ಚರ್ಚ್ ಸ್ಫೋಟ: 16 ವರ್ಷದ ನಂತರ ಬಲೆಗೆ ಬಿದ್ದ ಉಗ್ರ..!
ಆಗಷ್ಟ್ 11, 2016 ನಿಮ್ಮ ಟಿಪ್ಪಣಿ ಬರೆಯಿರಿ
ರಾಜ್ಯದಲ್ಲಿ ನಡೆದಿದ್ದ ಮೊದಲ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರನೊಬ್ಬ ಹದಿನಾರು ವರ್ಷಗಳ ನಂತರ ಸಿಐಡಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾಾನೆ.
ಹದಿನಾರು ವರ್ಷಗಳ ಹಿಂದೆ ರಾಜ್ಯದ ಮೂರು ಕಡೆ ನಡೆದಿದ್ದ ಸರಣಿ ಚರ್ಚ್ ಸ್ಫೋಟ ಪ್ರಕರಣಕ್ಕೆೆ ಸಂಬಂಧಿಸಿದಂತೆ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಶೇಖ್ ಅಮೀರ್ ಆಲಿಯನ್ನು ಸಿಐಡಿ ಅಧಿಕಾರಿಗಳು ಹೈದರಾಬಾದ್ನಲ್ಲಿ ಸೋಮವಾರ ಬಂಧಿಸಿದ್ದಾರೆ. ಆಂಧ್ರದ ನೆಲಗೊಂಡ ಮೂಲದವನಾದ ಈತ ನಗರದ ಜೆಜೆ ನಗರದ ಸೈಂಟ್ ಪೀಟರ್ಸ್ ಹಾಗೂ ಸೈಂಟ್ ಪಾಲ್ ಚರ್ಚ್ನಲ್ಲಿ ನಡೆದಿದ್ದ ಸ್ಫೋಟದಲ್ಲಿ ಭಾಗಿಯಾಗಿದ್ದ. ಈತನ ಬಂಧನಕ್ಕೆೆ ನಗರದ ಒಂದನೇ ಎಸಿಎಂಎಂ ನ್ಯಾಯಾಲಯ ಏ.8 ರಂದು ವಾರಂಟ್ ಜಾರಿಗೊಳಿಸಿತ್ತು.
2000ನೆಯ ಇಸವಿಯ ಜೂನ್-ಜುಲೈ ಅವಧಿಯಲ್ಲಿ ಬೆಂಗಳೂರಿನ ಜೆಜೆ ನಗರದ ಸೇಂಟ್ ಪೀಟರ್ಸ್ ಹಾಗೂ ಸೇಂಟ್ ಪಾಲ್ ಚರ್ಚ್, ಕಲಬುರ್ಗಿ ಜಿಲ್ಲೆಯ ವಾಡಿ ಮತ್ತು ಹುಬ್ಬಳ್ಳಿಯ ಕೇಶವಾಪುರದ ಚರ್ಚ್ಗಳಲ್ಲಿ ಬಾಂಬ್ ಸ್ಫೋಟ ನಡೆಸಲಾಗಿತ್ತು. ಹೈದರಾಬಾದ್ನ ದೀನ್ದಾರ್ ಅಂಜುಮನ್ ಸಂಘಟನೆ ಈ ಕೃತ್ಯ ನಡೆಸಿತ್ತು. ಈ ಬಗ್ಗೆೆ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದವು, ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಈ ಪ್ರಕರಣದಲ್ಲಿ ಇದುವರೆಗೆ 29 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು ಈಗಾಗಲೇ 11 ಆರೋಪಿಗಳಿಗೆ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿದೆ ಮತ್ತು 12 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ವಿಶೇಷ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಈಗ ಬಂಧಿಸಲಾಗಿರುವ ಆರೋಪಿ ಜೆ ಜೆ ನಗರದ ಸೈಂಟ್ ಪೀಟರ್ ಮತ್ತು ಸೈಂಟ್ ಪಾಲ್ಸ್ ಚರ್ಚ್ನಲ್ಲಿ ಬಾಂಬ್ ಇಟ್ಟಿದ್ದ.
