿದ್ದು ಅಯ್ಯಪ್ಪನ ಗುಡಿಗೆ ನುಗ್ಗಲೆತ್ನಿಸಿದರಲ್ಲ.. ಅದು ಅಕ್ಷಮ್ಯ. ಸುಪ್ರೀಂ ಕೋರ್ಟ್ ಅಯ್ಯಪ್ಪ ದೇವಸ್ಥಾನದ ಧಾರ್ಮಿಕ ವಿಧಿ ವಿಧಾನಗಳನ್ನೆಲ್ಲಾ ಮುರಿದು ದೇಗುಲ ಪ್ರವೇಶಿಸಿ ಅಂತೇನು ತೀರ್ಪು ಕೊಟ್ಟಿಲ್ಲವಲ್ಲ. ಅಲ್ಲಿನ ವ್ರತ ನಿಯಮಗಳ ಪ್ರಕಾರ ನಡೆದು ಅಯ್ಯಪ್ಪನ ದರ್ಶನ ಮಾಡಿದರೆ ಅದು ಸುಪ್ರೀಂ ಕೋರ್ಟ್ ತೀರ್ಪನ್ನ ಗೌರವಿಸಿದಂತಾಗುತ್ತದೆ. ಸುಪ್ರೀಂ ತೀರ್ಪಿನ ನಂತರ ಈಗಾಗಲೇ ಘಾಸಿಯಾಗಿರುವ ಭಾವನೆಗಳಿಗೆ ಬೆಂಕಿ ಹಚ್ಚಬಾರದು. ರೆಹನಾ ಫಾತಿಮಾ, ಮೇರಿ ಸ್ವೀಟಿ, ಕವಿತಾ ಜಕ್ಕಲ್ ಅಂತವರು ದೇವಸ್ಥಾನದೊಳಗೆ ನುಗ್ಗುವವರಂತೆ ಬಂದು ಸಾಧಿಸಿದ್ದೇನು..? ಮಹಿಳಾ ಸಮಾನತೆಯ ಹೋರಾಟದ ಹೆಸರಲ್ಲಿ ಹುಚ್ಚು ಪ್ರಚಾರದ ಹಿಂದೆ ಬಿದ್ದಿರುವ ಇಂತವರದ್ದು ಕಿಡಿಗೇಡಿತನವಷ್ಟೇ. ಈಗ ದೇವಸ್ಥಾನ ಪ್ರವೇಶಿಸಿರುವ ಬಿಂದು ಮತ್ತು ಕನಕ ದುರ್ಗಾಪ್ರಚಾರದ ಹಿಂದೆ ಬಿದ್ದು ದೇವರ ಪ್ರವೇಶ ಮಾಡಿದಂತೆ ಕಾಣುತ್ತಿಲ್ಲ. ದೇಗುಲ ಪ್ರವೇಶದ ವೇಳೆ ಸಾಮಾನ್ಯ ಭಕ್ತರ ಜತೆ ದೇವರ ದರ್ಶನ ಪಡೆದಿದ್ದಾರೆ. ಈ ಬೆಳವಣಿಗೆ ಹಲವು ಮಹಿಳಾ ಭಕ್ತರಿಗೆ ಸ್ಪೂರ್ತಿಯಾದರೆ ಅದೂ ಆಗಿಬಿಡಲಿ. ಸುಪ್ರೀಂ ಕೋರ್ಟ್ ಎಲ್ಲ ವಯಸ್ಸಿನ ಮಹಿಳೆಯರು ಹೋಗಲೇಬೇಕು ಅಂತೇನೂ ಹೇಳಿಲ್ಲ, Ready to Wait ಅನ್ನುವವರು ಅವರಿಚ್ಛೆಗನುಗುಣವಾಗಿ ನಡೆಯಲಿ.. ಹೋಗ ಬಯಸುವವರು ಹೋಗಲಿ ಅಷ್ಟೇ…

ಇಲ್ಲಿ ಕಮ್ಯುನಿಸ್ಟ್ ಆಡಳಿತ ಮತ್ತು ಬಿಜೆಪಿ ಮಧ್ಯದ ರಾಜಕೀಯ ಜಿದ್ದಾಜಿದ್ದಿಯಲ್ಲಿ ಧರ್ಮವನ್ನು ಎಳೆದು ತರಲಾಗಿದೆ ಅಷ್ಟೇ. ಭಾರತದಂತಹ ರಾಷ್ಟ್ರದಲ್ಲಿ ಜಾತಿ, ಧರ್ಮ ಇಲ್ಲದ ರಾಜಕಾರಣ ಊಹಿಸಲೂ ಸಾಧ್ಯವಿಲ್ಲ. ಈ ವಿಚಾರವಾಗಿ ಅಯ್ಯಪ್ಪ ಭಕ್ತರ ಮನವೊಲಿಸುವಂತಹ ಒಂದೇ ಒಂದು ಸಣ್ಣ ಪ್ರಯತ್ನವನ್ನೂ ಕೇರಳದ ಕಮ್ಯುನಿಸ್ಟ್ ಸರ್ಕಾರ ಮಾಡಲಿಲ್ಲ. ಕಮ್ಯುನಿಸ್ಟ್ ನೆಲೆ ಭದ್ರ ಮಾಡಿಕೊಳ್ಳೋದಷ್ಟೇ ಅವರ ಅಜೆಂಡಾ. ಬಿಜೆಪಿ ಈ ವಿಚಾರ ಮುಂದಿಟ್ಟುಕೊಂಡು ಹಿಂದೂಗಳ ಭಾವನೆಗಳನ್ನ ಮತಗಳನ್ನಾಗಿ ಪರಿವರ್ತಿಸಲು ಯತ್ನಿಸುತ್ತಿದೆಯಷ್ಟೇ. ಇದರಲ್ಲಿ ತನಗೂ ಲಾಭವಾಗಲಿ ಅಂತ ಕಾಂಗ್ರೆಸ್ ಕೇರಳದಲ್ಲಿ ಬಿಜೆಪಿಯ ನಿಲುವು ತೆಗೆದುಕೊಂಡಿದೆ..! ಅಯ್ಯಪ್ಪ ದೇವಸ್ಥಾನದ ವಿಷಯದಲ್ಲಿ ಕಾಂಗ್ರೆಸ್ ನ ರಾಷ್ಟ್ರಮಟ್ಟದ ನಿಲುವು ಸ್ತ್ರೀ ಪ್ರವೇಶದ ಪರವಾಗಿದ್ರೆ, ಕೇರಳದಲ್ಲಿ ಮಾತ್ರ ತದ್ವಿರುದ್ಧ. ಈ ರಾಜಕೀಯದ ಮಧ್ಯೆ ಸಿಲುಕಿ ಅಯ್ಯಪ್ಪನ ಸನ್ನಿಧಿಯ ಪಾವಿತ್ರ್ಯತೆ ಹಾಳಾಯಿತು, ಧರ್ಮಕ್ಕೆ ಅಪಚಾರವಾಯಿತು, ಹಿಂದೂ ಧರ್ಮ ಮುಗಿಸಿಬಿಡುವ ಮಸಲತ್ತು ಅಂತ ನೊಂದುಕೊಂಡರೆ ನೋವುಣ್ಣುವವರು ನಾವೇ.. ನಮ್ಮ ನೋವಿನಲ್ಲಿ ನಲಿಯುವವುವರಿದ್ದಾರೆ ಎಚ್ಚರಿಕೆ…

– ಶಶಿವರ್ಣಂ

#Shabarimala #RightToPray #WomenEntry #Ayyappa #Hindutva

ದೇಶದ ಮೊದಲ ಪ್ರಧಾನಿಯಾಗಬೇಕಿತ್ತು ಸರ್ದಾರ್ ಪಟೇಲ್..

ಈ ದೇಶವನ್ನು ಬಹುಕಾಲ ಆಳಿದ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಅನ್ನೋದಕ್ಕೆ ಕಿಂಚಿತ್ತು ಬೆಲೆ ಇದ್ದಿದ್ದರೆ ಈ ದೇಶದ ಮೊದಲ ಪ್ರಧಾನಿಯಾಗಬೇಕಿತ್ತು ಸರ್ದಾರ್ ವಲ್ಲಭ ಭಾಯ್ ಪಟೇಲ್. ಆಂತರಿಕ ಪ್ರಜಾಪ್ರಭುತ್ವ ಅನ್ನೋದಕ್ಕೆ ಅರ್ಥವೇ ಇಲ್ಲದಿದ್ದರಿಂದ ನೆಹರು ಮೊದಲ ಪ್ರಧಾನಿಯಾದರು. 1946ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದವರೇ ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ದೇಶ ಮುನ್ನಡೆಸಬೇಕಿತ್ತು. ದೇಶದ 15 ಕಾಂಗ್ರೆಸ್ ಕಮಿಟಿ ಸದಸ್ಯರಲ್ಲಿ 12 ಮತಗಳು ಸರ್ದಾರ್ ಪಟೇಲ್ರಿಗೆ ಬಿದ್ದಿದ್ದವು. ಉಳಿದ ಮೂರು ಕಮಿಟಿ ಸದಸ್ಯರು ಯಾರನ್ನೂ ಬೆಂಬಲಿಸಲಿಲ್ಲ.. ನೆಹರು ಅವರ ಪರವಾಗಿ ಒಂದೇ ಒಂದು ಮತವೂ ಬೀಳಲಿಲ್ಲ. ಹೀನಾಯ ಸೋಲಿನಿಂದ ಕುದ್ದು ಹೋಗಿದ್ದ ನೆಹರು, ಗಾಂಧೀಜಿ ಅವರ ಬಳಿ ಕಾಂಗ್ರೆಸ್ ಅನ್ನು ಒಡೆಯುವ ಮಾತುಗಳನ್ನಾಡಿದ್ದರು.. ದೇಶ ಕಟ್ಟಬೇಕಾದ ಸಮಯದಲ್ಲಿ ಒಡಕಿನ ಮಾತು ಕೇಳಿದ ಗಾಂಧೀಜಿ, ಸರ್ದಾರ್ ಪಟೇಲರಿಗೆ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಮತ್ತು ಪ್ರಧಾನಿ ಪಟ್ಟದಿಂದ ಹಿಂದೆ ಸರಿಯುವಂತೆ ಸೂಚಿಸಿದರು ಅನ್ನುತ್ತದೆ ನೈಜ ಇತಿಹಾಸ.. ಗಾಂಧೀಜಿಯುವರ ಮೇಲೆ ಅಪಾರ ಗೌರವ ಹೊಂದಿದ್ದ ಸರ್ದಾರ್ ಪಟೇಲ್ ವಿರೋಧದ ಮಾತಾಡದೇ ಹಿಂದೆ ಸರಿದು ಎರಡನೇ ಸ್ಥಾನ ಒಪ್ಪಿಕೊಂಡಿದ್ದರು. ಆದ್ರೆ ಈ ಇತಿಹಾಸವನ್ನು ಸ್ವಾತಂತ್ರಾ ನಂತರದ ಪೀಳಿಗೆಗೆ ಹೇಳದೇ ಮೋಸ ಮಾಡಿದ್ದು ಯಾರು..? ದೇಶ ತುಂಡು ತುಂಡಾಗಲು ಬಿಡದೇ ಬಂಡೆಯಂತೆ ನಿಂತು ಒಗ್ಗೂಡಿಸಿದ ಸರ್ದಾರ್ ಪಟೇಲರಿಗೆ ನೆಹರು ಅವರಿಗೆ ಸಿಕ್ಕ ಪ್ರಾಶಸ್ತ್ಯವಾಗಲೀ, ಗೌರವವಾಗಲೀ ಸಿಗಲಿಲ್ಲ.. ಮೊದಲ ಪ್ರಧಾನಿಯಾದ ನೆಹರು ತಮಗೆ ತಾವೇ ಭಾರತ ರತ್ನ ಪ್ರಶಸ್ತಿ ಕೊಟ್ಟುಕೊಂಡರು.. ಆದ್ರೆ ದೇಶ ಕಟ್ಟಿದ ನೇತಾರನಿಗೆ 1991ರಲ್ಲಿ ಮರಣೋತ್ತರ ಭಾರತ ರತ್ನ ನೀಡಲಾಯಿತು.. ಈಗ ಸರ್ದಾರ್ ಪಟೇಲ್ರ ವ್ಯಕ್ತಿತ್ವದಷ್ಟೇ ಎತ್ತರದ ಪ್ರತಿಮೆ ನಿರ್ಮಿಸಿ ಗೌರವಿಸಲಾಗಿದೆ..

#StatueOfUnity #SardarVallabhbhaiPatel #RashrtriyaEktaDivas #RunForUnity #IronManOfIndia

ಸಲ್ಮಾನ್ ಪರ ಕಣ್ಣೀರು ಸುರಿಸುವ ಗೋಸುಂಬೆಗಳೂ ಇದ್ದಾರೆ..!

9624338-3x2-700x467ದೊಡ್ಡ ಅಭಿಮಾನಿ ಬಳಗವನ್ನಿಟ್ಟುಕೊಂಡವನು ಕಂಠಪೂರ್ತಿ ಕುಡಿದು ಯಾರ ಮೇಲೆ ಬೇಕಾದರೂ ಕಾರು ಹತ್ತಿಸಬಹುದು. ಸಂರಕ್ಷಿತ ವನ್ಯಜೀವಿಗಳನ್ನು ಭೇಟೆಯಾಡಬಹುದು. ಅಂಥವನನ್ನು ಈ ದೇಶದ ಕಾನೂನು ಅಪರಾಧಿ ಎಂದು ಘೋಷಿಸಿ ಜೈಲಿಗೆ ತಳ್ಳಿದರೆ ಬಾಲಿವುಡ್ ಸ್ಟಾರ್ ಗಳು, ಆತನ ಅಂಧ ಅಭಿಮಾನಿಗಳು #WeLoveYouSalmanKhan , #SaveSalman ಎಂದು ಅಭಿಯಾನ ಮಾಡುತ್ತಿದ್ದಾರೆ. ನಾಚಿಕೆಯಾಗಬೇಕು ಇವರ ಹುಚ್ವು ಅಭಿಮಾನಕ್ಕೆ, ಲಜ್ಜೆಗೇಡಿತನಕ್ಕೆ..! ಬಾಲಿವುಡ್ ನಟನಾದ ಮಾತ್ರಕ್ಕೆ, ದೊಡ್ಡ ಅಭಿಮಾನಿ ಬಳಗ ಹೊಂದಿದ ಮಾತ್ರಕ್ಕೆ ಆತನನ್ನು ಈ ದೇಶದ ಕಾನೂನು ಕ್ಷಮಿಸಬೇಕಾ..? ಈ ದೇಶದಲ್ಲಿ ಶ್ರೀಮಂತರಿಗೊಂದು ಕಾನೂನು, ಬಡವರಿಗೊಂದು ಕಾನೂನಿದೆಯಾ..? ಕಾನೂನಿನ ಪ್ರಕಾರ ಅಪರಾಧಿ ಎಂದು ಘೋಷಿಸಲ್ಪಟ್ಟವನು ಯಾರೇ ಆದರೂ, ಎಂಥವನೇ ಆದರೂ ಆತನ ಬಗ್ಗೆ ಮೊಸಳೆ ಕಣ್ಣೀರು ಸುರಿಸಬೇಕಾ..? 20 ವರ್ಷಗಳ ನಂತರ ತೀರ್ಪು ಬಂದರೆ ಆರೋಪ ಹೊತ್ತವನ ಬೆಂಬಲಕ್ಕೆ ನಿಲ್ಲಬೇಕಾ..? ‘Justice is delayed is Justice denied ‘ ಅನ್ನೋ ಮಾತು ಸಲ್ಮಾನ್ ಖಾನ್ ನ ಹಿಟ್ ಅಂಡ್ ರನ್ ಕೇಸಿಗೆ, ಕೃಷ್ಣ ಮೃಗ ಭೇಟೆಯಾಡಿದ ಪ್ರಕರಣಕ್ಕೆ ಅನ್ವಯವಾಗುವುದಿಲ್ಲವಾ..? ಮುಂಬೈ ದಾಳಿ ಸಂಚಿನ ಕೇಸ್ ನಲ್ಲಿ ಸಂಜಯ್ ದತ್ ಗೆ ಶಿಕ್ಷೆ ಘೋಷಿಸಿದಾಗಲೂ ಇದೇ ರೀತಿಯ ನಾಚಿಕೆಗೇಡಿನ ಅಭಿಯಾನ ನಡೆದಿತ್ತು. ಇವತ್ತು ಸಲ್ಮಾನ್ ಪರ ಅಭಿಯಾನ ಮಾಡುತ್ತಿರುವವರು ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಲ್ಲಿ ಎಂದಾದರೂ ತುಟಿಬಿಚ್ಚಿದ್ದಾರಾ..? ಇದೆಲ್ಲದರ ಜೊತೆಗೆ ಸಲ್ಮಾನ್ ಖಾನ್ ಒಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಶಿಕ್ಷೆ ವಿಧಿಸಲಾಗುತ್ತಿದೆ ಅನ್ನೋ ಆ್ಯಂಗಲ್ ಅನ್ನೂ ಕೂಡ ಹುಡುಕಿಬಿಟ್ಟಿದ್ದಾರೆ… ಥೂ ಇವರ ಜನ್ಮಕ್ಕಿಷ್ಟು.. ಇಲ್ಲಿಗೂ ಜಾತಿ-ಧರ್ಮ ಎಳೆತಂದುಬಿಟ್ಟರು. ರಾಜಕಾರಣಿಗಳಿಗೆ ಶಿಕ್ಷೆ ವಿಧಿಸಿದಾಗಲೂ ಷಡ್ಯಂತ್ರ, ರಾಜಕೀಯ ಅಂತಲೇ ವಾದಿಸಲಾಗುತ್ತೆ. ಹಾಗಾದ್ರೆ ಈ ದೇಶದ ಕಾನೂನು ಬಡವರು, ದುರ್ಬಲರಿಗೆ ಮಾತ್ರ ಶಿಕ್ಷೆ ವಿಧಿಸಬೇಕಾ..? ಸಲ್ಮಾನ್ ಖಾನ್ ಗೆ ಇರುವ ಬದುಕುವ ಹಕ್ಕು ಕೃಷ್ಣ ಮೃಗಕ್ಕಿರಲಿಲ್ಲವಾ..? ಅವತ್ತು ಫುಟ್ ಪಾತ್ ನಲ್ಲಿ ಪ್ರಾಣ ಬಿಟ್ಟ ಬಡವನಿಗಿರಲಿಲ್ಲವಾ..? #SalmanConvicted #JailForSalman #SalmanIsGuilty

ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಪ್ರಗತಿಪರರ ಪೌರೋಹಿತ್ಯ ಯಾಕೆ..?

CM_PRAGATHI_02ರಾಜ್ಯ ವಿಧಾನಸಭಾ ಚುನಾವಣೆಗೆ ಮಹೂರ್ತ ಫಿಕ್ಸ್ ಆಗುತ್ತಿದ್ದಂತೆ ಈ ರಾಜ್ಯದ ಪ್ರಗತಿಪರರು, ಬುದ್ಧಿಜೀವಿಗಳು ಎನಿಸಿಕೊಂಡವರು ಈಗ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ರಾಜ್ಯದ ಮೂರೂ ರಾಜಕೀಯ ಪಕ್ಷಗಳು ಮೈತ್ರಿ ಬಗ್ಗೆ ಇನ್ನೂ ಚಕಾರವೆತ್ತದೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಚಿತ್ತ ಹರಿಸಿವೆ. ಆದ್ರೆ ಪ್ರಗತಿಪರರು ಈಗಾಗಲೆ ಮೈತ್ರಿ ರಾಜಕಾರಣಕ್ಕೆ ಪೌರೋಹಿತ್ಯ ಆರಂಭಿಸಿದ್ದಾರೆ. ಬಿಜೆಪಿ ವಿರೋಧಿಗಳನ್ನೆಲ್ಲಾ ಒಟ್ಟುಗೂಡಿಸುವ ಕಾರ್ಯಕ್ಕೆ ಪ್ರಗತಿಪರರ ಗುಂಪು ಮುಂದಾಗಿದೆ. ರಾಜ್ಯದ ರಾಜಕೀಯ ಪಕ್ಷಗಳಿಗೇ ಇಲ್ಲದ ಉಸಾಬರಿಯನ್ನು ಈ ಪ್ರಗತಿಪರರು ದುಂಬಾಲು ಬಿದ್ದು ಮಾಡುತ್ತಿರುವುದೇಕೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರಗತಿಪರರ ನಿಯೋಗ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಮತ್ತು ಸಿಎಂ ಸಿದ್ದರಾಮಯ್ಯನವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಜೆಡಿಎಸ್ ಮತ್ತು ಕಾಂಗ್ರೆಸ್​ ಮೈತ್ರಿ ಮಾಡಿಕೊಳ್ಳುವಂತೆ ಪೌರೋಹಿತ್ಯ ನಡೆಸಿವೆ. ಕಾಂಗ್ರೆಸ್ ಮತ್ತು ಜೆಡಿಎಸ್​ ಎರಡೂ ಪಕ್ಷಗಳಿಗೂ ಮೈತ್ರಿ ಬಗ್ಗೆ ಯಾವುದೇ ಮನಸ್ಸಿಲ್ಲದಿದ್ದರೂ ಪ್ರಗತಿಪರರು/ಬುದ್ಧಿಜೀವಿಗಳು ಎಂದು ಹೇಳಿಕೊಳ್ಳುವವರ ಗುಂಪು ರಾಜಕೀಯ ಪಕ್ಷಗಳ ಮಧ್ಯೆ ಮೈತ್ರಿ ಕುದುರಿಸಲು ದಳ್ಳಾಳಿಗಳಂತೆ ಕೆಲಸ ಮಾಡುತ್ತಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಗೆ ಮಹೂರ್ತ ಫಿಕ್ಸ್ ಆಗುತ್ತಿದ್ದಂತೆ ಈ ರಾಜ್ಯದ ಪ್ರಗತಿಪರರು, ಬುದ್ಧಿಜೀವಿಗಳು ಎನಿಸಿಕೊಂಡವರು ಈಗ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ರಾಜ್ಯದ ಮೂರೂ ರಾಜಕೀಯ ಪಕ್ಷಗಳು ಮೈತ್ರಿ ಬಗ್ಗೆ ಇನ್ನೂ ಚಕಾರವೆತ್ತದೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಚಿತ್ತ ಹರಿಸಿವೆ. ಆದ್ರೆ ಪ್ರಗತಿಪರರು ಈಗಾಗಲೆ ಮೈತ್ರಿ ರಾಜಕಾರಣಕ್ಕೆ ಪೌರೋಹಿತ್ಯ ಆರಂಭಿಸಿದ್ದಾರೆ. ಬಿಜೆಪಿ ವಿರೋಧಿಗಳನ್ನೆಲ್ಲಾ ಒಟ್ಟುಗೂಡಿಸುವ ಕಾರ್ಯಕ್ಕೆ ಪ್ರಗತಿಪರರ ಗುಂಪು ಮುಂದಾಗಿದೆ. ರಾಜ್ಯದ ರಾಜಕೀಯ ಪಕ್ಷಗಳಿಗೇ ಇಲ್ಲದ ಉಸಾಬರಿಯನ್ನು ಈ ಪ್ರಗತಿಪರರು ದುಂಬಾಲು ಬಿದ್ದು ಮಾಡುತ್ತಿರುವುದೇಕೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರಗತಿಪರರ ನಿಯೋಗ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಮತ್ತು ಸಿಎಂ ಸಿದ್ದರಾಮಯ್ಯನವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಜೆಡಿಎಸ್ ಮತ್ತು ಕಾಂಗ್ರೆಸ್​ ಮೈತ್ರಿ ಮಾಡಿಕೊಳ್ಳುವಂತೆ ಪೌರೋಹಿತ್ಯ ನಡೆಸಿವೆ. ಕಾಂಗ್ರೆಸ್ ಮತ್ತು ಜೆಡಿಎಸ್​ ಎರಡೂ ಪಕ್ಷಗಳಿಗೂ ಮೈತ್ರಿ ಬಗ್ಗೆ ಯಾವುದೇ ಮನಸ್ಸಿಲ್ಲದಿದ್ದರೂ ಪ್ರಗತಿಪರರು/ಬುದ್ಧಿಜೀವಿಗಳು ಎಂದು ಹೇಳಿಕೊಳ್ಳುವವರ ಗುಂಪು ರಾಜಕೀಯ ಪಕ್ಷಗಳ ಮಧ್ಯೆ ಮೈತ್ರಿ ಕುದುರಿಸಲು ದಳ್ಳಾಳಿಗಳಂತೆ ಕೆಲಸ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಮತ್ತು ಸಂವಿಧಾನ ರಕ್ಷಿಸಲು ಈ ಪ್ರಯತ್ನ ನಡೆಸಿರುವುದಾಗಿ ಪ್ರಗತಿಪರರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಎಚ್​ಡಿ ದೇವೇಗೌಡರ ಮನೆಯಲ್ಲಿ ನಡೆದ ಪೌರೋಹಿತ್ಯ ಸಭೆ ನಂತರ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡರು, ‘ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ದವಿದ್ದರೆ ಅವರೇ ಸೀಟು ಹಂಚಿಕೆಯನ್ನು ಘೋಷಣೆ ಮಾಡಲಿ’ ಎಂದು ವ್ಯಂಗ್ಯವಾಡಿದ್ದರು. ಇದನ್ನೇ ಆಸೆಗಣ್ಣಿನಿಂದ ನೋಡುತ್ತಿದ್ದ ಪ್ರಗತಿಪರರು ತಾವು ಬಂದ ಕೆಲಸ ಸಾಧಿಸಿಯೇಬಿಟ್ಟೆವು, ಕಾಂಗ್ರೆಸ್​ ಜೊತಿಗಿನ ಮೈತ್ರಿಗೆ ಗೌಡರು ಒಪ್ಪಿಯೇಬಿಟ್ಟರು ಎಂದು ಯುದ್ಧ ಗೆದ್ದ ಸಂತಸದಿಂದ ಅಲ್ಲಿಂದ ತೆರಳಿದರು. ಅಷ್ಟರಲ್ಲಾಗಲೇ ಕಾಂಗ್ರೆಸ್​ ಜೊತೆ ಮೈತ್ರಿಗೆ ದೊಡ್ಡ ಗೌಡರು ಸಿದ್ದ ಅನ್ನೋ ಸುದ್ದಿ ಸುದ್ದಿ ವಾಹಿನಿಗಳಲ್ಲಿ ರಾರಾಜಿಸುತ್ತಿತ್ತು. ತಕ್ಷಣ ಎಚ್ಚೆತ್ತ ದೊಡ್ಡಗೌಡರು ಪತ್ರಿಕಾಗೋಷ್ಠಿ ಕರೆದು ಮತ್ತೊಂದು ದಾಳ ಉರುಳಿಸಿಬಿಟ್ಟರು. ‘ಒಳ್ಳೆಯ ಸದುದ್ದೇಶದಿಂದ ಪ್ರಗತಿಪರರು ತಮ್ಮನ್ನು ಭೇಟಿಯಾಗಿದ್ದರು. ಮೈತ್ರಿ ಮಾಡಿಕೊಳ್ಳುವ ಉದ್ದೇಶ ಕಾಂಗ್ರೆಸ್​ಗೆ ಇದ್ದರೆ ಸೀಟು ಹಂಚಿಕೆಯನ್ನು ಬಹಿರಂಗವಾಗಿ ಘೋಷಿಸುವಂತೆ ಸಾಂಧರ್ಬಿಕವಾಗಿ ಹೇಳಿದ್ದೆ ಅಷ್ಟೇ. ವ್ಯಂಗ್ಯವಾಗಿ ಹೇಳಿದ್ದನ್ನೇ ಮೈತ್ರಿಗೆ ಸಿದ್ದ ಎಂದು ಬಿಂಬಿಸಲಾಗುತ್ತಿದೆ. ಈಗ ಮೈತ್ರಿ ಮಾಡಿಕೊಳ್ಳುವುದಕ್ಕೆ ಸಮಯ ಎಲ್ಲಿದೆ, ಮೈತ್ರಿಗೆ ನಾಯಕತ್ವ ವಹಿಸುವವರಾರು’ ಎಂದು ಹೇಳಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಬಗ್ಗೆ ತಮಗೆ ಮನಸ್ಸಿಲ್ಲ ಎಂದುಬಿಟ್ಟರು. ಅಲ್ಲಿಗೆ ಯುದ್ಧ ಗೆದ್ದ ಸಂತಸದಲ್ಲಿದ್ದ ಪ್ರಗತಿಪರರ ಸಂಭ್ರಮವೂ ಮುಗಿದಿತ್ತು.

ರಾಜ್ಯದಲ್ಲಿ ಸಿದ್ದರಾಮಯ್ಯನವರನ್ನು ಮತ್ತೆ ಮುಖ್ಯಮಂತ್ರಿಯಾಗದಂತೆ ತಡೆಯಲು ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಮತ್ತು ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಹೋರಾಟಕ್ಕಿಳಿದಿದ್ದಾರೆ. ಈ ಮಧ್ಯೆ ಕಾಂಗ್ರೆಸ್​ ಜೊತೆ ಮೈತ್ರಿಗೆ ಬನ್ನಿ ಎಂದು ಆಹ್ವಾನಿಸಲು ಹೋದ ಪ್ರಗತಿಪರರನ್ನು ದೇವೇಗೌಡರು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಅನ್ನೋದು ಇಂಟರ್ನಲ್ ಮಾಹಿತಿ. ಕಾಂಗ್ರೆಸ್ ರೈತರು ಮತ್ತು ಅಲ್ಪಸಂಖ್ಯಾತರ ವಿಚಾರದಲ್ಲಿ ಹೇಗೆ ನಡೆದುಕೊಂಡಿದೆ ಅನ್ನೋದನ್ನ ಪ್ರಗತಿಪರರಿಗೆ ಮುಖಕ್ಕೆ ಹೊಡೆದಂತೆ ದೊಡ್ಡಗೌಡರು ಹೇಳಿ ಬಿಸಿ ಮುಟ್ಟಿಸಿದ್ದಾರೆ. ಆದರೂ ಬಿಜೆಪಿಯನ್ನು ಮಣಿಸಲು ತಾವು ಪ್ರಯತ್ನಿಸುವುದಾಗಿ ಹೇಳಿ ಮನೆಯವರೆಗೂ ಬಂದಿದ್ದವರನ್ನು ಸಾಗಹಾಕಿದ್ದಾರೆ..

ದೇವೇಗೌಡರ ಮನೆಯಲ್ಲಿ ನಡೆದ ಪೌರೋಹಿತ್ಯಕ್ಕೆ ಬೆಲೆ ಸಿಗಲಿಲ್ಲ ಅನ್ನೋದು ಗೊತ್ತಾಗುತ್ತಿದ್ದಂತೆ ಈ ಪ್ರಗತಿಪರರ ಗುಂಪು ಛಲಬಿಡದಂತೆ ತಮ್ಮ ಪ್ರಯತ್ನವನ್ನು ಮುಂದುವರಿಸಿ ಸಿಎಂ ಸಿದ್ದರಾಮಯ್ಯನವರನ್ನೂ ಭೇಟಿ ಮಾಡಿ ಜೆಡಿಎಸ್​ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಮನವೊಲಿಸುವ ಮಾತನ್ನಾಡಿದ್ದಾರೆ. ಈ ರಾಜ್ಯದಲ್ಲಿ ಪ್ರಗತಿಪರರು ಮತ್ತು ಬುದ್ಧಿಜೀವಿಗಳು ಕಾಂಗ್ರೆಸ್​ನ ಬಿ ಟೀಂ ನಂತೆಯೇ ಕೆಲಸ ಮಾಡುವುದರಿಂದ ಸಿಎಂ ಸಿದ್ದರಾಮಯ್ಯ ತಮ್ಮನ್ನು ಭೇಟಿ ಮಾಡಿದವರ ಜೊತೆ ಸಂತಸದಿಂದಲೇ ಮಾತನಾಡಿದ್ದಾರೆ. ಚುನಾವಣಾ ಪೂರ್ವವಾಗಿ ಜೆಡಿಎಸ್​ ಜೊತೆ ಮೈತ್ರಿ ಮಾಡಿಕೊಳ್ಳುವ ಅಗತ್ಯ ಕಾಂಗ್ರೆಸ್​ಗೆ ಇಲ್ಲ. ಕಾಂಗ್ರೆಸ್​ ಸ್ವಂತಬಲದಿಂದಲೇ ಅಧಿಕಾರ ಹಿಡಿಯಲಿದೆ. ಒಂದು ವೇಳೆ ಅತಂತ್ರದ ಪರಿಸ್ಥಿತಿ ಬಂದರೆ ನಿಮ್ಮ ಮನವಿಯನ್ನು ಪರಿಗಣಿಸಲಾಗುವುದು ಎಂದು ಹೇಳಿ ತಮ್ಮನ್ನು ಭೇಟಿ ಮಾಡಿದವರ ನಿರೀಕ್ಷೆ ಹುಸಿಯಾಗದಂತೆ ಮಾಡಿ ಕಳಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ‘ತಾನು ಬಿಜೆಪಿ ಪಕ್ಕ ನಿಂತು ಕೆಮ್ಮಿದರೆ ಸಾಕು ಕಾಂಗ್ರೆಸ್ ದೂಳಿಪಟವಾಗಿಬಿಡುತ್ತದೆ’ ಎಂದು ಎಚ್​ಡಿ ಕುಮಾರಸ್ವಾಮಿ ಹೇಳಿಕೆ ನೀಡುತ್ತಿದ್ದಂತೆ ಪ್ರಗತಿಪರರ ಪೌರೋಹಿತ್ಯ ಆರಂಭವಾಗಿದೆ. ಜೆಡಿಎಸ್ ಬಿಜೆಪಿಯತ್ತ ಸರಿಯುತ್ತಿರೋ ಸೂಚನೆ ಅರಿತು ಪ್ರಗತಿಪರರ ಗುಂಪು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ.

ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಮೋದಿ ವಿರೋಧಿ ಕಾರ್ಯತಂತ್ರವನ್ನೇ ಅನುಸರಿಸುತ್ತಿರುವ ಪ್ರಗತಿಪರರ ಗುಂಪು ಒಂದೇ ಒಂದು ದಿನವೂ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಮಾತನಾಡಿಯೇ ಇಲ್ಲ. ಮಾತನಾಡುವ ಸಂದರ್ಭಗಳು ಬಂದಾಗಲೂ ಈ ಗುಂಪು ಜಾಣ ಮೌನಕ್ಕೇ ಶರಣಾಗಿತ್ತು. ರಾಜ್ಯದಲ್ಲಿ ಸಾಲು ಸಾಲು ರೈತರು ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಾಗ ಯಾವ ಬುದ್ಧಿಜೀವಿ, ಪ್ರಗತಿಪರರೂ ಸರ್ಕಾರದ ವಿರುದ್ಧ ಮಾತನಾಡಲಿಲ್ಲ, ಸರ್ಕಾರವನ್ನು ಎಚ್ಚರಿಸಲೂ ಇಲ್ಲ. ಟಿಪ್ಪು ಜಯಂತಿ ವಿಚಾರವಾಗಿ ಆಕ್ರೋಶ ವ್ಯಕ್ತವಾದಾಗಲೂ ಈ ಸಮುದಾಯ ಸಿಎಂ ಸಿದ್ದರಾಮಯ್ಯನವರ ಬೆನ್ನಿಗೇ ನಿಂತಿತ್ತು. ಬೆಂಗಳೂರಿನಲ್ಲಿ ಆರೂವರೆ ಕಿಲೋಮೀಟರ್ ರಸ್ತೆಗೆ ಸ್ಟೀಲ್​ ಬ್ರಿಡ್ಜ್​ ನಿರ್ಮಿಸಲು ಸರ್ಕಾರ 1800 ಕೋಟಿ ಸುರಿಯಲು ಮುಂದಾದಾಗ ಬೆಂಗಳೂರಿಗೆ ಬೆಂಗಳೂರೇ ಬೀದಿಗೆ ಬಂದು ಸರ್ಕಾರದ ವಿರುದ್ಧ ನಿಂತಿತ್ತು. ಇಂತಹ ಸಂದರ್ಭದಲ್ಲಿಯೂ ಈ ಪ್ರಗತಿಪರರ ಗುಂಪು ಮಾತಾಡಲಿಲ್ಲ. ರೈತರ ಸಾವಿರಾರು ಎಕರೆ ಜಮೀನು ಕೊಳ್ಳೆ ಹೊಡೆದ ಆರೋಪ ಹೊತ್ತ ಅಶೋಕ್​ ಖೇಣಿಯನ್ನು ಸಿಎಂ ಸಿದ್ದರಾಮಯ್ಯನವರೇ ಅಪ್ಪಿಕೊಂಡು ಕಾಂಗ್ರೆಸ್​ಗೆ ಸೇರಿಸಿಕೊಂಡಾಗಲೂ ಇವರದ್ದು ಅದೇ ದಿವ್ಯ ಮೌನ. ಬಂಡವಾಳಶಾಹಿಗಳ ಬಗ್ಗೆ ಮಾತನಾಡುವ ಪ್ರಗತಿಪರರಿಗೆ ಅಶೋಕ್​ ಖೇಣಿ ಬಡವರ ಬಂಧುವಂತೆ ಕಾಣಿಸಿದರಾ..? ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆಯಾದಾಗ ಸಿಎಂ ಸಿದ್ದರಾಮಯ್ಯನವರ ಆಡಳಿತವನ್ನು ಪ್ರಶ್ನಿಸದೇ ತಮ್ಮ ಬಾಣವನ್ನು ಮೋದಿ ಕಡೆಗೆ ಹೂಡಿದ್ದು ಇದೇ ಪ್ರಗತಿಪರರು. ಗೌರಿ ಹಂತಕರನ್ನು ಆರು ತಿಂಗಳಾದರೂ ಬಂಧಿಸದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಚಕಾರವನ್ನೂ ಎತ್ತುತ್ತಿಲ್ಲ. ರಾಜ್ಯಾದ್ಯಂತ ಕಾಂಗ್ರೆಸ್​ ಆಡಳಿತದ ಅವಧಿಯಲ್ಲಿ ರಾಜಕೀಯ ಹತ್ಯೆಗಳಾದಾಗ, ಲೋಕಾಯುಕ್ತರ ಕಚೇರಿಗೇ ನುಗ್ಗಿ ಲೋಕಾಯುಕ್ತರ ಹತ್ಯೆಗೆ ಯತ್ನಿಸಿದ ಘಟನೆ ನಡೆದಾಗ, ನಲಪಾಡ್ ಎಂಬ ಕಾಂಗ್ರೆಸ್​ನ ಪುಂಡ ಗೂಂಡಾಗಿರಿ ನಡೆಸಿದಾಗ, ಈ ಯಾವ ಸನ್ನಿವೇಶಗಳಲ್ಲೂ ಪ್ರಗತಿಪರ/ಬುದ್ಧಿಜೀವಿಗಳ ವಲಯ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಒಂದೇ ಒಂದು ಮಾತನ್ನೂ ಆಡಲಿಲ್ಲ. ಬಿಜೆಪಿ ಮತ್ತು ಮೋದಿ ವಿರುದ್ಧ ಕೆಂಡಕಾರುವವರು ಇಂತಹ ಯಾವುದಾದರೂ ಒಂದು ಸನ್ನಿವೇಶದಲ್ಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರಶ್ನಿಸಬಹುದಿತ್ತು ಅಲ್ಲವಾ..? ಇಂತವರು ಈಗ ಕಾಂಗ್ರೆಸ್ ಪರ ಬ್ಯಾಟಿಂಗ್​ಗೆ ಇಳಿದಿದ್ದಾರೆ. ಈ ಗುಂಪು ತಮ್ಮನ್ನು ತಾವು ಪ್ರಗತಿಪರರು, ಬುದ್ಧಿಜೀವಿಗಳು ಎಂದು ಕರೆದುಕೊಳ್ಳುವುದನ್ನು ಬಿಟ್ಟು ಕಾಂಗ್ರೆಸ್​ ವಕ್ತಾರರು, ಕಾರ್ಯಕರ್ತರು, ಅವಕಾಶವಾದಿಗಳು ಎಂದು ಕರೆದುಕೊಂಡರೆ ಅರ್ಥಪೂರ್ಣವಾಗಿರುತ್ತದೆ. ಆ ಮೂಲಕವಾದರೂ ತಮ್ಮ ಮುಖವಾಡವನ್ನು ಕಳಚಿಕೊಂಡು ಅಸಲೀ ಮುಖವನ್ನು ಪ್ರದರ್ಶಿಸಿದಂತಾಗುತ್ತದೆ. ಇವರಿಗೂ ಮೋದಿ ಭಕ್ತರಿಗೂ ಯಾವ ವ್ಯತ್ಯಾಸವಿದೆ ಹೇಳಿ..

ಬಿಜೆಪಿ ಅಧಿಕಾರದಲ್ಲಿದ್ದರೆ ಸಂವಿಧಾನಕ್ಕೆ ದಕ್ಕೆಯಾಗುತ್ತದೆ ಅನ್ನೋದು ಈ ಅವಕಾಶವಾದಿಗಳ ವಾದ. ಕೇಂದ್ರದಲ್ಲಿ ಮತ್ತು 22 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಸಂವಿಧಾನಕ್ಕೆ ಯಾವ ಅಪಾಯವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಇದ್ದರೆ ಮಾತ್ರ ಸಂವಿಧಾನ ರಕ್ಷಣೆಯಾಗುತ್ತಾ..? ಇದೇ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯಿಂದಲೇ ಅಲ್ಲವಾ ಮೋದಿ ಪ್ರಧಾನಿಯಾಗಿರೋದು, ಬಿಜೆಪಿ 22 ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವುದು. ರಾಜಕೀಯ ಪಕ್ಷವಾಗಿ ಬಿಜೆಪಿಯನ್ನು ರಾಜಕೀಯವಾಗಿ ಎದುರಿಸುವುದನ್ನು ಬಿಟ್ಟು ಕಾಂಗ್ರೆಸ್ ಈ ಪ್ರಗತಿಪರರನ್ನು ಅಸ್ತ್ರದಂತೆ ಬಚ್ಚಿಟ್ಟುಕೊಂಡು ಚುನಾವಣೆ ಸಂದರ್ಭದಲ್ಲಿ ಹೊರಬಿಡುತ್ತದೆಯಾ..? ಸಂವಿಧಾನ ರಕ್ಷಣೆ ಮಾಡೋದಕ್ಕೆ ಪ್ರಗತಿಪರರೇನು ಗುತ್ತಿಗೆ ಪಡೆದುಕೊಂಡಿದ್ದಾರಾ…? ಈ ಹಿಂದೆ ಇದೇ ರೀತಿ ಅವಾರ್ಡ್​ ವಾಪ್ಸಿ ಅಭಿಯಾನ ಮಾಡಿ ನಗೆಪಾಟಲಿಗೀಡಾಗಿದ್ದ ಈ ಬುದ್ಧಿಜೀವಿಗಳ ವಲಯ ಈಗ ಸಂವಿಧಾನದ ರಕ್ಷಣೆಯ ಸೋಗಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕವನ್ನು ಜಯಿಸಿದರೆ ಮೋದಿ 2019ರಲ್ಲಿ ಮತ್ತೆ ಪ್ರಧಾನಿಯಾಗೋದಕ್ಕೆ ಹಾದಿ ಸುಗಮವಾಗುತ್ತದೆ. ಇದೇ ಕಾರಣದಿಂದಲೇ ಮತ್ತೆ ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಜಾತ್ಯಾತೀತ ಶಕ್ತಿಯ ಹೆಸರಿನಲ್ಲಿ ಎಲ್ಲ ಪ್ರಗತಿಪರರು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಹೊರಗುತ್ತಿಗೆ ಪಡೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಮೋದಿ ವಿರುದ್ಧವಾಗಿ ಪರ್ಯಾಯ ಶಕ್ತಿ ರೂಪಿಸಲು ಪ್ರಾದೇಶಿಕ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸುತ್ತಿವೆ. ಅದು ರಾಜಕೀಯ ಪಕ್ಷಗಳು ತಮ್ಮ ಅಸ್ಥಿತ್ವ ಸೃಷ್ಟಿಸಿಕೊಳ್ಳಲು ಮಾಡಲೇಬೇಕಾದ ಅನಿವಾರ್ಯ ಹೋರಾಟ. ಆದ್ರೆ ಈ ರಾಜ್ಯದ ಪ್ರಗತಿಪರರೇಕೆ ರಾಜಕೀಯ ಪಕ್ಷಗಳಂತೆ ವರ್ತಿಸುತ್ತಿವೆ. ಮೈತ್ರಿ ವಿಚಾರ ನಿರ್ಧರಿಸಬೇಕಾದವರು ರಾಜಕೀಯ ಪಕ್ಷಗಳು. ಅವರೇ ಸುಮ್ಮನಿರುವಾಗ ಇಲ್ಲದ ಉಸಾಬರಿ ಇವರಿಗೇಕೆ. ಈ ಪ್ರಗತಿಪರ, ಬುದ್ಧಿಜೀವಿಗಳ ಸಮುದಾಯ ಕಾಂಗ್ರೆಸ್​ ಪರ ಬ್ಯಾಟಿಂಗ್​ಗೆ ಇಳಿದಿರುವುದು ಯಾಕೆ..? ಒಂದು ರಾಜಕೀಯ ಪಕ್ಷವಾಗಿ ಬಿಜೆಪಿಯನ್ನು ವಿರೋಧಿಸಲು ಪ್ರಗತಿಪರರಿಗೆ ತಮ್ಮದೇ ಆದ ಕಾರಣಗಳಿರಬಹುದು. ಆದ್ರೆ ಕಾಂಗ್ರೆಸ್​ ಅನ್ನು ಮೋಹಿಸಲು ಇರುವ ಕಾರಣಗಳೇನು. ಬಿಜೆಪಿಯನ್ನು ವಿರೋಧಿಸಿ ಕಾಂಗ್ರೆಸ್​ ಅನ್ನು ಅಪ್ಪಿಕೊಳ್ಳುವುದು ಎಷ್ಟು ಸಮಂಜಸ.? ಕಾಂಗ್ರೆಸ್​ ಅಧಿಕಾರದಲ್ಲಿರುವಾಗ ಇದೇ ಬುದ್ಧಿಜೀವಿಗಳ ವಲಯ ಆಸ್ಥಾನ ಕಲಾವಿದರಂತೆ ಕಾಣಿಸಿಕೊಂಡು ಅನುಕೂಲಗಳನ್ನು ಆಸ್ವಾದಿಸಿಕೊಳ್ಳೋದು ಬಹಿರಂಗ ರಹಸ್ವವೇನಲ್ಲ. ಇಂತವರುಗಳನ್ನು ಮುಂದಿಟ್ಟುಕೊಂಡೇ ಕಾಂಗ್ರೆಸ್ ತಾನು ಜಾತ್ಯಾತೀತವಾದಿ ಅನ್ನೋ ಪೋಸ್​ ಕೊಡುತ್ತಿದೆ. ಈ ದೇಶದಲ್ಲಿ ಧರ್ಮದ ಹೆಸರಿನಲ್ಲಿ ಬಿಜೆಪಿ ರಾಜಕೀಯ ನಡೆಸಿದರೆ, ಜಾತಿಯ ಹೆಸರಿನಲ್ಲಿ ಕಾಂಗ್ರೆಸ್​ ರಾಜಕೀಯ ನಡೆಸುತ್ತದೆ. ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಷ್ಟೇ. ಜಾತ್ಯಾತೀತ ಎಂದು ಕರೆದುಕೊಳ್ಳುವ ಕಾಂಗ್ರೆಸ್​ಗೆ ಜಾತಿ ಬಿಟ್ಟರೆ ಬೇರೆ ರಾಜಕೀಯ ಪಟ್ಟುಗಳೇ ಇಲ್ಲ. ಇಂತಹ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಂದ ಅಂತರ ಕಾಪಾಡಿಕೊಂಡು ಜನರ ಪರವಾಗಿ ಕೆಲಸ ಮಾಡಬೇಕಾದ ಈ ಸ್ವಯಂಘೋಷಿತ ಪ್ರಗತಿಪರರು, ಬುದ್ಧಿಜೀವಿಗಳು ಕಾಂಗ್ರೆಸ್​ನ ಬಾಲಬುಡುಕರಂತೆ ವರ್ತಿಸುತ್ತಿರುವುದು ಮಾತ್ರ ನಾಚಿಕೆಗೇಡು. ಅಧಿಕೃತವಾಗಿ ಈ ಗುಂಪು ತಮ್ಮನ್ನು ತಾವು ಕಾಂಗ್ರೆಸ್ಸಿಗರು ಎಂದು ಒಪ್ಪಿಕೊಂಡು ಕಾಂಗ್ರೆಸ್​ನ ಪ್ರಗತಿಪರ/ಬುದ್ಧಿಜೀವಿಗಳ ಘಟಕ ಎಂದು ಘೋಷಿಸಿಕೊಳ್ಳುವುದು ಒಳಿತು..

ರೋಹಿಂಗ್ಯಾ ಮುಸ್ಲಿಮರಿಗೆ ಭಾರತವೇಕೆ ಆಶ್ರಯ ನೀಡಬೇಕು..?

 

BANGLADESH-MYANMAR-REFUGEE-UNREST-DIPLOMACY

ರೋಹಿಂಗ್ಯಾ ಪರ ಪ್ರತಿಭಟನೆ..

ದೇಶದ ಭದ್ರತೆಗೆ ರೋಹಿಂಗ್ಯಾ ಮುಸ್ಲಿಮರು ಕಂಟಕವಾಗಬಹುದು ಎಂಬ ಗುಪ್ತಚರ ಮಾಹಿತಿಗಳಿದ್ದರೂ ಅವರಿಗೆ ಭಾರತದಲ್ಲಿ ಆಶ್ರಯ ನೀಡಬೇಕಾ..? ರೋಹಿಂಗ್ಯಾಗಳಿಗೆ ನೆಲೆ ನೀಡಲು ಮುಸ್ಲಿಂ ರಾಷ್ಟ್ರಗಳೇ ಹಿಂಜರಿಯುತ್ತಿರುವಾಗ ಭಾರತ ನೆಲೆ ನೀಡಬೇಕಾ..? ಬಾಂಗ್ಲಾದಿಂದ ಮಯನ್ಮಾರ್​ಗೆ ನೂರಾರು ವರ್ಷಗಳ ಹಿಂದೆಯೇ ವಲಸೆ ಹೋಗಿರುವ ರೋಹಿಂಗ್ಯಾ ಮುಸ್ಲಿಮರನ್ನು ಬಾಂಗ್ಲಾದೇಶವೇ ಬೇಡ ಎನ್ನುತ್ತಿರುವಾಗ ಭಾರತ ದೇಶವೇಕೆ ಅವರನ್ನು ದೇಶದ ಒಡಲಲ್ಲಿಟ್ಟುಕೊಂಡು ಸಲುಹಬೇಕು..? ಇದ್ದಕ್ಕಿದ್ದಂತೆ ರೋಹಿಂಗ್ಯಾ ಮುಸ್ಲಿಮರ ಪರವಾಗಿ ದೇಶದ ಮುಸ್ಲಿಂ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸುತ್ತಿವೆ. ಮಯನ್ಮಾರ್​ನಲ್ಲಿ ರೋಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸುವ ಮಟ್ಟಕ್ಕೆ ಈ ಪ್ರತಿಭಟನೆಗಳು ಸೀಮಿತವಾಗಿದ್ದರೆ ತಮ್ಮ ಧರ್ಮದವರ ವಿರುದ್ಧ ಮರುಕ ತೋರುತ್ತಿದ್ದಾರೆ ಅಂದುಕೊಳ್ಳಬಹುದಾಗಿತ್ತು. ಆದ್ರೆ ವಿಚಾರ ಅದಲ್ಲ. ಮಯನ್ಮಾರ್​ನಿಂದ ಅಕ್ರಮವಾಗಿ ದೇಶಕ್ಕೆ ವಲಸೆ ಬಂದಿರುವ 40 ಸಾವಿರ ರೋಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ನೀಡಬೇಕು ಅನ್ನೋ ಆಗ್ರಹ ಕೇಳಿಬಂದಿದೆ. ದೇಶದಲ್ಲಿ ನೆಲೆಸಿರುವ ಅಕ್ರಮ ರೋಹಿಂಗ್ಯಾ ಮುಸ್ಲಿಮರ ಸಂಖ್ಯೆ 40 ಸಾವಿರ ಅಂತ ಸರ್ಕಾರ ಹೇಳುತ್ತದೆ. ಆದ್ರೆ ಈ ಸಂಖ್ಯೆ ಸುಮಾರು ಒಂದು ಲಕ್ಷದಷ್ಟಿದೆ ಅನ್ನೋ ಮಾಹಿತಿಗಳೂ ಇವೆ. ಇದಕ್ಕೆಲ್ಲಾ ಸೊಪ್ಪು ಹಾಕದ ಕೇಂದ್ರ ಸರ್ಕಾರ ದೇಶದಲ್ಲಿರುವ ರೋಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡಲು ನಿರ್ಧರಿಸಿದೆ.
ಮಯನ್ಮಾರ್​ನಲ್ಲಿನ ಹಿಂಸಾಚಾರದಿಂದಾಗಿ ಭಾರತಕ್ಕೆ ವಲಸೆ ಬಂದಿರುವ ಬೃಹತ್ ಸಂಖ್ಯೆಯ ರೋಹಿಂಗ್ಯಾ ಮುಸ್ಲಿಮರು ದೇಶದ ಭದ್ರತೆಗೆ ಕುತ್ತಾಗುವ ಸಾಧ್ಯತೆ ಇದೆ. ರೋಹಿಂಗ್ಯಾ ಮುಸ್ಲಿಮರಿಗೆ ಐಸಿಸ್​ ಉಗ್ರ ಸಂಘಟನೆ ಮತ್ತು ಪಾಕಿಸ್ತಾನದ ಐಎಸ್ಐ ಜೊತೆ ಸಂಪರ್ಕ ಇದೆ. ಹೀಗಾಗಿ ರೋಹಿಂಗ್ಯಾ ಮುಸ್ಲಿಮರಿಗೆ ದೇಶದಲ್ಲಿ ಆಶ್ರಯ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ನಲ್ಲಿ ಅಫಿಡೆವಿಟ್​ ಸಲ್ಲಿಸಿದೆ. ರೋಹಿಂಗ್ಯಾಗಳನ್ನು ಗಡೀಪಾರು ಮಾಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್​ ಹಸ್ತಕ್ಷೇಪ ಮಾಡಬಾರದು. ಇದು ಸರ್ಕಾರದ ಆಡಳಿತಾತ್ಮಕ ವಿಚಾರ ಎಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಸರ್ಕಾರದ ಈ ತೀರ್ಮಾನ ಕೆಲವು ಮುಸ್ಲಿಂ ಮುಖಂಡರ ಮತ್ತು ಸ್ವಯಂ ಘೋಷಿತ ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಬುದ್ದಿಜೀವಿಗಳಿಗೆ ಪಥ್ಯವಾಗಿಲ್ಲ. ಅವರ ಪ್ರಕಾರ ರೋಹಿಂಗ್ಯಾ ಮುಸ್ಲಿಮರನ್ನು ದೇಶದೊಳಗಿಟ್ಟುಕೊಂಡೇ ಸಲುಹಬೇಕು. ಈಗಾಗಲೇ ದೇಶದ ಹಲವೆಡೆ ತಳವೂರಿರುವ ರೋಹಿಂಗ್ಯಾಗಳು ಅಕ್ರಮವಾಗಿ ಆಧಾರ್ ಕಾರ್ಡ್, ವೋಟರ್ ಐಡಿಗಳನ್ನು ಮಾಡಿಸಿಕೊಂಡಿದ್ದಾರೆ. ಕಾಶ್ಮೀರದಲ್ಲಿರುವ ಹತ್ತು ಸಾವಿರ ರೋಹಿಂಗ್ಯಾಗಳಲ್ಲಿ ಕೆಲವರು ಪರ್ಮನೆಂಟ್ ರೆಸಿಡೆಂಟ್ ಸರ್ಟಿಫಿಕೇಟ್​ಗಳನ್ನೂ ಮಾಡಿಸಿಕೊಂಡಿದ್ದಾರೆ. ಹೀಗೆ ಯಾವುದೋ ದೇಶದ ಜನ ಅಕ್ರಮವಾಗಿ ಗಡಿ ನುಸುಳಿ ಒಳಬಂದವರನ್ನು ಭಾರತೀಯರು ಎಂದು ನಾವು ಒಪ್ಪಿಕೊಳ್ಳಬೇಕಾ..?

 

ಸಮುದ್ರ ಮಾರ್ಗದ ಮೂಲಕ ದೇಶದೊಳಕ್ಕೆ ಅಕ್ರಮವಾಗಿ ಬರುತ್ತಿರುವ ರೋಹಿಂಗ್ಯಾಗಳು

ಸಮುದ್ರ ಮಾರ್ಗದ ಮೂಲಕ ದೇಶದೊಳಕ್ಕೆ ಅಕ್ರಮವಾಗಿ ಬರುತ್ತಿರುವ ರೋಹಿಂಗ್ಯಾಗಳು

ಮಯನ್ಮಾರ್​ ದೇಶದ ರಖಿನೆ ಎಂಬ ರಾಜ್ಯದಲ್ಲಿ ವಾಸ ಮಾಡುವವರೇ ರೋಹಿಂಗ್ಯಾ ಮುಸ್ಲಿಮರು. ಆದ್ರೆ ಈ ಜನರನ್ನು ಮಯನ್ಮಾರ್​ ತನ್ನ ಪ್ರಜೆಗಳು ಎಂದು ಒಪ್ಪಿಕೊಳ್ಳೋದಕ್ಕೆ ಸಿದ್ದವಿಲ್ಲ. ಬಾಂಗ್ಲಾದಿಂದ ಅಕ್ರಮವಾಗಿ ದೇಶಕ್ಕೆ ಬಂದು ವಾಸಿಸುತ್ತಿದ್ದಾರೆ, ರೋಹಿಂಗ್ಯಾಗಳು ತನ್ನ ಪ್ರಜೆಗಳಲ್ಲ ಅನ್ನೋದು ಮಯಾನ್ಮಾರ್​ನ ವಾದ. ಇದಕ್ಕೆ ತದ್ವಿರುದ್ಧವಾಗಿ ರೋಹಿಂಗ್ಯಾಗಳನ್ನು ತನ್ನ ದೇಶಕ್ಕೆ ಬಿಟ್ಟುಕೊಳ್ಳಲು ಬಾಂಗ್ಲಾದೇಶ ತಯಾರಿಲ್ಲ. ಬೌದ್ಧ ಧರ್ಮೀಯರೇ ಬಹುಸಂಖ್ಯಾತವಾಗಿರುವ ಮಯನ್ಮಾರ್ ದೇಶ ರೋಹಿಂಗ್ಯಾಗಳನ್ನು ದೇಶದಿಂದ ಓಡಿಸಲು ನಿರಂತರವಾಗಿ ಯತ್ನಿಸುತ್ತಲೇ ಇದೆ. ಉದ್ಯೋಗ, ಶಿಕ್ಷಣ, ಧಾರ್ಮಿಕ ಸ್ವಾತಂತ್ರ್ಯ, ಆರೋಗ್ಯ ಸೇವೆ, ಮದುವೆ ಪ್ರತಿಯೊಂದಕ್ಕೂ ರೋಹಿಂಗ್ಯಾಗಳ ಮೇಲೆ ನಿರ್ಬಂಧ ಹೇರಲಾಗಿದೆ. ಪರಿಣಾಮ ರೋಹಿಂಗ್ಯಾ ಮುಸ್ಲಿಮರ ಮಾರಣ ಹೋಮ ನಡೆಯುತ್ತಲೇ ಇದೆ. ಜೀವ ಉಳಿಸಿಕೊಳ್ಳಲು ಈ ರೋಹಿಂಗ್ಯಾ ಮುಸ್ಲಿಮರು ಅಕ್ಕ ಪಕ್ಕದ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಮಯನ್ಮಾರ್​ನಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಮಾನವ ಹಕ್ಕುಗಳ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ ಜಗತ್ತು ಏನು ಬೇಕಾದರೂ ತಿಳಿದುಕೊಳ್ಳಲಿ, ನಮಗೆ ನಮ್ಮ ದೇಶದ ರಕ್ಷಣೆಯಷ್ಟೇ ಮುಖ್ಯ ಎಂದು ಹೇಳಿದ್ದಾರೆ. ಮಯನ್ಮಾರ್​ ದೇಶವೇ ರೋಹಿಂಗ್ಯಾಗಳಿಂದ ದೇಶದ ಭದ್ರತೆಗೆ ಅಪಾಯವಿದೆ ಎನ್ನುವಂತಹ ಮಾತುಗಳನ್ನಾಡುವಾಗ ಅಂತವರನ್ನು ದೇಶದೊಳಕ್ಕೆ ಬಿಟ್ಟುಕೊಳ್ಳಬೇಕಾ.. ಮಾನವ ಹಕ್ಕುಗಳ ಹೋರಾಟಗಾರ್ತಿ ಸೂಕಿಯ ಬಾಯಲ್ಲಿ ದೇಶ ರಕ್ಷಣೆಯ ಮಾತು ಬಂತೋ ಅಂತರಾಷ್ಟ್ರೀಯ ಮಾಧ್ಯಮಗಳು ಸೂಕಿ ವಿರುದ್ಧ ಆಕ್ರೋಶ ಹೊರಹಾಕಿದ್ದವು. ಇದರಿಂದ ಎಚ್ಚೆತ್ತ ಸೂಕಿ ಈಗ ಧರ್ಮ ಮತ್ತು ಜನಾಂಗದ ನೆಲೆಯಲ್ಲಿ ಛಿದ್ರವಾಗಿರುವ ಮ್ಯಾನ್ಮಾರ್‌ ಒಗ್ಗಟ್ಟಾಗಿ ಮುಂದುವರಿಯಲು ನೆರವಾಗುವಂತೆ ಅಂತರರಾಷ್ಟ್ರೀಯ ಸಮುದಾಯವನ್ನು ಕೋರಿದ್ದಾರೆ. ಸೇನಾ ಕಾರ್ಯಾಚರಣೆಯಿಂದ ಬೆದರಿ ದೇಶ ತೊರೆದು ಹೋಗಿರುವ ರೋಹಿಂಗ್ಯಾ ಸಮುದಾಯದ ಮುಸ್ಲಿಮರು ಮ್ಯಾನ್ಮಾರ್‌ಗೆ ಮರಳುವಂತೆ ಮನವಿ ಮಾಡಿಕೊಂಡಿದ್ದಾರೆ. ಹಾಗಾದ್ರೆ ಭಾರತದಲ್ಲಿ ನಿರಾಶ್ರಿತರಂತಿರುವ ರೋಹಿಂಗ್ಯಾಗಳು ಈಗ ತಮ್ಮ ತವರಿಗೆ ಹೋಗಬಹುದಲ್ಲವಾ..?

