ಪ್ರಕೃತಿ ಮಡಿಲಿನ ವಿಸ್ಮಯ-ಯಾಣ
ಆಗಷ್ಟ್ 8, 2011 ನಿಮ್ಮ ಟಿಪ್ಪಣಿ ಬರೆಯಿರಿ
ಅವು ದಟ್ಟ ಕಾಡಿನ ನಡುವೆ ಅರಳಿ ನಿಂತಿರುವ ಕಪ್ಪನೆಯ ಹೂವುಗಳು. ಪಷ್ಚಿಮ ಘಟ್ಟ ಮತ್ತು ಸಹ್ಯಾದ್ರಿಯ ಮಡಿಲಲ್ಲಿರುವ ಪ್ರಕೃತಿ ನಿಮರ್ಿತ ವಿಸ್ಮಯ. ಏನ್ ಆ ವಿಸ್ಮಯ ಅಂನ್ಕೊಂಡ್ರಾ ಅದುವೇ ಯಾಣ. ಸೌಂದರ್ಯ ಪ್ರಿಯರಿಗೆ, ಯಾತ್ರಾಥರ್ಿಗಳಿಗೆ ಮತ್ತು ಸಾಹಸಿಗರಿಗೆ ದಿ ಬೆಸ್ಟ್ ಸ್ಪಾಟ್. ವಿಶಿಷ್ಟ ಕಲ್ಲಿನಿಂದ ನಿಮರ್ಿತವಾಗಿಆಗಿರುವ ಆಕರ್ಷಕ ಕಲಾಕೃತಿ.
ಪಶ್ಚಿಮಘಟ್ಟ ಅರಣ್ಯ ತನ್ನ ಮಡಿಲಲ್ಲಿ ಹಲವು ವಿಸ್ಮಯಗಳನ್ನ,ವಿಶೇಷಗಳನ್ನ, ಅಚ್ಚರಿಗಳನ್ನ ಬಚ್ಚಿಟ್ಟುಕೊಂಡಿದೆ ಅದ್ರಲ್ಲಿ ಯಾಣ ಸಹ ಒಂದು
ಯಾಣವನ್ನು ನೋಡಬೇಕೆಂದ್ರೆ ಉತ್ತರ ಕನ್ನಡ ಜಿಲ್ಲೆಯ ಕುಮುಟಾದಿಂದ ಶಿರಸಿಗೆ ಹೋಗುವ ರಸ್ತೆಯಲ್ಲಿ 15 ಕಿಲೋ ಮೀಟರ್ ಸಾಗಿ ಎಡಕ್ಕೆ ತಿರುಗಿದ್ರೆ ಕಾಡಿನ ಮದ್ಯೆ ರಸ್ತೆಯಲ್ಲಿ15 ಕಿಲೋ ಮೀಟರ್ ಹೋಗ್ಬೇಕು. ನಂತರ ಕಾಡಿನ ರಸ್ತೆಯಲ್ಲಿ ನೆಡೆಯುವ ಅನಭವ. ಅಕ್ಕ ಪಕ್ಕದಲ್ಲಿ ಹರಿಯುವ ಸಣ್ಣ ಸಣ್ಣ ಜರಿಗಳು ನನಗಾಗಿಯೇ ಹರಿಯುತ್ತಿವೆಯೇನೊ ಅನ್ನಿಸಿದ್ದು ಮಾತ್ರ ಸುಳ್ಳಲ್ಲ. ಈ ಮೊದಲು ಯಾಣಕ್ಕೆ ಬರಬೇಕೆಂದ್ರೆ 15 ಕಿಲೋಮೀಟರ್ ನೆಡೆದೇ ಬರ್ಬೇಕಿತ್ತು. ಆದ್ರೆ ಇತ್ತೀಚೆಗೆ ರಸ್ತೆ ಆಗಿರೊದ್ರಿಂದ ಯಾಣವನ್ನು ನೋಡಲು ಬರುವವರಿಗೆ ಅಂತ ಅಂತ ತಷ್ಟವೇನೂ ಇಲ್ಲ.
ಕಾಡಿನ ಏಕಾಂತದಲ್ಲಿ ಒಂದು ಕಿಲೋಮೋಟರ್ ನೆಡೆದ್ರೆ ಯಾಣದ ಮೋಹಕತೆಯ ಮೋದಲ ದೃಷ್ಯ ಕಣ್ಣಿಗೆ ಬೀಳುತ್ತೆ. ಅದುವೇ ಮೋಹಿನಿ ಶಿಖರ. ಇದು ಪ್ರಕೃತಿ ಚಿತ್ರಿಸಿದ ಅದ್ಬುತ ಕೆತ್ತನೆ. ಇದರ ಎತ್ತರ 90 ಮೀಟರ್ ಗಳು.
ಮೋಹಿನಿಯ ಮೋಹಕ ಸೌಂದರ್ಯವನ್ನು ಕಣ್ತುಂಬಿಕೊಂಡು ಮುಂದೆ ಹೆಜ್ಜೆ ಹಾಕಿದ್ರೆ ಮತ್ತೊಂದು ಅದ್ಬುತ ಕಣ್ಣಿಗೆ ಬೀಳುತ್ತೆ. ಅದು ಭೈರವೇಶ್ವರ ಶಿಖರ ದಟ್ಟ ಅರಣ್ಯದ ನಡುವೆ ಮೈ ಚಾಚಿ ನಿಂತಿರುವ ಈ ಶಿಖರ ಅದೆಷ್ಟು ಶತಮಾನಗಳನ್ನು ಕಂಡಿದೆಯೊ ಗೋತ್ತಿಲ್ಲ. ಇದರ ಎತ್ತರ ಬರೊಬ್ಬರಿ 120 ಮೀಟರ್ ಗಳು.
ಕಪ್ಪು ಕಲ್ಲುಗಳಿಂದ ನೈಸಗರ್ಿಕವಾಗಿ ಮಾರ್ಪಟ್ಟಿರುವ ಈ ಶಿಖರಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ನೋಡಿದ ಮೇಲೆ ಒಂದಷ್ಟು ಪೊಟೊ ತೆಗೆಸಿಕೊಂಡದ್ದಾಯ್ತು. ಇಲ್ಲಿ ಎಚ್ಚರವಾಗಿರ್ಬೇಕು ಅತಿಯಾದ ಶಬ್ದ ಮಾಡಿದ್ರೆ ಹೆಜ್ಜೇನುಗಳು ನಿಮಗೆ ” ಬುದ್ದಿ”ಕಲಿಸಿಬಿಡುತ್ತವೆ.
ಈ ಶಿಖರದ ಬಳಿ ಭೈರವೇಶ್ವರನ ದೇವಾಲಯವಿದೆ. ಒಳಗೆ ನೆಡೆದು ಗುಹೆಯಲ್ಲಿನ ಭೈರವೇಶ್ವರನಿಗೆ ನಮಿಸಿದ್ದಾಯ್ತು. ನಂತರ ನಾನು ಈ ಶಿಖರದ ಒಳಗಿರುವ
ಗುಹೆಗಳಲ್ಲಿ ಒಂದು ಪ್ರದಕ್ಷಿಣೆ ಹಾಕೋಣ ಅಂತ ಹೋದೆ. ಒಳಗೆ ವಿಶಾಲವಾದ ಜಾಗ, ಕಲ್ಲುಗಳ ತುದಿಯಿಂದ ಇಣುಕುತ್ತಿರುವ ಸೋರ್ಯನ ಬೆಳಕು, ಇಕ್ಕಟ್ಟಾದ ಜಾಗಗಳಲ್ಲೇ ಸಾಗ್ಬೇಕು. ಅದರ ಅನುಭವವೇ ರೋಚಕ.
ಈ ಶಿಖರಗಳು ಜ್ವಾಲಾಮುಖಿಯಿಂದ ನಿಮರ್ಾಣವಾಗಿವೆ ಅಂತ ವಿಜ್ಙಾನ ಹೇಳುತ್ತೆ. ವಿಷ್ಣು ಮೋಹಿನಿಯ ಅವತಾರ ತಾಳಿ ಬಸ್ಮಾಸುರನನ್ನು ಜ್ವಾಲೆಯಿಂದ ಕೊಂದಾಗ ಆ ಬೆಂಕಿಯಿಚಿದ ಈ ಶಿಖರಗಳು ಸೃಷ್ಠಿಯಾದ್ವು ಅಂತ ಪುರಾಣ ಹೇಳುತ್ತೆ. ವಿಜ್ಙಾನ, ಪುರಾಣ ಏನೇ ಹೇಳ್ಳಿ, ಆದ್ರೆ ಈ ಸ್ಥಳ ಪ್ರವಾಸಿಗರಿಗೆ ವಿಶಿಷ್ಟ ಅನುಭವ ಮತ್ತು ಕುಷಿ ನೀಡೋದಂತೂ ಸತ್ಯ. ರೊಕ್ಕ ಇದ್ದವ ಗೊಕರ್ಣಗೆ ಹೋಗ್ತಾನೆ ಸೊಕ್ಕಿದ್ದವ ಯಾಣಗೆ ಬರ್ತಾನೆ ಅನ್ನೊ ಗಾದೆ ಇದೆ ಇಲ್ಲಿ. ನಾನ್ ಇಲ್ಲಿಗೆ ಬಂದಿದಿನಿ ಅಂದ್ರೆ ಆ ಸೊಕ್ಕು ನನಗಿದೆ ಅಂತಾನೆ ಅರ್ಥ.