ಮೇಕೆದಾಟುವಿನಲ್ಲಿ ಕಾವೇರಿಯ ವೈಭವ ನೋಡಬನ್ನಿ

ಅಲ್ಲಿ ಅವಳು ಒನಪು ವಯ್ಯಾರಗಳಿಂದ ಹರಿಯುತ್ತಾಳೆ. ಬಂಡೆ ಕೊರೆದು ಕಲಾಕೃತಿ ನಿಮರ್ಿಸಿದ್ದಾಳೆ. ತನ್ನನ್ನು ನೋಡಲು ಬಂದವರಿಗೆ ಜುಳುಜುಳು ಎನ್ನುವ ಲಾಲಿ ಹಾಡುತ್ತಾಳೆ. ನೋಡುಗರ ಎದೆ ಝೆಲ್ಲೆನ್ನುವ ಜೋತೆಗೆ ಅಷ್ಟೇ ರಮಣೀಯ ನೋಟ ಅವಳದು. ಇದು ಮೇಕೇದಾಟುವಿನಲ್ಲಿ ಹರಿಯುವ ಕಾವೇರಿಯ ಸೌಂದರ್ಯ.

ಇದು ಕಾವೇರಿಯ ಸೌಂದರ್ಯ

ಬೆಂಗಳೂರಿನಿಂದ ಕನಕಪುರ ಮಾರ್ಗವಾಗಿ ಸಾಗಿದರೆ ಸಂಗಮ ಸಿಗುತ್ತದೆ. ಪ್ರಕೃತಿಯ ಮಡಿಲಿನಲ್ಲಿರುವ ರಮ್ಯ ತಾಣವಾದ ಇಲ್ಲಿ ಕಾವೇರಿ ಮತ್ತು ಅಕರ್ಾವತೀ ನದಿಗಳ ಸಂಗಮವಾಗುತ್ತದೆ. ಇಲ್ಲಿಂದ ಕಾವೇರಿ ಮೈದುಂಬಿ ಹರಿಯುತ್ತಾಳೆ. ಮೇಕೇದಾಟುವನ್ನು ನೋಡಲು ಸಂಗಮದಿಂದ ತೆಪ್ಪದಲ್ಲಿ ನದಿ ದಾಟಬೇಕು. ನದಿ ದಾಟಿ ನಾಲ್ಕು ಕಿಲೋ ಮೀಟರ್ ಮುಂದೆ ಸಾಗಿದ್ರೆ ಮೇಕೇದಾಟು ಸಿಗುತ್ತದೆ. ಸಂಗಮದಲ್ಲಿ 150 ಮೀಟರ್ ನಷ್ಟು ವಿಸ್ತಾರವಾಗಿ ಹರಿಯುವ ಕಾವೇರಿ ಇಲ್ಲಿ ಕೇವಲ 10 ಮೀಟರ್ ಗೂ ಚಿಕ್ಕ ಅಂತರದಲ್ಲಿ ಹರಿಯುತ್ತಾಳೆ. ಕೊರಕಲು ಜಾಗದಲ್ಲಿ ಬಂಡೆಗಳ ನಡುವೆ ಹರಿಯುವ ಕಾವೇರಿಯ ವೈಭವವನ್ನು ನೋಡಿಯೇ ಸವಿಯಬೇಕು.

ಕಾವೇರಿ ಮತ್ತು ಅಕರ್ಾವತಿ ನದಿಗಳ "ಸಂಗಮ"

ಇಲ್ಲಿ ಕಾವೇರಿ ಕಿರಿದಾದ ಬಂಡೆಗಳ ನಡುವೆ ಹರಿಯುವುದರಿಂದ ನೀರಿನ ರಭಸ ಹೆಚ್ಚಿರುತ್ತದೆ. ನದಿ ಹರಿಯುವ ಜಾಗ ಮೇಕೆ ದಾಟುವಷ್ಟು ಚಿಕ್ಕದಾಗಿಲ್ಲವಾದ್ರೂ ಈ ಜಾಗಕ್ಕೆ ಹೇಗೆ ಈ ಹೆಸರು ಬಂತು ಅಂತ ನೋಡಿದ್ರೆ, ಇದರ ಹಿಂದೆ ಒಂದು ಕತೆಯೇ ಇದೆ. ಹಿಂದೆ ಹುಲಿಯೊಂದು ಬೇಟೆಗಾಗಿ ಮೇಕೆಯೊಂದನ್ನು ಹಟ್ಟಿಸಿಕೊಂಡು ಬರುತ್ತಿರುವಾಗ ಪ್ರಾಣಭಯದಿಂದ ಓಡಿ ಬಂದ ಮೇಕೆ ಈ ಜಾಗದಲ್ಲಿ ನದಿಯ ಒಂದು ಬದಿಯಿಂದ ಇನ್ನೊಂದು ಬದಿಗೆ ಹಾರಿ ತನ್ನ ಪ್ರಾಣವನ್ನು ಉಳಿಸಿಕೊಂಡಿತಂತೆ. ಹೀಗಾಗಿ ಈ ಜಾಗಕ್ಕೆ ಮೇಕೇದಾಟು ಎಂಬ ಹೆಸರು ಬಂದಿದೆ.

ನೀರು ರಭಸವಾಗಿ ಬಂಡೆಗಳಿಗೆ ಮುತ್ತಿಗೆ ಹಾಕಿ ಹರಿಯುವುದರಿಂದ ಕಲ್ಲುಗಳು ನುಣುಪಾಗಿ ಶಿಲಾಕೃತಿಗಳಂತೆ ಮಾರ್ಪಟ್ಟಿವೆ. ಹಾಲ್ನೊರೆಯಂತೆ ಹರಿಯುವ ಕಾವೇರಿ ಗಿರಿಕಂದರಗಳ ನಡುವೆ ಹರಿದು ಮುಂದೆ ಸಾಗುತ್ತಾಳೆ.
ಸಿಲಿಕಾನ್ ಸಿಟಿಗೆ ಹತ್ತಿರವಿರುವ ಈ ಪ್ರವಾಸೀ ತಾಣ ಆಧುನಿಕ ಬದುಕಿನ ಜಂಜಡಗಳಿಗೆ ಮುಕ್ತಿ ನೀಡುವ ಮನೋಲ್ಲಾಸದ ಜಾಗ. ನಿಮ್ಮ ಬರುವಿಗಾಗಿ ಕಾದಿಹಳೇನೊ ಎಂಬಂತೆ ಕಾವೇರಿ ಸದಾ ಹರಿಯುತ್ತಾಳೆ. ಇವಳ ಸೌಂದರ್ಯವನ್ನೊಮ್ಮೆ ಕಣ್ತುಂಬಿಕೊಳ್ಳಲು ಒಮ್ಮೆ ಹೋಗಿ ಬನ್ನಿ.

ಶೂಟಿಂಗ್ನಲ್ಲಿ ಬ್ಯುಸಿ...

ಮೇಕೆದಾಟುವಿನಲ್ಲಿ ನಾನು

ಕಿರಿದಾದ ಬಂಡೆಗಳ ನಡುವೆ ಹರಿಯುವ ಜೀವನದಿ

About SHASHI SHEKARA
I am a simple boy with great ambitions.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: