ನನ್ನ ಬಗ್ಗೆ
ನಾನು ಶಶಿಶೇಖರ. ಹುಟ್ಟಿದ್ದು ಶಿವಗಂಗೆಯ ಬಳಿಯ ಆಲೂರಿನಲ್ಲಿ. ಈಗ ಬದುಕು ನಡೆಯುತ್ತಿರುವುದು ಬೆಂಗಳೂರಿನಲ್ಲಿ. M.Sc ಓದಿದ್ದೇನೆ. ಸದ್ಯ ಸುವರ್ಣ ನ್ಯೂಸ್ ನಲ್ಲಿ ಮಾಡುತ್ತಿದ್ದೇನೆ. ಟಿವಿ ಪತ್ರಿಕೋದ್ಯಮ ನನ್ನ ಇಷ್ಟದ ವೃತ್ತಿ. ಪ್ರಾಮಾಣಿಕ ಪತ್ರಕರ್ತನಾಗಿ ಗುರುತಿಸಿಕೊಳ್ಳುವ ಹಂಬಲ, ಸಾಧನೆ ಮಾಡುವ ಛಲ ಎರಡೂ ಇದೆ. ಪತ್ರಿಕೋದ್ಯಮವನ್ನು ಬಿಟ್ಟು ಬೇರೇನನ್ನೂ ಮಾಡುವ ಆಲೋಚನೆಯೇ ಇಲ್ಲ. ಇಲ್ಲಿಯೇ ಉಳಿಯಬೇಕು, ಇಲ್ಲಿಯೇ ಬೆಳೆಯಬೇಕು, ಇಲ್ಲಿಯೇ ಏನಾದರೂ ಸಾಧಿಸಬೇಕು ಅನ್ನೋದು ಕನಸು. ಕನಸಿನ ಬೆನ್ನತ್ತಿದವನಿಗೆ ಯಾವ ಎಲ್ಲೆಯಾದರೇನು, ಮುನ್ನುಗ್ಗಬೇಕಷ್ಟೇ….