ಬೆಂಗಳೂರು ಸರಣಿ ಸ್ಫೋಟದ ಆರೋಪಿ ಪಾಕ್ನಲ್ಲಿ..!
ಮೇ 31, 2016 ನಿಮ್ಮ ಟಿಪ್ಪಣಿ ಬರೆಯಿರಿ
ಬೆಂಗಳೂರು ಸರಣಿ ಸ್ಫೋಟ ನಡೆದು ಎಂಟು ವರ್ಷಗಳ ನಂತರ ಪ್ರಮುಖ ಸಂಚುಕೋರ ಪಾಕಿಸ್ತಾನದ ಪೇಶಾವರ್ನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಎನ್ಐಎ ಅಧಿಕಾರಿಗಳು ದೃಢಪಡಿಸಿದ್ದಾರೆ.
ಕೇರಳ ಮೂಲದ ಲಷ್ಕರೆ ತಯ್ಬಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಮಹಮದ್ ಸಬೀರ್ 2008ರ ನವೆಂಬರ್ನಲ್ಲಿ ನಕಲಿ ಪಾಸ್ಪೋರ್ಟ್ ಬಳಿಸಿಕೊಂಡು ಮುಂಬೈ ಮಾರ್ಗವಾಗಿ ಪಾಕಿಸ್ತಾನ ತಲುಪಿ ದ್ದಾನೆ. ಕಳೆದ ತಿಂಗಳು ದುಬೈ ಪೊಲೀಸರಿಂದ ಭಾರತಕ್ಕೆ ಗಡೀಪಾರಾಗಿದ್ದ ಸಬೀರ್ನ ಸಹಚರ ಕೆ.ಎ. ಅನೂಪ್ನ ವಿಚಾರಣೆ ವೇಳೆ ಈ ಮಾಹಿತಿ ಹೊರಬಿದ್ದಿದೆ. ಸದ್ಯ ಅನೂಪ್ ಕೇರಳದ ಎರ್ನಾಕುಲಮ್ನ ಜೈಲಿನಲ್ಲಿದ್ದಾನೆ.
2008 ರ ಜು.25 ರಂದು ನಗರದ ಏಳು ಕಡೆ ಒಂಬತ್ತು ಬಾಂಬ್ಗಳು ಸರಣಿ ಸ್ಫೋಟಗೊಂಡಿದ್ದವು. ಘಟನೆಯಲ್ಲಿ ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿ ದ್ದರು. 2005ರಲ್ಲಿ ಐಐಎಸ್ಸಿ ದಾಳಿ ನಂತರ ನಡೆದ ಎರಡನೇ ಭಯೋತ್ಪಾದಕ ಕೃತ್ಯ ಇದಾಗಿತ್ತು. ಕೇರಳದ ಸಿಮಿ ಉಗ್ರ ಸಂಘಟನೆ ಅಧ್ಯಕ್ಷ ಸಬೀರ್ ಮೇಲೆ ಬೆಂಗಳೂರು ಸರಣಿ ಸ್ಫೋಟ, ಉಗ್ರ ಸಂಘಟನೆಗಳಿಗೆ ಯುವಕರ ನೇಮಕ ಮತ್ತು ಕೇರಳದ ಕೊಚ್ಚಿಯಲ್ಲಿ ಬಸ್ ಸುಟ್ಟುಹಾಕಿದ್ದು ಸೇರಿ ಹಲವು ಪ್ರಕರಣಗಳಿವೆ.
ಅನೂಪ್ನ ವಿಚಾರಣೆ ವೇಳೆ ಇಬ್ಬರ ನಡುವೆ ನಡೆದ ದೂರವಾಣಿ ಸಂಭಾಷಣೆಗಳ ಪರಿಶೀಲನೆಯಿಂದ ಆತ ಪಾಕಿಸ್ತಾನದ ಪೇಶಾ ವರ್ನಲ್ಲಿ ತಲೆಮರೆಸಿಕೊಂಡಿದ್ದಾನೆ. ಸದ್ಯ ಕೇರಳದಲ್ಲಿರುವ ಸಬೀರ್ನ ಪತ್ನಿಯನ್ನು ಹೇಗಾದರೂ ಮಾಡಿ ಪಾಕಿಸ್ತಾನಕ್ಕೆ ಕರೆಸಿ ಕೊಳ್ಳುವ ಉದ್ದೇಶದಿಂದ ಆತ ಅನೂಪ್ನೊಂದಿಗೆ ಈ ಬಗ್ಗೆ ಹಲವು ಬಾರಿ ಚರ್ಚೆ ನಡೆಸಿದ್ದ ಎಂದು ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2008ರ ಲಷ್ಕರೆ ತಯ್ಬಾ ಸಂಘಟನೆ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಮಹಮದ್ ಸಬೀರ್ ಉಗ್ರ ಸಂಘಟನೆಗ ಳೊಂದಿಗೆ ಕೈಜೋಡಿಸಿ ಯುವಕರ ಸೆಳೆಯು ತ್ತಿದ್ದ. ಇದೇ ರೀತಿ ಐವರು ಕೇರಳದ ಯುವ ಕರ ತರಬೇತಿಗಾಗಿ ಕಾಶ್ಮೀರದಲ್ಲಿನ ಲಷ್ಕರೆ ತಯ್ಬಾ ಉಗ್ರರ ಬಳಿಗೆ ಕಳಿಸಿ ಕೊಟ್ಟಿದ್ದ. ಆದರೆ ಭದ್ರತಾಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಮೃತಪಟ್ಟು ಅಬ್ದುಲ್ ಜಬ್ಬಾರ್ ಎಂಬಾತ ಬದುಕುಳಿದಿದ್ದ. ನಂತರ ಕೇರಳ ಪೊಲೀಸರು ಬಂಧಿಸಿದ್ದರು.
ಬೆಂಗಳೂರಿನಲ್ಲಿ ಸರಣಿ ಸ್ಫೋಟ ಮತ್ತು ಉಗ್ರ ಸಂಘಟನೆಗಳಿಗೆ ಯುವಕರನ್ನು ಸೆಳೆದ ಆರೋಪದ ಮೇಲೆ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿದ್ದ ಸಬೀರ್ ನಕಲಿ ಪಾಸ್ಪೋರ್ಟ್ ಬಳಿಸಿಕೊಂಡು 2008ರ ನ.21 ರಂದು ಪಾಕಿಸ್ತಾನಕ್ಕೆ ಹಾರಿದ್ದ. ಕೇರಳದ ಶಮೀರ್ ಆಲಿಕುಟ್ಟಿ ಎಂಬಾತನ ಹೆಸರಲ್ಲಿದ್ದ ಪಾಸ್ಪೋರ್ಟ್ ನಕಲಿ ಮಾಡಿ ಸಬೀರ್ ತನಿಖಾಧಿಕಾರಿಗಳ ದಾರಿ ತಪ್ಪಿಸಿದ್ದ. ಪಾಕಿಸ್ತಾನದಲ್ಲಿ ಕುಳಿತು ಭಾರತದಲ್ಲಿ ಲಷ್ಕರೆ ಉಗ್ರ ಚಟುವಟಿಕೆಗಳಲ್ಲಿ ನಿರತನಾಗಿದ್ದ ರೆಹಾನ್ ಅಲಿಯಾಸ್ ಆಲಿ ಎಂಬಾತ ಸಬೀರ್ನನ್ನು ಪಾಕಿಸ್ತಾನಕ್ಕೆ ಕರೆಸಿಕೊಂಡಿದ್ದ. ರೆಹಾನ್ ಅಲಿಯಾಸ್ ವಾಲಿ 2008ರ ಮುಂಬೈ ದಾಳಿಯಲ್ಲೂ ಭಾಗಿಯಾಗಿದ್ದ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಮದನಿ ಬೆಂಬಲ ಕೋರಿದ್ದ ಎಲ್ಇಟಿ: ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಲಷ್ಕರೆ ತಯ್ಬಾ ಉಗ್ರರು 2005ರಲ್ಲಿ ಐಐಎಸ್ಸಿ ದಾಳಿ ನಡೆಸಿದ್ದರು. ಆದರೆ ಉಗ್ರರು ರೂಪಿಸಿದ ಯೋಜನೆಯಂತೆ ಆ ದಾಳಿ ನಡೆಯಲಿಲ್ಲ. ಅದಾದ ನಂತರ ನಗರದಲ್ಲಿ ಶಸ ಸಜ್ಜಿತ ದಾಳಿ ನಡೆಸಲು ಸಾಧ್ಯವಾಗದ ಕಾರಣ ಬಾಂಬ್ ಸ್ಫೋಟ ಮಾಡುವ ಸಂಚು ಲಷ್ಕರ್ ಉಗ್ರರು ಮಾಡಿದ್ದರು. ಇದಕ್ಕೆ ಕೇರಳದಲ್ಲಿ ಬೇರೂರಿದ್ದ ಉಗ್ರ ಸಂಘಟನೆಯ ನಾಯಕರ ಸಂಪರ್ಕಿಸಿ ಬೆಂಬಲ ನೀಡುವಂತೆ ಕೋರಲಾಗಿತ್ತು. 1998ರಲ್ಲಿ ಬಿಜೆಪಿ ನಾಯಕ ಎಲ್.ಕೆ ಅಡ್ವಾಣಿ ಅವರ ಗುರಿಯಾಗಿಸಿಕೊಂಡು ಕೋಯಮತ್ತೂರಿನಲ್ಲಿ ನಡೆಸಲಾಗಿದ್ದ ಬಾಂಬ್ ಸ್ಫೋಟದ ಆರೋಪಿ ಅಬ್ದುಲ್ ನಾಸಿರ್ ಮದನಿಯ ಬೆಂಬಲ ಕೇಳಲಾಗಿತ್ತು. ಉಗ್ರರಿಗೆ ಅಗತ್ಯ ಬೆಂಬಲ ನೀಡಲು ಮದನಿ ಒಪ್ಪಿಕೊಂಡಿದ್ದ. ಕೇರಳದ ಕಲ್ಲು ಕ್ವಾರಿಗಳಿಂದ ಅಮೋನಿಯಂ ನೈಟ್ರೇಟ್ ಸಂಗ್ರಹಿಸಿ ಬಾಂಬ್ ತಯಾರಿಸಿ ನಂತರ ದುಷ್ಕೃತ್ಯ ನಡೆಸಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮದನಿ ಸೇರಿದಂತೆ ಮೂವತ್ತಕ್ಕೂ ಹೆಚ್ಚುಮಂದಿಯ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
–ಶಶಿವರ್ಣಂ!