ಸ್ಫೋಟದಿಂದ ಸತ್ತಿದ್ದರು!
ಹೈದರಾಬಾದ್ನಿಂದ ಬೆಂಗಳೂರಿಗೆ ಬಂದಿದ್ದ ಸೈಯದ್ ಜೆಹಬ್ ಎಂಬಾತ ದ್ವಿಚಕ್ರ ವಾಹನದಲ್ಲಿ ನಗರದ ಹಲವೆಡೆ ಸುತ್ತಾಡಿ ಬಾಂಬ್ ಇಡಲು ಸೂಕ್ತವಾದ ಚರ್ಚ್ಗಳನ್ನು ಗುರುತಿಸಿದ್ದ. ಆತ ಗುರುತಿಸಿದ ಚರ್ಚ್ಗಳಿಗೆ ಬಾಂಬ್ ಅಳವಡಿಸಲು ಕಾರಿನಲ್ಲಿ ಹೊಗುತ್ತಿದ್ದಾಗ ಮಾಗಡಿ ರಸ್ತೆೆಯ ಮಿನರ್ವ ಮಿಲ್ ಬಳಿ ಕಾರಿನಲ್ಲಿದ್ದ ಬಾಂಬ್ ಏಕಾಏಕಿ ಸ್ಫೋಟಗೊಂಡಿತ್ತು. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಉಗ್ರರಾದ ಜಾಕೀರ್ ಮತ್ತು ಸಿದ್ಧಿಕಿ ಎಂಬುವರು ಮೃತಪಟ್ಟು ಮತ್ತೊೊಬ್ಬ ಆರೊಪಿ ಇಬ್ರಾಹಿಂ ಗಾಯಗೊಂಡಿದ್ದ.
ಉಗ್ರರ ಪಾಪಕೂಪ ಆಶ್ರಮ!
ಹೈದರಾಬಾದ್ನಲ್ಲಿ ವಾಸವಿದ್ದ ಹಜರತ್ ಮೌಲಾನ ಸಿದ್ದಕಿ ಎಂಬ ವಿದ್ವಾಾಂಸ ಸರ್ವಧರ್ಮಗಳನ್ನೂ ಒಂದು ಮಾಡುವ ಉದ್ದೇಶ ಇಟ್ಟುಕೊಂಡು ಎಲ್ಲ ಧರ್ಮಗ್ರಂಥಗಳ ಅಭ್ಯಾಸ ನಡೆಸಿದ್ದ. ಕೊನೆಗೆ ಇಸ್ಲಾಾಂ ಧರ್ಮವೇ ಶ್ರೇಷ್ಠ ಎಂದು ತನ್ನದೇ ವಾದ ಮುಂದಿಟ್ಟಿದ್ದ. ತನ್ನನ್ನು ತಾನು ಹಿಂದೂ ದೇವರು ಚೆನ್ನಬಸವೇಶ್ವರನ ಅವತಾರ ಪುರುಷ ಎಂದು ಕರೆದುಕೊಳ್ಳುತ್ತಿದ್ದ. ಈತ 1924ರಲ್ಲಿ ಹೈದರಾಬಾದ್ನಲ್ಲಿ ‘ದೀನ್ದಾರ್ ಚನ್ನಬಸವೇಶ್ವರ ಅಂಜುಮನ್’ ಎಂಬ ಆಶ್ರಮ ಸ್ಥಾಪಿಸಿದ. ಇಲ್ಲಿ ಹಿಂದೂ-ಮುಸ್ಲಿಿಂ ಎರಡೂ ಧರ್ಮ ಬೋಧನೆ ಮಾಡಲಾಗುತ್ತಿತ್ತು. 1952ರಲ್ಲಿ ಹಜರತ್ ಮೌಲಾನ ಸಿದ್ದಕಿ ಮೃತಪಟ್ಟ ನಂತರ ಆತನ ಮಗ ಜಿಯಾ ಉಲ್ ಹಸನ್ ಪಾಕಿಸ್ತಾನದ ಮಾರ್ದಾನ್ಗೆ ವಲಸೆ ಹೋಗಿದ್ದ. ಈತ ತನ್ನ ನಾಲ್ವರು ಮಕ್ಕಳೊಂದಿಗೆ ಪಾಕಿಸ್ತಾನದಲ್ಲಿ ಜಮಾತ್ ಹಿಜ್ಬುಲ್ ಮುಜಾಹಿದೀನ್ ಎಂಬ ಉಗ್ರ ಸಂಘಟನೆಯ ಸಂಪರ್ಕಕ್ಕೆೆ ಬಂದರು. ಆ ನಂತರ ಕಾಶ್ಮೀರದ ಪ್ರತ್ಯೇಕವಾದಿಗಳಿಗೆ ಬೆಂಬಲ ನೀಡುತ್ತಿದ್ದರು. ತನ್ನ ತಂದೆಯ ಜನ್ಮಶತಮಾನೋತ್ಸವದ ಕಾರ್ಯಕ್ರಮಕ್ಕೆೆ ಹೈದರಾಬಾದ್ಗೆ ಬಂದಿದ್ದ ಜಿಯಾ ಉಲ್ ಅಸನ್ ಸರಣೀ ಬಾಂಬ್ ಸ್ಫೋೋಟಕ್ಕೆೆ ಸಂಚು ರೂಪಿಸಿದ್ದ. ಚರ್ಚ್ಗಳಲ್ಲಿ ಬಾಂಬ್ ಸ್ಫೋಟಿಸಿ ಆ ಕೆಲಸವನ್ನು ಹಿಂದೂ ಸಂಘಟನೆಗಳ ತಲೆಗೆ ಕಟ್ಟಿ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲು ಈ ಸ್ಫೋಟದ ಸಂಚು ರೂಪಿಸಲಾಗಿತ್ತು. ಭಾರತದಲ್ಲಿ ಇಸ್ಲಾಮೀಕರಣ ಮಾಡುವ ಉದ್ದೇಶವನ್ನಿಟ್ಟುಕೊಂಡು ಈ ಸ್ಫೋಟ ನಡೆಸಲಾಗಿತ್ತು. ಜಿಯಾ ಉಲ್ ಅಸನ್ ಮತ್ತು ಆತನ ನಾಲ್ವರು ಮಕ್ಕಳು ಈಗ ಪಾಕ್ನಲ್ಲಿ ತಲೆಮರೆಸಿಕೊಂಡಿದ್ದಾರೆ.
ಎಲ್ಲೆೆಲ್ಲಿ ಸ್ಫೋಟ?
* ಜೂ.8, 2000 ಕಲಬುರ್ಗಿ ಜಿಲ್ಲೆೆಯ ವಾಡಿಯ ಸೈಂಟ್ ಆನ್ಸ್ ಚರ್ಚ್
* ಜು.8, 2000 ಹುಬ್ಬಳ್ಳಿಯ ಸೈಂಟ್ ಜಾನ್ ಲೂಥರ್ನ್ ಚರ್ಚ್
* ಜು.9, 2000 ಬೆಂಗಳೂರಿನ ಜೆಜೆ ನಗರದ ಸೈಂಟ್ ಪೀಟರ್ಸ್ ಹಾಗೂ ಸೈಂಟ್ ಪಾಲ್ ಚರ್ಚ್
* ಜು.9, 2000 ಮಾಗಡಿ ರಸ್ತೆೆಯ ಚರ್ಚ್ಗೆ ಬಾಂಬ್ ಇಡಲು ಹೋಗುತ್ತಿದ್ದ ಕಾರು ಸ್ಫೋಟ, ಇಬ್ಬರು ಉಗ್ರರ ಸಾವು