ಒಂದು ಮಹಾನ್ ಶೂನ್ಯದ ಸ್ವಾಗತಕ್ಕೆ ಎಷ್ಟೆಲ್ಲ ಸಂಭ್ರಮ…

ಸ್ವಾತಂತ್ರಾ ನಂತರದ್ದ ಕೆಲವೇ ದಿನಗಳಲ್ಲಿ ನಡೆದು ಹೋದ ಗಾಂಧಿ ಹತ್ಯೆಯಿಂದಾಗಿ ಇಡೀ ದೇಶಕ್ಕೇ ದೇಶವೇ ಅನಾಥವಾದ ಭಾವಕ್ಕೆ ತಲುಪಿಬಿಟ್ಟಿತ್ತು. ಈಗ ಭಾರತೀಯ ಕ್ರಿಕೆಟ್ ಲೋಕದಲ್ಲಿ ಅಂತದ್ದೇ ಒಂದು ಅನಾಥ ಭಾವ ಕಾಡ್ತಾಯಿದೆ. ಬರೊಬ್ಬರಿ 24 ವರುಷಗಳ ಕಾಲ ಭಾರತೀಯ ಕ್ರಿಕೆಟ್ ಲೋಕವನ್ನ ಅಕ್ಷರಶಃ ಆಳಿದವರು ಸಚಿನ್‌ . ಈಗ ಇದ್ದಕ್ಕಿದ್ದಂತೆ ಸಚಿನ್ ಬ್ಯಾಟ್ ಕೆಳಗಿಟ್ಟು, ಪ್ಯಾಡ್ ಕಳಚಲು ಸಿದ್ದವಾಗ್ತಾಯಿರೋದು ಯಾರಿಗೂ ಸಂಭ್ರಮದ ಸುದ್ದಿಯೇನಲ್ಲ. ಅಷ್ಟು ವರುಷಗಳ ಕಾಲ ಭಾರತ ತಂಡದ ಬೆನ್ನೆಲುಬಾಗಿದ್ದ ಸಚಿನ್ ಗೆ ಉಳಿದಿರುವುದು ಇನ್ನು ಒಂದೇ ಒಂದು ಟೆಸ್ಟ್ ಮ್ಯಾಚ್ ಮಾತ್ರ. ಅದೂ ಈಗಾಗಲೇ ಆರಂಭವಾಗಿದೆ. ಸಚಿನ್ ವಿದಾಯ ಕ್ರಿಕೆಟ್ ಪ್ರೇಮಿಗಳಿಗೆ ಬೇಸರದ ವಿಷಯವಾದರೂ ಸಚಿನ್ ಬೀಳ್ಕೊಡಲು ಇಡೀ ದೇಶವೇ ಸಂಭ್ರಮದಿಂದ ಸಚಿನ್ ಜೊತೆ ನಿಂತು ಬಿಟ್ಟಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಒಬ್ಬ ಕ್ರೀಡಾಪಟುವಿಗೆ ಬೀಳ್ಗೊಡುಗೆ ಸಿಗ್ತಾಯಿರೋದು ವಿಶ್ವದಲ್ಲೇ ಸಚಿನ್ ಗೆ ಮಾತ್ರ. Imageಒಬ್ಬ ಆಟಗಾರನ ವಿದಾಯಕ್ಕೆ ಒಂದು ಸರಣಿಯನ್ನ ಅಡಿಸಲಾಗುತ್ತೆ, ಅದೂ ಹಬ್ಬದಂತೆ ಅಂದ್ರೆ ಅದು ಸಚಿನ್ ಗೆ ಮಾತ್ರ. ಅದಕ್ಕೆ ನಾನು ಹೇಳಿದ್ದು ಒಂದು ಮಹಾನ್ ಶ್ಯೂನ್ಯದ ಸ್ವಾಗತಕ್ಕೆ ಎಷ್ಟೆಲ್ಲ ಸಂಭ್ರಮ ಅಂತ. ಸಚಿನ್ ಭಾರತೀಯ ಕ್ರಿಕೆಟ್ ಅನ್ನ 24 ವರುಷಗಳಿಂದ ಆವರಿಸಿದ್ದಾರೆ. ಈಗ ಇದ್ದಕ್ಕಿದ್ದಂತೆ ಸಚಿನ್ ವಿದಾಯ ನಿಜಕ್ಕೂ ಭಾರತದ ಕ್ರಿಕೆಟ್ ಲೋಕಕ್ಕೆ ಶೂನ್ಯ ಆವರಿಸಿದಂತೆಯೇ.  ನಮ್ಮ ದೇಶದಲ್ಲಿ ಬಹುಪಾಲು ಮಂದಿ ಕ್ರಿಕೆಟ್ ಪ್ರಿಯರಾದರೂ ಕೆಲವರಿಗೆ ಕ್ರಿಕಟ್ ಇಷ್ಟದ ಆಟವೇನಲ್ಲ. ಕ್ರಿಕೆಟ್ ಇಷ್ಟಪಡದವರೂ ಕೂಡ ಸಚಿನ್ ರನ್ನ ಇಷ್ಟಪಡುತ್ತಾರೆ ಅಂದ್ರೆ ಅದಕ್ಕೆ ಕಾರಣ ಅವರು ಸಚಿನ್ ಅಷ್ಟೇ. ತಮ್ಮ ಇಡೀ 24 ವರುಷಗಳ ಕ್ರಿಕೆಟ್ ಜೀವನದಲ್ಲಿ ಸಚಿನ್ ವಿವಾದಗಳಲ್ಲಿ ಸಿಲುಕಿದ್ದಾಗಲೀ, ಕೆಟ್ಟ ವಿಷಯಗಳಲ್ಲಿ ಅವರ ಹೆಸರು ತೇಲಿ ಬದಿದ್ದಾಗಲೀ ಯಾವುದೂ ಇಲ್ಲ. ಸಚಿನ್ ಅಂದ್ರೇನೇ ಸ್ಪೂರ್ತಿ , ಸಚಿನ್ ಅಂದ್ರೇನೇ ಶಿಸ್ತು, ಸಚಿನ್ ಅಂದ್ರೇನೇ ಗೆಲುವು, ಸಚಿನ್ ಅಂದ್ರೇನೇ ಭಾರತ ತಂಡ. ಸಚಿನ್ ಕೇವಲ ಆಟಗಾರನಲ್ಲ ಬದಲಾಗಿ ಸಚಿನ್ ಈ ದೇಶದ ಕ್ರೀಡಾ ಕ್ಷೇತ್ರದ ಆಸ್ತಿ. ಅದಕ್ಕಾಗಿಯೇ ಸಚಿನ್ ಎಲ್ಲರಿಗೂ ಪ್ರಿಯವಾದ ಆಟಗಾರ ಮತ್ತು ವ್ಯಕ್ತಿ. ಈ ದೇಶದಲ್ಲಿ ಕ್ರಿಕೆಟ್ ಅನ್ನ ಯಾರಾದ್ರೂ ಅತಿ ಹೆಚ್ಚು ಪ್ರೀತಿಸ್ತಾರೆ ಅಂದ್ರೆ ಅದು ಸಚಿನ್ ಮಾತ್ರ. ಅದಕ್ಕಾಗಿಯೇ ಇಡೀ ದೇಶ ಸಚಿನ್ ರನ್ನ ಇಷ್ಟಪಡುತ್ತದೆ. ಒಬ್ಬ ಆಟಗಾರನನ್ನಾಗಲೀ, ನಟನನ್ನಾಗಲೀ ರಾಜಕಾರಣಿಯನ್ನಾಗಲೀ ಯಾರಿಗೇ ಆಗಲೀ ಕೆಲವೇ ವಷ್​ಗಳ ಮಟ್ಟಿಗೆ ಇಷ್ಟವಾಗುತ್ತಾರೆ. ದಿನಕಳೆದಂತೆ ಆ ಸ್ಥಾನಕ್ಕೆ ಬೇರೆ ಯಾರಾದ್ರೂ ಬರ್ತಾರೆ. ಆದ್ರೆ ಸಚಿನ್ ವಿಷಯದಲ್ಲಿ ಮಾತ್ರ ಈ ಮಾತು ಅಕ್ಷರಶಃ ಸುಳ್ಳು. ಯಾಕಂದ್ರೆ ಸಚಿನ್ ರನ್ನ ಈ ದೇಶ 24 ವರುಷಗಳಿಂದ ಪ್ರೀತಿಸ್ತಾಯಿದೆ, ಆರಾಧಿಸ್ತಆಯಿದೆ. ಈ ದೇಶದಲ್ಲಿ ಕ್ರಿಕೆಟ್ ಧರ್ಮ ಅಲ್ದೇ ಇದ್ರೂ ಕೂಡ ಸಚಿನ್ ಮಾತ್ರ ದೇವರು ಹೌದು. ಇಡೀ ವಿಶ್ವದಲ್ಲಿ ಕ್ರಿಕೆಟ್ ಅಡುವುದು ಮತ್ತು ಕ್ರಿಕೆಟ್ ನ ಬಗ್ಗೆ ಗೊತ್ತಿರುವುದೂ ಕೆಲವೇ ದೇಶಗಳಿಗಾದ್ರೂ ಸಚಿನ್ ಬಗ್ಗೆ ಇಡೀ ವಿಶ್ವಕ್ಕೆ ಗೊತ್ತು. ಅದು ಸಚಿನ್ ತಾಕತ್ತು ಮತ್ತು ನಮ್ಮ ಹೆಮ್ಮೆ. ಸಚಿನ್ ಕೇವಲ ದಾಖಲೆಗಳಿಗಷ್ಟೇ ಇಷ್ಟವಾಗಿದ್ರೆ ಕೇವಲ ಕ್ರಿಕೆಟ್ ಅನ್ನ ಇಷ್ಟಪಡುವವರು ಮಾತ್ರ ಸಚಿನ್ ಆಟ ನೋಡ್ತಾಯಿದ್ರು. ಆದ್ರೆ ಸಚಿನ್ ನನ್ನ ಇಡೀ ದೇಶವೇ ಆರಾಧಿಸುತ್ತಿದೆ. ಇನ್ನು ಸಚಿನ್ ನಮ್ಮ ಮುಂದೆ ಆಡುವುದು ಇನ್ನು ಕೇವಲ ನಾಲ್ಕೇ ದಿನ. ಅದೂ ಜೀವನದಲ್ಲಿ ಕೊನೇ ಸಲ ಸಚಿನ್ ರನ್ನ ಇಡೀ ದೇಶ ಬ್ಯಾಟ್ ಜೊತೆಗೇ ನೋಡುತ್ತಿದೆ. ಇಂತಹ ಸಂಭ್ರಮಗಳು ಶತಮಾನಕ್ಕೊಂದರಂತೆ ಬರುತ್ತವೆ. ಆದ್ರೆ ಈ ರೀತಿಯ ಸಂಭ್ರಮ, ಈ ರೀತಿಯ ಸ್ಮರಣೀಯ ವಿಧಾಯ ಯಾವ ಆಟಗಾರನಿಗೂ, ಇನ್ನೆಷ್ಟು ಶತಮಾನಗಳು ಕಳೆದರೂ ಬರುವುದಿಲ್ಲ…. ಥ್ಯಾಂಕ್ಯೂ ಸಚಿನ್
– ಶಶೀ….

About SHASHI SHEKARA
I am a simple boy with great ambitions.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: