ಭ್ರಷ್ಟ ವ್ಯವಸ್ಥೆಗೆ ಬಲಿಯಾಯ್ತು ಪ್ರಾಮಾಣಿಕತೆ…!!!

image

ಮತ್ತೆ ಹುಟ್ಟಿ ಬನ್ನಿ ಡಿಕೆ ರವಿ...

ಒಂದು ನೀಚ ಭ್ರಷ್ಟ ವ್ಯವಸ್ಥೆ ಎಂತಹ ಪ್ರಾಮಾಣಿಕ, ಧಕ್ಷ ಅಧಿಕಾರಿಯ ಪ್ರಾಣವನ್ನಾದರೂ ಬಲಿ ಪಡೆಯುತ್ತೆ. ಅದಕ್ಕೆ ಮತ್ತೊಂದು ಉದಾಹರಣೆ ಡಿಕೆ ರವಿ ಅನುಮಾನಾಸ್ಪದ ಸಾವು. ಈ ಹಿಂದೆ ಇದೇ ರೀತಿ ದಕ್ಷತೆ ಮೆರೆದಿತ್ತ ಹಲವು ಅಧಿಕಾರಿಗಳು ಸಾವನ್ನಪ್ಪಿದ್ರು..
ಕರ್ನಾಟಕದ ಮಟ್ಟಿಗೆ ಕೆಎಎಸ್ ಅಧಿಕಾರಿ ಮಹಾಂತೇಶ್ ಕೊಲೆ ಮತ್ತು ಎಸ್ ಐ ಮಲ್ಲಿಕಾರ್ಜುನ ಬಂಡೆ. ಆದ್ರೆ ಕೆಲವೇ ದಿನಗಳಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ಹೆಸರು ಪಡೆದಿದ್ದವರು ಡಿಕೆ ರವಿ. ಕೋಲಾರದಲ್ಲಿ ಡಿಸಿಯಾಗಿ ಕೆಲಸ ಮಾಡಿದ ಅಷ್ಟೂ ದಿನ ಅಲ್ಲಿನ ಮರಳು ಮಾಫಿಯಾವನ್ನ ಉಸಿರೆತ್ತದಂತೆ ಮಾಡಿದ್ದು ಡಿಕೆ ರವಿ ಹೆಗ್ಗಳಿಕೆ. ಒಬ್ಬ ಅಧಿಕಾರಿ ವರ್ಗಾವಣೆಯಾದ್ರೆ ನಮ್ಮಲ್ಲಿ ಅಷ್ಟಾಗಿ ಪ್ರತಿಭಟನೆಗಳು ಆಗೋದಿಲ್ಲ. ಆದ್ರೆ ಡಿ ಕೆ ರವಿ ವರ್ಗಾವಣೆಯಾದಾಗ ಇಡೀ ಕೋಲಾರಕ್ಕೆ ಕೋಲಾರವೇ ವಿರೋಧಿಸಿತ್ತು. ಅಷ್ಟರಮಟ್ಟಿಗೆ ಡಿಕೆ ರವಿ ಜನಸ್ನೇಹಿಯಾಗಿದ್ದರು ಮತ್ತು ಜನಪರ ಕೆಲಸ ಮಾಡ್ತಾಯಿದ್ರು. ಕೋಲಾರದಲ್ಲಿ ಮರಳುಮಾಫಿಯಾವನ್ನ ಮಟ್ಟಹಾಕಿದ ರವಿಯವರನ್ನ ಸರ್ಕಾರ ಇದ್ದಕ್ಕಿದ್ದಂತೆ ವಾಣಿಜ್ಯ ತೆರಿಗ ಇಲಾಖೆಗೆ ವರ್ಗ ಮಾಡಿತ್ತು. ಐಎಎಸ್ ಅಧಿಕಾರಿಗಳಿಗೆ ಅಷ್ಟೇನು ಪ್ರಿಯವಲ್ಲದ ಇಲಾಖೆ ಅಂದ್ರೆ ಅದು ವಾಣಿಜ್ಯ ತೆರಿಗೆ ಇಲಾಖೆ. ಆದ್ರೆ ಸರ್ಕಾರದ ನಿರ್ಧಾರವನ್ನ ತುಂಬಾ ಖುಷಿಯಿಂದಲೇ ಸ್ವಾಗತಿಸಿ ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತರಾಗಿ ಧಕ್ಷತೆಯಿಂದ ಕೆಲಸ ಮಾಡ್ತಾಯಿದ್ರು. ಕಳೆದ ನಾಲ್ಕು ತಿಂಗಳಾವದಿಯಲ್ಲಿ ಬೆಂಗಳೂರು ಲ್ಯಾಂಡ್ ಮಾಫಿಯಾ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ಮಾಡೋ ಹಲವು ಕಂಪನಿಗಳ ಮೇಲೆ ರೇಡ್ ಮಾಡಿದ್ರು. ಕೇವಲ ನಾಲ್ಕು ತಿಂಗಳಲ್ಲಿ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದ್ದ ರಿಯಲ್ ಎಸ್ಟೇಟ್ ಕಂಪನಿಗಳಿಂದ 120 ಕೋಟಿಗೂ ಅಧಿಕ ತೆರಿಗೆ ವಸೂಲಿ ಮಾಡಿದ್ರು. ಬಾಯಿಸತ್ತರವರ ಜಮೀನಿಗೆ ಬೇಲಿ ಸುತ್ತುತ್ತಿದ್ದವರನ್ನ ಅಕ್ಷರಶಃ ಎದುರುಹಾಕಿಕೊಂಡಿದ್ದರು ಡಿಕೆ ರವಿ. ಇಂತಹ ಆಧಿಕಾರಿ ಇನ್ನಷ್ಟು ವರ್ಚಗಳ ಕಾಲ ಕೆಲಸ ಮಾಡಿದ್ದಿದ್ರೆ ಭ್ರಷ್ಟರಪಾಲಿಗೆ ಸಿಂಹಸ್ವಪ್ನರಾಗಿರ್ತಿದ್ರು… ಆದ್ರೆ ಈ ಭ್ರಷ್ಟ ವ್ಯವಸ್ಥೆಗೆ ಬಲಿಯಾಗಿ ಹೋದ್ರು. ಅವರ ಸಾವು ಆತ್ಮಹತ್ಯೆಯೋ ಕೊಲೆಯೋ ಅಂತ ಈಗಲೇ ಊಹೆ ಮಾಡೋಕೆ ಸಾಧ್ಯವೇ ಇಲ್ಲ. ಒಂದು ವೇಳೆ ಅದು ಕೊಲೆಯಾಗಿದ್ರೂ ಅದು ಈ ವ್ಯವಸ್ಥೆ ಮಾಡಿದ ಕೊಲೆ. ಅದು ಆತ್ಮಹತ್ಯೆಯೇ ಆಗಿದ್ರೂ ಅದು ವ್ಯವಸ್ಥೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದ ಪ್ರಚೋದನೆ… ಡಿಕೆ ರವಿಯವರೆ ಮತ್ತೆ ಹುಟ್ಟಿ  ಬನ್ನಿ …..

About SHASHI SHEKARA
I am a simple boy with great ambitions.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: