ರಾಹುಲ್ ಗಾಂಧಿ ಘರ್ ವಾಪಸಿಗೆ ಕಾಂಗ್ರೆಸಿಗರ ಸಂಭ್ರಮ..!!

image

ರಾಹುಲ್ ಘರ್ ವಾಪಸಿ..!!!

ಕಳೆದ ಐವತ್ತಾರು ದಿನಗಳಿಂದ ನಾಪತ್ತೆಯಾಗಿದ್ದ ರಾಹುಲ್ ಗಾಂಧಿ ತಮ್ಮ ಸುದೀರ್ಘ ರಜೆ ಮುಗಿಸಿ ಮರಳಿದ್ದಾರೆ. ರಾಹುಲ್ ಘರ್ ವಾಪಸಿ ಗೆ ಕಾಂಗ್ರೆಸ್ಸಿಗರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಎರೆಡು ತಿಂಗಳ ಕಾಲ ನಾಪತ್ತೆಯಾಗಿದ್ದ ರಾಹುಲ್ ಅದೇನು ಮಹಾನ್ ಸಾಧನೆ ಮಾಡಿದ್ದಾರೆ ಅಂತ ಈ ಕಾಂಗ್ರೆಸ್ಸಿಗರು ಸಂಭ್ರಮಿಸುತ್ತಿದ್ದಾರೋ ಅರ್ಥವಾಗುತ್ತಿಲ್ಲ. ಯುದ್ದ ಗೆದ್ದ ಸೈನಿಕರನ್ನ, ಆಟ ಗೆದ್ದ ಸಾಧಕರನ್ನ, ಪ್ರಶಸ್ತಿ ಪಡೆದ ಕಲಾವಿಧರನ್ನ ಸಂಭ್ರಮಿಸಿ ಸ್ವಾಗತಿಸೋದರಲ್ಲಿ ಅರ್ಥವಿದೆ. ಆದ್ರೆ ಇಡೀ ದೇಶ ಬಜೆಟ್ ಅಧಿವೇಶನಕ್ಕೆ ಸಿದ್ದವಾಗುತ್ತಿದ್ದಾಗ ಇದ್ದಕ್ಕಿದ್ದಂತೆ ನಾಪತ್ತೆಯಾದ ರಾಹುಲ್ ಗಾಂಧಿಯನ್ನ ಇಷ್ಟು ಸಂಭ್ರಮಿಸಿಕೊಂಡು ಸ್ವಾಗತಿಸಬೇಕಾ…? ಹಾಗಿದ್ರೆ ಎರೆಡು ತಿಂಗಳ ಅವದಿಯಲ್ಲಿ ರಾಹುಲ್ ಗಾಂಧಿ ಸಾಧಿಸಿದ್ದಾದ್ರೂ ಏನು..? ಯಾವ ಕಾಂಗ್ರೆಸಿಗನ ಬಳಿಯೂ ಇದಕ್ಕೆ ಉತ್ತರವಿಲ್ಲ. ದೇಶದ ಇತಿಹಾಸದಲ್ಲಿ ಯಾವುದೇ ಒಂದು ಪಕ್ಷದ ನಾಯಕ ಇಷ್ಟು ದಿನ ನಾಪತ್ತೆಯಾಗಿದ್ದ ಉದಾಹರಣೆಗಳಿಲ್ಲ. ಕಾಂಗ್ರೆಸ್ ನ ಪ್ರಮುಖರಿಗೇ ರಾಹುಲ್ ಗಾಂಧಿ ಎಲ್ಲಿದ್ದರು ಅನ್ನೋದು ಗೊತ್ತಿಲ್ಲ. ರಾಹುಲ್ ಗಾಂಧಿ ಇವತ್ತು ಬರ್ತಾರೆ, ನಾಳೆ ಬರ್ತಾರೆ ಅಂತ ಒಂದಷ್ಟು ದಿನ ಹೇಳಿಕೊಂಡು ಕಾಲತಳ್ಳಿದ ಕಾಂಗ್ರೆಸಿಗರಿಗೂ ರಾಹುಲ್ ಗಾಂಧಿ ಹೋಗಿದ್ದಾದ್ರೂ ಎಲ್ಲಿಗೆ ಅನ್ನೋ ಕುತೂಹಲ ಹುಟ್ಟಿದ್ದು ಹೌದು. ಆದ್ರೆ ಭಟ್ಟಂಗಿ ಕಾಂಗ್ರೆಸ್ಸಿಗರ ಥಿಯರಿಗಳಿಗೇನೂ ಕಡಿಮೆಯಿಲ್ಲ. ರಾಹುಲ್ ಗಾಂಧಿ ಪಕ್ಷವನ್ನ ಸಮರ್ಥವಾಗಿ ಮುನ್ನೆಡೆಸುವ ದೃಷ್ಠಿಯಿಂದ ಚಿಂತನ ಮಂಥನಕ್ಕೆ ಹೋಗಿದ್ದಾರೆ ಅಂತ ಕಥೆ ಕಟ್ಟಲಾಯಿತು. ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಮುಖಭಂಗವಾದಾಗ ನಡೆಯದ ಚಿಂತನ ಮಂಥನ ಈಗ ಮಾಡುತ್ತಿದ್ದಾರಂತೆ ರಾಹುಲ್ ಗಾಂಧಿ. ಹಾಗಂತ ಕಾಂಗ್ರೆಸ್ಸಿಗರು ಪುಂಗಿ ಊದುತ್ತಿದ್ದಾರೆ. ಯಾವೊಬ್ಬ ಕಾಂಗ್ರೆಸ್ಸಿಗನಿಗೂ ರಾಹುಲ್ ಗಾಂಧಿ ಕಳೆದ ಎರೆಡು ತಿಂಗಳಿಂದ ಎಲ್ಲಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ. ಎಲ್ಲ ವಿರೋಧ ಪಕ್ಷಗಳ ಮುಖಂಡರು ಬಜೆಟ್ ಅಧಿವೇಷನದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡೋಕೆ ಯೋಜನೆ ರೂಪಿಸ್ತಾಯಿದ್ರೆ ಕಾಂಗ್ರೆಸ್ ನ ಯುವರಾಜ ಮಾತ್ರ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಅದೂ ಅಧಿವೇಷನದಲ್ಲಿ ಭೂ ಸ್ವಾಧೀನ ವಿಧೇಯಕದ ತಿದ್ದುಪಡಿಯಂತಹ ಪ್ರಮುಖ ವಿಚಾರದ ಬಗ್ಗೆ ಚರ್ಚೆಯಾಗುತ್ತಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಸಂಸತ್ ಗೆ ಬಂಕ್ ಹಾಕಿದ್ರು. ರಾಹುಲ್ ಗಾಂಧಿ ರಜೆಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆದೇ ರಜೆ ಪಡೆದಿದ್ದಾರೆ ಅಂತ ಕಾಂಗ್ರೆಸಿಗರು ನಾಚಿಕೆಯಿಲ್ಲದೆ ಹೇಳಿಕೊಂಡು ಓಡಾಡಿದರು. ಅಮ್ಮ ಮಗನ ಪಾರ್ಟಿಯಲ್ಲಿ ರಜೆ ಕೊಡುವವರು ಯಾರು, ತಗೊಳ್ಳೋರು ಯಾರು..? ರಾಹುಲ್ ಗಾಂಧಿ ಎರೆಡು ತಿಂಗಳು ಎಲ್ಲಿದ್ದರು ಅನ್ನೋ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಆದ್ರೆ ಈಗ ರಾಹುಲ್ ವಾಪಸ್ ಬಂದ ತಕ್ಷಣ ಕಾಂಗ್ರೆಸಿಗರು ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಪಾರಧರ್ಶಕತೆಯ ಬಗ್ಗೆ ಪುಂಕಾನುಪುಂಕವಾಗಿ ಭಾಷಣ ಮಾಡುವ ರಾಹುಲ್ ಗಾಂಧಿಗೆ ಎರೆಡು ತಿಂಗಳ ಕಾಲ ತಾನು ಎಲ್ಲಿದ್ದೆ ಅನ್ನೋದನ್ನ ಜನರ ಮುಂದೆ ಹೇಳುವ ದೈರ್ಯವಿಲ್ಲ. ಅಷ್ಟು ರಹಸ್ಯವಾಗಿ ಎರೆಡು ತಿಂಗಳ ಕಾಲ ಇರಬೇಕಾದ ಅವಶ್ಯಕತೆಯಾದ್ರೂ ಇದೆಯಾ… ಒಬ್ಬ ಜನನಾಯಕ ಇರಬೇಕಾದ ರೀತಿಯಾ ಇದೆ. ಕಾಂಗ್ರೆಸ್ಸಿಗರು ಇದು ರಾಹುಲ್ ದ ವಯಕ್ತಿಕ ವಿಚಾರ, ಪ್ರೈವಸಿಯ ವಿಚಾರ ಅಂತಾರೆ. ಪ್ರೈವಸಿಗೂ, ಸೀಕ್ರೆಸಿಗೂ ವ್ಯತ್ಯಾಸ ಇದೆ. ರಾಹುಲ್ ಗಾಂಧಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರೆ ಯಾರೂ ಈ ಪ್ರಶ್ನೆಗಳನ್ನ ಕೇಳುತ್ತಿರಲಿಲ್ಲ. ರಾಹುಲ್ ಗಾಂಧಿ ಈ ದೇಶದ ಸಂಸದ, ಅತ್ಯಂತ ಹಳೆಯ ಮತ್ತು ದೊಡ್ಡ ಪಕ್ಷ ಕಾಂಗ್ರೆಸ್ ನ ಉಪಾಧ್ಯಕ್ಷ. ಆಯ್ಕೆ ಮಾಡಿದ ಜನರಿಗೆ ತಮ್ಮ ಸಂಸದ ಎರೆಡು ತಿಂಗಳ ಕಾಲ ಎಲ್ಲಿ ನಾಪತ್ರೆಯಾಗಿದ್ದ ಅಂತ ಕೇಳುವ ಅಧಿಕಾರ ಇದೆ. ಜನರಿಗೆ ಉತ್ತರ ಹೇಳಬೇಕಾದ ಜವಾಬ್ದಾರಿಯೂ ರಾಹುಲ್ ಗಿದೆ. ಅಮೇತಿಯಲ್ಲಿ ರಾಹುಲ್ ರನ್ನ ಹುಡುಕಿಕೊಡಿ ಅಂತ ಪೋಸ್ಟರ್ ಗಳನ್ನ ಹಾಕುವಷ್ಟರ ಮಟ್ಟಿಗೆ ರಾಹುಲ್ ಅಲ್ಲಿನ ಜನರಿಂದ ದೂರ. ರಾಜಕೀಯವಾಗಿ ಒಬ್ಬ ವಿಪಲ ವ್ಯಕ್ತಿಯನ್ನ ಬಲವಂತವಾಗಿ ನಾಯಕನನ್ನಾಗಿ ಮಾಡಲು ಹೊರಟಿದೆ ಕಾಂಗ್ರೆಸ್. ಇದಕ್ಕೆ ಕಾಂಗ್ರೆಸ್ ಗಾಂಧಿ ಕುಟುಂಬದ ನಿಷ್ಟರು , ಭಟ್ಟಂಗಿಗಳು ಉಘೇ ಉಘೇ ಎನ್ನುತ್ತಿದ್ದಾರೆ. ರಾಹುಲ್ ಮರಳಿ ಬಂದ ತಕ್ಚಣವೇ ಅಧ್ಯಕ್ಷ ಪಟ್ಟ ಕಟ್ಟಬೇಕು ಅಂತಿದ್ದಾರೆ ದಿಗ್ವಿಜಯ್ ಸಿಂಗ್. ಇಷ್ಟುಕ್ಕೂ ರಾಹುಲ್ ಗಾಂಧಿಯ ಇಷ್ಟುದಿನದ ರಾಜಕೀಯ ಜೀವನದಲ್ಲಿ ಸಾಧಿಸಿದ್ದಾದ್ರೂ ಏನು ಅಂತ ಕೇಳಿದ್ರೆ ದಿಗ್ವಿಜಯ್ ಸಿಂಗ್ ಗೆ ಮಾತ್ರವಲ್ಲ ಸ್ವತಃ ರಾಹುಲ್ ಗಾಂಧಿಗೂ ತಾನು ಮಾಡಿದ್ದೇನು ಅನ್ನೋದು ಗೊತ್ತಿಲ್ಲ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನ ಒಂದು ರಾಜ್ಯದ ಮುಖ್ಯಮಂತ್ರಿ ಬೇಟಿಯಾಗಬೇಕು ಅಂದ್ರೆ ತಿಂಗಳಿಗೆ ಮೊದಲೇ ದಿನಾಂಕ ನಿಗದಿಯಾಗಬೇಕು. ಅಷ್ಟರ ಮಟ್ಟಿಗೆ ಅವರು ಎಲ್ಲರಿಂದ ದೂರ. ಇತ್ತೀಚೆಗೆ ದೆಹಲಿಗೆ ಹೋಗಿದ್ದ ಸಿದ್ದರಾಮಯ್ಯ ಸೋನಿಯಾ ಬೇಟಿಗಾಗಿ ದಿನಗಟ್ಟಲೇ ಕಾದಿದ್ದರು. ಒಬ್ವ ಮುಖ್ಯಮಂತ್ರಿಯ ಸ್ಥಿತಿಯೇ ಹೀಗಿರುವಾಗ ಸಾಮಾನ್ಯಜನ  ಇಂತವರಿಂತ ಏನನ್ನ ತಾನೆ ನಿರೀಕ್ಷೆ ಮಾಡೋಕೆ ಸಾಧ್ಯ. ಎಲ್ಲ ರಾಜಕೀಯ ನಾಯಕರೂ ಕೂಡ ಮಾಧ್ಯಮಗಳಿಗೆ ಲಭ್ಯರಿರ್ತಾರೆ. ಪ್ರಮುಖ ವಿಚಾರಗಳ, ಬೆಳವಣಿಗೆಗಳ ಬಗ್ಗೆ ಪ್ರತಿಕ್ರಯಿಸ್ತಾರೆ,  ಆದ್ರೆ ರಾಹುಲ್ ಗಾಂಧಿ ಮಾತ್ರ ಎಲ್ಲರಿಂದ ದೂರ ದೂರ. ಅಟ್ ಲೀಸ್ಟ್ ಎಲ್ಲ ರಾಜಕೀಯ ಮುಖಂಡರು ಕೂಡ ಟ್ವಿಟ್ಟರ್, ಪೇಸ್ ಬುಕ್  ಮೂಲಕ ಸಾಮಾನ್ಯ ಜನರಿಗೆ ಸಿಕ್ತಾರೆ. ಆದ್ರೆ ರಾಹುಲ್ ಗಾಂಧಿ ಇಲ್ಲೂ ನಾಪತ್ತೆ. ಈ ದೇಶದ ಪ್ರಧಾನಿ, ರಾಷ್ಟ್ರಪತಿ ಸಾಮಾಜಿಕ ಜಾಲತಾಣದ ಮೂಲಕ ಜನರೊಂದಿಗೆ ಸಂಪರ್ಕ ಇಟ್ಟುಕೊಳ್ಳೋಕೆ ಬಯಸ್ತಾರೆ. ಆದ್ರೆ ರಾಹುಲ್ ಗೆ ಮಾತ್ರ ಇದ್ಯಾವುದರ ಅಗತ್ಯವೂ ಇಲ್ಲ.ವಿಶ್ವದ ದೊಡ್ಡಣ್ಣ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮ ಟ್ವಿಟ್ಟರ್ ಮೂಲಕ ಜನರೊಂದಿಗೆ ಸಂಪರ್ಕದಲ್ಲಿದ್ದಾರೆ. ಆದ್ರೆ ರಾಹುಲ್ ಗಾಂಧಿ ಮಾತ್ರ ಇದೆಲ್ಲಕ್ಕೂ ಅಪವಾದ. ಯಾಕಂದ್ರೆ ಆತ ಕಾಂಗ್ರೆಸ್ ನ ಯುವರಾಜ. ಇಂತ ಒಬ್ಬ ವಿಪಲ ನಾಯಕನಿಂದ ಕಾಂಗ್ರೆಸ್ ಪಕ್ಷವಾಗಲೀ, ಈ ದೇಶವಾಗಲೀ ಏನನ್ನ ತಾನೆ ನಿರೀಕ್ಷೆ ಮಾಡಲು ಸಾಧ್ಯ….

%d bloggers like this: