ಭ್ರಷ್ಟಾಚಾರದ ವಿರುದ್ದದ ಅಣ್ಣಾ ಹಜಾರೆ ಹೋರಾಟದಲ್ಲಿ ನಾನೂ ಪಾಲ್ಗೊಂಡೆ….

 

 

 

 

 

 

 

 

ಜನ ಲೋಕಪಾಲ್ ಮಸೂದೆಗಾಗಿ ಹೋರಾಡುತ್ತಿರುವ ಅಣ್ಣ ಹಜಾರೆಗೆ ದೇಶಾಧ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಮನೆಯಲ್ಲಿ ಕೂತು ಟಿವಿ ನೋಡುತ್ತಾ ಅಣ್ಣನಿಗೆ ನನ್ನ ಬೆಂಬಲವಿದೆ ಅನ್ನೊ ಬದಲು, ಫೇಸ್ ಬುಕ್ ನಲ್ಲಿ ಎಂದು ಅರಚಿಕೊಳ್ಳುವ ಬದಲು ನಾನೂ ಹೋರಾಟದಲ್ಲಿ ಭಾಗವಹಿಸಬೇಕೆಂದು ಫ್ರೀಡಂ ಪಾಕರ್್ಗೆ ಹೋಗಿದ್ದೆ. ಭ್ರಷ್ಟಾಚಾರದ ವಿರುದ್ದ ಭಾರತ ಸಂಘಟನೆ ತುಂಬಾ ವ್ಯವಸ್ಥತವಾಗಿ ಪ್ರತಿಭಟನೆಯನ್ನು ಆಯೋಜಿಸಿದ್ದು. ಹೋರಾಟದಲ್ಲಿ ಪಾಲ್ಗೊಳ್ಳಲು ಬರುವ ಎಲ್ಲರಿಗೂ ಜನಲೋಕಪಾಲ್ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಅಲ್ಲದೇ ಈ ಹೋರಾಟಕ್ಕೆ ಭಾಗವಹಿಸಲು ದಿನವೂ ಸಾವಿರಾರು ಮಂದಿ ಪ್ರವಾಹೋಪಾದಿಯಲ್ಲಿ ಹರಿದು ಬಂದು ಅಣ್ಣನ ಕೂಗಿಗೆ ದ್ವನಿಯಾಗುತ್ತಿದ್ದಾರೆ. ಫ್ರೀಡಂ ಪಾಕರ್್ನಲ್ಲಂತೂ ದೇಶ ಭಕ್ತಿ ಗೀತೆಗಳ ಕಲರವ ಹೇಳತೀರದು. ವಂದೇ ಮಾತರಂ ಹಾಡು ಬಂದಾಗಲಂತೂ ಅಲ್ಲಿದ್ದ ಎಲ್ಲ ಜನರಲ್ಲೂ ಮಿಂಚಿನ ಸಂಚಾರ ಜೊತೆಗೆ ಎಲ್ಲರಲ್ಲೂ ಭಾರತ್ ಮಾತಾಕಿ ಜೈ ಎನ್ನುವ ಉದ್ಘಾರ. ಇಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯಾರನ್ನೂ ದುಡ್ಡು ಕೊಟ್ಟಾಗಲೀ, ಬಲವಂತದಿಂದಾಗಲೀ ಕರೆತಂದಿಲ್ಲ ಎಲ್ಲರೂ ಸ್ವಯಂಪ್ರೇರಿತವಾಗಿ ಬಂದು ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ. ಇನ್ನು ಈ ಹೋರಾಟದಲ್ಲಿ ಭಾಗವಹಿಸುತ್ತಿರುವವರು ಕೇವಲ ಮಧ್ಯಮ ವರ್ಗದವರು ಮಾತ್ರ, ಐಟಿ ಮಂದಿ ಮಾತ್ರ, ಯಾರೋ ಕೆಲಸವಿಲ್ಲದವರು ಮಾತ್ರ ಹೀಗೆ ವಾದಗಳನ್ನು ಮುಂದಿಡುತ್ತಿರುವ ಮೂರ್ಖರಿಗೆ ಏನು ಹೇಳಬೇಕೊ. ನಾನು ಸ್ವತಂ ನೋಡಿದಂತೆ ಹೋರಾಟದಲ್ಲಿ ಎಲ್ಲ ವಿಧ್ಯಾಥರ್ಿಗಳು, ಉಧ್ಯೋಗಸ್ಥರು, ಮಧ್ಯಮವರ್ಗದವರು, ಸ್ವಯಂ ಉಧ್ಯೋಗಿಗಳು ಹೀಗೆ ಎಲ್ಲ ರೀತಿಯ ಎಲ್ಲ ವರ್ಗಗಳ ಜನರೂ ಕೂಡ ಪಾಲ್ಗೊಳ್ಳುತ್ತಿದ್ದಾರೆ. ನನ್ನ ಸಲಹೆ ಎಂದರೆ ಇಲ್ಲಿಯವರೆಗೂ ಹೋರಾಟದಲ್ಲಿ ಭಾಗವಹಿಸದೇ ಮನೆಯಲ್ಲೇ ಕೂತು ವಂದೇ ಮಾತರಂ ಎನ್ನುವವರು ದಯವಿಟ್ಟು ಒಮ್ಮೆ ಹೋಗಿ ಬನ್ನಿ.

ಬಗ್ಗೆ SHASHI SHEKARA
I am a simple boy with great ambitions.

ನಿಮ್ಮ ಟಿಪ್ಪಣಿ ಬರೆಯಿರಿ