 

ನಿರಾಶ್ರಿತ ರೋಹಿಂಗ್ಯಾ ಮುಸ್ಲಿಮರು

ನಿರಾಶ್ರಿತ ರೋಹಿಂಗ್ಯಾ ಮುಸ್ಲಿಮರು

ರೋಹಿಂಗ್ಯಾ ಮುಸ್ಲಿಮರ ಮೇಲೆ ಮಯನ್ಮಾರ್​ ಮತ್ತು ಬಾಂಗ್ಲಾ ಗಡಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಇಡೀ ಒಂದು ಸಮುದಾಯವೇ ಯಾವ ದೇಶಕ್ಕೂ ಅಪಾಯಕಾರಿಯಾಗಿ ನಿಲ್ಲಲು ಸಾಧ್ಯವಿಲ್ಲ. ಒಂದು ವೇಳೆ ರೋಹಿಂಗ್ಯಾ ಮುಸ್ಲಿಮರಲ್ಲಿ ಉಗ್ರ ಚಟುವಟಿಕೆಗಳಲ್ಲಿ ನಿರತರಾಗಿದ್ದವರಿದ್ದರೆ ಅಂತವರನ್ನು ಗುರುತಿಸಿ ಅವರ ವಿರುದ್ಧ ಮಯನ್ಮಾರ್ ಕ್ರಮ ತೆಗೆದುಕೊಳ್ಳಲಿ. ಅನ್ನ, ನೀರು ಸಿಗದೇ ಅಮಾಯಕ ಮಕ್ಕಳು, ಮಹಿಳೆಯರು ಜೀವ ಕೈಲ್ಲಿ ಹಿಡಿದುಕೊಂಡು ಪರ ದೇಶಗಳಿಗೆ ಓಡಿಹೋಗಬೇಕಾ.. ಅಂತವರ ರಕ್ಷಣೆಗೆ ಅಂತರಾಷ್ಟ್ರೀಯ ಸಮುದಾಯ, ನೆರೆಯ ದೇಶ ಭಾರತ ನೆರವಾಗಬೇಕು ನಿಜ. ನೆರವಾಗುವುದು ಅಂದರೆ ಅಷ್ಟೂ ಜನರನ್ನು ದೇಶದೊಳಕ್ಕೆ ಬಿಟ್ಟುಕೊಳ್ಳಬೇಕು ಅಂತೇನು ಅಲ್ಲವಲ್ಲ. ರಾಜತಾಂತ್ರಿಕ ಮಾರ್ಗದ ಮೂಲಕ ರೋಹಿಂಗ್ಯಾಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ ನಿಲ್ಲುವಂತೆ ಮಾಡಿ ಅವರು ಮಯನ್ಮಾರ್​ನಲ್ಲಿ ನೆಮ್ಮದಿಯ ಜೀವನ ನಡೆಸುವಂತೆ ಮಾಡುವುದು ಸಮಸ್ಯೆಗೆ ಪರಿಹಾರ ಅಲ್ಲವಾ. ಅದನ್ನು ಬಿಟ್ಗಟು ರೋಹಿಂಗ್ಯಾಗಳಿಗೆ ಭಾರತದಲ್ಲಿ ಇರಲು ಅವಕಾಶ ಮಾಡಿಕೊಡಿ ಎಂದರೆ ಹೇಗೆ..? ಈಗಾಗಲೇ ಈಶಾನ್ಯ ರಾಜ್ಯಗಳಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರಿಂದ ಆಗಿರುವ ಸಮಸ್ಯೆಗಳನ್ನು ರೋಹಿಂಗ್ಯಾಗಳ ವಿಷಯದಲ್ಲೂ ಈ ದೇಶ ಸಮಸ್ಯೆ ಸೃಷ್ಟಿಸಿಕೊಳ್ಳಬೇಕಾ…? ಈಗಾಗಲೇ ಹಲವು ದಿನಗಳಿಂದ ರೋಹಿಂಗ್ಯಾಗಳಿಗೆ ಆಶ್ರಯ ನೀಡಲಾಗಿದೆ. ಇದು ತಾತ್ಕಾಲಿಕ ವ್ಯವಸ್ಥೆಯಾಗಬೇಕೇ ವಿನಃ ಅವರನ್ನೆಲ್ಲಾ ಶಾಶ್ವತವಾಗಿ ಭಾರತದ ಪ್ರಜೆಗಳಂತೆ ದೇಶದೊಳಗಿರಲು ಅವಕಾಶ ನೀಡಬೇಕು ಎಂದು ವಾದಿಸಿದರೆ ಹೇಗೆ. ಒಂದು ದೇಶವಾಗಿ ಎಲ್ಲ ದೇಶಗಳ ನಿರಾಶ್ರಿತರಿಗೆ ಜಾಗ ಕೊಡಲಾಗುವುದಿಲ್ಲವಲ್ಲ, ಮಾನವೀಯತೆಯ ಆಧಾರದ ಮೇಲೆ ಒಂದಷ್ಟು ದಿನವಷ್ಟೇ ಅವಕಾಶ ನೀಡಬಹುದು. ಆ ಕೆಲಸ ಈಗಾಗಲೇ ಆಗಿದೆ.
ಒಂದು ಜವಾಬ್ದಾರಿಯುತ ದೇಶವಾಗಿ ಮಯನ್ಮಾರ್​ನಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ಭಾರತ ಖಂಡಿಸಿದೆ. ಅಷ್ಟೇ ಅಲ್ಲದೇ ರೋಹಿಂಗ್ಯಾಗಳಿಗೆ ಅಗತ್ಯವಿರುವ ನೆರವನ್ನೂ ಭಾರತ ನೀಡುತ್ತಿದೆ. ಆದ್ರೆ ಇದ್ದಕ್ಕಿಂದ್ದಂತೆ ದೇಶದ ಕೆಲ ಮುಸ್ಲಿಂ ಸಂಘಟನೆಗಳು ರೋಹಿಂಗ್ಯಾ ಮುಸ್ಲಿಮರಿಗೆ ದೇಶದಲ್ಲಿ ಆಶ್ರಯ ಕೊಡಬೇಕು ಎಂದು ಆಗ್ರಹಿಸುತ್ತಿವೆ. ರೋಹಿಂಗ್ಯಾ ಮುಸ್ಲಿಮರಿಗೆ ದೇಶದಲ್ಲಿ ಆಶ್ರಯ ನೀಡಬೇಕು ಅನ್ನೋ ಹಕ್ಕೊತ್ತಾಯವನ್ನು ಅಸಾದುದ್ದೀನ್​ ಓವೈಸಿ ಮಾಡಿದ್ದಾರೆ. ಯಾವುದೋ ದೇಶದ ನಿರಾಶ್ರಿತರನ್ನು ಕೇವಲ ಮುಸ್ಲಿಮರು ಎಂಬ ಕಾರಣಕ್ಕೆ ಅವಕಾಶ ನೀಡಬೇಕಾ ಅನ್ನೋದು ಈಗಿನ ಪ್ರಶ್ನೆ. ರೋಹಿಂಗ್ಯಾಗಳನ್ನು ದೇಶದೊಳಕ್ಕೆ ಬಿಟ್ಟುಕೊಳ್ಳಲು ಮುಸ್ಲಿಂ ದೇಶಗಳೇ ನಿರಾಕರಿಸುತ್ತಿರುವಾಗ ದೇಶದ ಭದ್ರತೆಯನ್ನು ಪಣಕ್ಕಿಟ್ಟು ಕೇವಲ ಮುಸ್ಲಿಮರು ಎಂಬ ಕಾರಣಕ್ಕೆ ರೋಹಿಂಗ್ಯಾಗಳಿಗೆ ಆಶ್ರಯ ನೀಡಬೇಕಾ ಅನ್ನೋದು ಹಿಂದೂ ಪರ ಸಂಘಟನೆಗಳ ಪ್ರಶ್ನೆ.. ಸಿರಿಯಾದಲ್ಲಿ ಐಸಿಸ್ ಉಗ್ರರ ಉಪಟಳ ಅತಿಯಾದಾಗ ಅಲ್ಲಿನ ನಾಗರೀಕರು ಸಾಮೂಹಿಕವಾಗಿ ವಲಸೆ ಹೊರಟರು. ಅವರನ್ನು ಅಕ್ಕಪಕ್ಕದ ಯಾವ ಮುಸ್ಲಿಂ ದೇಶಗಳೂ ಒಳಬಿಟ್ಟುಕೊಳ್ಳಲಿಲ್ಲ. ಟರ್ಕಿಯ ಸಮುದ್ರ ತೀರಕ್ಕೆ ಅಪ್ಪಳಿಸುವ ಅಲೆಯ ನಡುವೆ ಪುಟ್ಟ ಕಂದಮ್ಮನ ಶವದ ಪೋಟೋ ಇಡೀ ಜಗತ್ತಿನ ಮಾನವೀಯತೆಯನ್ನೇ ಪ್ರಶ್ನೆ ಮಾಡಿತ್ತು. ಆಗಲೂ ಯಾವ ಮುಸ್ಲಿಂ ರಾಷ್ಟ್ರಗಳೂ ತಮ್ಮ ’ಸೋದರ’ರನ್ನು ಒಳಬಿಟ್ಟುಕೊಳ್ಳಲಿಲ್ಲ. ಆಗ ಸುಮಾರು 38 ಲಕ್ಷ ವಲಸಿಗರಿಗೆ ಜಾಗ ಕೊಟ್ಟಿದ್ದು ಯೂರೋಪ್ ರಾಷ್ಟ್ರಗಳು. ಜೀವ ಉಳಿಸಿಕೊಳ್ಳಲು ಹೋದ ಸಿರಿಯನ್ನರ ಜೊತೆ ಕೆಲವು ಐಸಿಸ್ ಉಗ್ರರೂ ಯೂರೋಪ್ ಸೇರಿಕೊಂಡಿದ್ದೂ, ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದೂ ಎಲ್ಲವೂ ಈಗ ಇತಿಹಾಸ. ಈ ಸತ್ಯ ಜಗತ್ತಿನ ಕಣ್ಣ ಮುಂದೆ ಇರುವಾಗ ಭಾರತ ಅಕ್ರಮ ವಲಸಿಗರಿಗೆ ತನ್ನ ನೆಲದಲ್ಲಿ ಜಾಗ ಕೊಡಬೇಕಾ.. ಜಾಗ ಕೊಟ್ಟರೆ ಅದು ಮಾನವೀಯತೆಯ ಮಹಾ ಕಾರ್ಯವಾಗುತ್ತಾ..?

–  ಶಶಿವರ್ಣಂ!

#IndiaForIndians #SendBackRohingyas #TerrorThreat #India #RohingyaMuslims

ಚರ್ಚ್ ಸ್ಫೋಟ: 16 ವರ್ಷದ ನಂತರ ಬಲೆಗೆ ಬಿದ್ದ ಉಗ್ರ..!

6490299557869170327-account_id=1ರಾಜ್ಯದಲ್ಲಿ ನಡೆದಿದ್ದ ಮೊದಲ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರನೊಬ್ಬ ಹದಿನಾರು ವರ್ಷಗಳ ನಂತರ ಸಿಐಡಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾಾನೆ.

ಹದಿನಾರು ವರ್ಷಗಳ ಹಿಂದೆ ರಾಜ್ಯದ ಮೂರು ಕಡೆ ನಡೆದಿದ್ದ ಸರಣಿ ಚರ್ಚ್ ಸ್ಫೋಟ ಪ್ರಕರಣಕ್ಕೆೆ ಸಂಬಂಧಿಸಿದಂತೆ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಶೇಖ್ ಅಮೀರ್ ಆಲಿಯನ್ನು ಸಿಐಡಿ ಅಧಿಕಾರಿಗಳು ಹೈದರಾಬಾದ್‌ನಲ್ಲಿ ಸೋಮವಾರ ಬಂಧಿಸಿದ್ದಾರೆ. ಆಂಧ್ರದ ನೆಲಗೊಂಡ ಮೂಲದವನಾದ ಈತ ನಗರದ ಜೆಜೆ ನಗರದ ಸೈಂಟ್ ಪೀಟರ್ಸ್ ಹಾಗೂ ಸೈಂಟ್ ಪಾಲ್ ಚರ್ಚ್‌ನಲ್ಲಿ ನಡೆದಿದ್ದ ಸ್ಫೋಟದಲ್ಲಿ ಭಾಗಿಯಾಗಿದ್ದ. ಈತನ ಬಂಧನಕ್ಕೆೆ ನಗರದ ಒಂದನೇ ಎಸಿಎಂಎಂ ನ್ಯಾಯಾಲಯ ಏ.8 ರಂದು ವಾರಂಟ್ ಜಾರಿಗೊಳಿಸಿತ್ತು.
2000ನೆಯ ಇಸವಿಯ ಜೂನ್-ಜುಲೈ ಅವಧಿಯಲ್ಲಿ ಬೆಂಗಳೂರಿನ ಜೆಜೆ ನಗರದ ಸೇಂಟ್ ಪೀಟರ್ಸ್ ಹಾಗೂ ಸೇಂಟ್ ಪಾಲ್ ಚರ್ಚ್, ಕಲಬುರ್ಗಿ ಜಿಲ್ಲೆಯ ವಾಡಿ ಮತ್ತು ಹುಬ್ಬಳ್ಳಿಯ ಕೇಶವಾಪುರದ ಚರ್ಚ್‌ಗಳಲ್ಲಿ ಬಾಂಬ್ ಸ್ಫೋಟ ನಡೆಸಲಾಗಿತ್ತು. ಹೈದರಾಬಾದ್‌ನ ದೀನ್‌ದಾರ್ ಅಂಜುಮನ್ ಸಂಘಟನೆ ಈ ಕೃತ್ಯ ನಡೆಸಿತ್ತು. ಈ ಬಗ್ಗೆೆ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದವು, ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಈ ಪ್ರಕರಣದಲ್ಲಿ ಇದುವರೆಗೆ 29 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು ಈಗಾಗಲೇ 11 ಆರೋಪಿಗಳಿಗೆ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿದೆ ಮತ್ತು 12 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ವಿಶೇಷ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಈಗ ಬಂಧಿಸಲಾಗಿರುವ ಆರೋಪಿ ಜೆ ಜೆ ನಗರದ ಸೈಂಟ್ ಪೀಟರ್ ಮತ್ತು ಸೈಂಟ್ ಪಾಲ್ಸ್ ಚರ್ಚ್‌ನಲ್ಲಿ ಬಾಂಬ್ ಇಟ್ಟಿದ್ದ.

 
ಸ್ಫೋಟದಿಂದ ಸತ್ತಿದ್ದರು!
ಹೈದರಾಬಾದ್‌ನಿಂದ ಬೆಂಗಳೂರಿಗೆ ಬಂದಿದ್ದ ಸೈಯದ್ ಜೆಹಬ್ ಎಂಬಾತ ದ್ವಿಚಕ್ರ ವಾಹನದಲ್ಲಿ ನಗರದ ಹಲವೆಡೆ ಸುತ್ತಾಡಿ ಬಾಂಬ್ ಇಡಲು ಸೂಕ್ತವಾದ ಚರ್ಚ್‌ಗಳನ್ನು ಗುರುತಿಸಿದ್ದ. ಆತ ಗುರುತಿಸಿದ ಚರ್ಚ್‌ಗಳಿಗೆ ಬಾಂಬ್ ಅಳವಡಿಸಲು ಕಾರಿನಲ್ಲಿ ಹೊಗುತ್ತಿದ್ದಾಗ ಮಾಗಡಿ ರಸ್ತೆೆಯ ಮಿನರ್ವ ಮಿಲ್ ಬಳಿ ಕಾರಿನಲ್ಲಿದ್ದ ಬಾಂಬ್ ಏಕಾಏಕಿ ಸ್ಫೋಟಗೊಂಡಿತ್ತು. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಉಗ್ರರಾದ ಜಾಕೀರ್ ಮತ್ತು ಸಿದ್ಧಿಕಿ ಎಂಬುವರು ಮೃತಪಟ್ಟು ಮತ್ತೊೊಬ್ಬ ಆರೊಪಿ ಇಬ್ರಾಹಿಂ ಗಾಯಗೊಂಡಿದ್ದ.

ಉಗ್ರರ ಪಾಪಕೂಪ ಆಶ್ರಮ!
ಹೈದರಾಬಾದ್‌ನಲ್ಲಿ ವಾಸವಿದ್ದ ಹಜರತ್ ಮೌಲಾನ ಸಿದ್ದಕಿ ಎಂಬ ವಿದ್ವಾಾಂಸ ಸರ್ವಧರ್ಮಗಳನ್ನೂ ಒಂದು ಮಾಡುವ ಉದ್ದೇಶ ಇಟ್ಟುಕೊಂಡು ಎಲ್ಲ ಧರ್ಮಗ್ರಂಥಗಳ ಅಭ್ಯಾಸ ನಡೆಸಿದ್ದ. ಕೊನೆಗೆ ಇಸ್ಲಾಾಂ ಧರ್ಮವೇ ಶ್ರೇಷ್ಠ ಎಂದು ತನ್ನದೇ ವಾದ ಮುಂದಿಟ್ಟಿದ್ದ. ತನ್ನನ್ನು ತಾನು ಹಿಂದೂ ದೇವರು ಚೆನ್ನಬಸವೇಶ್ವರನ ಅವತಾರ ಪುರುಷ ಎಂದು ಕರೆದುಕೊಳ್ಳುತ್ತಿದ್ದ. ಈತ 1924ರಲ್ಲಿ ಹೈದರಾಬಾದ್‌ನಲ್ಲಿ ‘ದೀನ್‌ದಾರ್ ಚನ್ನಬಸವೇಶ್ವರ ಅಂಜುಮನ್’ ಎಂಬ ಆಶ್ರಮ ಸ್ಥಾಪಿಸಿದ. ಇಲ್ಲಿ ಹಿಂದೂ-ಮುಸ್ಲಿಿಂ ಎರಡೂ ಧರ್ಮ ಬೋಧನೆ ಮಾಡಲಾಗುತ್ತಿತ್ತು. 1952ರಲ್ಲಿ ಹಜರತ್ ಮೌಲಾನ ಸಿದ್ದಕಿ ಮೃತಪಟ್ಟ ನಂತರ ಆತನ ಮಗ ಜಿಯಾ ಉಲ್ ಹಸನ್ ಪಾಕಿಸ್ತಾನದ ಮಾರ್ದಾನ್‌ಗೆ ವಲಸೆ ಹೋಗಿದ್ದ. ಈತ ತನ್ನ ನಾಲ್ವರು ಮಕ್ಕಳೊಂದಿಗೆ ಪಾಕಿಸ್ತಾನದಲ್ಲಿ ಜಮಾತ್ ಹಿಜ್ಬುಲ್ ಮುಜಾಹಿದೀನ್ ಎಂಬ ಉಗ್ರ ಸಂಘಟನೆಯ ಸಂಪರ್ಕಕ್ಕೆೆ ಬಂದರು. ಆ ನಂತರ ಕಾಶ್ಮೀರದ ಪ್ರತ್ಯೇಕವಾದಿಗಳಿಗೆ ಬೆಂಬಲ ನೀಡುತ್ತಿದ್ದರು. ತನ್ನ ತಂದೆಯ ಜನ್ಮಶತಮಾನೋತ್ಸವದ ಕಾರ್ಯಕ್ರಮಕ್ಕೆೆ ಹೈದರಾಬಾದ್‌ಗೆ ಬಂದಿದ್ದ ಜಿಯಾ ಉಲ್ ಅಸನ್ ಸರಣೀ ಬಾಂಬ್ ಸ್ಫೋೋಟಕ್ಕೆೆ ಸಂಚು ರೂಪಿಸಿದ್ದ. ಚರ್ಚ್‌ಗಳಲ್ಲಿ ಬಾಂಬ್ ಸ್ಫೋಟಿಸಿ ಆ ಕೆಲಸವನ್ನು ಹಿಂದೂ ಸಂಘಟನೆಗಳ ತಲೆಗೆ ಕಟ್ಟಿ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲು ಈ ಸ್ಫೋಟದ ಸಂಚು ರೂಪಿಸಲಾಗಿತ್ತು. ಭಾರತದಲ್ಲಿ ಇಸ್ಲಾಮೀಕರಣ ಮಾಡುವ ಉದ್ದೇಶವನ್ನಿಟ್ಟುಕೊಂಡು ಈ ಸ್ಫೋಟ ನಡೆಸಲಾಗಿತ್ತು. ಜಿಯಾ ಉಲ್ ಅಸನ್ ಮತ್ತು ಆತನ ನಾಲ್ವರು ಮಕ್ಕಳು ಈಗ ಪಾಕ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ.

ಎಲ್ಲೆೆಲ್ಲಿ ಸ್ಫೋಟ?
* ಜೂ.8, 2000 ಕಲಬುರ್ಗಿ ಜಿಲ್ಲೆೆಯ ವಾಡಿಯ ಸೈಂಟ್ ಆನ್‌ಸ್‌ ಚರ್ಚ್
* ಜು.8, 2000 ಹುಬ್ಬಳ್ಳಿಯ ಸೈಂಟ್ ಜಾನ್ ಲೂಥರ್ನ್ ಚರ್ಚ್
* ಜು.9, 2000 ಬೆಂಗಳೂರಿನ ಜೆಜೆ ನಗರದ ಸೈಂಟ್ ಪೀಟರ್ಸ್ ಹಾಗೂ ಸೈಂಟ್ ಪಾಲ್ ಚರ್ಚ್
* ಜು.9, 2000 ಮಾಗಡಿ ರಸ್ತೆೆಯ ಚರ್ಚ್‌ಗೆ ಬಾಂಬ್ ಇಡಲು ಹೋಗುತ್ತಿದ್ದ ಕಾರು ಸ್ಫೋಟ, ಇಬ್ಬರು ಉಗ್ರರ ಸಾವು

ಪೊಲೀಸ್ ಠಾಣೆ ಸಾವ೯ಜನಿಕ ಆಸ್ತಿಯಲ್ಲ-ಚರಣ್ ರೆಡ್ಡಿ ಉದ್ಧಟತನ

Gbo1eZKv‘ಪೊಲೀಸ್ ಠಾಣೆ, ಪೊಲೀಸ್ ಕಮೀಷನರ್ ಕಚೇರಿ ಮತ್ತು ಪೊಲೀಸ್ ಕ್ವಾಟ್ರಸ್‍ಗಳು ಸಾವ೯ಜನಿಕ ಆಸ್ತಿಯಲ್ಲ. ಇವೆಲ್ಲವೂ ಸರಕಾರದ ಆಸ್ತಿ’ ಹೀಗ೦ತಾ ಫಮಾ೯ನು ಹೊರಡಿಸಿದವರು ನಗರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಕೆ.ಎಸ್. ಆರ್ ಚರಣ್ ರೆಡ್ಡಿ.
   ಪೊಲೀಸ್ ಕುಟು೦ಬದವರು ಪ್ರತಿಭಟನೆ ನಡೆಸಬಾರ ದು ಎ೦ಬ ಕಾರಣಕ್ಕೆ ಎಲ್ಲ ಪೊಲೀಸ್ ಕ್ವಾಟ್ರಸ್‍ಗಳಿಗೆ ಶನಿವಾರ ಮಾಧ್ಯಮಗಳಿಗೆ ಪ್ರವೇಶ ನಿಬ೯೦ಧಿಸಲಾಗಿತ್ತು. ಈ ಕಾರಣಕ್ಕೆ ಮಾಗಡಿ ರಸ್ತೆಯಲ್ಲಿರುವ ಕ್ವಾಟ್ರಸ್‍ಗೆ ಭೇಟಿ ನೀಡಿದ್ದ ಚರಣ್ ರೆಡ್ಡಿಯವರನ್ನು ಒಳಗೆ ಹೋಗಲು ಅನುಮತಿ ನೀಡಿ ಎ೦ದು ವರದಿಗಾರರು ಮನವಿ ಮಾಡಿದರು.
   ಇದರಿ೦ದ ಸಿಟ್ಟಿಗೆದ್ದ ಚರಣ್ ರೆಡ್ಡಿ “ಪೊಲೀಸ್ ಠಾಣೆ, ಕಮೀಷನರ್ ಕಚೇರಿ ಮತ್ತು ಕ್ವಾಟ್ರಸ್‍ಗಳು ಸಾವ೯ಜನಿಕ ಆಸ್ತಿಯಲ್ಲ. ಅವು ಪೊಲೀಸ್ ಇಲಾಖೆ ಯ ಆಸ್ತೀ. ಮಾಧ್ಯಮದವರನ್ನು ಯಾವಾಗ ಒಳಗೆ ಬಿಡಬೇಕು, ಯಾವಾಗ ಬಿಡಬಾರದು ಎ೦ಬುದನ್ನು ನಾವು ನಿಧ೯ರಿಸುತ್ತೇವೆ. ನಮ್ಮ ಆದೇಶಗಳನ್ನು ನೀವೆಲ್ಲರೂ ಪಾಲನೆ ಮಾಡಬೇಕು ಅಷ್ಟೇ’ ಎ೦ದು ವರದಿ ಮಾಡಲು ಹೋಗಿದ್ದ ಮಾಧ್ಯಮದವರಿಗೆ ತಾಕೀತು ಮಾಡಿ ಉದ್ಧಟತನದ ಹೇಳಿಕೆ ನೀಡಿದ್ದಾರೆ.
    ಯಾವುದೇ ಇಲಾಖೆಗೆ ಸೇರಿದ ಆಸ್ತಿಯನ್ನು ಸಾವ೯ಜನಿಕ ಆಸ್ತಿ ಎ೦ದೇ ಪರಿಗಣಿಸಲಾಗುತ್ತದೆ. ಅದರಲ್ಲೂ ಪೊಲೀಸ್ ಠಾಣೆಗಳು ಸಾವ೯ಜನಿಕರಿಗೆ ಸೇವೆ ನೀಡಬೇಕಾದ, ಸಾವ೯ಜನಿಕರ ಸಮಸ್ಯೆಗಳನ್ನು ಆಲಿಸಬೇಕಾದ ಜಾಗ. ಆ ಜಾಗ ಸಾವ೯ಜನಿಕರ ಸ್ವತ್ತಲ್ಲ ಎ೦ಬ ಹೇಳಿಕೆ ನೀಡುವ ಮೂಲಕ ತಾವು ಎ೦ತಹ ದಕ್ಷ ಅಧಿಕಾರಿ ಎ೦ಬುದನ್ನು ಮನವರಿಕೆ ಮಾಡಿದ್ದಾರೆ.
   ಗಾಮೆ೯೦ಟ್ಸ್ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದ ಸ೦ದಭ೯ದಲ್ಲಿ ಜಾಲಹಳ್ಳಿಗೆ ಭೇಟಿ ನೀಡಿದ್ದ ಚರಣ್ ರೆಡ್ಡಿ ವರದಿ ಮಾಡುತ್ತಿದ್ದ ಮಾಧ್ಯಮ ಪ್ರತಿನಿಧಿಯೊಬ್ಬರ ಲೋಗೋ ಕಿತ್ತೆಸೆದು ದಪ೯ ತೋರಿಸಿದ್ದರು. ಈಗ ಈ ರೀತಿಯ ಉದ್ಧಟತನದ ಹೇಳಿಕೆ ನೀಡಿದ್ದಾರೆ.
    “ಚರಣ್ ರೆಡ್ಡಿ ಅವರ ಸ್ಥಾನದಲ್ಲಿರುವ ಅಧಿಕಾರಿಗಳು ಈ ರೀತಿಯ ವಿವೇಚನಾ ರಹಿತ ಹೇಳಿಕೆಗಳನ್ನು ನೀಡಬಾರದು. ಹಿರಿಯ ಅಧಿಕಾರಿಗಳು ಮಾತನಾಡುವಾಗ ಎಚ್ಚರಿಕೆಯಿ೦ದ ಮಾತನಾಡಬೇಕು. ಪೊಲೀಸ್ ಠಾಣೆ, ಕಮೀಷನರ್ ಕಚೇರಿ, ಕ್ವಾಟ್ರಸ್‍ಗಳು ಎ೦ದಿಗೂ ಸಾವ೯ಜನಿಕರ ಸ್ವತ್ತು. ಶಿಸ್ತಿನ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳೇ ಹೀಗೆ ಅಶಿಸ್ತಿನಿ೦ದ ವತಿ೯ಸಿದರೆ ಶಿಸ್ತು ಉಳಿಯುವುದಿಲ್ಲ’ ಎ೦ದು ನಿವೃತ್ತ ಅಧಿಕಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
                                                                               – ಶಶಿವರ್ಣಂ!

ಗೆದ್ದಿದ್ದು ಪೊಲೀಸರೇ..!

police protestಪೊಲೀಸರ ಪ್ರತಿಭಟನೆಯನ್ನು ಎಸ್ಮಾ ಮತ್ತು ಶಿಸ್ತು ಕ್ರಮದ ಅಸ್ತ್ರ ಉಪಯೋಗಿಸಿ ಹತ್ತಿಕ್ಕುವಲ್ಲಿ ಸರಕಾರವೇನೋ ಯಶಸ್ವಿಯಾಗಿದೆ. ಆದರೆ ಒ೦ದು ಹ೦ತಕ್ಕೆ ಗೆದ್ದಿದ್ದು ಪೊಲೀಸರೇ..

ಹೌದು, ಹಲವು ವಷ೯ಗಳಿ೦ದ ಸಮಸ್ಯೆಗಳ ಸುಳಿಯಲ್ಲಿ ಬೇಯುತ್ತಿದ್ದ ಪೊಲೀಸರು ತಮ್ಮ ಸ೦ಕಷ್ಟಗಳನ್ನು ಹೇಳಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಹದಿನೈದು ದಿನಗಳಿ೦ದ ಪೊಲೀಸ್ ವಲಯದಲ್ಲಿ ಎದ್ದ ಕೂಗು ಹಿರಿಯ ಅಧಿಕಾರಿಗಳನ್ನು ದಾಟಿ ಸರಕಾರಕ್ಕೆ ಮುಟ್ಟಿದೆ. ಪೊಲೀಸರು ಅ೦ದರೆ “ಅವರಿಗೇನು ಕಮ್ಮಿ’ ಎ೦ದುಕೊ೦ಡಿದ್ದ ಸಾವ೯ಜನಿಕರೂ ಕೂಡ ಅವರ ಸಮಸ್ಯೆಗಳನ್ನು ಕೇಳಿ ಹೋರಾಟಕ್ಕೆ ಬೆ೦ಬಲ ವ್ಯಕ್ತಪಡಿಸಿದ್ದರು. ಕೆಲ ಸ೦ಘಟನೆಗಳೂ ಪೊಲೀಸ್ ಪ್ರತಿಭಟನೆಯ ಕೂಗಿಗೆ ದನಿಗೂಡಿಸಿದ್ದರು. ಒ೦ದು ಹ೦ತಕ್ಕೆ ಪೊಲೀಸರ ಸಮಸ್ಯೆಗಳ ಸರಮಾಲೆಯ ಸತ್ಯ ದಶ೯ನ ಸರಕಾರಕ್ಕೆ ಮುಟ್ಟಿದೆ.
   ಅಖಿಲ ಕನಾ೯ಟಕ ಪೊಲೀಸ್ ಮಹಾಸ೦ಘದ ಅಧ್ಯಕ್ಷ ಶಶಿಧರ್ ಪ್ರತಿಭಟನೆಗೆ ಕರೆ ನೀಡಿದ ನ೦ತರ ಕೆಳಹ೦ತದ ಪೊಲೀಸ್ ವಲಯದಲ್ಲಿ ಭಾರೀ ಬೆ೦ಬಲ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಪೊಲೀಸರ ನೋವಿನ ಬಗ್ಗೆ, ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಯಿತು. ಇಡೀ ರಾಜ್ಯಕ್ಕೆ ರಕ್ಷಣೆ ಒದಗಿಸುವ ಪೊಲೀಸರ ಜೀವನಕ್ಕೇ ರಕ್ಷಣೆಯಿಲ್ಲ ಎ೦ಬ ಕೂಗು ವಿಧಾನಸೌಧಕ್ಕೆ ಮುಟ್ಟಿದೆ. ಕೆಲವು ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಒಪ್ಪಿಕೊ೦ಡಿದ್ದು, ಹ೦ತ ಹ೦ತವಾಗಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎ೦ಬ ಭರವಸೆ ಸಿಕ್ಕಿದೆ. ಅ೦ದ ಮಾತ್ರಕ್ಕೆ ಪೊಲೀಸರ ಸಮಸ್ಯೆಗಳೆಲ್ಲವೂ ಪರಿಹಾರವಾಯ್ತು ಎ೦ದಥ೯ವಲ್ಲ. ಹಲವು ವಷ೯ಗಳಿ೦ದ ಜನಪ್ರತಿನಿಧಿಗಳಿಗೆ ತಲುಪದ ಕೆಳಹ೦ತದ ಪೊಲೀಸರ ಕೂಗು ಈ ಬಾರಿ ಅವರಿಗೆ ಮುಟ್ಟಿದೆ.
   ಒ೦ದು ವೇಳೆ ಪೊಲೀಸರು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸಿದ್ದರೆ ಕಾನೂನು ಸುವ್ಯವಸ್ಥೆ ಹದಗೆಡುವ ಮತ್ತು ಪರಿಸ್ಥಿತಿ ಲಾಭವನ್ನು ಪಡೆದುಕೊಳ್ಳಲು ಕೆಲ ಶಕ್ತಿಗಳು ಪ್ರಯತ್ನಿಸುತ್ತಿದ್ದವು. ಆಗ ಪೊಲೀಸರಿಗೆ ಸಾವ೯ಜನಿಕ ಬೆ೦ಬಲ ಇಲ್ಲವಾಗುತ್ತಿತ್ತು. ಪ್ರತಿಭಟನೆ ಯಶಸ್ವಿಯಾಗಿದ್ದರೂ ಸರಕಾರದ ಸ್ಪ೦ದನೆ ಇದಕ್ಕಿ೦ತಲೂ ಹೆಚ್ಚೇನು ಇರುತ್ತಿರಲಿಲ್ಲ. ಈ ಕಾರಣದಿ೦ದ ಪೊಲೀಸರ ಹೋರಾಟ ಒ೦ದು ಹ೦ತಕ್ಕೆ ಯಶಸ್ವಿಯಾಗಿದೆ.
“ಒ೦ದು ವೇಳೆ ನಾವು ಪ್ರತಿಭಟನೆ ಮಾಡಿದ್ದರೂ ಏನು ಪ್ರಯೋಜನವಾಗುತ್ತಿರಲಿಲ್ಲ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬ೦ದಿಗೂ ಸಮಸ್ಯೆಗಳಿವೆ ಎ೦ಬುದು ಕಳೆದ ಹದಿನೈದು ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗೂ ತಲುಪಿದೆ. ಸಮಸ್ಯೆಗಳನ್ನು ಬಗೆಹರಿಸಲು ಸರಕಾರವೂ ಮು೦ದಾಗಿದೆ. ಒ೦ದು ಹ೦ತಕ್ಕೆ ಗೆದ್ದಿದ್ದು ನಾವೇ’
            – ಪೊಲೀಸ್ ಪೇದೆಯೊಬ್ಬರ ಅಭಿಪ್ರಾಯ 
“”ರಾಜ್ಯದಲ್ಲಿ ಅಸ್ಥಿರ ವಾತಾವರಣ ಸೃಷ್ಟಿಸುವ ಉದ್ದೇಶ ನಮ್ಮದಾಗಿರಲಿಲ್ಲ. ನಮ್ಮ ಸಮಸ್ಯೆಗಳನ್ನು ಸರಕಾರದ ಮು೦ದೆ ಇಡುವುದಷ್ಟೇ ಉದ್ದೇಶವಾಗಿತ್ತು. ಪ್ರತಿಭಟನೆ ಮಾಡಿದ್ದರೆ ಕೆಲಸ ಕಳೆದುಕೊಳ್ಳುವ ಹ೦ತಕ್ಕೆ ಹೋಗುತ್ತಿತ್ತು. ಒ೦ದಿಷ್ಟು ಭರವಸೆಗಳು ಸಿಕ್ಕಿವೆ, ಕಾದುನೋಡುತ್ತೇವೆ’
           – ಎಸ್‍ಐ ಒಬ್ಬರ ಅಭಿಪ್ರಾಯ 
ಸಾಮಾಜಿಕ ಜಾಲತಾಣದಿ೦ದ ಮೌನ ಕ್ರಾ೦ತಿ 
 • ಪ್ರತಿಭಟನೆ ನಡೆಸುತ್ತೇವೆ ಎ೦ದು ಘೋಷಣೆಯಾಗಿದ್ದೇ ಫೆೀಸ್ ಬುಕ್‍ನಲ್ಲಿ.
 • 15 ದಿನದ ಹಿ೦ದೆ ಶಶಿಧರ್ ಗೃಹ ಸಚಿವರಿಗೆ ಬರೆದ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಸ೦ಚಲನಕ್ಕೆ ಕಾರಣ.
 • ಪ್ರತಿಭಟನೆಗೆ ಕರೆನೀಡಿದ ಸುದ್ದಿ ಹರಿದಾಡಿದ್ದು ಫೆೀಸ್‍ಬುಕ್, ವಾಟ್ಸ್ ಆಪ್ ಮೂಲಕ
 • ಪೊಲೀಸ್ ಸಮಸ್ಯೆಗಳ ಅನಾವರಣ
 • ಸಾವ೯ಜನಿಕ ಬೆ೦ಬಲ ಗಳಿಸಲು ಕಾರಣವಾಗಿದ್ದು ಫೆೀಸ್‍ಬುಕ್
 • ಪೊಲೀಸರ ಮನವೊಲಿಸಲು ಸರಕಾರದಿ೦ದ ಟ್ವಿಟರ್, ಫೆೀಸ್‍ಬುಕ್ ಬಳಕೆ
ಪೊಲೀಸರಿಗೆ ಸಿಕ್ಕ ಭರವಸೆಗಳು
 • ವಾರದ ರಜೆ ಕಡ್ಡಾಯವಾಗಿ ನೀಡಲು ಒಪ್ಪಿಗೆ
 • ರಜೆ ಭತ್ಯೆಗೆ ಅಸ್ತು
 • ವೇತನ ತಾರತಮ್ಯ ನಿವಾರಿಸುವ ಭರವಸೆ
 • ಸಿಬ್ಬ೦ದಿ ಸಮಸ್ಯೆ ನಿವಾರಣೆಗೆ ಪೊಲೀಸ್ ನೇಮಕ ಪ್ರಕ್ರಿಯೆಗೆ ಚುರುಕು
 • ಹಿರಿಯ ಅಧಿಕಾರಿಗಳಿ೦ದ ಕಿರುಕುಳವಾದರೆ ಗ೦ಭೀರವಾಗಿ ಪರಿಗಣನೆ
 • ಆಡ೯ಲಿ೯ ಪದ್ಧತಿ ನಿಷೇಧಕ್ಕೆ ಚಿ೦ತನೆ
 • ಪೊಲೀಸ್ ಕ್ವಾಟ್ರಸ್‍ಗಳ ಗುಣಮಟ್ಟ ಸುಧಾರಣೆಗೆ ಒತ್ತು

ಶಶಿವರ್ಣಂ!

ಸರ್ಕಾರದ ತಡರಾತ್ರಿ ಕಾರ್ಯಾಚರಣೆ, ಶಶಿಧರ್ ಬಂಧನ..!

shashidharಜೂನ್ 4ರಂದು ಪೊಲೀಸರ ಪ್ರತಿಭಟನೆಗೆ ಕರೆ ನೀಡಿದ್ದ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್‍ರನ್ನ ಬಂಧಿಸಲಾಗಿದೆ. ಬುಧವಾರ ರಾತ್ರಿ 12.30ರ ಸಮಯದಲ್ಲಿ ಯಲಹಂಕ ಉಪನಗರದ ಶಶಿಧರ್‍ರ ಮನೆಯಿಂದ ಪೊಲೀಸರು ಇವರನ್ನ ಬಂಧಿಸಿ ಕರೆದೊಯ್ದಿದ್ದಾರೆ. ಪೊಲೀಸ್ ಪ್ರತಿಭಟನೆ ಹತ್ತಿಕ್ಕಲು ಹಲವು ಸಾಹಸ ಮಾಡಿದ್ದ ಸರಕಾರ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬಿಟ್ಟು ಈ ನಡುರಾತ್ರಿ ಕಾರ್ಯಾಚರಣೆ ನಡೆಸಿದೆ.
ಮುವತ್ತಕ್ಕೂ ಹೆಚ್ಚು ಮಂದಿ ಪೊಲೀಸರು ಶಶಿಧರ್ ಮನೆಗೆ ಏಕಾಏಕಿ ನುಗ್ಗಿ ಶಶಿಧರ್ ಅವರನ್ನು ಬಂಧಿಸಿ ಕರೆದೊಯ್ಯಲಾಯಿದೆ. ಈ ವೇಳೆ ಶಶಿಧರ್ ಮಗ ಜಾಗೃತ್ ಫೋಟೊ ತೆಗೆಯಲು ಮುಂದಾದಾಗ ಬಲವಂತವಾಗಿ ಮೊಬೈಲ್ ಕಿತ್ತು ಒಡೆದುಹಾಕಲಾಗಿದೆ. ಸರ್ಕಾರದ ವಿರುದ್ಧ ಸಮರ, ಒಳಸಂಚು ಮತ್ತು ಪೊಲೀಸರಿಗೆ ಪ್ರತಿಭಟನೆ ಮಾಡುವಂತೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಶಶಿಧರ್ ಅವರನ್ನ ಬಂಧಿಸಲಾಗಿದೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಅವರನ್ನು ಜೂನ್ 16 ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಶಶಿವರ್ಣಂ

ಪೊಲೀಸ್ ಇಲಾಖೆಯಲ್ಲಿ 33 ಸಾವಿರ ಹುದ್ದೆ ಖಾಲಿ..!

ajನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ಪೊಲೀಸರು ಜೂ.4 ರಂದು ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಅವಧಿಗೂ ಮೀರಿ ಪೊಲೀಸರನ್ನು ದುಡಿಸಿಕೊಳ್ಳಲಾಗುತ್ತಿದೆ ಎಂಬುದು ಪ್ರತಿಭಟನೆಗಿಳಿದಿರುವವರ ಅಳಲು. ಹೌದು ರಾಜ್ಯದಲ್ಲಿ ಪೊಲೀಸರು ಪ್ರತಿದಿನ ಸರಾಸರಿ 12 ರಿಂದ 15 ಗಂಟೆಗಳ ಕಾಲ ದುಡಿಯುತ್ತಾರೆ. ಎಂಟು ಗಂಟೆಗಳ ಕಾಲ ಕೆಲಸ ಎಂಬುದು ಪೊಲೀಸರ ವಿಚಾರದಲ್ಲಿ ಕನಸಿನ ಮಾತೇ ಸರಿ. ಹೀಗೆ ಪೊಲೀಸರನ್ನು ಹೆಚ್ಚು ಅವಧಿಗೆ ದುಡಿಸಿಕೊಳ್ಳಲು ಕಾರಣ ರಾಜ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯ ಕೊರತೆ.

ರಾಜ್ಯ ಪೊಲೀಸ್ ಇಲಾಖೆಗೆ ಮಂಜೂರಾಗಿರುವ ಪೊಲೀಸ್ ಬಲ 1,01053. ಆದರೆ ಸದ್ಯ ರಾಜ್ಯದಲ್ಲಿರುವ ಪೊಲೀಸರ ಸಂಖ್ಯೆ ಕೇವಲ 73,746 ಅಷ್ಟೇ. ಅಂದರೆ ಸದ್ಯ ರಾಜ್ಯದಲ್ಲಿರುವ ಖಾಲಿ ಇರುವ ಹುದ್ದೆಗಳ ಸಂಖ್ಯೆ 33307. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆ ಇರುವುದರಿಂದ ಈಗ ಇರುವ ಪೊಲೀಸರು ಅನಿವಾರ್ಯವಾಗಿ ಹೆಚ್ಚಿನ ಅವಧಿಗೆ ದುಡಿಯುವಂತಾಗಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸರ ನೇಮಕವಾ­ಗುತ್ತಿಲ್ಲ.

ಖಾಸಗಿ ಸಂಸ್ಥೆ ನೀಡಿರುವ ಅಂಕಿ ಅಂ­ಶಗಳ ಪ್ರಕಾರ ರಾಜ್ಯದ ಜನಸಂಖ್ಯೆ 6 ಕೋಟಿ 60 ಲಕ್ಷ. ಇಷ್ಟು ಜನಸಂಖ್ಯೆಗೆ ರಾಜ್ಯದಲ್ಲಿರುವ ಪೊಲೀಸರ ಸಂಖ್ಯೆ ಮಾತ್ರ 73,746. ಅಂದರೆ ರಾಜ್ಯದ ಪ್ರತಿ 894 ಜನರಿಗೆ ಒಬ್ಬ ಪೊಲೀಸ್ ಸಿಬ್ಬಂದಿ ಇದ್ದಾರೆ. ರಾಜ್ಯದಲ್ಲಿ ಈಗ ಇರುವ ಪೊಲೀಸರ ಸಂಖ್ಯೆಯನ್ನು 1.5 ಲಕ್ಷಕ್ಕೆ ಏರಿಕೆ ಮಾಡಬೇಕೆಂದು ಪೊಲೀಸ್ ಇಲಾಖೆ ಸರಕಾರಕ್ಕೆ ಶಿಫಾರಸು ಮಾಡಿ ಎರಡು ವರ್ಷವೇ ಕಳೆದಿದೆ. ಆದರೆ ನೇಮಕ ಪ್ರಕ್ರಿಯೆ ಮಾತ್ರ ಅಂದುಕೊಂಡ ಸಂಖ್ಯೆಯಲ್ಲಿ ಆಗುತ್ತಿಲ್ಲ.

ವಿಪರ್ಯಾಸ ಅಂದರೆ ಪೊಲೀಸರ ಪ್ರತಿಭಟನೆಗೆ ನಮ್ಮ ಬೆಂಬಲ ಇದೆ ಅನ್ನುವ ಬಿಜೆಪಿ ಮುಖಂಡರು ತಮ್ಮ ಸರಕಾರ ಅಸ್ಥಿತ್ವದಲ್ಲಿದ್ದಾಗ ಪೊಲೀಸ್ ನೇಮಕ ಕಾರ್ಯವನ್ನೇ ನಡೆಸಿಲ್ಲ. ಇನ್ನು ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷ ಕಳೆದಿದೆ. ಎಂಟು ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ಘೋಷಣೆ ಮಾಡುತ್ತಲೇ ಇದ್ದಾರೆ. ಆದರೆ ಇನ್ನೂ ಅದು ಕಾರ್ಯಗತವಾಗಿಲ್ಲ. ‘ಜನಸಂಖ್ಯೆಗೆ ಅನುಗುಣವಾಗಿ, ಕಾನೂನು ಸುವ್ಯವಸ್ಥೆ ಮತ್ತು ಅಪರಾಧಗಳ ಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಪೊಲೀಸರ ನೇಮಕ ನಡೆಯದಿರುವ ಕಾರಣಕ್ಕೆ ಮಿತಿ ಮೀರಿದ ಕೆಲಸವನ್ನು ನಾವು ಮೈಮೇಲೆ ಎಳೆದುಕೊಳ್ಳುವಂತಾಗಿದೆ. ವಾರಕ್ಕೆ ಒಂದು ದಿನ ರಜೆ ಪಡೆಯುವುದಿರಲಿ, ತಿಂಗಳಿಗೆ ಒಂದು ದಿನ ರಜೆ ಸಿಕ್ಕರೆ ಅದೇ ಅದೃಷ್ಟ ಎನ್ನುವಂತಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳನ್ನು ಕೇಳಿದರೆ, ಇದು ಅನಿವಾರ್ಯ ಎನ್ನುತ್ತಾರೆ’ ಎಂದು ನೋವು ತೋಡಿಕೊಳ್ಳುತ್ತಾರೆ ನಗರದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಪೇದೆಯೊಬ್ಬರು.

ಸಿಬ್ವಂದಿ ಕೊರತೆಯಿಂದ ಸಮಸ್ಯೆಗಳು

 • ಎಂಟು ಗಂಟೆಯ ಬದಲಾಗಿ 12 ರಿಂದ 15 ಗಂಟೆ ಕೆಲಸ ಮಾಡಬೇಕಾದ ಒತ್ತಡ
 • ಕಾನೂನು ಸುವ್ಯವಸ್ಥೆ ಮತ್ತು ಭದ್ರತೆ ನೆಪದಲ್ಲಿ ಹೆಚ್ಚುವರಿ ಕೆಲಸ
 • ರಜೆಗಳಿಲ್ಲದೇ ಕೆಲಸ ಮಾಡಬೇಕಾದ ಅನಿವಾರ್ಯತೆ
 • ತುರ್ತು ಸಂದರ್ಭಗಳಲ್ಲಿ ಕೆಲಸ ಮುಗಿಸಿ ಮನೆಗೆ ಹೋದ ನಂತರ ಠಾಣೆಗೆ ಬರಬೇಕು
 • ಬಂದೋಬಸ್ತ್ ಕಾರ್ಯಕ್ಕೆ ಹೊರ ಜಿಲ್ಲೆಗಳಿಗೆ ಕೆಲಸ
 • ಇಲಾಖೆಯೊಳಗೇ ಲಂಚ ಕೊಟ್ಟು ರಜೆ, ಪಾಳಿ ಬದಲಾವಣೆ ಮಂಜೂರು ಮಾಡಿಸಿಕೊಳ್ಳ ಬೇಕಾದ ವ್ಯವಸ್ಥೆ

894 ಜನರಿಗೆ ಒಬ್ಬ ಪೊಲೀಸ್!

 • ರಾಜ್ಯದ ಜನಸಂಖ್ಯೆ 6 ಕೋಟಿ 60 ಲಕ್ಷ
 • ಒಟ್ಟು ಪೊಲೀಸರ ಸಂಖ್ಯೆ-73,746
 • ರಾಜ್ಯದಲ್ಲಿ 894 ಜನರಿಗೆ ಒಬ್ಬ ಪೊಲೀಸ್ ಸಿಬ್ಬಂದಿ
 • ಪ್ರತಿ ಒಬ್ಬ ವಿಐಪಿಗೆ ಇಬ್ಬರು ಪೊಲೀಸ್
 • ತಿಂಗಳಿಗೆ 300 ರಿಂದ 350 ಮಂದಿ ನಿವೃತ್ತಿ
 • ರಾಜ್ಯಕ್ಕೆ 1.5 ಲಕ್ಷ ಪೊಲೀಸರು ಬೇಕು

ಬೆಂಗಳೂರಿನಲ್ಲಿ 766 ಜನರಿಗೆ ಒಬ್ಬ ಪೊಲೀಸ್!

 • ನಗರದ ಜನಸಂಖ್ಯೆ 1.15 ಕೋಟಿ
 • ನಗರದಲ್ಲಿರುವ ಪೊಲೀಸರ ಸಂಖ್ಯೆ
 • 15,056 ಪ್ರತಿ ತಿಂಗಳು 60 ರಿಂದ 70 ಮಂದಿ ನಿವೃತ್ತಿ
 • ನಗರಕ್ಕೆ ಕನಿಷ್ಠ 30 ಸಾವಿರ ಪೊಲೀಸರು ಬೇಕು

ಶಶಿವರ್ಣಂ!

180808

ಪೊಲೀಸರ ವಿರುದ್ಧ ‘ಎಸ್ಮಾ’ಸ್ತ್ರ ಪ್ರಯೋಗಿಸಿದ ಸರ್ಕಾರ

2016-05-31ಜೂ.4 ರಂದು ಪೊಲೀಸರು ಕರೆನೀಡಿರುವ ಪ್ರತಿಭಟನೆ ಹತ್ತಕ್ಕಲು ಸರಕಾರ ಎಸ್ಮಾ ಅಸ್ತ್ರ ಬಳಸಿದೆ. ಮಂಗಳವಾರ ಸಂಜೆ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿತ್ತು. ಸಭೆಯ ನಿರ್ಧಾರದಂತೆ ಅಂದು ರಜೆ ಸಲ್ಲಿಸುವ ಪೊಲೀಸರ ಮೇಲೆ ಎಸ್ಮಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಸರಕಾರ ಆದೇಶ ಹೊರಡಿಸಿದೆ. ಒಳಾಡಳಿತ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಪದ್ಮಿನಿ ದೇವಿ ಈ ಆದೇಶ ಹೊರಡಿಸಿದ್ದಾರೆ.
ಪೊಲೀಸರು ಅಪರಾಧ ಪತ್ತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆಯೊಂದಿಗೆ ನಾಗರಿಕರ ಆಸ್ತಿ ಮತ್ತು ಜೀವವನ್ನು ರಕ್ಷಿಸುವುದು ರಾಜ್ಯ ಪೊಲೀಸ್ ಸಿಬ್ಬಂದಿಯ ಮೂಲ ಕರ್ತವ್ಯವಾಗಿರುತ್ತದೆ. ಪೊಲೀಸ್ ಇಲಾಖೆಯ ಸಿಬ್ಬಂದಿಯು ಕಾರ್ಯನಿರ್ವಹಿಸಲು ನಿರಾಕರಿಸಿದಲ್ಲಿ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಸುರಕ್ಷತೆ ಧಕ್ಕೆ ಉಂಟಾಗಿ ಸಮಾಜದ ಸ್ವಾಸ್ಥ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದರಿಂದ ಅಪರಾಧ ಚಟುವಟಿಕೆಗಳು ಹೆಚ್ಚಾಗಿ ಸಾರ್ವಜನಿಕ ಜೀವನ ಅಸ್ಥವ್ಯಸ್ಥವಾಗುತ್ತದೆ ಎಂಬುದು ಸರಕಾರದ ಅಭಿಪ್ರಾಯವಾಗಿದೆ. ಆದ್ದರಿಂದ ರಾಜ್ಯದ ಸುರಕ್ಷತೆ ಚದೃಷ್ಠಿಯಿಂದ ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ಅಧಿನಿಯಮ, 2013(ಎಸ್ಮಾ) ಜಾರಿ ಮಾಡಿ ಈ ಕ್ಷಣದಿಂದಲೇ ಘೋಷಿಸಲಾಗಿದೆ. ರಾಜ್ಯ ಪೊಲೀಸ್ ಸೇವೆಗೆ ಸೇರಿದ ಎಲ್ಲಾ ಸೇವೆಗಳು “ಅತ್ಯಾವಶ್ಯಕ ಸೇವೆ” ಎಂದು ಪರಿಗಣಿಸಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ.
ಈ ಮೂಲಕ ಪ್ರತಿಭಟನೆ ನಡೆಸಲು ಮುಂದಾಗಿದ್ದ ಪೊಲೀಸರ ಮೇಲೆ ಎಸ್ಮಾ ಕಾಯ್ದೆ ಜಾರಿ ಮಾಡಿ ಆದೇಶ ಹೊರಡಿಸಿದೆ.
“ಇದು ಸರಕಾರತದ ದೌರ್ಬಲ್ಯವನ್ನು ತೋರಿಸುತ್ತದೆ. ಪೊಲೀಸರ ಒಗ್ಗಟ್ಟಿನಿಂದ ಸರಕಾರ ಹೆದರಿದೆ. ಮುಂದಿನ ಸಾಧ್ಯಾ ಸಾಧ್ಯತೆಗಳ ಬಗ್ಗೆ ವಕೀಲರಿಂದ ಸಲಹೆ ಪಡೆದು ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು. ಇದು ಸರಕಾರದ ಹೇಡಿತನದ ನಿರ್ಧಾರ. ಪೊಲೀಸರೊಂದಿಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಯಾಕೆಂದರೆ ಇದು ಪೊಲೀಸರ ಜೀವನದ ಪ್ರಶ್ನೆ. ಸರಕಾರ ಪೊಲೀಸರ ಜೀವನದೊಂದಿಗೆ ಆಟವಾಡುತ್ತಿದೆ’ ಎಂದು ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ತಿಳಿಸಿದ್ದಾರೆ.

ಎಸ್ಮಾ ಕಾಯ್ದೆ ಹೇಳುವುದೇನು?

ಅಗತ್ಯ ಸೇವೆಗಳಾದ ಆರೋಗ್ಯ ಸೇವೆಗಳು, ಸಾರ್ವಜನಿಕ ಸಾರಿಗೆ, ವಿದ್ಯುತ್‌ ಪೂರೈಕೆ, ಅಗತ್ಯ ವಸ್ತುಗಳ ಮಾರಾಟದಲ್ಲಿ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರ ವರ್ಗದವರು ಮುಷ್ಕರ ನಡೆಸದಂತೆ ನೋಡಿಕೊಳ್ಳುವುದೇ ಎಸ್ಮಾ ಕಾಯ್ದೆ. ಈ ಕಾಯ್ದೆ ಜಾರಿಯಾದ ಇಲಾಖೆಗಳ ನೌಕರರು ಮುಷ್ಕರ ನಡೆಸುವುದು ಅಪರಾಧ. ಕಾಯ್ದೆ ಉಲ್ಲಂ ಸಿ ಮುಷ್ಕರದಲ್ಲಿ ಭಾಗಿಯಾದರೆ ದಂಡ ವಿಧಿಸುವ ಮತ್ತು ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವನ್ನು ಈ ಕಾನೂನು ಕಲ್ಪಿಸುತ್ತದೆ.

ಶಶಿವರ್ಣಂ

ಪೊಲೀಸರಿಗೆ ವೈದ್ಯ ಪ್ರಮಾಣ ಪತ್ರ ನೀಡಬೇಡಿ-ಸರ್ಕಾರ ಆದೇಶ

police protest (2)ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಪೊಲೀಸರು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಸರಕಾರ ಹಲವು ತಂತ್ರಗಳನ್ನು ಅನುಸರಿಸುತ್ತಿದೆ.ರಜೆ ಮಂಜೂರು ಮಾಡದಂತೆ ಡಿಜಿಪಿ ಮೂಲಕ ಆದೇಶ ಹೊರಡಿಸಿದ್ದ ಸರಕಾರ ನಂತರ ಸಸ್ಪೆಂಡ್ ಮಾಡುವ ಬೆದರಿಕೆಯೊಡ್ಡಿತ್ತು. ಈಗ ಅನಾರೋಗ್ಯದ ನೆಪ ಹೇಳಿ ರಜೆ ಹಾಕುವ ಸಿಬ್ಬಂದಿಗೆ ವೈದ್ಯಕೀಯ ಪ್ರಮಾಣ ಪತ್ರ ನೀಡದಂತೆ ಆರೋಗ್ಯ ಇಲಾಖೆಗೆ ಲಿಖಿತ ಆದೇಶ ನೀಡಿದೆ. ಅಂದು ರಜೆ ಹಾಕುವ ಪೊಲೀಸರಿಗೆ ಅನಾರೋಗ್ಯದ ಕಾರಣದಿಂದಾಗಿ ರಜೆ ಸಲ್ಲಿಸಲೂ ಆಗದಂತೆ ಸರಕಾರ ಹಿಂಬಾಗಿಲ ಮೂಲಕ ಒತ್ತಡ ತಂತ್ರ ಅನುಸರಿಸುತ್ತಿದೆ.ಪ್ರತಿಭಟನೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಪೊಲೀಸರು ಅಂದು ಅನಾರೋಗ್ಯದ ನೆಪದಿಂದ ರಜೆ ಹಾಕಿ ಸಂಭಾವ್ಯ ಶಿಸ್ತು ಕ್ರಮವನ್ನು ತಪ್ಪಿಸಿಕೊಳ್ಳಲು ಯೋಜನೆ ರೂಪಿಸಿದ್ದರು. ಆದರೆ ಈಗ ಪೊಲೀಸರಿಗೆ ಪ್ರಮಾಣ ಪತ್ರ ನೀಡದಂತೆ ಆರೋಗ್ಯ ಇಲಾಖೆಗೆ ಆದೇಶ ನೀಡಿ ಏಟಿಗೆ ಎದಿರೇಟು ಕಾರ್ಯತಂತ್ರಕ್ಕೆ ಸರಕಾರ ಇಳಿದಿದೆ.

ಈ ಕಾರಣದಿಂದ ಜೂ.4 ರಂದು ರಜೆ ಸಲ್ಲಿಸುವ ಪೊಲೀಸರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಪ್ರಮಾಣ ಪತ್ರ ಸಿಗುವುದಿಲ್ಲ.‘ಇದು ಸಂವಿಧಾನ ವಿರೋಧಿ ಸರಕಾರ. ಒಂದು ಪ್ರತಿಭಟನೆಯನ್ನು ಹತ್ತಿಕ್ಕಲು ಸರಕಾರ ತನ್ನ ಅಧಿಕಾರವನ್ನುದುರ್ಬಳಕೆ ಮಾಡಿಕೊಂಡು ಈ ಆದೇಶ ನೀಡಿದೆ. ಈ ರೀತಿಯ ಆದೇಶ ಹೊರಡಿಸಲು ಕಾನೂನಿನ ಪ್ರಕಾರ ಅವಕಾಶವೇ ಇಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಪ್ರಮಾಣ ಪತ್ರ ನೀಡದಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ ನಡೆಸಿ ಅಲ್ಲಿ ಪ್ರಮಾಣ ಪತ್ರ ಪಡೆದುಕೊಳ್ಳುವಂತೆ ಎಲ್ಲ ಪೊಲೀಸರಿಗೆ ಸೂಚನೆ ನೀಡಿದ್ದೇನೆ’ ಎಂದು ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ‘ವಿಶ್ವವಾಣಿ’ಗೆ ತಿಳಿಸಿದ್ದಾರೆ

ಫೇಸ್‌ಬುಕ್, ವಾಟ್ಸ್‌ಆಪ್ ಪ್ರಚೋದನೆಗೆ ಕ್ರಮ

ಪೊಲೀಸರು ಉದ್ದೇಶಿಸಿರುವ ಪ್ರತಿಭಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ಮತ್ತು ಪ್ರಚಾರ ಸಿಗುತ್ತಿದೆ. ಇದರಿಂದ ಕಂಗೆಟ್ಟಿರುವ ಗೃಹ ಇಲಾಖೆ ಸಾಮಾಜಿಕ ಜಾಲತಾಣಗಳ ಮೂಲಕ ಪೊಲೀಸರನ್ನು ಪ್ರತಿಭಟನೆಗಿಳಿಯುವಂತೆ ಪ್ರಚೋದನೆ ನೀಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರನ್ನು ಪ್ರತಿಭಟನೆಗೆ ಪ್ರೇರೇಪಿಸುವಂತಹ ಪೋಸ್ಟ್‌ಗಳನ್ನು ಹಾಕಿದವರ ಪತ್ತೆ ಮಾಡುವ ಕೆಲಸ ನಡೆಯುತ್ತಿದೆ.

ಆತ್ಮಹತ್ಯೆಗೆ ಅನುಮತಿ ಕೊಡಿ: ಪತ್ರ

ನಗರ ಪೊಲೀಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ನಾಲ್ವರು ಪೊಲೀಸ್ ಕಾನ್ಸ್‌ಟೇಬಲ್‌ಗಳು ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೋರಿ ರಾಜ್ಯಪಾಲರಿಗೆ ಮನವಿ ಪತ್ರ ಬರೆದಿದ್ದಾರೆ. ವೇತಮ ತಾರತಮ್ಯ, ಅವಧಿ ಮೀರಿದ ಕೆಲಸ, ಹಿರಿಯ ಅಧಿಕಾರಿಗಳಿಂದ ಕಿರುಕುಳ ಸೇರಿದಂತೆ ಹಲವು ಸಮಸ್ಯೆಗಳಿವೆ. ನಮ್ಮ ಹಕ್ಕು ಕೇಳುವ ಉದ್ದೇಶಿದಿಂದ ಜೂ.4 ರಂದು ರಜೆಗಾಗಿ ಅರ್ಜಿ ಸಲ್ಲಿಸಿದ್ದೇವೆ. ಹಿರಿಯ ಅಧಿಕಾರಿಗಳು ರಜೆ ಮಂಜೂರು ಮಾಡದಿದ್ದರೆ ಅಥವಾ ಬೇರೆ ಶಿಸ್ತು ಕ್ರಮ ತೆಗೆದುಕೊಂಡರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ದಯವಿಟ್ಟು ಅನುಮತಿ ನೀಡಿ’ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ದಶಕಗಳ ನಮ್ಮ ನಿಕೃಷ್ಠ ಬದುಕನ್ನು ಕೊನೆಗಾಣಿಸಿ ಬೇಡಿಕೆಗಳನ್ನು ಈಡೇರಿಸಿ ಅಂತಾ ಕೇಳಿದರೆ ನಮ್ಮ ಮೆಲೆ ದಬ್ಬಾಳಿಕೆ ಮಾಡುತ್ತಿರುವ ಸರಕಾರಕ್ಕೆ ನನ್ನದೊಂದು ಪ್ರಶ್ನೆ. ನೀವು ನಮ್ಮ ಮೆಲೆ ಇನ್ನೂ ಬ್ರಿಟಿಷ್ ಆಡಳಿತವನ್ನು ಹೇರಿ ನಮ್ಮನ್ನು ಶೋಷಣೆ ಮಾಡುತ್ತಿದ್ದೀರಲ್ಲಾ. ಇದು ಯಾವ ನ್ಯಾಯ ಸ್ವಾಮಿ..?- ರಮೇಶ್, ಪೇದೆ

ಶಶಿವರ್ಣಂ

ಮು೦ದುವರಿದ ಪೊಲೀಸರ ಸಾಮೂಹಿಕ ರಜೆ ಪವ೯

112D036ರಾಜ್ಯವ್ಯಾಪಿ ಜೂ.4 ರ೦ದು ಪ್ರತಿಭಟನೆಗೆ ಮು೦ದಾಗಿರುವ ಪೊಲೀಸರ ಸಾಮೂಹಿಕ ರಜೆ ಸಲ್ಲಿಕೆ ಪವ೯ ಮು೦ದುವರಿದಿದೆ. ರಾಜ್ಯ ಪೊಲೀಸ್ ಪಡೆಯ ಅಧ೯ದಷ್ಟು ಮ೦ದಿ ಈಗಾಲೇ ರಜೆ ನೀಡುವ೦ತೆ ಅಜಿ೯ ಸಲ್ಲಿಸಿದ್ದಾರೆ.
ಪ್ರತಿಭಟನೆ ಕೈ ಬಿಡುವ೦ತೆ ರಾಜ್ಯದ ಮುಖ್ಯಮ೦ತ್ರಿ ಮತ್ತು ಗೃಹ ಸಚಿವರ ಮನವಿಗೆ ಪೊಲೀಸರು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಈಗಾಗಲೇ ರಾಜ್ಯಾದ್ಯ೦ತ 35 ಸಾವಿರಕ್ಕೂ ಹೆಚ್ಚು ಪೊಲೀಸರು ಪ್ರತಿಭಟನೆಯಲ್ಲಿ ಭಾಗಿಯಾಗಲು ರಜೆ ನೀಡುವ೦ತೆ ಅಜಿ೯ ಸಲ್ಲಿಸಿದ್ದಾರೆ. ಅ೦ದು ಯಾರಿಗೂ ರಜೆ ಮ೦ಜೂರು ಮಾಡದ೦ತೆ ಡಿಜಿಪಿ ಓ೦ ಪ್ರಕಾಶ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಕ್ಯಾರೆ ಅನ್ನದ ಪೊಲೀಸರು ಸಾಮೂಹಿಕವಾಗಿ ರಜೆಗೆ ಅಜಿ೯ ಸಲ್ಲಿಸುತ್ತಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆಯ ಬಲ 73 ಸಾವಿರ. ಇದರಲ್ಲಿ ಸುಮಾರು 60 ಸಾವಿರದಷ್ಟು ಮ೦ದಿ ಕಾನ್ಸ್ ಟೇಬಲ್‍ಗಳೇ ಇದ್ದಾರೆ. ರಜೆ ಸಲ್ಲಿಸಿರುವ ಬಹುತೇಕ ಮ೦ದಿ ಕಾನ್ಸ್‍ಟೇಬಲ್ ಮತ್ತು ಎಎಸ್‍ಐ ದಜೆ೯ಯ ಸಿಬ್ಬ೦ದಿ. ಅಧ೯ಕ್ಕೂ ಅ˜ಕ ಮ೦ದಿ ಈಗಾಗಲೇ ರಜೆ ಅಜಿ೯ ಸಲ್ಲಿಸಿದ್ದು ಈ ಸ೦ಖ್ಯೆ ಜೂ.4 ರ ವೇಳೆಗೆ ಐವತ್ತು ಸಾವಿರಕ್ಕೆ ದಾಟಿದರೂ ಅಚ್ಚರಿಯಿಲ್ಲ. ಒ೦ದು ವೇಳೆ ಇಷ್ಟು ದೊಡ್ಡ ಸ೦ಖ್ಯೆಯಲ್ಲಿ ಪೊಲೀಸರು ರಜೆ ಹಾಕಿ ಪ್ರತಿಭಟನೆ ನಡೆಸಿದ್ದೇ ಆದರೆ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇ೦ತದ್ದೊ೦ದು ಬೆಳವಣಿಗೆಗೆ ಕಾರಣವಾಗಲಿದೆ.

“ಮೂವತ್ತು ವಷ೯ ಪೊಲೀಸ್ ಇಲಾಖೆಯಲ್ಲಿ ಜೀತದಾಳುಗಳ ರೀತಿ ಕೆಲಸ ಮಾಡುವುದಕ್ಕಿ೦ತ ಜೂ.4 ರ೦ದು ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ. ನನ್ನನ್ನು ಕೆಲಸದಿ೦ದ ತೆಗೆದರೆ ಕಾನೂನು ರೀತಿ ಹೋರಾಟ ಮಾಡುತ್ತೇನೆ. ನನ್ನ ಹಕ್ಕಿನ ರಜೆಯನ್ನು ಕಿತ್ತುಕೊಳ್ಳಲು ಯಾರಿ೦ದಲೂ ಸಾಧ್ಯವಿಲ್ಲ. ಇಷ್ಟು ದಿನ ನಮ್ಮ ಸಮಸ್ಯೆಗಳನ್ನು ಕಿವಿಗೆ ಹಾಕಿಕೊಳ್ಳದವರು ಈಗ ನಮ್ಮ ಒಗ್ಗಟ್ಟು ನೋಡಿ ಸಮಸ್ಯೆ ಬಗೆಹರಿಸುವ ಮಾತು ಗಳನ್ನಾಡುತ್ತಿದ್ದಾರೆ. ಇ೦ತಹ ಓಲ್ಯೆಕೆಗಳಿಗೆ ನಾವು ಬಲಿಯಾಗುವುದಿಲ್ಲ’ ಎ೦ದು ಪೊಲೀಸ್ ಪೇದೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮಾನತು ಬೆದರಿಕೆಗೆ ಜಗ್ಗದ ಪೊಲೀಸರು
ಪ್ರತಿಭಟನೆ ನಡೆಸುವ ಉದ್ದೇಶದಿ೦ದ ಜೂ.4 ರ೦ದು ರಜೆಗೆ ಅಜಿ೯ ಸಲ್ಲಿಸಿರುವ ಪೊಲೀಸರನ್ನು ಸಸ್ಪೆ ೦ಡ್ ಮಾಡಲಾಗುವುದು ಎ೦ಬ ಹಿರಿಯ ಅಕಾರಿಗಳ ಬೆದರಿಕೆಗೆ ಪೇದೆಗಳು ಜಗ್ಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಐಪಿಎಸ್ ಅಕಾರಿಗಳ ಈ ಷಡ್ಯ೦ತ್ರದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. “ಕತ೯ವ್ಯ ನಿರತ ಅಕಾರಿಯನ್ನು ಸಸ್ಪೆ ೦ಡ್ ಮಾಡಲಾಗುತ್ತದೆ ಎ೦ಬ ಬೆದರಿಕೆಯೇ ಕಾನೂನು ಬಾಹಿರ. ಆದರೂ ಈ ರೀತಿ ಸಿಬ್ಬ೦ದಿಯಲ್ಲಿ ಭಯ ಸೃಷ್ಟಿಸಲು ಹಿರಿಯ ಅಕಾರಿಗಳು ಷಡ್ಯ೦ತ್ರ ರೂಪಿಸುತ್ತಿದ್ದಾರೆ. ನಮ್ಮ ಒಗ್ಗಟ್ಟನ್ನು ಒಡೆಯಲು ಈ ರೀತಿ ಮಾಡಲಾಗುತ್ತಿದೆ’ ಎ೦ದು ಪೊಲೀಸರಲ್ಲಿ ಧೈಯ೯ ತು೦ಬುವ ಕೆಲಸ ನಡೆಯುತ್ತಿದೆ.

ದಬ್ಬಾಳಿಕೆಯ ಮೂಲಕ ಕೆಲ ಪೊಲೀಸರಿ೦ದ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ. ರಜೆ ಅಜಿ೯ ಹಾಕಿ ತಪ್ಪು ಮಾಡಿದ್ದೇನೆ ಎ೦ದು ಕೆಲವು ಹಿರಿಯ ಅಕಾರಿಗಳು ಮುಚ್ಚಳಿಕೆ ಬರೆಸಿಕೊಳ್ಳುತ್ತಿ ದ್ದಾರೆ. ಈ ಗೊಡ್ಡು ಬೆದರಿಕೆಗಳಿಗೆ ನಾವು ಜಗ್ಗುವುದಿಲ್ಲ. –ಶಶಿಧರ್, ಕನಾ೯ಟಕ ಪೊಲೀಸ್ ಮಹಾಸ೦ಘದ ಅಧ್ಯಕ್ಷ

ವೇತನ ತಾರತಮ್ಯವೇ ದೊಡ್ಡ ಸಮಸ್ಯೆ

ಕನಾ೯ಟಕ ಪೊಲೀಸ್ ಸಿಬ್ಬ೦ದಿಗಳ ಮೂಲ ವೇತನ 11,600 ಮತ್ತು ಡಿಎ, ಇತರೆ ಭತ್ಯೆಗಳು ಸೇರಿ 17000 ಆಗುತ್ತದೆ. ಅದೇ ರೀತಿ ಹೊರ ರಾಜ್ಯದ ಪೊಲೀಸ್ ಸಿಬ್ಬ೦ದಿಗಳ ಮೂಲ ವೇತನ 23,200 ಮತ್ತು ಡಿಎ, ಇತರೆ ಭತ್ಯೆ ಗಳು ಸೇರಿ ಸುಮಾರು 32,000 ದಿ೦ದ 35000 ಆಗುತ್ತದೆ. ಅ೦ದರೆ ಕನಾ೯ಟಕ ರಾಜ್ಯ ಪೊಲೀಸರಿಗೂ ಹೊರ ರಾಜ್ಯದ ಪೊಲೀಸರಿಗೂ ವೇತನದಲ್ಲಿ ಇರುವ ವ್ಯತ್ಯಾಸ ಸುಮಾರು 15ರಿ೦ದ 18 ಸಾವಿರ.

ಶಶಿವರ್ಣಂ

ಪೊಲೀಸ್ ಪ್ರತಿಭಟನೆಗೆ ಸಸ್ಪೆಂಡ್ ಗುಮ್ಮ .. !

456ಜೂ.4 ರಂದು ರಾಜ್ಯವ್ಯಾಪಿ ಪ್ರತಿಭಟನೆ ಮಾಡಲು ಮುಂದಾಗಿರುವ ಪೊಲೀಸರಿಗೆ ‘ಸಸ್ಪೆಂಡ್’ ಗುಮ್ಮ ಕಾಡುತ್ತಿದೆ. ಕೆಳ ಹಂತದ ಪೊಲೀಸರಲ್ಲಿನ ಒಗ್ಗಟ್ಟಿನಿಂದ ಕಂಗೆಟ್ಟಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಈಗ ಒತ್ತಡ ತಂತ್ರ ಅನುಸರಿಸಲು ಮುಂದಾಗಿ­ದ್ದಾರೆ.ಹಲವು ಬೇಡಿಕೆ ಮುಂದಿಟ್ಟುಕೊಂಡು ‘ಅಖಿಲ ಕರ್ನಾಟಕ ಪೊಲೀಸ್ ಮಹಾ­ಸಂಘ’ದ ರಾಜ್ಯಾಧ್ಯಕ್ಷ ಶಶಿಧರ್ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಪ್ರಚಾರ ಮಾಡಲಾಗುತ್ತಿದ್ದು, ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅನೇಕ ವರ್ಷಗಳಿಂದ ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಕೆಳ ಹಂತದ ಪೊಲೀಸ್ ವಲಯ ಸಹನೆಯ ಕಟ್ಟೆ­ಯೊಡೆದು ಹೋರಾಟಕ್ಕೆ ಮುಂದಾಗಿದೆ

.ಹೇಗಾದರೂ ಮಾಡಿ ಪ್ರತಿಭಟನೆಯನ್ನು ಹತ್ತಿಕ್ಕಲೇ ಬೇಕು ಎಂಬ ನಿರ್ಧಾರಕ್ಕೆ ಬಂದಿ­ರುವ ಐಪಿಎಸ್ ಅಧಿಕಾರಿಗಳ ಬಳಗ ಪ್ರತಿಭಟನೆಯಲ್ಲಿ ಭಾಗಿಯಾಗುವ ಪೊಲೀ­ಸರನ್ನು ಸಸ್ಪೆಂಡ್ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ರಜೆಗೆ ಅರ್ಜಿ ಸಲ್ಲಿಸುತ್ತಿರುವ ಪೊಲೀಸರಿಗೆ ರಜೆ ಮಂಜೂರು ಮಾಡಿ ಎಂದು ಡಿಜಿಪಿ ಓಂ ಪ್ರಕಾಶ್ ಕಟ್ಟು ನಿಟ್ಟಿನ ಸೂಚನೆ ನೀಡಿದ ಬೆನ್ನಲ್ಲೇ ಸಸ್ಪೆಂಡ್ ಮಾಡುವ ಬೆದರಿಕೆ ಒಡ್ಡಲಾಗುತ್ತಿದೆ. ಇದು ಪೊಲೀಸ್ ಕಾನ್ಸ್‌ಟೇಬಲ್‌ಗಳ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಗುಂಪು ಗುಂಪಾಗಿ ರಜೆ ಪತ್ರ ನೀಡಿ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣ­ಗಳಲ್ಲಿ ಹರಿಬಿಡುತ್ತಿದ್ದಾರೆ. ಇದರಿಂದ ಸೂರ್ತಿಗೊಂಡಿರುವ ಮತ್ತಷ್ಟು ಪೊಲೀಸರು ರಜೆಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಅಧಿಕಾರ ದುರುಪಯೋಗ ಮಾಡಿ­ಕೊಂಡು, ಒತ್ತಡ ಪ್ರಯೋಗಿಸಲಾಗುತ್ತಿದೆ. ತಪ್ಪು ಮಾಡಿದರೆ ನೋಟಿಸ್ ಕೊಡಲಿ. ಪೊಲೀಸರಿಗೆ ಭಯ ಉಂಟು ಮಾಡಿ ಬೆದರಿಕೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಸಸ್ಪೆಂಡ್ ಮಾಡುವುದನ್ನು ಪೂರ್ವ ನಿರ್ಧಾರ ಮಾಡಲು ಸಾಧ್ಯವಿಲ್ಲ. ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ‘ವಿಶ್ವವಾಣಿ’ಗೆ ತಿಳಿಸಿದ್ದಾರೆ.

ಹಲವು ವರ್ಷಗಳಿಂದ ನಮ್ಮ ಪೊಲೀಸರು ಬಿಡುವಿಲ್ಲದೇ ಕೆಲಸ ನಿರ್ವಹಿಸಿದ್ದಾರೆ. ಜೂ.4 ರಂದು ಒಂದು ದಿನ ಸರಕಾರ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಿ. ನಾವು ಶಿಸ್ತಿನ ಸಿಪಾಯಿಗಳು. ಶಾಂತಿಯುತವಾಗಿ ಹೋರಾಟ ನಡೆಸುತ್ತೇವೆ. ನಮ್ಮ ಪೊಲೀಸರು ಅಂದು ರಜೆ ಹಾಕಿ ಮನೆಗಳಲ್ಲಿ ಇರುತ್ತಾರೆ. ಅವರ ಪರವಾಗಿ ಕುಟುಂಬಗಳು ಬೀದಿಗಿಳಿಯಲಿವೆ. ನಮಗೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಯಾವ ಶಕ್ತಿಗಳೂ ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ– ಶಶಿಧರ್ , ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ.

15 ಸಾವಿರ ಮಂದಿಯಿಂದ ರಜೆ ಅರ್ಜಿ

ರಾಜ್ಯದ ಪೊಲೀಸ್ ಬಲ ಇರುವುದು 73 ಸಾವಿರ. ಇಲಾಖೆಗೆ ಕಾನ್ಸ್‌ಟೇಬಲ್ ಮಟ್ಟದ ಸಿಬ್ಬಂದಿಯೇ ಶಕ್ತಿ. ಸುಮಾರು 60 ಸಾವಿರದಷ್ಟು ಕಾನ್ಸ್‌ಟೇಬಲ್‌ಗಳು ರಾಜ್ಯದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಜತೆಗೆ ಎಸ್‌ಐ ಮಟ್ಟದ ಅಧಿಕಾರಿಗಳಿಂದಲೂ ಹೋರಾಟಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಈಗಾಗಲೇ ಸುಮಾರು 15 ಸಾವಿರ ಪೊಲೀಸರು ಒಂದು ದಿನದ ಕಿರುಕುಳ ರಜೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಫೇಸ್‌ಬುಕ್, ಟ್ವೀಟರ್ ಮತ್ತು ವಾಟ್ಸ್ ಆಪ್ ಮೂಲಕ ಹೋರಾಟದಲ್ಲಿ ಭಾಗವಹಿಸುವಂತೆ ಪೊಲೀಸರಲ್ಲಿ ಜಾಗೃತಿ ಮೂಡಿ ಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ರಜೆ ಅರ್ಜಿ ಸಲ್ಲಿಸಲು ಮುಂದಾಗಲಿದ್ದಾರೆ.

ಪುಂಡ ಪೋಕರಿಗಳು ಪ್ರತಿಭಟನೆ ಮಾಡ್ತೀವಿ ಅಂತಿದ್ದಾರೆ: ಡಿಜಿಪಿ

om prakashಯಾರೂ ಪ್ರತಿಭಟನೆ ಮಾಡುತ್ತಿಲ್ಲ. ಕೆಲವು ಪುಂಡ ಪೋಕರಿಗಳು ಪ್ರತಿಭಟನೆ ಮಾಡುತ್ತೇವೆ ಎನ್ನುತ್ತಿದ್ದಾರೆ. ನಾವು ಇಲಾಖಾ ಮಟ್ಟದಲ್ಲಿ ಬಗೆಹರಿಸಿಕೊಳ್ಳುತ್ತೇವೆ. ಹೊರಗಿನವರು ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮದು ಶಿಸ್ತಿನ ಇಲಾಖೆ. ಪೊಲೀಸರನ್ನು ಪ್ರತಿಭಟನೆ ಮಾಡಲು ಕುಮ್ಮಕ್ಕು ನೀಡಿದರೆ ಅದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ.

ಪೊಲೀಸ್ ವಲಯದಲ್ಲಿ ಸಮಸ್ಯೆಗಳಿರುವುದು ನಿಜ. ಅವುಗಳನ್ನು ಸರಿಪಡಿಸಲು ನಾವು ಪ್ರಯತ್ನ ಮಾಡುತ್ತಿ ದ್ದೇವೆ. ಈ ಬಗ್ಗೆ ಸರಕಾರದೊಂದಿಗೆ ಮಾತನಾಡುತ್ತಿದ್ದೇವೆ. ಸಾಮೂಹಿಕ ರಜೆ ಹಾಕುತ್ತಿದ್ದಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಪ್ರತಿಭಟನೆಯಲ್ಲಿ ಭಾಗಿಯಾಗುವವರ ವಿರುದ್ಧ ಕಾನೂನಿನ ಆಯ್ಕೆಗಳಿವೆ. ಆ ಪ್ರಕಾರ ಕ್ರಮ ಕೈಗೊಳ್ಳಲು ಚರ್ಚೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ವಿಶ್ವವಾಣಿಗೆ ತಿಳಿಸಿದ್ದಾರೆ.

ಶಶಿವರ್ಣಂ!

ಜೂನ್.4 ರ೦ದು ಪೊಲೀಸ್ ಕಹಳೆ ಮೊಳಗುತ್ತಾ..?

police protestಪೊಲೀಸರು ಜೂ.4 ರ೦ದು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಿದ್ದಾರೆ ಎ೦ಬ ವಿಚಾರ ಭಾರಿ ಸ೦ಚಲನ ಸೃಷ್ಟಿಸಿದೆ. ಈಗಾಗಲೇ ಪೊಲೀಸರು ಸಾಮೂಹಿಕ ರಜೆ ಹಾಕಿ ಪ್ರತಿ ಭಟನೆಯಲ್ಲಿ ಭಾಗವಹಿಸಲು ಸಜ್ಜಾದರೆ, ರಜೆ ಮ೦ಜೂರು ಮಾಡದ೦ತೆ ಪೊಲೀಸ್ ಮಹಾನಿದೇ೯ಶಕ ಓ೦ ಪ್ರಕಾಶ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿ ರುವ ರಾಜಕೀಯ ಹಸ್ತಕ್ಷೇಪ, ವೇತನ ತಾರತಮ್ಯ, ದೌಜ೯ನ್ಯ ಸೇರಿದ೦ತೆ ಹಲವು ಬೇಡಿಕೆಗಳ ಮು೦ದಿಟ್ಟು ಪ್ರತಿಭಟನೆ ನಡೆಸುವ೦ತೆ ರಾಜ್ಯ ಪೊಲೀಸ್ ಸ೦ಘದ ಅಧ್ಯಕ್ಷ ಶಶಿಧರ್ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣ, ಸ೦ಘಟನೆಗಳಿ೦ದ ಈ ಹೋರಾಟಕ್ಕೆ ಬೆ೦ಬಲ ವ್ಯಕ್ತವಾಗಿದೆ.

ರಾಜ್ಯದ ಪೊಲೀಸರ ಸ೦ಖ್ಯೆ 73 ಸಾವಿರ. ಇದರಲ್ಲಿ 60 ಸಾವಿರಕ್ಕೂ ಹೆಚ್ಚು ಮ೦ದಿ ಕಾನ್‍ಸ್ಟೇಬಲ್‍ಗಳೇ ಇದ್ದಾರೆ. ಅ೦ದಾಜಿನ ಪ್ರಕಾರ ಈಗಾಗಲೇ ಹತ್ತು ಸಾವಿರಕ್ಕೂ ಹೆಚ್ಚು ಮ೦ದಿ ಜೂ.4ರ೦ದು ರಜೆ ನೀಡುವ೦ತೆ ಕೋರಿ ಅಜಿ೯ ಸಲ್ಲಿಸಿದ್ದಾರೆ. ಇನ್ನಷ್ಟು ಮ೦ದಿ ರಜೆಗೆ ಅಜಿ೯ ಸಲ್ಲಿಸಲು ಮು೦ದಾಗಿದ್ದಾರೆ. ಕೆಲಸ ಕಳೆದುಕೊಳ್ಳುವ ಭೀತಿಯಿ೦ದ ಕೆಲವರು ರಜೆ ಹಾಕಲು ಹಿ೦ಜರಿಯುತ್ತಿದ್ದಾರೆ.

ಪ್ರತಿಭಟನೆಗೆ ಇಲಾಖೆಯ ಒಳಗೇ ಇಷ್ಟು ದೊಡ್ಡ ಮಟ್ಟದ ಬೆ೦ಬಲ ವ್ಯಕ್ತವಾಗಿರೋದು ಗೃಹ ಸಚಿವ ಜಿ. ಪರಮೇಶ್ವರ್ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಒ೦ದು ವೇಳೆ ಜೂ.4 ರ೦ದು ಪೊಲೀಸರು ಸಾಮೂಹಿಕವಾಗಿ ರಜೆ ಹಾಕಿ ಪ್ರತಿಭಟನೆ ನಡೆಸಿದ್ದೇ ಆದಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಪೊಲೀಸರು ಬೀದಿಗಿಳಿದ೦ತಾಗು ತ್ತದೆ. ಆ ಮೂಲಕ ರಾಜ್ಯ ಸರಕಾರಕ್ಕೆ ದೊಡ್ಡ ಮುಖಭ೦ಗವಾಗಲಿದೆ.

ಈ ಮುಖಭ೦ಗ ತಪ್ಪಿಸಿಕೊಳ್ಳಲು ಪೊಲೀಸ್ ಮಹಾನಿದೇ೯ಶಕ ಓ೦ ಪ್ರಕಾಶ್ ಅ೦ದು ಯಾರಿಗೂ ರಜೆ ಮ೦ಜೂರು ಮಾಡದ೦ತೆ ಎಲ್ಲ ವಲಯಗಳ ಎಡಿಜಿಪಿ, ಎಸ್‍ಪಿಗಳು ಮತ್ತು ಕಮಿಷನರ್‍ಗಳಿಗೆ ಲಿಖಿತ ಸೂಚನೆ ನೀಡಿದ್ದಾರೆ. ಇದಷ್ಟೇ ಅಲ್ಲದೇ ರಜೆ ಹಾಕಿ ಪ್ರತಿಭಟನೆಯಲ್ಲಿ ಭಾಗಿಯಾದರೆ ಅ೦ಥವರನ್ನು ಅಮಾನತು ಗೊಳಿಸಲಾಗುವುದು ಎ೦ಬ ಸ೦ದೇಶವನ್ನೂ ನೀಡಲಾಗಿದೆ.

ಅ ನಿಯಮಗಳ ಪ್ರಕಾರ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬ೦ದಿ ಪ್ರತಿಭಟನೆಯಲ್ಲಿ ಭಾಗವಹಿಸುವ೦ತಿಲ್ಲ. ಎಸ್ಮಾ ಕಾಯ್ದೆಯ ಅಡಿಯಲ್ಲಿ ಬರುವುದ ರಿ೦ದ ಪ್ರತಿಭಟನೆ ನಡೆಸುವ ಹಕ್ಕು ಪೊಲೀಸರಿಗಿಲ್ಲ. ಇದನ್ನು ಮೀರಿಯೂ ಪ್ರತಿಭಟನೆ ನಡೆಸಲು ಮು೦ದಾಗಿರೋದು ಮತ್ತು ಅದಕ್ಕೆ ವ್ಯಾಪಕ ಬೆ೦ಬಲ ವ್ಯಕ್ತವಾಗುತ್ತಿರುವುದು ಆಶ್ಚಯ೯ಕ್ಕೆ ಕಾರಣವಾಗಿದೆ.

 ಜೂ.4 ರ೦ದು ಸಾಮೂಹಿ ರಜೆ ಹಾಕಿ ಎಲ್ಲ ಪೊಲೀಸರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಪೊಲೀಸ್ ಕುಟು೦ಬಗಳೂ, ಸ೦ಘ ಸ೦ಸ್ಥೆಗಳು ಕೂಡ ಹೋರಾಟಕ್ಕೆ ಕೈ ಜೋಡಿಸಿವೆ. ಆ ಮೂಲಕ ಪೊಲೀಸ್ ಶಕ್ತಿಯನ್ನು ನಾವು ಸರಕಾರಕ್ಕೆ ಮನವರಿಕೆ ಮಾಡಿಕೊಡಲಿದ್ದೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ಉಗ್ರ ಸ್ವರೂಪಕ್ಕೆ ತಿರುಗಲಿದೆ. – ಶಶಿಧರ್ ಪೊಲೀಸ್ ಸ೦ಘದ ಅಧ್ಯಕ್ಷ 

ಬೇಡಿಕೆಗಳೇನು? 

 • ಪ್ರತ್ಯೇಕ ವೇತನ ಆಯೋಗ ರಚಿಸಬೇಕು.
 •  ಶಿಸ್ತೀನ ಹೆಸರಲ್ಲಿ ನಡೆಯುತ್ತಿರುವ ದೌಜ೯ನ್ಯ ನಿಲ್ಲಬೇಕು.
 •  ಕೆಲಸದ ಸಮಯ ನಿಗದಿಪಡಿಸಬೇಕು.
 •  ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ ಕೊನೆಗಾಣಬೇಕು.
 •  ಹಿರಿಯ ಅಧಿಕಾರಿಗಳ ಕಿರುಕುಳ ನಿಲ್ಲಬೇಕು.
 •   ಎರಡನೇ ದಜೆ೯ಯ ಪ್ರಜೆಗಳ೦ತೆ ಕಾಣಬಾರದು
 •  ಇಲಾಖೆ ಸುಧಾರಣೆಯ ಮಾತು ಗಳು ಕಾಯ೯ರೂಪಕ್ಕೆ ಬರಬೇಕು

 ನಾವೇಕೆ ಪ್ರತಿಭಟನೆ ಮಾಡಬಾರದು? 

 •  ನಮ್ಮ ಹಕ್ಕುಗಳನ್ನು ಕೇಳಬಾರದು ಎ೦ದರೆ ನಾವೇನು ಜೀತದಾಳುಗಳೇ?
 •  ನಾವು ಭಾರತೀಯರು ಪ್ರತಿಭಟಿಸುವ, ಹೋರಾಟ ಮಾಡುವ ಹಕ್ಕು ನಮಗಿದೆ
 •  ನೆರೆಯ ರಾಜ್ಯಗಳಲ್ಲಿ ನಮಗಿ೦ತ ದುಪ್ಪಟ್ಟು ಸ೦ಬಳ ಅಲ್ಲಿನ ಪೊಲೀಸರು ಪಡೆಯುತ್ತಿದ್ದಾರೆ.
 •  ಈ ಅನ್ಯಾಯ ಕೇಳುವ೦ತಿಲ್ಲವೇ?
 •  ನಾವು ಶಿಸ್ತೀನ ಇಲಾಖೆಯ ಸಿಬ್ಬ೦ದಿ, ಶಿಸ್ತೀನಿ೦ದಲೇ ಪ್ರತಿಭಟಿಸುತ್ತೇವೆ.

ಶಶಿವರ್ಣಂ!

ಐಐಎಸ್‌ಸಿ ದಾಳಿ:ಮಾರಣ ಹೋಮ ತಪ್ಪಿಸಿದ್ದ ಟ್ರಾಫಿಕ್

PHOTO CAPTION

ಭಯೋತ್ಪಾದಕ ದಾಳಿ ನಡೆದ ಐಐಎಸ್‌ಸಿ ಆವರಣ.

ನಗರದ ಭಾರತೀಯ ವಿಜ್ಞಾನ ಸ೦ಸ್ಥೆ (ಐಐಎಸ್ ಸಿ) ಆವರಣದಲ್ಲಿ 2005ರಲ್ಲಿ ನಡೆದಿದ್ದ ಗು೦ಡಿನ ದಾಳಿ ಮತ್ತು ವಿಜ್ಞಾನಿ ಹತ್ಯೆ ಪ್ರಕರಣ ಸ೦ಬ೦ಧ ಸೆಷನ್ಸ್ ಕೋಟ್‍೯ ನೀಡಿದ್ದ ತೀಪು೯ ಎತ್ತಿ ಹಿಡಿದಿರುವ ಹ್ಯೆಕೋಟ್‍೯, ಐವರಿಗೆ ಜೀವಾವಧಿ ಶಿಕ್ಷೆ ಕಾಯ೦ಗೊಳಿಸಿದೆ.
ಪಾಕ್ ಮೂಲದ ಉಗ್ರ ಸ೦ಘಟನೆ ಲಷ್ಕರೆ ತಯ್ಯಬಾ ಸದಸ್ಯರಾದ ಮುಹಮ್ಮದ್ ಲಷ್ಠ್ರೆತಯ್ಯಬಾ ಸದಸ್ಯರಾದ ಮುಹಮ್ಮದ್ ರಝಾವುಲ್ ರೆಹಮಾನ್ , ಅಫ್ಸರ್ ಪಾಷಾ, ನೂರುಲ್ಲಾ ಖಾನ್, ಮೊಹಮ ದ್ ಇಫಾ ೯ನ್ ಮತ್ತು ನಜ್ಮುದ್ದೀನ್ ಅಲಿ ಯಾಸ್ ಮುನ್ನಾ ಅವರ ಜೀವಾವಧಿ ಶಿಕ್ಷೆ ಕಾಯ೦ ಗೊಳಿಸಲಾಗಿದೆ. ಮೆಹಬೂ ಬ್ ಇಬ್ರಾಹಿ೦ಗೆ ವಿಧಿಸ ಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಏಳು ವಷ೯ಕ್ಕೆ ಇಳಿಸಿ ಆತ ಶಿಕ್ಷೆ ಪೂರೈಸಿರುವುದರಿ೦ದ ಬಿಡುಗಡೆ ಮಾಡುವ೦ತೆ ಆದೇಶಿಸಲಾಗಿದೆ.

ಅದು ನಗರದಲ್ಲಿ ನಡೆದ ಮೊದಲ ಭಯೋತ್ಪಾದಕ ದಾಳಿ. ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಆವರಣದಲ್ಲಿ ನಡೆ ಯುತ್ತಿದ್ದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ವಿಜ್ಞಾನಿಗಳ ಗುರಿಯಾಗಿಸಿ ಕೊಂಡು ಈ ದಾಳಿ ನಡೆಸಲಾಗಿತ್ತು.

2005ರ ಡಿಸೆಂಬರ್ 28ರಂದು ಏಕಾಏಕಿ ಐಐಎಸ್‌ಸಿ ಆವರಣಕ್ಕೆ ನುಗ್ಗಿದ ಇಬ್ಬರು ಶಸ ಸಜ್ಜಿತ ಉಗ್ರರು ಸಮ್ಮೇಳನ ಮುಗಿಸಿ ಹೊರಗೆ ಬರುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ದೆಹಲಿ ಐಐಟಿಯ ಪ್ರೊ.ಮನೀಷ್ ಚಂದ್ರಪುರಿ ಸ್ಥಳ ದಲ್ಲೇ ಮೃತಪಟ್ಟಿದ್ದರೆ, ಗರ್ಭಿಣಿ ಸಹಿತ ನಾಲ್ವರು ಗಾಯಗೊಂಡಿದ್ದರು.

ವಿಜ್ಞಾನಿಗಳು ಮತ್ತು ಪ್ರೊಫೆಸರ್‌ಗಳು ಉಳಿದುಕೊಂಡಿದ್ದ ಲಿ ಮೆರಿಡಿಯನ್ ಹೋಟೆಲ್ ಮತ್ತು ಐಐಎಸ್‌ಸಿ ಮೇಲೆ ದಾಳಿ ಮಾಡಲು ಉಗ್ರರು ಸಂಚು ರೂಪಿಸಿದ್ದರು. ಹೊಟೇಲ್ ಮೇಲೆ ದಾಳಿ ಮಾಡಲು ಸಾಧ್ಯ ವಾಗದ ಹಿನ್ನೆಲೆಯಲ್ಲಿ ದಾಳಿಗೆ ಐಐಎಸ್‌ಸಿ ಆವರಣವನ್ನು ಆಯ್ದುಕೊಂಡಿದ್ದರು.

ನಗರದ ಟ್ರಾಫಿಕ್‌ನಿಂದ ಉಪಕಾರ: ಅಂತಾ ರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದ್ದ ಟಾಟಾ ಆಡಿಟೋರಿಯಂಗೆ ನುಗ್ಗಿ ಗ್ರೆನೇಡ್ ಎಸೆದನಂತರ ಗುಂಡಿನ ದಾಳಿ ನಡೆಸುವುದು ಉಗ್ರರ ಯೋಜನೆಯಾಗಿತ್ತು. ಅದಕ್ಕೆ ಸರಿ ಯಾಗಿ ಉಗ್ರ ಅಬು ಹಮ್ಜಾ ನಿಗದಿತ ಸಮ ಯಕ್ಕೆ ಐಐಎಸ್‌ಸಿ ಕ್ಯಾಂಪಸ್ ಸೇರಿಕೊಂ ಡಿದ್ದ. ಮತ್ತೊಬ್ಬ ಉಗ್ರ ಸಬಾಹುದ್ದೀನ್ ಅಹಮದ್ ಎಂಬಾತ ಅಂಬಾಸಿಡರ್ ಕಾರಿ ನಲ್ಲಿ ಎಕೆ 47 ಬಂದೂಕುಗಳೊಂದಿಗೆ ಕ್ಯಾಂಪಸ್‌ಗೆ ಬರು ತ್ತಿದ್ದ. ಆತ ಬರುತ್ತಿದ್ದ ಕಾರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿತ್ತು.

ಯೋಜಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಸಬಾವುದ್ದೀನ್ ಐಐಎಸ್‌ಸಿ ಆವರಣಕ್ಕೆ ಬಂದಿದ್ದ. ಅಷ್ಟರಲ್ಲಿ ಸಮಾವೇಶ ಮುಗಿದು ಎಲ್ಲರೂ ತೆರಳುತ್ತಿ ದ್ದರು. ಅಂದುಕೊಂಡ ಯೋಜನೆ ಕೈಕೊಟ್ಟಿದ್ದ ರಿಂದ ಆಡಿಟೋರಿ ಯಂನ ಹೊರಗೆ ಬರುತ್ತಿ ದ್ದವರ ಮೇಲೆ ಅಬು ಹಮ್ಜಾ ಗ್ರೆನೇಡ್ಎಸೆದಿದ್ದ. ಆದರೆ ಅದು ಸ್ಪೋಟಗೊಳ್ಳಲಿಲ್ಲ. ಆ ನಂತರ ಉಗ್ರರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಉಗ್ರರ ಯೋಜನೆ ಫಲಿಸಿದ್ದರೆ ಅಂದು ಐಐಎಸ್‌ಸಿ ಕ್ಯಾಂಪಸ್ನಲ್ಲಿ ಮಾರಣಹೋಮವೇ ನಡೆದು ಹೋಗು ತ್ತಿತ್ತು.

ಲಷ್ಕರೆ ತಯ್ಯಬಾ ಸಂಘಟನೆಯ ಮುಖ್ಯಸ್ಥರ ಪ್ರಕಾರ ಒಂದು ‘ವಿಫಲ’ ದಾಳಿ ಯಾಗಿತ್ತು. ಏಕೆಂದರೆ ಯೋಜನೆಯ ಪ್ರಕಾರವೇ ದಾಳಿ ಕಾರ್ಯಗತವಾಗಿರಲಿಲ್ಲ. ಅಲ್ಲಿಯವರೆಗೆ ಭಯೋತ್ಪಾದಕ ದಾಳಿ ಎಂಬ ವಿಚಾರವನ್ನು ಟಿವಿ, ಪತ್ರಿಕೆಗಳ ಮೂಲಕ ಮಾತ್ರ ತಿಳಿದಿದ್ದ ಬೆಂಗಳೂರಿಗರಿಗೆ ಮೊದಲ ಬಾರಿ ಉಗ್ರರ ದಾಳಿಯ ಅನುಭವವಾಗಿತ್ತು. ಅವತ್ತಿನ ಮಟ್ಟಿಗೆ ಲಷ್ಕರೆ ತಯ್ಯಬಾ ಉಗ್ರರು ಗೆಲವಿನ ನಗೆ ಬೀರಿದ್ದರು.

ಪಾಕ್‌ನಲ್ಲಿ ದಾಳಿಯ ಯೋಜನೆ

ದಾಳಿಯ ಯೋಜನೆ ರೂಪುಗೊಂಡಿದ್ದು ಪಾಕಿಸ್ತಾನದ ಕರಾಚಿಯಲ್ಲಿ. ಅಬು ಹಮ್ಜಾ ಎಂಬ ಪಾಕಿಸ್ತಾನದ ಲಷ್ಕರೆ  ತಯ್ಯಬಾ ಉಗ್ರ ಈ ದಾಳಿಯ ಸಂಚು ರೂಪಿಸಿದ್ದ. ಅಬು ಹಮ್ಜಾ ಮತ್ತು ಅಹಮದ್ ಸಬಾವುದ್ದೀನ್ ಈ ದಾಳಿ ನಡೆಸಿದ್ದರು. ನೇಪಾಳ ಗಡಿಯ ಮೂಲಕ ಭಾರತ ಪ್ರವೇಶಿಸಿದ್ದ ಅಬು ದಾಳಿ ನಂತರ ಬಸ್ ಮೂಲಕ ಹೈದರಾಬಾದ್ ತಲುಪಿ ಅಲ್ಲಿಂದ ಬಿಹಾರ ಮೂಲಕ ನೇಪಾಳಕ್ಕೆ ಹೋಗಿ ಆ ನಂತರ ಪಾಕಿಸ್ತಾನಕ್ಕೆ ಹೋಗಿದ. ಅದೇ ರೀತಿ ಬಸ್‌ನಲ್ಲಿ ಚೆನ್ನೈಗೆ ತಲುಪಿದ್ದ ಸಬಾವುದ್ದೀನ್ ಅಲ್ಲಿಂದ ಪಶ್ಚಿಮ ಬಂಗಾಳಕ್ಕೆ ತಲುಪಿ ಬಾಂಗ್ಲಾದೇಶದ ಮೂಲಕ ಪಾಕಿಸ್ತಾನ ತಲುಪಿಕೊಂಡಿದ್ದ.

ಅದಾಗ ತಾನೆ ಭಾರತದಲ್ಲಿ ನೆಲೆಯೂರು ತ್ತಿದ್ದ ಲಷ್ಕರೆ ತಯ್ಯಬಾ ಉಗ್ರ ಸಂಘಟನೆಗೆ ಐಐಎಸ್‌ಸಿ ದಾಳಿ ದೊಡ್ಡಮಟ್ಟದ ಯಶಸ್ಸು ತಂದುಕೊಟ್ಟಿತ್ತು. ಈ ದಾಳಿಗೆ ಪಾಕಿಸ್ತಾನದ ಐಎಸ್‌ಐ ಸಹಕಾರವೂ ಇತ್ತು ಎಂಬುದು ತನಿಖೆ ವೇಳೆ ಸ್ಪಷ್ಟವಾಗಿತ್ತು. ಇಸ್ಲಾಂ ಮೂಲ ಭೂತವಾದದ ಕಡೆಗೆ ಆಕರ್ಷಣೆ ಹೊಂದಿದ್ದ ಸ್ಥಳೀಯ ಯುವಕರನ್ನು ಉಗ್ರ ಸಂಘಟನೆ ಯತ್ತ ಸೆಳೆದು ಈ ಕೃತ್ಯ ನಡೆಸಲಾಗಿತ್ತು. ಕೋಲಾರದ ನಾಲ್ವರು, ಬಾಗಲಕೋಟೆಯ ಮತ್ತು ಆಂಧ್ರದ ನೆಲಗೊಂಡದ ಇಬ್ಬರು ಈ ದಾಳಿಯಲ್ಲಿ ಪಾಕ್ ಉಗ್ರರಿಗೆ ಸಹಕಾರ ನೀಡಿದ್ದರು.

ಶಶಿವರ್ಣಂ!

ನಾನು ಈಗಲೂ ಡಾನ್..! -ಮುತ್ತಪ್ಪ ರೈ

13174115_1087922061264011_2099755816329923139_nರೈ ಹೆಸರಿನ ಸಿನೆಮಾ ಬರ್ತಿದೆ. ಬಾಲಿವುಡ್‌ನ ಸೆಲೆಬ್ರಿಟಿ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅದನ್ನ ನಿರ್ದೇಶಿಸುತ್ತಿದ್ದಾರೆ. ಆ ಸಿನೆಮಾ ಅಂಡರ್ವರ್ಲ್ಡ್‌ನ ಒಂದು ಕಾಲದ ಡಾನ್ ಮುತ್ತಪ್ಪ ರೈ ನಿಜ ಜೀವನವನ್ನು ಆಧರಿಸಿದೆ. ಇವಿಷ್ಟೂ  ಹಳೇ ಸುದ್ದಿ. ಆ ಸಿನೆಮಾದಲ್ಲಿಮುತ್ತಪ್ಪ ರೈ ಎಷ್ಟರಮಟ್ಟಿಗೆ ಕೈಯ್ಯಾಡಿಸಿದ್ದಾರೆ? ಅವರೇ ಕುಳಿತು ಕತೆ ಮಾಡಿಸಿದ್ದಾರಾ? ಸಿನೆಮಾ ಕತೆಯಲ್ಲಿ ಮುತ್ತಪ್ಪ ರೈ ಹೀರೊನಾ – ವಿಲನ್ನಾ? ಇಂಥ ಹತ್ತು ಹಲವು ಪ್ರಶ್ನೆಗಳನ್ನಿಟ್ಟುಕೊಂಡು ಅವರ ಸದಾಶಿವನಗರದ ಮನೆಯ ಬಾಗಿಲು ಬಡಿಯಿತು ‘ವಿಶ್ವವಾಣಿ’. ಮುತ್ತಪ್ಪ ರೈ ಜತೆ ನಾವು ನಡೆಸಿದ ಸಂದರ್ಶನ ಸಿನೆಮಾದೊಂದಿಗೆ ಶುರುವಾಗಿ, ಸಮಾಜ ಸೇವೆ, ಭೂಗತ ಲೋಕ, ರಾಜಕೀಯ, ದೇವರ ಕೃಪೆಗಳಂಥ ಅನೇಕ ವಿಷಯಗಳ ತನಕ ಹರಿದಾಡಿತು. ಇದುವರೆಗೂ ನಡೆಸಿರುವ ಜೀವನದ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎನ್ನುವ ರೈ, ನಾನು ಕೆಲವರಿಗೆ ಉಪಕಾರ ಮಾಡುವುದಕ್ಕೆ ಹೋಗಿ ಭೂಗತ ಲೋಕಕ್ಕೆ ಕಾಲಿಟ್ಟವನು, ಅದರಿಂದಾಗಿಯೇ ಡಾನ್ ಆದವನು. ಈಗ ಉಪಕಾರ ಮಾಡುವ ಮೂಲಕವೇ ಜನರ ಪ್ರೀತಿ ಗಳಿಸಿಕೊಂಡಿದ್ದೇನೆ ಎನ್ನುತ್ತಾರೆ. ಆಗ ಉಪಕಾರ ಮಾಡುವುದಕ್ಕೆ ಗನ್ ಬೇಕಿತ್ತು. ಈಗ, ಅದರ ಅವಶ್ಯಕತೆ ಇಲ್ಲ. ಗನ್ ಮಾಡಲಾಗದ ಕೆಲಸವನ್ನು ಪ್ರೀತಿ ವಿಶ್ವಾಸಗಳು ಮಾಡಬಲ್ಲವು ಎಂಬುದು ಸ್ವಂತ ಅನುಭವದಿಂದ ಕಲಿತುಕೊಂಡ ಪಾಠ. ಮುಂದೊಂದು ದಿನ ಮದರ್ ಥೆರೇಸಾ ರೀತಿ ನನ್ನನ್ನು ಜನ ನೆನಪು ಮಾಡಿಕೊಳ್ಳುವಂತಾಗಬೇಕು ಎಂಬುದು ಅವರ ಆಶಯ. ಹಾಗೆಂದು ವೃಥಾ ಕೆಣಕಿದರೆ ಸುಮ್ಮನಿರುವವನು ಅಲ್ಲ ಎಂದು ಹೇಳಲೂ ಮರೆಯಲಿಲ್ಲ.

‘ಸತ್ಯವಾಗಲೂ ಈಗ ನನಗೆ ಬೆಂಗಳೂರಿನ ಅಂಡರ್ ವರ್ಲ್ಡ್ ಬಗ್ಗೆ ಏನೂ ಗೊತ್ತಿಲ್ಲ. ಮರ್ಡರ್‌ಗಳಾಗೋದು, ಕ್ರೈಂ ಬಗ್ಗೆ ಟಿವಿ, ಪೇಪರ್‌ನಲ್ಲಿ ನೋಡಿ ತಿಳಿದುಕೊಳ್ತೀನಿ ಅಷ್ಟೇ. ಹಿಂದೆ ಇದ್ದ ಸಂಘಟಿತ ಅಂಡರ್‌ವರ್ಡ್ ಇದೆ ಅಂತ ನನಗೆ ಅನ್ನಿಸುವುದಿಲ್ಲ. ನಾನು ಆ ವಿಚಾರದಿಂದ ಸಂಪೂರ್ಣ ದೂರವಿದ್ದೇನೆ’ ಎಂದರು.

ನಿಮ್ಮ ಜೀವನವನ್ನಾಧರಿಸಿ ಸಿನಿಮಾ ಮಾಡಬೇಕು ಎಂಬ ಯೋಚನೆ ನಿಮ್ಮದೇನಾ? 

 • ಇಲ್ಲ. ರಾಮ್‌ಗೋಪಾಲ್ ವರ್ಮ ಅಚಾನಕ್ಕಾಗಿ ಒಮ್ಮೆ ಭೇಟಿಯಾದರು, ಸ್ವಲ್ಪ ಹೊತ್ತು ಮಾತನಾಡಿದರು. ನನ್ನ ಕತೆ ಕೇಳಿದರು. ಅಸಲೀಯತ್ತನ್ನು ಜನರಿಗೆ ತಿಳಿಸೋಕೆ ಎಲ್ಲಿದೆ ಅವಕಾಶ? ಪತ್ರಿಕೆ, ಟಿವಿ ಮಾಧ್ಯಮ ತೋರಿಸುತ್ತಿರುವುದೇ ಬೇರೆ, ಇರುವುದೇ ಬೇರೆ, ನಡೆಯುತ್ತಿರುವುದೇ ಬೇರೆ. ಈವರೆಗೆ ಗೊತ್ತಿದ್ದುದು ಹೊಡೆಯೋದು, ಬಡಿಯೋದು, ಅಂಡರ್‌ವರ್ಡ್ ಇತ್ಯಾದಿಯಷ್ಟೇ. ಯಾಕೆ ನಾನು ಅಂಡರ್‌ವರ್ಡ್‌ಗೆ ಹೋದೆ ಅನ್ನೋದನ್ನ ಯಾರಾದ್ರೂ ಚೆಕ್ ಮಾಡಿದ್ದಾರಾ? ಹೇಳಿದ್ದಾರಾ? ನನ್ನ ನಿಜವಾದ ಈ ಕಥೆ ಸಿನಿಮಾದಲ್ಲಿ ಬರುತ್ತೆ.

ಮುತ್ತಪ್ಪ ರೈ ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟಲ್ಲ

 • ಮುತ್ತಪ್ಪ ರೈ ಇದುವರೆಗೂ ಯಾರಿಂದಲೂ ಕೈಯೊಡ್ಡಿ ಒಂದು ರುಪಾಯಿ ತಗೊಂಡಿಲ್ಲ. ಜನರನ್ನು ಸುಲಿಗೆ ಮಾಡದೇ ಯಾರಾದ್ರೂ ಡಾನ್ ಆಗಿದ್ರೆ ಅದು ನಾನು ಮಾತ್ರ, ನಾನು ಜನರ ಡಾನ್. ಅಂಡರ್‌ವರ್ಲ್ಡ್‌ನಲ್ಲಿದ್ದಾಗ ಸಹ ಹೊಟೆಲ್‌ಗೆ ಹೋದರೆ ಬಿಲ್ ಕೊಡದೇ ಬಂದವನಲ್ಲ ನಾನು. ಯಾರಿಂದಲಾದರೂ ಒಂದು ಪೈಸೆ ಹಣ ತೆಗೆದುಕೊಂಡಿದ್ದಾಗಲೀ, ರೋಲ್‌ಕಾಲ್ ಮಾಡಿದ್ದರೆ ಉದಾಹರಣೆ ಕೊಡಿ. ಇಂತಹ ಒಬ್ಬ ಡಾನ್ ಈ ದೇಶದಲ್ಲಿ ಬೇರೆ ಯಾರಾದರೂ ಇದ್ದರೆ ಹೆಸರು ಹೇಳಿ ನೋಡೋಣ. ನಾನು ಎದೆ ತಟ್ಟಿ ಹೇಳುತ್ತೇನೆ, ನನ್ನ ವ್ಯವಹಾರದಲ್ಲಿ ಯಾರಿಗೂ ಒಂದು ರುಪಾಯಿ ಮೋಸ ಮಾಡಿಲ್ಲ. ಗಂಜಿ ಬೇಕಾದರೂ ಕುಡಿದು ಬದುಕಬಲ್ಲೆ, ಮತ್ತೊಬ್ಬರ ಹಣ ನನಗೆ ಬೇಡ. ಈಥರದ ಕ್ಯಾರೆಕ್ಟರ್ ನಿಮಗೆ ಎಷ್ಟು ಹುಡುಕಿದರೂ ಸಿಗುವುದಿಲ್ಲ. ಯಾವ ಸಂಘಟನೆಯವನು ಕೋಟಿ ಕೋಟಿ ಹಣವನ್ನು ಜನರಿಗೆ ಖರ್ಚು ಮಾಡ್ತಾನೆ ಹೇಳಿ. ಕೆಲವು ಸಂಘಟನೆಗಳು ಕೇವಲ ಬೆಂಗಳೂರಿಗೆ ಸೀಮಿತವಾಗಿವೆ. ಆದರೆ ನನ್ನ ಸಂಘಟನೆ ರಾಜ್ಯದ ಪ್ರತೀ ಊರಿನಲ್ಲೂ ಇದೆ. ಮುತ್ತಪ್ಪ ರೈ ಒಬ್ಬನೇ, ಇಂಥವನು ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಇಲ್ಲ. ಜನರಿಗೆ ಈಗಲೂ ಮುತ್ತಪ್ಪ ರೈ ಅಂದರೆ ಒಬ್ಬ ಡಾನ್ ಅನ್ನೋದೇ ತಲೆಯಲ್ಲಿದೆ. ನಿಮ್ಮ ಪ್ರಕಾರ ರೈ ಅಂದರೆ ಯಾರು? ನಾನು ಈಗಲೂ ಡಾನ್. ಜಯಕರ್ನಾಟಕ ಅನ್ನೋದು ಏನು? ನನ್ನ ಹಿಂದೆ ಈಗ 25-30 ಲಕ್ಷ ಜನರಿದ್ದಾರೆ. ನಾನು ಜನರ ಡಾನ್. ನಾವು ಇಷ್ಟು ಜನ ಮುಂದೆ ಹೋಗುವಾಗ ನಮ್ಮನ್ನು ಹೆದರಿಸಲು ಯಾರು ಬರುತ್ತಾರೆ? ಅನ್ಯಾಯ ಮಾಡುವವರ ವಿರುದ್ಧ ಹೋರಾಟ ಮಾಡುತ್ತೇವೆ. ನನಗೆ ಮೊದಲು ಎಷ್ಟು ಶಕ್ತಿಯಿತ್ತೋ ಅದರ ಮೂರು ಪಟ್ಟು ಶಕ್ತಿ ಈಗಲೂ ಇದೆ. ನನ್ನ ಶಕ್ತಿ ಕುಂದಿಲ್ಲ, ಈಗಲೂ ನಾನು ಬಲಾಢ್ಯ.

 

ಜನ ಸ್ಕ್ರೀನ್ ಮೇಲೆ ಡಾನ್ ಮುತ್ತಪ್ಪ ರೈ ಅವರನ್ನ ನೋಡ್ತಾರೋ, ಸಮಾಜ ಸೇವಕ ಮುತ್ತಪ್ಪ ರೈ ಅವರನ್ನು ನೋಡ್ತಾರೋ?

ಸಮಾಜ ಸೇವಕ ಮುತ್ತಪ್ಪ ರೈ ಅವರನ್ನು ನೋಡ್ಬೇಕಿದ್ರೆ ಇಷ್ಟೆಲ್ಲ ಬೇಕಿತ್ತಾ? ಅಂಥ ಸಿನಿಮಾ ಮಾಡೋಕೆ ರಾಮ್‌ಗೋಪಾಲ್ ವರ್ಮ ಅವರಂಥ ಡೈರೆಕ್ಟರ್ರೇ ಬೇಕಾ? ಅವರೊಬ್ಬ ಕಾಂಟ್ರವರ್ಷಿಯಲ್ ಡೈರೆಕ್ಟರ್. ಅವರು ಮಾಡ್ತಿರೋ ಸಿನಿಮಾಗಳೆಲ್ಲವೂ ಅಂಡರ್‌ವರ್ಲ್ಡ್‌ಗೆ ಸಂಬಂಧಿಸಿದಂಥವೇ.

ಮತ್ತೆ ಫ್ಲಾಷ್‌ ಬ್ಯಾಕ್‌ಗೆ ಹೋದ ಹಾಗೆ ಆಗಿಲ್ಲವೇ?download (19)

ಇಲ್ಲ, ಹಾಗೆ ಆಗಿಲ್ಲ. ಒಬ್ಬ ಮನುಷ್ಯ ಜೀವನದಲ್ಲಿ ಎಲ್ಲಿಂದ, ಹೇಗೆ ಬಂದ, ಏನಾದ, ಕಡೆಗೆ ಎಲ್ಲಿಗೆ ಹೋದ ಎಂಬುದು ತಿಳಿಯಬೇಕು. ನಾನು ಉದ್ದೇಶ­ಪೂರ್ವಕ ಡಾನ್ ಆಗಬೇಕೆಂದುಕೊಂಡು ಬಂದವನಲ್ಲ. ಅಸ್ತ್ರ ಹಾಯಕರಿಗೆ ಸಹಾಯ ಮಾಡುವಾಗ ನಡೆದ ಕೆಲ ಘಟನೆಗಳು ನನ್ನನ್ನು ಅಂಡರ್ ವರ್ಲ್ಡ್‌ಗೆ ನೂಕಿದವು. ಕಡೆಗೂ ನಾನು ಅದರಿಂದ ಹೊರ ಬಂದು ನನ್ನ ಅಸ್ತ್ರ ಲಿ ರೂಪ ತೋರಿಸುವ ಅವಕಾಶ ಸಿಕ್ಕಿದ್ದು ನನ್ನ ವಿರುದ್ಧದ ಎಲ್ಲ ಕೇಸ್‌ಗಳೂ ಇತ್ಯರ್ಥವಾದಾಗ. ನನ್ನಲ್ಲಿ ಎರಡು ಮುಖಗಳಿವೆ ಒಂದು ಸಮಾಜ ಸೇವೆಯದ್ದು, ಇನ್ನೊಂದು ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವಂಥದ್ದು.

ಕಥೆ ಬೆಂಗಳೂರು ಅಂಡರ್ ವರ್ಲ್ಡ್‌ನಿಂದಲೇ ಆರಂಭವಾಗುತ್ತಾ? ಇದರಲ್ಲಿ ಬೇರೆ ಪಾತ್ರಗಳೂ ಬರುತ್ತವಾ? ನಿಮ್ಮ ಜತೆ ಜೈರಾಜ್ ಇದ್ದ, ಆಯಿಲ್ ಕುಮಾರ ಇದ್ದ..

ಸಿನಿಮಾ ಹೇಗೆ ಬರುತ್ತೆ ಅನ್ನೋದು ನನಗೆ ಗೊತ್ತಿಲ್ಲ. ಯಾಕೆಂದರೆ, ನನ್ನನ್ನು ರಾಮ್‌ಗೋಪಾಲ್ ವರ್ಮ ಎರಡೇ ಸಲ ಭೇಟಿಯಾಗಿದ್ದು. ಕೆಲ ಘಟನೆಗಳ ಬಗ್ಗೆ ನನ್ನಿಂದ ಮಾಹಿತಿ ಪಡೆದಿದ್ದಾರೆ. ನಾನು ಹುಟ್ಟಿದಲ್ಲಿಂದ ಹಿಡಿದು, ಬೆಂಗಳೂರಿಗೆ ಬಂದು ನಂತರ ದುಬೈಗೆ ಹೋಗಿದ್ದು, ಅಲ್ಲಿಂದ ವಾಪಸ್ ಬಂದಿದ್ದೆಲ್ಲವನ್ನೂ ಅವರು ತಿಳಿದುಕೊಂಡಿದ್ದಾರೆ. ಉಳಿದದ್ದೆಲ್ಲವನ್ನು ಅವರು ಬೇರೆಯವರಿಂದ ತಿಳಿದುಕೊಂಡಿದ್ದಾರೆ. ರಾಮ್‌ಗೋಪಾಲ್ ವರ್ಮ ಅವರಂಥ ಡೈರೆಕ್ಟರ್ ನಾವು ಹೇಳಿದಂತೆ ಸಿನಿಮಾ ಮಾಡುವವರಲ್ಲ. ನನ್ನ ಕಥೆ ಕೇಳಿ ಅವರು ‘ಇಂಥ ಒಂದು ಸ್ಟೋರಿಯನ್ನು ನಾನು ನನ್ನ ಲೈಫ್ ನಲ್ಲೇ ಕೇಳಿಲ್ಲ, ಇದು ನನ್ನ ಬೆಂಚ್ ಮಾರ್ಕ್ ಸಿನಿಮಾ ಆಗುತ್ತೆ’ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ಸಿನಿಮಾಕ್ಕೆ ಮೊದಲು ರಾಮ್‌ಗೋಪಾಲ್ ವರ್ಮಗೆ ಒಂದಷ್ಟು ಷರತ್ತು ಹಾಕಿರುವ ಮಾತಿದೆಯಲ್ಲ?

ಯಾವ ಕಂಡಿಷನ್‌ಗಳನ್ನೂ ಹಾಕಿಲ್ಲ. ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಮಾಡುವಾಗ ಅವರು ಎಲ್ಲಿಗೋ ಹೋಗುತ್ತಿದ್ದವರು ನನ್ನ ಮನೆಗೆ ಬಂದರು. ಬರುವಾಗ ಅವರು ನನ್ನ ಬಗ್ಗೆ ಯೋಚಿಸಿದ್ದೇ ಬೇರೆ, ಇಲ್ಲಿ ಬಂದು ನನ್ನೊಂದಿಗೆ ಮಾತನಾಡಿ ಹೋಗುವಾಗ ಅವರ ಮನಸ್ಸಿನಲ್ಲಿದ್ದ ಯೋಚನೆಯೇ ಬೇರೆಯಾಗಿತ್ತು. ನನ್ನನ್ನು ನೋಡಲು ಬರುವಾಗ ನಾನೊಬ್ಬ ಅಂಡರ್ ವರ್ಲ್ಡ್ ಡಾನ್, ರೌಡಿ, ಎಲ್ಲೋ ಒಂದು ಫಾರ್ಮ್ ಹೌಸ್‌ನಲ್ಲಿ ರಿಟೈರ್ಡ್ ಆಗಿ ಕುಳಿತಿದ್ದಾನೆ ಎಂದುಕೊಂಡು ನಮ್ಮ ಮನೆಗೆ ಬಂದಿದ್ದರು. ಆದರೆ ನನ್ನ ಜೀವನದ ಕಥೆ ಕೇಳಿದ ನಂತರ, ನಾನು ಈ ಫೀಲ್ಡ್‌ಗೆ ಯಾಕೆ ಬಂದೆ, ಆಮೇಲೆ ಏನಾಯ್ತು, ಅದರಿಂದ ಹೊರ ಬರಲು ನಾನು ಮಾಡಿದ ಪ್ರಯತ್ನವೇನು ಎಂಬುದನ್ನು ವಿವರಿಸಿದ ಬಳಿಕ ಅವರಿಗೆ ನನ್ನ ಬಗ್ಗೆ ಇದ್ದ ಅಭಿಪ್ರಾಯವೇ ಬದಲಾಯ್ತು.

ಸಿನಿಮಾ ರಿಲೀಸ್ ಆಗದಂತೆ ನೋಡಿಕೊಳ್ಳಲು ಒಂದಷ್ಟು ಮಂದಿ ಸ್ಟೇ ಆರ್ಡರ್ ತರಲು ಮುಂದಾಗಿದ್ದಾರೆ ಎಂಬ ಮಾತು ಗಾಂಧಿನಗರದಲ್ಲಿದೆಯಲ್ಲಾ?

ಯಾವನು ಸ್ಟೇ ಆರ್ಡರ್ ತರ್ತಾನೆ? ಯಾರು ಹಾಗೆ ಹೋಗ್ತಾನೋ ಅವನಿಗೆ ಗಿಲ್ಟ್ ಇರಬೇಕು ಅಷ್ಟೇ. ಕುಂಬಳಕಾಯಿ ಕಳ್ಳ ಅಂತ ಈಗಲೇ ಹೆಗಲು ಮುಟ್ಟಿನೋಡಿಕೊಳ್ಳುವುದೇಕೆ?

download (17)ನಿಮ್ಮ ಸಿನಿಮಾ ಮಾಡಲು ರಾಮ್‌ಗೋಪಾಲ್ ವರ್ಮ ಅವರೇ ಸರಿ ಅಂತ ಯಾಕೆ ಅನ್ನಿಸ್ತು?

ನನ್ನ ಸಿನಿಮಾ ಮಾಡಬೇಕು ಎಂದು ತುಂಬಾ ಜನ ಬಂದಿದ್ರು, ನನಗೆ ಆಸಕ್ತಿ ಇರಲಿಲ್ಲ. ಮಾಡುವುದಿದ್ದರೆ ರಾಮ್‌ಗೋಪಾಲ್ ವರ್ಮ ಅವರಂಥ ನಿರ್ದೇಶಕರೇ ಮಾಡಬೇಕು ಎಂಬುದು ನನ್ನ ಮನಸ್ಸಿನಲ್ಲಿತ್ತು. ನಾನು ಅವರನ್ನು ನನ್ನ ಮನೆಗೆ ಕರೆದಿರಲೂ ಇಲ್ಲ. ಅವರಾಗಿಯೇ ಬಂದು ಸಿನಿಮಾ ಮಾಡುವುದಾಗಿ ಹೇಳಿದಾಗ ಸಂತೋಷವಾಯ್ತು. ಒಂದು ಸಿನಿಮಾ ಮಾಡುವಾಗ ಒಬ್ಬ ಒಳ್ಳೆಯ ಡೈರೆಕ್ಟರ್ ಇರಬೇಕು. ನನಗೆ ಅವರಿಗಿಂತ ಒಳ್ಳೆಯ ಡೈರೆಕ್ಟರ್ ಯಾರು ಇಲ್ಲ ಅನ್ನಿಸಿತು. ಅದಕ್ಕಾಗಿ ಒಪ್ಪಿಕೊಂಡೆ.

ಒಂದು ಸಿನಿಮಾದಲ್ಲಿ ನಿಮ್ಮ ಇಡೀ ಕಥೆ ಹೇಳಲು ಸಾಧ್ಯವಿಲ್ಲ, ಸಿನಿಮಾದ ಸಬ್ಜೆಕ್ಟ್ ಏನು?

ನೀವು ಈ ಪ್ರಶ್ನೆಯನ್ನು ರಾಮ್‌ಗೋಪಾಲ್ ವರ್ಮ ಅವರನ್ನೇ ಕೇಳಬೇಕು. ಸಿನಿಮಾದ ಸಬ್ಜೆಕ್ಟ್ ಏನು ಎಂಬುದು ಗೊತ್ತಿಲ್ಲ. ಹೇಗೆ ತೆಗೀತಾರೆ ಸಿನಿಮಾ, ಬೆಂಗಳೂರಿನ ಅಂಡರ್ ವರ್ಲ್ಡ್ ತೆಗೀತಾರಾ, ದುಬೈನ ಕಥೆ ತೆಗೀತಾರಾ ಗೊತ್ತಿಲ್ಲ. ಅಂತೂ ನನ್ನ ಬಗೆಗಿನ ಸಿನಿಮಾವನ್ನು ಒಂದೆರಡು ಗಂಟೆಗಳಲ್ಲಿ ಮುಗಿಸಲು ಸಾಧ್ಯ ಎಂಬುದು ಮಾತ್ರ ಸತ್ಯ. ಕಥೆಯ ಬಗ್ಗೆ ನನ್ನೊಂದಿಗೆ ಎರಡು ಬಾರಿ ಮಾತನಾಡಿದ್ದಾರೆ. ಉಳಿದ ವಿಚಾರಗಳನ್ನು ಅವರು ಹೊರಗಿನಿಂದ ಸಂಗ್ರಹಿಸಿದ್ದಾರೆ. ಒಬ್ಬ ಡೈರೆಕ್ಟರ್ ನಾನು ಹೇಳುವುದನ್ನೇ ನಂಬುವುದಿಲ್ಲ. ತುಂಬಾ ಜನರನ್ನು ಕೇಳಿರ್ತಾರೆ, ತಿಳಿದುಕೊಂಡಿರ್ತಾರೆ.

ಸಿನಿಮಾ ಪಾಸಿಟಿವ್ ಅಥವಾ ನೆಗೆಟಿವ್ ಹೇಗೆ ಬಂದರೂ ನೀವು ಒಪ್ಪಿಕೊಳ್ಳುತ್ತೀರಾ?

ಮೊದಲು ಸಿನಿಮಾ ಹೇಗೆ ಬರುತ್ತದೆ ಎಂಬುದನ್ನು ನೊಡೋಣ. ಸಿನಿಮಾದಲ್ಲಿ ಕಮರ್ಷಿಯಲ್‌ಗಾಗಿ ನನ್ನ ವಿರುದ್ಧ ಸುಳ್ಳು ಅಥವಾ ನನ್ನ ವ್ಯಕ್ತಿತ್ವವನ್ನು ಹಾಳು ಮಾಡುವ ಹಂತಕ್ಕೆ ತೆಗೆದುಕೊಂಡು ಹೋದ್ರೆ ನನಗೆ ಬೇಜಾರಾಗುತ್ತೆ. ಅದನ್ನು ಮಾಡಬಾರದು. ಹಾಗಂತ ನನ್ನನ್ನೇನು ಹೊಗಳಿ ಸಿನಿಮಾ ಮಾಡಿ ಎಂದೂ ನಾನು ಅವರಿಗೆ ಹೇಳಿಲ್ಲ. ರಾಜಕೀಯದ ಅಗತ್ಯ ನನಗಿಲ್ಲ.

ಸಂಘಟನೆ ಕೆಲಸ ಹೇಗೆ ನಡೆಯುತ್ತಿದೆ?

ಜಯಕರ್ನಾಟಕ ಸಂಘಟನೆಯೇ ನನ್ನ ಶಕ್ತಿ. ಮೊನ್ನೆ ನಡೆದ ಸಿನಿಮಾ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನ ಬಂದಿದ್ದರು. ನಾನೊಬ್ಬ ಸಾಧಾರಣ ವ್ಯಕ್ತಿ. ಸಿನಿಮಾ ನಟ ಅಲ್ಲ, ರಾಜಕೀಯ ವ್ಯಕ್ತಿಯೂ ಅಲ್ಲ. ಹತ್ತು ಹಲವು ಕಳಂಕಗಳನ್ನು ಹೊತ್ತುಕೊಂಡು ನನ್ನನ್ನು ಸಮಾಜದಲ್ಲಿ ಒಬ್ಬ ಕೆಟ್ಟ ವ್ಯಕ್ತಿ ಎಂದು ಮಾಡಿದ್ದರು. ಇವತ್ತು ನಾನು ಅದೆಲ್ಲವನ್ನೂ ಬಿಟ್ಟು ಬದುಕುತ್ತಿದ್ದೇನೆ. ಕೆಲವರು ಎಲ್ಲವನ್ನೂ ಬಿಟ್ಟಿದ್ದೇನೆ ಎಂದು ವೇಷ ಹಾಕಿಕೊಂಡು ಓಡಾಡ್ತಾರೆ. ಎಲ್ಲವನ್ನೂ ಬಿಟ್ಟು ನಿಸ್ವಾರ್ಥವಾಗಿ ಕೆಲಸ ಮಾಡಿಕೊಂಡು ಹೋಗುತ್ತಿರುವುದಕ್ಕೆ ಪ್ರೀತಿಯಿಂದ ಜನ ನನ್ನ ಜೊತೆ ಬರುತ್ತಾರೆ. ಉತ್ತರ ಕರ್ನಾಟಕಕ್ಕೆ ನಾನು ಹೋದರೂ ಇಷ್ಟೇ ಸಂಖ್ಯೆಯ ಜನ ಬರುತ್ತಾರೆ.

ಮುತ್ತಪ್ಪ ರೈ ಇದೆಲ್ಲವನ್ನೂ ಸುಮ್ಮನೆ ಮಾಡುವುದಿಲ್ಲ, ಮುಂದೆ ಎಲೆಕ್ಷನ್‌ಗೆ ನಿಲ್ತಾರೆ ಎಂಬ ಮಾತಿದೆಯಲ್ಲ? ಮುಂದೆ ದಿನ ಎಲ್ಲಿದೆ. ನನಗೀಗ 63 ವರ್ಷ. ನಾನು ಎಂದಿಗೂ ರಾಜಕೀಯಕ್ಕೆ ಬರುವುದಿಲ್ಲ. ಮತ್ಯಾಕೆ ಮಾಡ್ತೀರಾ ಇಷ್ಟೆಲ್ಲ ಎಂದು ನನ್ನನ್ನು ಕೇಳ್ತಾರೆ. ನನ್ನ ಮನಸ್ಸಿನಲ್ಲಿರುವುದು ಕೇವಲ ನಿಸ್ವಾರ್ಥ ಸೇವೆ ಅಷ್ಟೇ. ನಾನು ರಾಜಕೀಯದವರಿಗೆ ಹೇಳುವುದಿಷ್ಟೇ. ಒಂದು ಎಲೆಕ್ಷನ್‌ಗೆ ನಿಂತು 20-30 ಕೋಟಿ ಖರ್ಚು ಮಾಡುವ ಬದಲು ಆ ಕ್ಷೇತ್ರದ ಜನರಿಗಾಗಿ ಆ ಹಣವನ್ನು ಐದು ವರ್ಷ ಖರ್ಚು ಮಾಡಿ. ಇಂಡಿಪೆಂಡೆಂಟ್ ನಿಂತರೂ ಗೆಲ್ಲುತ್ತೀರಾ. ಜನರಿಗೆ ಉಪಕಾರ ಮಾಡಿದರೆ ಅವರೆಂದಿಗೂ ಮರೆಯುವುದಿಲ್ಲ.

ಜನರನ್ನು ನೀವು ನೇರವಾಗಿ ಆಳದಿದ್ದರೂ, ಆಳುವವರನ್ನು ನೀವು ಆಳುತ್ತೀರಾ ಎಂಬ ಅಭಿಪ್ರಾಯವಿದೆ? ಆಳುವವರನ್ನು ನಾನು ಆಳುವುದಿಲ್ಲ. ನನ್ನಲ್ಲಿರುವ ಸ್ವಾರ್ಥ ಒಂದೇ. ನಾನು ಎಲ್ಲ ಜನರ ಪ್ರೀತಿಯನ್ನು ಗಳಿಸಬೇಕು ಅನ್ನೋದು. ಪ್ರತಿಯೊಬ್ಬರ ಹೃದಯಕ್ಕೂ ನಾನು ಮುಟ್ಟಬೇಕು ಅಷ್ಟೇ.

ಒಂದಷ್ಟು ರಾಜಕಾರಣಿಗಳಿಗೆ ನೀವು ಗಾಡ್-ದರ್ ಆಗಿದ್ದೀರಿ, ಕಿಂಗ್ಮೇಕರ್ ಆಗಿದ್ದೀರಿ ಅಂತಾರೆ. ಹೌದಾ?

ಯಾವ ರಾಜಕಾರಣಿಗಳಿಗೂ ನಾನು ಕಿಂಗ್ ಮೇಕರ್ ಆಗಿಲ್ಲ. ಅದೆಲ್ಲ ಸುಳ್ಳು, ಕೆಲವು ರಾಜಕಾರಣಿಗಳಿಗೆ ನನ್ನ ಮೇಲೆ ಪ್ರೀತಿ ಇದೆ. ಕೆಲವರಿಗೆ ನನ್ನ ಬಗ್ಗೆ ಗೊತ್ತಿಲ್ಲದ ಕಾರಣ ಅವರು ನನ್ನ ಬಳಿಗೆ ಬರದೇ ಇರಬಹುದು. ನಾನು ಯಾರನ್ನೂ ದ್ವೇಷಿಸುವುದಿಲ್ಲ. ನನ್ನೊಂದಿಗೆ ಮೊದಲಿಂದಲೂ ಪರಿಚಯವಿರುವ ಕೆಲ ಸ್ನೇಹಿತರು ಈಗ ರಾಜಕೀಯದಲ್ಲಿದ್ದಾರೆ. ಅವರೊಂದಿಗೆ ನನ್ನ ಒಡನಾಟವಿದೆ ಅಷ್ಟೆ.

ಜನ ಎಂಥವರಿಗೆ ವೋಟ್ ಹಾಕಬೇಕು ಅಂತೀರಾ ನೀವು?

ಯಾರು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸ್ತಾರೆ, ನಿಮ್ಮ ಕ್ಷೇತ್ರದಲ್ಲಿ ಕೆಲಸ ಮಾಡ್ತಾರೆ ಅಂಥವರಿಗೆ ವೋಟ್ ಹಾಕಿ ಅಂತ ಹೇಳುತ್ತೇನೆ.

ಒಂದು ಪಕ್ಷ ಅಂತ ಏನಾದ್ರೂ ಹೇಳ್ತೀರಾ, ಯಾಕಂದ್ರೆ ನೀವು ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದೀರಾ ಅನ್ನೋ ಮಾತಿದೆ?download (18)

ಯಾವ ಪಕ್ಷದ ಪರವೂ ನಾವು ಕೆಲಸ ಮಾಡುವುದಿಲ್ಲ. ರಾಮನಗರದಲ್ಲಿ ಡಿ.ಕೆ. ಶಿವಕುಮಾರ್‌ಗೆ ವೋಟ್ ಹಾಕಿ ಎಂದಿದ್ದೇನೆ. ವಿನಯ್ ಕುಮಾರ್ ಸೊರಕೆ ಪರವಾಗಿಯೂ ಕೆಲಸ ಮಾಡಿದ್ದೇವೆ. ಬಿಜೆಪಿಯ ಯಡಿಯೂರಪ್ಪ ಅವರಿಗೆ, ಜೆಡಿಎಸ್‌ನ ಕುಮಾರಸ್ವಾಮಿಗೂ ವೋಟ್ ಕೊಡಿ ಅಂದಿದ್ದೇವೆ. ಹೈಸ್ಕೂಲ್ ದಿನಗಳಿಂದ ಡಿ.ವಿ.ಸದಾನಂದಗೌಡರು, ಕಾಲೇಜಿನಲ್ಲಿ ಅಂಬರೀಷ್ ಸಹ ನನ್ನ ಮಿತ್ರರು. ನಾವು ಮಾಡುವ ಒಳ್ಳೆಯ ಕೆಲಸಗಳಿಗೆ ಯಾರು ಸ್ಪಂದಿಸ್ತಾರೋ ಅಂಥವರಿಗೆ ವೋಟ್ ಹಾಕಿ ಅಂದಿದ್ದೇವೆ.

ಜಯಕರ್ನಾಟಕ ಸಂಘಟನೆಯೊಂದಿಗೆ ಕೆಲ ಸಮಾಜಘಾತಕ ಶಕ್ತಿಗಳಿವೆ ಎಂಬ ಮಾತಿದೆ, ಇತ್ತೀಚೆಗೆ ನಡೆದ ಕಾರ್ಮಿಕರ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ ಆರೋಪ ಇದೆ.

ಮೊನ್ನೆ ನಡೆದದ್ದು ಕಾರ್ಮಿಕರ ಪ್ರತಿಭಟನೆ. ನಮ್ಮ ಸಂಘಟನೆ ಕಾರ್ಮಿಕರ ಪರ ಹೋರಾಟ ಮಾಡುತ್ತದೆ. ಕಾರ್ಮಿಕರ ಹೋರಾಟದಲ್ಲಿ ನಮ್ಮ ಸಂಘಟನೆ ತೊಡಗಿಸಿಕೊಳ್ಳುವುದರಲ್ಲಿ ತಪ್ಪೇನಿದೆ? ಬಸ್‌ಗಳಿಗೆ ಕಲ್ಲು ಹೊಡೆಯುವಂತಹ ಪರಿಸ್ಥಿತಿ ಯಾವಾಗ ಬರುತ್ತೆ? ಸುಮ್ಮನೆ ಯಾರೂ ಕಲ್ಲು ಹೊಡೆಯುವುದಿಲ್ಲ. ಜಯಕರ್ನಾಟಕ ಸಂಘಟನೆ ಎಂದಿಗೂ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡಿಲ್ಲ. ನಮ್ಮ ಸಂಘಟನೆಯನ್ನು ಒಮ್ಮೆ ಕೆಣಕಿ ನೋಡಿ. ಲಕ್ಷಾಂತರ ಸಂಖ್ಯೆಯ ನಮ್ಮ ಕಾರ್ಯಕರ್ತರು ದೊಂಬಿಗೆ ಇಳಿದರೆ ಏನು ಆಗಬಹುದು ಯೋಚನೆ ಮಾಡಿ. ಆದರೆ ನಾವು ಯಾವತ್ತೂ ಆ ಕೆಲಸ ಮಾಡಿಲ್ಲ.

ನೀರು ಕೊಡದಿದ್ದರೆ ಜನ ಮನೆಗೆ ನುಗ್ಗುತ್ತಾರೆ

ಕಳಸಾ ಬಂಡೂರಿ ಹೋರಾಟದ ನಗ್ಗೆ ಮಾತನಾಡುತ್ತಾ- ನರಗುಂದ ಮತ್ತು ನವಲಗುಂದ ರೈತರು ಬಂದು ಭೇಟಿಯಾಗಿ ನನ್ನೊಂದಿಗೆ ಮಾತನಾಡಿದ್ದಾರೆ. ಸಮುದ್ರಕ್ಕೆ ಹರಿದು ಹೋಗಿ ವ್ಯರ್ಥವಾಗುವ ಮಹದಾಯಿ ನೀರನ್ನು ಅಡ್ಡಗಟ್ಟಿ ಕೃಷಿಗೆ ಕೊಡಿ ಅನ್ನೋದು ಅವರ ಬೇಡಿಕೆ. ಕೃಷಿಗೆ ಕೊಡಲು ಸಾಧ್ಯವಾಗದಿದ್ದರೆ ಕುಡಿಯುವದಕ್ಕಾದರೂ ಕೊಡಿ ಅಂದಿದ್ದಾರೆ. ಈ ಬೇಡಿಕೆಯನ್ನು ಜನಪ್ರತಿನಿಧಿಗಳು ಇನ್ನೂ ನೆಗ್ಲೆಟ್ ಮಾಡ್ತಾ ಹೋದ್ರೆ ಮುಂದೇನಾಗಬಹುದು ಎಂಬುದನ್ನು ನಾನು ಹೇಳ್ತೀನಿ ಕೇಳಿ.

ಸರಕಾರಿ ಅಧಿಕಾರಿಗಳು ಇರುವುದು ಜನರ ಸೇವೆ ಮಾಡೋದಕ್ಕೆ. ಅವರ ಮನೆಗಳಲ್ಲಿ ನೀರು ಯಾವಾಗಲೂ ಬರುತ್ತೆ. ನಮಗೆ ನೀರು ಬೇಕಾದರೆ ನಾವು ಏನ್ ಮಾಡ್ಬೇಕು, ಅವರ ಮನೆಗಳಿಗೆ ನುಗ್ಗಬೇಕು ತಾನೆ? ಅವರಿಗೇನು ಹೊಡೆಯೋಕೆ ಬಡಿಯೋಕೆ ನುಗ್ಗುವುದಿಲ್ಲ. ನೀರಿಗಾಗಿ ಅಷ್ಟೇ. ಲಕ್ಷೋಪ ಲಕ್ಷ ಜನ ಈ ರೀತಿ ಅಧಿಕಾರಿಗಳ ನುಗ್ಗುತ್ತಾರೆ ಅಷ್ಟೇ. ಕೃಷಿಯೇ ನಮ್ಮ ಜನರ ಮೂಲ, ಅದೇ ಸತ್ತು ಹೋದರೆ ಜನ ಊಟಕ್ಕೆ ಏನು ಮಾಡ್ತಾರೆ. ಎಲ್ಲಿ ಊಟ ಇದೆಯೋ ಅಲ್ಲಿಗೆ ನುಗ್ತಾರೆ. ಶ್ರೀಮಂತರ ಮನೆಗೆ ನುಗ್ಗಲು ಇನ್ನೆಷ್ಟು ಸಮಯ ಬಾಕಿ ಇದೆ, ಜನಸಾಮಾನ್ಯರು ರಾಜಕಾರಣಿಗಳ ಕಾಲರ್ ಹಿಡಿದು ಎಳೆಯೋದಕ್ಕೆ ತುಂಬ ಸಮಯ ಏನಿಲ್ಲ. ಆದ್ದರಿಂದ ರೈತರ ಬೇಡಿಕೆಯನ್ನು ಈಗಲೇ ಒಪ್ಪಿಕೊಂಡು ಅವರಿಗೆ ಅನುಕೂಲ ಮಾಡಿಕೊಡಬೇಕು.

ಕಳಸಾ ಬಂಡೂರಿ, ಮೇಕೆ ದಾಟು ಯೋಜನೆ ಬಗ್ಗೆ ಮಾತಾಡ್ತೀರಾ. ಆದರೆ ಎತ್ತಿನ ಹೊಳೆ ಬಗ್ಗೆ ಯಾಕೆ ಮೌನವಹಿಸಿದ್ದೀರಿ. ನಿಮ್ಮ ಊರಿನ ನೀರು ಕೇಳ್ತಿದ್ದಾರೆ ಅಂತಾನಾ?

ಎತ್ತಿನ ಹೊಳೆ ಬಗ್ಗೆ ಖಂಡಿತಾ ಮಾತಾಡ್ತೀನಿ. ನನ್ನ ಊರು ಮಂಗಳೂರಲ್ಲ, ನನ್ನದು ಬೆಂಗಳೂರು. ನಾನು ಮಂಗಳೂರಿನಲ್ಲಿ ಎಷ್ಟು ಜೀವನ ಮಾಡಿದ್ದೇನೋ ಅದರ ನಾಲ್ಕು ಪಟ್ಟು ಹೆಚ್ಚು ಬೆಂಗಳೂರಲ್ಲಿ ಬದುಕಿದ್ದೇನೆ. ನನ್ನ ಊರು ಕರ್ನಾಟಕ, ನನ್ನ ಭಾಷೆ ಕನ್ನಡ. ನೇತ್ರಾವತಿ ನದಿಯನ್ನು ಈಗ ಹೋಗಿ ನೋಡಿ ಖಾಲಿಯಾಗಿದೆ. ಮಂಗಳೂರಿಗೆ ಎರಡು ದಿನಕ್ಕೊಮ್ಮೆ ಕುಡಿಯುವ ನೀರು ಬಿಡುತ್ತಿದ್ದಾರೆ. ಇನ್ನೆಲ್ಲಿಂದ ನೀರನ್ನು ತರುತ್ತೀರಾ? ಡ್ಯಾಂಗಳನ್ನು ಕಟ್ಟಿ. ತಮಿಳುನಾಡಿನಲ್ಲಿ ನೋಡಿ, ಅಲ್ಲಲ್ಲಿ ಡ್ಯಾಂಗಳನ್ನು ಕಟ್ಟಿ ಹರಿಯುವ ನೀರು ಸಮುದ್ರಕ್ಕೆ ಹೋಗದಂತೆ ಮಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಅಂತಹ ಲೀಡರ್‌ಗಳಿಲ್ಲ.

ನೀವ್ ಮಾತಾಡೋದನ್ನು ನೋಡಿದ್ರೆ ಕಮ್ಯುನಿಸ್ಟ್ ಕ್ರಾಂತಿ, ನಕ್ಸಲ್ ಕ್ರಾಂತಿ ಬಗ್ಗೆ ಮಾತಾಡುವವರ ಥರ ಆಗಿದೆಯಲ್ಲ?

ಕಮ್ಯುನಿಸ್ಟ್, ನಕ್ಸಲ್ ಕ್ರಾಂತಿಯಲ್ಲ. ನಾನು ಜನರ ಪರವಾಗಿ ಮಾತನಾಡುತ್ತೇನೆ ಅಷ್ಟೇ. ನಿಸ್ವಾರ್ಥ ಸೇವೆ ಮಾಡುವುದಷ್ಟೇ ನನ್ನ ಉದ್ದೇಶ. ಕಮ್ಯುನಿಸ್ಟ್ ಹೋರಾಟ ಅಂದವರು ವೋಟಿಗಾಗಿ ನಿಲ್ಲುವುದಿಲ್ಲವಾ? ನನಗೆ ವೋಟೂ ಬೇಡ ಏನೂ ಬೇಡ. ನಾನು ಮೊದಲು ಯಾರಿಗಾದರೂ ತೊಂದರೆಯಾದರೆ ಅವರ ಸಮಸ್ಯೆ ಪರಿಹಾರಕ್ಕೆ ಧಾವಿಸುತ್ತಿದ್ದೆ. ಈಗ ನಾನು ಭವಿಷ್ಯದ ಬಗ್ಗೆ ಮಾತಾಡುತ್ತಿದ್ದೇನೆ, ಎಲ್ಲ ಜನರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದೇನೆ. ರಾಜಕಾರಣಿಗಳು, ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ನಮಗೇ ನೀರಿಲ್ಲದೇ ಇರುವಾಗ ತಮಿಳುನಾಡಿಗೆ ನೀರು ಬಿಡುತ್ತಾರೆ. ಇದನ್ನು ಹೇಗೆ ಸಹಿಸಿಕೊಳ್ಳಲು ಸಾಧ್ಯ. ನಮ್ಮ ರಾಜ್ಯದ ಒಂದು ಹನಿ ನೀರೂ ಕೂಡ ಹೊರಗೆ ಹೋಗದಂತೆ ಕ್ರಮ ಕೈಗೊಳ್ಳಬೇಕು.

ಟಿಆರ್‌ಪಿ ಬ್ಯಾನ್ ಆಗ್ಬೇಕ್!

ನಾನು ಇದುವರೆಗೆ ಎರಡು ಲಕ್ಷ ಮರಗಳನ್ನು ನೆಟ್ಟಿದ್ದೇನೆ. ನಾನು ಮರ ನೆಟ್ಟ ಸುದ್ದಿ ತಮಿಳುನಾಡಿನ ಪತ್ರಿಕೆಗಳಲ್ಲೆಲ್ಲಾ ಬಂದಿದೆ. ನಾನು ಮಂಡ್ಯದ ತೊನ್ನೂರಿನಲ್ಲಿ ಕೆರೆಯೊಂದನ್ನು ಅಭಿವೃದ್ಧಿಪಡಿಸಿದ್ದೇನೆ. ಎರಡು ಸಾವಿರ ಎಕರೆ ಅಗಲ, ನೂರು ಅಡಿ ಆಳದಲ್ಲಿ ನೀರಿದೆ. ಕೆಆರ್‌ಎಸ್‌ನ ನೀರು ಖಾಲಿಯಾದರೂ, ತೊನ್ನೂರು ಕೆರೆಯ ನೀರು ಖಾಲಿಯಾಗುವುದಿಲ್ಲ. ಈಗ ರಾಯಚೂರಿನ ಪ್ರತೀ ಹಳ್ಳಿಗೆ ಹೋಗಿ ಮನೆ ಮನೆಗೆ ಕುಡಿಯುವ ನೀರು ಕೊಡುವ ಯೋಚನೆ ಮಾಡಿದ್ದೇವೆ. ಮಳೆ ಬರುವವರೆಗೆ ನೀರು ಕೊಡುತ್ತೇವ. ಹಾಗಂತ ನಾನೇನು ರಾಯಚೂರಿನಲ್ಲಿ ಎಲೆಕ್ಷನ್‌ಗೆ ನಿಲ್ಲುವುದಿಲ್ಲ. ನಮ್ಮ ಯಾವ ಟಿವಿ ಪತ್ರಿಕೆಗಳೂ ಈ ಸುದ್ದಿ ಹಾಕಿಲ್ಲ. ಒಬ್ಬನಿಗೆ ಯಾರಾದ್ರೂ ಚಪ್ಪಲಿಯಲ್ಲಿ ಹೊಡೆದರೆ ನೀವು ಅದನ್ನು ಬೆಳಗ್ಗೆಯಿಂದ ಸಂಜೆಯವರೆಗೆ ತೋರಿಸುತ್ತೀರಾ. ಯಾವುದೂ ಸಿಗದಿದ್ದರೆ ಯಾವುದೋ ಒಬ್ಬ ಸ್ವಾಮೀಜಿಯನ್ನು ಹಿಡಿದು ತರುತ್ತೀರಾ. ವಾರಕ್ಕೊಮ್ಮೆ ಬರುವ ಟಿಆರ್ಪಿಗಾಗಿ ಪಾಪ ಟಿವಿ ಚಾನೆಲ್‌ಗಳವರು ಪಡುವ ಕಷ್ಟ ನೋಡಿದರೆ ಅಯ್ಯೋ ಅನ್ನಿಸತ್ತೆ. ಒಳ್ಳೆಯ ಕೆಲಸಗಳನ್ನು ತೋರಿಸುವುದಿಲ್ಲ. ಈ ಟಿಆರ್‌ಪಿ ಅನ್ನೋದು ಮೊದಲು ಬ್ಯಾನ್ ಆಗ್ಬೇಕು.

ಬನ್ನಂಜೆ ರಾಜ ಬೊಗಳುವ ನಾಯಿ

ನಾನು ಬನ್ನಂಜೆ ರಾಜನಿಗೆ ಅಡ್ಡಗಾಲಾಗಿದ್ದುದು ನಿಜ. ಯಾಕೆಂದರೆ, ಆತ ಜನರನ್ನು ಸುಲಿಗೆ ಮಾತ್ತಿದ್ದ. ಹಣ ಕೊಡದಿದ್ದರೆ ಜನರನ್ನು ಕೊಲ್ಲುತ್ತಿದ್ದ. ಇದು ನನ್ನ ನಿಯಮಕ್ಕೆ ವಿರುದ್ಧವಾಗಿತ್ತು. ಆತ ನನ್ನ ಜತೆಯಲ್ಲೇ ದುಬೈಗೆ ಬಂದಿದ್ದವನು. ಅವನು ಈ ಮಟ್ಟಕ್ಕೆ ಇಳಿದ ಕೂಡಲೇ ದೂರ ಇಟ್ಟೆ. ಈಗ ಅವನನ್ನು ಪೊಲೀಸರು ಎಳೆದು ತಂದಿದ್ದಾರೆ. ನನ್ನ ವಿರುದ್ಧ ಸ್ಟೇಟ್‌ಮೆಂಟ್‌ಗಳನ್ನು ಕೊಡುತ್ತಿದ್ದಾನೆ. ನನ್ನಿಂದ ಅವನಿಗೆ ಅಪಾಯ ಇದೆ ಎಂದು ಹೇಳುತ್ತಿದ್ದಾನೆ. ಅದು ಅವನ ಕಲ್ಪನೆ ಅಷ್ಟೇ. ಅವನೊಬ್ಬ ಬೊಗಳುವ ನಾಯಿ, ಕಚ್ಚುವುದಿಲ್ಲ.

ಕೋಟೆ ಕಟ್ಟಿಕೊಂಡರೆ ಪ್ರಾಣ ಉಳಿಯುವುದಿಲ್ಲ

ನನ್ನ ರಕ್ಷಣೆಗಾಗಿ ಸೆಕ್ಯೂರಿಟಿ ವ್ಯವಸ್ಥೆ ಇಟ್ಟುಕೊಂಡಿದ್ದೇನೆ. ನೀವು ಎಷ್ಟೇ ದೊಡ್ಡ ಕೋಟೆ ಕಟ್ಟಿಕೊಂಡರೂ ಪ್ರಾಣ ಉಳಿಯುವುದಿಲ್ಲ. ರಾಜೀವ್ ಗಾಂಧಿಯ­ವರಂತವರನ್ನು ಕೊಂದರು, ಅಮೆರಿಕ ಅಧ್ಯಕ್ಷರಾಗಿದ್ದ ಕೆನಡಿಯವರನ್ನೇ ಕೊಂದರು. ಪ್ರಾಣ ಕೊಡುವವನು, ತೆಗೆಯುವವನೂ ಮೇಲಿರುವ ದೇವರು. ಮೈಸೂರಿನ ಕೋರ್ಟ್‌ನಲ್ಲಿ ನನ್ನ ಮೇಲೆ ದಾಳಿ ನಡೆಸಿದಾಗ ನನಗೆ ಐದು ಗುಂಡುಗಳು ಹೊಕ್ಕಿದ್ದವು. ಆದರೂ ನಾನು ಬದುಕಿದೆ, ಪ್ರಜ್ಞೆಯನ್ನೂ ಕಳೆದುಕೊಂಡಿರಲಿಲ್ಲ. ನನಗೆ ಹೊಡೀತಾರೆ ಎಂಬುದು ಒಂದು ದಿನ ಮೊದಲೇ ಗೊತ್ತಿತ್ತು. ಇದು ಗೊತ್ತಿದ್ದರೂ ನಾನು ಹೆದರದೆ ಕೋರ್ಟ್‌ಗೆ ಹಾಜರಾದೆ. ಅವತ್ತು ಹೊಡೆಯದಿದ್ದರೆ, ಮತ್ತೊಂದು ದಿನ ಹೊಡೆಯುತ್ತಿದ್ದರು. ಕಾಪಾಡುವವನು ದೇವರು. ನನ್ನ ಸಾವನ್ನು ದೇವರು ಬರೆದಿದ್ದಾನೆ, ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ.

ಜನರೊಂದಿಗೆ ಬೆರೆತು ಪತ್ನಿಯ ಮರೆಯುತ್ತಿದ್ದೇನೆ

ನನ್ನ ಜೀವನದಲ್ಲಿ ಅತಿ ಮುಖ್ಯ ಸ್ಥಾನ ಗಳಿಸಿದ್ದವಳು ನನ್ನ ಪತ್ನಿ ರೇಖಾ. ನನ್ನ ಕಷ್ಟ ಸುಖ ಎಲ್ಲದರಲ್ಲೂ ಆಕೆ ಭಾಗಿಯಾಗಿದ್ದಳು. ಅಷ್ಟು ವರ್ಷ ಜತೆಯಲ್ಲಿದ್ದ ಮೇಲೆ ನೆನಪಾಗುತ್ತಾರಲ್ಲ. ಅವಳಿಲ್ಲದ ಜೀವನವನ್ನು ನಾನು ಜನರೊಂದಿಗೆ ಬೆರೆತು ಆಕೆಯನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದೇನೆ. ಸಂಘಟನೆ, ವ್ಯವಹಾರ, ಜನರ ಕಷ್ಟಗಳನ್ನು ಪರಿಹರಿಸುವುದರಲ್ಲಿಯೇ ಸಮಯ ಕಳೆದು ಹೋಗುತ್ತದೆ. ನನ್ನ ಸಿನಿಮಾದಲ್ಲಿ ಆಕೆಯ ಪಾತ್ರವೂ ಇದೆ. ಮುತ್ತಪ್ಪ ರೈ ಬಗ್ಗೆ ಸಿನಿಮಾ ಮಾಡುವಾಗ ಹೆಂಡತಿಯ ಪಾತ್ರವೂ ಇರಬೇಕಲ್ಲವೇ.

ಹಣ ಎಲ್ಲಿಯದು?

ಇಷ್ಟೆಲ್ಲಾ ಮಾಡ್ತೀನಿ ಅಂತೀರಲ್ಲ. ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತದೆ, ನಿಮ್ಮ ವ್ಯವಹಾರ ಏನು? ಹ್ಞಾಂ… ಇದು ಸರಿಯಾದ ಪ್ರಶ್ನೆ. ಈ ವಿಷಯ ಎಲ್ಲರಿಗೂ ಗೊತ್ತಾಗಬೇಕು. ನಾನು ರೈತರಿಂದ ದುಡ್ಡು ಕೊಟ್ಟು ಜಮೀನು ಖರೀದಿ ಮಾಡುತ್ತೇನೆ. ನಂತರ ಆ ಜಮೀನನ್ನ ಎನ್.ಎ ಮಾಡಿಸಿ, ಅದರಲ್ಲಿ ರಸ್ತೆ, ಚರಂಡಿಗಳಂಥ ಮೂಲ ಸೌಕರ್ಯ ಕೊಟ್ಟು ಲೇಔಟ್ ನಿರ್ಮಿಸುತ್ತೇನೆ. ಹಾಗೆ ಮಾಡಿ ಸೈಟು ಮಾರುತ್ತೇನೆ. ಅದು ಪಕ್ಕಾ ವ್ಯವಹಾರ. ಇದುವರೆಗೂ ಒಬ್ಬೇ ಒಬ್ಬ ರೈತನಿಗೆ ದುಡ್ಡು ಕೊಡದೇ ಜಮೀನು ಬರೆಸಿಕೊಂಡಿದ್ದರೆ ತೋರಿಸಿ. ಒಂದು ಕೆರೆ, ರಾಜಾ ಕಾಲುವೆ ಒತ್ತುವರಿ ಮಾಡಿಸಿಕೊಂಡಿದ್ದರೆ ತೋರಿಸಿ. ಯಾವುದೋ ವಿವಾದದಲ್ಲಿ­ರುವ ಜಮೀನಿಗೆ ಒಂದಷ್ಟು ದುಡ್ಡು ಕೊಟ್ಟು ಅವರಿವರನ್ನು ಹೆದರಿಸಿ ಬೇಲಿ ಸುತ್ತಿಕೊಂಡಿದ್ದರೆ ತೋರಿಸಿ. ಇಷ್ಟು ವರ್ಷಗಳಾದವು ವ್ಯವಹಾರ ಶುರುಮಾಡಿ.

ಒಂದು ವೇಳೆ ನಾನು ತಪ್ಪು ಮಾಡಿದ್ದರೆ ಒಂದಾದರೂ ಕೇಸ್ ಹೊರಗೆ ಬರಬೇಕಿತ್ತಲ್ಲವಾ? ನಾನು ಮಾಡಿದ ಅಷ್ಟೂ ಲೇಔಟ್ಗಳ ಮಾಹಿತಿ ಕೊಡುತ್ತೇನೆ. ನೀವೇ ಹೋಗಿ ನೋಡಿ. ಕಳೆದ ವರ್ಷ ಒಂದಲ್ಲ – ಎರಡಲ್ಲ, ಇಪ್ಪತ್ತ ನಾಲ್ಕು ಕೋಟಿ ತೆರಿಗೆ ಕಟ್ಟಿದ್ದೇನೆ. ಹಾಗೆ ನ್ಯಾಯದ ದಾರಿಯಲ್ಲಿ ಗಳಿಸಿದ ದುಡ್ಡಿನಲ್ಲಿ ಸಮಾಜ ಸೇವೆ ಮಾಡುತ್ತೇನೆ. ದುಡ್ಡು ಕಡಿಮೆ­ಯಾದರೆ ಸ್ವಂತ ವ್ಯವಹಾರ ಮಾಡುವ ನನ್ನ ಮಕ್ಕಳಿಂದ ಪಡೆದುಕೊಳ್ಳುತ್ತೇನೆ.

ನನ್ನನ್ನು ಕೆಣಿಕಿದರೆ ಸುಮ್ಮನೆ ಬಿಡುವುದಿಲ್ಲ!

ನನ್ನ ಚಾರಿತ್ರ್ಯ ಹಾಳು ಮಾಡಿ ನನ್ನನ್ನು ಕೆಣಕಿದರೆ ನಾನು ಬಿಡುವುದಿಲ್ಲ ಎನ್ನುವ ರೈ, ನನಗೆ ಸ್ವಾಭಿಮಾನ ಇದೆ, ಅದಕ್ಕೆ ಕುಂದು ಮಾಡುವಂತಹ ಘಟನೆಗಳು ನಡೆದರೆ ಸುಮ್ಮನೆ ಕೂರುವುದಿಲ್ಲ. ಕ್ರೈಂ ಅನ್ನುವ ಶಬ್ದವೂ ನನ್ನ ಸುತ್ತ ಈಗ ಸುಳಿಯುವುದಿಲ್ಲ. ಎಲ್ಲ ಕೇಸ್‌ಗಳಲ್ಲಿ ಬಿಡುಗಡೆಯಾಗಿ ಜೈಲಿನಿಂದ ಹೊರಗೆ ಬಂದನಂತರ ನನ್ನ ಜತೆಗಾರರನ್ನ ಕೂರಿಸಿಕೊಂಡು ಒಂದು ಮೀಟಿಂಗ್ ಮಾಡಿದೆ. ಅಂಡರ್ ವರ್ಲ್ಡ್‌ನಲ್ಲಿ ಮುಂದುವರಿಯುವುದಾ – ಬಿಟ್ಟುಬಿಡುವುದಾ ಎಂಬ ಬಗ್ಗೆ ಚರ್ಚೆ ಮಾಡಿದೆವು. ಇದು ಸಾಕು ಅನ್ನುವ ತೀರ್ಮಾನ ಆಯಿತು. ನಾನೊಬ್ಬನೇ ಬಿಟ್ಟು ನನ್ನ ಜತೆಗಿರುವವರು ಅದರಲ್ಲೇ ಮುಂದುವರಿದರೆ ಸರಿಯಲ್ಲ. ಅದಕ್ಕೇ, ಎಲ್ಲರೂ ಪಾತಕ ಲೋಕದಿಂದ ಹೊರಗೆ ಬಂದು ನ್ಯಾಯಯುತ ವ್ಯವಹಾರ ಮಾಡುವುದು ಅನ್ನೋ ತೀರ್ಮಾನವಾಯಿತು.

ಆವತ್ತು ತೆಗೆದುಕೊಂಡ ತೀರ್ಮಾನಕ್ಕೆ ಬದ್ಧರಾಗಿ ಆವತ್ತಿನಿಂದ ಇವತ್ತಿನ ತನಕ ನಾನು – ನನ್ನ ಜತೆಗಾರರು ಇದ್ದೇವೆ.ಎಲ್ಲವನ್ನೂ ಬಿಟ್ಟಿದ್ದೇವೆ ಅಂತ ಹೇಳಿ ಒಳಗಿಂದೊಳಗೇ ರೌಡಿಸಂ ಮಾಡುವ ಅನೇಕರಿದ್ದಾರೆ. ನಾವು ಹಾಗಲ್ಲ. ನಾವು ಇನ್ನೊಬ್ಬರ ತಂಟೆಗೆ ಕೈ ಹಾಕುವುದಿಲ್ಲ. ನ್ಯಾಯಯುತವಾಗಿ ರೈತರಿಂದ ಜಮೀನು ಖರೀದಿಸುತ್ತೇವೆ, ವ್ಯವಹಾರ ಮಾಡುತ್ತೇವೆ. ಯಾವುದಾದ್ರೂ ಲಿಟಿಗೇಷನ್ ಪ್ರಾಪರ್ಟಿಗೆ ಕೈ ಹಾಕಿದ್ರೆ ಯರಾದ್ರೂ ನಮ್ಮ ತಂಟೆಗೆ ಬರ್ತಾರೆ. ಆದರೆ ನಾವು ಆ ರೀತಿಯ ವ್ಯವಹಾರ ಮಾಡುತ್ತಿಲ್ಲ.

                                                                       –ಶಶಿವರ್ಣಂ!

ಸರ್ಕಾರದ ಮೇಲೆ ಬೇಸರ, ಎನ್ಐಎ ಕಡೆ ಮುಖ..!

144558ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದ್ದ ಭ್ರಷ್ಟಾಚಾರ ಪ್ರಕರಣ ವನ್ನು ಬಯಲಿಗೆಳೆದಿದ್ದ ದಕ್ಷ ಅಧಿಕಾರಿ ಸೋನಿಯಾ ನಾರಂಗ್ ಎನ್ಐಎ ಎಸ್ಪಿಯಾಗಿ ವರ್ಗ ವಾಗಿದ್ದಾರೆ. ಅವರ ವರ್ಗಾ ವಣೆಯ ಹಿನ್ನೆಲೆ ಇದೀಗ ಬಹಿರಂಗವಾಗಿದೆ. ಹಾಗೆಯೇ, ಕರ್ನಾಟಕ ಕೇಡರ್ನಿಂದ ಆಯ್ಕೆಯಾಗಿ ಎನ್ಐಎನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವ ಮೊದಲ ಐಪಿಎಸ್ ಅಧಿಕಾರಿ ಎಂಬ ಖ್ಯಾತಿಗೆ ನಾರಂಗ್ ಪಾತ್ರರಾಗಿದ್ದಾರೆ.

ಲೋಕಾಯುಕ್ತ ಎಸ್ಪಿಯಾಗಿದ್ದ ನಾರಂಗ್ ಅವರನ್ನು ಡಿಐಜಿ ಹುದ್ದೆಗೆ ಬಡ್ತಿ ನೀಡಿ ಸಿಐಡಿಗೆ ಸರಕಾರ ವರ್ಗಾವಣೆ ಮಾಡಿ ಆದೇಶ ಮಾಡಿತ್ತು. ಬೆಂಗಳೂರು ನಗರ ಜಂಟಿ ಆಯುಕ್ತ ಹುದ್ದೆಯನ್ನು ನೀಡಬೇಕಿದ್ದ ಸರಕಾರ ಆ ಹುದ್ದೆಯನ್ನೇ ಇಲ್ಲವಾಗಿಸಿ ಸಿಐ ಡಿಗೆ ಸೋನಿಯಾ ಅವರನ್ನು ವರ್ಗಾವಣೆ ಮಾಡಿತ್ತು. ಆಗ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದ ಸೋನಿಯಾ ನಾರಂಗ್, ‘ತಾವು ಕೇಂದ್ರ ಸೇವೆಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವುದಾಗಿ’ ಹೇಳಿ ಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಕೇಂದ್ರ ಸರಕಾರ ಎನ್ ಐಎ ಎಸ್ಪಿಯಾಗಿ ಕಾರ್ಯ ನಿರ್ವಹಿಸುವಂತೆ ಆಹ್ವಾನಿಸಿದೆ. ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣ ಬಯಲಿ ಗೆಳೆದ ನಂತರ ಸೋನಿಯಾ ನಾರಂಗ್ ಅವರ ಬಗ್ಗೆ ಸರಕಾರಕ್ಕೆ ಅತೃಪ್ತಿಯಿತ್ತು. ಭಾಸ್ಕರ್ ರಾವ್ ಅವರನ್ನು ಪದಚ್ಯುತಿಗೊಳಿಸಲು ಮೀನಾಮೇಷ ಎಣಿಸಿದ್ದರಿಂದ ರಾಷ್ಟ್ರ ಮಟ್ಟದಲ್ಲಿ ಸರಕಾರ ತೀವ್ರ ಮುಖಭಂಗಕ್ಕೊಳಗಾಗಿತ್ತು. ಎಸ್ಪಿ ದರ್ಜೆಯಿಂದ ಡಿಐಜಿ ಹುದ್ದೆಗೆ ಬಡ್ತಿ ನೀಡಿದಾಗ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಬೋರ್ಡ್, ಸೋನಿಯಾ ಅವರಿಗೆ ನಗರ ಅಪರಾಧ ವಿಭಾಗದ ಜಂಟಿ ಆಯುಕ್ತ ಹುದ್ದೆ ನೀಡುವಂತೆ ಶಿ-ರಸು ಮಾಡಿತ್ತು. ಆದರೆ ಸರಕಾರ ಅವರನ್ನು ಸಿಐಡಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ನಗರ ಜಂಟಿ ಆಯುಕ್ತರ ಹುದ್ದೆಯನ್ನೇ ತೆಗೆದುಹಾಕಿತ್ತು. ಪೊಲೀಸ್ ವಲಯದಲ್ಲಿದ್ದ ಐಪಿಎಸ್ ಲಾಬಿಯೂ ಸೋನಿಯಾ ವಿರುದ್ಧವಾಗಿಯೇ ಕೆಲಸ ಮಾಡುತ್ತಿತ್ತು. ರಾಜ್ಯ ಸರಕಾರದ ಒತ್ತಡಕ್ಕೆ ಮಣಿಯದ ಸೋನಿಯಾರಿಗೆ ಕೆಲ ರಾಜಕಾರಣಿಗಳಿಗೆ ಅಪ್ರಿಯರಾಗಿದ್ದರು. ಈ ಎಲ್ಲ ಬೆಳವಣಿಗೆಗಳಿಂದ ಸೋನಿಯಾ ನಾರಂಗ್ ಕೇಂದ್ರ ಸೇವೆಗೆ ತೆರಳಲು ನಿರ್ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಸೋನಿಯಾ ನಾರಂಗ್ ಆಯ್ಕೆಯಾಗಿದ್ದು ಹೇಗೆ?

ನಾನಾ ರಾಜ್ಯಗಳಿಂದ ಎನ್ಐಎಯಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಕೆಲಸ ಮಾಡುವ ಆಸಕ್ತಿ ಯಿದ್ದವರು ಕೇಂದ್ರ ಗೃಹ ಇಲಾಖೆಗೆ ಅರ್ಜಿ ಸಲ್ಲಿಸುತ್ತಾರೆ. ಹೀಗೆ ಬಂದ ಅರ್ಜಿಗಳನ್ನು ಅಧಿಕಾರಿಗಳ ಸೇವಾ ದಕ್ಷತೆ ಮತ್ತು ಪ್ರಾಮಾ ಣಿಕತೆ ಆಧಾರದ ಮೇಲೆ ಆಯ್ಕೆ ಮಾಡಲಾ ಗುತ್ತದೆ. 2002 ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಸೋನಿಯಾ ನಾರಂಗ್ ವಿರುದ್ಧ ಇದುವರೆಗೂ ಭ್ರಷ್ಟಾಚಾರದ ಆರೋಪ ಬಂದಿಲ್ಲ. ದಾವಣಗೆರೆ ಮತ್ತು ಬೆಳಗಾವಿ ಜಿಲ್ಲೆಯ ಎಸ್ಪಿಯಾಗಿ ಮತ್ತು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ಸೋನಿಯಾ ಉತ್ತಮ ಹೆಸರು ಗಳಿಸಿದ್ದರು. ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದ್ದ ಭ್ರಷ್ಟಾ ಚಾರ ಪ್ರಕರಣವನ್ನು ಬಯಲಿಗೆಳೆದು ದೇಶಾ ದ್ಯಂತ ಸುದ್ದಿಯಾಗಿದ್ದರು. ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು ಪ್ರಕರಣದ ತನಿಖೆ ನಡೆಸುತ್ತಿರುವ ಸೋನಿಯಾ ಪ್ರಭಾವಿ ಗಳ ಒತ್ತಡಕ್ಕೆ ಮಣಿಯದೇ ತನಿಖೆ ನಡೆಸಿ ಹನ್ನೊಂದು ಮಂದಿಯನ್ನು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಸೋನಿಯಾ ಅವರ ಅರ್ಜಿಯನ್ನು ಮಾನ್ಯ ಮಾಡಿ ಎನ್ಐಎಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದೆ.

ಸಿಎಂಗೆ ಸವಾಲ್ ಹಾಕಿದ್ದ ಸೋನಿಯಾ

ಸೋನಿಯಾ ನಾರಂಗ್ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಸಿಎಂ ಹೇಳಿಕೆ ನೀಡಿದ ಮರುದಿನವೇ ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ಬಿಡು ಗಡೆ ಮಾಡಿದ್ದ ಸೋನಿಯಾ ನಾರಂಗ್‘ ನಾನು ಮುಖ್ಯಮಂತ್ರಿಯವರ ಹೇಳಿಕೆ ಯನ್ನು ಖಂಡಿಸುತ್ತೇನೆ. ಅಕ್ರಮ ಗಣಿಗಾರಿಕೆ ನಡೆದ ಜಿಲ್ಲೆಗಳಾದ ತುಮಕೂರು, ಚಿತ್ರ ದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ನಾನು ಕಾರ್ಯ ನಿರ್ವಹಿಸಿಯೇ ಇಲ್ಲ. ನನ್ನ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಸಿಎಂ ಈ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ನಾನು ಅಕ್ರಮದಲ್ಲಿ ಭಾಗಿಯಾಗಿದ್ದರೆ ಸಾಬೀತುಪಡಿಸಿ’ ಎಂದು ಮುಖ್ಯಮಂತ್ರಿಗೇ ಸವಾಲ್ ಹಾಕಿದ್ದರು.

ಶಶಿವರ್ಣಂ

ಉತ್ತರಾಖಂಡದ ಡಿಜಿಪಿಯಾಗಿ ಕನ್ನಡಿಗ ನೇಮಕ

M.A.-Ganapathyಉತ್ತರಾಖಂಡ ರಾಜ್ಯದ ಒಂಭತ್ತನೇ ಡಿಜಿಪಿಯಾಗಿ ಕರ್ನಾಟಕದ ಎಂ.ಎ ಗಣಪತಿ ನೇಮಕವಾಗಿದ್ದಾರೆ. ಆ ಮೂಲಕ ಕನ್ನಡಿಗ ಅಧಿಕಾರಿಯೊಬ್ಬರು ಬೇರೆ ರಾಜ್ಯವೊಂದರಲ್ಲಿ ಉನ್ನತ ಹುದ್ದೆಗೇರಿದ ಖ್ಯಾತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

1986 ನೇ ವರ್ಷದ ಉತ್ತರ ಪ್ರದೇಶ/ಉತ್ತರಾಖಂಡ ಐಪಿಎಸ್ ಕೇಡರ್‌ನ ಅಧಿಕಾರಿಯಾಗಿರುವ ಎಂ.ಎ. ಗಣಪತಿ ಉತ್ತರಾಖಂಡದ ಒಂಬತ್ತನೇ ಡಿಜಿಪಿಯಾಗಿ ನೇಮಕವಾಗಿದ್ದಾರೆ.

ಡಿಜಿಪಿಯಾಗಿದ್ದ ಪಿ.ಎಸ್. ಸಿದು ಅವರು ಏ.28ಕ್ಕೆ ನಿವೃತ್ತಿಯಾಗಿರುವುದರಿಂದ ಗಣಪತಿ ಇಂದಿನಿಂದ ಡಿಜಿಪಿಯಾಗಿ ಅಧಿಕಾರ ನಡೆಸಲಿದ್ದಾರೆ.ಪ್ರಸ್ತುತ ರಾಷ್ಟ್ರಪತಿ ಆಳ್ವಿಕೆ ಇರುವ ಉತ್ತರಾಖಂಡಕ್ಕೆ ಡಿಜಿಪಿಯನ್ನು ನೇಮಕಗೊಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. 2010ರಿಂದ ಕೇಂದ್ರ ಗೃಹ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ್ದ ಗಣಪತಿ ಅವರನ್ನು ಏ.14 ರಂದು ರಾಜ್ಯ ಸೇವೆಗೆ ಮರಳಿದ್ದರು. ಗೃಹ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂ.ಎ. ಗಣಪತಿ ಗೃಹ ಸಚಿವ ರಾಜ್‌ನಾಥ್ ಸಿಂಗ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು.ಕೊಡಗಿನ ವಿರಾಜಪೇಟೆ ತಾಲೂಕಿನ ಈಚೂರಿನ ಮನೆಯಪಂಡ ಅಪ್ಪಯ್ಯ ಮತ್ತು ಪ್ರೇಮಲತಾ ದಂಪತಿಯ ಮಗನಾದ ಗಣಪತಿ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣವನ್ನು ಪೊನ್ನಂಪೇಟೆಯಲ್ಲಿ ಪೂರ್ಣಗೊಳಿಸಿದ್ದರು. ಆ ನಂತರ ತಮಿಳುನಾಡಿನ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪದವಿ ಪಡೆದಿದ್ದ ಅವರು, ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು. 1986 ರಲ್ಲಿ ಉತ್ತರ ಪ್ರದೇಶ ಕೇಡರ್‌ನಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು.

ಉತ್ತರಾಖಂಡದ ಡಿಜಿಪಿಯಾಗಿ ನೇಮಕವಾಗಿರುವ ಎಂ.ಎ. ಗಣಪತಿ ‘ವಿಶ್ವವಾಣಿ’ಯೊಂದಿಗೆ ಮಾತನಾಡಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.  

ಕನ್ನಡಿಗ ಅಧಿಕಾರಿಯಾಗಿ ಉನ್ನತ ಹುದ್ದೆಗೇರಿದ್ದೀರಿ, ನಿಮಗೆ ಅಭಿನಂದನೆಗಳು

ಕನ್ನಡಿಗನನ್ನು ನೆನಪು ಮಾಡಿಕೊಂಡಿದ್ದಕ್ಕೆ ‘ವಿಶ್ವವಾಣಿ’ಗೆ ಧನ್ಯವಾದಗಳು.

ಉತ್ತರಾಖಂಡ ಡಿಜಿಪಿಯಾಗಿದ್ದೀರಾ. ಹೊಸ ಜವಾಬ್ದಾರಿಯ ಹೊರುವ ಸಂದರ್ಭದಲ್ಲಿ ಏನು ಹೇಳ ಬಯಸುತ್ತೀರಿ?

ಕರ್ನಾಟಕದವನಾಗಿ ಬೇರೆ ರಾಜ್ಯವನ್ನುಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಕರ್ನಾಟಕದಲ್ಲಿ ಹುಟ್ಟಿ ಕಳೆದ ಇಪ್ಪತ್ತು ವರ್ಷಗಳಿಂದ ನನ್ನ ರಾಜ್ಯದಿಂದ ದೂರವಿದ್ದು, ಇಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆ. ಉತ್ತರಾಖಂಡ ಮತ್ತು ಕರ್ನಾಟಕಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕ ವಿಭಿನ್ನ ರಾಜ್ಯ. ಅಲ್ಲಿ ದೇಶದ ಎಲ್ಲ ರಾಜ್ಯಗಳ, ಎಲ್ಲ ಭಾಷೆಯ ಜನರು ವಾಸ ಮಾಡುತ್ತಾರೆ. ಇದರಿಂದ ನನಗೆ ಉತ್ತರಾಖಂಡದಲ್ಲಿ ಉತ್ತಮ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಕರ್ನಾಟಕದೊಂದಿಗಿನ ನಿಮ್ಮ ನೆನಪುಗಳ ಬಗ್ಗೆ ಹೇಳಿ?

ನಾನು ನನ್ನ ರಾಜ್ಯವನ್ನು ಪ್ರತೀ ಕ್ಷಣವೂ ಪ್ರೀತಿಸುತ್ತೇನೆ. ಕರ್ನಾಟಕ ನನ್ನ ಮನೆ, ನಾನು ಕೊಡಗಿನ ಪೊನ್ನಂಪೇಟೆಯಲ್ಲಿ ನನ್ನ ಶಿಕ್ಷಣವನ್ನು ಪೂರ್ಣಗೊಳಿಸಿದೆ. ಇವತ್ತಿಗೂ ನಾನು ಹುಟ್ಟಿದ ಊರು, ಓದಿದ ಶಾಲೆ ಎಲ್ಲವೂ ನನ್ನ ಜೀವನದ ಉತ್ತಮ ಕ್ಷಣಗಳು. ಆದರೆ ನನಗೆ ನನ್ನ ಊರಿನಲ್ಲಿ ಕೆಲಸ ಮಾಡಲು ಅವಕಾಶ ಸಿಗಲಿಲ್ಲ ಎಂಬ ಬೇಜಾರು ಕೂಡ ಇದೆ. ಉತ್ತರಾಖಂಡದಲ್ಲಿ ಪೊಲೀಸ್ ಅಧಿಕಾರಿಯಾಗಿ ಖುಷಿಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದೇನೆ.

ರಾಜ್ಯ ಪೊಲೀಸ್ ಮುಖ್ಯಸ್ಥರಾಗಿ ನಿಮ್ಮ ಯೋಜನೆಗಳೇನು?

ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ನಿಯಂತ್ರಣ ಮಾಡುವುದು ನನ್ನ ಮೊದಲು ಗುರಿ. ಅದಕ್ಕಾಗಿಯೇ ಕೆಲವು ಯೋಜನೆಗಳು ನನ್ನಲ್ಲಿವೆ. ಎಲ್ಲ ಅಧಿಕಾರಿಗಳನ್ನೂ ಒಟ್ಟಿಗೆ ಕರೆದುಕೊಂಡು ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸುವುದು ನನ್ನ ಗುರಿ. ಸಾರ್ವಜನಿಕರು ಪೊಲೀಸರು ಎಂದರೆ ಭಯ ಪಡುವ ವಾತಾವರಣವಿದೆ, ಆ ಅಭಿಪ್ರಾಯವನ್ನು ಬದಲಿಸಬೇಕೆಂದಿದ್ದೇನೆ.

ಆರು ವರ್ಷದ ಕೇಂದ್ರ ಸೇವೆಯ ಅನುಭವ ಹೇಗಿತ್ತು?

2010ರಿಂದ ನಾನು ಕೇಂದ್ರ ಗೃಹ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ್ದೇನೆ. ಕೇಂದ್ರ ಸೇವೆಯಲ್ಲಿ ಕೆಲಸ ಮಾಡುವುದು ಐಪಿಎಸ್ ಅಧಿಕಾರಿಗೆ ಸವಾಲಿನ ಸಂಗತಿ. ಆರಂಭದಲ್ಲಿ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ನಾನು ಕೆಲಸ ಮಾಡಿದೆ. ನಂತರ ಆಂತರಿಕ ಭದ್ರತಾ ವಿಭಾಗ, ಗೃಹ ಇಲಾಖೆಯ ವಕ್ತಾರ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ್ದೇನೆ. ಅಲ್ಲಿನ ಅನುಭವಗಳನ್ನು ಬಳಸಿಕೊಂಡು ಉತ್ತರಾಖಂಡದಲ್ಲಿ ಪೊಲೀಸ್ ಇಲಾಖೆಯನ್ನು ಮುನ್ನಡೆಸುತ್ತೇನೆ.

ಆಂತರಿಕ ಭದ್ರತಾ ವಿಭಾಗದಲ್ಲಿ ನಿಮಗಿದ್ದ ಸವಾಲುಗಳೇನು?

ಕೇಂದ್ರ ಗೃಹ ಇಲಾಖೆಯಲ್ಲಿ ಆಂತರಿಕ ಭದ್ರತಾ ವಿಭಾಗ ಅತ್ಯಂತ ಜವಾಬ್ದಾರಿಯುತ ವಿಭಾಗ. ನಮ್ಮ ದೇಶಕ್ಕೆ ಉಗ್ರರ ಭೀತಿ ಇರುವುದರಿಂದ ಯಾವಾಗಲೂ ಎಚ್ಚರದಿಂದಲೇ ಕಾರ್ಯನಿರ್ವಹಿಸಬೇಕು. ಭಯೋತ್ಪಾದಕ ದಾಳಿ, ನಕ್ಸಲ್ ಚಟುವಟಿಕೆಗಳ ಬಗ್ಗೆ ಯಾವಾಗಲೂ ನಿಗಾ ಇಡಬೇಕು. ಈ ವಿಭಾಗದಲ್ಲಿ ಕೆಲಸ ಮಾಡುವುದರಿಂದ ಪೊಲೀಸ್ ಅಧಿಕಾರಿಗಳಿಗೆ ಉತ್ತಮ ಜ್ಞಾನ ಮತ್ತು ಅವಕಾಶಗಳು ಸಿಗುತ್ತವೆ. ಅಲ್ಲಿ ನಾನು ಮಾಡಿದ ಉತ್ತಮ ಕೆಲಸಗಳೇ ಇಂದು ಡಿಜಿಪಿ ಹುದ್ದೆಯವರೆಗೆ ಕರೆದುಕೊಂಡು ಬಂದಿದೆ.

ಉತ್ತರಾಖಂಡ ಅಂದರೆ ಪ್ರವಾಸಿಗರಿಗೆ ಪ್ರಿಯವಾದ ರಾಜ್ಯ, ಆ ನಿಟ್ಟಿನಲ್ಲಿ ನಿಮ್ಮ ಯೋಜನೆಗಳೇನು?

ಈ ರಾಜ್ಯವನ್ನು ಪ್ರವಾಸಿ ಸ್ನೇಹಿ ರಾಜ್ಯವನ್ನಾಗಿಸುವ ಉದ್ದೇಶ ಪೊಲೀಸ್ ಇಲಾಖೆಗೆ ಇದೆ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳೊಂದಿಗೆ ಚರ್ಚಿಸಿ ನೂತನ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿದ್ದೇನೆ. ರಾಜ್ಯದಲ್ಲಿ ಗುಡ್ಡ ಕುಸಿಯುವುದು, ಕಾಡುಗಳಿಗೆ ಬೆಂಕಿ ಬೀಳುವುದು ಸಾಮಾನ್ಯ. ಇದರಿಂದ ಪ್ರವಾಸಿಗರು ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಈ ನಿಟ್ಟಿನಲ್ಲಿ ಅರಣ್ಯ ವಿಭಾಗ ಮತ್ತು ಅಗ್ನಿಶಾಮಕ ವಿಭಾದಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಸಿಬ್ಬಂದಿಗೆ ತುರ್ತು ಪರಿಸ್ಥಿತಿಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಅಗತ್ಯ ತರಬೇತಿ ನೀಡಲಾಗುವುದು. ಪ್ರವಾಸಿಗರು ಉತ್ತರಾಖಂಡಕ್ಕೆ ಒಂದು ಬಾರಿ ಬಂದರೆ ನಗುಮೊಗದೊಂದಿಗೆ ಹಿಂತಿರುಗಬೇಕು. ಅದಕ್ಕೆ ಪೂರಕವಾಗಿ ಪೊಲೀಸ್ ಇಲಾಖೆ ಕೆಲಸ ಮಾಡಲಿದೆ.

ನಿವೃತ್ತಿಯ ನಂತರ ರಾಜ್ಯಕ್ಕೆ ಮರಳುತ್ತೀರಾ?

ನನಗಿನ್ನೂ ಎಂಟು ವರ್ಷಗಳ ಸೇವಾವಧಿಯಿದೆ. ನಿವೃತ್ತಿಯಾದ ನಂತರ ನನ್ನ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ಉಳಿದುಕೊಳ್ಳುವ ಯೋಜನೆಯಿದೆ. ದೀರ್ಘಕಾಲ ಹುಟ್ಟೂರಿನಿಂದ ದೂರ ಇದ್ದೇನೆ. ಈ ಕಾರಣದಿಂದ ನಿವೃತ್ತಿಯ ದಿನಗಳನ್ನು ನನ್ನ ತವರು ರಾಜ್ಯದಲ್ಲೇ ಕಳೆಯುತ್ತೇನೆ.

ಉತ್ತರಾಖಂಡಕ್ಕೆ ಕನ್ನಡಿಗ ಡಿಜಿಪಿ

 • ಕೊಡಗಿನ ವಿರಾಜ್‌ಪೇಟೆ ತಾಲೂಕಿನ ಈಚೂರಿನವರು ಪೊನ್ನಂಪೇಟೆಯಲ್ಲಿ ಪ್ರಾಥಮಿಕ ಶಿಕ್ಷಣ
 • ತಮಿಳುನಾಡು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪದವಿ
 • ದೆಹಲಿಯ ಜೆಎನ್‌ಯು ವಿವಿಯಲ್ಲಿ ಉನ್ನತ ಶಿಕ್ಷಣ 1986 ನೇ ಕೇಡರ್‌ನ ಅಧಿಕಾರಿ
 • 2000ದಲ್ಲಿ ನೂತನ ರಾಜ್ಯ ರಚನೆ ಯಾದಾಗ ಉತ್ತರಾಖಂಡ ಕೇಡರ್‌ಗೆ ವರ್ಗಾವಣೆ
 • ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಣೆ
 • 2010ರಿಂದ ಕೇಂದ್ರಸೇವೆಯಲ್ಲಿ ಕೆಲಸ
 • ಏ.13ರಂದು ರಾಜ್ಯ ಸೇವೆಗೆ ನಿಯೋಜನೆ
 • ಇಂದಿನಿಂದ ಡಿಜಿಪಿಯಾಗಿ ಕಾರ್ಯ ನಿರ್ವಹಣೆ
                                                                             –ಶಶಿವರ್ಣಂ
%d bloggers like this: